Naveen Patnaik – Peepal Media

ಗುತ್ತಿಗೆ ನೇಮಕಾತಿ ವ್ಯವಸ್ಥೆಯನ್ನು ರದ್ದುಗೊಳಿಸಿದ ಒಡಿಶಾ ಸರ್ಕಾರ : ಸಾವಿರಾರು ಗುತ್ತಿಗೆ ನೌಕರರು ಖಾಯಂ
ಗುತ್ತಿಗೆ ನೌಕರಿ ಎಂದರೆ ತಂತಿ ಮೇಲಿನ ನಡಿಗೆಯಾಗೆ ಯಾವಾಗ ಬೇಕಾದರೂ ಈ ಹುದ್ದೆಯಿಂದ ನೌಕರರನ್ನು ಕಿತ್ತೊಗೆಯಬಹುದು. ಇಂತಹ ಒಂದು ಕೆಟ್ಟ ವ್ಯವಸ್ಥೆಗೆ ನಿನ್ನೆ ಒಡಿಶಾ ಸರ್ಕಾರ ಕೊನೆ ಮೊಳೆ ಹೊಡೆದಿದೆ.

ಹೌದು, ಒಡಿಶಾ ಸರ್ಕಾರ ಗುತ್ತಿಗೆ ನೇಮಕಾತಿ ವ್ಯವಸ್ಥೆಯನ್ನು ರದ್ದುಪಡಿಸಿದೆ. ಇದಲ್ಲದೇ, ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಾಹಿಸುತ್ತಿದ್ದ 57 ಸಾವಿರ ನೌಕರರನ್ನು ಕಾಯಂಗೊಳಿಸಿ ಭಾನುವಾರ ಅಧಿಸೂಚನೆ ಹೊರಡಿಸಿದೆ.

ಒಡಿಶಾ ಕ್ಯಾಬಿನೆಟ್ ಸಭೆಯಲ್ಲಿ ಗುತ್ತಿಗೆ ನೇಮಕಾತಿಗಳನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡು ಮಾತನಾಡಿದ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಗುತ್ತಿಗೆ ನೇಮಕಾತಿಗಳನ್ನು ರದ್ದುಪಡಿಸಿ, 57,000 ಗುತ್ತಿಗೆ ನೌಕರರನ್ನು ಕಾಯಂಗೊಳಿಸಲಾಗುವುದು. ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 1300 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಿದ್ದಾರೆ.

ಮುಂದುವರೆದು, 2013 ರಲ್ಲಿ ಗುತ್ತಿಗೆ ನೇಮಕಾತಿ ವ್ಯವಸ್ಥೆಯು ಪ್ರಾರಂಭವಾಯಿತು. ಇದು ನನಗೆ ಕಠಿಣ ನಿರ್ಧಾರವಾಗಿತ್ತು. ಈಗ ನಮ್ಮ ಆರ್ಥಿಕತೆ ಗಮನಾರ್ಹವಾಗಿ ಸುಧಾರಿಸಿದೆ. ಒಡಿಶಾ ದೇಶದ ಅಭಿವೃದ್ಧಿ ಕ್ಷೇತ್ರದಲ್ಲಿ ಹೊಸ ಗುರುತನ್ನು ಸೃಷ್ಟಿಸಿಕೊಂಡಿದೆ. ಕಳೆದ ವರ್ಷ, ನಾವು ಆರಂಭಿಕ ನೇಮಕಾತಿಗಳೊಂದಿಗೆ ಗುತ್ತಿಗೆ ನೇಮಕಾತಿ ಪೋಸ್ಟ್‌ಗಳನ್ನು ಬದಲಿಸಿದ್ದೇವೆ ಎಂದು ಅವರು ಹೇಳಿದರು.

ಒಡಿಶಾ ಸರ್ಕಾರ, ಗ್ರೂಪ್ ಬಿ ಹುದ್ದೆಗಳು(ಒಪ್ಪಂದದ ನೇಮಕಾತಿಗಳು), ನಿಯಮಗಳು, 2013 ಮತ್ತು ಒಡಿಶಾ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳ(ಒಪ್ಪಂದದ ನೇಮಕಾತಿ) ನಿಯಮಗಳು 2013 ಅನ್ನು ಈ ಮೂಲಕ ರದ್ದುಗೊಳಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆಯಾ ಒಪ್ಪಂದದ ನಿಯಮಗಳ ಅಡಿಯಲ್ಲಿ ವೇತನವನ್ನು ನಿಗದಿಪಡಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಕರ್ನಾಟಕದಲ್ಲೂ ಗುತ್ತಿಗೆ ನೇಮಕಾತಿ ಪದ್ದತಿ:

ರಾಜ್ಯದಲ್ಲಿ ಸರಕಾರಿ ಗುತ್ತಿಗೆ ನೌಕರರ ಸೇವೆಯನ್ನು ಖಾಯಂ ಗೊಳಿಸಬೇಕು ಮತ್ತು ನ್ಯೂ ಪೆನ್ಸನ್ ಸ್ಟೀಮ್ ಮಂಜೂರ ಮಾಡುವಂತೆ ಅನೇಕ ವರ್ಷಗಳಿಂದ ಪ್ರತಿಭಟನೆಗಳು ನಡೆಯುತ್ತಲೇ ಇದೆ‌. ಆದರೆ ಕರ್ನಾಟಕ ಸರ್ಕಾರ ತನ್ನ ನಿಲುವನ್ನು ಬದಲಿಸದೇ ನೌಕರರ ಸಮಸ್ಯೆಗಳನ್ನು ಆಲಿಸದೆ ಗುತ್ತಿಗೆ ನೇಮಕಾತಿ ಮತ್ತು ನೌಕರಿಯನ್ನು ಮುಂದುವರೆಸುತ್ತಿದೆ.