Namma Metro – Peepal Media

ನಮ್ಮ ಮೆಟ್ರೋ ಗುಡ್ ನ್ಯೂಸ್ – ಮೆಜೆಸ್ಟಿಕ್ ಡಿ ಪ್ರವೇಶದ್ವಾರ ಓಪನ್
ಬೆಂಗಳೂರು : ಜನರ ಜೀವನಾಡಿಯಾಗಿರುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ (BMRCL) ಕಡೆಯಿಂದ ಗುಡ್ ನ್ಯೂಸ್ ವೊಂದು ಸಿಕ್ಕಿದ್ದು, ಮೆಜೆಸ್ಟಿಕ್ (Majestic) ನಿಲ್ದಾಣದ ಪ್ರವೇಶ ದ್ವಾರ D ಅನ್ನು ತೆರೆಯಲಾಗಿದೆ.

ಬೆಂಗಳೂರಿನ ಹೃದಯಭಾಗವಾಗಿರುವ ಮೆಜೆಸ್ಟಿಕ್ ನಲ್ಲಿ ದಿನನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಈ ಹಿನ್ನಲೆ ಮೆಟ್ರೋ ನಿಲ್ದಾಣದ ಪ್ರವೇಶ D ಅನ್ನು ತೆರೆಯುವಂತೆ ಪ್ರಯಾಣಿಕರು ಸಾಕಷ್ಟು ಬಾರಿ ಒತ್ತಾಯಿಸಿದ್ದರು.

ಪ್ರಯಾಣಿಕರ ಮನವಿಯ ಮೇರೆಗೆ ಇದೀಗ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಪ್ರವೇಶ D ಯಲ್ಲಿ ಪ್ರವೇಶ / ನಿರ್ಗಮನ ದ್ವಾರವನ್ನು ತೆರೆಯಲಾಗಿದೆ. ಇದು ಕೆಎಸ್ ಆರ್ ಟಿಸಿ ಟರ್ಮಿನಲ್ -2 ಕ್ಕೆ ಹಾಗು ಟರ್ಮಿನಲ್ 2A ಗೆ ನೇರ ಪ್ರವೇಶ ನೀಡುತ್ತದೆ..

ಸದ್ಯ ಹಲವಾರು ವರ್ಷಗಳ ಬಳಿಕ ಪ್ರವೇಶ D ಅನ್ನು ತೆರೆದಿದ್ದು, ಈ ಮೂಲಕ ಜನರು ತಮ್ಮ ತಮ್ಮ ಊರಿಗೆ ಹೋಗಲು ಇನ್ನಷ್ಟು ಸುಲಭವಾಗಿದೆ. ಈ ಹಿಂದೆ ಪ್ರವೇಶ B ಅಲ್ಲಿ ನಿರ್ಗಮಿಸಿ ಒಂದು ಸುತ್ತು ಹಾಕಿ ಟರ್ಮಿನಲ್ 2 ಹಾಗು ಟರ್ಮಿನಲ್ 2A ಗೆ ತೆರಳ ಬೇಕಿತ್ತು.

ಆದರೆ ಇದೀಗ ಬಿಎಂಆರ್ ಸಿಎಲ್ D ಪ್ರವೇಶ ದ್ವಾರವನ್ನು ತೆರೆದಿದ್ದು, ಈ ಮೂಲಕ ಮೆಟ್ರೋ ಪ್ರಯಾಣಿಕರಿಗೆ ಪ್ರಯಾಣ ಇನ್ನಷ್ಟು ಸುಲಭವಾಗಿದೆ. ಇನ್ನು ಈ ಬಗ್ಗೆ ನಮ್ಮ ಮೆಟ್ರೊ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ

ನಿಲ್ಲದ ಮೆಟ್ರೋ ಆತ್ಮಹತ್ಯೆ ದುರಂತ ; ಸಿಬ್ಬಂದಿ ಮುಂಜಾಗ್ರತೆಯಿಂದ ಉಳಿಯಿತು ಜೀವ
ಬೆಂಗಳೂರು: ನಮ್ಮ ಮೆಟ್ರೋ ಟ್ರ್ಯಾಕ್‌ಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ. ಬೆಂಗಳೂರಿನ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ರೈಲು ಬರಲು ಇನ್ನು ಕೆಲವೇ ನಿಮಿಷಗಳು ಇರುವಾಗ ಏಕಾಏಕಿ ವ್ಯಕ್ತಿಯೊಬ್ಬ ಟ್ರ್ಯಾಕ್ ಗೆ ಜಿಗಿದಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಮೆಟ್ರೋ ಸಿಬ್ಬಂದಿ ಆತನನ್ನು ರಕ್ಷಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ವಿವರ ಲಭ್ಯವಾಗಿಲ್ಲ. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಏಕಾಏಕಿ ವ್ಯಕ್ತಿ ನಮ್ಮ ಮೆಟ್ರೋಗೆ ಜಿಗಿದಿದ್ದು ಇದನ್ನು ಗಮನಿಸಿದ ಕೂಡಲೇ ಸಿಬ್ಬಂದಿಗಳು ರೈಲು ಸಂಚಾರವನ್ನು ಸ್ಥಗಿತಗೊಳಿಸಿ ಆತನನ್ನು ಬಚಾಚ್ ಮಾಡಿದ್ದಾರೆ.

ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಡಾ.ಅಂಬೇಡ್ಕರರನ್ನು ಅವಮಾನಿಸಿತೇ ‘ನಮ್ಮ ಮೆಟ್ರೋ’? : ದಲಿತ ಮುಖಂಡರಿಂದ ಪ್ರತಿಭಟನೆ
ಬೆಂಗಳೂರು: ಗಣರಾಜ್ಯೊತ್ಸವ ಸಮಾರಂಭಗಳಂದು ರಾಜ್ಯದ ಸರ್ಕಾರಿ ಕಚೇರಿಗಳು.ಸರಕಾರಿ ಶಾಲಾ ಕಾಲೇಜು, ಹಾಗೂ ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಕಚೇರಿಗಳಲ್ಲೂ ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟು ಗೌರವಿಸುವುದು ಕಡ್ಡಾಯ. ಈ ಕುರಿತು 2020ರಲ್ಲಿ ಸರ್ಕಾರವೇ ಆದೇಶ ಹೊರಡಿಸಿದೆ.

ಆದರೆ, ಬಿಎಂಆರ್ ಸಿಎಲ್ (ನಮ್ಮ ಮೆಟ್ರೋ) ಸರ್ಕಾರದ ಈ ಆದೇಶವನ್ನು ನಿರ್ಲಕ್ಷಿಸಿ ಡಾ.ಅಂಬೇಡ್ಕರ್‌ ಅವರಿಗೆ ಅವಮಾನಿಸಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.

ಮೆಟ್ರೋ ಆಡಳಿತದ ಜ.26ರ ಧ್ವಜಾರೋಹನ ಕಾರ್ಯಕ್ರಮದ ವೇದಿಕೆಯಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡದೇ ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಲಾಗಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಬೈಯಪ್ಪನಹಳ್ಳಿ ಮೆಟ್ರೋ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನೆಕಾರರು ಎಚ್ಚರಿಕೆ ನೀಡಿದರು.

ದೇಶಕ್ಕೆ ಸಂವಿಧಾನದಂಥ ಮಹಾನ್ ಗ್ರಂಥ ನೀಡಿದ ಡಾ.ಬಿ.ಆರ್ ಅಂಬೇಡ್ಕರ್ ಎನ್ನುವುದೇ ಬಿಎಂಆರ್ ಸಿಎಲ್ ಗೆ ಗೊತ್ತಿಲ್ಲ ಎನ್ನಿಸುತ್ತದೆ. ಹಾಗಾಗಿಯೇ ಸರ್ಕಾರ ಈ ಬಗ್ಗೆ ಹೊರಡಿಸಿದ್ದ ಆದೇಶವನ್ನು ಮೆಟ್ರೋ ಅಧಿಕಾರಿಗಳು ಗಾಳಿಗೆ ತೂರಿದ್ದಾರೆ.

ಸರ್ಕಾರದ ಆದೇಶವನ್ನು ಎಲ್ಲಾ ಇಲಾಖೆಗಳು ಕೂಡ ಚಾಚೂತಪ್ಪದೇ ಪಾಲಿಸ್ತಿವೆ. ಆದರೆ ಎಲ್ಲರಿಗೂ ಒಂದು ನ್ಯಾಯವಾದ್ರೆ ಬಿಎಂಆರ್ ಸಿಎಲ್ ಗೆ ಇನ್ನೊಂದು ನ್ಯಾಯ ಎನ್ನುವಂತೆ ಮೆಟ್ರೋ ಸಂಸ್ಥೆಯ ಆಡಳಿತ ನಡೆದುಕೊಂಡಿದೆ.ಇದೆಲ್ಲಕ್ಕೂ ಕಾರ್ಯಕ್ರಮದ ಆಯೋಜನೆಯ ಉಸ್ತುವಾರಿ ವಹಿಸಿಕೊಂಡಿದ್ದರೆನ್ನಲಾದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್ ಅವರೇ ಕಾರಣ ಎಂದು ಎಂದು ದಲಿತ ಮುಖಂಡರು ಆರೋಪಿಸಿದರು.

ಇದಕ್ಕೆ ಕಾರಣವಾದ ಕಾರ್ಯನಿರ್ವಾಹಕ ನಿರ್ದೇಶಕರನ್ನು ಅಮಾನತುಗೊಳಿಸಬೇಕು.ಇಲ್ಲವಾದಲ್ಲಿ ಬಿಎಂಆರ್ ಸಿಎಲ್ ಕಚೇರಿ ಆವರಣದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಅಂಬೇಡ್ಕರ್ ಅವರಂಥ ಮಹಾನ್ ಚೇತನ ಇಲ್ಲದೆ ಇದ್ದಲ್ಲಿ ಇವತ್ತು ಭಾರತದ ಪರಿಸ್ತಿತಿ ಏನಾಗುತ್ತಿತ್ತು ಎನ್ನುವ ಅರಿವು ಬಿಎಂಆರ್ ಸಿಎಲ್ ಆಡಳಿತಕ್ಕೆ ಗೊತ್ತಿರಬೇಕಿತ್ತು. ಅಂಬೇಡ್ಕರ್ ಭಾವಚಿತ್ರ ಇಡದ ಅಪಮಾನ ಮಾಡಿರುವ ಬಿಎಂಆರ್ ಸಿಎಲ್ ಸಂಸ್ಥೆ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಯಾಚಿಸಬೇಕು. ಎಂಡಿ ಮಹೇಶ್ವರ ರಾವ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.ಇಷ್ಟೆಲ್ಲಕ್ಕೂ ಎಂದು ದಲಿತ ಮುಖಂಡರಾದ ಶಿವಕುಮಾರ ನಾಯ್ಕ ಮತ್ತು ಶಂಕರ್‌ ಅವರು ಒತ್ತಾಯಿಸಿದರು.

Breaking News : ಮೆಟ್ರೋ ಹಳಿಗೆ ಜಿಗಿದು ಪ್ರಾಣ ಕಳೆದುಕೊಂಡ ವ್ಯಕ್ತಿ.
ಜಾಲಹಳ್ಳಿ ಮೆಟ್ರೋ ಸ್ಟೇಷನ್ನಿನಲ್ಲಿ ಇಂದು ಸಂಜೆ ವ್ಯಕ್ತಿಯೊಬ್ಬ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಂಜೆ ಸರಿಸುಮಾರು ಏಳು ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದ್ದು ಸುಮಾರು ಒಂದು ಗಂಟೆಗಳಿಗೂ ಹೆಚ್ಚು ಕಾಲ ಮೆಟ್ರೊ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

ಘಟನೆ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಸಂಭವಿಸಿದ್ದು, ನಾಗಸಂದ್ರ ನಿಲ್ದಾಣದಿಂದ ಯಶವಂತಪುರ ವರೆಗೂ ಮೆಟ್ರೋ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಒಂದು ಗಂಟೆ ಸಮಯದ ನಂತರ ಮೆಟ್ರೋ ಪುನಃ ಪ್ರಾರಂಭವಾಗಿತ್ತು. ಮೆಟ್ರೋ ಹಳಿಯ ಮೇಲೆ ಹಾರಿದ ವ್ಯಕ್ತಿಯನ್ನ ಜಾಲಹಳ್ಳಿ ಸ್ಟೇಷನ್ನಿನ ಸಿಬ್ಬಂದಿ ತಕ್ಷಣಕ್ಕೆ ಆಸ್ಪತ್ರೆ ರವಾನಿಸುವ ಕೆಲಸ ಮಾಡಿದರೂ ಸಹಾ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. ವಿದ್ಯುತ್‌ ಘರ್ಷಣೆಯಿಂದಾಗಿ ಈ ಸಾವು ಸಂಭವಿಸಿರುವುದಾಗಿ ಮೇಲ್ನೋಟಕ್ಕೆ ತಿಳಿದು ಬಂದಿರುತ್ತದೆ.

ಸ್ಥಳಕ್ಕೆ ಆಗಮಿಸಿದ ಪೋಲೀಸರು ಸ್ಥಳದ ಮಹಜರು ಮಾಡಿದ್ದು ತನಿಖೆಯನ್ನ ಆರಂಭಿಸಿರುವುದಾಗಿ ಮಾಹಿತಿ ತಿಳಿದು ಬಂದಿದೆ. ಪೊಲೀಸರ ತನಿಖೆಯ ನಂತರವಷ್ಟೆ ವ್ಯಕ್ತಿಯ ವಿವರ ಮತ್ತು ಘಟನೆಯ ವಿವರಗಳು ಲಭ್ಯವಾಗಲಿವೆ.

ಮೆಟ್ರೋ ನಿಲ್ದಾಣದಲ್ಲಿ ಆತ್ಮ*ತ್ಯೆಗೆ ಯತ್ನ; ಮೆಟ್ರೋ ಸಂಚಾರ ಅಸ್ತವ್ಯಸ್ಥ
ಬೆಂಗಳೂರಿನ ‘ನಮ್ಮ ಮೆಟ್ರೋ’ದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ನಗರದ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ರೇಷ್ಮೆ ಸಂಸ್ಥೆ ಕಡೆಗೆ ಹೋಗುವ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಉಂಟಾಗಿತ್ತು. ಸುಮಾರು 1 ಗಂಟೆಗಳ ಕಾಲ ನಾಗಸಂದ್ರದಿಂದ ಯಶವಂತಪುರ ಮಾರ್ಗದ ಸಂಚಾರ ಸ್ಥಗಿತಗೊಂಡಿತ್ತು. ಒಂದು ಗಂಟೆಯ ನಂತರ ಸಂಚಾರ ಪ್ರಾರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಟ್ರಾಕ್ ಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ. ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ

‘ನಮ್ಮ ಮೆಟ್ರೋ’ದಲ್ಲಿ ತಪ್ಪಿದ ಬಾರೀ ಅನಾಹುತ
ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ನಮ್ಮ ಮೆಟ್ರೋ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಸ್ವಲ್ಪದರಲ್ಲಿ ದೊಡ್ಡ ಅನಾಹುತ ತಪ್ಪಿದೆ. ಮಹಿಳೆಯೊಬ್ಬರು ಅಚಾನಕ್ಕಾಗಿ ಟ್ರಾಕ್ ಗೆ ಜಿಗಿದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದ್ದು ಯಾವುದೇ ಜೀವಹಾನಿ ಆಗಿಲ್ಲ ಎಂದು ವರದಿಯಾಗಿದೆ.

ಇಂದಿರಾ ನಗರದ ಮೆಟ್ರೋ ನಿಲ್ದಾಣದಲ್ಲಿ ಪ್ಲಾಟ್ ಫಾರಂ 1ರಲ್ಲಿ ಈ ಘಟನೆ ನಡೆದಿದ್ದು, ಪ್ಲಾಟ್ಫಾರಂ ನಿಂದ ಮೆಟ್ರೋ ಟ್ರಾಕ್ ಗೆ ಮಹಿಳೆಯೊಬ್ಬರು ಜಿಗಿದಿದ್ದಾರೆ. ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು 750KV ವೋಲ್ಟ್ ವಿದ್ಯುತ್ ಹರಿಯುವ ನಮ್ಮ ಮೆಟ್ರೋ ಟ್ರ್ಯಾಕ್ ಗೆ ಮಹಿಳೆ ಜಿಗಿದಿದ್ದಾರೆ.

ತಕ್ಷಣ ಮೆಟ್ರೋ ಸಿಬ್ಬಂದಿಗಳು ವಿದ್ಯುತ್ ಸ್ಥಗಿತಗೊಳಿಸಿದ್ದಾರೆ. ಮೆಟ್ರೋ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದೆ.

ಮಹಿಳೆ ಟ್ರ್ಯಾಕ್ ಗೆ ಜಿಗಿದ ಪರಿಣಾಮ 15 ನಿಮಿಷಗಳ ಕಾಲ ಪರ್ಪಲ್ ಲೈನ್ ನಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿ ಮಹಿಳೆಯನ್ನು ಮೇಲಕ್ಕೆ ಎತ್ತಲಾಗಿದೆ.

ಬೆಂಗಳೂರು : ‘ನಮ್ಮ ಮೆಟ್ರೋ’ ಸಂಚಾರದಲ್ಲಿ ವ್ಯತ್ಯಯ ; ಪ್ರಯಾಣಿಕರ ಪರದಾಟ
ಬೆಂಗಳೂರಿನ ‘ನಮ್ಮ ಮೆಟ್ರೋ’ ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಕಂಡುಬಂದ ಹಿನ್ನೆಲೆಯಲ್ಲಿ ಸಾವಿರಾರು ಮೆಟ್ರೋ ಪ್ರಯಾಣಿಕರು ಪರದಾಡುವಂತಾಗಿತ್ತು. ತಂತ್ರಜ್ಞರ ಸಹಕಾರದಿಂದ ಕೆಲವು ದುರಸ್ತಿ ಕಾಮಗಾರಿ ಕೈಗೊಂಡ ನಂತರ ಈಗ ಮೆಟ್ರೋ ಸಂಚಾರ ಮುಂದುವರೆದಿದೆ.

ರೇಷ್ಮೆ ಸಂಸ್ಥೆಯಿಂದ ನಾಗಸಂದ್ರ ಹೋಗುವ ಮಾರ್ಗದಲ್ಲಿ ಈ ವ್ಯತ್ಯಯ ಕಂಡುಬಂದಿದ್ದು, ಪ್ರಯಾಣಿಕರು ಯಶವಂತಪುರದಲ್ಲೇ ಇಳಿದು ಸಂಚಾರವನ್ನು ಬಸ್ ಅಥವಾ ಆಟೋಗಳ ಮೂಲಕ ಪ್ರಯಾಣಿಸುವಂತಾಗಿತ್ತು. ಯಶವಂತಪುರದಿಂದ ನಾಗಸಂದ್ರದ ವರೆಗಿನ ಸಂಚಾರ ಸಂಪೂರ್ಣ ನಿಂತ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿತ್ತು.

ಪೀಣ್ಯ ಇಂಡಸ್ಟ್ರಿ ಬಳಿ ಸಿಗ್ನಲ್ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಸುಮಾರು 35 ನಿಮಿಷಗಳ ಕಾಲ (10.15 ರಿಂದ 10.50 ರ ವರೆಗೂ ) ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ತಂತ್ರಜ್ಞರು ಸರಿಯಾದ ಸಮಯಕ್ಕೆ ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥಪಡಿಸಿದ ಹಿನ್ನೆಲೆಯಲ್ಲಿ ಈಗ ಮೆಟ್ರೋ ಸಂಚಾರ ಮುಂದುವರೆದಿದೆ.