Naveen Soorinje – Peepal Media

ನಾರಾಯಣ ಗುರುಗಳಿಗೆ ಮಾಲಾರ್ಪಣೆಗೂ ಮುನ್ನ ಮೋದಿ ಉತ್ತರಿಸಬೇಕಿರುವುದು..! – ನವೀನ್ ಸೂರಿಂಜೆ
ಎಪ್ರಿಲ್ 14 ರಂದು ಸಂಜೆ ಪ್ರಧಾನಿ ನರೇಂದ್ರ ಮೋದಿಯವರು ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಂಗಳೂರಿನಲ್ಲಿ ರೋಡ್ ಶೋ ಆರಂಭಿಸಲಿದ್ದಾರೆ. ಅದಕ್ಕೂ ಮುನ್ನ ನಾರಾಯಣ ಗುರುಗಳ ಬಗೆಗಿನ ನರೇಂದ್ರ ಮೋದಿಯವರ ನಿಲುವನ್ನು ಸ್ಪಷ್ಟಪಡಿಸಬೇಕು.

2022 ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲು ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ಪ್ರಸ್ತಾಪವನ್ನು ಕಳಿಸಿತ್ತು. ಆದರೆ ಕೇಂದ್ರ ಸರ್ಕಾರವು ನಾರಾಯಣ ಗುರುಗಳ ಸ್ಥಬ್ದ ಚಿತ್ರವನ್ನು ಪೆರೇಡ್ ನಿಂದ ಹೊರ ಹಾಕಿತ್ತು‌.

“ಒಂದೇ ಜಾತಿ, ಒಂದೇ ಮತ, ಹಾಗೂ ಒಂದೇ ದೇವರು” ಎಂಬುವುದು ಬ್ರಹ್ಮಶ್ರೀ ನಾರಾಯಣ ಗುರುಗಳು ಸಾರಿದ ತತ್ವವಾಗಿದೆ. ನಾರಾಯಣ ಗುರುಗಳು ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿನ ವಿರುದ್ಧ ಹೋರಾಟ ನಡೆಸಿದವರು. ಕೇರಳದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ಈಳವ ಸಮುದಾಯದಲ್ಲಿ ಹುಟ್ಟಿದ ನಾರಾಯಣ ಗುರುಗಳು ಸಮಾಜದ ಸುಧಾರಕರಾಗಿ ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಇಡೀ ಜೀವನವನ್ನು ಮುಡಿಪಾಗಿಟ್ಟರು. ನಾರಾಯಣ ಗುರುಗಳು ಮಂಗಳೂರಿಗೂ ಆಗಮಿಸಿ ಮಂಗಳೂರಿನಲ್ಲೂ ಅಸ್ಪೃಶ್ಯತೆಯ ವಿರುದ್ಧ ಕ್ರಾಂತಿ ಮಾಡಿದರು. ಕೇರಳದ ಈಳವರಂತೆ ಮಂಗಳೂರಿನ ಬಿಲ್ಲವ ಸಮುದಾಯ ಕೂಡಾ ನಾರಾಯಣ ಗುರುಗಳನ್ನು ಸಂತರನ್ನಾಗಿ ಸ್ವೀಕರಿಸಿ ಮನೆ ಮನದಲ್ಲಿ ಪೂಜಿಸುತ್ತಿದೆ. ಬಿಲ್ಲವರ ಸ್ವಾಭಿಮಾನಿ ಚಳವಳಿಯ ಭಾಗವಾಗಿಯೇ ಬಿಲ್ಲವರಿಂದಲೇ ಪೂಜೆಗೊಳಪಡುವ ಕುದ್ರೋಳಿ ಗೋಕರ್ಣನಾಥ ದೇವಸ್ಥಾನವನ್ನು ನಾರಾಯಣ ಗುರುಗಳು ಸ್ಥಾಪಿಸಿದರು. ಈಗ ಇಡೀ ಕರಾವಳಿಯಲ್ಲಿ ಬಿಲ್ಲವರೇ ಬಹುಸಂಖ್ಯಾತರು. ಇಂತಹ ಸಮುದಾಯದ ಗುರುಗಳ ಸ್ಥಬ್ದ ಚಿತ್ರವನ್ನು ಗಣರಾಜ್ಯೋತ್ಸವದ ಪೆರೇಡ್ ನಿಂದ ಹೊರ ಹಾಕಿ ಶಂಕರಾಚಾರ್ಯರ ಸ್ಥಬ್ದ ಚಿತ್ರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಧ್ಯತೆ ಮತ್ತು ವಿರೋಧವನ್ನು ಸಾರುತ್ತದೆ.

ನರೇಂದ್ರ ಮೋದಿ ನೇತೃತ್ವದಲ್ಲೇ ಕರ್ನಾಟಕದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವಿತ್ತು. ಕರ್ನಾಟಕದಲ್ಲಿರುವುದು ಡಬಲ್ ಇಂಜಿನ್ ಸರ್ಕಾರ ಎಂದು ಖುದ್ದು ಪ್ರಧಾನಿ ಮೋದಿಯವರೇ ಹೇಳಿದ್ದರು. ಅಂತಹ ಸರ್ಕಾರದಲ್ಲಿ ಮಕ್ಕಳ ಶಾಲಾ ಪಠ್ಯದಿಂದ ನಾರಾಯಣ ಗುರುಗಳ ಬಗೆಗಿನ ಪಾಠವನ್ನು ಕಿತ್ತು ಹಾಕಲಾಗಿತ್ತು. ಈ ರೀತಿ ನಾರಾಯಣ ಗುರುಗಳನ್ನು ಅವಹೇಳನ ಮಾಡಿದ್ದ ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷರನ್ನು ಬಿಜೆಪಿಯ ಶಾಸಕರು, ಸಂಸದರುಗಳು ಬೆಂಬಲಿಸಿದ್ದರು.

ನಾರಾಯಣ ಗುರುಗಳು ನಿಜವಾದ ಸಂತ. ಹಿಂದೂ ಧರ್ಮದೊಳಗಿನ ಅಸಮಾನತೆಯನ್ನು ಹೋಗಲಾಡಿಸುವುದರ ಜೊತೆಗೆ ಮನುಷ್ಯತ್ವದ ತತ್ವವನ್ನು ಸಾರಿದವರು. ನಾರಾಯಣ ಗುರುಗಳು ಬಿಲ್ಲವರು ವಿದ್ಯೆ-ಉದ್ಯೋಗ- ಸಂಪರ್ಕದಿಂದ ಬಲಯುತರಾಗಬೇಕು ಎಂದು ಬಯಸಿದ್ದರು‌. ಆದರೆ ಕರಾವಳಿಯ ಬಿಲ್ಲವ ಯುವಕರನ್ನು ಮೋದಿಯ ತಂಡ ಯಾವ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದೆ ? ನಾರಾಯಣ ಗುರುಗಳು ಈಗ ಬದುಕಿದ್ದರೆ ತನ್ನವರನ್ನು ಸಾಯಲು ಮತ್ತು ಸಾಯಿಸಲು ಬಳಸುವ ಮೋದಿಯ ರಾಜಕೀಯದ ಬಗ್ಗೆ ಯಾವ ನಿಲುವು ತಾಳುತ್ತಿದ್ದರು. ನಾರಾಯಣ ಗುರುಗಳು ಜಾತ್ಯಾತೀತವಾದ ಸ್ಪಷ್ಟ ನಿಲುವನ್ನು ಹೊಂದಿದ್ದರು. ಆ ಕಾರಣಕ್ಕಾಗಿಯೇ ಮಹತ್ಮಾ ಗಾಂಧಿ, ಸ್ವಾಮೀ ವಿವೇಕಾನಂದರ ಒಡನಾಟ ಹೊಂದಿದ್ದರು. ಇಂತದ್ದೊಂದು ಐತಿಹಾಸಿಕ ಕಾರಣಕ್ಕಾಗಿಯೇ ಬಿಲ್ಲವರ ಕಂಕನಾಡಿ ಗರಡಿಯಲ್ಲಿ ಇಂದಿಗೂ ಗಾಂಧಿಗೆ ತ್ರಿಕಾಲ ಪೂಜೆ ನಡೆಯುತ್ತಿದೆ. ಅಂತಹ ಗಾಂಧಿಯನ್ನು ಗುಂಡಿಟ್ಟುಕೊಂದ ಗೋಡ್ಸೆಯ ಜನ್ಮದಿನವನ್ನು ಹಿಂದೂ ಮಹಾಸಭಾ ಎಂಬ ಸಂಘಟನೆ ಮಂಗಳೂರಿನಲ್ಲಿ ಆಚರಿಸುತ್ತದೆ. ಇದು ನಾರಾಯಣ ಗುರುಗಳ ಮೇಲಿನ ದಾಳಿಯೇ ಹೊರತು ಗಾಂಧಿ ಮೇಲಿನ ದಾಳಿಯಲ್ಲ.

ನಾರಾಯಣ ಗುರುಗಳು 1888 ರಲ್ಲಿ ಕೇರಳದ ಅರವಿಪುರಂನಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದಾಗ ಅಲ್ಲಿ ಫಲಕವೊಂದರಲ್ಲಿ ಘೋಷಣೆಯನ್ನು ಮಲಯಾಳಂ ಭಾಷೆಯಲ್ಲಿ ಬರೆಸುತ್ತಾರೆ.‌ ಅದರ ಕನ್ನಡ ಭಾವಾರ್ಥ ಹೀಗಿದೆ :-

ಜಾತಿ ಭೇದ ಮತ ದ್ವೇಷ
ಒಂದೂ ಇಲ್ಲದ ಸರ್ವರೂ
ಸೋದರತ್ವದಿ ಬಾಳುವ
ಮಾದರಿ ಸ್ಥಾನವು ಇದು

ನಾರಾಯಣ ಗುರುಗಳ ಈ ತತ್ವವನ್ನು ಪಾಲಿಸುವವರು ಮಾತ್ರ ನಾರಾಯಣ ಗುರುಗಳ ಅನುಯಾಯಿಗಳಾಗುತ್ತಾರೆ. ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡುವ ನರೇಂದ್ರ ಮೋದಿಯವರು ನಾರಾಯಣ ಗುರುಗಳ ಈ ತತ್ವವನ್ನು ಪಾಲಿಸುತ್ತೇನೆ ಎಂದು ಬಹಿರಂಗವಾಗಿ ಘೋಷಿಸಿಕೊಳ್ಳುತ್ತಾರೆಯೇ ? ಹಾಗಾಗಿ ನಾರಾಯಣ ಗುರುಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಲಾರ್ಪಣೆ ಮಾಡುವುದಕ್ಕೂ ಮೊದಲು ಕರಾವಳಿಯಲ್ಲಿ ಬಹುಸಂಖ್ಯಾತರಾಗಿರುವ ನಾರಾಯಣ ಗುರು ಅನುಯಾಯಿಗಳ ಭಾವನೆಗಳಿಗೆ ಉತ್ತರ ಕೊಡಬೇಕು.

ಎದೆಯ ದನಿ ಬಿಚ್ಚಿಟ್ಟ “ಫಾಲ್ಟ್ ಲೈನ್‌ಗಳು” : ರಾಜಾರಾಂ ತಲ್ಲೂರು
ಮೊನ್ನೆ ಉಡುಪಿಯಲ್ಲಿ ಮಹಿಳಾ ಸಮಾವೇಶದಲ್ಲಿ ಸಿಕ್ಕ “ನಡು ಬಗ್ಗಿಸದ ಎದೆಯದನಿ”- ಮಹೇಂದ್ರ ಕುಮಾರ್ ಅವರ ಅನುಭವ ಕಥನ ಓದಿ ಮುಗಿಸಿದೆ. ನಮ್ಮ ಇಂದಿನ ಸಾಮಾಜಿಕ ಬದುಕಿನ ಫಾಲ್ಟ್‌ಲೈನ್ ಅದು ತನಗೆ ಗೊತ್ತಿಲ್ಲದಂತೆ ತೆರೆದಿಟ್ಟಿದೆ ಅನ್ನಿಸಿತು.

ಹಿಂದೂತ್ವವಾದದ ಹೆಸರಿನಲ್ಲಿ ಅಮಾಯಕರನ್ನು ಬಲಿಕೊಡುತ್ತಿದೆ ಎಂದು ಬಿಚ್ಚಿಡುವ ಆಶಯದ ಈ ಪುಸ್ತಕದೊಳಗೆ ಮತ್ತೊಂದು ಪದರ ಬಿಚ್ಚಿದರೆ ಅದು ಭಯಾನಕ ಭಯಾನಕವಾಗಿದೆ.

ಸಮಾಜವೊಂದು ಸ್ವಸ್ಥವಾಗಿರುವುದಕ್ಕೆ ಸಿದ್ಧಾಂತಗಳ ಅಗತ್ಯ ಇರಬಹುದು. ಆದರೆ ಒಂದು ಸಿದ್ಧಾಂತಕ್ಕಾಗಿ ಸಮಾಜ ಬದುಕಬೇಕೆಂಬ ಹಠ ಅಮಾನುಷ. ಇದಕ್ಕೆ ಯಾರೂ (ಸಿದ್ಧಾಂತಗಳೂ) ಹೊರತಲ್ಲ. ಈ ಕಾರಣಕ್ಕಾಗಿಯೇ ಇಂದು ನಾಯಕರುಗಳು ಮೇಲಿನಿಂದ ಉದುರುತ್ತಾರೆ ಮತ್ತು ತಾವು ನಿಮ್ಮ (ಜನರ) ಪ್ರತಿನಿಧಿಗಳೆಂದು ಒತ್ತಾಯಪೂರ್ವಕ ತಮ್ಮನ್ನು ಸಮಾಜದ ಮೇಲೆ ಹೇರಿಕೊಳ್ಳುತ್ತಾರೆ. ಅದಕ್ಕಾಗಿ ಧರ್ಮದ ಅಮಲು, ಜಾತಿಯ ಘಮಲು, ದುಡ್ಡಿನ ತೆವಲು… ಎಲ್ಲವೂ ಯಥೇಚ್ಛ ಬಳಕೆ ಆಗುತ್ತವೆ ಮತ್ತು ಸಾಮಾಜಿಕ ಬದುಕು ಸಂಪೂರ್ಣವಾಗಿ ಕ್ರಿಮಿನಲೈಸ್ ಆಗಿಬಿಡುತ್ತದೆ.

ಮಹೇಂದ್ರ ಕುಮಾರ್ ಕಥನದ ಮೂಲಕ ಬಿಚ್ಚಿಟ್ಟಿರುವ ಈ ಚಿತ್ರಣ ಕೇವಲ ಬಲಪಂಥೀಯ ಆಟಾಟೋಪಗಳ ಚಿತ್ರಣ ಮಾತ್ರವಲ್ಲ; ರಾಜಕೀಯ ಎಂದರೆ ಕುಟಿಲತೆ ಎಂದು ಅರ್ಥಮಾಡಿಕೊಂಡಿರುವ ಎಲ್ಲರ ಕಥೆ. ಈ ಕಾರಣಕ್ಕಾಗಿ ನಮ್ಮ ಸಾಮಾಜಿಕ ನಾಯಕತ್ವಗಳ ಮರುಪರಿಶೀಲನೆ ತುರ್ತಾಗಿ ಅಗತ್ಯವಿದೆ.

ಕರಾವಳಿಯ ರಾಜಕೀಯದ ಚಿನ್ನದ ಚೂರಿಗಳು ಈ ಪುಸ್ತಕದಲ್ಲಿ ಸಾಕಷ್ಟು ವಿವರವಾಗಿಯೇ ಓದಿಗೆ ದಕ್ಕುತ್ತವೆ. ಸುದ್ದಿಮನೆಗೆ ನಾಲ್ಕುಬುಟ್ಟಿ ಮಣ್ಣು ನಾನೂ ಹೊತ್ತಿರುವುದರಿಂದ ನನಗೆ ಇದು “ಸಖೇದಾಶ್ಚರ್ಯ” ತರಲಿಲ್ಲ. ಆದರೆ ಇಲ್ಲಿನ ಪ್ರಯೋಗಾಲಯ ರಾಜಕೀಯವನ್ನು ಹೊಸದಾಗಿ ಅರ್ಥಮಾಡಿಕೊಳ್ಳಬಯಸುವವರಿಗೆ “ಶಾಕಿಂಗ್” ಆಗಬಲ್ಲ ಕಂಟೆಂಟ್‌ಗಳು ಈ ಪುಸ್ತಕದಲ್ಲಿವೆ.

ಇಲ್ಲಿ ಬರುವ ಬಾಬಾ ಬುಡಾನ್‌ಗಿರಿಯ ಗದ್ದಲ, ದತ್ತ ಪಾದುಕೆ, ಚರ್ಚ್ ದಾಳಿ ಇತ್ಯಾದಿಗಳಲ್ಲಿ ನಮ್ಮ ರಾಜಕೀಯ ವ್ಯವಸ್ಥೆ, ಪೊಲೀಸಿಂಗ್ ವ್ಯವಸ್ಥೆಗಳ ಪಾಲು, ಪಾತ್ರಗಳು ಕರ್ನಾಟಕದ ಈ ಭಾಗದಲ್ಲಿ ಬಹುತೇಕ ಎಲ್ಲರಿಗೂ ಚೂರುಪಾರಾದರೂ ಕೇಳಿ-ಓದಿ ಗೊತ್ತಿರುವಂತಹದೇ. ಇವೆಲ್ಲ ನಮ್ಮ ಸಾಮಾಜಿಕ ಬದುಕಿನ ಮೇಲೆ ಮಾಡಿರುವ ಗೀರುಗಾಯಗಳು, ಆಳ ಜಖಂಗಳು, ಕೊಳೆಯುತ್ತಿರುವ ಹುಣ್ಣುಗಳು ಇನ್ನೂ ಮಾಸಿಲ್ಲ. ಆಗಾಗ ಅದರ ಮೇಲೆ ಅವರವರ ಅಗತ್ಯಗಳಿಗೆ ತಕ್ಕಂತೆ ಉಪ್ಪು-ಖಾರ ಇನ್ನೂ ಸಿಂಪಡಿಸಲಾಗುತ್ತಿದೆ, ಗಾಯಗಳು ಗುಣವಾಗದಂತೆ ಕಾಪಾಡಿಕೊಳ್ಳಲಾಗುತ್ತಿದೆ.

ನವೀನ್ ಸೂರಿಂಜೆ (ನವೀನ್ ಸೂರಿಂಜೆ) ಅವರ ಈ ಪುಸ್ತಕವು ಕೇವಲ ಅಮಾಯಕರ “ಜ್ಞಾನ” ಹೆಚ್ಚಿಸುವ ಮೂಲಕ ಅವರನ್ನು ಮತೀಯ ಮೂಲಭೂತವಾದಗಳಿಂದ ರಕ್ಷಿಸುವ ಕೆಲಸಕ್ಕೆ ಸೀಮಿತವಾಗದ ಬದಲು, ಇಂತಹ ಕುಟಿಲ, ಕ್ರಿಮಿನಲ್ ಚಟುವಟಿಕೆಗಳು ನಮ್ಮ ಸಾಮಾಜಿಕ ಬದುಕಿಗೆ ಅರ್ಥವಾಗದ ಇಂದಿನ ರಾಜಕೀಯಕ್ಕೆ ಅನಿವಾರ್ಯ ಎಂಬ ಮೂಢನಂಬಿಕೆಯನ್ನು ಕಳೆದುಕೊಳ್ಳುವ ಹಾದಿಯನ್ನು ತೆರೆಯುವುದು ಉತ್ತಮ ಬೆಳವಣಿಗೆಯಾಗಿದೆ. ಅದಲ್ಲ ಎಂದಾದರೆ ಈ ಪುಸ್ತಕವನ್ನು ಗಂಭೀರವಾಗಿ ಪರಿಗಣಿಸುವ ಬದಲು, ಇದೊಂದು ಯುದ್ಧಕಾಲದ ಟೂಲ್ ಕಿಟ್ ಅನ್ನಿಸಿಕೊಂಡು, ಅದೇ ಕೆಸರು ರಾಡಿಯಲ್ಲಿ ಮುಳುಗಿಹೋಗುವ ಸಾಧ್ಯತೆಗಳೇ ಹೆಚ್ಚು ಎಂದು ನನಗನ್ನಿಸುತ್ತದೆ.

ನಮ್ಮ “ಇಂದು” ಹೇಗಿದೆ ಎಂದು ತಿಳಿಯಲು ಖಂಡಿತಾ ಓದಬೇಕಾದ ಪುಸ್ತಕ ಇದು. ಪುಸ್ತಕದ ಬಗ್ಗೆ ನನಗಿರುವ ಏಕೈಕ ದೂರು ಕರಡು ತಿದ್ದುವಿಕೆಯ ಬಗೆಗಿನದು. ಮುಂದಿನ ಆವೃತ್ತಿಯ ಹೊತ್ತಿಗೆ ಅದನ್ನು ಸರಿಪಡಿಸಿದರು ಎಂದುಕೊಳ್ಳುವೆ.

ಪೊಲೀಸ್ ತನಿಖೆಯಲ್ಲಿ ಆರೋಪ ಸಾಬೀತು ಹಿನ್ನಲೆ ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ಚಾರ್ಜ್‌ ಶೀಟ್‌ !
ಇಂದು ಶ್ರೀರಂಗಪಟ್ಟಣ 3 ನೇ ಅಪರ ಜಿಲ್ಲಾ ಸೆಶನ್ ನ್ಯಾಯಾಲಯದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ನ್ಯಾಯಾಲಯ ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ಗೆ ನೀಡಿರುವ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಬೇಕು ಎಂದು ವಾದ ಮಂಡಿಸಿದರು‌.

“ಪ್ರಭಾಕರ ಭಟ್ ಈ ರೀತಿ ಕೃತ್ಯಗಳ ಚಾಳಿ ಹೊಂದಿದ್ದಾನೆ. ದ್ವೇಷ ಭಾಷಣ ಎನ್ನುವುದು ದೇಶ ಒಡೆಯುವ ಕೃತ್ಯ ಎಂದು ಸುಪ್ರಿಂ ಕೋರ್ಟ್ 2021 ಅಕ್ಟೋಬರ್ 21 ರ ಆದೇಶದಲ್ಲಿ ಹೇಳಿದೆ. ಹಾಗಾಗಿ ಇದು ದೇಶದ್ರೋಹದ ಕೃತ್ಯ” ಎಂದು ಪ್ರಾಥಮಿಕ ವಾದ ಮಂಡಿಸಿದರು.
ಕಲ್ಲಡ್ಕ ಪ್ರಭಾಕರ್ ಭಟ್ ಪರವಾಗಿನ ಸೀನಿಯರ್ ವಕೀಲರು ಹಾಜರಾಗದೇ ಇದ್ದಿದ್ದರಿಂದ ಅವರ ಜ್ಯೂನಿಯರ್ ವಕೀಲರು ಸಮಯ ಕೇಳಿದರು.

“ಆರೋಪಿ ವಿರುದ್ದ ಚಾರ್ಜ್ ಶೀಟ್ ಸಿದ್ದವಾಗಿದೆ” ಎಂದು ನ್ಯಾಯಾಧೀಶರು ಎಸ್ ಬಾಲನ್ ಅವರಿಗೆ ತಿಳಿಸಿದರು.

“ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದರೆ ಕಲ್ಲಡ್ಕ ಪ್ರಭಾಕರ್ ಭಟ್ ಮಧ್ಯಂತರ ಜಾಮೀನು ತಕ್ಷಣ ರದ್ದು ಮಾಡಬೇಕು. ದೇಶಕ್ಕಿಂತ ಮಿಗಿಲು ಯಾರೂ ಇಲ್ಲ. ಸುಪ್ರಿಂ ಕೋರ್ಟ್ ದ್ವೇಷ ಭಾಷಣದ ಬಗ್ಗೆ ಆದೇಶ ನೀಡಿದ್ದು ಮಾತ್ರವಲ್ಲ, ತೀಕ್ಷ್ಣವಾದ ಸೂಚನೆಗಳನ್ನು ಎಲ್ಲಾ ರಾಜ್ಯಗಳಿಗೆ ನೀಡಿದೆ” ಎಂದು ಬಾಲನ್ ವಾದ ಮಂಡಿಸಿದರು.

ವಿಚಾರಣೆಯನ್ನು ಜನವರಿ 10 ಕ್ಕೆ ಮುಂದೂಡಿದ್ದು, ಅಂದು ಸಂಜೆ 4 ಗಂಟೆಗೆ ವಿಸ್ತೃತ ವಾದ ನಡೆಯಲಿದೆ‌.

ನವೀನ್ ಸೂರಿಂಜೆ