NEET – Peepal Media

ಪಿಯುಸಿ (+12) ಯಲ್ಲಿ ಜೀವಶಾಸ್ತ್ರ ಓದದವರೂ ವೈದ್ಯರಾಗಬಹುದು: ಎಂಎನ್‌ಸಿ ನಿರ್ಧಾರ
ಬೆಂಗಳೂರು: ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತವನ್ನು ಪ್ರಮುಖ ವಿಷಯಗಳಾಗಿ ಓದಿರುವ 10+2 ಪರೀಕ್ಷೆಗಳಲ್ಲಿ ತೇರ್ಗಡೆಯಾದವರು ಈಗ ವೈದ್ಯರಾಗಬಹುದು. ಈ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಯಾವುದಾದರೂ ಮಂಡಳಿಯಿಂದ 10+2 ಹಂತದಲ್ಲಿ ಹೆಚ್ಚುವರಿ ವಿಷಯವಾಗಿ ಜೀವಶಾಸ್ತ್ರ/ಜೈವಿಕ ತಂತ್ರಜ್ಞಾನ Biotechnilogy  ಪರೀಕ್ಷೆಯನ್ನು ತೇರ್ಗಡೆಗೊಳಿಸಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ತಿಳಿಸಿದೆ.

NMC ಹೊರಡಿಸಿರುವ ಸಾರ್ವಜನಿಕ ಪ್ರಕಟಣೆಯಲ್ಲಿ, ಇಂಗ್ಲಿಷ್ ಜೊತೆಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ/ಜೈವಿಕ ತಂತ್ರಜ್ಞಾನದ ಅಗತ್ಯವಿರುವ ವಿಷಯಗಳನ್ನು ಅಧ್ಯಯನ ಮಾಡಿ XII ತರಗತಿಯಲ್ಲಿ ಉತ್ತೀರ್ಣರಾದವರು MBBS ಮತ್ತು BDS ಕೋರ್ಸ್‌ಗಳ ಪ್ರವೇಶ ಪಡೆಯಲು NEET-UG ಪರೀಕ್ಷೆಗ ಎದುರಿಸಲು ಅನುಮತಿ ನೀಡಲಾಗುತ್ತದೆ.

ಅಂತಹ ಅಭ್ಯರ್ಥಿಗಳು ಅರ್ಹತಾ ಪ್ರಮಾಣಪತ್ರದ ಗ್ರಾಂಟ್‌ಗೆ ಅರ್ಹರಾಗಿರುತ್ತಾರೆ. ಅಭ್ಯರ್ಥಿಗೆ NMC ನೀಡುವ ಕಾನೂನು ಪುರಾವೆ, ಅವಳು / ಅವನು ವಿದೇಶದಲ್ಲಿ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳನ್ನು ಮುಂದುವರಿಸಲು ಅರ್ಹರಾಗಿದ್ದಾರೆ ಎಂದು ಪ್ರಮಾಣೀಕರಿಸುತ್ತದೆ.

ಮೊದಲು ಅಭ್ಯರ್ಥಿಯು MBBS ಅಥವಾ BDS ಅಧ್ಯಯನಕ್ಕೆ ಅರ್ಹತೆ ಪಡೆಯಲು ಇಂಗ್ಲಿಷ್‌ನೊಂದಿಗೆ 11 ಮತ್ತು 12ನೇ ತರಗತಿಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ/ಜೈವಿಕ ತಂತ್ರಜ್ಞಾನದ ಎರಡು ವರ್ಷಗಳ ಅಧ್ಯಯನ ಮಾಡಬೇಕಾಗಿತ್ತು. ಎರಡು ವರ್ಷಗಳ ಅಧ್ಯಯನವನ್ನು ಸಾಮಾನ್ಯ ಶಾಲೆಯಿಂದ ಪೂರೈಸಬೇಕಾಗಿತ್ತು, ಯಾವುದೇ ಓಪನ್‌ ಸ್ಕೂಲ್‌ ಅಥವಾ ಸ್ವತಂತ್ರ ಸಭ್ಯರ್ಥಿಗೆ ಸಾಧ್ಯವಿರಲಿಲ್ಲ.

ಹಳೆಯ ನಿಯಮಗಳ ಪ್ರಕಾರ 12ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಜೀವಶಾಸ್ತ್ರ/ಜೈವಿಕ ತಂತ್ರಜ್ಞಾನ ಅಥವಾ ಇತರ ಯಾವುದೇ ಅಗತ್ಯ ವಿಷಯದ ಅಧ್ಯಯನವನ್ನು ಹೆಚ್ಚುವರಿ ವಿಷಯವಾಗಿ ಪೂರೈಸಲು ಸಾಧ್ಯವಿರಲಿಲ್ಲ. ಹೊಸ NMC ಆದೇಶವು ಇದಕ್ಕೆ ಭಿನ್ನವಾಗಿ, ಹೀಗಾಗಿ 11-12ನೇ ತರಗತಿಗಳಲ್ಲಿ ಜೀವಶಾಸ್ತ್ರ/ಜೈವಿಕ ತಂತ್ರಜ್ಞಾನವನ್ನು ಮುಖ್ಯ ವಿಷಯವಾಗಿ ಹೊಂದಿರದಿದ್ದರೂ ವೈದ್ಯಕೀಯ ಪದವಿಯನ್ನು ಪಡೆಯಲು ಬಯಸುವವರಿಗೆ ಅವಕಾಶವನ್ನು ನೀಡಿದೆ.

ಎನ್‌ಎಂಸಿ ಜೂನ್ 14 ರಂದು ಈ ವಿಷಯದ ಬಗ್ಗೆ ಚರ್ಚೆ ನಡೆಸಿದ್ದು, ನಂತರ NEET-UG ಗೆ ಹಾಜರಾಗಲು ಮತ್ತು ವಿದೇಶದಲ್ಲಿ ವೈದ್ಯಕೀಯ ವ್ಯಾಸಂಗ ಮಾಡಲು ಅರ್ಹತಾ ಪ್ರಮಾಣಪತ್ರವನ್ನು ನೀಡುವ ಮಾನದಂಡವನ್ನು ಸಡಿಲಿಸುವ ನಿರ್ಧಾರ ತೆಗೆದುಕೊಂಡಿದೆ .

ಸನಾತನ ಧರ್ಮವು ಜಾತಿಯ ಆಧಾರದ ಮೇಲೆ ದೇಶವನ್ನು ಒಡೆದಿದೆ: ತಮಿಳುನಾಡು ಸ್ಪೀಕರ್
ತಮಿಳುನಾಡು ಅಸೆಂಬ್ಲಿ ಸ್ಪೀಕರ್ ಅಪ್ಪಾವು ಅವರು ಭಾನುವಾರದಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಭಾರತದಲ್ಲಿ ಜಾತಿ ಮತ್ತು ಬ್ರಿಟಿಷ್ ವಸಾಹತುಶಾಹಿ ಇತಿಹಾಸದ ಪಾತ್ರದ ಬಗ್ಗೆ ಗಮನಾರ್ಹವಾದ ಟೀಕೆಗಳನ್ನು ಮಾಡಿದ್ದು, ದೇಶದಲ್ಲಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಲನಶೀಲತೆಯ ಬಗ್ಗೆ ಬಿಸಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ.

ಸನಾತನ ಧರ್ಮದ ಪ್ರತಿಪಾದಕರಾದ ತಮಿಳುನಾಡು ರಾಜ್ಯಪಾಲ ಎನ್‌ ರವಿ ಬ್ರಿಟಿಷ್ ವಸಾಹತುಶಾಹಿ ಭಾರತೀಯ ಸಂಸ್ಕೃತಿಯನ್ನು ನಾಶ ಮಾಡಿದೆ ಎಂದು ಹೇಳಿರುವುದನ್ನು ಅಪ್ಪಾವು ಖಂಡಿಸಿದರು.

ರಾಜ್ಯಪಾಲ ಆರ್.ಎನ್.ರವಿ ಅವರ ನಿಲುವನ್ನು ವಿರೋಧಿಸಿದ ಸ್ಪೀಕರ್ ಅಪ್ಪಾವು, ಬ್ರಿಟಿಷರು 1795ರಲ್ಲಿ, ಐತಿಹಾಸಿಕ ನಿರ್ಬಂಧಗಳನ್ನು ಮುರಿದು ಶೂದ್ರ ಜಾತಿಗಳಿಗೂ ಭೂಮಿಯನ್ನು ಹೊಂದಲು ಅವಕಾಶ ಮಾಡಿಕೊಟ್ಟರು ಎಂದು ಪ್ರತಿಪಾದಿಸಿದರು.

“ಸನಾತನ ಧರ್ಮವು ಈ ದೇಶವನ್ನು ಶ್ರೀಮಂತಗೊಳಿಸಿದೆ ಎಂದು ಅವರು (ಭಾರತೀಯ ಜನತಾ ಪಕ್ಷ) ಹೇಳಿಕೊಳ್ಳುತ್ತಾರೆ, ಆದರೆ ಅವರು ಜಾತಿಯ ಹೆಸರಿನಲ್ಲಿ ತಾರತಮ್ಯ ಮಾಡುತ್ತಿದ್ದರು ಎನ್ನುವುದು ನಿಮಗೆಲ್ಲರಿಗೂ ತಿಳಿದಿರಬೇಕು” ಎಂದು ಅಪ್ಪಾವು ಹೇಳಿದರು.

“ಅಂದು ನಮ್ಮನ್ನು ಮುಖ್ಯವಾಹಿನಿಯಿಂದ ದೂರವಿಡಲಾಗಿತ್ತು, ಮತ್ತು ನಮಗೆ ಯಾವುದೇ ಹಕ್ಕುಗಳನ್ನು ನೀಡದೆ ಗುಲಾಮರಂತೆ ಬದುಕಬೇಕಾದ ಸ್ಥಿತಿಯನ್ನು ಸೃಷ್ಟಿಸಲಾಗಿತ್ತು. ದೇಶದ 7%ರಷ್ಟು ಜನರಿಗೆ ಮಾತ್ರವೇ ಓದಲು ಅವಕಾಶವಿತ್ತು. ಅವರು ಈ ರಾಷ್ಟ್ರವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿ ಉಳಿದವರನ್ನು ಗುಲಾಮಗಿರಿಗೆ ದೂಡಿದ್ದರು,” ಎಂದು ಅವರು ಅವರು ಮುಂದುವರೆದು ಹೇಳಿದರು.

ಪೆರಿಯಾರ್, ಅಣ್ಣಾ ಕರುಣಾನಿಧಿ ಮತ್ತು ಈಗಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ದ್ರಾವಿಡ ಮಾದರಿ ಸರ್ಕಾರವು ರಾಜ್ಯವನ್ನು ಅಭಿವೃದ್ಧಿಪಡಿಸಿದೆ ಎಂದು ವಿಧಾನಸಭೆ ಸ್ಪೀಕರ್ ಹೇಳಿದ್ದಾರೆ.

ಅಪ್ಪಾವು ಅವರು ಭಾರತದ ಪ್ರಮಾಣೀಕೃತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ವಿರುದ್ಧವೂ ನಿಲುವು ತಳೆದರು.

‘‘ನಮ್ಮ ಶಿಕ್ಷಣ ವ್ಯವಸ್ಥೆಗೆ ನೀಟ್ ಅನಗತ್ಯ’’ ಎಂದು ಅವರು ಘೋಷಿಸಿದರು. “ಮುಖ್ಯಮಂತ್ರಿ ಸ್ಟಾಲಿನ್ ಅವರು ದೆಹಲಿಗೆ ಯಾರನ್ನು ಪರಿಗಣಿಸುತ್ತಾರೋ ಅಂತಹ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ NEET ವ್ಯವಸ್ಥೆಯನ್ನು ನಾವು ತೊಡೆದುಹಾಕಬಹುದು ಎನ್ನುವ ನಂಬಿಕೆ ನನಗೆ ಈಗಲೂ ಇದೆ. ಇದು ಪರಿಣಾಮಕಾರಿ ಬದಲಾವಣೆಯನ್ನು ದೇಶದಲ್ಲಿ ತರಬಲ್ಲದು, NEET ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು CM MK ಸ್ಟಾಲಿನ್ ಅವರಿಗೆ ಅವಕಾಶ ನೀಡುತ್ತದೆ” ಎಂದು ಅವರು ಹೇಳಿದರು.

ನೀಟ್- ಪರೀಕ್ಷೆಯಲ್ಲಿ ವಿಫಲ: ವಿದ್ಯಾರ್ಥಿ ಆತ್ಮಹತ್ಯೆ
ತಮಿಳುನಾಡು: ತಿರುವಳ್ಳೂರು ಜಿಲ್ಲೆಯಲ್ಲಿ 19 ವರ್ಷದ ಯುವತಿ ಲಕ್ಷಣ ಶ್ವೇತ ನೀಟ್-ಯುಜಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ವಿಫಲರಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿನ್ನೆ ರಾತ್ರಿ ನೀಟ್-ಯುಜಿ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲಾಗಿದ್ದು, ಪರೀಕ್ಷೆಗಳಲ್ಲಿ ಉತ್ತೀರ್ಣರಾಗದಿರುವ ಕಾರಣ ಆಕೆ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಕಳೆದ ವರ್ಷ 2021 ರ  ನೀಟ್‌ ಪರೀಕ್ಷೆಯಲ್ಲಿ 17 ವರ್ಷದ ಬಾಲಕಿ ಅನಿತ ತೇರ್ಗಡೆಯಾಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಈ ಹಿನ್ನಲೆಯಲ್ಲಿ ತಮಿಳುನಾಡನ್ನು ನೀಟ್‌ ಪರೀಕ್ಷೆಯಿಂದ ಹೊರಗಿಡಬೇಕೆಂದು ಬೇಡಿಕೆ ಇಟ್ಟು ನಡೆಯುತ್ತಿದ್ದ ಹೋರಾಟಗಳಿಗೆ ಈ ಸಾವು ಇನ್ನಷ್ಟು ತೀವ್ರತೆಯನ್ನು ತಂದಿತ್ತು.

ಜೆಇಇ ನೀಟ್ ಪರೀಕ್ಷೆಯನ್ನು ಸಿಯುಇಟಿ ಜೊತೆಗೆ ವೀಲಿನಗೊಳಿಸುವ ಯೋಜನೆ: ಯುಜಿಸಿ
ನವದೆಹಲಿ: ರಾಷ್ಟ್ರೀಯ ಇಂಜಿನಿಯರಿಂಗ್ (JEE) ಮತ್ತು ವೈದ್ಯಕೀಯ (NEET) ಪ್ರವೇಶ ಪರೀಕ್ಷೆಗಳನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET)ಗೆ ವೀಲಿನಗೊಳಿಸುವ ಸಾಧ್ಯತೆಯನ್ನು ಸರ್ಕಾರ ಅನ್ವೇಷಿಸುತ್ತಿದೆ ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ (UGC) ಅಧ್ಯಕ್ಷ ಎಂ. ಜಗದೀಶ್ ಕುಮಾರ್ ಹೇಳಿದ್ದಾರೆ.

ಜೆಇಇ, ನೀಟ್ ಮತ್ತು ಸಿಯುಇಟಿ, ಈ ಮೂರು ಪರೀಕ್ಷೆಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸುವುದರಿಂದ ಅನೇಕ ವಿಭಾಗಗಳಿಗೆ ಸಿಯುಇಟಿ ಅಂಕಗಳನ್ನು ಮಾತ್ರ ಏಕೆ ಬಳಸಬಾರದು ಎಂದು ಯೋಚಿಸುತ್ತಿದ್ದೇವೆ ಎಂದು ಹೇಳಿದರು. ಸಂಯೋಜಿತ ಪ್ರವೇಶ ಪರೀಕ್ಷೆಯನ್ನು ಶೀಘ್ರದಲ್ಲಿಯೇ ಪರಿಚಯಿಸಲು ಸರ್ಕಾರ ಯೋಚಿಸುತ್ತಿದೆ ಎಂದು ಯುಜಿಸಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.