Nazma Nazeer – Peepal Media

Breaking News : ಜೆಡಿಎಸ್ ಪಕ್ಷದ ರಾಜ್ಯ ವಕ್ತಾರೆ ನಜ್ಮಾ ನಜೀರ್ ಕಾಂಗ್ರೆಸ್ ಸೇರ್ಪಡೆ
ಜೆಡಿಎಸ್ ಪಕ್ಷದ ನಾಯಕರ ಇಬ್ಬಗೆಯ ನಿಲುವುಗಳು ಹಾಗೂ ಜಾತ್ಯತೀತ ತತ್ವಗಳ ವಿರೋಧಿ ನಡೆಯ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರೆ ನಜ್ಮಾ ನಜೀರ್ ಇಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಜೆಡಿಎಸ್ ಪಕ್ಷ ಯಾವಾಗ ಕೋಮುವಾದಿ ಬಿಜೆಪಿ ಜೊತೆಗೆ ಕೈ ಜೋಡಿಸಿತೋ ಆಗಿಂದಲೇ ಮಾನಸಿಕವಾಗಿ ಜೆಡಿಎಸ್ ನಿಂದ ಹೊರಬಂದಿದ್ದ ನಜ್ಮಾ ನಜೀರ್ ಜೆಡಿಎಸ್ ಪಕ್ಷದ ಯಾವ ವೇದಿಕೆಯಲ್ಲೂ ಕಾಣಿಸಿಕೊಂಡಿರಲಿಲ್ಲ. ತೀರಾ ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲೂ ಜೆಡಿಎಸ್ ಪಕ್ಷದ ನಿಲುವಿನ ಬಗ್ಗೆ ಅಸಮಾಧಾನ ಹೊರಹಾಕಿದ್ದ ನಜ್ಮಾ ನಜೀರ್ ಪಕ್ಷದ ನಾಯಕರ ನಿಲುವುಗಳ ಬಗ್ಗೆ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದರು.

ಸಧ್ಯ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಇನ್ನೂ ಹಲವು ಮುಖಂಡರು ಜೆಡಿಎಸ್ ತೊರೆಯಬಹುದಾದ ಮುನ್ಸೂಚನೆ ಎದುರಾಗಿದೆ.

ಕಲ್ಲಡ್ಕ ಪ್ರಭಾಕರ ಭಟ್ ಭಾಷಣವನ್ನು ಪೂರ್ತಿ ಬರಹ ರೂಪದಲ್ಲಿ ಹೈಕೋರ್ಟ್ ಸಲ್ಲಿಸಿ – ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಹೈಕೋರ್ಟ್ ಕಲಾಪದಲ್ಲಿ ಪ್ರಭಾಕರ್ ಭಟ್ ದ್ವೇಷ ಭಾಷಣ ವಿಡಿಯೋ ಪ್ರದರ್ಶನಕ್ಕೆ ಅವಕಾಶ ಕೊಡಿ – ಎಸ್ ಬಾಲನ್

“ಕಲ್ಲಡ್ಕ ಪ್ರಭಾಕರ ಭಟ್ ಪ್ರಕರಣಕ್ಕೆ ಹೈಕೊರ್ಟ್ ತಡೆಯಾಜ್ಞೆ ಇಲ್ಲ”

ಎಫ್ಐಆರ್ ರದ್ದುಗೊಳಿಸಬೇಕು ಮತ್ತು ವಿಚಾರಣೆಗೆ ತಡೆ ನೀಡಬೇಕು ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ನಡೆಯಿತು. ಕಲ್ಲಡ್ಕ ಪ್ರಭಾಕರ ಭಟ್ ಪರ ಹಿರಿಯ ವಕೀಲ ಅರುಣ್ ಶ್ಯಾಂ ಅವರು ವಾದ ಮಂಡಿಸಿದರು.

“ಎಫ್ಐಆರ್ ನಲ್ಲಿ ಸೆಕ್ಷನ್ ಗಳನ್ನು ಹಾಕಲೆಂದೇ ಭಾಷಣದ ಮಧ್ಯದಿಂದ ಪದಗಳನ್ನು ಹೆಕ್ಕಿ ತೆಗೆಯಲಾಗಿದೆ. ದೂರುದಾರರು ರಾಜಕೀಯ ಕಾರ್ಯಕರ್ತೆಯಾಗಿದ್ದಾರೆ. ಭಾಷಣದ ಕೆಲ ಪದಗಳನ್ನು ಹೆಕ್ಕಿ ತೆಗೆದು ಅದಕ್ಕೆ ಅಪರಾಧದ ಬಣ್ಣ ನೀಡಲಾಗಿದೆ. ಈ ಹಿಂದೆ ಸರ್ಕಾರವೇ ಹೈಕೋರ್ಟ್ ನಲ್ಲಿ ಪ್ರಭಾಕರ ಭಟ್ ಬಂಧನ ಮಾಡಲ್ಲ ಎಂದು ಹೇಳಿದೆ. ಅದರ ಅರ್ಥ, ಪೊಲೀಸರು ರಾಜಕೀಯ ಒತ್ತಡದಿಂದ ಪ್ರಕರಣ ದಾಖಲಿಸಿದ್ದಾರೆ ಎಂಬುದು ಸರ್ಕಾರಕ್ಕೆ ಮನವರಿಕೆ ಆಗಿದೆ. ಸುಳ್ಳು ದೂರನ್ನು ಉದ್ದೇಶಪೂರ್ವಕವಾಗಿ ದಾಖಲಿಸಿದ್ದಾರೆ. ಹಾಗಾಗಿ ತಕ್ಷಣಕ್ಕೆ ತಡೆಯಾಜ್ಞೆ ನೀಡಬೇಕು” ಎಂದು ಕೋರಿಕೊಂಡರು.

ದೂರುದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಎಸ್ ಬಾಲನ್ “ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ಅಬಿಚ್ಯುವಲ್ ಅಫೆಂಡರ್ ಆಗಿದ್ದಾನೆ. ರಾಜ್ಯಾದ್ಯಂತ ದ್ವೇಷ ಭಾಷಣ ಮಾಡುತ್ತಾ ಕೋಮುಗಲಭೆ ಸೃಷ್ಟಿಸಿ ಹಿಂಸಾಚಾರಗಳನ್ನು ಮಾಡಿದ ಇತಿಹಾಸ ಇದೆ. ಈವರೆಗೆ ಈತನ ವಿರುದ್ದ ದಾಖಲಾದ ದೂರುಗಳನ್ನು ಪೀಠ ತರಿಸಿಕೊಳ್ಳಬೇಕು. ಮುಸ್ಲೀಮರಿಗೆ ದಿನಕ್ಕೊಬ್ಬ ಗಂಡ ಎಂದು ಆರೋಪಿ ಹೇಳಿರುವುದು ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನ. ಹಾಗಾಗಿ ರಾಜ್ಯಾದ್ಯಂತ ಮುಸ್ಲಿಂ ಸಮುದಾಯ ಬೀದಿಗಿಳಿದು ಪ್ರತಿಭಟನೆ ನಡೆಸಿದೆ. ಸುಪ್ರಿಂ ಕೋರ್ಟ್ ತೀರ್ಪುಗಳು, ಕಾನೂನುಗಳು ಈ ರೀತಿಯ ದ್ವೇಷ ಭಾಷಣಕ್ಕೆ ಅವಕಾಶ ಕೊಡುವುದಿಲ್ಲ. ಆರೋಪಿ ಪರ ವಕೀಲರು ಭಾಷಣವನ್ನು ಬರಹ ರೂಪದಲ್ಲಿ ಹೈಕೋರ್ಟ್ ಗೆ ಸಲ್ಲಿಸಿದ್ದಾರೆ. ಆ ಕೆಲಸವನ್ನು ಸರ್ಕಾರ ಮಾಡಬೇಕೇ ಹೊರತು ಆರೋಪಿ ಪರ ವಕೀಲರಲ್ಲ. ಸರ್ಕಾರಕ್ಕೆ ಈ ನಿಟ್ಟಿನಲ್ಲಿ ನಿರ್ದೇಶನ ನೀಡಬೇಕು. ಅದಲ್ಲದೇ, ಆರೋಪಿಯ ಪೂರ್ತಿ ಭಾಷಣವನ್ನು ಕಲಾಪದಲ್ಲಿ ಕೇಳಲು ಕೋರ್ಟ್ ನಲ್ಲಿ ವಿಡಿಯೋ ಪ್ರದರ್ಶನಕ್ಕೆ ಅವಕಾಶ ಕೊಡಬೇಕು. ಆರೋಪಿಯ ಪ್ರಕರಣಕ್ಕೆ ತಡೆಯಾಜ್ಞೆ ನೀಡಬಾರದು” ಎಂದು ಎಸ್ ಬಾಲನ್ ಮನವಿ ಮಾಡಿದರು.

“ತಡೆಯಾಜ್ಞೆ ಕೊಡಲು ಆಗಲ್ಲ‌. ಆರೋಪಿಯನ್ನು ಬಂಧಿಸುವುದಿಲ್ಲ ಎಂದು ಸರ್ಕಾರ ಈ ಹಿಂದೆ ನೀಡಿದ ಹೇಳಿಕೆಯಂತೆ ಕೋರ್ಟ್ ನೀಡಿದ ರಿಲೀಫ್ ಮುಂದಿನ ದಿನಾಂಕದವರೆಗೆ ಮುಂದುವರೆಯಲಿದೆ. ಆರೋಪಿಯ ಭಾಷಣದ ಪೂರ್ಣಪಾಠವನ್ನು ಬರಹ ರೂಪದಲ್ಲಿ ಕೋರ್ಟ್ ಗೆ ಸಲ್ಲಿಸಿ” ಎಂದು ನ್ಯಾಯಮೂರ್ತಿಗಳು ಸರ್ಕಾರಕ್ಕೆ ನಿರ್ದೇಶನ ನೀಡಿದರು.

ನವೀನ್ ಸೂರಿಂಜೆ

ಪ್ರಭಾಕರ್ ಭಟ್ ಗೆ ಜಾಮೀನು : ಸರ್ಕಾರಕ್ಕೆ 35 ಲಕ್ಷ ಮುಸ್ಲಿಂ ಹೆಣ್ಣು ಮಕ್ಕಳ ಹಿತ ಬೇಕಿಲ್ಲ – ನಜ್ಮಾ ನಜೀರ್
ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಜೀರ್ ಅವರು ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದಾಖಲಿಸಿದ್ದ ಪ್ರಕರಣದಲ್ಲಿ ಶ್ರೀರಂಗಪಟ್ಟಣ ಕೋರ್ಟ್ ನಿಂದ ಪ್ರಭಾಕರ ಭಟ್ ಗೆ ಜಾಮೀನು ಮಂಜೂರು ಮಾಡಿದೆ. ಶ್ರೀರಂಗಪಟ್ಟಣ 3 ನೇ ಅಪರ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಭಾಕರ ಭಟ್ ಜಾಮೀನಿಗೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

ಮುಸ್ಲಿಮ್‌ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಗುರಿಯಾಗಿದ್ದ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಅವರ ಜಾಮೀನಿನ ತೀರ್ಪಿನ ವಿಚಾರಣೆ ಜನವರಿ 10 ರಂದು ವಿಚಾರಣೆ ಮುಗಿದಿತ್ತು. ಜನವರಿ 17 ಕ್ಕೆ ಅರ್ಜಿ ಕಾಯ್ದಿರಿಸಿದ್ದ ಶ್ರೀರಂಗಪಟ್ಟಣ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ.

“ಸೌಹಾರ್ದ ಸಮಾಜಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಕಂಟಕನಾಗಿದ್ದಾನೆ. ಬೇರೆ ಬೇರೆ ಕೋರ್ಟ್ ಗಳ ತೀರ್ಪುಗಳನ್ನು ಪರಾಮರ್ಶಿಸಿದರೆ ಈತನಿಗೆ ಜಾಮೀನು ನೀಡುವ ಸಾಧ್ಯತೆ ತೀರಾ ಕಡಿಮೆ ಇದೆ. ಅಷ್ಟೆ ಅಲ್ಲದೆ ಹೊಸದಾಗಿ ಜಾರಿಗೆ ತಂದ ನ್ಯಾಯ ಸಂಹಿತೆಗೂ ಸಹ ಪ್ರಭಾಕರ ಭಟ್ಟನಿಗೆ ಜಾಮೀನು ಕೊಡಿಸಲು ದಾರಿಗಳಿಲ್ಲ. ಈತ ಜಾಮೀನು ಪಡೆಯಲು ಸ್ಪಷ್ಟವಾಗಿ ಅನರ್ಹ ಎಂದು ನಜ್ಮಾ ನಜೀರ್ ಪರವಾಗಿ ವಾದ ಮಂಡಿಸಿದ ಬಾಲನ್ ಅಭಿಪ್ರಾಯ ಪಟ್ಟಿದ್ದರು.

ಆದರೆ ಈಗ ಶ್ರೀರಂಗಪಟ್ಟಣ ಕೋರ್ಟ್ ಕಲ್ಲಡ್ಕ ಪ್ರಭಾಕರ ಭಟ್ ಗೆ ಜಾಮೀನು ಮಂಜೂರು ಮಾಡಿದೆ. ಜಾಮೀನಿನ ಹಿನ್ನೆಲೆಯಲ್ಲಿ ಪೀಪಲ್ ಮೀಡಿಯಾ ದೂರುದಾರೆ ನಜ್ಮಾ ನಜೀರ್ ಅವರನ್ನು ಸಂಪರ್ಕಿಸಿದಾಗ “ಯಾವ ಆಧಾರದಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ ಎಂಬ ಬಗ್ಗೆ ನನಗೆ ಸ್ಪಷ್ಟವಾಗಿ ಮಾಹಿತಿ ಸಿಕ್ಕಿಲ್ಲ. ಆದರೆ ಪ್ರಭಾಕರ ಭಟ್ ಗೆ ಜಾಮೀನು ಸಿಗುವ ಬಗ್ಗೆ ಈ ಹಿಂದೆಯೇ ನನಗೆ ಸ್ಪಷ್ಟ ಮಾಹಿತಿ ಇತ್ತು. ಯಾಕೆಂದರೆ ಪ್ರಕರಣದ ರದ್ದತಿಗೆ ಕೋರಿ ಹಾಕಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಖುದ್ದು ರಾಜ್ಯ ಸರ್ಕಾರವೇ ಪ್ರಭಾಕರ ಭಟ್ ಬಂಧಿಸುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ರಾಜ್ಯ ಹೈಕೋರ್ಟ್ ನಲ್ಲೇ ಸರ್ಕಾರ ಈ ರೀತಿಯ ಅಭಿಪ್ರಾಯ ಪಟ್ಟಿದೆ ಎಂದರೆ, ಜಿಲ್ಲಾ ನ್ಯಾಯಾಲಯಗಳೂ ಸಹ ಹೈಕೋರ್ಟ್ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸಬಹುದು ಎಂಬುದು ನನ್ನ ಗಮನಕ್ಕೆ ಬಂದಿತ್ತು” ಎಂದು ತಿಳಿಸಿದ್ದಾರೆ.

ಇದರ ಜೊತೆಗೆ “ಖುದ್ದು ಸರ್ಕಾರಕ್ಕೆ ಈ ಪ್ರಕರಣದ ಗಂಭೀರತೆ ಬಗ್ಗೆ ಸಡಿಲ ಭಾವನೆ ಇರುವಾಗ, ಸುಮಾರು 35 ಲಕ್ಷದಷ್ಟು ಇರುವ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ತೇಜೋವಧೆ ಸರ್ಕಾರಕ್ಕೆ ವಿಚಾರವೇ ಅಲ್ಲ ಎಂದು ಅಭಿಪ್ರಾಯ ಪಟ್ಟಿದೆ ಎಂದರೆ, ಪ್ರಕರಣದಲ್ಲಿ ಪ್ರಭಾಕರ ಭಟ್ ಗೆ ಜಾಮೀನು ಮಂಜೂರಾಗಿದ್ದು ತೀರಾ ಆಶ್ಚರ್ಯವೇನಲ್ಲ. ಹೀಗಾಗಿ ಸಮುದಾಯದ ಹೆಣ್ಣು ಮಕ್ಕಳು ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗೆಗಿನ ನಂಬಿಕೆ ಕಳೆದುಕೊಳ್ಳಬಹುದು” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ನ್ಯಾಯಾಲಯ ಏನು ಕಂಡೀಶನ್ ಹಾಕಿದೆ ಎಂಬುದನ್ನು ನೋಡಬೇಕು.. ಇದಲ್ಲದೇ ದ್ವೇಷ ಭಾಷಣ ಮಾಡಿ ಅಷ್ಟು ಸುಲಭಕ್ಕೆ ಬಚಾವಾಗಲು ಸಾಧ್ಯವಿಲ್ಲ ಎಂಬುದನ್ನು ಈ ಪ್ರಕರಣ ತೋರಿಸಿಕೊಟ್ಟಿದೆ. ಇನ್ನು ಮುಂದೆಯೂ ಇಂತಹ ದ್ವೇಷ ಭಾಷಣ ಮಾಡುವವರ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ. ಈ ಪ್ರಕರಣದ ಬಗ್ಗೆ ಮುಂದೇನು ಮಾಡಬಹುದು ಎಂಬುದನ್ನು ನನ್ನ ವಕೀಲರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ತಿಳಿಸಿದ್ದಾರೆ.

ಪೊಲೀಸ್ ತನಿಖೆಯಲ್ಲಿ ಆರೋಪ ಸಾಬೀತು ಹಿನ್ನಲೆ ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ಚಾರ್ಜ್‌ ಶೀಟ್‌ !
ಇಂದು ಶ್ರೀರಂಗಪಟ್ಟಣ 3 ನೇ ಅಪರ ಜಿಲ್ಲಾ ಸೆಶನ್ ನ್ಯಾಯಾಲಯದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ನ್ಯಾಯಾಲಯ ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ಗೆ ನೀಡಿರುವ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಬೇಕು ಎಂದು ವಾದ ಮಂಡಿಸಿದರು‌.

“ಪ್ರಭಾಕರ ಭಟ್ ಈ ರೀತಿ ಕೃತ್ಯಗಳ ಚಾಳಿ ಹೊಂದಿದ್ದಾನೆ. ದ್ವೇಷ ಭಾಷಣ ಎನ್ನುವುದು ದೇಶ ಒಡೆಯುವ ಕೃತ್ಯ ಎಂದು ಸುಪ್ರಿಂ ಕೋರ್ಟ್ 2021 ಅಕ್ಟೋಬರ್ 21 ರ ಆದೇಶದಲ್ಲಿ ಹೇಳಿದೆ. ಹಾಗಾಗಿ ಇದು ದೇಶದ್ರೋಹದ ಕೃತ್ಯ” ಎಂದು ಪ್ರಾಥಮಿಕ ವಾದ ಮಂಡಿಸಿದರು.
ಕಲ್ಲಡ್ಕ ಪ್ರಭಾಕರ್ ಭಟ್ ಪರವಾಗಿನ ಸೀನಿಯರ್ ವಕೀಲರು ಹಾಜರಾಗದೇ ಇದ್ದಿದ್ದರಿಂದ ಅವರ ಜ್ಯೂನಿಯರ್ ವಕೀಲರು ಸಮಯ ಕೇಳಿದರು.

“ಆರೋಪಿ ವಿರುದ್ದ ಚಾರ್ಜ್ ಶೀಟ್ ಸಿದ್ದವಾಗಿದೆ” ಎಂದು ನ್ಯಾಯಾಧೀಶರು ಎಸ್ ಬಾಲನ್ ಅವರಿಗೆ ತಿಳಿಸಿದರು.

“ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದರೆ ಕಲ್ಲಡ್ಕ ಪ್ರಭಾಕರ್ ಭಟ್ ಮಧ್ಯಂತರ ಜಾಮೀನು ತಕ್ಷಣ ರದ್ದು ಮಾಡಬೇಕು. ದೇಶಕ್ಕಿಂತ ಮಿಗಿಲು ಯಾರೂ ಇಲ್ಲ. ಸುಪ್ರಿಂ ಕೋರ್ಟ್ ದ್ವೇಷ ಭಾಷಣದ ಬಗ್ಗೆ ಆದೇಶ ನೀಡಿದ್ದು ಮಾತ್ರವಲ್ಲ, ತೀಕ್ಷ್ಣವಾದ ಸೂಚನೆಗಳನ್ನು ಎಲ್ಲಾ ರಾಜ್ಯಗಳಿಗೆ ನೀಡಿದೆ” ಎಂದು ಬಾಲನ್ ವಾದ ಮಂಡಿಸಿದರು.

ವಿಚಾರಣೆಯನ್ನು ಜನವರಿ 10 ಕ್ಕೆ ಮುಂದೂಡಿದ್ದು, ಅಂದು ಸಂಜೆ 4 ಗಂಟೆಗೆ ವಿಸ್ತೃತ ವಾದ ನಡೆಯಲಿದೆ‌.

ನವೀನ್ ಸೂರಿಂಜೆ

ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ FIR ದಾಖಲು
ಮುಸ್ಲಿಮರು ಹಾಗೂ ಮುಸ್ಲಿಂ ಮಹಿಳೆಯರ ಬಗ್ಗೆ ಅಸಭ್ಯ ಹಾಗೂ ಅವಹೇಳನಕಾರಿಯಾಗಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ 8 ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಜೆಡಿಎಸ್ ಪಕ್ಷದ ನಾಯಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ಚಿಕ್ಕನೇರಳೆ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ದೂರು ಸಲ್ಲಿಸಿದ್ದು, ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಹನುಮ ಜಯಂತಿ ಆಂಗವಾಗಿ ಆಯೋಜಿಸಿದ್ದ ಹನುಮಮಾಲೆ ಸಂಕೀರ್ತನಾ ಯಾತ್ರೆ ಸಮಾರಂಭದಲ್ಲಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್, “ಮುಸ್ಲಿಂ ಮಹಿಳೆಯರಿಗೆ ದಿನಕ್ಕೆ ಒಬ್ಬ ಗಂಡ. ಅವರಿಗೆ ಪರ್ಮೆನೆಂಟ್ ಗಂಡ ಇರಲಿಲ್ಲ. ಪರ್ಮೆನೆಂಟ್ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ. ಮುಸ್ಲಿಂ ಯುವಕರು ಮಾತ್ರ ಅಲ್ಲ. ಮುಸ್ಲಿಂ ಯುವತಿಯರು ಮೋಸ ಮಾಡುತ್ತಿದ್ದಾರೆ. ಹಿಂದೂ ಯುವಕ ಯುವತಿಯರನ್ನ ಲವ್ ಜಿಹಾದ್ ಮಾಡುತ್ತಿದ್ದಾರೆ. ನಿಮ್ಮಲ್ಲಿ ಯುವತಿ ಯುವಕರು ಇಲ್ಲವೇ?” ಎಂದು ಪ್ರಚೋದಿಸುವ ರೀತಿಯಲ್ಲಿ ಹಾಗೂ ಒಂದು ಸಮುದಾಯವನ್ನು ಅವಹೇಳನ ಮಾಡುವಂತೆ ಮಾತನಾಡಿದ್ದ.

ಸಧ್ಯ ಈ ಹೇಳಿಕೆ ಅಡಿಯಲ್ಲಿ ಈಗ ಜೆಡಿಎಸ್ ನಾಯಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ಪ್ರಭಾಕರ್ ಭಟ್ಟನ ವಿರುದ್ಧ ದೂರು ದಾಖಲಿಸಿದ್ದಾರೆ. ಮಂಡ್ಯದಲ್ಲಿ ಈ ಬಗ್ಗೆ ದೂರು ದಾಖಲಿಸಿದ ನಜ್ಮಾ ನಜೀರ್ ಸೂಕ್ತ ರೀತಿಯಲ್ಲಿ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.

ಪ್ರಭಾಕರ್ ಭಟ್ಟನ ವಿರುದ್ಧ ಐಪಿಸಿ ಕಲಂ 354 – ಮಹಿಳೆಯರ ಗೌರವ, ಘನತೆ, ಸಭ್ಯತೆಗೆ ಧಕ್ಕೆ ಉಂಟು ಮಾಡುವುದು
ಐಪಿಸಿ ಕಲಂ 294 – ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ಮಾತುಗಳನ್ನು ಆಡುವುದು
ಐಪಿಸಿ ಕಲಂ 509 – ಮಹಿಳೆಯ ಘನತೆಗೆ ಧಕ್ಕೆ ತರುವ ಮತ್ತು ಆಕೆಯ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಮಾತಾಡುವುದು, ಧ್ವನಿ ಹೊರಡಿಸುವುದು, ಹಾವ-ಭಾವ, ಭಂಗಿಗಳನ್ನು ಪ್ರದರ್ಶಿಸುವುದು, ವಸ್ತುಗಳನ್ನು ಪ್ರದರ್ಶಿಸುವುದು
ಐಪಿಸಿ 506: ಕ್ರಿಮಿನಲ್ ಬೆದರಿಕೆ
ಐಪಿಸಿ 153ಎ – ಗುಂಪುಗಳ ನಡುವೆ ದ್ವೇಷ ಭಾವನೆ ಸೃಷ್ಟಿಸುವುದು
ಐಪಿಸಿ 295 – ಧಾರ್ಮಿಕ ಸ್ಥಳಗಳಿಗೆ ಹಾನಿ, ಧಕ್ಕೆ ಉಂಟು ಮಾಡುವುದು
ಐಪಿಸಿ 295ಎ- ಅನ್ಯ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು
ಐಪಿಸಿ 298 – ಧಾರ್ಮಿಕ ಭಾವನೆಗಳನ್ನು ನೋಯಿಸುವ ಸಲುವಾಗಿ ಮಾತುಗಳನ್ನಾಡುವುದು
ಅಡಿಯಲ್ಲಿ FiR ದಾಖಲಾಗಿದೆ.