narendra mdi – Peepal Media

ನಮೋ ಕುರ್ಚಿಗಂಟಿದ ಫೆವಿಕಾಲ್‌ ನಂಟು (ರಾಜಕೀಯ ವಿಡಂಬನಾ ಬರಹ)
“ಮೂರು ಬಿಟ್ಟವನು ಊರಿಗೆ…ಅಲ್ಲ…ಜಗತ್ತಿಗೆ ದೊಡ್ಡವನು”

ಹತಾಶೆಯಿಂದ ಮಾ.ಕೃ.ಕುಟೀರದ ಪುರೋಹಿತ ನೆಲಕ್ಕೆ ಒದ್ದು ಹೊರಟಾಗ ಹೇಳಿದ ಮಾತು ನಮೋ ಸಾಮ್ರಾಟನ ಕಿವಿಯಲ್ಲಿ ಪ್ರತಿಧ್ವನಿಸಿ ಮೈ ಕಂಪಿಸಿ ಪುಳಕಗೊಂಡಿತು. ಹೆಂಡತಿ ಬಿಟ್ಟೆ. ಮನೆ ಬಿಟ್ಟೆ. ದುಡಿಮೆ ಬಿಟ್ಟೆ. ಹೌದು…ದೇಶಕ್ಕಾಗಿ ಮೂರು ಬಿಟ್ಟೆ. ಕೊನೆಗೂ ತನ್ನನ್ನು ಜಗತ್ತಿಗೆ ದೊಡ್ಡವನು – ವಿಶ್ವಗುರು ಎಂದು ಪುರೋಹಿತ ಒಪ್ಪಿಕೊಂಡನೆಂದು ನಮೋ ಗಡ್ಡ ನೀವುತ್ತ ಸಂಪ್ರೀತನಾದ. ಮೂಲೆಯಲ್ಲಿ ಕೈಕಟ್ಟಿ ನಿಂತು ಈರ್ವರ ಸಂಭಾಷಣೆಯನ್ನು ಆಲಿಸುತ್ತಿದ್ದ ಅ.ಕುತಂತ್ರಿ ಮಂತ್ರಿ ಹಣೆ ಚಚ್ಚಿಕೊಂಡ.  ಅಷ್ಟವಿಧಾರ್ಚನೆ ಮಾಡಿ ಮುಖಕ್ಕೆ ಮಂಗಳಾರತಿ ಎತ್ತಿದರೂ ಅದನ್ನೇ ಹೊಗಳಿಕೆ ಎಂದು ಸಂಭ್ರಮಿಸುವ ನಮೋ ಮೂರ್ಖತನಕ್ಕೆ ಮುಖ ಕಿವಿಚಿಕೊಂಡ. ಹಿನ್ನೆಲೆಯಲ್ಲಿ ʼನಗುವುದೋ…ಅಳುವುದೋ…ʼ ಎಂಬ ಪ್ಯಾಥೊ ಸಾಂಗ್‌ಕೇಳಿಬರುತ್ತಿತ್ತು.

ಆ ದಿನ ಬೆಳ್ಳಂಬೆಳಗ್ಗೆ ಅ.ಕು.ಮಂತ್ರಿ ಮತ್ತು ಕಮಲೀ ಪಡೆ ಮುಖ್ಯಸ್ಥ ಕಪಿ ದಡ್ಡನನ್ನು ಬರ ಹೇಳಿದ ಸಾಮ್ರಾಟ ನಮೋ, ಮಾಯಾದರ್ಪಣದಲ್ಲಿ ತನ್ನ ಫಾರಿನ್‌ಟೂರಿನ ಶೂಟಿಂಗನ್ನು ರೀವೈಂಡ್‌ಮಾಡುತ್ತ, ಡಯಾಸ್ಪೊರದಲ್ಲಿ ಅನಿವಾಸಿ ದೇಶಭಕ್ತರು ಭಜನೆ ಮಾಡುವುದನ್ನು ತೋರಿ ಆನಂದದಲ್ಲಿ ಮುಳುಗಿದ್ದ. ನಮೋವನ್ನು ಮೆಚ್ಚಿಸಲು ಕಪಿ ದಡ್ಡ ಆಗಾಗ್ಗೆ ಎದ್ದು “ಓಂ ನಮೋ…ಓಂ ನಮೋ” ಎನ್ನುತ್ತ ತಾಳ ಹಾಕಿ ಕುಣಿಯುವುದು ಕುತಂತ್ರಿಗೆ ಕಿರಿಕಿರಿಯುಂಟು ಮಾಡುತ್ತಿತ್ತು. ಆದರೂ, ದಡ್ಡನಿಗೆ ಉಗಿಯೋಕು ಆಗದೆ ಉಗುಳನ್ನು ನುಂಗೋಕು ಆಗದೇ  ಕುಳಿತಲ್ಲಿಯೇ ಚಡಪಡಿಸಿದ.

ಅಷ್ಟರಲ್ಲಿ – ಮಾ.ಕೃ.ಕುಟೀರದ ಪೂಜಾರಿ ಗಣವೇಶಧಾರಿಯಾಗಿ ನೆಲಕ್ಕೆ ಕೋಲು ಬಡಿಯುತ್ತ “ಆಲ್‌ಇಸ್‌ನಾಟ್‌ವೆಲ್”‌ಎಂದು ಕೂಗುತ್ತ ಅಂತಃಪುರದತ್ತಲೇ ಬರುವುದನ್ನು ಕುತಂತ್ರಿ ಕಿಟಕಿಯಲ್ಲಿ ಗಮನಿಸಿದ. ಎಷ್ಟು ಬಾರಿ ಹೇಳಿ ಕಳಿಸಿದರೂ ಕುಟೀರದ ಕಡೆ ತಲೆ ಹಾಕದಿದ್ದಕ್ಕೆ ರೋಸಿ ಹೋದ ಪುರೋಹಿತ, ಕ್ಯಾತೆ ತೆಗೆಯಲೆಂದೇ ಅರಮನೆಗೆ ಬರುತ್ತಿರುವುದನ್ನು ಊಹಿಸಿದ ಕುತಂತ್ರಿ ಕಪಿ ದಡ್ಡನಿಗೆ ಕಣ್ಸನ್ನೆ ಮಾಡಿದ. ಅವನು ಹೆದರುತ್ತಲೇ ಓಡಿ ಹೋಗಿ ಮಂಚದ ಕೆಳಗೆ ಅವಿತುಕೊಂಡ.

ಕಾವಲಿಗಿದ್ದ ರಾಜಭಟರನ್ನು ದೂಡಿಕೊಂಡು ಅಂತಃಪುರಕ್ಕೆ ಸೀದಾ ನುಗ್ಗಿದ ಪೂಜಾರಿ                 ಕುರ್ಚಿಯೊಂದನ್ನು ಎಳೆದು ನಮೋನ ಎದುರಿಗೆ ಕಾಲು ಮೇಲಾಕಿ ಕುಳಿತು ಬುಸುಗುಟ್ಟ ತೊಡಗಿದ. ಆತ್ಮರತಿಯ ಸಂತೋಷದ ಅಲೆಗಳಲ್ಲಿ ತೇಲಾಡಿ, ಓಲಾಡುತ್ತಿದ್ದ ನಮೋ ದೊಪ್ಪೆಂದು ನೆಲಕ್ಕೆ ಬಿದ್ದ.

“ಏನ್…ಪುರೋಹಿತರೇ? ಸುದ್ದಿ ಕೊಡದೇ ಬಂದಿದ್ದೀರ? ಕುಟೀರದಲ್ಲಿ ಎಲ್ಲರೂ ಸೌಖ್ಯವೇ?” ಎಂದು ನಮೋ ಕೇಳಿದ್ದೇ ತಡ “ನಿನ್ನ ಸೌಖ್ಯ ನೆಗೆದುಬಿತ್ತು. ಎಲ್ಲಿ? ಆ ಕಪಿ…ಆ ದಡ್ಡ…ಎಷ್ಟು ಸರ್ತಿ ಹೇಳಿ ಕಳಿಸೋದು. ಕುಟೀರಕ್ಕೆ ಅಗೌರವ ತೋರುವುದೇ? ನಂಗೆ ಗೊತ್ತು. ಎಲ್ಲವೂ ನಿಮ್ಮಗಳದೇ ಚಿತಾವಣೆ” ಎಂದ ಕಣ್ಣಲ್ಲಿ ಕೆಂಡ ಕಾರಿದ. ವಿಷಯ ತನ್ನ ಬುಡಕ್ಕೇ ಬರುತ್ತಿರುವುದನ್ನು ಗಮನಿಸಿದ ಕುತಂತ್ರಿ ಮಂತ್ರಿ, ದೂರ ಹೋಗಿ ಮೂಲೆ ಹಿಡಿದು ಕೈ ಕಟ್ಟಿಕೊಂಡು ವಿನಮ್ರತೆಯಿಂದ ನಿಂತ.

“ಪುರೋಹಿತರೇ…ವಿಷಯ ಏನೆಂದು ತಿಳಿಸಬಾರದೇ? ಕುಟೀರದ ವ್ಯವಹಾರದಲ್ಲಿ ನಾವ್ಯಾಕೆ ಮೂಗು ತೂರಿಸೋಣ?”

“ನಿಮ್ಮ ನಟನಾ ಕೌಶಲ್ಯವನ್ನು ಸಗಣಿ ಭಕ್ತರ ಮುಂದಿಡಿ. ನನ್ನತ್ರ ನವರಂಗಿ ಆಟ ಬೇಡ. ಅವಧಿ ಮುಗಿದ ಕೂಡಲೇ ಕುರ್ಚಿ ತಂದು ಕುಟೀರಕ್ಕೆ ಒಪ್ಪಿಸಬೇಕು. ಅದು ಕುಟೀರದ ನಿಯಮ. ಆ ದಡ್ಡ ಕುರ್ಚಿಗೇ ಫೆವಿಕಾಲ್‌ಹಾಕಿ ಕುಂತಿದ್ದಾನೆ. ಹೇಳಿ ಕಳಿಸಿದರೆ ಬರೋ ಸೌಜನ್ಯವಿಲ್ಲ!”

“ಅಯ್ಯೋ…ಒಂದೆರೆಡು ತಿಂಗಳು ತಡ ಆದ್ರೆ ಆಕಾಶ ಕಳಚಿ ಬೀಳುತ್ತಾ? ಇಷ್ಟು ವರ್ಷ ಅಂಟಿಕೊಂಡಿರೊ ಫೆಲಿಕಾಲ್ನ ಬಿಡಿಸಬೇಡವೇ? ಅಧ್ಯಕ್ಷ ಕುರ್ಚಿನ ನಾನೇ ಖುದ್ದಾಗಿ ಮೆರವಣಿಗೆಲೀ ತಂದು ಕುಟೀರಕ್ಕೆ ಒಪ್ಪಿಸುತ್ತೇನೆ. ಸಮಾಧಾನ ಮಾಡಿಕೊಳ್ಳಿ”

“ನಿಮ್ಮೆಲ್ಲಾ ಕುತಂತ್ರಗಳು ಗೊತ್ತಿರೋದೆ” ಎಂದು ಒಮ್ಮೆ ಅ.ಕು.ಮಂತ್ರಿಯ ಕಡೆ ದಿಟ್ಟಿಸಿ “ನಮೋ ಸಾಮ್ರಾಟ ದೇವರ ಎತ್ತರಕ್ಕೆ ಬೆಳೆದಿದ್ದಾನೆ. ಈಗ ಕಮಲಿಗಳಿಗೆ ಕುಟೀರದ ಹಂಗಿಲ್ಲಾಂತ ಆ ದಡ್ಡನ ಬಾಯಲ್ಲಿ ಹೇಳಿಸಿದ್ದು ಯಾರೂಂತ ನಂಗೊತ್ತು. ತಿಪ್ಪೆ ಸಾರಿಸೋ ಮಾತು ಬೇಡ. ಇದು ನಾನು…ಅಂದರೆ ಕುಟೀರದ ಪೂಜಾರಿಯಾಗಿ ಕೊಡುತ್ತಿರೋ ಕೊನೆ ವಾರ್ನಿಂಗ್!‌ನಿಮಗೂ ಎಪ್ಪತೈದು ಆಯ್ತು. ರೂಲ್ಸ್‌ಎಲ್ಲರಿಗೂ ಒಂದೇ. ಇರೋದು ಎರಡೇ ಅಪ್ಷನ್.‌ಒಂದೋ ಸಿಂಹಾಸನದ ವ್ಯಾಮೋಹ ಬಿಡಿ. ಇಲ್ಲಾ…ಅಧ್ಯಕ್ಷ ಕುರ್ಚಿನಾ ಕುಟೀರಕ್ಕೆ ತಂದೊಪ್ಪಿಸಿ”

ಸುತ್ತಿಬಳಸಿ ಇಂಡೈರೆಕ್ಟಾಗಿ ಸಿಂಹಾಸನಕ್ಕೆ ಕೈ ಹಾಕಿದ್ದರಿಂದ ನಮೋ ಒಮ್ಮೆಗೆ ಕಂಗಾಲಾದ. ಸಿಂಹಾಸನವಿಲ್ಲದ ಶೋಕಿಲಾಲ ಬದುಕು ಹೇಗೆ? ಫಾರಿನ್‌ಟೂರು ಹೊಡೆಯುತ್ತ, ಫೋಟೊ ಶೂಟಿಂಗಂತ ಮೋಜು ಮಸ್ತಿ ಮಾಡೋದು ಹೇಗೆ? ದಶಕಗಳಿಂದ ಸಾಕಿದ ಅಖಂಡ ಲಂಡಭಕ್ತರ ಗತಿ ಏನು? ಕಣ್ಣಿಗೆ ಕತ್ತಲು ಕಟ್ಟಿದಂತಾಗಿ ತಳ ಮುಟ್ಟಿ ನೋಡಿಕೊಂಡ. ಫೆಲಿಕಾಲ್‌ಅಂಟು ಗಟ್ಟಿಯಾಗಿದ್ದು ನಿಟ್ಟುಸಿರು ಬಿಟ್ಟ. ಬೌನ್ಸ್‌ಬಾಲ್‌ಹಾಕಿ ಪ್ರಯೋಜನವಿಲ್ಲವೆಂದು ಗೂಗ್ಲೀ ಹಾಕಲು ಯೋಚಿಸಿದ.

“ಸ್ವಲ್ಪ ಸಮಯ ಕೊಡಿ. ಎಲ್ಲಾ ಸರಿ ಮಾಡ್ತೇನೆ. ಅದಿರಲಿ. ಆಶ್ರಮವಾಸಿಗಳಿಗೆ, ಯುವಕರ ತಲೇಲಿ    ಸನಾತನ ಸಗಣಿ ತುಂಬೋರಿಗೆ, ಮಂದಿ ಮಧ್ಯೆ ಬೆಂಕಿ ಹಚ್ಚೋರಿಗೆ ಕೊಡಲು ದುಡ್ಡು ಸಾಕಾಗ್ತಿಲ್ಲ ಅಂತ ಕೇಳಿದೆ. ವ್ಯವಸ್ಥೆ ಮಾಡ್ತೀನಿ. ಚಿಂತೆ ಮಾಡ್ಬೇಡಿ”

“ಏನೂಂತ…ಮಾತಾಡ್ತಿದ್ದೀಯ. ಕೂತ ಸಿಂಹಾಸನಕ್ಕಾದರೂ ಗೌರವ ಬೇಡವೇ? ಅವರೆಲ್ಲ ದೇಶ ರಕ್ಷಣೆ, ಧರ್ಮ ರಕ್ಷಣೆ ಮಾಡ್ತಿರೋದು. ಅದು ನಿಂಗೆ ಗೊತ್ತಿರೋದೆ ಅಲ್ವಾ? ನಾಲಿಗೇನಾ ಇಷ್ಟು ಹಗುರ ಬಿಡಬಾರದು. ಆಯ್ತು…ಬೇಗ ವ್ಯವಸ್ಥೆ ಮಾಡು. ಆದರೆ, ಆಶ್ರಮವಾಸಿಗಳನ್ನು ಟುರುಪೀಸ್‌ಟ್ರೋಲ್ಗಳಿಗೆ ಹೋಲಿಸಿ ದುಡ್ಡು ಕೊಡೋವಾಗ ಕಂಜೂಸಿತನ ಬೇಡ. ಖರ್ಚು ಬಹಳಷ್ಟಿದೆ. ಹಾಗೆ ದಡ್ಡನ ಕುರ್ಚಿ ಬೇಗ ಕಳಿಸು…ಇಲ್ಲಾಂದ್ರೆ ಸಿಂಹಾಸನ ಬಿಡು. ರಾಜನಾಗಲು ನಿನಗಿಂತ ಯೋಗ್ತೆ ಇರೋ ಪೂರ್ವಾಶ್ರಮದ ನಿವಾಸಿಗಳು ಬಹಳ ಮಂದಿ ಇದ್ದಾರೆ” ಎಂದು ಕುಳಿತಲ್ಲಿಂದ ಎದ್ದವನು “ಕುರ್ಚಿ ಮೇಲೆ ಕೂತಾಕ್ಷಣ ರಾಜ್ಯಭಾರ ಮಾಡೋ ಕ್ಯಪ್ಯಾಸಿಟಿ ಬಂದ್ಬಿಡುತ್ತ!   ಬುದ್ದಿ ಬೇಕು. ಖಾಲಿ ಡಬ್ಬದಿಂದ ಬರೀ ಸೌಂಡೇ ಬರೋದು. ಟೆಲಿಪ್ರಾಂಟರ್‌ಇಲ್ಲದೆ ನೆಟ್ಟಗೆ ಮೂರು ಮಾತು ಆಡೋಕೆ ಬಾರದ ಸಾಮ್ರಾಟ ಅಂತ ಜನ ಉಗಿತ್ತಿದ್ದಾರೆ. ಯಾವ ಲೋಕದಿಂದ ಉದುರಿದ ದೇವರು ಇವ್ನು…ಮೂರು ಬಿಟ್ಟವ….ಊರಿಗೆ…ಅಲ್ಲಾ ಜಗತ್ತಿಗೆ ದೊಡ್ಡವ” ಎಂದು ಗೊಣಗುತ್ತ ಅಲ್ಲಿಂದ ಹೊರಟ.

(ಸಶೇಷ)

ಚಂದ್ರಪ್ರಭ ಕಠಾರಿ

cpkatari@yahoo.com

ಕಾಂಗ್ರೆಸ್ ಬ್ಯಾಂಕ್ ಖಾತೆ ಸ್ಥಗಿತ ; ಬಿಜೆಪಿ ದುರುದ್ದೇಶ ತಡೆಯುವ ಶಕ್ತಿ ಇರುವುದು ಚುನಾವಣೆಗೆ ಮಾತ್ರ – ಸಿದ್ದರಾಮಯ್ಯ
“ಚುನಾವಣಾ ಸಮಯದಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಕಾಂಗ್ರೆಸ್ ಪಕ್ಷ ಹಣದ ಕೊರತೆಯಿಂದ ಗೋಳಾಡುವಂತೆ ಮಾಡಬೇಕೆನ್ನುವುದೇ ಬಿಜೆಪಿ ಸರ್ಕಾರದ ದುರುದ್ದೇಶ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

“ನರೇಂದ್ರ ಮೋದಿ ಅವರ ಹಿಂದಿರುವ “ದುಷ್ಟ ಶಕ್ತಿ’’ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಲಯವನ್ನು ಕೂಡಾ ಬುಡಮೇಲು ಮಾಡಲು ಹೊರಟಿದೆ. ಇದನ್ನು ತಡೆಯುವ ಶಕ್ತಿ ಇರುವುದು ಚುನಾವಣೆಗೆ ಮಾತ್ರ” ಎಂದು ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

“ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮ ಅಧಿಕಾರದ ದುರುಪಯೋಗ ಮಾತ್ರವಲ್ಲ ವಿರೋಧ ಪಕ್ಷಗಳನ್ನು ಹಣಿಯುವ ಸರ್ವಾಧಿಕಾರಿ ನಡೆಯಾಗಿದೆ. ಕಾನೂನುಬಾಹಿರವಾದ ಈ ಕ್ರಮವನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ನಿರ್ದೆಶನ ನೀಡಬೇಕು” ಎಂದು ಆಗ್ರಹಪಡಿಸುತ್ತೇನೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಚುನಾವಣಾ ಸಮಯದಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಕಾಂಗ್ರೆಸ್ ಪಕ್ಷ ಹಣದ ಕೊರತೆಯಿಂದ ಗೋಳಾಡುವಂತೆ ಮಾಡಬೇಕೆನ್ನುವುದೇ ಬಿಜೆಪಿ ಸರ್ಕಾರದ ದುರುದ್ದೇಶವಾಗಿದೆ. ನಮ್ಮ ಪಕ್ಷದ ಖಾತೆಯಲ್ಲಿರುವುದು ಪಕ್ಷದ ಅಭಿಮಾನಿಗಳಾದ ಸಾಮಾನ್ಯ ಜನರಿಂದ ಸಂಗ್ರಹವಾಗಿರುವ ಹಣ, ಅದರಲ್ಲಿರುವುದು ದೊಡ್ಡ ಉದ್ಯಮಪತಿಗಳದ್ದಲ್ಲ. ಹೀಗಿದ್ದರೂ ಯಾಕೆ ಇಂತಹ ಕ್ರಮ?” ಎಂದು ಪ್ರಶ್ನಿಸಿದ್ದಾರೆ.

“ಚುನಾವಣಾ ಬಾಂಡ್ ಗಳ ಮೂಲಕ ಉದ್ಯಮಿಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿ ತಮ್ಮ ಖಾತೆಗೆ ತುಂಬಿಸಿಕೊಂಡಿರುವ ಭಾರತೀಯ ಜನತಾ ಪಕ್ಷದ ಬಗ್ಗೆ ಚುನಾವಣಾ ಆಯೋಗ ಮೌನವಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಆಯೋಗ ತಕ್ಷಣ ಇದನ್ನು ಗಮನಿಸಿ ನಮ್ಮ ಪಕ್ಷಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು.”

“ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯಲ್ಲಿ ಸೋಲಿನ ಭಯ ಹುಟ್ಟಿಕೊಂಡಿದೆ. ಸಾರ್ವಜನಿಕವಾಗಿ ಎದೆಯುಬ್ಬಿಸಿ ಏನೇ ಕೊಚ್ಚಿಕೊಂಡರೂ ಆಂತರ್ಯದಲ್ಲಿರುವ ಆತ್ಮಸಾಕ್ಷಿ ಸತ್ಯವನ್ನೇ ಹೇಳುತ್ತದೆ. 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಾಯಲ್ಲಿ ಹೇಳಿಕೊಂಡರೂ ವಾಸ್ತವದ ಸ್ಥಿತಿ ಏನೆನ್ನುವುದು ನರೇಂದ್ರ ಮೋದಿಗೆ ಗೊತ್ತಿದೆ. ಈ ಭಯದ ಕಾರಣದಿಂದಲೇ ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುವ ಸೇಡಿನ ಕ್ರಮಕ್ಕೆ ಮುಂದಾಗಿದೆ” ಎಂದು ಆರೋಪಿಸಿದ್ದಾರೆ.

“ಪ್ರಧಾನಿ ನರೇಂದ್ರಮೋದಿಯವರು ಒಂದು ಮುಖವಾಡ ಅಷ್ಟೆ, ಅದರ ಹಿಂದೆ ಸರ್ಕಾರವನ್ನು ಮನ್ನಡೆಸವ ಒಂದು “ದುಷ್ಟ ಶಕ್ತಿ’’ ಇದೆ ಎಂದು ನಮ್ಮ ನಾಯಕರಾಗಿರುವ ರಾಹುಲ್ ಗಾಂಧಿಯವರು ಹೇಳಿರುವುದು ಸರಿಯಾಗಿದೆ. ಈ “ದುಷ್ಟ ಶಕ್ತಿ’’ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಲಯವನ್ನು ಕೂಡಾ ಬುಡಮೇಲು ಮಾಡಲು ಹೊರಟಿದೆ. ಇದನ್ನು ತಡೆಯುವ ಶಕ್ತಿ ಇರುವುದು ಚುನಾವಣೆಗೆ ಮಾತ್ರ” ಎಂದು ಹೇಳಿದ್ದಾರೆ.

ರೈತರ ಬಲಿ ಪಡೆದ ಯಡಿಯೂರಪ್ಪ ಮಗನಿಗೆ ಮತ ಕೇಳಲು ಆತ್ಮಸಾಕ್ಷಿ ಒಪ್ಪುವುದೇ? : ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ
ನೀರಾವರಿ ಯೋಜನೆಗಳಲ್ಲಿ ಅನ್ಯಾಯ, ಬಿಡುಗಡೆಯಾಗದ ಬರ ಪರಿಹಾರ, ನರೇಗಾ ಕೆಲಸದ ದಿನಗಳ ಹೆಚ್ಚಳಕ್ಕೆ ಸಿಗದ ಅನುಮತಿ ಹೀಗೆ ರಾಜ್ಯದ ರೈತರಿಗೆ ಬಿಜೆಪಿಯಿಂದ ಸಾಲು ಸಾಲು ಅನ್ಯಾಯವಾಗಿದೆ. ಹೀಗಿರುವಾಗ ರಾಜ್ಯದ ರೈತರು ಯಾಕೆ ಬಿಜೆಪಿಯನ್ನು ಬೆಂಬಲಿಸಬೇಕು? – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಶ್ನೆ

“ರೈತ ಚಳವಳಿಗಳ ತವರುನೆಲ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ. ಬಿ.ಎಸ್ ಯಡಿಯೂರಪ್ಪ ಅವರು ಹಿಂದೊಮ್ಮೆ ರೈತರ ಸಾಲ ಮನ್ನಾದ ಭರವಸೆ ನೀಡಿ ನಂತರ ಮುಖ್ಯಮಂತ್ರಿಯಾದ ಮೇಲೆ ನಮ್ಮ ಸರ್ಕಾರದ ಬಳಿ ನೋಟ್‌ ಪ್ರಿಂಟ್‌ ಮಾಡುವ ಮೆಷಿನ್‌ ಇಲ್ಲ ಎಂದು ಹೇಳಿದ್ದರು. ಹಾವೇರಿಯಲ್ಲಿ ರಸಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್‌ ಮಾಡಿಸಿ ಅಮಾಯಕ ರೈತರನ್ನು ಬಲಿ ಪಡೆದಿದ್ದರು.
ಇಂದು ಅದೇ ಯಡಿಯೂರಪ್ಪನವರ ಮಗನಿಗೆ ಮತ ನೀಡಿ ಎನ್ನಲು ನಿಮ್ಮ ಆತ್ಮಸಾಕ್ಷಿ ಒಪ್ಪುವುದೇ?” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿಗೆ ಪ್ರಶ್ನಿಸಿದ್ದಾರೆ.

2018ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮೊದಲ ಸಂಪುಟ ಸಭೆಯಲ್ಲಿಯೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು. ಅಧಿಕಾರ ಸಿಕ್ಕ ಮೇಲೆ ಕೊಟ್ಟ ಮಾತನ್ನು ಈಡೇರಿಸದೆ, ತಮಗೆ ದ್ರೋಹ ಬಗೆದ ಬಿಜೆಪಿಯನ್ನು ನಾಡಿನ ರೈತರು ಯಾಕೆ ಬೆಂಬಲಿಸಬೇಕು? ಎಂದು ಸಿದ್ದರಾಮಯ್ಯ ಖಡಕ್ಕಾಗಿ ಪ್ರಶ್ನಿಸಿದ್ದಾರೆ.

‘ರಾಜ್ಯದಲ್ಲಿ ಬರ ಘೋಷಣೆ ಮಾಡಿ 6 ತಿಂಗಳುಗಳ ಕಳೆದಿದೆ. ರೂ.18,177 ಕೋಟಿ ಪರಿಹಾರದ ಹಣ ಬಿಡುಗಡೆಗೆ ಒತ್ತಾಯಿಸಿ ಹಲವು ಬಾರಿ ಪತ್ರ ಬರೆದಿದ್ದೇನೆ. ಖುದ್ದಾಗಿ ತಮ್ಮನ್ನು ಹಾಗೂ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಆದರೂ ಈ ವರೆಗೆ ನಯಾಪೈಸೆ ಪರಿಹಾರದ ಹಣ ಬಿಡುಗಡೆ ಆಗಿಲ್ಲ. ರಾಜ್ಯದ ರೈತರ ಮೇಲೆ ಯಾಕಿಷ್ಟು ದ್ವೇಷ?’ ಎಂದು ಸಿದ್ದರಾಮಯ್ಯ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಬರದಿಂದ ಜನರು ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆಯಡಿ ಕೆಲಸದ ದಿನಗಳನ್ನು 100 ರಿಂದ 150ಕ್ಕೆ ಹೆಚ್ಚಳ ಮಾಡಬೇಕು ಎಂದು ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದರೂ ಈ ವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್‌ ನಲ್ಲಿ ರೂ.5,300 ಕೋಟಿ ಅನುದಾನ ಘೋಷಿಸಿ ವರ್ಷಗಳೇ ಕಳೆದರೂ ಈ ವರೆಗೆ ನಯಾಪೈಸೆ ರಾಜ್ಯಕ್ಕೆ ಬಂದಿಲ್ಲ. ಮಹದಾಯಿ ಮತ್ತು ಮೇಕೆದಾಟು ಯೋಜನೆಗಳಿಗೆ ಕೇಂದ್ರದ ಅನುಮತಿ ಸಿಗದೆ ನೆನೆಗುದಿಗೆ ಬಿದ್ದಿವೆ. ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಸಂಕಷ್ಟಸೂತ್ರ ರಚನೆಗೆ ಮಧ್ಯಸ್ಥಿಕೆ ವಹಿಸದೆ ಕೇಂದ್ರ ಸರ್ಕಾರ ನಾಡಿನ‌ ರೈತರನ್ನು ಕೈಬಿಟ್ಟಿತ್ತು.
ರಾಜ್ಯದ ರೈತರಿಗೆ ಮಾತ್ರ ಯಾಕೆ ಈ ಸಾಲು ಸಾಲು ಅನ್ಯಾಯಗಳು?’ ಎಂದು ತಮ್ಮ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶದ ಕೃಷಿ ಕ್ಷೇತ್ರವನ್ನು ಅದಾನಿ, ಅಂಬಾನಿಯಂತಹ ಉದ್ಯಮಿಗಳ ಕೈಗಿಡುವ ದುಷ್ಟ ಆಲೋಚನೆಯೊಂದಿಗಿನ ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ 3 ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿತು. ಈ ಕಾಯ್ದೆಗಳನ್ನು ವಾಪಾಸು ಪಡೆಯುವಂತೆ ಹೋರಾಟ ಮಾಡುತ್ತಿದ್ದ 750ಕ್ಕೂ ಹೆಚ್ಚು ರೈತರು ಅನಾರೋಗ್ಯ, ಹವಾಮಾನ ವೈಪರಿತ್ಯ, ಪೊಲೀಸ್‌ ದೌರ್ಜನ್ಯಗಳಿಗೆ ಬಲಿಯಾದರು.
ಇವರಿಗೆ ನ್ಯಾಯ ಕೊಡಿಸಬೇಕಾದವರು ನೀವಲ್ಲವೇ ನರೇಂದ್ರ ಮೋದಿ ಅವರೇ? ಎಂದು ಕೇಂದ್ರ ಸರ್ಕಾರದ ರೈತ ವಿರೋಧಿ ನಿಲುವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಮೊನ್ನೆ ಬಿಜೆಪಿ ಸೇರಿದ್ದ ಅಶೋಕ್ ಚವ್ಹಾಣ್‌ಗೆ ಟಿಕೇಟ್
ನವದೆಹಲಿ: ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಎರಡು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಅಶೋಕ್ ಚವ್ಹಾಣ್ ಅವರಿಗೆ ಮಹಾರಾಷ್ಟ್ರದಿಂದ ಟಿಕೇಟ್‌ ನೀಡಲಾಗಿದೆ.

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್‌ ಚವ್ಹಾಣ್‌ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಮಹಾರಾಷ್ಟ್ರದಿಂದ ಚವ್ಹಾಣ್‌ ಸೇರಿದಂತೆ ಮೇಧಾ ಕುಲಕರ್ಣಿ, ಅಜಿತ್ ಗೋಪ್ಛಡೆ ಸ್ಪರ್ಧಿಸಲಿದ್ದಾರೆ. ಒಟ್ಟು 15 ರಾಜ್ಯಗಳ 56 ಸ್ಥಾನಗಳಿಗೆ ಫೆ.27ರಂದು ದ್ವೈವಾರ್ಷಿಕ ಚುನಾವಣೆ ನಡೆಯಲಿದೆ.

ಗುಜರಾತ್‌ನಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ಗೋವಿಂದಭಾಯಿ ಧೋಲಾಕಿಯಾ, ಮಾಯಾಂಕ್ ಭಾಯ್ ನಾಯಕ್‌, ಮತ್ತು ಡಾ. ಜಶ್ವಂತ್‌ ಸಿನ್ಹ ಪರ್ಮಾರ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿದ್ದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮಧ್ಯಪ್ರದೇಶದಿಂದ ಕೇಂದ್ರ ಸಚಿವ ಎಲ್. ಮುರುಗನ್, ಉಮೇಶ್‌ನಾಥ್ ಮಹಾರಾಜ್, ಮಾಯಾ ನರೋಲಿಯಾ, ಬನ್ಸಿಲಾಲ್‌ ಗುರ್ಜರ್ ಹಾಗೂ ಒಡಿಶಾದಿಂದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಈಗಾಗಲೇ ಟಿಕೆಟ್‌ ಘೋಷಿಸಿದೆ. ಕರ್ನಾಟಕದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣಸಾ ಭಾಂಡಗೆ ಅವರಿಗೆ ಟಿಕೆಟ್ ನೀಡಲಾಗಿದೆ.

ಕೇಂದ್ರದ ಮಾಜಿ ಸಚಿವ ಆರ್‌.ಪಿ.ಎನ್. ಸಿಂಗ್, ಉತ್ತರಾಖಂಡ ಬಿಜೆಪಿ ಘಟಕದ ಅಧ್ಯಕ್ಷ ಮಹೇಂದ್ರ ಭಟ್ ಅವರ ಹೆಸರು ಅಭ್ಯರ್ಥಿಗಳ ಪಟ್ಟಿಯಲ್ಲಿ ಇದೆ.

ರಾಜ್ಯಸಭೆಯ ಸದಸ್ಯತ್ವದ ಅವಧಿ ಪೂರ್ಣಗೊಳ್ಳುತ್ತಿರುವ ಕೇಂದ್ರ ಸಚಿವರಲ್ಲಿ ಯಾರೊಬ್ಬರ ಹೆಸರೂ ಪಟ್ಟಿಯಲ್ಲಿ ಇಲ್ಲ. ಇವರಲ್ಲಿ ಹೆಚ್ಚಿನವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

“ಮಣಿಪುರಕ್ಕೆ ಬೇಕಿರುವುದು ದಿಟ್ಟ ನಾಯಕತ್ವ, ಜಾಹೀರಾತಿನ ಶ್ರೇಷ್ಠತೆಯಲ್ಲ” – ಪ್ರಿಯಾಂಕಾ ಗಾಂಧಿ
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷದ ನಾಯಕರ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಶ್ರೇಷ್ಠತೆಯ ಜಾಹೀರಾತುಗಳಿಂದಷ್ಟೆ ದೊಡ್ಡವರಾಗಲು ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ.

ಸೋಮವಾರ ಮಣಿಪುರದ ತೌಬಲ್ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿ ಹಾಗೂ ನಾಲ್ವರ ದುರ್ಮರಣದ ನಂತರ ಆಡಳಿತದಲ್ಲಿರುವ ಪಕ್ಷ ಈ ಬಗ್ಗೆ ಏನೊಂದೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಪ್ರಿಯಾಂಕಾ ವಾದ್ರಾ ಅವರು ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಮಣಿಪುರದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ, ಕಾಣಿಸಿಕೊಂಡಿದ್ದಾರೆ, ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ ಇನ್ನೂ ಮುಂದುವರೆದಿದೆ ಮಣಿಪುರದ ಜನರು ಎಂಟು ತಿಂಗಳಿನಿಂದ ಕೊಲೆ, ಹಿಂಸಾಚಾರ ಮತ್ತು ಆಪತ್ಕಾಲವನ್ನು ಎದುರಿಸುತ್ತಿದ್ದಾರೆ. ಈ ಪ್ರವೃತ್ತಿ ಯಾವಾಗ ನಿಲ್ಲುತ್ತದೆ?” ಎಂದು ಸಾಮಾಜಿಕ ಜಾಲತಾಣ X ನಲ್ಲಿ ಟ್ವೀಟ್ ಮಾಡಿದ್ದಾರೆ.

ನಿರಂತರ ಸುದ್ದಿಗಳಿಗೆ ನಮ್ಮ ವಾಟ್ಸಾಪ್ ಗುಂಪನ್ನು ಸೇರಿ : ಪೀಪಲ್ ಮೀಡಿಯಾ

ಈವರೆಗೆ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಹೋಗಿಲ್ಲ, ಮಣಿಪುರದ ಬಗ್ಗೆ ಮಾತನಾಡಿಲ್ಲ, ಸಂಸತ್ತಿನಲ್ಲಿ ಉತ್ತರವನ್ನೂ ನೀಡಿಲ್ಲ, ಯಾವುದೇ ಕ್ರಮವನ್ನೂ ತೆಗೆದುಕೊಂಡಿಲ್ಲ. ಮಣಿಪುರಕ್ಕೆ ಬೇಕಾಗಿರುವುದು ದಿಟ್ಟ ನಾಯಕತ್ವವೇ ಅಥವಾ ಜಾಹೀರಾತಿನ ಮೂಲಕ ಬಂದ ಶ್ರೇಷ್ಠತೆಯೇ?” ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ – ನರೇಂದ್ರ ಮೋದಿ ಭೇಟಿ : ರಾಜ್ಯದ ಬಗ್ಗೆ ಚರ್ಚೆಯಾದ ವಿಷಯಗಳಿವು
ಹಲವು ದಿನಗಳ ಭೇಟಿಯ ಪ್ರಸ್ತಾವನೆಯನ್ನು ತಳ್ಳುತ್ತಲೇ ಬಂದಿದ್ದ ನರೇಂದ್ರ ಮೋದಿಯವರು ಅಂತೂ ಕೊನೆಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಸಮಯ ನಿಗದಿ ಮಾಡಿದ್ದರು. ಅದರಂತೆ ರಾಜ್ಯದ ಬರಪರಿಸ್ಥಿತಿ ಸೇರಿದಂತೆ ಹಲವು ಅಗತ್ಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ರಾಜ್ಯಕ್ಕೆ ಹೆಚ್ಚುವರಿ ಹಣ ಬಿಡುಗಡೆಗೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ 18,177 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಇದರಲ್ಲಿ 4,663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,577 ಕೋಟಿ ರೂ. ತುರ್ತು ಪರಿಹಾರ, 566 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ @narendramodi ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ 18,177 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಇದರಲ್ಲಿ 4,663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,577 ಕೋಟಿ ರೂ. ತುರ್ತು ಪರಿಹಾರ, 566 ಕೋಟಿ ರೂ.… pic.twitter.com/Wq6GPj2sJe
— CM of Karnataka (@CMofKarnataka) December 19, 2023

ರಾಜ್ಯದಲ್ಲಿ 236 ತಾಲೂಕುಗಳ ಪೈಕಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎನ್‌.ಡಿ.ಆರ್‌.ಎಫ್. ನಿಂದ 4,663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ ಒದಗಿಸುವಂತೆ ಮನವಿ ಮಾಡಲಾಗಿದೆ.

ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡಲು 2015-16 ರ ಕೃಷಿ ಗಣತಿಯನ್ನು ಪರಿಗಣಿಸಲಾಗುತ್ತಿದ್ದು, ಇದು 8 ವರ್ಷ ಹಳೆಯ ಮಾಹಿತಿಯಾಗಿದೆ. ಅಲ್ಲದೆ, ರಾಜ್ಯದಲ್ಲಿ ರೈತರ ದತ್ತಾಂಶವನ್ನು ಫ್ರೂಟ್ಸ್‌ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಪಿಎಂ-ಕಿಸಾನ್‌ ಯೋಜನೆಗೆ ಇದನ್ನು ಪರಿಗಣಿಸಲಾಗುತ್ತಿದೆ. ಇದರನ್ವಯ ರಾಜ್ಯದಲ್ಲಿ 83 ಲಕ್ಷ ಜನ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, ಪರಿಹಾರ ವಿತರಣೆಗೆ ಈ ದತ್ತಾಂಶವನ್ನು ಪರಿಗಣಿಸುವಂತೆ ಮನವಿ ಮಾಡಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಟ್ವಿಟ್ ಮಾಡಿದ್ದಾರೆ.

ಜೊತೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಬರಪೀಡಿತ ತಾಲ್ಲೂಕುಗಳಲ್ಲಿ ಉದ್ಯೋಗದ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ 236 ತಾಲೂಕುಗಳ ಪೈಕಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎನ್…
— CM of Karnataka (@CMofKarnataka) December 19, 2023

ಬರ ಪರಿಹಾರಕ್ಕಾಗಿ ರಾಜ್ಯದ ಮೊದಲ ಪ್ರಸ್ತಾವನೆಯನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ ದಿನಾಂಕ 22-09-2023 ರಂದ ಸಲ್ಲಿಸಲಾಗಿತ್ತು. ಭಾರತ ಸರ್ಕಾರದ ಬರ ಅಧ್ಯಯನ ತಂಡವು ಅಕ್ಟೋಬರ್‌ ತಿಂಗಳ 4 ರಿಂದ 9ರ ನಡುವೆ ಭೇಟಿ ನೀಡಿ, ವರದಿಯನ್ನು ಸಲ್ಲಿಸಿದೆ. ಅದರ ನಂತರ ಇನ್ನೂ 21 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು.

ಆದ್ದರಿಂದ ಅಕ್ಟೋಬರ್‌ 20 ರಂದು ಕೇಂದ್ರ ಕೃಷಿ ಸಚಿವಾಲಯಕ್ಕೆ ಎನ್‌.ಡಿ.ಆರ್.ಎಫ್. ಅಡಿ 17,901 ಕೋಟಿ ರೂ. ಪರಿಹಾರ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಯಿತು. ಇದರಲ್ಲಿ ತುರ್ತು ಪರಿಹಾರದ12,577 ಕೋಟಿ ರೂ. ಮೊತ್ತವೂ ಸೇರಿದೆ. ನವೆಂಬರ್‌ 4 ರಂದು ಹೆಚ್ಚುವರಿಯಾಗಿ 7 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ ಸಲ್ಲಿಸಿದ ಪೂರಕ ಮನವಿಯೊಂದಿಗೆ ಕೇಂದ್ರದಿಂದ 18,177 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬರ ಪರಿಹಾರಕ್ಕಾಗಿ ರಾಜ್ಯದ ಮೊದಲ ಪ್ರಸ್ತಾವನೆಯನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ ದಿನಾಂಕ 22-09-2023 ರಂದ ಸಲ್ಲಿಸಲಾಗಿತ್ತು. ಭಾರತ ಸರ್ಕಾರದ ಬರ ಅಧ್ಯಯನ ತಂಡವು ಅಕ್ಟೋಬರ್‌ ತಿಂಗಳ 4 ರಿಂದ 9ರ ನಡುವೆ ಭೇಟಿ ನೀಡಿ, ವರದಿಯನ್ನು ಸಲ್ಲಿಸಿದೆ. ಅದರ ನಂತರ ಇನ್ನೂ 21 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ಆದ್ದರಿಂದ ಅಕ್ಟೋಬರ್‌ 20…
— CM of Karnataka (@CMofKarnataka) December 19, 2023

ಮೊದಲ ಮನವಿ ಸಲ್ಲಿಸಿ ಈಗಾಗಲೇ ಮೂರು ತಿಂಗಳು ಕಳೆದಿದ್ದು, ರೈತರು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಬೆಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡುವುದು ಅತ್ಯಗತ್ಯವಾಗಿದೆ ಎಂದು ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಇಂದಿನ ಪ್ರಧಾನಿ ಭೇಟಿಯ ಬಗ್ಗೆ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಶೇಷವಾಗಿ ಈ ಬಾರಿಯ ಭೇಟಿ, ರಾಜ್ಯದ ಬರ ಪರಿಸ್ಥಿತಿ ಹಾಗೂ ಇದರ ಪರಿಣಾಮವಾಗಿ ಕೇಂದ್ರದಿಂದ ಬೇಕಾದ ನೆರವಿನ ಬಗ್ಗೆಯೇ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೈತರ ನೆರವಿಗೆ ಬರಲಿದೆಯೇ.. ಬಂದರೂ ನೆರವಿನ ಪ್ರಮಾಣ ಎಷ್ಟು ಇರಬಹುದು ಎಂಬುದನ್ನು ಕಾದು ನೋಡಬೇಕಿದೆ.

https://twitter.com/CMofKarnataka/status/1737011416970981392?s=20

CM ಸಿದ್ದರಾಮಯ್ಯ, ನರೇಂದ್ರ ಮೋದಿ ಭೇಟಿ : ಚರ್ಚೆಗೆ ಬರಲಿರುವ ವಿಷಯಗಳು ಏನೇನು ಗೊತ್ತಾ?
ರಾಜ್ಯಕ್ಕೆ ಬೇಕಾದ ಹಲವು ಅಗತ್ಯ ಅನುದಾನ, ವಿವಿಧ ಅಭಿವೃದ್ಧಿ ಕಾರ್ಯಗಳ ಬಗೆಗಿನ ಚರ್ಚೆಗೆ ನರೇಂದ್ರ ಮೋದಿಯವರು ಅವಕಾಶ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿಕೊಂಡೇ ಬಂದಿದ್ದರು. ಹಲವು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಪ್ರಯತ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಂತೂ ಪ್ರಧಾನಿಗಳು ಅವಕಾಶ ಕಲ್ಪಿಸಿದ್ದಾರೆ.

ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯ ನಂತರ ಒಂದು ಬಾರಿ ಮಾತ್ರ ಔಪಚಾರಿಕವಾಗಿ ಪ್ರಧಾನಿ ಭೇಟಿಗೆ ಅವಕಾಶ ಸಿಕ್ಕಿತ್ತು. ಆ ನಂತರ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅಗತ್ಯ ವಿಚಾರಗಳ ಬಗ್ಗೆ ಚರ್ಚೆಗೆ ಹಲವು ಬಾರಿ ಅವಕಾಶ ಕೋರಿ ಪತ್ರ ಬರೆಯಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಕಛೇರಿಯಿಂದ ಸಿದ್ದರಾಮಯ್ಯನವರ ಭೇಟಿಗೆ ಈ ವರೆಗೆ ಯಾವುದೇ ಅವಕಾಶ ಸಿಕ್ಕಿರಲಿಲ್ಲ.

ಸಿದ್ದರಾಮಯ್ಯ ಕೂಡಾ ರಾಜ್ಯದಲ್ಲಿ ಅನೇಕ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ನನ್ನ ಭೇಟಿಗೆ ಅವಕಾಶ ಕೊಟ್ಟಿಲ್ಲ ಎಂದೇ ದೂರಿಕೊಂಡು ಬಂದಿದ್ದರು. ಸದನದಲ್ಲೂ ಸಹ ಬಿಜೆಪಿ ನಾಯಕರಿಗೆ ನೀವಾದರೂ ಪ್ರಧಾನಿ ಭೇಟಿಗೆ ಅನುಮತಿ ಕೊಡಿಸಿ ಎಂದು ಪರೋಕ್ಷವಾಗಿ ಚಾಟಿ ಬೀಸಿದ್ದರು.

ಅದರಂತೆ ಇಂದು ನವದೆಹಲಿಯಲ್ಲಿ ಪ್ರಧಾನಿಗಳ ಭೇಟಿಗೆ ಸಿದ್ದರಾಮಯ್ಯನವರಿಗೆ ಅವಕಾಶ ಕಲ್ಪಿಸಲಾಗಿದೆ. ಕಾವೇರಿ ಜಲವಿವಾದ, ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಗಳ ಕುರಿತು ಸರ್ವಪಕ್ಷ ನಿಯೋಗ ಭೇಟಿಗೆ ಕೇಳಿದರೂ ಪ್ರಧಾನಿ ಅವಕಾಶ ನೀಡು ತ್ತಿಲ್ಲ ಎಂದು ಸಿಎಂ ಆರೋಪಿಸಿದ್ದರು.

ಈಗ ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕನ್ನು ಬರಪೀಡಿತ ಎಂದು ಘೋಷಿಸಿರುವ ಸರಕಾರ, 30-35 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದ್ದು, ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಕನಿಷ್ಠ 18 ಸಾವಿರ ಕೋಟಿ ರೂ.ಗಳ ಪರಿಹಾರಕ್ಕಾಗಿ ಕೇಂದ್ರ ಸರಕಾರದ ಮುಂದೆ ಬೇಡಿಕೆ ಇಟ್ಟಿದೆ. ಇದರ ಜೊತೆಗೆ ಅಂತರರಾಜ್ಯ ಗಡಿ ಮತ್ತು ನದಿ ನೀರಿನ ಸಮಸ್ಯೆ, ‘ಗ್ಯಾರಂಟಿ’ ಅಕ್ಕಿಯ ಅಭಾವದ ಬಗ್ಗೆಯೂ ಪ್ರಧಾನಿಗಳ ಜೊತೆಗೆ ಚರ್ಚೆ ನಡೆಯುವ ಸಂಭವ ಇದೆ ಎನ್ನಲಾಗಿದೆ.

ಇವೆಲ್ಲದಕ್ಕೂ ಪ್ರಧಾನಿ ನರೇಂದ್ರ ಮೋದಿ ಚರ್ಚೆಗೆ ಅವಕಾಶ ಕಲ್ಪಿಸಿದರೆ ಮಾತ್ರ ಈ ಬಗ್ಗೆ ಮಾತುಕತೆ ನಡೆಯಬಹುದು. ಇಂದು ಪ್ರಧಾನಿಗಳ ಜೊತೆಗಿನ ಭೇಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗೆ ಸಚಿವರಾದ ಕೃಷ್ಣಭೈರೇಗೌಡರು ಇರಲಿದ್ದಾರೆ.

ಪ್ರಧಾನಮಂತ್ರಿಗಳ ಭೇಟಿಗೆ ಸಮಯ ಕೇಳಿದ್ದು, ಇನ್ನೂ ನಿಗದಿ ಆಗಿಲ್ಲ: ಡಿಸಿಎಂ ಡಿಕೆಶಿ
ದೆಹಲಿ,ಡಿಸೆಂಬರ್‌ 18: ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಸೇರಿದಂತೆ ನೀರಾವರಿ ಇಲಾಖೆ ಹಾಗೂ ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲು ಪ್ರಧಾನಮಂತ್ರಿಗಳ ಭೇಟಿಗೆ ಸಮಯ ಕೇಳಿದ್ದು, ಇನ್ನೂ ನಿಗದಿಯಾಗಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಕರ್ನಾಟಕ ಭವನದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ಪ್ರಧಾನಮಂತ್ರಿಗಳು ಮುಖ್ಯಮಂತ್ರಿಗಳ ಭೇಟಿಗೆ ಸಮಯ ನೀಡಿದ್ದಾರೆ. ಮುಖ್ಯಮಂತ್ರಿಗಳು ಬರ ಪರಿಹಾರ, ನರೇಗಾ ಯೋಜನೆಯಲ್ಲಿ ಮಾನವ ಕೂಲಿ ದಿನಗಳ ಹೆಚ್ಚಳ ಸೇರಿದಂತೆ ಇತರೆ ಪ್ರಮುಖ ವಿಚಾರವಾಗಿ ಚರ್ಚೆ ಮಾಡಲಿದ್ದಾರೆ.

ಪ್ರಧಾನಮಂತ್ರಿಗಳ ಭೇಟಿಗೆ ನನಗೆ ಇನ್ನು ಸಮಯ ನಿಗದಿಯಾಗಿಲ್ಲ. ಹೀಗಾಗಿ ಕೆಲವು ಕೇಂದ್ರ ಸಚಿವರ ಭೇಟಿಗೆ ಸಮಯ ಕೇಳಿದ್ದೇನೆ ಎಂದು ತಿಳಿಸಿದರು.

ನನ್ನನ್ನು ಮೋದಿʼಜೀʼ ಎಂದು ಕರೆಯಬೇಡಿ, ಮೋದಿ ಅನ್ನಿ ಸಾಕು!
ಹೊಸದಿಲ್ಲಿ: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂರು ರಾಜ್ಯಗಳ ಗೆಲುವಿಗೆ ಭಾರತೀಯ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಗುರುವಾರ ತಮ್ಮನ್ನು ಬಿಜೆಪಿ ಸಂಸದರು ‘ಮೋದಿʼ ಎಂದು ಸಂಬೋಧಿಸುವಂತೆ ಒತ್ತಾಯಿಸಿದ್ದಾರೆ. ಪೂರ್ವಪ್ರತ್ಯಯಗಳು ಅಥವಾ “ಆದರನೀಯ ಮೋದೀಜಿ” (ಗೌರವಾನ್ವಿತ ಶ್ರೀ ಮೋದಿ) ಅಥವಾ “ಮೋದೀಜಿ” ನಂತಹ ಪ್ರತ್ಯಯಳಗನ್ನು ಸೇರಿಸದೇ ಸಂಬೋಧಿಸಲು ಸೂಚಿಸಿದ್ದಾರೆ.

ಮೋದೀಜಿ, ಆದರನೀಯ ಮೋದೀಜಿ ಎಂದೆಲ್ಲಾ ಕರೆದದ್ದರಿಂದ ಪ್ರಧಾನಮಂತ್ರಿ ಹಾಗೂ ಜನರ ನಡುವೆ ಅಂತರವನ್ನು ಸೃಷ್ಟಿಸಿದೆ ಎಂದು ಅವರು ತಿಳಿಸಿದ್ದಾರೆ.

ಭಾನುವಾರ ಮೂರು ರಾಜ್ಯಗಳ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಬಿಜೆಪಿ ಸಂಸದೀಯ ಪಕ್ಷದ ಮೊದಲ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, “ಬಿಜೆಪಿ ಈಗ ದೇಶಾದ್ಯಂತ ಆದ್ಯತೆಯ ಪಕ್ಷವಾಗಿದೆ ಮತ್ತು ಪಕ್ಷದ ಕಾರ್ಯಕರ್ತರ ಶ್ರಮದಿಂದಾಗಿ ಇದನ್ನು ಸಾಧಿಸಲು ಸಾಧ್ಯವಾಯಿತು. ಈ ಮೂರು ರಾಜ್ಯಗಳಲ್ಲಿ ತಂಡ ಮಾಡಿದ ಕೆಲಸದ ಫಲಿತಾಂಶವಾಗಿದೆ. ನನ್ನದು ಮಾತ್ರವಲ್ಲದೆ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಗುರಿಯನ್ನು ಸಾಧಿಸಲು ಅವಿರತವಾಗಿ ಶ್ರಮಿಸಿದರು,” ಎಂದು ಅವರು ಹೇಳಿದ್ದಾರೆ.

“ಮೋದೀಜೀ ಕಾ ಸ್ವಾಗತ್ ಹೈ [ಮೋದಿ ಜಿ ಅವರಿಗೆ ಸ್ವಾಗತ]” ಮತ್ತು “ಮೋದಿ ಹ ತೋಹ್ ಮುಮ್ಕಿನ್ ಹೈ [ಮೋದಿ ಇದ್ದರೆ ಅದು ಸಾಧ್ಯ]” ಎಂಬ ಘೋಷಣೆಗಳೊಂದಿಗೆ ಈ ಸಂದರ್ಭದಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲಾಗಿತ್ತು.

ಸಭೆಯಲ್ಲಿ ಉಪಸ್ಥಿತರಿದ್ದವರನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ನಾನು ಪಕ್ಷದ ಪುಟಾಣಿ ಕಾರ್ಯಕರ್ತ ಮತ್ತು ಜನರು ನನ್ನನ್ನು ತಮ್ಮ ಕುಟುಂಬದ ಭಾಗವೆಂದು ಭಾವಿಸುತ್ತಾರೆ. ಗೌರವಾರ್ಥಗಳನ್ನು ಸೇರಿಸುವುದರಿಂದ ನಮ್ಮ ನಡುವೆ ಅಂತರ ಸೃಷ್ಟಿಯಾಗುತ್ತದೆ, ಆದ್ದರಿಂದ ನನ್ನನ್ನು ಮೋದಿ ಎಂದು ಮಾತ್ರ ಸಂಬೋಧಿಸಿ,” ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ ಎಂದು ದಿ ಪ್ರಿಂಟ್‌ ವರದಿ ಮಾಡಿದೆ.

ತೆಲಂಗಾಣ ಸಿಎಂ ಆಗುತ್ತಾರೆಯೇ ರೇವಂತ್‌ ರೆಡ್ಡಿ!
ಬೆಂಗಳೂರು: ಕೆ ಚಂದ್ರಶೇಖರ್ ರಾವ್  (ಕೆಸಿಆರ್‌) ಮತ್ತು ಅವರ ಭಾರತ ರಾಷ್ಟ್ರ ಸಮಿತಿ  -ಬಿಆರ್‌ಎಸ್‌ಗೆ (ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ) ತೆಲಂಗಾಣ ಚುನಾವಣೆಯಲ್ಲಿ ಭಾರೀ ಹಿನ್ನಡೆಯಲ್ಲಿದ್ದು, ಕಾಂಗ್ರೆಸ್ ಸ್ಪಷ್ಟ ಗೆಲುವಿನತ್ತ ಸಾಗುತ್ತಿದೆ.

ಇಲ್ಲಿ ನೋಡಿ: ತೆಲಂಗಾಣ ಚುನಾವಣಾ – 2023 ಫಲಿತಾಂಶ

ಸದ್ಯ ಕಾಂಗ್ರೇಸ್‌ ಗೆಲುವಿನ ರೂವಾರಿಯಾಗಿರುವ, ತೆಲಂಗಾಣದಲ್ಲಿ ಕಾಂಗ್ರೇಸ್‌ ಮತ್ತೆ ಮೈಕೊಡವಿ ಎದ್ದು ನಿಲ್ಲಲು ಕಾರಣಕರ್ತನಾದ ಫೈರ್‌ ಬ್ರಾಂಡ್‌ ನಾಯಕ ರೇವಂತ್‌ ರೆಡ್ಡಿ ಆರು ವರ್ಷದ ಹಿಂದೆ ಕಾಂಗ್ರೇಸ್‌ನಲ್ಲಿಯೇ ಇರಲಿಲ್ಲ!

ಕೊಡಂಗಲ್ ಕ್ಷೇತ್ರವನ್ನು ಗೆದ್ದಿರುವ, ಕಾಮರೆಡ್ಡಿಯಲ್ಲೂ ಕೆಸಿಆರ್ ವಿರುದ್ಧ ಸ್ಪರ್ಧಿಸಿದ ಎ ರೇವಂತ್ ರೆಡ್ಡಿ 2017 ರಲ್ಲಿ ತೆಲುಗು ದೇಶಂ ಪಕ್ಷದಿಂದ (ಟಿಡಿಪಿ) ಕಾಂಗ್ರೆಸ್ ಸೇರಿದವರು.

ಕಾಂಗ್ರೇಸ್‌ ಸೇರಿ ನಾಲ್ಕೇ ವರ್ಷಗಳಲ್ಲಿ ಆಗಿನ ರಾಜ್ಯ ಕಾಂಗ್ರೇಸ್‌ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಸೇರಿದಂತೆ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರ ಅಸಮಾಧಾನದ ಹೊರತಾಗಿಯೂ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ (ಟಿಪಿಸಿಸಿ) ಅಧ್ಯಕ್ಷರಾಗಿ  ಅಧಿಕಾರ ವಹಿಸಿಕೊಂಡರು.

ಸದ್ಯ ತೆಲಂಗಾಣದಲ್ಲಿ ಕಾಂಗ್ರೇಸ್‌ ನೋಡುತ್ತಿರುವ ಈ ಬೃಹತ್ ಗೆಲುವನ್ನು ಸ್ವತಃ ಕಾಂಗ್ರೆಸ್‌ಗೆ ನಂಬಲಾಗದಂತಿದೆ. ಮುಖ್ಯವಾಗಿ ರೇವಂತ್ ಕಳೆದ ವರ್ಷವಷ್ಟೇ ಪಕ್ಷದ ಒಳಗೆ ಎದ್ದಿದ್ದ ಪೂರ್ಣ ಪ್ರಮಾಣದ ಬಂಡಾಯವನ್ನು ಹತ್ತಿಕ್ಕಲು ಹೋರಾಡುತ್ತಿದ್ದರೆ, ದಾಸೋಜು ಶ್ರವಣ್ ಮತ್ತು ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿಯಂತಹ ಹಿರಿಯ ನಾಯಕರು ಕ್ರಮವಾಗಿ ಬಿಆರ್‌ಎಸ್ ಮತ್ತು ಬಿಜೆಪಿಗೆ ಸೇರಿದ್ದರು. ರಾಜ್ ಗೋಪಾಲ್ ರೆಡ್ಡಿ ಇತ್ತೀಚೆಗೆ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದು, ಈ ಚುನಾವಣೆಯಲ್ಲಿ ಮುನುಗೋಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ರೇವಂತ್ ಸದ್ಯ ಕಾಂಗ್ರೆಸ್ ಪಕ್ಷದ ಸಂಭಾವ್ಯ ಸಿಎಂ ಮುಖವೂ ಆಗಿದ್ದಾರೆ. ಆದರೆ ಹೈಕಮಾಂಡ್ ಅವರನ್ನು ಹಿರಿಯ ನಾಯಕರಾದ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಉತ್ತರಕುಮಾರ್ ರೆಡ್ಡಿಯವರನ್ನು ಬಿಟ್ಟು ಸಿಎಂ ಹುದ್ದೆಗೆ ಆಯ್ಕೆ ಮಾಡುತ್ತದೆಯೇ ಎಂಬ ಪ್ರಶ್ನೆಯೊಂದಿದೆ.

ಆದರೆ, ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ನಡೆಸಿದ ಸರ್ವೇಯಲ್ಲಿ ಶೇ.21ರಷ್ಟು ಮತದಾರರು ರೇವಂತ್ ಸಿಎಂ ಆಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಬಿವಿಪಿಯಿಂದ ಟಿಡಿಪಿಗೆ – ಟಿಡಿಪಿಯಿಂದ ಕಾಂಗ್ರೆಸ್‌ಗೆ!

ಐವತ್ನಾಲ್ಕು ವರ್ಷ ಪ್ರಾಯದ ರೇವಂತ್ ರೆಡ್ಡಿ 2006 ರಲ್ಲಿ ಜೆಡ್‌ಪಿಟಿಸಿ – ಜಿಲ್ಲಾ ಪಂಚಾಯತ್‌ ಟೆರಿಟೋರಿಯಲ್‌ ಕಮಿಟಿಯ ಪ್ರತಿನಿಧಿಯಾಗಿ, 2008 ರಲ್ಲಿ ಸ್ವತಂತ್ರ ಎಂಎಲ್‌ಸಿಯಾಗಿ, 2009 ರಲ್ಲಿ ಸಂಯುಕ್ತ ಆಂಧ್ರಪ್ರದೇಶದ ಕೊಡಂಗಲ್ ಕ್ಷೇತ್ರದಿಂದ ತಮ್ಮ ಮೊದಲ ಅಸೆಂಬ್ಲಿ ಚುನಾವಣೆಯನ್ನು ಗೆದ್ದರು. ಆಗ ಅವರು ಓರ್ವ ಸುಶಿಕ್ಷಿತ ಟಿಡಿಪಿ ನಾಯಕರಾಗಿ, ಆಂಧ್ರಪ್ರದೇಶದಲ್ಲಿ ಪಕ್ಷದ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡುರವರ ಜೊತೆಗೆ ನಿಕಟ ಸಂಬಂಧವನ್ನು ಹೊಂದಿದ್ದವರು.

ರೇವಂತ್‌ ಐದು ಬಾರಿ ಶಾಸಕರಾಗಿದ್ದ ಕಾಂಗ್ರೆಸ್‌ನ ಗುರುನಾಥರೆಡ್ಡಿ ಅವರನ್ನು ಸೋಲಿಸಿದ್ದು ಸಣ್ಣ ವಿಷಯವೇನಲ್ಲ. ಔಟ್‌ಲುಕ್‌ಗೆ ನೀಡಿದ ಸಂದರ್ಶನದಲ್ಲಿ ರೇವಂತ್ “‌ನನ್ನ ಕ್ಷೇತ್ರ ಎಲ್ಲಿದೆ ಎಂಬುದೇ ನನಗೆ ತಿಳಿದಿರಲಿಲ್ಲ” ಎಂದು ಹೇಳಿದ್ದರು.

ನಾನು ಆ ವಿಧಾನಸಭಾ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದೆ. ನನಗೆ ಪ್ರಚಾರಕ್ಕೆ ಇದ್ದದ್ದು ಕೇವಲ 14 ದಿನಗಳು. ಆದರೆ ನಾನು 7,500 ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದೆ. ಆಗ ನನ್ನ ವಿರುದ್ಧ ಇದ್ದದ್ದು ಕಾಂಗ್ರೆಸ್. ಕೊಡಂಗಲ್ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು, ಅಲ್ಲಿ ಐದು ಬಾರಿ ಗೆದ್ದಿತ್ತು - ರೇವಂತ್‌ ರೆಡ್ಡಿ

ರೇವಂತ್‌ ಎರಡನೇ ಬಾರಿಗೆ 2014 ರಲ್ಲಿ ಟಿಡಿಪಿಯಿಂದ ಕೊಡಂಗಲ್ ಗೆದ್ದರು. ಆದರೂ, ಮೇ 2015 ರಲ್ಲಿ, ಎಂಎಲ್‌ಸಿ ಚುನಾವಣೆಯಲ್ಲಿ ಟಿಡಿಪಿ ಅಭ್ಯರ್ಥಿಗೆ ಮತ ಹಾಕಲು ನಾಮನಿರ್ದೇಶಿತ ಶಾಸಕ ಎಲ್ವಿಸ್ ಸ್ಟೀಫನ್‌ಸನ್‌ಗೆ ಲಂಚ ನೀಡಲು ಯತ್ನಿಸಿದ ಆರೋಪದ ಮೇಲೆ ರೇವಂತ್‌ ಅವರನ್ನು ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿತು.

2017 ರಲ್ಲಿ ಕಾಂಗ್ರೇಸ್‌ಗೆ!

ಕಾಂಗ್ರೆಸ್‌ ಸೇರಿ ತಮಗೆ ಸಿಕ್ಕಿದ ಟಿಕೆಟ್‌ನಲ್ಲಿ ಕೊಡಂಗಲ್‌ನಿಂದ ಸ್ಪರ್ಧಿಸಿದ ರೇವಂತ್, ಬಿಆರ್‌ಎಸ್‌ನ (ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ) ಪಟ್ನಂ ಮಹೇಂದರ್ ರೆಡ್ಡಿ ವಿರುದ್ಧ ಸೋತರು. 2018 ರ ಚುನಾವಣೆಯ ಸಮಯದಲ್ಲಿ, ಕೆಸಿಆರ್ ಅವರ ರ್ಯಾಲಿಯನ್ನು ತಡೆದು ನಿಲ್ಲಿಸುತ್ತೇನೆ ಎಂದ ರೇವಂತ್ ಅವರನ್ನು ಅವರ ಮನೆಯಿಂದಲೇ ಬಂಧಿಸಲಾಯಿತು.

కొడంగల్ నియోజకవర్గ కాంగ్రెస్ పార్టీ ఎమ్మెల్యేగా విజయం సాధించిన శ్రీ ఎనుముల రేవంత్ రెడ్డి గారికి అభినందనలు.#CongressWinningTelangana2023 pic.twitter.com/Ga0gzFnw4n
— Telangana Congress (@INCTelangana) December 3, 2023

ಅಸೆಂಬ್ಲಿ ಚುನಾವಣೆಯಲ್ಲಿ ಸೋತ ರೇವಂತ್, ಕೆಲವು ತಿಂಗಳ ನಂತರ ಮಲ್ಕಾಜ್‌ಗಿರಿಯಿಂದ 2019 ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾದರು.

ರೇವಂತ್ ವಿದ್ಯಾರ್ಥಿಯಾಗಿದ್ದಾಗ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಎಬಿವಿಪಿ ಸದಸ್ಯರಾಗಿದ್ದರು. ಈ ಚುನಾವಣಾ ಪ್ರಚಾರದ ಉದ್ದಕ್ಕೂ, ಎಐಎಂಐಎಂ ಅಧ್ಯಕ್ಷ ಮತ್ತು ಬಿಆರ್‌ಎಸ್‌  ಅನೌಪಚಾರಿಕ ದೋಸ್ತಿ ಅಸಾದುದ್ದೀನ್ ಓವೈಸಿ ರೇವಂತ್‌ರನ್ನು ‘ಆರ್‌ಎಸ್‌ಎಸ್‌ ಅಣ್ಣಾ’ ಎಂದೇ ಕರೆದಿದ್ದರು.

ಈಗಿನ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿಯವರಿಗೆ ಆರ್‌ಎಸ್‌ಎಸ್ ಹಿನ್ನೆಲೆ ಇದೆ ಎಂಬುದನ್ನು ದಯವಿಟ್ಟು ನೆನಪಿನಲ್ಲಿಡಿ. ಅವರು ಎಬಿವಿಪಿಯಲ್ಲಿ ಕೆಲಸ ಮಾಡಿದವರು, ಅವರು ಬಿಜೆಪಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಶ್ರೀ ಕಿಶನ್ ರೆಡ್ಡಿ 1999 ರಲ್ಲಿ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಆಗ ಶಾಸಕರಾಗಿದ್ದ ಶ್ರೀ ಸೈಯದ್ ಸಜ್ಜದ್ ವಿರುದ್ಧ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ರೇವಂತ್ ಬಿಜೆಪಿಯಲ್ಲಿ ಕೆಲಸ ಮಾಡುವುದನ್ನು ನಾನು ನೋಡಿದ್ದೆ - ಅಸಾದುದ್ದೀನ್ ಓವೈಸಿ

ರೇವಂತ್ ತಮ್ಮ ರಾಜಕೀಯ ಏರಿಳಿತದ ಸಮಯದಲ್ಲಿಯೂ ಕೆಸಿಆರ್‌ ವಿರುದ್ಧ ತೀವ್ರ ಟೀಕೆಗಳನ್ನು ಮಾಡಿ ಫೈರ್‌ಬ್ರಾಂಡ್‌ ನಾಯಕರಾದವರು. ಹಾಗೆಂದು, ಅವರು ಎಲ್ಲಾ ಕಾಂಗ್ರೆಸ್ ನಾಯಕರೊಂದಿಗೆ ಆತ್ಮೀಯತೆಯನ್ನು ಇಟ್ಟುಕೊಂಡಿದ್ದಾರೆ ಎಂದರ್ಥವಲ್ಲ.

ರೇವಂತ್ ವಿರುದ್ಧ ಕಾಂಗ್ರೇಸ್‌ನಲ್ಲೇ ಬಂಡಾಯ!

ತೆಲಂಗಾಣದಲ್ಲಿ ಕಾಂಗ್ರೆಸ್ ಸೋಲಿನ ನಂತರ ರೇವಂತ್ ರೆಡ್ಡಿ ಟಿಪಿಸಿಸಿ ಮುಖ್ಯಸ್ಥರಾದರು. ಸುಮಾರು ಎರಡು ವರ್ಷಗಳ ಹಿಂದಿನವರೆಗೂ ತೆಲಂಗಾಣದಲ್ಲಿ ಕಾಂಗ್ರೆಸ್‌ನ ಸ್ಥಿತಿ ಹೀನಾಯವಾಗಿತ್ತು. 2018 ರಲ್ಲಿ ಕೇವಲ ಶೇ.28 ಮತ ಹಂಚಿಕೆ ಮತ್ತು 119 ಸದಸ್ಯರ ವಿಧಾನಸಭೆಯಲ್ಲಿ 19 ಸ್ಥಾನಗಳನ್ನು ಪಡೆದು ಹೀನಾಯ ಸೋಲನ್ನು ಕಂಡಿತ್ತು. ನಂತರ 2019 ರ ಲೋಕಸಭೆ ಚುನಾವಣೆಯಲ್ಲಿ ಮೂರನೇ ಸ್ಥಾನವನ್ನು ಗಳಿಸಿತ್ತು. ಕಾಂಗ್ರೇಸ್‌ಗೆ ಜೀವ ಉಳಿಸಿಕೊಳ್ಳಲು ಗುಟುಕು ನೀರಿನ ಅಗತ್ಯ ಇತ್ತು.

ಆದರೆ, ನಂತರದ ಉಪಚುನಾವಣೆಗಳಲ್ಲೂ ಅದು ಆಗಲೇ ಇಲ್ಲ. ಹುಜೂರ್‌ನಗರ ಮತ್ತು ನಾಗಾರ್ಜುನ ಸಾಗರ ಸೇರಿದಂತೆ ಕಾಂಗ್ರೆಸ್ ಪ್ರಬಲವಾಗಿದ್ದಲ್ಲೂ ಇದು ಸಾದ್ಯವಾಗಲಿಲ್ಲ. ಜಿಎಚ್‌ಎಂಸಿ ಚುನಾವಣೆಯಲ್ಲಿ ಬಿಜೆಪಿಯ ಏಳಿಗೆಯೊಂದಿಗೆ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು.

ತೆಲಂಗಾಣ ಕಾಂಗ್ರೇಸ್‌ ನಾಯಕತ್ವದ ಬದಲಾವಣೆಯನ್ನು ಬಯಸಿತ್ತು, ಆದರೆ 2017 ರಲ್ಲಿ ಪಕ್ಷಕ್ಕೆ ಸೇರಿದ್ದ ರೇವಂತ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದಾಗ, ಹಿರಿಯ ನಾಯಕರಿಗೆ ತೀವ್ರ ಮುಖಭಂಗವಾಯಿತು.2022 ರಲ್ಲಿ ತೆಲಂಗಾಣ ಕಾಂಗ್ರೇಸ್‌ನ ಆಂತರಿಕ ಒಳಜಗಳ ಇನ್ನಷ್ಟು ಹೆಚ್ಚಾಯಿತು. ಹಿರಿಯ ಕಾಂಗ್ರೆಸ್ ನಾಯಕ ದಾಸೋಜು ಶ್ರವಣ್ ರಾಜ್ಯಾಧ್ಯಕ್ಷರನ್ನು ದೂರುತ್ತಲೇ ಪಕ್ಷವನ್ನು ತೊರೆದರು.

ರೇವಂತ್ ಅವರು ಪಕ್ಷವನ್ನು ಹೆಚ್ಚು ಆಕ್ರಮಣಕಾರಿಯಾಗಿ ಸಮರ್ಥಿಸುತ್ತಿದ್ದಾರೆ. ಅವರು ಎಐಸಿಸಿಯ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಫ್ರಾಂಚೈಸಿಯಾಗಿ ಟಿಪಿಸಿಸಿಯನ್ನು(ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ) ನಡೆಸುತ್ತಿದ್ದಾರೆ...ಅವರು ಪಕ್ಷವನ್ನು ತನ್ನ ಖಾಸಗಿ ಆಸ್ತಿ ಎಂದು ಭಾವಿಸಿಕೊಂಡಿದ್ದಾರೆ - ದಾಸೋಜು ಶ್ರವಣ್

ಮಾತ್ರವಲ್ಲ, ರೇವಂತ್ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದಾದ ಬೆನ್ನಲ್ಲೇ, ರೇವಂತ್ ಅವರನ್ನು ಮತ್ತೊಬ್ಬ ಕಾಂಗ್ರೇಸ್‌ ನಾಯಕ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ (ಮುನುಗೋಡು ಶಾಸಕರಾಗಿದ್ದವರು) ಟೀಕಿಸುತ್ತಾ ಪಕ್ಷವನ್ನು ತೊರೆದರು. ಇವರು “ ರೇವಂತ್ ಅವರ ಆಡಳಿತ ಶೈಲಿ ಕಬ್ಬಿಣದ ಕಡಲೆ ಮತ್ತು ಎಲ್ಲಾ ನಾಯಕರನ್ನು ಹೊಂದಿಸಿಕೊಂಡು ಹೋಗುವ ಕಾಂಗ್ರೆಸ್‌ನ ಸ್ವಭಾವ ಇವರಿಗೆ ಸರಿಹೊಂದುವುದಿಲ್ಲ,” ಎಂದು ಟೀಕಿಸಿದ್ದರು.

ಕರ್ನಾಟಕ ಚುನಾವಣೆಯ ನಂತರ ಬಿಜೆಪಿ ವಿರುದ್ಧ ಕಾಂಗ್ರೆಸ್ ಭಾರಿ ಗೆಲುವು ದಾಖಲಿಸಿದಾಗ ತೆಲಂಗಾಣ ಕಾಂಗ್ರೇಸ್‌ನಲ್ಲಿ ಒಂದು ರೀತಿಯ ಆತ್ಮವಿಶ್ವಾಸ ಬೆಳೆಯಿತು. ಈಗ ತೆಲಂಗಾಣವೂ ಕಾಂಗ್ರೇಸ್‌ ಗೆಲುವನ್ನು ನೋಡಲು ಸಿದ್ದವಾಗಿದೆ. ರೇವಂತ್‌ ರೆಡ್ಡಿ ಮುತಾಲಿಕೆಯಲ್ಲಿ ತೆಲಂಗಾಣದಲ್ಲಿ ಕಾಂಗ್ರೇಸ್‌ ಗೆಲುವಿನ ಹಾದಿಯಲ್ಲಿ ಸಾಗಿರುವುದರ ಹೆಗ್ಗಳಿಕೆ ರೇವಂತ್‌ ಪಾಲಾಗುತ್ತದೆಯೇ? ಒಂದು ವೇಳೆ ಹಾಗೇನಾದರೂ ಆದರೆ, ಈಗಾಗಲೇ ನಲ್ಗೊಂಡ ವಲಯದ ಮೇಲೆ ಹಿಡಿತ ಹೊಂದಿರುವ ಕೋಮಟಿರೆಡ್ಡಿ ಸಹೋದರರಂತಹ ಕಾಂಗ್ರೇಸ್‌ ನಾಯಕರು ರೇವಂತ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಇವರು ಸುಮ್ಮನೆ ಇರುತ್ತಾರೆಯೇ? ಹೈಕಮಾಂಡ್‌ ಕೃಪಾಶೀರ್ವಾದ ಇರುವ ರೇವಂತ್ ಸಿಎಂ ಸ್ಥಾನ ಅಲಂಕರಿಸುತ್ತಾರೆಯೇ…. ಎಂದು ಕಾದು ನೋಡಬೇಕು.