ndtv – Peepal Media

ND TV ಗೆ ರಾಜೀನಾಮೆ ನೀಡಿದ ಹಿರಿಯ ಪತ್ರಕರ್ತ ರವೀಶ್ ಕುಮಾರ್
RRPR ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ND TV ಚಾನೆಲ್‌ನ ಸಂಸ್ಥಾಪಕರು ಮತ್ತು ಪ್ರವರ್ತಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ರಾಜೀನಾಮೆ ನೀಡಿದ ಒಂದು ದಿನದ ನಂತರ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಬುಧವಾರ ND TV ಸಂಸ್ಥೆಗೆ ರಾಜೀನಾಮೆ ನೀಡಿದ್ದಾರೆ. ರವೀಶ್‌ ಕುಮಾರ್‌ ರಾಜೀನಾಮೆಯ ವಿಷಯವು ಎನ್‌ಡಿಟಿವಿಯ ಆಂತರಿಕ ಇಮೇಲ್‌ ಮೂಲಕ ಪ್ರಕಟಗೊಂಡಿದ್ದು ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರ ರಾಜೀನಾಮೆ ಅಂಗೀಕೃತವಾಗಿದೆ. ಈ ಮೂಲಕ ಎನ್‌ಡಿಟಿವಿಯು ಆದಾನಿ ಸಮೂಹದ ತೆಕ್ಕೆಗೆ ಸಂಪೂರ್ಣ ಬಿದ್ದಂತಾಗಿದೆ.

ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರಾದ ರವೀಶ್ ಕುಮಾರ್ ಅವರು ಚಾನೆಲ್‌ನ ಪ್ರಮುಖ ವ್ಯಕ್ತಿಯಾಗಿ ಹೆಸರಾಗಿದ್ದರು. ಚಾನೆಲ್‌ನ ಪ್ರಮುಖ ವಾರದ ದಿನದ ಶೋ ಹಮ್ ಲೋಗ್, ರವೀಶ್ ಕಿ ರಿಪೋರ್ಟ್, ದೇಶ್ ಕಿ ಬಾತ್ ಮತ್ತು ಪ್ರೈಮ್ ಟೈಮ್ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಪತ್ರಿಕೋದ್ಯಮದಲ್ಲಿ ಎರಡು ಬಾರಿ ರಾಮನಾಥ್ ಗೋಯೆಂಕಾ ಎಕ್ಸಲೆನ್ಸ್ ಪ್ರಶಸ್ತಿಯನ್ನು ಸಹ ಪಡೆದ ಕೀರ್ತಿ ಅವರದ್ದಾಗಿದೆ. ಕರ್ನಾಟಕದಲ್ಲಿ ಕೊಡಮಾಡುವ ʼಗೌರಿ ಲಂಕೇಶ್‌ʼಯನ್ನು ಪಡೆದ ಮೊದಲ ಪತ್ರಕರ್ತ ರವೀಶ್‌ ಕುಮಾರ್‌ ಆಗಿದ್ದಾರೆ.

ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್, ವ್ಯಾಪಾರ ಹಿತಾಸಕ್ತಿಗಳನ್ನು ಹೊಂದಿರುವ ಸಂಘಟಿತ ಸಂಸ್ಥೆಯಾಗಿದ್ದು, ಆಗಸ್ಟ್ 23 ರಂದು ಚಾನೆಲ್ NDTV ಲಿಮಿಟೆಡ್‌ನಲ್ಲಿ 29.18 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿತು. ಆ ಸಂದರ್ಭದಲ್ಲೇ ರವೀಶ್ ಕುಮಾರ್ ಅವರ ರಾಜೀನಾಮೆ ವದಂತಿ ಹರಿದಾಡಿತ್ತು. ನವೆಂಬರ್ 28 ಕ್ಕೆ ಅದಾನಿ ಗ್ರೂಪ್ ND TVಯ ಸಂಪೂರ್ಣ 99 ರಷ್ಟು ಷೇರು ಪಡೆದುಕೊಂಡ ನಂತರ ರವೀಶ್ ಕುಮಾರ್ ಅವರ ರಾಜೀನಾಮೆ ನಿರೀಕ್ಷಿತ ಎಂದೇ ಪತ್ರಿಕೋದ್ಯಮ ವಲಯದಲ್ಲಿ ಹರಿದಾಡಿತ್ತು. ನಿರೀಕ್ಷೆಯಂತೆ ರವೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿರುವ ಎನ್‌ಡಿಟಿವಿ ಗ್ರೂಪ್‌ನ ಅಧ್ಯಕ್ಷೆ ಸುಪರ್ಣಾ ಸಿಂಗ್‌ ಅವರು, ʼರವೀಶ್‌ ಕುಮಾರ್‌ ಅವರು ಜನರನ್ನು ಪ್ರಭಾವಿಸಿರುವ ರೀತಿಯಲ್ಲಿ ಪ್ರಭಾವಿಸಿರುವ ಪತ್ರಕರ್ತರು ಬಹಳ ವಿರಳ. ಅವರ ಕುರಿತು ಬಂದಿರುವ ಅಭಿಪ್ರಾಯಗಳ ಮೂಲಕ ಇದು ತಿಳಿಯುತ್ತದೆ. ಅವರು ಹೋದಲ್ಲೆಲ್ಲಾ ಜನ ಸೇರುತ್ತಾರೆ. ಅವರಿಗೆ ದೊರೆತಿರುವ ಪ್ರತಿಷ್ಠಿತ ಪ್ರಶಸ್ತಿಗಳೂ ಇದಕ್ಕೆ ಸಾಕ್ಷಿಯಾಗಿವೆʼ ಎಂದಿದ್ದಾರೆ.

ರವೀಶ್ ಕುಮಾರ್ ರಾಜೀನಾಮೆ ವದಂತಿಗೆ ಮಾರ್ಮಿಕ ಸ್ಪಷ್ಟನೆ
ರಾಷ್ಟ್ರೀಯ ವಾಹಿನಿ ND TV ಯ ಶೇ.29.18 ರಷ್ಟು ಶೇರನ್ನು ಮೋದಿ ಅತ್ಯಾಪ್ತ ಉದ್ಯಮಿ ಗೌತಮ್ ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಂಡ ಸುದ್ದಿಯ ಬೆನ್ನಲ್ಲೇ ವಾಹಿನಿ ಮುಖ್ಯಸ್ಥ ರವೀಶ್ ಕುಮಾರ್ ಅವರ ರಾಜೀನಾಮೆ ಸುದ್ದಿಯೂ ನಿನ್ನೆಯಿಂದ ಹರಿದಾಡಿದೆ. ದೇಶದ ಸುದ್ದಿ ವಾಹಿನಿಗಳನ್ನು ಬಹುತೇಕ ಬಿಜೆಪಿ ಬೆಂಬಲಿತ ಬಲಪಂಥೀಯರು ವಶಪಡಿಸಿಕೊಳ್ಳುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ಅದೇ ರೀತಿಯಲ್ಲಿ ಬಿಜೆಪಿ ಬೆಂಬಲಿತ ಹೊಸ ವಾಹಿನಿಗಳ ಸೃಷ್ಟಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಮೋದಿ ಆಪ್ತ ಉದ್ಯಮಿ ಅದಾನಿ ಒಡೆತನದ ಸಂಸ್ಥೆ ND TV ಯ ಗರಿಷ್ಠ ಶೇರನ್ನು ವಶಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ND TV ಕೂಡಾ ಬಿಜೆಪಿ ಕಪಿಮುಷ್ಟಿಗೆ ಸಿಲುಕಿತಾ ಎಂಬ ಅನುಮಾನದ ಜೊತೆಗೆ ಅದರ ಮುಖ್ಯಸ್ಥರಾದ ರವೀಶ್ ಕುಮಾರ್ ರಾಜೀನಾಮೆ ಸುದ್ದಿ ಸಹ ನಿನ್ನೆಯಿಂದ ಹರಿದಾಡಿತ್ತು.

ಸಧ್ಯ ಈ ವದಂತಿಗೆ ಸ್ವತಃ ರವೀಶ್ ಕುಮಾರ್ ಮಾರ್ಮಿಕವಾಗಿ ಪ್ರತಿಕ್ರಯಿಸಿದ್ದಾರೆ. ಆ ಮೂಲಕ ತನ್ನ ರಾಜೀನಾಮೆ ಸುದ್ದಿ ಕೇವಲ ವದಂತಿ ಅಷ್ಟೆ, ಸತ್ಯ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರವೀಶ್ ಕುಮಾರ್ “ದೇಶದ ಗೌರವಾನ್ವಿತ ಪ್ರಜೆಗಳೆ.. ಪ್ರಧಾನಿ ನರೇಂದ್ರ ಮೋದಿಯವರು ನನಗೆ ಸಂದರ್ಶನ ನೀಡಲು ಒಪ್ಪಿದ್ದಾರೆ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಬಾಂಬೆ ಮಾವಿನ ಹಣ್ಣುಗಳೊಂದಿಗೆ ನನಗೆ ಗೇಟ್ ನಲ್ಲಿ ಕಾಯುತ್ತಿದ್ದಾರೆ ಎಂಬ ವದಂತಿಯಂತೆಯೇ ನನ್ನ ರಾಜೀನಾಮೆ ಅಂಶವಾಗಿದೆ. ಇಂತಿ ನಿಮ್ಮ ರವೀಶ್ ಕುಮಾರ್, ವಿಶ್ವದ ಮೊದಲ ಮತ್ತು ಅತ್ಯಂತ ದುಬಾರಿ ಶೂನ್ಯ TRP ಆಂಕರ್” ಎಂದು ಒಂದೇ ಕಲ್ಲೇಟಿಗೆ ಮೂರು ಹಕ್ಕಿಗಳನ್ನು ಬೀಳಿಸಿದ್ದಾರೆ.

माननीय जनता,

मेरे इस्तीफ़े की बात ठीक उसी तरह अफ़वाह है, जैसे प्रधानमंत्री नरेंद्र मोदी मुझे इंटरव्यू देने के लिए तैयार हो गए हैं और अक्षय कुमार बंबइया आम लेकर गेट पर मेरा इंतज़ार कर रहे हैं।
आपका,
रवीश कुमार,
दुनिया का पहला और सबसे महँगा ज़ीरो टीआरपी ऐंकर
— ravish kumar (@ravishndtv) August 24, 2022

ಸಧ್ಯ ಈ ಟ್ವಿಟ್ ಎಲ್ಲೆಡೆ ವ್ಯಾಪಕವಾಗಿ ವೈರಲ್ ಆಗುತ್ತಿದ್ದು ಕೇವಲ ಎರಡು ಗಂಟೆಗಳಲ್ಲಿ 42 ಸಾವಿರಕ್ಕೂ ಹೆಚ್ಚು ಲೈಕುಗಳು, 9,600 ಕ್ಕೂ ಹೆಚ್ಚು ಮರು ಟ್ವಿಟ್ ಗಳಾಗಿವೆ.

ಸುಮಾರು 10 ವರ್ಷಗಳಿಗೂ ಹೆಚ್ಚು ಸಮಯದಿಂದ ಪ್ರಧಾನಿ ನರೇಂದ್ರ ಮೋದಿ ಇಲ್ಲಿಯವರೆಗೂ ಯಾವುದೇ ಒಂದು ಪತ್ರಿಕಾಗೋಷ್ಠಿ ಎದುರಿಸಿಲ್ಲ. ಒಂದಷ್ಟು Scripted ಸಂದರ್ಶನಗಳನ್ನು ಹೊರತುಪಡಿಸಿ ನರೇಂದ್ರ ಮೋದಿ ನೇರಾನೇರ ಯಾವ ಪತ್ರಕರ್ತರನ್ನೂ ಹತ್ತಿರ ಬಿಟ್ಟುಕೊಳ್ಳದಷ್ಟು ದೂರವಿರಿಸಿದ್ದಾರೆ. ಅಂತಹ ಕೆಲವೇ ಯೋಜಿತ ಸಂದರ್ಶನಗಳಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಡೆಸಿದ ಸಂದರ್ಶನ ಕೂಡಾ ಒಂದು. ಅದರಲ್ಲಿ ಅಂತಹ ಯಾವುದೇ ಗಂಭೀರ ವಿಚಾರಗಳ ಚರ್ಚೆ ನಡೆಸದೇ, ಮೋದಿಯವರ ಇಷ್ಟ, ಕಷ್ಟಗಳ ವಿಚಾರ, ಬಾಲ್ಯದ ದಿನಗಳ ಮೆಲುಕು, ಅವರ ತಿಂಡಿ ತಿನಿಸುಗಳ ಸೇವನೆಯಂತಹ ಕ್ಷುಲ್ಲಕ ವಿಷಯಗಳ ಬಗ್ಗೆ ಚರ್ಚಿಸಿದ್ದರು. ಅದರಲ್ಲಿ ಮೋದಿಯವರು ಬಾಲ್ಯದಲ್ಲಿ ಮಾವಿನ ಹಣ್ಣು ತಿಂದ ಬಗ್ಗೆಯೂ ಚರ್ಚೆ ನಡೆಸಲಾಗಿತ್ತು.

ಈ ಎಲ್ಲಾ ಅಂಶಗಳನ್ನು ಎತ್ತಿ ಪತ್ರಕರ್ತ ರವೀಶ್ ಕುಮಾರ್ ಮಾರ್ಮಿಕವಾಗಿ ಪ್ರತಿಕ್ರಯಿಸಿದ್ದಾರೆ. ಇದೊಂದು ಟ್ವೀಟ್ ಮೋದಿಯವರ ಬಳಿಯೂ ತಲುಪುತ್ತಾ, ತಲುಪಿದರೂ ಇದನ್ನೂ “ಮಾವಿನ ಹಣ್ಣಿನ” ಸಂದರ್ಶನದಷ್ಟೇ ಗಂಭೀರ ಉತ್ತರ ಸಿಗಬಹುದಾ ಎಂಬುದು ಸಧ್ಯದ ಯಕ್ಷಪ್ರಶ್ನೆ.

ಅದಾನಿ ಗ್ರೂಪ್‌ನಿಂದ NDTV ಶೇ.29.18ರಷ್ಟು ಷೇರು ಸ್ವಾಧೀನ
ನವದೆಹಲಿ: ಅದಾನಿ ಗ್ರೂಪ್‌ ಮಾಧ್ಯಮ ಘಟಕದ ಎನ್‌ಡಿಟಿವಿಯ ಬಹುಪಾಲು ಪಾಲನ್ನು ಖರೀದಿಸಲಿದೆ ಎಂದು ತಿಳಿಸಿದೆ.

ಅದಾನಿ ಘಟಕವು ಪರೋಕ್ಷವಾಗಿ ನವದೆಹಲಿ ಟೆಲಿವಿಷನ್‌ ಲಿಮಿಟೆಡ್‌ (NDTV) ನಲ್ಲಿ ಶೇ 29.18 ರಷ್ಟು ಪಾಲನ್ನು ಖರೀದಿಸುತ್ತದೆ ಮತ್ತು ಶೇ 26 ರಷ್ಟನ್ನು ಮುಕ್ತ ಕೊಡುಗೆಯಾಗಿ ಸ್ವೀಕರಿಸುತ್ತದೆ. ಕಂಪನಿಯು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಮುಕ್ತ ಕೊಡುಗೆಯು ರೂ 493 ಕೋಟಿ ಮೌಲ್ಯದ್ದಾಗಿದೆ.

BREAKING NEWS

ADANI Ent announces acquisition of Vishvapradhan Commercial VPCL

Is this indirect acquisition of NDTV?

VPCL gave loans to promoters and right to convert loans
— Yatin Mota (@YatinMota) August 23, 2022

ಇದಕ್ಕೂ ಮುನ್ನ ಮಂಗಳವಾರ ಅದಾನಿ ಅವರು ವಿಶ್ವಪ್ರಧಾನ್‌ ಕಮರ್ಷಿಯಲ್‌ ಪ್ರೈವೇಟ್‌ ಲಿಮಿಟೆಡ್‌ (VCPL)ನು 114 ಕೋಟಿ ರೂ.ಗೆ ಖರೀದಿಸಿರುವುದಾಗಿ ತಿಳಿಸಿದ್ದರು. VCPL, NDTV ಷೇರುದಾರ RRPR ನ ವಾರೆಂಟ್‌ಗಳನ್ನು ಹೊಂದಿದ್ದು, ಆ ವಾರೆಂಟ್‌ಗಳನ್ನು RRPRನ  ಶೇ 99.5 ರಷ್ಟು ಷೇರುಗಳಾಗಿ ಪರಿವರ್ತಿಸಲು ತನ್ನ ಹಕ್ಕುಗಳನ್ನು ಚಲಾಯಿಸಲಿದೆ.