nagaland – Peepal Media

ನಾಯಿ ಮಾಂಸ ಮಾರಾಟ ಮತ್ತು ಖರೀದಿ ನಿಷೇಧ: ನಾಗಾಲ್ಯಾಂಡ್ ಸರ್ಕಾರದ ಅದೇಶವನ್ನು ರದ್ದುಗೊಳಿಸಿದ ಗುವಾಹಟಿ ಹೈಕೋರ್ಟ್
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2011ರ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ ಹೈಕೋರ್ಟ್‌ ಸಿಂಗಲ್‌ ಬೆಂಚ್

ನಾಯಿ ಮಾಂಸ ಮಾರಾಟ ನಿಷೇಧದ ಹಿನ್ನೆಲೆ

ನಾಗಾಲ್ಯಾಂಡ್ ಸರ್ಕಾರವು ಜುಲೈ 4, 2020ರಂದು ನಾಯಿ ಮಾಂಸವನ್ನು ನಿಷೇಧಿಸುವ ಅಧಿಸೂಚನೆಯನ್ನು ಹೊರಡಿಸಿತ್ತು. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದರು. ಈ ಅಧಿಸೂಚನೆಯಡಿ ನಾಯಿ ಮಾಂಸವನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿತ್ತು.

ಅಧಿಸೂಚನೆಯ ವಿವರಗಳ ಪ್ರಕಾರ, ವಾಣಿಜ್ಯ ಮತ್ತು ರೆಸ್ಟೋರೆಂಟ್‌ಗಳಂತಹ ಸ್ಥಳಗಳಲ್ಲಿ ನಾಯಿ ಮಾಂಸ ಮಾರಾಟವನ್ನು ಸಹ ನಿಷೇಧಿಸಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ, 2011ರಲ್ಲಿ ನಿರ್ದಿಷ್ಟಪಡಿಸಿದ ಪ್ರಾಣಿಗಳನ್ನು ಹೊರತುಪಡಿಸಿ ಇತರ ಪ್ರಾಣಿಗಳ ಹತ್ಯೆಯನ್ನು ನಿಷೇಧಿಸುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸುತ್ತೋಲೆ 2014 ಅನುಸರಿಸಿ ನಾಗಾಲ್ಯಾಂಡ್ ಸರ್ಕಾರವು ಈ ಕ್ರಮ ಕೈಗೊಂಡಿತ್ತು. ನಿಯಮ 2.5.1(a) ನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ, 2011 ವಿವರಗಳ ಪ್ರಕಾರ, ಕುರಿ, ಮೇಕೆ, ಹಂದಿ, ಕೋಳಿ ಮತ್ತು ಮೀನುಗಳನ್ನು ಆಹಾರವೆಂದು ಪರಿಗಣಿಸಲಾಗಿದೆ ಮತ್ತು ವಧೆ ಮಾಡಲು ಅನುಮತಿಸಲಾಗಿದೆ.

‘ಆಶ್ಚರ್ಯಪಡುವ ಅಗತ್ಯವಿಲ್ಲ’

ಹೈಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಾರ್ಲಿ ವಾಂಕುಂಗ್ ಅವರ ಏಕಸದಸ್ಯ ಪೀಠ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ-2011ರಲ್ಲಿ ನಾಯಿಯ ಹೆಸರನ್ನು ಸೇರಿಸದಿರುವುದು ಆಶ್ಚರ್ಯಪಡಬೇಕಾದ ವಿಷಯವೇನಲ್ಲ ಎಂದು ಹೇಳಿದೆ. ಏಕೆಂದರೆ ನಾಯಿ ಮಾಂಸವು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬರುತ್ತದೆ. ಹೀಗಾಗಿಯೇ ಅದರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ ಎಂದು ಅದು ವಿವರಿಸಿದೆ.

ನಾಯಿ ಮಾಂಸವನ್ನು ಇಷ್ಟಪಡುವವರಿದ್ದಾರೆ

ನಾಗಾ ಪ್ರದೇಶಗಳಲ್ಲಿ ಈಗಲೂ ನಾಯಿ ಮಾಂಸವನ್ನು ಇಷ್ಟಪಟ್ಟು ತಿನ್ನುತ್ತಾರೆ ಮತ್ತು ಇದು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ ಎಂದು ಹೈಕೋರ್ಟ್ ಹೇಳಿದೆ. ಇದು ಅಂಗಾಮಿ ನಾಗಗಳು, ದಿ ಆವೋ ನಾಗಗಳು, ದಿ ರೆಂಗ್ಮಾ ನಾಗಗಳು ಮುಂತಾದ ಸಮುದಾಯಗಳ ಆಹಾರದ ಭಾಗವಾಗಿದೆ ಎಂದು ಹೈಕೋರ್ಟ್ ಹೇಳಿದೆ.

ನಾಯಿಗಳನ್ನು ಹಿಂಸಿಸಲಾಗುತ್ತದೆ

ವಿಚಾರಣೆ ವೇಳೆ ಅನಿಮಲ್ಸ್ ಆ್ಯಂಡ್ ಹ್ಯೂಮನ್ ಸೊಸೈಟಿ ಇಂಟರ್‌ನ್ಯಾಶನಲ್/ಇಂಡಿಯಾ ಪರ ವಕೀಲರು ನಾಯಿಗಳನ್ನು ಕಳ್ಳಸಾಗಣೆ ಮಾಡುತ್ತಿರುವ ರೀತಿ ಆತಂಕಕಾರಿಯಾಗಿದೆ ಎಂದರು. ನಾಯಿಯ ಕಾಲುಗಳನ್ನು ಹಗ್ಗದಿಂದ ಕಟ್ಟಿ ಅದರ ಬಾಯಿಯನ್ನೂ ಹಗ್ಗದಿಂದ ಕಟ್ಟಿ ಗೋಣಿಚೀಲದಲ್ಲಿ ಹಾಕುತ್ತಾರೆ ಎನ್ನಲಾಗಿದೆ. ಈ ಸಮಯದಲ್ಲಿ ಅವುಗಳಿಗೆ ದಿನಗಟ್ಟಲೆ ಊಟ, ನೀರು ನೀಡುತ್ತಿಲ್ಲ ಎಂಬ ಆರೋಪವಿದೆ. ಇದು ಪ್ರಾಣಿಗಳ ಮೇಲಿನ ದೌರ್ಜನ್ಯದ ಅಡಿಯಲ್ಲಿ ಬರುತ್ತದೆ. ಆದರೆ ನಾಯಿ ಮಾಂಸ ನಿಷೇಧವನ್ನು ಸಮರ್ಥಿಸುವುದಿಲ್ಲ ಎಂದು ಅವರು ಹೈಕೋರ್ಟ್‌ನಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಪ್ರಾಣಿಗಳ ಮೇಲಿನ ಕ್ರೌರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಐಪಿಸಿಯನ್ನು ಸಂಪರ್ಕಿಸಬಹುದು ಎಂದು ಹೇಳಿದೆ.

ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ: ಇಬ್ಬರು ಜವಾನರಿಗೆ ಗಾಯ
ನಾಗಲ್ಯಾಂಡ್:‌ ಇಂದು ಮುಂಜಾನೆ ನಾಗಾಲ್ಯಾಂಡ್‌ನ ಸೋಮ ಜಿಲ್ಲೆಯಲ್ಲಿ ಶಂಕಿತ ಎನ್‌ಎಸ್‌ಸಿಎನ್-ಕೆವೈಎ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಅಸ್ಸಾಂ ರೈಫಲ್ಸ್ ಜವಾನರು ಗಾಯಗೊಂಡಿದ್ದಾರೆ.

ಗಾಯಗೊಂಡ ಯೋಧರನ್ನು ಜೋರ್ಹತ್ ಏರ್ ಫೋರ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಉಗ್ರಗಾಮಿಗಳ ಸಾವುನೋವು ಸಹ ಶಂಕಿತವಾಗಿದೆ, ಹಾಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಭಾರತದ ಹಳೆಯ ಸೇನಾ ಶಾಖೆ ಅಸ್ಸಾಂ ರೈಫಲ್ಸ್ ತಿಳಿಸಿದೆ.