nanjanagudu – Peepal Media

ಪುನೀತ್ ಪ್ರೇರಣೆ: ಕಪ್ಪು ಚಿರತೆ ದತ್ತು ಪಡೆದ ಶಾಸಕ ಹರ್ಷವರ್ಧನ್
ನಂಜನಗೂಡು: ನಟ ಡಾ. ಪುನೀತ್ ರಾಜಕುಮಾರ್ ಅಭಿನಯದ ‘ಗಂದಧ ಗುಡಿ’ ಚಲನಚಿತ್ರದ ಬಿಡುಗಡೆ ಹಾಗೂ ದಲಿತ ಪ್ಯಾಂಥರ್ಸ್ ಮೂವ್ ಮೆಂಟ್ ಸಂಘಟನೆ ಆರಂಭಗೊಂಡ ಸ್ಮರಣಾರ್ಥ ಶಾಸಕ ಬಿ. ಹರ್ಷವರ್ಧನ್ ಅವರು ನಂಜನಗೂಡಿನ ಜನತೆಯ ಹೆಸರಿನಲ್ಲಿ ಮೈಸೂರು ಮೃಗಾಲಯದ ಬ್ಲ್ಯಾಕ್ ಪ್ಯಾಂಥರ್ (ಕಪ್ಪು ಚಿರತೆ) ನ್ನು ದತ್ತು ಪಡೆದಿದ್ದಾರೆ.

ಈ ವರ್ಷದ ಅಕ್ಟೋಬರ್ 28 ರಿಂದ 2023ರ ಅಕ್ಟೋಬರ್ 27 ರವರೆಗೆ ಬ್ಲಾಕ್ ಪ್ಯಾಂಥರ್ ದತ್ತು ಪಡೆದಿರುವ ಅವರು, ಈ ಸಂಬಂಧ ಮೃಗಾಲಯ ಪ್ರಾಧಿಕಾರಕ್ಕೆ 50 ಸಾವಿರ ರೂ. ಗಳ ಚೆಕ್ ನ್ನು ಪಾವತಿಸಿದ್ದಾರೆ.

ಈ ಕುರಿತು ನಂಜನಗೂಡಿನಲ್ಲಿ ಗುರುವಾರ ಮಾಹಿತಿ ನೀಡಿದ ಶಾಸಕ ಬಿ. ಹರ್ಷವರ್ಧನ್‌ರವರು, ಚಿತ್ರನಟ ಡಾ. ಪುನೀತ್ ರಾಜಕುಮಾರ್ ಕನ್ನಡ ನಾಡು ನುಡಿಯ ಹಿರಿಮೆಯನ್ನು ಸಾರುವ ಜೊತೆಗೆ ಪರಿಸರ ಪ್ರೇಮಿಯಾಗಿ ಅಮೂಲ್ಯ ವನ್ಯಜೀವಿ ಹಾಗೂ ಪ್ರಕೃತಿ ಸಂಪತ್ತಿನ ಸಂರಕ್ಷಣೆ ಬಗ್ಗೆ ಅಪಾರ ಕಾಳಜಿ ತೋರಿದ್ದರು. ಅವರು ಅಭಿನಯಿಸಿರುವ ಕೊನೆಯ ಚಿತ್ರ ‘ಗಂದಧಗುಡಿ’ ಶುಕ್ರವಾರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿರುವ ಹಾಗೂ 70ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರೇರೇಪಿತರಾಗಿದ್ದ ಯುವ ಜನರು, ದಲಿತ ಪ್ಯಾಂಥರ್ ಮೂವ್ ಮೆಂಟ್ (ಡಿಪಿಎಂ) ಪ್ರಾರಂಭಿಸಿ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಪ್ರತಿರೋಧ ತೋರಿ ಭಾರತದ ರಾಜಕೀಯದಲ್ಲಿ ಮಹತ್ವದ ಹೆಜ್ಜೆ ಗುರುತು ಮೂಡಿಸಿದ್ದರು. ಈ ಸಂಘಟನೆಯ ಚಿಹ್ನೆ ಕೂಡ ಕಪ್ಪು ಚಿರತೆಯಾಗಿತ್ತು. ಇದರ ಸಂಸ್ಮರಣೆ ನಿಮಿತ್ತ ಮೈಸೂರು ಮೃಗಾಲಯದಲ್ಲಿ ಬ್ಲ್ಯಾಕ್ ಪ್ಯಾಂಥರ್ (ಕಪ್ಪು ಚಿರತೆ) ನ್ನು ನಂಜನಗೂಡು ವಿಧಾನಸಭಾ ಕ್ಷೇತ್ರದ ಜನರ ಹೆಸರಿನಲ್ಲಿ ದತ್ತು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.

ಡಾ. ರಾಜಕುಮಾರ ಅವರಿಗೂ ಚಾಮರಾಜನಗರ ಭಾಗದ ನಂಜನಗೂಡು ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿತ್ತು. ಅವರು ನಂಜನಗೂಡಿನ ದೇಗುಲಕ್ಕೆ ಸಾಕಷ್ಟು ಬಾರಿ ಭೇಟಿ ನೀಡಿದ್ದರು. ಡಾ. ರಾಜ್ ಅವರ ಇಡೀ ಕುಟುಂಬವೇ ನಂಜನಗೂಡಿನೊಂದಿಗೆ ನಂಟು ಹೊಂದಿದೆ. ಡಾ. ರಾಜ್ ಅವರಷ್ಟೇ ಅಲ್ಲದೆ, ಶಿವರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ಹಲವು ಚಿತ್ರಗಳ ಚಿತ್ರೀಕರಣ ಈ ಭಾಗದಲ್ಲಿ ನಡೆದಿತ್ತು. ಪ್ರಸ್ತುತ ಪುನೀತ್ ರಾಜಕುಮಾರ್ ಅವರ ದಿನವನ್ನು ಸರಕಾರ ‘ಸ್ಫೂರ್ತಿ ದಿನ’ ಎಂದು ಘೋಷಿಸಿದೆ. ಬೆಟ್ಟದ ಹೂವಿನಿಂದ ಗಂಧದಗುಡಿವರೆಗೂ ತಲುಪಿರುವ ಪುನೀತ್ ಅವರು ಪ್ರಕೃತಿಯನ್ನು ದೈವದಂತೆ ಆರಾಧಿಸಿ ಪ್ರೀತಿಸಿದವರು. ಇದು ನಮ್ಮಂತಹ ಯುವ ಸಮುದಾಯಕ್ಕೆ ಪ್ರೇರಣಾದಾಯಕವಾಗಿದೆ ಎಂದು ಬಿ. ಹರ್ಷವರ್ಧನ್ ಹೇಳಿದರು.

ಇನ್ನು ಮನುಷ್ಯರಂತೆ ಪ್ರಾಣಿ, ಪಕ್ಷಿಗಳೂ ಜೀವಿಸುವ ಹಕ್ಕು ಹೊಂದಿವೆ. ಮೈಸೂರು ಮೃಗಾಲಯದಲ್ಲಿ ದೇಶ- ವಿದೇಶಗಳ ಹಲವು ಪ್ರಭೇದದ ಪ್ರಾಣಿ ಪಕ್ಷಿಗಳಿವೆ. ಅವುಗಳನ್ನು ಮೈಸೂರು ಮೃಗಾಲಯದಲ್ಲಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ವಿಶ್ವದ ಹಲವೆಡೆ ಮೃಗಾಲಯಗಳಿದ್ದರೂ ಮೈಸೂರು ಮೃಗಾಲಯ ವಿಭಿನ್ನವಾಗಿದ್ದು ಪ್ರಾಣಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ಬ್ಲ್ಯಾಕ್ ಪ್ಯಾಂಥರ್ ನ್ನು ಒಂದು ವರ್ಷದ ಕಾಲದ ನಿರ್ವಹಣೆಯ ವೆಚ್ಚ ಪಾವತಿಸಿ ದತ್ತು ಸ್ವೀಕರಿಸಿದ್ದಾಗಿ ಬಿ. ಹರ್ಷವರ್ಧನ್ ತಿಳಿಸಿದ್ದಾರೆ.