Nararaj Sharma – Peepal Media

ಬಿಜೆಪಿ ಟಿಕೆಟ್ ಹಗರಣ : ಚೈತ್ರ ಕುಂದಾಪುರ ಬೆಂಬಲಕ್ಕೆ ಪರೋಕ್ಷವಾಗಿ ನಿಂತ RSS! ಹೇಗಂತೀರಾ? ಸ್ಟೋರಿ ಓದಿ.
ಬಿಜೆಪಿ ಟಿಕೆಟ್ ಹಗರಣದಲ್ಲಿ ಇಲ್ಲಿಯವರೆಗೆ ತೆರೆಮರೆಯಲ್ಲೇ ಇದ್ದ RSS ಈಗ ನೇರ ಅಖಾಡಕ್ಕೆ ಇಳಿದಿದೆ. ಆ ಮೂಲಕ ಇಡೀ ಪ್ರಕರಣವನ್ನು ಬೇರೆಡೆಗೆ ತಿರುಗಿಸಲು ಕಾನೂನಿನ ಅಡಿಯಲ್ಲಿ ಏನು ಸಾಧ್ಯವೋ ಅದನ್ನು ಅಳೆದೂ ತೂಗಿ ಹಾದಿ ತಪ್ಪಿಸಲು ಮುಂದಾಗಿದೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ.

ಸಧ್ಯ ಪ್ರಕರಣ ದಾಖಲಾಗಿ ಇಷ್ಟು ದಿನದ ವರೆಗೂ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುತ್ತಿದ್ದ RSS ನಿಧಾನವಾಗಿ ದಾಳ ಉರುಳಿಸಿದೆ. RSS ನ ಪ್ರಮುಖ ಪ್ರಕರಣಗಳನ್ನು ನಿಭಾಯಿಸುತ್ತಿದ್ದ ಹೈಕೋರ್ಟ್ ವಕೀಲ ನಟರಾಜ್ ಶರ್ಮಾ ಈಗ ಪ್ರಕರಣದಲ್ಲಿ ಸಂತ್ರಸ್ತನ ಸ್ಥಾನದಲ್ಲಿ ನಿಂತಿರುವ ಗೋವಿಂದ ಬಾಬು ಪೂಜಾರಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ವಕೀಲರಾದ ನಟರಾಜ್ ಶರ್ಮಾ ಅವರು ಕಲ್ಲಡ್ಕ ಪ್ರಭಾಕರ ಭಟ್ಟರ ಅಳಿಯ ಎಂದೂ ತಿಳಿದು ಬಂದಿದೆ. ಬಿಜೆಪಿ ಪಕ್ಷದಲ್ಲಿ ಟಿಕೆಟ್ ಲಾಭಿಯ ಬಗ್ಗೆ ಹಿಂದಿನಿಂದಲೂ ಆರೋಪ ಕೇಳಿ ಬಂದಿತ್ತು, ಆದರೆ ಅದು ಗೋವಿಂದ ಬಾಬು ಪೂಜಾರಿಗೆ ವಂಚಿಸುವ ಮೂಲಕ ಹೊರ ಬಿದ್ದಿದ್ದು, ಸ್ವತಃ ಉದ್ಯಮಿಯೂ ಆದಂತಹ ಗೋವಿಂದ ಬಾಬು ಪೂಜಾರಿ ಮೇಲೆ ನಟರಾಜ್ ಶರ್ಮಾ ಅಕ್ರಮ ಹಣ ವರ್ಗಾವಣೆ ಸಂಬಂಧ ದಾಖಲಿಸುವ ಹವಾಲಾ ವ್ಯವಹಾರ ಎಂದು ದೂರು ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದು ಪರೋಕ್ಷವಾಗಿ ಚೈತ್ರ ಬೆಂಬಲಕ್ಕೆ ನಿಂತು, ನೇರಾನೇರ ಗೋವಿಂದ ಬಾಬು ಪೂಜಾರಿಯ ಮೇಲೆ ಬ್ಲಾಕ್ಮೇಲ್ ತಂತ್ರ ಪ್ರಯೋಗ ಮಾಡುವ ರೀತಿಯಲ್ಲಿ ನಟರಾಜ್ ಶರ್ಮಾ (RSS) ತನ್ನ ದಾಳ ಉರುಳಿಸಿದೆ.

ಇತ್ತ ಕೇಸಿನ ಗಂಭೀರತೆ ಕುಗ್ಗಿಸುವುದು, ದೂರುದಾರ ಅಥವಾ ಸಂತ್ರಸ್ತನ ಜಾಗದಲ್ಲಿರುವ ಗೋವಿಂದ ಬಾಬು ಪೂಜಾರಿ ಕೇಸ್ ವಾಪಸ್ ತಗೆಯುವಂತೆ ಮಾಡುವುದು ಹಾಗೂ ಪರೋಕ್ಷವಾಗಿ ಚೈತ್ರಾ ಕುಂದಾಪುರ ಗ್ಯಾಂಗಿಗೆ ‘ನಾವು ನಿಮ್ಮ ಜೊತೆಗಿದ್ದೇವೆ’ ಎಂಬ ಭರವಸೆ ಕೊಟ್ಟಂತಾಗುತ್ತದೆ.

ಈ ಮೂಲಕ RSS ಒಂದೇ ಕಲ್ಲಿಗೆ ಮೂರು ಹಕ್ಕಿ ಉದುರುವಂತೆ ಮಾಡುವ ‘ಚಾಣಾಕ್ಷ’ ಕೆಲಸಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿ ‘ಹವಾಲಾ’ ನಡೆದಿದೆ ಎಂದೇ ಭಾವಿಸಿದರೂ ಬೇರಾವುದೇ ವ್ಯಕ್ತಿ ಅಥವಾ ವಕೀಲರು ಈ ರೀತಿಯಾಗಿ ಕೇಸು ದಾಖಲಿಸದೇ ನಟರಾಜ್ ಶರ್ಮಾ ಅವರೇ ಗೋವಿಂದ ಬಾಬು ಪೂಜಾರಿ ಮೇಲೆ ಪ್ರಕರಣ ದಾಖಲಿಸಲು ಕಾರಣವೇನು? ಸಂಘ ಪರಿವಾರದ ಬಹುತೇಕ ಕೇಸುಗಳನ್ನು ನಿಭಾಯಿಸುವ ನಟರಾಜ್ ಶರ್ಮಾ ಅವರಿಗೆ RSS ನೇರವಾಗಿ ನಿರ್ದೇಶನ ನೀಡಿದೆ ಎಂಬುದೂ ಸಹ ಮೂಲಗಳಿಂದ ತಿಳಿದು ಬಂದಿದೆ.

ಇತ್ತ ಚೈತ್ರ ಕುಂದಾಪುರ ಗ್ಯಾಂಗ್ ಗೆ ಹಣವನ್ನೂ ಕೊಟ್ಟು, ನಟರಾಜ್ ಶರ್ಮಾ (RSS) ಕಡೆಯಿಂದ ಕೇಸೂ ದಾಖಲಿಸಿಕೊಳ್ಳುವ ಮೂಲಕ ಇಲ್ಲಿಯವರೆಗೆ ನಿಸ್ವಾರ್ಥವಾಗಿ ‘ಪರಿವಾರದ’ ಸೇವೆ ಮಾಡಿಕೊಂಡು ಬಂದಿದ್ದ ಗೋವಿಂದ ಬಾಬು ಪೂಜಾರಿ ನಿಜವಾದ ಸಂತ್ರಸ್ತ ಎಂಬುದರಲ್ಲಿ ಎರಡು ಮಾತಿಲ್ಲ. ಅಕಸ್ಮಾತ್ ನಟರಾಜ್ ಶರ್ಮಾ ಗೋವಿಂದ ಬಾಬು ಪೂಜಾರಿ ವಿರುದ್ಧ ದೂರು ದಾಖಲಿಸಿದ್ದೇ ಆದರೆ ಪೂಜಾರಿ ಅವರ ಮುಂದಿನ ನಿಲುವು ಏನಿರಬಹುದು ಎಂಬ ಕುತೂಹಲ ಹುಟ್ಟಿಸಿದೆ.