naxal – Peepal Media

ಮುಖ್ಯವಾಹಿನಿಗೆ ಬರುತ್ತಿರುವ ನಕ್ಸಲರಿಂದ ಸರ್ಕಾರಕ್ಕೆ 18 ಹಕ್ಕೊತ್ತಾಯಗಳು
ಬೆಂಗಳೂರು, ಜ.08: ರಾಜ್ಯದೆಲ್ಲೆಡೆ ಸುದ್ದಿಯಾಗಿರುವಂತಹ ಮಾವೋವಾದಿ ಹೋರಾಟಗಾರರು ಇಂದು ಅಂದರೆ ಜನವರಿ 08 ರಂದು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಕಛೇರಿಯಲ್ಲಿ ಶರಣಾಗುವುದಾಗಿ ತಿಳಿಸಿ ಚಿಕ್ಕಮಗಳೂರಿನಿಂದ ಹೊರಟು ಬಂದಿದ್ದರು.

ಈಗ ನಕ್ಸಲರಿಂದ ರಾಜ್ಯ ಸರ್ಕಾರಕ್ಕೆ 18 ಅಂಶಗಳನ್ನೊಳಗೊಂಡ ಹಕ್ಕೊತ್ತಾಯ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಿದ್ದಾರೆ. ವಿಕ್ರಂ ಗೌಡ ಎನ್‌ಕೌಂಟರ್‌ ಕುರಿತು ತನಿಖೆಯನ್ನು ಆಗ್ರಹಿಸಿರುವುದರ ಜೊತೆಗೆ ಬೂಮಿ ಇಲ್ಲದ ಪ್ರತಿಯೊಬ್ಬರಿಗೂ 5 ಎಕರೆ ಕೃಷಿ ಜಮೀನು ನೀಡುವುದು, ಆದಿವಾಸಿಗಳ ಹಕ್ಕು ರಕ್ಷಣೆ, ಕಸ್ತೂರಿ ರಂಗನ್‌ ವರದಿ ರದ್ದುಗೊಳಿಸುವುದು, ನಿರುದ್ಯೋಗಿಗಳಿಗೆ ಉದ್ಯೋಗ, ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಒಟ್ಟು 18 ಅಂಶಗಳ ಹಕ್ಕೊತ್ತಾಯವನ್ನು ಸರ್ಕಾರದ ಮುಂದೆ ಇರಿಸಲಿದ್ದಾರೆ.

ಅವರ 18 ಅಂಶಗಳು ಈ ಕೆಳಗಿನಂತಿವೆ.

1. ಮೂರು ರಾಜ್ಯದಲ್ಲಿ ಭೂಮಿ ಇಲ್ಲದ ಪ್ರತಿ ಕುಟುಂಬಕ್ಕೆ 5 ಎಕರೆ ಕೃಷಿ ಯೋಗ್ಯ ಭೂಮಿ ಕೊಡಬೇಕು.

. ಹಾಲಿ ಈಗ ಭೂಮಿ ಇರುವವರಿಗೆ ಶಾಶ್ವತ ಹಕ್ಕು ಪತ್ರ ಕೊಡಬೇಕು.

. ಅದರಲ್ಲೂ ಮುಖ್ಯವಾಗಿ ಎಲ್ಲ ಆದಿವಾಸಿಗಳಿಗೆ ಭೂಮಿ ಮತ್ತು ಶಾಶ್ವತ ಹಕ್ಕು ಪತ್ರ ನೀಡಬೇಕು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸೇಕು.

. ಕೃಷಿ ಯೋಗ್ಯ ಪಾಳು ಭೂಮಿಯನ್ನು ಭೂಹೀನರಿಗೆ ಹಂಚಬೇಕು.

2. ಆದಿವಾಸಿಗಳಿಗೆ ಕಾಡಿನ ಮೇಲಿನ ಎಲ್ಲ ರೀತಿಯ ಅಧಿಕಾರಿವಿರಬೇಕು. ಅವರಿಗೆ ಕಾಡುತ್ಪತ್ತಿ ಸಂಗ್ರಹಿಸಲು ಅರಣ್ಯ ಇಲಾಖೆಯ ಕಿರುಕುಳ ನಿಲ್ಲಬೇಕು.

3. ಆಹಾರ ಬೆಳೆ ಅದರಲ್ಲೂ ಮುಖ್ಯವಾಗಿ ಭತ್ತ ಬೆಳೆಯುವ ರೈತರ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಿ, ಸರ್ಕಾರ ಅವರಿಗೆ ಸಂಪೂರ್ಣ ಬೆಂಬಲವಾಗಿರಬೇಕು.

4. ಕಸ್ತೂರಿ ರಂಗನ್ ವರದಿಯನ್ನು ರದ್ದುಗೊಳಸಬೇಕು.

5. ಪಶ್ಚಿಮ ಘಟ್ಟದಲ್ಲಿ ಟೂರಿಸಂ ಮಾಡುವ ಮೂಲಕ ಪರಿಸರ ನಾಶ ಮಾಡುವುದನ್ನು ನಿಲ್ಲಿಸಬೇಕು.

6. ನಿರುದ್ಯೋಗಿ ಯುವ ಜನಾಂಗಕ್ಕೆ ಅವರ ಅರ್ಹತೆಗೆ ತಕ್ಕಂತೆ ಸರ್ಕಾರಿ ಉದ್ಯೋಗ ಕೊಡಬೇಕು. ಅದರಲ್ಲೂ ದಲಿತ ಮತ್ತು ಆದಿವಾಸಿಗಳಿಗೆ ಆದ್ಯತೆ ಮೇರೆಗೆ ಕೊಡಬೇಕು.

ಸಾಂಸ್ಕೃತಿಕವಾಗಿ ಬರುತ್ತಿರುವ ಬದಲಾವಣೆಗಳ ಪರಿಣಾಮದಿಂದ ಮಹಿಳೆಯರ ಮೇಲೆ ಆಗುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳನ್ನು ತಡೆಗಟ್ಟಲು ಅದಕ್ಕೆ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕು. ಮತ್ತು ನಾಮಕಾವಸ್ಥೆಗಾಗಿ ನಡೆಸುವ ಕ್ರಮಗಳನ್ನು ನಿಲ್ಲಿಸಬೇಕು.

ಹವಾಮಾನ ಬದಲಾವಣೆಯಿಂದ ಬರುತ್ತಿರುವ ಕೃಷಿ ಬೆಳೆ, ಮನುಷ್ಯನ ಬದುಕಿನ ಮೇಲೆ ಮತ್ತು ಪ್ರಾಕೃತಿಯ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ಜನರಿಗೆ ವೈಜ್ಞಾನಿಕ ವಾಗಿ ಕಾರಣವನ್ನು ಅರ್ಥಪಡಿಸಬೇಕು. ಮತ್ತು ಅದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ರದ್ದಾಗಬೇಕು.

. ಇಲ್ಲಿ ವಾಸಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸಬಾರದು

. ಅವರಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಅಲ್ಲಿಯೇ ಒದಗಿಸಬೇಕು.

ಮೂರು ರಾಜ್ಯಗಳಲ್ಲೂ ಒಕ್ಕಲೆಬ್ಬಿಸುವ ಎಲ್ಲ ಕ್ರಮಗಳನ್ನು ನಿಲ್ಲಿಸಬೇಕು.

ಬಡ ಮತ್ತು ಮಧ್ಯಮ ವರ್ಗದ ರೈತರ ಒತ್ತುವರಿ ಭೂಮಿಯನ್ನು ತೆರವುಗೊಳಿಸಬಾರದು.

ಅಡಿಕೆಗೆ ಬರುತ್ತಿರುವ ಚುಕ್ಕೆ ರೋಗ ಮತ್ತು ಇತರೆ ಬೆಳೆಗಳಿಗೆ ಬರುತ್ತಿರುವ ರೋಗಗಳ ಬಗ್ಗೆ ಸಂಶೋಧನೆ ನಡೆಸಿ, ರೋಗವನ್ನು ತಡೆಗಟ್ಟಲು ಸರ್ಕಾಯ ಪ್ರಯತ್ನಿಸಬೇಕು. ಹಾಗೂ, ಬೆಳೆ ನಷ್ಟವಾದ ರೈತರಿಗೆ ಸೂಕ್ತ ಪರಿಹಾರವನ್ನು ತಕ್ಷಣವೇ ಕೊಡಬೇಕು.

ಆದಿವಾಸಿಗಳಲ್ಲಿ ಅಕಾಲಿಕವಾಗಿ ಮರಣ ಹೊಂದುತ್ತಿರುವ ಜನರ ಕುರಿತು ತಕ್ಷಣವೇ ಸೂಕ್ತ ರೀತಿಯಲ್ಲಿ ಸಂಶೋಧನೆ ನಡೆಸಿ, ಚಿಕಿತ್ಸೆ ಒದಗಿಸಿ ಪರಿಹರಿಸಬೇಕು. ಮತ್ತು 2025ರ ನಂತರ ಮರಣ ಹೊಂದಿದ್ದವರ ಕುಟುಂಬಗಳಿಗೆ ಸೂಕ್ತ ರೀತಿಯ ಪರಿಹಾರ ಕೊಡಬೇಕು. ಅಲ್ಲದೆ, ಮಹಿಳೆಯರಿಗೆ ಬರುತ್ತಿರುವ ಗರ್ಭಕೋಶ ಸಂಬಂಧಿತ ಕಾಯಿಲೆಗೆ ಸೂಕ್ತ ರೀತಿಯಲ್ಲಿ ಸಂಶೋಧನೆ ನಡೆಸಿ ಪರಿಹರಿಸಬೇಕು. ಇದಕ್ಕೆ ಕಾರಣ ಕೊರೊನಾ ವ್ಯಾಕ್ಸಿನ್ ಸಮಸ್ಯೆಯಾ ಎಂಬುದರ ಬಗ್ಗೆ ಸಂಶೋಧನೆ ನಡೆಸಬೇಕು.

ನಮ್ಮ ಪಕ್ಷದ ಡಿಸಿಎಂ ಸದಸ್ಯರಾದ ಕಾಮ್ರಡ್ ವಿಕ್ರಮ್ ಗೌಡ ಅವರನ್ನು ನವೆಂಬರ್ 18/2024ರಂದು ಸಂಜೆ 6:30 ಗಂಟೆಯ ಸಮಯದಲ್ಲಿ ಮನೆಯವರ ಸಹಾಯದಿಂದ ಮನೆ ಒಳಗೆ ಕೈಗೆಟಕುವ ಅಂತರದಲ್ಲಿ ಎಎನ್‌ಎಫ್ ಪಡೆ ಕ್ರೂರವಾಗಿ ಗುಂಡಿನ ಸುರಿಮಳೆಗರೆದು ಹತ್ಯೆಗೈದಿದ್ದಾರೆ.ಇದರ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಮೂರು ರಾಜ್ಯಗಳ ಜೈನಲ್ಲಿರುವ ನಮ್ಮ ಎಲ್ಲ ಕಾಮೆಡ್‌ಗಳ ಕೇಸುಗಳನ್ನು ಶೀಘ್ರವಾಗಿ ಮುಗಿಸಬೇಕು. ಅವರನ್ನು ಬಿಡುಗಡೆಗೊಳಿಸಬೇಕು.

ಆದಿವಾಸಿ ಮುಗ್ಧ ಮಹಿಳೆಯರಾದ ಶೋಭಾ, ಕನ್ಯಾಕುಮಾರಿ, ಸಾವಿತ್ರಿ, ಶ್ರೀಮತಿ ಇವರ ಮೇಲಿನ ಕೇಸುಗಳನ್ನು ಶೀಘ್ರವೇ ಮುಗಿಸಿ ಅವರಿಗೂ ನಕ್ಸಲ್ ಪ್ಯಾಕೇಜಿನಡಿಯಲ್ಲಿ ಪುನರ್‌ವಸತಿ ಮತ್ತು ಸಹಾಯಧನವನ್ನು ಕಲಿಸಬೇಕು.

ಆಯಾ ಪ್ರದೇಶಗಳಲ್ಲಿ ಸ್ಥಳೀಯವಾಗಿ ಬೆಳೆಯುತ್ತಿರುವ ಅಕ್ಕಿಯನ್ನು ರೇಷನ್ ಕಾರ್ಡಿನ ಅಕ್ಕಿಯಾಗಿ ವಿತರಿಸಬೇಕು.

ಮುಖ್ಯವಾಹಿನಿಗೆ ಬಂದು 15 ದಿನಗಳೊಳಗೆ ನಮ್ಮ ಎಲ್ಲ ಕಾಮ್ರೆಡ್‌ ಗಳ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ರೀತಿಯ ಚಿಕಿತ್ಸೆ ಕೊಡಿಸಬೇಕು.

ಈ ಹದಿನೆಂಟು ಹಕ್ಕೊತ್ತಾಯಗಳಿಗೆ ಸರ್ಕಾರದಿಂದ ಯಾವ ರೀತಿಯಾದ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸಿಎಂ ಸಿದ್ದರಾಮಯ್ಯ ಅವರ ಮುಂದೆಯೇ ಈ ಆರೂ ಜನ ನಕ್ಸಲರು ಶರಣಾಗಿತಿದ್ದು ತಕ್ಷಣವೇ ಇದಕ್ಕೆ ಉತ್ತರ ಸಿಗಬಹುದಾ ಎಂಬ ಕುತೂಹಲ ಈಗ ಎಲ್ಲರಲ್ಲೂ ಇದೆ.

ಬೆಂಗಳೂರಿಗೆ ಬರುತ್ತಿರುವ ನಕ್ಸಲ್‌ ಹೋರಾಟಗಾರರು
ಚಿಕ್ಕಮಗಳೂರು ಜ,08: ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಲು ಒಪ್ಪಿದ್ದ 6 ಮಂದಿ ನಕ್ಸಲ್ ಹೋರಾಟಗಾರರನ್ನು ನೇರವಾಗಿ ಭೇಟಿಯಾಗುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಪೇಕ್ಷೆ ಪಟ್ಟಿದ್ದಾರೆ. ಮಾವೋವಾದಿ ಚಳವಳಿಯ ಕೊನೆಯ ನಕ್ಸಲ್ ಹೋರಾಟಗಾರರಾಗಿದ್ದ ಈ 6 ಮಂದಿ ಹೋರಾಟಗಾರರು ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯ ಮೂಲಕ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಬೇಕಿತ್ತು. ಆದರೆ ಮುಖ್ಯಮಂತ್ರಿಗಳು ನೇರವಾಗಿ ತಾವೇ ಅವರನ್ನು ಮುಖ್ಯವಾಹಿನಿಗೆ ಕರೆತರಲು ಅಪೇಕ್ಷಿಸಿರುವುದರಿಂದ ನಕ್ಸಲ್ ಹೋರಾಟಗಾರರು ಇಂದು ಬೆಂಗಳೂರಿನ ಮುಖ್ಯಮಂತ್ರಿ ಕಚೇರಿಗೆ ಭೇಟಿನೀಡಲಿದ್ದಾರೆ.

ಶಾಂತಿಗಾಗಿ ನಾಗರಿಕ ವೇದಿಕೆಯು ರಾಜ್ಯ ಸರ್ಕಾರದೊಂದಿಗೆ ನಡೆಸಿದ ಸುದೀರ್ಘ ಮಾತುಕತೆ ಫಲವಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಸಿದ್ಧತೆ ನಡೆಸಿದ್ದ ನಕ್ಸಲ್ ಹೋರಾಟಗಾರರಾದ ಮುಂಡಗಾರು ಲತಾ, ಸುಂದರಿ ಕುಟ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ ವಸಂತ, ಟಿ ಎನ್ ಜೀಶ್ ಅವರು ಬುಧವಾರ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಲು ಮಾತುಕತೆ ನಡೆಸಲಾಗಿತ್ತು. ಈ ಬಗ್ಗೆ ಶಾಂತಿಗಾಗಿ ನಾಗರಿಕ ವೇದಿಕೆಯ ಪ್ರಮುಖ ಮುಖಂಡ ಕೆ.ಎಲ್. ಅಶೋಕ್ ಮಾಹಿತಿ ನೀಡಿದ್ದರು.

ಇನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನವರಿ 08, 2025 ಬುಧವಾರದಂದು ನಕ್ಸಲರು ಶರಣಾಗತಿಯಾಗಲು ಬಯಸ್ಸಿದ್ದರಿಂದಾಗಿ ಕಚೇರಿಯ ಸುತ್ತಲು ಮಾಧ್ಯಮಗಳು, ಜನಪರ ಸಂಘಟನೆಗಳ ನಾಯಕರು ಬೆಳಗಿನಿಂದಲೂ ಕಾಯುತ್ತಿದ್ದರು. ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿಗಳೇ ಖುದ್ದು ಭೇಟಿಯಾಗುವುದಾಗಿ ತಿಳಿಸಿದ್ದರಿಂದ ನಕ್ಸಲ್ ಹೋರಾಟಗಾರರು ನೇರವಾಗಿ ಬೆಂಗಳೂರಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ಸುದ್ದಿ ಮೂಲಗಳಿಂದ ತಿಳಿದುಬಂದಿದೆ

‘ವಿಕ್ರಂ ಗೌಡ ಹತ್ಯೆಯ ಕುರಿತು ನ್ಯಾಯಾಂಗ ತನಿಖೆಯಾಗಲಿ’: ಮುಖ್ಯವಾಹಿನಿಗೆ ಬರಲಿರುವ ಆರು ಮಂದಿ ನಕ್ಸಲರ ಒತ್ತಾಯ
ಚಿಕ್ಕಮಗಳೂರು: ಕಳೆದ ಇಪ್ಪತ್ತೈದು ವರ್ಷಗಳಿಂದ ಮಾವೋವಾದಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಆರು ಮಂದಿ ನಕ್ಸಲರು ಜನವರಿ, 8 ರಂದು ಚಿಕ್ಕಮಗಳೂರಿನಲ್ಲಿ ಮುಖ್ಯವಾಹಿನಿಗೆ ಬರಲಿದ್ದಾರೆ.

ಲತಾ ಮುಂಡಗಾರು, ವನಜಾಕ್ಷಿ, ಎಂ., ಜಯಣ್ಣ ಆರೋಲಿ, ಸುಂದರಿ, ವಸಂತ್‌.ಕೆ, ಜಿಷ. ಎ.ಡಿ ಎಂಬ ಆರು ಮಂದಿ ಮಾವೋವಾದಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ನಕ್ಸಲರು ಮುಖ್ಯವಾಹಿನಿಗೆ ಬರುವುದಾಗಿ ಒಪ್ಪಿಕೊಂಡಿದ್ದಾರೆ.

“ನಾವು ಆರು ಜನರು ಕಳೆದ 25 ವರ್ಷಗಳಿಂದ ಜನರ ಪರವಾಗಿ ಹೋರಾಡುತ್ತಾ ಬಂದಿದ್ದು, ಈಗ ಮುಖ್ಯ ವಾಹಿನಿಗೆ ಬಂದು ಸಂವಿಧನಾತ್ಮಕ, ಪ್ರಜಾಸತಾತ್ಮಕ ಹೋರಾಟಗಳಲ್ಲಿ ತೊಡಗಿಸಿಕೊಳ್ಳಲು ಸ್ವ ಇಚ್ಛೆಯಿಂದ ಬಯಸಿದ್ದೇವೆ. ಈಗಿನ ಬದಲಾದ ಪರಿಸ್ಥಿತಿಯಲ್ಲಿ ಅದೇ ಸರಿ ಎಂದು ತೀರ್ಮಾನಿಸಿದ್ದೇವೆ. ಮುಂದೆಯೂ ಜನರ ಪರವಾಗಿ ಕೊನೆ ಉಸಿರಿನ ತನಕ ಹೊರಡಲು ಬಯಸಿದ್ದೇವೆ,” ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಅಲ್ಲದೆ, ನಮಗೆ ಮುಖ್ಯವಾಹಿನಿಗೆ ಬರಲು ಕರೆಕೊಟ್ಟು ಜನರ ಪರವಾಗಿ ಮುಂದೆಯೂ ಪ್ರಜಾತಾಂತ್ರಿಕ ಹೋರಾಟಗಳಲ್ಲಿ ತೊಡಗಳು ಯಾವುದೇ ತಡೆ ಇಲ್ಲದಂತೆ ಮತ್ತು ಜನರ ಹಕ್ಕುಗಳಿಗಾಗಿ ನಾವಿಟ್ಟ ಹಕ್ಕೊತ್ತಾಯಗಳನ್ನು ಈಡೇರಿಸುವ ಭರವಸೆ ನೀಡಿದ ಮಾನ್ಯ ಮುಖ್ಯಮಂತ್ರಿಯವರಿಗೂ ಮತ್ತು ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ,” ಎಂದು ಹೇಳಿದ್ದಾರೆ.

“ಮೂರೂ ರಾಜ್ಯಗಳ ಪಶ್ಚಿಮ ಘಟ್ಟದಲ್ಲಿ ವಾಸಿಸುತ್ತಿರುವ ಆದಿವಾಸಿ, ದಲಿತ, ರೈತ, ಕೂಲಿ ಜನರ ಬದುಕಿಗೆ ಸಂಬಂಧಿಸಿದ ಮತ್ತು ಇಲ್ಲಿನ ಪರಿಸರಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಖಚಿತ ಹೆಜ್ಜೆಗಳನ್ನು ಇಡಬೇಕು ಎಂದು ನಾವು ಬಯಸುತ್ತೇವೆ. ಮೂರೂ ರಾಜ್ಯಗಳ ಸರ್ಕಾರಗಳಿಗೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಮೂರು ರಾಜ್ಯ ಜೈಲುಗಳಲ್ಲಿರುವ ನಮ್ಮ ಎಲ್ಲಾ ಕಾಡ್ಸ್ ರ್ ಕೇಸುಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ಬಿಡುಗಡೆಗೊಳಿಸಲು ಮೃದು ಧೋರಣೆ ತೋರಬೇಕೆಂದು ಸರ್ಕಾರಗಳಲ್ಲಿ ಮನವಿ ಮಾಡುತ್ತೇವೆ. ವಿಕ್ರಂ ಗೌಡರ ಹತ್ಯೆಯ ಕುರಿತು ನ್ಯಾಯಾಂಗ ತನಿಖೆಗೆ ತನಿಖಾ ತಂಡವನ್ನು ರಚಿಸಬೇಕೆಂದು ಒತ್ತಾಯಿಸುತ್ತೇವೆ,” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯವಾಹಿನಿಗೆ ಬರಲು ನಕ್ಸಲ್ ಹೋರಾಟಗಾರರ ಗ್ರೀನ್ ಸಿಗ್ನಲ್!
ಸಶಸ್ತ್ರ ಹೋರಾಟವನ್ನು ತ್ಯಜಿಸಿ ಮುಖ್ಯವಾಹಿನಿ ಬರಲು ಮತ್ತು ಪ್ರಜಾತಾಂತ್ರಿಕ ಹೋರಾಟದಲ್ಲಿ ತೊಡಗಿಸಿಕೊಳ್ಳಲು ನಕ್ಸಲ್ ಹೋರಾಟಗಾರರು ನಿರ್ಧಾರಿಸಿದ್ದಾರೆ. ಶಾಂತಿಗಾಗಿ ನಾಗರಿಕ ವೇದಿಕೆಯೊಂದಿಗೆ ಚರ್ಚೆ ನಡೆಸಿರುವ ನಕ್ಸಲ್ ಹೋರಾಟಗಾರರು, ಸರ್ಕಾರದ ಕರೆಯನ್ನು ಒಪ್ಪಿಕೊಂಡಿದ್ದಾರೆ.

ಶಾಂತಿಗಾಗಿ ನಾಗರಿಕ ವೇದಿಕೆಯ ಮುಖಂಡರು ಮತ್ತು ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾವೋವಾದಿ ಹೋರಾಟಗಾರರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ತಮ್ಮ ಶರತ್ತುಗಳನ್ನು ಸರ್ಕಾರದ ಮುಂದಿರುವ ನಕ್ಸಲ್‌ ಹೋರಾಟಗಾರರು ಮುಖ್ಯವಾಹಿನಿ ಬರಲು ಸಮ್ಮತಿ ಸೂಚಿಸಿದ್ದಾರೆ.

ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಮಾಹಿತಿ ನೀಡಿದ್ದಾರೆ. “ಚಿಕ್ಕಮಗಳೂರಿನ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡದ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ ಮತ್ತು ಆಂದ್ರಪ್ರದೇಶದ ಮಾರೆಪ್ಪ ಅರೋಲಿ ಅವರು ಸರ್ಕಾರದ ಮುಂದೆ ಶರಣಾಗುವುದಾಗಿ ಒಪ್ಪಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.

“ಆರು ಮಂದಿ ನಕ್ಸಲ್ ಹೋರಾಟಗಾರರು ಬುಧವಾರ ಸರ್ಕಾರದ ಎದುರು ಶರಣಾಗಲಿದ್ದಾರೆ. ಅವರಿಗೆ ಸರ್ಕಾರವು ಶರಣಾಗತಿ ಮತ್ತು ಪುನರ್ವಸತಿಯ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಸೌಲಭ್ಯಗಳನ್ನು ಒದಗಿಸಲಿದೆ” ಎಂದು ಸರ್ಕಾರ ತಿಳಿಸಿದೆ.

ನಾಳೆ ಇನ್ನಷ್ಟು ವಿಚಾರಗಳು ಹೊರಬರಲಿದ್ದು ಈ ಆರು ಮಂದಿಯ ಬಗ್ಗೆ ಹೆಚ್ಚು ವಿಚಾರಗಳನ್ನು ತಿಳಿಯಬಹುದಾಗಿದೆ.

ಸರ್ಕಾರದ ಹೃದಯಹೀನ ನೀತಿಯಿಂದಾಗಿ ಬಂಡಾಯಗಾರನ ದುರಂತ ಅಂತ್ಯ: ಮಾಜೀ ನಕ್ಸಲರಾದ ನೂರ್‌ ಶ್ರೀಧರ್‌ ಮತ್ತು ಸಿರಿಮನೆ ನಾಗರಾಜ್ ಆಕ್ರೋಶ
ಬೆಂಗಳೂರು: ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸೀತಾಂಬೈಲು ಪ್ರದೇಶದಲ್ಲಿರುವ ಹೆಬ್ರಿ ಕಬ್ಬಿನಾಲೆಯಲ್ಲಿ ನವೆಂಬರ್ 18ರ ಸೋಮವಾರ ರಾತ್ರಿ ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್ ಕಮಾಂಡರ್ ವಿಕ್ರಮ್ ಗೌಡ ಹತರಾಗಿದ್ದರು. ವಿಕ್ರಮ್ ಗೌಡ ಇತ್ತೀಚಿನ ದಿನಗಳಲ್ಲಿ ಶೃಂಗೇರಿ, ನರಸಿಂಹರಾಜಪುರ, ಕಾರ್ಕಳ ಮತ್ತು ಉಡುಪಿ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳನ್ನು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಎನ್‌ಕೌಂಟರ್‌ ಬಗ್ಗೆ ಅನೇಕ ಅನುಮಾನಗಳು ರಾಜ್ಯದಲ್ಲಿ ಎದ್ದಿವೆ.

ಈ ಎನ್‌ಕೌಂಟರ್‌ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜೀ ನಕ್ಸಲರೂ, ಹಾಲಿ ಸಕ್ರಿಯ ಸಾಮಾಜಿಕ ಕಾರ್ಯಕರ್ತರೂ ಆದ ನೂರ್‌ ಶ್ರೀಧರ್‌ ಹಾಗೂ ಸಿರಿಮನೆ ನಾಗರಾಜ್‌ ಇಂದು (ನವೆಂಬರ್‌ 20, 2024) ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಜಂಟಿ ಪತ್ರಿಕಾಗೋಷ್ಟಿ ನಡೆಸಿ, ” ಹೃದಯಹೀನ ಸರ್ಕಾರದ ನೀತಿಯಿಂದಾಗಿ ಕ್ರಾಂತಿಯ ಅಪ್ರಯೋಗಿಕ ಹಾದಿ ಮತ್ತೊಬ್ಬ ಬಂಡಾಯಗಾರನ ದುರಂತ ಅಂತ್ಯವಾಗಿದೆ. ಕರ್ನಾಟಕ ಸಾವುನೋವುಗಳ ದುರಂತಗಾಥೆಗೆ ಜಾರದಂತೆ ಕಾಪಾಡಿಕೊಳ್ಳುವ ಹೊಣೆ ನಮ್ಮೆಲ್ಲರದಾಗಿದೆ. ನಾಡಿನ ಹಿತದೃಷ್ಟಿಯಿಂದ ಜನಚಳವಳಿಗಳ ಮುಖ್ಯವಾಹಿನಿಗೆ ಮರಳಬೇಕೆಂದು ಕಾಡಿನಲ್ಲಿರುವ ಸಂಗಾತಿಗಳಿಗೆ ಮರುಮನವಿ ಮಾಡುತ್ತಿದ್ದೇವೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕರ್ನಾಟಕ ಮತ್ತೊಂದು ದುಃಖಕರ ದುರಂತವನ್ನು ಕಂಡಿದೆ. ಮಲೆನಾಡಿನ ಆದಿವಾಸಿ ಹೋರಾಟಗಾರ ವಿಕ್ರಂ ಗೌಡರ ಹತ್ಯೆಯಾಗಿದೆ. ಮಲೆಕುಡಿಯ ಆದಿವಾಸಿ ಕುಟುಂಬಕ್ಕೆ ಸೇರಿದ, ಹೆಬ್ರಿ ಮೂಲದ, ಬಡ ಕುಟುಂಬದ ಯುವ ಕಿಡಿಯೊಂದನ್ನು ನಂದಿಸಿ ಪೋಲೀಸರು  ಎನ್ಕೌಂಟರ್‌ ಕಥೆ”ಯನ್ನು ಹರಿಬಿಟ್ಟಿದ್ದಾರೆ. ಕಗ್ಗತ್ತಲ ರಾತ್ರಿಯಲ್ಲಿ, ಕಾಡಿನ ಒಡಲಲ್ಲಿ ಚಿಮ್ಮಿದ ಆದಿವಾಸಿ ಯುವಕನ ನೆತ್ತರ ಹನಿಗಳು ಗೃಹಮಂತ್ರಿ ಪರಮೇಶ್ವರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಿಳಿಯಂಗಿಗಳ ಮೇಲೂ ಬಿದ್ದಿವೆ. ನಕ್ಸಲ್‌ ಚಳವಳಿಯ ಪರ ವಿರೋಧಿ ಚರ್ಚೆಗಳು ನಡಿಯುತ್ತಿವೆ. ಮಲೆನಾಡಿನಲ್ಲಿ ಪೋಲೀಸರ ಓಡಾಟ – ಆರ್ಭಟ ಮತ್ತೆ ಹೆಚ್ಚಾಗಿದೆ. ಜನಸಾಮಾನ್ಯರ ಮನದಲ್ಲಿ ಆತಂಕದ ಮೋಡಗಳು ಕವಿಯತೊಡಗಿವೆ. ಈ ಘಟನೆಗೆ ಮಾತ್ರ ಸ್ಪಂದಿಸಿ ಸುಮ್ಮನಾಗದೆ ಈ ಸಮಸ್ಯೆಯ ಅಳ ಅಗಲವನ್ನು ಅವಲೋಕಿಸಿ ದುರಂತ ಪರಂಪರೆಗೆ ಕರ್ನಾಟಕ ಮತ್ತೆ ಜಾರದಂತೆ ನೋಡಿಕೊಳ್ಳುವ ಹೊಣೆ ಎಲ್ಲಾ ಪ್ರಜ್ಞಾವಂತ ನಾಗರೀಕರದಾಗಿದೆ. ಕಾಡಿನಲ್ಲಿ ಪ್ರತ್ಯೇಕವಾಗುಳಿಯದೆ ಜನಚಳವಳಿಗಳ ಮುಖ್ಯ ಧಾರೆಯ ಜೊತೆಗೂಡುವ ಕುರಿತು ಆಲೋಚಿಸಬೇಕಿರುವ ಜವಬ್ದಾರಿ ಕಾಡಿನ ಸಂಗಾತಿಗಳ ಮೇಲೂ ಇದೆ,”

ಈ ಪತ್ರಿಕಾ ಪ್ರಕಟಣೆಯಲ್ಲಿ ಈ ಕೆಳಗಿನ ನಾಲ್ಕು ಮುಖ್ಯ ಅಂಶಗಳನ್ನು ಸರ್ಕಾರದ, ಸಮಾಜದ ಹಾಗೂ ಕಾಡಿನ ಸಂಗಾತಿಗಳ ಮುಂದಿಟಿದ್ದಾರೆ.

ಹೃದಯಹೀನ ಸರ್ಕಾರದ ನೀತಿ:
ಮೊದಲಿಗೆ ಯಾಕಾದರೂ ಕೊಂದಿರಿ? ಎಂದು ಈ ಸರ್ಕಾರವನ್ನು ನಾವೆಲ್ಲರೂ ಕೇಳಲೇಬೇಕಿದೆ. 10 ವರ್ಷ ಕರ್ನಾಟಕ ಶಾಂತವಾಗಿತ್ತು. ವಿಕ್ರಂ ಗೌಡ ಮತ್ತು ತಂಡ ಪೋಲೀಸರ ಮೇಲೇನೂ ದಾಳಿ ಮಾಡಿರಲಿಲ್ಲ, ಯಾರನ್ನೂ ಕೊಂದಿರಲಿಲ್ಲ, ಕನಿಷ್ಟ ಬೆದರಿಸಿಯೂ ಇರಲಿಲ್ಲ, ಏನನ್ನೂ ಸುಟ್ಟಿರಲೂ ಇಲ್ಲ. ಹಾಗಿದ್ದಾಗ ಕೊಲ್ಲುವ ಅಗತ್ಯವಾದರೂ, ತುರ್ತಾದರೂ ಏನಿತ್ತು? ಕಾಡಿನಲ್ಲಿ ಕೆಲವರು ಬಂದಕೂ ಹಿಡಿದು ಓಡಾಡಿದ ಮಾತ್ರಕ್ಕೆ ಅವರನ್ನು ಕೊಂದುಬಿಡಿ ಎಂಬ ಲೈಸೆನ್ಸನ್ನು ನಿಮಗೆ ಕೊಟ್ಟವರು ಯಾರು? ಈ ಪ್ರಶ್ನೆಗಳಿಗೆ ಪೋಲೀಸರು ಮನಸ್ಸಾಕ್ಷಿಯಿಂದ ಉತ್ತರಿಸಬೇಕಿದೆ. ಮುಖ್ಯಮಂತ್ರಿಗಳು, ಸಾಮಾಜಿಕ ವಿಶ್ವಾಸವನ್ನು ಗಳಿಸಿರುವ ನಿವೃತ್ತ ನ್ಯಾಯಾಧೀಶರೊಬ್ಬರ ಮೇಲುಸ್ತುವಾರಿಯಲ್ಲಿ, ಈ ಕೂಡಲೇ ಈ ಇಡೀ ಘಟನೆಯ ಕುರಿತು ಕೂಲಂಕೂಷ ತನಿಖೆಗೆ ಆದೇಶಿಸಲೇಬೇಕಿದೆ.

ಎರಡನೆಯದಾಗಿ “ಸಶಸ್ತ್ರ ಹೋರಾಟ ಬಿಟ್ಟು ಮುಖ್ಯವಾಹಿನಿಗೆ ಮರಳಿ” ಎಂದು ಸರ್ಕಾರ ಕರೆಕೊಟ್ಟಿದ್ದು ನಿಜ. ಆದರೆ ನಿಮ್ಮ ಮಾತಲ್ಲಿ ಯಾಕಾದರೂ ಅವರು ವಿಶ್ವಾಸವಿಡಬೇಕು? ಎಂಬುದನ್ನು ಸರ್ಕಾರ ನೋಡಿಕೊಳ್ಳಬೇಕಿದೆ. ಕರ್ನಾಟಕದ ಪ್ರಜ್ಞಾವಂತ ನಾಗರೀಕರ ಕರೆಗೆ ಓಗೊಟ್ಟು ಹಲವರು 2014-2018 ರ ನಡುವೆ ಮುಖ್ಯವಾಹಿನಿಗೆ ಬಂದರು. ಮೊದಲಿಗೆ ಬಂದ ನಮ್ಮನ್ನು ನಾಗರೀಕ ಸಾಮಾಜ ಅತುಕೊಂಡಿತು. ಹೆಚ್.‌ ಎಸ್.‌ ದೊರೆಸ್ವಾಮಿ, ಎ.ಕೆ. ಸುಬ್ಬಯ್ಯ ಹಾಗೂ ಗೌರಿ ಲಂಕೇಶ್‌ ಅವರಂತಹ ದಿಗ್ಗಜರ ಅಸರೆ ಜೊತೆಗಿತ್ತು. ಹಾಗೂಹೀಗೂ ಮಾಡಿ, ಜೈಲು – ಕೋರ್ಟಿಗೂ ಅಲೆದಾಡಿ, ಬಯಸಿದಂತೆ ನಾವು ಜನಚಳವಳಿಗಳ ಭಾಗವಾದೆವು. ಆದರೆ ನಮ್ಮ ನಂತರ ಬಂದವರ ಕತೆ ಏನಾಗಿದೆ? ಆದಿವಾಸಿ ಯುವತಿ ಕನ್ಯಾಕುಮಾರಿ 8 ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದಾಳೆ. ಆಕೆಯ ಹಸುಗೂಸು 6 ವರ್ಷಗಳ ಕಾಲ ಹೊರಜಗತ್ತನ್ನೂ ನೋಡದೆ ನಾಲ್ಕು ಗೋಡೆಗಳ ನಡುವೆಯೆ ಬಾಲ್ಯ ಕಳೆದು ಈಗ ಹೊರಬಂದಿದೆ. ಆಕೆಯ ಮೇಲೆ ಪೋಲೀಸರು ಹಾಕಿರುವ ಸುಮಾರು 58 ಕೇಸುಗಳಿವೆ. ಅವು ಮುಗಿಯುವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಮತ್ತೊಬ್ಬ ಸಂಗಾತಿ ಪದ್ಮನಾಭರಿಗೆ ಬೇಲ್‌ ಸಿಕ್ಕಿದೆ. ಅದರೆ ಕಳೆದ 8 ವರ್ಷಗಳಿಂದ ಕೋರ್ಟಿಗೆ ಅಲೆಯುವುದೇ ಅವರ ಕೆಲಸವಾಗಿದೆ. ಪ್ರತಿ ಹಿಯರಿಂಗ್‌ ಸಂದರ್ಭದಲ್ಲಿ, ಲಾಯರ್‌ ಗಳಿಗೆ ಕೊಡಲು ಹಣವಿಲ್ಲದೆ ತಲೆತಗ್ಗಿಸಿ ನಿಲ್ಲುವ ಹಿಂಸೆಯನ್ನು ಅವರು ಅನುಭವಿಸಬೇಕಿದೆ. ಹೆಂಡತಿ – ಮಗುವನ್ನು ಸಾಕಲು ಕಣ್ಣೀರು ಸುರಿಸುತ್ತಿದ್ದಾರೆ. ಕೊಪ್ಪದಲ್ಲಿ ಇರುವ ಅವರ ಮನೆಯನ್ನು ಹೋಗಿ ನೋಡಿ. ಪ್ಲಾಸ್ಟಿಕ್‌ ಶೀಟನ್ನು ಕಟ್ಟಿಕೊಂಡು ಬದುಕುತ್ತಿದ್ದಾರೆ. ಅವರಿಗೆ ಒಂದು ಕಾಲು ಇಲ್ಲ. ಕೃತಕ ಕಾಲು ಕಿತ್ತು ಹೋಗಿದೆ. ಅದನ್ನು ರಿಪೇರಿ ಮಾಡಿಸಲೂ ಅವರಿಗೆ ಶಕ್ತಿ ಇಲ್ಲವಾಗಿದೆ. ಮಿಕ್ಕವರದೂ ಹೆಚ್ಚು ಕಡಿಮೆ ಇದೇ ಕಥೆ. ಮುಖ್ಯವಾಹಿನಿಗೆ ಬಂದವರನ್ನು ಹೀಗೆ ನಡೆಸಿಕೊಂಡರೆ ಒಳಗಿರುವವರು ಹೇಗಾದರೂ ಹೊರಬರಲು ಮನಸ್ಸು ಮಾಡುತ್ತಾರೆ?

ಮೂರನೆಯದಾಗಿ ಅನೇಕ ಜನ ಆದಿವಾಸಿ ಯುವಕರು ನಕ್ಸಲ್‌ ಚಳವಳಿಗೆ ಆಕರ್ಶಿತರಾಗಿ ಸಶಸ್ತ್ರ ದಳಗಳನ್ನು ಸೇರುವಂತಹ ಪರಿಸ್ಥಿತಿ ನಿರ್ಮಿಸಿದವರು ಯಾರು? ಈ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಿದೆ. ರಾಷ್ಟ್ರೀಯ ಉದ್ಯಾನವನದ ಹೆಸರಿನಲ್ಲಿ ಕಾಡಿನಲ್ಲಿರುವ ಜನರನ್ನೆಲ್ಲಾ ಖಾಲಿ ಮಾಡಿಸಲು ಹೊರಟ ಸರ್ಕಾರದ ನೀತಿಯೇ ಇದಕ್ಕೆ ಮೂಲ ಕಾರಣ. ಕಾಡಿನ ಜೊತೆ ಬದುಕುತ್ತಿದ್ದವರನ್ನು ಕಾಡಿನಿಂದ ಪ್ರತ್ಯೇಕಿಸಲು ಹೊರಟಿರಿ. ಅವರ ಪ್ರಜಾತಾಂತ್ರಿಕ ಹೋರಾಟಗಳಿಗೆ ಸೊಪ್ಪು ಹಾಕಲಿಲ್ಲ. ಆದಿವಾಸಿಗಳಿಗೆ ಅರಣ್ಯ ಇಲಾಖೆಯಿಂದ ಸತತ ಬೆದರಿಕೆಗಳು, ಧಮಕಿಗಳು. ಹತಾಶರಾದ, ರೊಚ್ಚಿಗೆದ್ದ ಹಲವು ಯುವಕರು ನಕ್ಸಲ್‌ ದಳಗಳಿಗೆ ಸೇರಲು ನೀವೇ ಕಾರಣರಾದಿರಿ. ವಿಕ್ರಂ ಗೌಡರ ಕಥೆಯನ್ನೇ ತೆಗೆದುಕೊಳ್ಳಿ; ಅವರ ಕುಟುಂಬಕ್ಕೆ ಇರುವುದು 14 ಗುಂಟೆ ಜಮೀನು. ಅಂದರೆ ಅರ್ಧ ಎಕರೆಗಿಂತಲೂ ಕಡಿಮೆ. ಈ ಜಾಗವನ್ನು ಸಹ ಖಾಲಿ ಮಾಡಿಸುವ ನೋಟೀಸ್‌ ಬಂದಿದ್ದರಿಂದ ರಾಷ್ಟ್ರೀಯ ಉದ್ಯೋನ ಯೋಜನೆಯ ವಿರುದ್ಧದ ಹೋರಾಟಕ್ಕೆ ಬಂದವರು ವಿಕ್ರಂ ಗೌಡ. 1998 ರಿಂದ 2004 ರ ತನಕ ಈ ಭಾಗದಲ್ಲಿ ನಡೆದ ಎಲ್ಲಾ ಪ್ರಜಾತಾಂತ್ರಿಕ ಹೋರಾಟದಲ್ಲಿ ಕರ್ನಾಟಕ ವಿಮೋಚನಾ ರಂಗದ ಭಾಗವಾಗಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಅವರನ್ನು, ಅವರ ಕುಟುಂಬದವರನ್ನು ಅರಣ್ಯ ಇಲಾಖೆಯವರು ಮತ್ತು ಪೋಲೀಸರು ಕಾಡಿದ್ದು ಅಷ್ಟಿಷ್ಟಲ್ಲ. 2003 ರಲ್ಲಿ ಹೆಬ್ರಿ ಬಳಿಯೇ ಪಾರ್ವತಿ ಮತ್ತು ಹಾಜಿಮಾ ಹತ್ಯೆ ನಡೆಯಿತು. ಇದಾದ ನಂತರ ಪೋಲೀಸರು ವಿಕ್ರಂ ಗೌಡ ಮತ್ತು ಗೆಳೆಯರ ಬದುಕನ್ನು ನರಕ ಮಾಡಿಟ್ಟರು. ಪೋಲೀಸ್‌ ಠಾಣೆಗೆ ಎಳೆದೊಯ್ದು ಟಾರ್ಚರ್‌ ಸಹ ನೀಡಿದರು. ಏನೇ ಘಟನೆ ನಡೆದರೂ ಎಳೆದೊಯ್ಯುತ್ತಿದ್ದರು. ವಿಚಾರಣೆ ಹೆಸರಲ್ಲಿ ಥಳಿತ, ಅವಮಾನ. ನೆಮ್ಮದಿಯಿಂದ ಬದುಕುವ ದಾರಿಕಾಣದೆ ಅಮಾಯಕ ಆದಿವಾಸಿ ಯುವಕ ಸಶಸ್ತ್ರ ದಳದ ಸಾಮಾನ್ಯ ಸದಸ್ಯನಾದ. ನೀವು ಆತನನ್ನು ದೊಡ್ಡ ನಕ್ಸಲೈಟ್‌ ನಾಯಕ ಎಂಬಂತೆ ಬಿಂಬಿಸಿಬಿಟ್ಟಿರಿ. ಸುಮಾರು ಸುಳ್ಳು ಕೇಸುಗಳನ್ನು ಜಡಿದುಬಿಟ್ಟಿರಿ. ಕೊನೆಗೆ ಕೊಂದೇಬಿಟ್ಟಿರಿ. ಈಗ ಒತ್ತುವರಿ ತೆರವು ಹೆಸರಲ್ಲಿ ಮತ್ತೆ ಅರಣ್ಯವಾಸಿಗಳನ್ನು ಕಾಡತೊಡಗಿದ್ದೀರಿ. ಇದು ಹೀಗೆ ಮುಂದುವರೆದರೆ ಇನ್ನೂ ಕೆಲ ಯುವಕ ಯುವತಿಯರು ಕಾಡಿನ ಪಾಲಾದರೆ ಆಶ್ಚರ್ಯವಿಲ್ಲ. ಅದಕ್ಕೆ ಹೊಣೆ ಸರ್ಕಾರದ ಈ ಹೃದಯಹೀನ, ಬಂಡವಾಳಿಗರ ಪರ, ಜನ ವಿರೋದಿ ನೀತಿಗಳೇ ಕಾರಣವಾಗಲಿವೆ.

ಆತ್ಮಸಾಕ್ಷಿ ಇದ್ದರೆ ಸರ್ಕಾರ ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಲಿ.

ಕ್ರಾಂತಿಯ ಅಪ್ರಯೋಗಿಕ ಹಾದಿ:
ಭೂಮಾಲೀಕ ವ್ಯವಸ್ಥೆಯ ವಿರುದ್ಧ ಸಿಡಿದ ಬಂಡಾಯವೇ ನಕ್ಸಲ್‌ ಚಳವಳಿ. ಚೀನಾದ ಹಾದಿಯಲ್ಲಿ ಸುದೀರ್ಘ ಪ್ರಜಾ ಸಮರ ನಡೆಸಿ ದೇಶದಲ್ಲಿ ಕ್ರಾಂತಿ ಸಾಧಿಸಬೇಕು, ಸಮಾಜವನ್ನು ನವ ಪ್ರಜಾತಾಂತ್ರಿಕ ವ್ಯವಸ್ಥೆಯಾಗಿ ಮಾರ್ಪಡಿಸಬೇಕು ಎಂಬ ದೃಷ್ಟಿಕೋನವನ್ನಿಟ್ಟುಕೊಂಡು ಕಳೆದ 67 ವರ್ಷಗಳಿಂದ ನಕ್ಸಲ್‌ ಚಳವಳಿ ದೇಶದ ಹಲವು ಭಾಗಗಳಲ್ಲಿ ನಡೆಯುತ್ತಿದೆ. ಅನೇಕ ಏಳುಬೀಳುಗಳನ್ನು ಕಂಡಿದೆ, ಅಪಾರ ಸಾವುನೋವಿಗೆ ಗುರಿಯಾಗಿದೆ. ಅನೇಕ ಬಲಿದಾನಗಳನ್ನು ಮಾಡಿದ್ದರೂ ದೇಶದ ಮುಖ್ಯವಾಹಿನಿ ಹೋರಾಟವಾಗುವುದರಲ್ಲಿ ವಿಫಲಗೊಂಡಿದೆ. ಇಂದು ಭಾರತದ ಕೆಲವು ಅರಣ್ಯ ಪ್ರದೇಶಗಳಿಗೆ ಮಾತ್ರ ಸೀಮಿತಗೊಂಡಿದೆ. ದೇಶದಲ್ಲಿ ನಡೆಯುತ್ತಿರುವ ಜನಚಳವಳಿಗಳಿಂದ ಸಂಬಂಧ ಕಳೆದುಕೊಂಡು ಅಕ್ಷರಶಃ ಕಾಡುಪಾಲಾಗಿದೆ. ಇದೊಂದು ವಿಷಾದಮಯ ವಾಸ್ತವವೇ ಹೌದು.

ಕರ್ನಾಟಕದಲ್ಲೂ 1987 ರಿಂದ ಪ್ರಾರಂಭಿಸಿ ಇಲ್ಲಿಯೂ ಸಶಸ್ತ್ರ ಚಳವಳಿ ಬೆಳೆಸಬೇಕು ಎಂಬ ಆಲೋಚನೆಯಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಹೈದ್ರಬಾದ್‌ ಕರ್ನಾಟಕ ಭಾಗದಲ್ಲಿ ನಡೆದ ಮೊದಲ ಪ್ರಯತ್ನಗಳು ಘೋರ ವೈಫಲ್ಯದಲ್ಲಿ ಕೊನೆಗೊಂಡವು. ಅಲ್ಲಿ ನೆಲೆ ನಿಲ್ಲಲು ಸಾಧ್ಯವಾಗದೆ ಮಲೆನಾಡಿಗೆ ಸ್ಥಳಾಂತರಗೊಳ್ಳುವ ತೀರ್ಮಾನವಾದಾಗ “ವೈಫಲ್ಯಳಿಂದ ಪಾಠಗಳಿಂದ ಕಲಿತು ಹೊಸ ಹಾದಿಯ ಆವಿಷ್ಕಾರ ಮಾಡಬೇಕು. ಹಳೆ ಜಾಡಿನಲ್ಲೇ ಸಾಗಬಾರದು” ಎಂದು ನಮ್ಮಲ್ಲಿನ ಹಲವರು ಗಟ್ಟಿಯಾಗಿ ಪ್ರತಿಪಾದಿಸಿದೆವು. “ಇಂದು ಅಗತ್ಯವಿರುವುದು ವಿಶಾಲ ಜನಚಳವಳಿಯನ್ನು ಕಟ್ಟುವ ಅಗತ್ಯ.. ಎಲ್ಲಾ ಹೋರಾಟನಿರತ ಶಕ್ತಿಗಳು ಜೊತೆಗೂಡಿ ಆಳುವವರನ್ನು ಪ್ರಶ್ನಿಸುವ, ಅವರ ಜನ ವಿರೋಧಿ ನಡೆಗಳನ್ನು ಖಂಡಿಸುವ, ಬದಲಾವಣೆಗೆ ದಾರಿ ಮಾಡುವ ಮಹಾಶಕ್ತಿಯಾಗಬೇಕು. ಈ ಕಾಲದ ಕರ್ತವ್ಯಕ್ಕೆ ನಮ್ಮ ಕೊಡುಗೆಯನ್ನೂ ನೀಡಲು ನಾವು ಮುಂದಾಗಬೇಕು” ಎಂದು ಬಲವಾದ ವಾದ ಮಂಡಿಸಿದೆವು. ಆದರೆ ಮಾವೋವಾದಿ ಪಕ್ಷದ ನಾಯಕತ್ವ ಇದಕ್ಕೆ ಒಪ್ಪಲು ತಯಾರಿರಲಿಲ್ಲ. ಯಾಂತ್ರಿಕವಾಗಿ, ಒಮ್ಮುಖವಾಗಿ ಸಶಸ್ತ್ರ ಹೋರಾಟವನ್ನು ಕಟ್ಟುವ ದುಸ್ಸಾಹಸಕ್ಕೆ ಇಳಿಯಿತು. ಈ ಪಥವನ್ನು ಪ್ರತಿಪಾದಿಸಿದ ಸಾಕೇತ್‌ ರಾಜನ್‌ ಅವರನ್ನೂ ಒಳಗೊಂಡತೆ ಅನೇಕ ಅಮೂಲ್ಯ ಸಂಗಾತಿಗಳು ಬಲಿಯಾದರು. ಹೊಸ ಹಾದಿಯನ್ನು ಕಂಡುಕೊಳ್ಳಲೇಬೇಕು ಎಂದು ದೃಡ ತೀರ್ಮಾನ ಮಾಡಿ, ನಾವುಗಳು ಹೊರಬಂದೆವು. ಪ್ರಜಾ ಚಳವಳಿಗಳ ಭಾಗವಾಗಿ ನಮ್ಮ ಸೇವೆಯನ್ನು ಸಂಪೂರ್ಣ ಬದ್ಧತೆಯ ಜೊತೆ ಮಾಡುತ್ತಿದ್ದೇವೆ. ಕರ್ನಾಟಕದ ನಾಗರೀಕ ಸಮಾಜವೂ ನಮ್ಮನ್ನು ಅಷ್ಟೇ ಆದರದ ಜೊತೆ ಬರಮಾಡಿಕೊಂಡಿದೆ, ಜೊತೆಗೂಡಿಸಿಕೊಂಡಿದೆ. ಅದಕ್ಕೆ ನಾವು ರುಣಿಗಳಾಗಿದ್ದೇವೆ. ಇಂದು ಈ ದಾರಿಯೇ ಸರಿಯಾದುದು ಎಂಬುದು ನಮ್ಮ ಈ 10 ವರ್ಷದ ಅನುಭವ ನಿಚ್ಚಳವಾಗಿ ಸಾಬೀತುಪಡಿಸಿದೆ. ಕಲಿಯುವುದು ಸಾಕಷ್ಟಿದೆ, ಕಲಿಯುತ್ತಾ ಕಲಿಯುತ್ತಾ ಮೂಲಭೂತ ಬದಲಾವಣೆಯನ್ನು ಕಂಡುಕೊಳ್ಳಬೇಕಿದೆ

ವಾಸ್ತವದ ಈ ಅರಿವು ನಮಗೆ ಮಾತ್ರವಲ್ಲದೆ ಅನೇಕ ನಕ್ಸಲ್‌ ಪಂಥಗಳಲ್ಲಿ ಬರತೊಡಗಿದೆ. ಸಿದ್ದಸೂತ್ರಗಳನ್ನು ಕೈ ಬಿಟ್ಟು ಹೊಸ ಸಂದರ್ಭಕ್ಕೆ ಹೊರಳಿಕೊಳ್ಳುವ ಪ್ರಯತ್ನವನ್ನು ಎಲ್ಲರೂ ತಮ್ಮ ತಮ್ಮದೇ ರೀತಿಯಲ್ಲಿ ಮಾಡುತ್ತಿದ್ದಾರೆ. ಆದರೆ ಮಾವೋವಾದಿ ಪಕ್ಷ ಮಾತ್ರ ಮೊಂಡಾಗಿ ಹಳೆ ಪಥಕ್ಕೇ ಅಂಟಿಕೊಂಡು ಪೆಟ್ಟು ತಿಂದ ಹಾದಿಯಲ್ಲೇ ಮತ್ತೆ ಮತ್ತೆ ನಡಿಯುತ್ತಿದೆ. ಅದರ ಈ ಮೊಂಡು ನಡೆ ಅನೇಕ ಬದ್ಧತೆಯುಳ್ಳ ಹೋರಾಟಗಾರರ ಬದುಕು ಹಾಗೂ ಸಾಮರ್ಥ್ಯವನ್ನು ನುಂಗಿಹಾಕುತ್ತಿದೆ. ವಿಕ್ರಂ ಗೌಡ ಮತ್ತು ಈ ಹಿಂದಿನ ಹಲವು ಅಮಾಯಕ ಸಂಗಾತಿಗಳ ಸಾವಿಗೆ ಈ ತಪ್ಪು ಕ್ರಾಂತಿಕಾರಿ ಹಾದಿಯೂ ಹೊಣೆಯಾಗಿದೆ.

ಕ್ರಾಂತಿಯ ಗುರಿ ಸರಿ ಇದ್ದರೆ ಸಾಲದು, ದಾರಿಯೂ ಸರಿ ಇರಬೇಕು. ತಪ್ಪು ದಾರಿ ಗುರಿಯ ಕಡೆಗೆ ಕೊಂಡೊಯ್ಯಲು ಸಾಧ್ಯವೇ ಇಲ್ಲ. ದಾರಿಯ ಕುರಿತು ಮರು ಆಲೋಚನೆ ಮಾಡಲೇಬೇಕಾದ್ದು ಪ್ರತಿಯೊಬ್ಬ ಕ್ರಾಂತಿಕಾರಿಯ ಆಧ್ಯ ಕರ್ತವ್ಯವಾಗಿದೆ.

ನಾಗರೀಕರಾಗಿ ನಮ್ಮ ಹೊಣೆ:
ಕಳೆದ 50 ವರ್ಷಗಳಲ್ಲಿ ಕರ್ನಾಟಕವನ್ನು ಅನೇಕ ಪ್ರಖರ ಜನಚಳವಳಿಗಳು ಮುನ್ನಡೆಸಿಕೊಂಡು ಬಂದಿವೆ. ಅದರಲ್ಲಿ ದೊಡ್ಡ ಮಟ್ಟಕ್ಕೆ ಅಲ್ಲದಿದ್ದರೂ ಸಣ್ಣ ಮಟ್ಟಕ್ಕೆ ನಕ್ಸಲ್‌ ಚಳವಳಿಯ ಕೊಡುಗೆಯೂ ಇದೆ. ಇಂದು ಎಲ್ಲಾ ಚಳವಳಿಗಳ ದಾರೆಗಳು ಒಂದುಗೂಡಿ ಸಮಾಜದ ಸಾಕ್ಷಿ ಪ್ರಜ್ಞೆಯಾಗುವ ದಿಕ್ಕಿನತ್ತ ಮುಖಮಾಡಿವೆ. ಒಂದು ದಶಕದ ಹಿಂದೆ ಒಡೆದು ನುಚ್ಚುನೂರಾಗಿದ್ದ ರೈತ, ದಲಿತ, ಕಮ್ಯುನಿಸ್ಟ್‌ ಮುಂತಾದ ಜನ ಚಳವಳಿಗಳು ಆದ ತಪ್ಪನ್ನು ಅರಿತುಕೊಂಡು ಒಗ್ಗಟ್ಟಿನತ್ತ ಮುಖಮಾಡಿವೆ. ಎಲ್ಲಾ ಜನ ವರ್ಗಗಳನ್ನು ಒಟ್ಟುಗೂಡಿಸಿಕೊಂಡು ಮುಂದೆ ಸಾಗುವ ಹೊಸ ಪರಂಪರೆಯನ್ನು ಹುಟ್ಟುಹಾಕುತ್ತಿವೆ. ಕರ್ನಾಟಕದಲ್ಲಿ ನಾಗರೀಕ ಸಂಘಟನೆಗಳು ಜೊತೆಗೂಡಿ ಕೆಲಸ ಮಾಡುತ್ತಿರುವ ಪ್ರಬುದ್ಧ ಬಗೆಯನ್ನು ಇತರೆ ರಾಜ್ಯದ ಜನರು ಮೆಚ್ಚಿ ಅನುಸರಿಸುವಂತಹ ಸಂದರ್ಭ ಏರ್ಪಟ್ಟಿದೆ. ಸಂವಿಧಾನ ವಿರೋಧಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಇಳಿಸುವುದರಲ್ಲೂ, ಕಾಂಗ್ರೆಸ್‌ ಪಕ್ಷದೆ ಬಗ್ಗೆ ವಿಮರ್ಶೆ ಇಟ್ಟುಕೊಳ್ಳುತ್ತಲೇ ಅವರನ್ನು ಅಧಿಕಾರಕ್ಕೆ ತರುವುದರಲ್ಲೂ ಕರ್ನಾಟಕದ ನಾಗರೀಕ ಸಮಾಜದ ಗಮನಾರ್ಹ ಪಾತ್ರವಿದೆ. ಈಗ ಅಧಿಕಾರಕ್ಕೆ ಬಂದವರನ್ನು ಪ್ರಶ್ನಿಸುವ ದೊಡ್ಡ ಜವಬ್ದಾರಿ ನಮ್ಮೆಲ್ಲರದಾಗಿದೆ. ಕೇವಲ ಎನ್ಕೌಂಟರ್‌ ವಿಚಾರಕ್ಕೆ ಮಾತ್ರವಲ್ಲ ಈ ಸರ್ಕಾರ ತೆಗೆದುಕೊಳ್ಳುತ್ತಿರುವ ಜನ ವಿರೋಧಿ ನೀತಿಗಳನ್ನೆಲ್ಲಾ ನಾವು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲೇಬೇಕಿದೆ. ಕರ್ನಾಟಕದ ಪೋಲೀಸ್‌ ಇಲಾಖೆಯಂತೂ ಹೆಚ್ಚಿನ ಪಾಲು ಅಮಿತ್‌ ಶಾ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಗೃಹ ಮಂತ್ರಿಗಾಗಲೀ, ಮುಖ್ಯಮಂತ್ರಿಗಾಗಲೇ ಅದರ ಮೇಲೆ ಹಿಡಿತ ಇಲ್ಲವಾಗಿದೆ. ಈ ವಿಚಾರದಲ್ಲಂತೂ ಬಿಜೆಪಿಗೂ ಕಾಂಗ್ರೆಸ್ಸಿಗೂ ಹೆಚ್ಚು ವೆತ್ಯಾಸವೇ ಇಲ್ಲದಂತಾಗಿದೆ. ಬಿಜೆಪಿಯನ್ನು ತಡೆಯಲೇಬೇಕಿತ್ತು ತಡೆದಿದ್ದೇವೆ. ಈಗ ಕಾಂಗ್ರೆಸ್ಸನ್ನು ತಿದ್ದಲೇಬೇಕು, ತರಾಟೆಗೆ ತೆಗೆದುಕೊಳ್ಳಲೇಬೇಕು. ಈ ಜವಬ್ದಾರಿಯನ್ನೂ ನಾವು ಅಷ್ಟೇ ಹೊಣೆಗಾರಿಕೆಯ ಜೊತೆ ನಿಭಾಯಿಸಬೇಕಿದೆ.

ಕಾಡಿನ ಸಂಗಾತಿಗಳಲ್ಲಿ ಮರುಮನವಿ:
ಸಂಗಾತಿಗಳೇ, ನಿಮ್ಮ ಬದ್ಧತೆಯ ಬಗ್ಗೆ, ನೀವು ಕಾಣುತ್ತಿರುವ ಕ್ರಾಂತಿಯ ಕನಸಿನ ಬಗ್ಗೆ, ನೀವು ಅನುಭವಿಸಿರುವ ಕಷ್ಟ ನಷ್ಟಗಳ ಬಗ್ಗೆ ಅರಿವಿದೆ. ಕಾಳಜಿ ಮತ್ತು ಗೌರವವೂ ಇದೆ. ಈ ಪರಿಸ್ಥಿತಿಯನ್ನು ನಿರ್ಮಿಸಿದ ಸರ್ಕಾರಗಳ ನೀತಿ ಮತ್ತು ನಡತೆಯ ಬಗ್ಗೆ ಅಪಾರ ಆಕ್ರೋಶ ನಮಗೂ ಇದೆ. ಮುಖ್ಯವಾಹಿನಿಗೆ ಬಂದವರನ್ನು ಘನತೆಯಿಂದ ನಡೆಸಿಕೊಂಡಿಲ್ಲ ಎಂಬ ವಾಸ್ತವವೂ ನಮ್ಮ ಕಣ್ಣ ಮುಂದಿದೆ. ಆದರೂ ಇದಕ್ಕಿಂತ ಮಿಗಿಲಾದ ಸಾಮಾಜಿಕ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ನಿಮ್ಮುಗಳ ಮೇಲೂ ಇದೆ. ಎಲ್ಲರೂ ಸೇರಿ ಕರ್ನಾಟಕದಲ್ಲಿ ಪ್ರಬಲವಾದ ಜನಾಂದೋಲನ ಕಟ್ಟೋಣ. ಈ ನಾಡು, ಈ ದೇಶ ನಿಜವಾದ ಅರ್ಥದಲ್ಲಿ ಜನತೆಯದಾಗುವ ತನಕ ಒಡಗೂಡಿ ಅಷ್ಟೇ ಬದ್ಧತೆಯ ಜೊತೆ ಹೋರಾಡೋಣ. ದಯವಿಟ್ಟು ನಮ್ಮ ಈ ಮನವಿಯನ್ನು ಕರ್ನಾಟಕದ ಸಮಸ್ತ ಜನಪರ ಚಳವಳಿಗಳ ಮನವಿ ಎಂದು ಭಾವಿಸಿ. ಎಲ್ಲರೂ ಏನು ಬಯಸುತ್ತಿದ್ದಾರೆ ಎಂಬ ಅರಿವು ನಮಗಿರುವುದರಿಂದ ವಿಶ್ವಾಸದ ಜೊತೆ ಈ ಮಾತನ್ನು ಹೇಳುತ್ತಿದ್ದೇವೆ. ನೀವು ಗಟ್ಟಿ ತೀರ್ಮಾನ ತೆಗೆದುಕೊಳ್ಳುವ ಧೈರ್ಯ ಮಾಡಿದರೆ ಕರ್ನಾಟಕದ ನಾಗರೀಕ ಸಮಾಜ ನಮ್ಮ ಜೊತೆ ನಿಂತಂತೆ ನಿಮ್ಮ ಜೊತೆಯೂ ನಿಲ್ಲುತ್ತದೆ ಎಂಬ ವಿಶ್ವಾಸ ನಮಗಿದೆ. ಇದು ಸಕಾಲ. ದಯವಿಟ್ಟು ಮರು ಆಲೋಚನೆ ಮಾಡಿ ಎಂದು ಮತ್ತೊಮ್ಮೆ ಮನವಿ ಮಾಡುತ್ತಿದ್ದೇವೆ.

ಮಗನಿಗಾಗಿ ಹಂಬಲಿಸಿದ್ದ ಆ ತಾಯಿಗೆ ʼಮಗ ಇನ್ನಿಲ್ಲʼ ಎಂಬ ಸುದ್ದಿ ಕೇಳಿದಾಗ….
ಲೇಖನ: ರಾಜೇಶ್ ರಾವ್ ಪುತ್ತೂರು

ಆ ತಾಯಿಯ ಕಣ್ಣೀರು ಇಂದಿಗೂ ನನ್ನ ಕಣ್ಣ ಮುಂದಿದೆ. ಮಗನಿಗಾಗಿ ಹಂಬಲಿಸಿದ್ದಾಕೆ ‘ಮಗ ಇನ್ನಿಲ್ಲ’ ಎಂಬ ಸುದ್ದಿ ಕೇಳಿ ಅಂದು ಅತ್ತ ರೀತಿ ಇಂದಿಗೂ ನೆನಪಿದೆ. ಜೊತೆಗೆ ತನ್ನ ಮಗ ಯಾಕೆ ಹೀಗಾದ ಎಂದು ಆಕೆ ಹೇಳಿದ ಕಣ್ಣೀರ ಕಥೆ ಇಂದಿಗೂ ಕಿವಿಯಲ್ಲಿ ಕೇಳಿಸುತ್ತಿದೆ. ಮಗ ಬಿಟ್ಟು ಹೋಗಿ ವರ್ಷಗಳಾದ್ರೂ ಇಂದಲ್ಲ ನಾಳೆ ಬರಬಹುದು ಅಂತ ಕಾದಿದ್ದ ಆಕೆಗೆ ಅಂದು ಮಗನ ಸಾವಿನ ಸುದ್ದಿ ಬರ ಸಿಡಿಲಿನಂತೆ ಕೇಳಿಸಿತ್ತು. ಆಕೆಯ ರೋದನ ಆ ಕಾಡಿನ ಇಂಚಿಂಚಿಗೂ ತಲುಪಿ ಅಲ್ಲೇ ಕರಗಿ ಹೋಗಿತ್ತು.

ಆದರೆ ವಿಪರ್ಯಾಸ ಅಂದ್ರೆ, ನಿಜವಾಗಿಯೂ ಅಂದು ಆಕೆಯ ಮಗ ಸತ್ತಿರಲಿಲ್ಲ. ತಪ್ಪು ಮಾಹಿತಿಯೊಂದು ಆಕೆಯ ಮಗ ಇನ್ನಿಲ್ಲ ಎಂಬ ಸುದ್ದಿಯನ್ನು ಆಕೆಯ ಕಿವಿಗೆ ತಲುಪಿಸಿತ್ತು. ಆದರೆ, ಇಂದು ನಿಜವಾಗಿಯೂ ಆಕೆಯ ಮಗ ಎನ್‌ಕೌಂಟರ್ ಗೆ ಬಲಿಯಾಗಿದ್ದಾನೆ. ಆತ ಬೇರಾರು ಅಲ್ಲ ನಿನ್ನೆ ಎನ್‌ಕೌಂಟರ್‌ಗೆ ಬಲಿಯಾದ ವಿಕ್ರಂ ಗೌಡ.

ಅದು 2007 ರ ಕಥೆ.. ಚಿಕ್ಕಮಗಳೂರಿನಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ವಿಕ್ರಂ ಗೌಡ ಸತ್ತು ಹೋದ ಎಂಬ ಸುದ್ದಿ ಪೊಲೀಸ್ ಮೂಲದಿಂದಲೇ ಸಿಕ್ಕಿತ್ತು. ಹೀಗಾಗಿ ಅಂದು ಉಡುಪಿಯಲ್ಲಿದ್ದ ನಾನು ಕ್ಯಾಮೆರಾ ಮೆನ್ ಜೊತೆ ಬೈಕೇರಿ ಕಬ್ಬಿನಾಲೆಯತ್ತ ಪ್ರಯಾಣ ಆರಂಭಿಸಿದ್ದೆವು. ಹೆಬ್ರಿ ದಾಟಿ ಕಬ್ಬಿನಾಲೆ ರಸ್ತೆ ಎಂಟ್ರಿ ಆಗುವಾಗಲೇ ಎಎನ್‌ಎಫ್ ತಂಡ ನಮ್ಮನ್ನು ನಿಲ್ಲಿಸಿ ಮುಂದೆ ಹೋಗುವಂತಿಲ್ಲ ಎಂದು ಸೂಚನೆ ನೀಡಿದ್ರು. ಆ ವೇಳೆಗೆ ಕಾರ್ಕಳ ಪೊಲೀಸ್ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿ ಬಳಿಕ ಹೇಗೋ ಒಪ್ಪಿಸಿ ಕಬ್ಬಿನಾಲೆಯತ್ತ ತೆರಳಿದ್ದೆವು. ನಡುನಡುವೆ ಅಲ್ಲಲ್ಲಿ ಎಎನ್‌ಎಫ್ ಸಿಬ್ಬಂದಿ ನಿಂತಿದ್ದು, ನಕ್ಸಲ್ ತಂಡ ದಾಳಿ ನಡೆಸಬಹುದಾ ಎಂಬ ಆತಂಕ ನಮ್ಮಲ್ಲೂ ಎದುರಾಗಿತ್ತು. ಹಾಗೆ ಕೆಲ ದೂರ ಬೈಕ್ ನಲ್ಲಿ ತೆರಳಿ ಬಳಿಕ ರಸ್ತೆ ಇಲ್ಲದ ಕಾರಣ ಕಾಲ್ನಡಿಗೆಯಲ್ಲಿ ಸುಮಾರು ಮೂರು ಕಿಲೋ ಮೀಟರ್ ಕ್ರಮಿಸಿ ಕಬ್ಬಿನಾಲೆ ತಲುಪಿದ್ದೆವು. ಅಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಲ್ಲಿ, “ವಿಕ್ರಂ ಗೌಡನ ಮನೆ ಎಲ್ಲಿ ಅಣ್ಣಾ?” ಎಂದು ವಿಚಾರಿಸಿದಾಗ ಒಮ್ಮೆ ನಮ್ಮನ್ನು ವಿಚಿತ್ರವಾಗಿ ನೋಡಿ ಬಳಿಕ, “ಇನ್ನೊಂದೆರಡು ಫರ್ಲಾಂಗು ಮುಂದೆ ಹೋಗಿ, ಎಡದಲ್ಲಿ ಹಳ್ಳ ದಾಟಲು ಒಂದು ಹಗ್ಗದ ಸೇತುವೆ ಇದೆ. ಅಲ್ಲಿಂದ ಮುಂದೆ ಒಂದು ಫರ್ಲಾಂಗು ಹೋದ್ರೆ ಅಲ್ಲಿ ಮನೆಗಳಿವೆ ಅಲ್ಲಿ ಕೇಳಿ” ಎಂದು ಹೇಳಿದ್ರು. ಜೊತೆಗೆ “ಅವನ ತಾಯಿ ನಮ್ಮ ದಣಿಯ ತೋಟದಲ್ಲೇ ಕೆಲಸ ಮಾಡೋದು. ನಾನು ಅವರಿಗೆ ಹೇಳ್ತೇನೆ ನೀವು ಹೊರಡಿ” ಎಂದು ನಮ್ಮನ್ನು ಕಳುಹಿಸಿದ್ರು. ಹಾಗೇ ಮುಂದಡಿಯಿಡುತ್ತಿದ್ದಂತೆ ಅವರು ಯಾರನ್ನೋ ಕೂಗಿ ಕರೆದು ನಾವು ಬಂದ ವಿಚಾರ ಯಾರಿಗೋ ತಿಳಿಸಿದ್ದು ನಮಗೆ ಕೇಳಿಸಿತ್ತು. ಅವರು ಹೇಳಿದ ದಾರಿಯಲ್ಲೇ ಸಾಗಿದ ನಮಗೆ ವಿಚಿತ್ರ ಅನಿಸಿದ್ದು ಮಗ ಸತ್ತ ಸುದ್ದಿ ಗೊತ್ತಿದ್ರೂ ತಾಯಿ ಕೆಲಸಕ್ಕೆ ಹೋಗಿದ್ದಾರಾ ಅನ್ನೋದು. ಹಾಗೇ ನಾವಿಬ್ಬರು ಚರ್ಚಿಸುತ್ತಾ ಹೆಜ್ಜೆ ಹಾಕಿ ವಿಕ್ರಂ ಗೌಡನ ಮನೆ(ಗುಡಿಸಲು) ತಲುಪಿದ್ದೆವು. ಆದರೆ ಅಲ್ಲಿನ ವಾತಾವರಣ ಕೂಡ ನಮಗೆ ಅಲ್ಲೇನೂ ಆಗಿಲ್ಲ ಅನ್ನೋ ರೀತಿಯಲ್ಲೇ ಕಾಣಿಸಿತ್ತು.

ಅದೊಂದು ಪುಟ್ಟ ಗುಡಿಸಲಾಗಿದ್ದು ಅಂದಾಜು 200 ಚದರ ಅಡಿ ಇರಬಹುದು ಅಷ್ಟೇ. ಒಂದು ರೀತಿಯಲ್ಲಿ ಜೋಪಡಿ ಮಾದರಿಯಲ್ಲಿ ಬಾಗಿಲುಗಳಿಲ್ಲದ ಒಂದು ಸೂರು ಅದು. ಮನೆಯಲ್ಲಿ ಯಾರೂ ಕಾಣಿಸದ ಕಾರಣ ಸೆಗಣಿ ಸಾರಿಸಿ ಶುಭ್ರವಾಗಿದ್ದ ಮೆಟ್ಟಿಲ ಮೇಲೆ ವಿಶ್ರಾಂತಿ ಪಡೆದೆವು. ಅಷ್ಟರಲ್ಲಿ ಹಿಂಬದಿಯಿಂದ “ಅತ್ತೆ ಇಲ್ಲ.. ಏನು ಬೇಕು” ಎಂಬ ಹೆಣ್ಣಿನ ಧ್ವನಿ ಕೇಳಿಸಿ ತಿರುಗಿದಾಗ ಕಂಕುಳಲ್ಲಿ ಮಗು ಇಟ್ಟುಕೊಂಡ ಸಣ್ಣ ಪ್ರಾಯದ ಮಹಿಳೆ ನಿಂತಿದ್ದರು. ವಿಚಾರಿಸಿದಾಗ ಆಗೆ ವಿಕ್ರಂ ಗೌಡನ ಕಿರಿಯ ಸಹೋದರ‌ನ ಪತ್ನಿ ಅನ್ನೋದು ಗೊತ್ತಾಯ್ತು. ಆದರೆ ಆಕೆಯ ಮುಖದಲ್ಲೂ ಯಾವುದೇ ದುಃಖ ಕಾಣಿಸದೆ ನಾವು ಮತ್ತೆ ಕೇಳಿದ ಪ್ರಶ್ನೆ “ಇದು ವಿಕ್ರಂ ಗೌಡ ಮನೆ ಅಲ್ವಾ?” ಎಂಬುದಾಗಿತ್ತು. ಹೌದು ಅನ್ನೋ ಉತ್ತರ ಆ ಕಡೆಯಿಂದ ಬಂತು. ಇದೇನಪ್ಪಾ! ಅಂತ ಒಂದು ಕಡೆ ಕಸಿವಿಸಿ ಮತ್ತೊಂದು ಕಡೆ ನಕ್ಸಲ್ ವಿಕ್ರಂ ಗೌಡನ ಮನೆ ಅಂತಾ ಇನ್ಯಾರದೋ ಮನೆಗೆ ಬಂದೆವಾ ಅನ್ನೋ ಅನುಮಾನ. ಈ ವೇಳೆ ಪಕ್ಕದ ಮನೆಯವರು ಕೂಡ ಕುತೂಹಲದಿಂದ ನಮ್ಮನ್ನೇ ದಿಟ್ಟಿಸಿ ನೋಡುವುದನ್ನು ಕಂಡು ಒಬ್ಬರನ್ನು ಕರೆದು ವಿಚಾರಿಸಿದಾಗ ನಾವು ಹುಡುಕಿಕೊಂಡು ಬಂದ ಮನೆ ಇದುವೆ ಎಂಬುದು ಖಾತರಿಯಾಗಿತ್ತು. ಇದೇ ವೇಳೆ ಅವರು ಪಿಸು ದನಿಯಲ್ಲಿ, “ಅವರಿಗೆ ಇನ್ನೂ ವಿಚಾರ ಗೊತ್ತಾಗಿಲ್ಲ” ಎಂಬ ಸೂಚನೆ ಕೊಟ್ರು.

ಇಷ್ಟೆಲ್ಲಾ ಘಟನೆಗಳು ನಡೆಯುವ ವೇಳೆಗೆ ವಿಕ್ರಂ ಗೌಡನ ತಾಯಿ ಹಾಜರಾಗಿದ್ದರು. ಅವರು, “ಏನು ಬಂದಿದ್ದು? ಎಂತ ವಿಚಾರ?” ಅಂದಾಗ ನನಗಂತೂ ಮಾತಾಡಲು ಬಾಯಿ ಬಂದಿರಲಿಲ್ಲ. “ಅಮ್ಮ ಸುಮ್ಮನೆ ನಿಮ್ಮ ಮಗನ ಬಗ್ಗೆ ಮಾತಾಡಲು ಬಂದೆ” ಅಂದೆ. ಈ ವೇಳೆಗೆ ಕ್ಯಾಮರಾ ರೆಕಾರ್ಡಿಂಗ್ ಮಾಡಲು ರೆಡಿ ಆಗಿತ್ತು. ಅವರ ಬಳಿ ಮೈಕ್ ಹಿಡಿದು ಮಗ ನಕ್ಸಲ್ ಹೇಗಾದಾ ? ಯಾವಾಗ ಕಾಡಿಗೆ ಹೋದ? ಹೀಗೆ ಹಲವು ಕಥೆಗಳನ್ನ ಕೇಳಿದೆ. ಕಣ್ಣೀರು ಸುರಿಸುತ್ತಾ ಒಂದೊಂದೇ ಕಥೆ ಹೇಳಿದ್ದ ಆ ತಾಯಿ ಹೇಳಿದ ಆ ಒಂದು ಮಾತು “ನಿತ್ಯ ಪೊಲೀಸರು ಬಂದು ಹೊಡೆದು ಬಡಿದ ಕಾರಣವೇ ನನ್ನ ಮಗ ಬೆಟ್ಟ ಹತ್ತಿ ಹೋದ.” ಈ ಮಾತು ಹೇಳಿದಾಗ ವ್ಯವಸ್ಥೆಯ ಬಗ್ಗೆ ಅವರ ಮುಖದಲ್ಲಿನ ಅಸಹನೆ ಮುಚ್ಚಿಡಲಾಗಿರಲಿಲ್ಲ.

ಕಾಡುತ್ಪತ್ತಿ ಸಂಗ್ರಹಿಸಿ ಜೀವನ ಮಾಡುತ್ತಿದ್ದ ವಿಕ್ರಂ ಗೌಡ ಅದಕ್ಕಾಗಿ ಮನೆಯ ಹಿಂಬದಿಯಲ್ಲಿರುವ ದಟ್ಟ ಅರಣ್ಯಕ್ಕೆ ಹೋಗ್ತಾ ಇದ್ದ. ಸಂಗ್ರಹಿಸಿದ ಕಾಡುತ್ಪತ್ತಿಯನ್ನು ಅರಣ್ಯ ಇಲಾಖೆಯ ಮೂಲಕವೇ ಮಾರಾಟ ಮಾಡುತ್ತಿದ್ದ. ಆದರೆ, ಸಾಕೇತ್ ರಾಜನ್‌ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಈತನ ಬಗ್ಗೆ ಅನುಮಾನ ಇತ್ತು. ಬೆಟ್ಟಕ್ಕೆ ಹೋಗುವ ಈತ ನಕ್ಸಲರ ಸಂಪರ್ಕದಲ್ಲಿ ಇದ್ದಾನೆ ಅನ್ನೋ ಅನುಮಾನ ಪೊಲೀಸರಿಗಿತ್ತು. (ಅನುಮಾನ ನಿಜವೋ ಸುಳ್ಳೋ ಬೇರೆ ವಿಚಾರ ) ಇದೇ ಕಾರಣಕ್ಕೆ ಒಂದೆರಡು ಬಾರಿ ವಿಕ್ರಂ ಗೌಡನನ್ನು ಠಾಣೆಗೆ ಎಳೆದೊಯ್ದು ವಿಚಾರಣೆ ಮಾಡಿದ್ದರು. ಆದರೆ ನನಗೇನೂ ಗೊತ್ತಿಲ್ಲ ಅಂದಿದ್ದ ವಿಕ್ರಂ ಗೌಡ ಮತ್ತೆ ತನ್ನ ಕಾಡುತ್ಪತ್ತಿ ಸಂಗ್ರಹದ ಕಾಯಕ ಮುಂದುವರಿಸಿದ್ದ. ಈ ವೇಳೆ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಿದ್ದು ಅದೊಂದು ದಿನ ಪೊಲೀಸರು ಆತನನ್ನು ಎಳೆದೊಯ್ದು ಚೆನ್ನಾಗಿ ವಿಚಾರಿಸಿದ್ರು. ಆ ವಿಚಾರಣೆಯಿಂದ ಸುಧಾರಿಸಲು ವಿಕ್ರಂ ಗೌಡನಿಗೆ ವಾರಗಳೇ ಬೇಕಾಗಿತ್ತು. ಇದಾಗಿ ಮತ್ತೆ ಮನೆಗೆ ಬಂದ ಪೊಲೀಸರು ಮನೆಯಲ್ಲೂ ವಿಚಾರಣೆ ನಡೆಸಿ ಮತ್ತೆ ವಿಕ್ರಂ ಗೌಡನನ್ನು ಎಳೆದೊಯ್ದಿದ್ದರು. ಇದೇ ಪೊಲೀಸರು ನಡೆಸಿದ್ದ ಆತನ ಕೊನೆಯ ವಿಚಾರಣೆಯಾಗಿತ್ತು. ಪೊಲೀಸ್ ಠಾಣೆಯಿಂದ ಬಂದಿದ್ದ ವಿಕ್ರಂ ಗೌಡ ರಾತ್ರೋರಾತ್ರಿ ಮನೆಯಿಂದ ಹೊರಟು ಹಿಂಬದಿಯ ಬೆಟ್ಟ ಏರಿದ್ದ. ಇದಿಷ್ಟೂ ವಿಕ್ರಂ ಗೌಡನ ತಾಯಿ ಅಂದು ನಮ್ಮಲ್ಲಿ ಹೇಳಿದ್ದ ಕಥೆ.

ಇಷ್ಟೆಲ್ಲಾ ಕಥೆ ಕೇಳಿದ‌ ನಮಗೆ ಆ ತಾಯಿ ನಿಮ್ಮ ಮಗ ಪೊಲೀಸರ ಗುಂಡಿಗೆ ಸತ್ತಿದ್ದಾನೆ ಎಂಬ ಸತ್ಯ ಹೇಗೆ ಹೇಳುವುದು ಅನ್ನೋ ಸಂಕಟ. ಪಕ್ಕದ ಗುಡಿಸಲಿನ ಅವರ ಸಂಬಂಧಿ ಮಹಿಳೆ ನೀವು ಹೇಳಿ ಅಂತ ನಮ್ಮಲ್ಲಿ ಮನವಿ ಮಾಡಿದ್ರು. ಆದ್ರೆ, ಹೇಗೆ ಹೇಳೋದು ಅಂತ ಚಿಂತಿಸುವಾಗಲೇ ಇನ್ನೊಂದಷ್ಟು ಪತ್ರಕರ್ತರ ತಂಡ ಅಲ್ಲಿಗೆ ಬಂದು ತಲುಪಿದ್ರು. ಅವರಿಗೂ ಮನೆಯ ಪರಿಸ್ಥಿತಿ ನೋಡಿ ಅಯೋಮಯ. ನನ್ನಲ್ಲಿ ವಿಚಾರಿಸಿದಾಗ ಅವರಿಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಅಂತ ವಿಷಯ ತಿಳಿಸಿದೆ. ಅಷ್ಟರಲ್ಲಿ ಆ ತಾಯಿಗೂ ಒಂದು ಸಣ್ಣ ಅನುಮಾನ ಕಾಡಿ ಬಾಯಿ ಬಿಟ್ಟು, “ನೀವು ಇಷ್ಟು ಜನ ಬಂದಿದ್ದೀರಿ ಅಂದ್ರೆ ನನ್ನ ಮಗನಿಗೆ ಏನೋ ಆಗಿರಬೇಕು..ಏನಾಯ್ತು ?” ಅಂತ ಕೇಳಿಯೇ ಬಿಟ್ಟರು. ಆ ವೇಳೆಗೆ ಹಿರಿಯ ಪತ್ರಕರ್ತರೊಬ್ಬರು ನಿಧಾನವಾಗಿ, “ನಿಮ್ಮ ಮಗನಿಗೆ ಚಿಕ್ಕಮಗಳೂರು ಅರಣ್ಯ ವ್ಯಾಪ್ತಿಯಲ್ಲಿ ಪೊಲೀಸರು ಗುಂಡು ಹೊಡೆದಿದ್ದಾರೆ ಎಂಬ ಮಾಹಿತಿ ಸಿಕ್ಕಿ ಬಂದೆವು” ಎಂದು ವಿಚಾರ ಹೇಳಿದ್ರು. ಈ ಸುದ್ದಿ ಕೇಳಿ ಬರಸಿಡಿಲು ಬಡಿದಂತಾದ ಆ ತಾಯಿ ರೋದನೆ ಇಡೀ ಅರಣ್ಯದ ಮೂಲೆ ಮೂಲೆಗೂ ಕೇಳಿಸಿತು. ಇದಾದ ಬಳಿಕ ಒಂದಷ್ಟು ಜನ ಆಕೆಯನ್ನು ಸಮಾಧಾನಪಡಿಸಿ ವಿಕ್ರಂ ಗೌಡನ ಬಗ್ಗೆ ಒಂದಷ್ಟು ಮಾಹಿತಿ ಕಲೆ ಹಾಕಿಕೊಂಡು ಅಲ್ಲಿಂದ ಹೊರಟರು. ನಾವೂ ಕಬ್ಬಿನಾಲೆಯ ಕಾಡಿನಿಂದ ಹೆಬ್ರಿ ತಲುಪಿ ವಿಕ್ರಂ ಗೌಡನ ಮೃತದೇಹ ಎಲ್ಲಿ ಬರುತ್ತದೆ ಎಂಬ ಮಾಹಿತಿ ಕಲೆ ಹಾಕಲು ಆರಂಭಿಸಿದೆವು. ಅಷ್ಟರಲ್ಲಿ ಪೊಲೀಸ್ ಇಲಾಖೆಯ ಮಾಹಿತಿ ನಮ್ಮನ್ನೇ ಒಮ್ಮೆ ಅಲುಗಾಡಿಸಿ ಬಿಟ್ಟಿತ್ತು. ಅವರ ಮಾಹಿತಿ ಕೇಳಿ ಛೇ..! ಬದುಕಿದ್ದ ಮಗನನ್ನು ಸತ್ತಾ ಎಂದು ಹೇಳಿ ತಾಯಿಯ ಕಣ್ಣೀರು ಹಾಕಿಸಿದೆವಲ್ಲಾ ಅನ್ನೋ ಪಶ್ಚಾತ್ತಾಪ ಕಾಡಿತು.
ಅಸಲಿಗೆ ಅಂದು ಪೊಲೀಸ್ ಎನ್‌ಕೌಂಟರ್ ನಲ್ಲಿ ಹತನಾದವನು ಕುತ್ಲೂರಿನ ದಿನಕರ ಗೌಡ. ಪೊಲೀಸರ ಮೊದಲ ಮಾಹಿತಿಯಲ್ಲಿ ವಿಕ್ರಂ ಗೌಡ ಎಂದು ತಪ್ಪಾಗಿತ್ತು.

ಅಂದು ಸುಳ್ಳಾಗಿದ್ದ ಘಟನೆ ಇಂದು ನಿಜವಾಗಿದೆ. ತನ್ನೂರ ಪಕ್ಕದಲ್ಲೇ ಎನ್‌ಕೌಂಟರ್ ನಲ್ಲಿ ವಿಕ್ರಂ ಗೌಡ ಹತನಾಗಿದ್ದಾನೆ. ಆತನ ತಾಯಿಯ ಪ್ರಕಾರ ಆತನ ಈ ಸ್ಥಿತಿಗೆ ನಮ್ಮ ವ್ಯವಸ್ಥೆಯೇ ಕಾರಣ. ಅಂದು ವಿಚಾರಣೆಯ ಹೆಸರಿನಲ್ಲಿ ನಡೆದ ಹಿಂಸೆ ತಾಯಿ ಮಗನನ್ನು ಬೇರೆ ಮಾಡಿತ್ತು. ಆದರೆ ಬೆಟ್ಟ ಹತ್ತಿ ಬಂದೂಕು ಹಿಡಿದ ವಿಕ್ರಂ ಗೌಡ ಕೂಡ ಮಾಡಿದ್ದು ಸರಿ ಅಂತ ಹೇಳಲಾಗದು. ಆದರೆ, ಆತ ಬಂದೂಕು ಹಿಡಿದರೂ ಆತನ ತಾಯಿಯನ್ನು ಜೀತದಿಂದ ತಪ್ಪಿಸಲಾಗಿರಲಿಲ್ಲ. ಆತನ ತಾಯಿಗೊಂದು ಸೂರು ಮಾಡಲಾಗಿರಲಿಲ್ಲ. ತಮ್ಮನ ಬದುಕಿಗಾದ್ರೂ ಏನಾದ್ರೂ ಮಾಡಿದ್ನಾ ಅಂದ್ರೆ ಅದೂ ಇಲ್ಲ. ಹಾಗಿದ್ರೆ ವಿಕ್ರಂ ಗೌಡ ಕಾಡಲ್ಲಿ ಬಂದೂಕು ಹಿಡಿದು ಸಾಧಿಸಿದ್ದು ಏನನ್ನು ಎಂಬ ಪ್ರಶ್ನೆಗೆ ಉತ್ತರ ಏನಾಗಿರಬಹುದು?

ರಾಜೇಶ್ ರಾವ್ ಪುತ್ತೂರು