Nathuram Godse – Peepal Media

ಎಚ್ಎಎಲ್ ನೌಕರರಿಂದ ಗೋಡ್ಸೆ ನಾಟಕ!
“ಗಾಂಧಿಜಿಯವರನ್ನ ಕೊಂದವರು ಯಾರು?? ಅಂದ್ರೆ ನಮ್ಮ ಕಣ್ಣ ಮುಂದೆ ಬರೋದು ಬರೀ ಗೋಡ್ಸೆ…. ಗೋಡ್ಸೆ ಅನ್ನೋ ಹೆಸರು ಕೇಳಿದ ತಕ್ಷಣ ಒಂದು ವರ್ಗಕ್ಕೆ ಮನಸ್ಸು ಅರಳತ್ತೆ, ಅದೇ ಮತ್ತೊಂದು ವರ್ಗಕ್ಕೆ ಕೆರಳತ್ತೆ….. ಎರಡು ವರ್ಗಗಳ ನಡುವೆ ನಡೆಯುವ ಸಂಘರ್ಷದಲ್ಲಿ ನಲುಗಿ ಹೋದ ಪ್ರೇಮ ಕಥೆಯೇ.. ಗೋಡ್ಸೆ… ಒಂದು ಪ್ರೇಮದ ಕಥೆ,” ಎಂಬ ಟಿಪ್ಪಣಿಯೊಂದಿಗೆ “ಗೋಡ್ಸೆ- ಒಂದು ಪ್ರೇಮ ಕಥೆ” ಎಂಬ ನಾಟಕದ ಆಮಂತ್ರಣ ಪತ್ರ ಹೊರಬಂದಿದೆ.

ರಾಜು ಭಂಡಾರಿ ಎಂಬವರು ರಚಿಸಿದ, ಭೈ ಈ ಹುತ್ತೇಶ್ ನಿರ್ದೇಶನದ, ಶ್ರೀ ನಂದಿ ಕಲಾ ಸಂಘ ಅರ್ಪಿಸುವ ಈ ನಾಟಕವನ್ನು ಏಪ್ರಿಲ್ 10 ಗುರುವಾರದಂದು ಸಂಜೆ 6:30 ಕ್ಕೆ ಕಲಾಗ್ರಾಮ ಮಲ್ಲತ್ತಹಳ್ಳಿ ಎಚ್ ಎ ಎಲ್ ಕಲಾವಿದರು ಪ್ರದರ್ಶನ ಮಾಡಲಿದ್ದಾರೆ. “ಗೋಡ್ಸೆಯ ಅಪರೂಪದ ಪ್ರೇಮ ಕಥೆಗೆ ಸಾಕ್ಷಿಯಾಗೋಣ…” ಎಂಬ ಆಮಂತ್ರಣವನ್ನು ನೀಡಲಾಗಿದ್ದು, ಈ ನಾಟಕಕ್ಕೆ “ಪ್ರವೇಶ ಉಚಿತ-ಚಿಂತನೆ ಖಚಿತ,” ಎಂದು ಹೇಳಲಾಗಿದೆ.

ಈ ನಾಟಕದ ಪ್ರದರ್ಶನದಲ್ಲಿ ಮುಖ್ಯ ಅತಿಥಿಯಾಗಿ ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಭಾಗವಹಿಸಲಿದ್ದಾರೆ. ತಮ್ಮ ಕೋಮುವಾದಿ ನಿಲುವಿಗೆ ಟೀಕೆಗಳಿಗೆ ಗುರಿಯಾಗಿದ್ದ ಅಡ್ಡಂಡ ಕಾರ್ಯಪ್ಪ ಮೈಸೂರು ರಂಗಾಯಣದ ನಿರ್ದೇಶಕರಾಗಿದ್ದಾಗ “ಟಿಪ್ಪು ನಿಜಕನಸುಗಳು” ನಾಟಕ ರಚಿಸಿ ಪ್ರದರ್ಶಿಸಿ ವಿರೋಧಕ್ಕೆ ಗುರಿಯಾಗಿದ್ದರು. “ಗಾಂಧಿ ವಿರುದ್ಧ ಪೋಕ್ಸೋ ದಾಖಲಾಗುತ್ತಿತ್ತು,” ಎಂದು ಮಹಾತ್ಮ ಗಾಂಧಿಯ ಬಗ್ಗೆ, ಹಾಗೆಯೇ ಸಾಣೇಹಳ್ಳಿ ಶ್ರೀಗಳ ಬಗ್ಗೆ ಕೂಡ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದ ಅಡ್ಡಂಡ,  ಚುನಾವಣೆಯ ಸಂದರ್ಭದಲ್ಲಿ ಉರಿಗೌಡ ಹಾಗೂ ನಂಜೇಗೌಡ ಎಂಬ ಸುಳ್ಳು ಐತಿಹಾಸಿಕ ಪಾತ್ರಗಳನ್ನು ಕಟ್ಟಿ, ಒಕ್ಕಲಿಗ ಹಾಗೂ ಮುಸ್ಲಿಮರನ್ನು ಎತ್ತಿಕಟ್ಟುವ ಪ್ರಯತ್ನಕ್ಕೆ ಕೈಹಾಕಿದ್ದರು. ಈ ನಿರೂಪಣೆಯನ್ನು ಬಿಜೆಪಿ ಬಳಸಿಕೊಂಡರೂ, ಅಂತಿಮವಾಗಿ ಈ ವಿವಾದ ಬಿಜೆಪಿಗೆ ಮುಖಭಂಗವನ್ನು ಉಂಟು ಮಾಡಿತ್ತು. ಅಡ್ಡಂಡ ಕಾರ್ಯಪ್ಪರ ಈ ಕೃತ್ಯಕ್ಕೆ ಆದಿಚುಂಚನಗಿರಿಯ ನಿರ್ಮಲಾನಂದ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಈಗ ಗೋಡ್ಸೆಯ ಪ್ರೇಮಕತೆಯನ್ನು ಹೇಳಲು ಹೊರಟಿರುವುದಾಗಿ ಎಚ್‌ಎಎಲ್‌ ನ ನೌಕರರು “ಗೋಡ್ಸೆ- ಒಂದು ಪ್ರೇಮ ಕಥೆ” ನಾಟಕ ಆಡಿ ತೋರಿಸಲು ಮುಂದಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಅಡ್ಡಂಡ ಕಾರ್ಯಪ್ಪ, ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದ ನಟ ಸುನೀಲ್‌ ಪುರಾಣಿಕ್‌, ರವೀಂದ್ರ ರೇಷ್ಮೆ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮವು ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಎಚ್‌ಎಎಲ್‌ನ ಲಲಿತಕಲಾ ಸಂಘ ಹಾಗೂ ಕನ್ನಡ ಸಂಘದ ಸಹಯೋಗದೊಂದಿಗೆ ನಡೆಯಲಿದೆ.

ಗಾಂಧಿ ಪುಣ್ಯತಿಥಿಯಂದು ಗೋಡ್ಸೆಯ ಪೂಜೆ ಮಾಡಿದ ಹಿಂದೂ ಮಹಾಸಭಾ
ಅಖಿಲ ಭಾರತ ಹಿಂದೂ ಮಹಾಸಭಾ ಗುರುವಾರ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜನವರಿ 30, 1948 ರಂದು ದೆಹಲಿಯಲ್ಲಿ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ವ್ಯಕ್ತಿ ನಾಥೂರಾಂ ಗೋಡ್ಸೆಯನ್ನು ಗೌರವಿಸಿತು ಎಂದು ಪಿಟಿಐ ವರದಿ ಮಾಡಿದೆ.

ಅಮರ್ ಹುತಾತ್ಮ ನಾಥುರಾಮ್ ಗೋಡ್ಸೆ ನಾನಾ ಆಪ್ಟೆ ಧಾಮ್‌ನಲ್ಲಿ ಗಾಂಧಿಯನ್ನು ಹತ್ಯೆಗೈದ ಗೋಡ್ಸೆಯನ್ನು ಗೌರವಿಸಲು ಹಿಂದುತ್ವ ಗುಂಪಿನ ಸದಸ್ಯರು ಸೇರಿದ್ದರು.

ಮಹಾಸಭಾದ ಮುಖಂಡ ಅಶೋಕ್ ಶರ್ಮಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹನುಮಾನ್ ಚಾಲೀಸ್‌ ಪೂಜೆ ಮತ್ತು ಪಠಣ ಮಾಡಲಾಯಿತು.

ಸಮಾರಂಭದಲ್ಲಿ, ಶರ್ಮಾ ಅವರು ಮಹಾತ್ಮ ಗಾಂಧಿಯವರ “ರಾಷ್ಟ್ರಪಿತ” ಬಿರುದನ್ನು ಹಿಂತೆಗೆದುಕೊಳ್ಳುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದರು ಮತ್ತು ಗಾಂಧಿಯವರ ಹತ್ಯೆಗೆ ಸಂಬಂಧಿಸಿರುವ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅವರ ಕುಟುಂಬಗಳನ್ನು ಗೌರವಿಸುವ ಯೋಜನೆಯನ್ನು ಘೋಷಿಸಿದರು.

ಗಾಂಧಿಯನ್ನು ರಾಷ್ಟ್ರಪಿತ ಎಂದು ವ್ಯಾಪಕವಾಗಿ ಕರೆಯಲಾಗಿದ್ದರೂ, ಅವರಿಗೆ ಭಾರತ ಸರ್ಕಾರವು ಔಪಚಾರಿಕವಾಗಿ ಆ ಬಿರುದು ನೀಡಲಿಲ್ಲ ಮತ್ತು ಈ ನಿಟ್ಟಿನಲ್ಲಿ ಯಾವುದೇ ನಿಯಮ ಅಥವಾ ಆದೇಶವನ್ನು ಜಾರಿಗೊಳಿಸಲಾಗಿಲ್ಲ ಎಂದು ಕೇಂದ್ರವು 2020 ರಲ್ಲಿ ಹೇಳಿತ್ತು.

2012 ರಲ್ಲಿ, ಕೇಂದ್ರ ಗೃಹ ಸಚಿವಾಲಯವು ಗಾಂಧಿಗೆ ಔಪಚಾರಿಕವಾಗಿ “ರಾಷ್ಟ್ರಪಿತ” ಎಂಬ ಬಿರುದನ್ನು ನೀಡಲಾಗುವುದಿಲ್ಲ, ಏಕೆಂದರೆ ಸಂವಿಧಾನವು ಶೈಕ್ಷಣಿಕ ಅಥವಾ ಮಿಲಿಟರಿ ಪದಗಳನ್ನು ಹೊರತುಪಡಿಸಿ ಬೇರೆ ಬಿರುದಾಂಕಿತಗಳನ್ನು ಅನುಮತಿಸುವುದಿಲ್ಲ ಎಂದು ಹೇಳಿತ್ತು .

ಹಿಂದೂ ಮಹಾಸಭಾವು ನವೆಂಬರ್ 15, 1949 ರಂದು ಗೋಡ್ಸೆ ಮತ್ತು ಆಪ್ಟೆಯನ್ನು ಗಲ್ಲಿಗೇರಿಸಿದ ದಿನ ನವೆಂಬರ್ 15 ನ್ನು ಪ್ರತಿ ವರ್ಷ “ಬಲಿದಾನ್ ದಿವಸ್” ಎಂದು ಆಚರಿಸುತ್ತದೆ.

ಗುರುವಾರ ನಡೆದ ಸಮಾರಂಭವು “ಕರಮಚಂದ್ ಗಾಂಧಿಯವರ ಆತ್ಮವನ್ನು ಮತ್ತು ಭಾರತದಿಂದ ಗಾಂಧಿವಾದವನ್ನು,” ತೊಡೆದುಹಾಕುವ ಗುರಿಯನ್ನು ಹೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಈ ಹಿಂದುತ್ವ ಸಂಘಟನೆಯು ಭಾರತದ ವಿಭಜನೆಗೆ ಗಾಂಧಿಯನ್ನು ಹೊಣೆಗಾರರನ್ನಾಗಿಸುತ್ತದೆ.

2019 ರಲ್ಲಿ, ಉತ್ತರ ಪ್ರದೇಶ ಪೊಲೀಸರು ಗಾಂಧಿ ಹತ್ಯೆಯನ್ನು ಅಭಿನಯಿಸಿ ತೋರಿಸಿದ ಕಾರಣ ಪಾಂಡೆ ಮತ್ತು ಆತನ ಪತ್ನಿಯನ್ನು ಬಂಧಿಸಿದರು. ಇವರ ಮರಣ ವಾರ್ಷಿಕೋತ್ಸವವನ್ನು “ಶೌರ್ಯ ದಿವಸ್” ಅಥವಾ ಶೌರ್ಯ ದಿನ ಎಂದು ಆಚರಿಸಿದ್ದರು. 2018 ರಲ್ಲಿ, ಗಾಂಧಿ ಹಂತಕನ ಗೌರವಾರ್ಥ ಮೀರತ್ ಅನ್ನು ಗೋಡ್ಸೆ ನಗರ ಎಂದು ಮರುನಾಮಕರಣ ಮಾಡುವಂತೆ ಸಂಘಟನೆಯು ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಒತ್ತಾಯಿಸಿತ್ತು.