NewsClick – Peepal Media

ನ್ಯೂಸ್‌ಕ್ಲಿಕ್ ಪ್ರಕರಣದಲ್ಲಿ ದೆಹಲಿ ಪೊಲೀಸರಿಗೆ ‘ಸುಪ್ರೀಂ’ ನೋಟಿಸ್
ಹೊಸದೆಹಲಿ: ನ್ಯೂಸ್‌ಕ್ಲಿಕ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ತ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರು ತಮ್ಮ ಇತ್ತೀಚಿನ ಬಂಧನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಅಡಿಯಲ್ಲಿ ದೆಹಲಿ ಪೊಲೀಸರು ತಮ್ಮ ಬಂಧನವನ್ನು ಎತ್ತಿಹಿಡಿದು ದೆಹಲಿ ಹೈಕೋರ್ಟ್ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಬಿಆರ್ ಗವಾರ್ ಮತ್ತು ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠವು ಸೋಮವಾರ ವಿಚಾರಣೆ ನಡೆಸಿತು.

ಹಿರಿಯ ವಕೀಲ ಕಪಿಲ್ ಸಿಬಲ್ ಅವರು ತುರ್ತು ವಿಚಾರಣೆಗಾಗಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ಪ್ರಕರಣವನ್ನು ಉಲ್ಲೇಖಿಸಿದರು. ಸೋಮವಾರ ಪ್ರಕರಣದ ವಿಚಾರಣೆಗೆ ಬಂದಾಗ, ಪೀಠವು ದೆಹಲಿ ಪೊಲೀಸರ ಪ್ರತಿಕ್ರಿಯೆಯನ್ನು ಕೋರಿ ಎರಡು ಅರ್ಜಿಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿತು. ಅರ್ಜಿದಾರರ ಪರವಾಗಿ ಮಾತನಾಡಿದ ಕಪಿಲ್ ಸಿಬಲ್, ‘ಬಂಧನಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಲಿಖಿತವಾಗಿ ನೀಡುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪಂಕಜ್ ಬನ್ಸಾಲ್ ನಿರ್ಲಕ್ಷಿಸಿದ್ದಾರೆ. ಬಂಧನ ಮೆಮೊ ನೋಡಿದರೆ ಏನನ್ನೂ ಒದಗಿಸಿಲ್ಲ ಎನ್ನುವುದು ತಿಳಿಯುತ್ತದೆ’ ಎಂದು ವಾದಿಸಿದರು.

ನ್ಯಾಯಮೂರ್ತಿ ಗವಾರ್ ಮಧ್ಯಪ್ರವೇಶಿಸಿ, ‘ರಜೆ ಮುಗಿದ ತಕ್ಷಣ ಈ ಅರ್ಜಿಯನ್ನು ಕೈಗೆತ್ತಿಕೊಳ್ಳುತ್ತೇವೆ’ ಎಂದರು. ‘ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಆದೇಶಗಳನ್ನು ಕೋರಿರುವ ಅರ್ಜಿಯೂ ಇದೆ. ಅರ್ಜಿದಾರ ಪುರಕಾಯಸ್ಥ ಅವರಿಗೆ 71 ವರ್ಷ ವಯಸ್ಸಾಗಿದೆ’ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. ಮುಖ್ಯ ಅರ್ಜಿಗಳ ಜೊತೆಗೆ ಮಧ್ಯಂತರ ಪರಿಹಾರದ ಅರ್ಜಿಯನ್ನೂ ಅದೇ ದಿನ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.

ಪೊಲೀಸ್ ಬಂಧನವನ್ನು ಪ್ರಶ್ನಿಸಿದ ನ್ಯೂಸ್‌ಕ್ಲಿಕ್ ಮುಖ್ಯಸ್ಥರ ಮನವಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್
ಬೆಂಗಳೂರು,ಅಕ್ಟೋಬರ್.‌13: ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ (Unlawful Activities (Prevention) Act, Live Law- UAPA) ಬಂಧನದಲ್ಲಿರುವ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ. ಈ ಅರ್ಜಿಗೆ ಯಾವುದೇ ಅರ್ಹತೆಯಿಲ್ಲ ಎಂದು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಹೇಳಿದ್ದಾರೆ.

ಸುದ್ದಿ ಪೋರ್ಟಲ್ ನ್ಯೂಸ್‌ಕ್ಲಿಕ್‌ಗೆ ಸಂಬಂಧಿಸಿದ ಹಲವಾರು ಪತ್ರಕರ್ತರ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿ, ಅಕ್ಟೋಬರ್ 3 ರಂದು ಪುರ್ಕಾಯಸ್ಥ ಮತ್ತು ಚಕ್ರವರ್ತಿಯವರನ್ನು ಬಂಧಿಸಲಾಗಿತ್ತು. ಈ ಸುದ್ದಿ ಸಂಸ್ಥೆಯು ಚೀನಾದ ಬಗ್ಗೆ ಪ್ರಚಾರ ಮಾಡಲು ಹಣವನ್ನು ಪಡೆದಿದೆ ಎಂಬ ಆರೋಪಿಸಿ, ಇಬ್ಬರನ್ನೂ ನಗರ ನ್ಯಾಯಾಲಯವು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು.

ಅಕ್ಟೋಬರ್ 6 ರಂದು, ಟ್ರಯಲ್‌ ಕೋರ್ಟ್‌ನ ರಿಮಾಂಡ್ ಆದೇಶದಲ್ಲಿ ಏನೋ ದೋಷವಿದೆ ಎಂದು ಗೆಡೆಲಾ ಹೇಳಿದ್ದರು. ಏಕೆಂದರೆ ಆರೋಪಿಗಳ ವಕೀಲರನ್ನು ಕೇಳದೆ ಅದನ್ನು ಅಂಗೀಕರಿಸಲಾಗಿತ್ತು. ರಿಮಾಂಡ್ ಆದೇಶವು ಆರೋಪಿಯು ಕೌನ್ಸಿಲ್‌ಗೆ ಅರ್ಹನೆಂದು ಹೇಳುವ ದೆಹಲಿ ಹೈಕೋರ್ಟ್ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಪುರ್ಕಾಯಸ್ಥ ಅವರ ವಕೀಲರು ನ್ಯಾಯಾಧೀಶರಿಗೆ ತಿಳಿಸಿದ್ದರು. ಆದರೆ, ಆಗಾಗಲೇ ಅವರಿಗೆ ಮಧ್ಯಂತರ ಬೇಲ್ ನೀಡಲು ಹೈಕೋರ್ಟ್ ನಿರಾಕರಿಸಿತ್ತು.

ಪೊಲೀಸ್ ಬಂಧನದ ನಂತರ ಪುರಕಾಯಸ್ಥ ಮತ್ತು ಚಕ್ರವರ್ತಿಯವರನ್ನು 10 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.

ಬಾರ್ ಆಂಡ್‌ ಬೆಂಚ್‌ ವರದಿಯ ಪ್ರಕಾರ, ತಮ್ಮ ವಿರುದ್ಧದ ಎಫ್‌ಐಆರ್‌ ಅನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಪುರಕಾಯಸ್ಥ ಮತ್ತು ಚಕ್ರವರ್ತಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಇನ್ನೂ ವಿಚಾರಣೆ ನಡೆಸಬೇಕಿದೆ.

ಆಗಸ್ಟ್ 17 ರಂದು ದಾಖಲಾದ ಎಫ್‌ಐಆರ್‌ನಲ್ಲಿ, ನ್ಯೂಸ್‌ಕ್ಲಿಕ್ ಭಾರತದ ಸಾರ್ವಭೌಮತೆಗೆ ಅಡ್ಡಿಪಡಿಸಲು “ಮತ್ತೆ ಮತ್ತೆ, ಕದ್ದುಮುಚ್ಚಿ- circuitous and camouflaged manner” ಚೀನಾದಿಂದ ಹಣವನ್ನು ತೆಗೆದುಕೊಂಡಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ದಿ ನ್ಯೂಯಾರ್ಕ್ ಟೈಮ್ಸ್ ಆಗಸ್ಟ್ 5 ರಂದು ಮಾಡಿದ ವರದಿಯಲ್ಲಿ ಭಾರತೀಯ ಸುದ್ದಿ ವೆಬ್‌ಸೈಟ್ ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ ಹಣವನ್ನು ಪಡೆದಿದೆ ಎಂದು ಉಲ್ಲೇಖಿಸಿದ ನಂತರ ಈ ಪ್ರಕರಣವನ್ನು ದಾಖಲಿಸಲಾಗಿದೆ. ಎಫ್‌ಐಆರ್ ಸಿಂಘಮ್ ಅವರನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಪ್ರಚಾರ ವಿಭಾಗದ ಸಕ್ರಿಯ ಸದಸ್ಯ ಎಂದು ಉಲ್ಲೇಖಿಸಲಾಗಿದೆ.

ಪತ್ರಿಕಾರಂಗ ಭಯೋತ್ಪಾದನೆಯಲ್ಲ: ಮಾಧ್ಯಮ ಸಂಸ್ಥೆಗಳಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಪತ್ರ
ಬೆಂಗಳೂರು,ಅಕ್ಟೋಬರ್.‌5: “ಪತ್ರಿಕೋದ್ಯಮವನ್ನು ‘ಭಯೋತ್ಪಾದನೆ’ಯೆಂಬಂತೆ ಪರಿಗಣಿಸಲು ಸಾಧ್ಯವೇ ಇಲ್ಲ. ಪರಿಸ್ಥಿತಿ ಕೈಮೀರುವ ಮೊದಲು ಎಚ್ಚೆತ್ತುಕೊಂಡು ಮಧ್ಯಸ್ಥಿಕೆ ವಹಿಸಿ,” ಎಂದು ಭಾರತದ ಹದಿನಾರು ಮಾಧ್ಯಮ ಸಂಸ್ಥೆಗಳು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ರವರಿಗೆ ಬುಧವಾರ ಪತ್ರ ಬರೆದಿವೆ.

ನ್ಯೂಸ್‌ಕ್ಲಿಕ್ ನ್ಯೂಸ್ ಪೋರ್ಟಲ್‌ಗೆ ಸಂಬಂಧಪಟ್ಟ ಪತ್ರಕರ್ತರ ಮನೆಗಳ ಮೇಲೆ ದೆಹಲಿ ಪೊಲೀಸರು ದಾಳಿ ಇಟ್ಟು ಅವರ  ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು, ಇತರ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಪಡಿಸಿಕೊಂಡಿದ್ದರು. ಈ ಹಿನ್ನಲೆಯನ್ನು ಸಿಜೆಐ ಅವರಿಗೆ ಬರೆದಿರುವ ಪತ್ರದಲ್ಲಿ ಪತ್ರಕರ್ತರನ್ನು ಪ್ರಶ್ನಿಸುವ ಮಾನದಂಡವನ್ನು ರೂಪಿಸಲು ಮತ್ತು ಮಧ್ಯಸ್ಥಿಕೆ ವಹಿಸಲು ಕೇಳಿಕೊಳ್ಳಲಾಗಿದೆ. ಮಾತ್ರವಲ್ಲ, ವಶಪಡಿಸಿಕೊಂಡಿರುವ ಮೊಬೈಲ್ ಸೇರಿದಂತೆ ಇಲೆಕ್ಟ್ರಾನಿಕ್‌ ಉಪಕರಣಗಳಿಂದ ಈ ಪ್ರಕರಣಕ್ಕೆ ಸಂಬಂಧಿಸದೆ, ಯಾವುದೇ ಬೇರೆ ರೀತಿಯ ಉದ್ದೇಶಗಳಿಗೆ ಬಳಕೆಯಾಗದಂತೆ ಖಚಿತಪಡಿಸಲು ಮಾರ್ಗಸೂಚಿಯನ್ನು ರೂಪಿಸುವಂತೆ ವಿನಂತಿಸಲಾಗಿದೆ.

ಪತ್ರದಲ್ಲಿ “ಕಾನೂನನ್ನು ಮೀರಿ ಅಥವಾ ಉದ್ದೇಶಪೂರ್ವಕವಾಗಿ ತಮ್ಮ  ಪತ್ರಿಕಾರಂಗದ ವೃತ್ತಿಗಾಗಿ ಪತ್ರಕರ್ತರ ವಿರುದ್ಧ ಅಸಮರ್ಪಕ ತನಿಖೆ ಮಾಡುವ ಮೂಲಕ ನ್ಯಾಯಾಲಯವನ್ನು ದಾರಿತಪ್ಪಿಸುವ ಸರ್ಕಾರಿ ಏಜೆನ್ಸಿಗಳು ಮತ್ತು ಅಧಿಕಾರಿಗಳ ಹೊಣೆಗಾರಿಕೆಯನ್ನು ಖಚಿತಪಡಿಸಲು ಮಾರ್ಗಗಳನ್ನು ಕಂಡುಕೊಳ್ಳುವಂತೆ,” ಈ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ: ನ್ಯೂಸ್‌ಕ್ಲಿಕ್ ಪತ್ರಕರ್ತರ ಮನೆಗಳ ಮೇಲೆ ದಾಳಿ: ಮಾಧ್ಯಮಗಳ ಬಾಯಿ ಮುಚ್ಚಿಸುವ ಯತ್ನ – ಎಡಿಟರ್ಸ್‌ ಗಿಲ್ಡ್‌ ಕಳವಳ

“ಮಾಧ್ಯಮಗಳ ವಿರುದ್ಧ ತನಿಖಾ ಸಂಸ್ಥೆಗಳ  ದಮನಕಾರಿ ನಡೆಯನ್ನು ಕೊನೆಗೊಳಿಸಲು ನ್ಯಾಯಾಂಗವು ಮಧ್ಯಪ್ರವೇಶಿಸಬೇಕು,” ಎರಡು ವರ್ಷಗಳ ಜೈಲು ವಾಸದ ನಂತರ ಜಾಮೀನು ಮೂಲಕ ಹೊರಬಂದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್, ಹಾಗೆಯೇ ಯುಎಪಿಎ ಪ್ರಕರಣದಲ್ಲಿ ಕಸ್ಟಡಿಯಲ್ಲಿದ್ದ ಫಾದರ್ ಸ್ಟಾನ್ ಸ್ವಾಮಿಯ ಸಾವಿನ ಪ್ರಕರಣವನ್ನು ಕೂಡ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಕ್ಟೋಬರ್ 3 ರಂದು ಮುಂಜಾನೆಯಿಂದ ದೆಹಲಿ ಪೊಲೀಸರು ನ್ಯೂಸ್‌ಕ್ಲಿಕ್‌ಗೆ ಸಂಬಂಧಪಟ್ಟ 46 ಪತ್ರಕರ್ತರು, ಸಂಪಾದಕರು, ಬರಹಗಾರರು ಮನೆಗಳ ಮೇಲೆ ದಾಳಿ ನಡೆಸಿ ಅವರಿಂದ ಮೊಬೈಲ್‌, ಲ್ಯಾಪ್‌ಟಾಪ್‌ ಸೇರಿದಂತೆ ಇತರ ಎಲೆಕ್ಟ್ರಾನಿಕ್‌ ಉಪಕರಣಗಳನ್ನು, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.  ನ್ಯೂಸ್‌ಕ್ಲಿಕ್ ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿಯವರನ್ನು ಬಂಧಿಸಿ ಪೋರ್ಟಲ್‌ ಮೇಲೆ ಕರಾಳ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ (Unlawful Activities (Prevention) Act -UAPA)  ಅಡಿಯಲ್ಲಿ ಮಂಗಳವಾರ ಹೊಸ ಕೇಸ್‌ ದಾಖಲಿಸಿದ್ದಾರೆ.

“ಲ್ಯಾಪ್‌ಟಾಪ್‌ಗಳು ಮತ್ತು ಫೋನ್‌ಗಳು ಇನ್ನು ಅಧಿಕೃತ ವ್ಯವಹಾರವನ್ನು ಮಾತ್ರ ನಡೆಸಲು ಇರುವ  ಸಾಧನಗಳಲ್ಲ. ಇವು ನಮ್ಮ ಜೀವನದ ಭಾಗವಾಗಿವೆ.  ಪ್ರಮುಖ ವೈಯಕ್ತಿಕ ಮಾಹಿತಿಯನ್ನು ಇವು ಒಳಗೊಂಡಿರುತ್ತವೆ. ಅವುಗಳಲ್ಲಿ ಮಾತುಕತೆಯಿಂದ ಹಿಡಿದು ಛಾಯಾಚಿತ್ರಗಳವರೆಗೆ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಭಾಷಣೆಗಳು ಎಲ್ಲಾ ಇರುತ್ತವೆ. ಹೀಗಾಗಿ ಇವುಗಳಿಗೆ ತನಿಖಾ ಸಂಸ್ಥೆಗಳಿಗೆ ಆಕ್ಸೆಸ್‌ ಸಿಗಬೇಕು ಎಂಬುದು ಸಮರ್ಥನೀಯವಲ್ಲ. ಡೇಟಾದ ಸಂರಕ್ಷಣೆ ಖಚಿತವಾಗಬೇಕು,” ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ತನಿಖೆಯ ಸಂದರ್ಭದಲ್ಲಿ ರೈತ ಹೋರಾಟ, ಕೋವಿಡ್ ಸಾಂಕ್ರಾಮಿಕವನ್ನು ಸರ್ಕಾರ ನಿರ್ವಹಿಸಿದ ಬಗ್ಗೆ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಪ್ರತಿಭಟನೆ ಬಗ್ಗೆ ಮಾಡಿದ ವರದಿಗಳ ಬಗ್ಗೆ ಪ್ರಶ್ನಿಸಲಾಗಿದೆ.

ಮಾಧ್ಯಮಗಳಿಗೆ ಒಡ್ಡುವ ಬೆದರಿಕೆ “ಪ್ರಜಾಪ್ರಭುತ್ವದ ಸಂರಚನೆಯ ಮೇಲೆ ಪರಿಣಾಮ ಬೀರುತ್ತದೆ” ಎಂದು ಈ ಪತ್ರದಲ್ಲಿ ಪ್ರತಿಪಾದಿಲಾಗಿದೆ. ಪತ್ರಕರ್ತರನ್ನು ಕೇಂದ್ರೀಕೃತ ಕ್ರಿಮಿನಲ್ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಇದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವ್ಯವಹಾರಗಳ ಪ್ರಸಾರವನ್ನು ಸರ್ಕಾರವು ನಿರಾಕರಿಸುವುದು, ಪ್ರತೀಕಾರ ಹಾಗೂ ಬೆದರಿಕೆಯ ಮೂಲಕ ಮಾಧ್ಯಮಗಳನ್ನು ತಣ್ಣಗಾಗಿಸುವ ಪ್ರಯತ್ನವಾಗಿದೆ ಎಂದು, ಸಿಜೆಐಯವರ ಮಧ್ಯೆ ಪ್ರವೇಶಿಸಿ ಈ ಬಿಕ್ಕಟ್ಟನ್ನು ನಿವಾರಿಸುವಂತೆ ಪತ್ರದಲ್ಲಿ ಕೇಳಿಕೊಳ್ಳಲಾಗಿದೆ

ಪತ್ರಕ್ಕೆ ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಶನ್, ಇಂಡಿಯನ್ ವುಮೆನ್ಸ್ ಪ್ರೆಸ್ ಕಾರ್ಪ್ಸ್, ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್, ನೆಟ್‌ವರ್ಕ್ ಆಫ್ ವುಮೆನ್ ಇನ್ ಮೀಡಿಯಾ (ಇಂಡಿಯಾ), ಚಂಡೀಗಢ ಪ್ರೆಸ್ ಕ್ಲಬ್, ನ್ಯಾಷನಲ್ ಅಲೈಯನ್ಸ್ ಆಫ್ ಜರ್ನಲಿಸ್ಟ್ಸ್, ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್‌, ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್, ಬೃಹನ್ಮುಂಬೈ ಯೂನಿಯನ್ ಆಫ್ ಜರ್ನಲಿಸ್ಟ್ಸ್, ಫ್ರೀ ಸ್ಪೀಚ್ ಕಲೆಕ್ಟಿವ್ ಮುಂಬೈ, ಮುಂಬೈ ಪ್ರೆಸ್ ಕ್ಲಬ್, ಅರುಣಾಚಲ ಪ್ರದೇಶ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್, ಪ್ರೆಸ್ ಅಸೋಸಿಯೇಷನ್, ಗುವಾಹಟಿ ಪ್ರೆಸ್ ಕ್ಲಬ್, ಮತ್ತು ಇಂಡಿಯನ್ ಜರ್ನಲಿಸ್ಟ್ಸ್ ಯೂನಿಯನ್ ಸಹಿ ಹಾಕಿವೆ.

ನ್ಯೂಸ್‌ಕ್ಲಿಕ್‌ ಮೇಲೆ ಮುಂದುವರೆದ ದಾಳಿ: ದೆಹಲಿ ಪೊಲೀಸರಿಂದ ಸಂಪಾದಕ ಪ್ರಬೀರ್ ಬಂಧನ

ಸಾಲು ಸಾಲು ಪತ್ರಕರ್ತರ ಮನೆಗಳ ಮೇಲೆ ದಾಳಿ-ಬಂಧನ! ಏನಾಗುತ್ತಿದೆ?
ಬೆಂಗಳೂರು,ಅಕ್ಟೋಬರ್.‌4: ನ್ಯೂಸ್‌ಕ್ಲಿಕ್ ಸುದ್ದಿ ಪೋರ್ಟಲ್‌ನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ನಿರ್ವಾಹಕ ಅಮಿತ್ಚ ಕ್ರವರ್ತಿಯವರನ್ನು ದೆಹಲಿ ಪೊಲೀಸರು ಅಕ್ಟೋಬರ್ 3, ಮಂಗಳವಾರದಂದು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (Unlawful Activities (Prevention) Act – UAPA ) ಅಡಿಯಲ್ಲಿ ಬಂಧಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಸುದ್ದಿವಾಹಿನಿಯ ಜೊತೆಗೆ ಸಂಬಂಧವನ್ನು ಹೊಂದಿರುವ ಸುಮಾರು 50 ಪತ್ರಕರ್ತರ ಮನೆಗಳ ಮೇಲೆ ಮುಂಜಾನೆಯಿಂದಲೇ ದಾಳಿ ನಡೆಸಿ ಅವರ ಫೋನ್‌, ಲ್ಯಾಪ್‌ಟಾಪ್‌, ಡಿವಿಡಿ ಮೊದಲಾದ ಎಲೆಕ್ಟ್ರಾನಿಕ್ ಉಪಕರಣಗಳೂ, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಒಟ್ಟು 37 ಪುರುಷ ಪತ್ರಕರ್ತರು ಮತ್ತು ಒಂಬತ್ತು ಮಹಿಳಾ ಪತ್ರಕರ್ತರ ಮೇಲೆ ಎಫ್‌ಐಆರ್ ಸಂಖ್ಯೆ 224/2023 ಯ ಸಂಬಂಧಿತವಾಗಿ ದಾಳಿ ನಡೆಸಿ ವಿಚಾರಣೆ ನಡೆಸಲಾಗಿದ್ದು, ರಾತ್ರಿ 8:30 ಹೊತ್ತಿಗೆ ಪುರುಷ ಪತ್ರಕರ್ತರನ್ನು ದೆಹಲಿ ಪೊಲೀಸ್ ವಿಶೇಷ ಕಚೇರಿಗೆ ಕರೆದೊಯ್ಯಲಾಗಿದೆ ಮತ್ತು ಮಹಿಳಾ ಪತ್ರಕರ್ತರನ್ನು ಮನೆಗಳಲ್ಲಿಯೇ ವಿಚಾರಣೆ ನಡೆಸಲಾಗಿದೆ. ಪುರಕಾಯಸ್ಥ ಮತ್ತು ಅಮಿತ್ ಚಕ್ರವರ್ತಿಯನ್ನು ಹೊರತು ಪಡಿಸಿ ಇತರರನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ನ್ಯೂಸ್‌ಕ್ಲಿಕ್‌ ಮೇಲೆ ಮುಂದುವರೆದ ದಾಳಿ: ದೆಹಲಿ ಪೊಲೀಸರಿಂದ ಸಂಪಾದಕ ಪ್ರಬೀರ್ ಬಂಧನ

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಂತೆ ಆಗಸ್ಟ್ 17, 2023 ರಂದು ನ್ಯೂಸ್‌ಕ್ಲಿಕ್‌ ಮೇಲೆ ಕರಾಳ UAPA ಯ ಸೆಕ್ಷನ್‌  (13, 16, 17, 18, ಮತ್ತು 22) ಹಾಗೂ ಭಾರತೀಯ ದಂಡ ಸಂಹಿತೆಯ 153(ಎ) (ದ್ವೇಷ ಉತ್ತೇಜಿಸುವುದು) ಧರ್ಮ, ಜನಾಂಗ, ಜನ್ಮಸ್ಥಳ, ಪ್ರದೇಶ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ಸಾಮರಸ್ಯ ಕದಡುವುದು ಮತ್ತು 120 (ಬಿ) (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ದೂರು ದಾಖಲಾಗಿದೆ. ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಅಗಸ್ಟ್‌ನಲ್ಲಿ ಪ್ರಕಟವಾಗಿರುವ ತನಿಖಾ ವರದಿಯ ಆಧಾರದ ಮೇಲೆ ಈ ಎಫ್‌ಐಆರ್‌ ದಾಖಲಿಸಲಾಗಿದೆ.

ಪತ್ರಕರ್ತ ಅಭಿಸಾರ್ ಶರ್ಮಾ, ಹಿರಿಯ ಪತ್ರಕರ್ತ ಭಾಷಾ ಸಿಂಗ್, ಹಿರಿಯ ಪತ್ರಕರ್ತರಾದ ಊರ್ಮಿಲೇಶ್ ಮತ್ತು ಪರಂಜಯ್ ಗುಹಾ ಠಾಕುರ್ತಾ, ನ್ಯೂಸ್‌ಕ್ಲಿಕ್ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಲೇಖಕಿ ಗೀತಾ ಹರಿಹರನ್, ಹೆಸರಾಂತ ಪತ್ರಕರ್ತೆ ಮತ್ತು ರಾಜಕೀಯ ಅರ್ಥಶಾಸ್ತ್ರದ ನಿರೂಪಕಿ ಔನಿಂದ್ಯೋ ಚಕ್ರವರ್ತಿ, ಇತಿಹಾಸಕಾರ ಸೊಹೈಲ್ ಹಶ್ಮಿ ಮತ್ತು ಸ್ಟ್ಯಾಂಡ್-ಅಪ್ ಕಮೀಡಿಯನ್ ಸಂಜಯ್ ರಾಜೌರಾ‌ ಮನೆಗಳ ಮೇಲೆ ಮಂಗಳವಾರ ಮುಂಜಾನೆ ದಾಳಿ ನಡೆದಿವೆ. ಸತ್ಯಂ ತಿವಾರಿ, ನ್ಯೂಸ್‌ಕ್ಲಿಕ್‌ನ ಮಾಜಿ ವ್ಯವಸ್ಥಾಪಕ ಸಂಪಾದಕ ಪ್ರಾಂಜಲ್ ಮಾಜಿ ದಿ ಹಿಂದೂ ಪತ್ರಕರ್ತೆ ಮತ್ತು ನ್ಯೂಸ್‌ಕ್ಲಿಕ್‌ಗೆ ಕಾಂಟ್ರಿಬ್ಯೂಟ್‌ ಮಾಡುತ್ತಿದ್ದ ಅನುರಾಧಾ ರಾಮನ್, ಅದಿತಿ ನಿಗಮ್ ಮತ್ತು ಸುಮೇಧಾ ಪಾಲ್ ನಿವಾಸಗಳ ಮೇಲೆ ಕೂಡಾ ದಾಳಿ ನಡೆಸಲಾಗಿದೆ. ಹಿಂದೆ ಟೈಮ್ಸ್ ಆಫ್ ಇಂಡಿಯಾದ ಜೊತೆಗೆ ಕೆಲಸ ಮಾಡುತ್ತಿದ್ದ ಮತ್ತು ಈಗ ನ್ಯೂಸ್‌ಕ್ಲಿಕ್‌ ಜೊತೆಗಿರುವ ಪತ್ರಕರ್ತ ಸುಬೋಧ್ ವರ್ಮಾ ಅವರ ಮನೆ ಮೇಲೂ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ನ್ಯೂಸ್‌ಕ್ಲಿಕ್ ಪತ್ರಕರ್ತರ ಮನೆಗಳ ಮೇಲೆ ದಾಳಿ: ಮಾಧ್ಯಮಗಳ ಬಾಯಿ ಮುಚ್ಚಿಸುವ ಯತ್ನ – ಎಡಿಟರ್ಸ್‌ ಗಿಲ್ಡ್‌ ಕಳವಳ

ಈ ಇಡೀ ಪ್ರಕ್ರಿಯೆ 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ನೆನಪಿಸುವಂತಿದೆ. ಅಲ್ಲದೇ, ನ್ಯೂಸ್‌ಕ್ಲಿಕ್‌ನ ನವದೆಹಲಿಯ ಕಚೇರಿಗೆ ಬೀಗ ಜಡಿಯಲಾಗಿದೆ.

ಕೃಪೆ: The Wire

ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್  ಅವರ ಮುಂಬೈ ಮನೆ ಮೇಲೂ ದಾಳಿ ನಡೆದಿದ್ದು, ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ತೀಸ್ತಾ ಥಿಂಕ್ ಟ್ಯಾಂಕ್ ಟ್ರೈಕಾಂಟಿನೆಂಟಲ್: ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ರಿಸರ್ಚ್‌ನ ನಿರ್ದೇಶಕರಾಗಿದ್ದು, ಇದರ ಲೇಖನಗಳು ನ್ಯೂಸ್‌ಕ್ಲಿಕ್‌ನಲ್ಲಿ ಪ್ರಕಟವಾಗಿವೆ.

ದಿ ವೈರ್‌ ವರದಿಯ ಪ್ರಕಾರ ಸಂಜೆ 5:30  ಗಂಟೆಯ ಹೊತ್ತಿಗೆ ಊರ್ಮಿಳೇಶ್ ಮತ್ತು ಚಕ್ರವರ್ತಿ ಅವರನ್ನು ವಿಶೇಷ ಸೆಲ್ ಕಚೇರಿಯಿಂದ ಬಿಡುಗಡೆ ಮಾಡಲಾಗಿದೆ. ಅಭಿಸಾರ್ ಶರ್ಮಾ ಅವರನ್ನು ಸಂಜೆ 6 ರ ಸುಮಾರಿಗೆ, ಪರಂಜಾಯ್ ಗುಹಾ ಠಾಕುರ್ತಾ ಅವರನ್ನು ಸಂಜೆ 6:30 ರ ಸುಮಾರಿಗೆ  ಸುಬೋಧ್ ವರ್ಮಾರನ್ನು ಸಂಜೆ 7 ಗಂಟೆ ಸುಮಾರಿಗೆ ಬಿಡುಗಡೆ ಮಾಡಲಾಗಿದೆ. ಬಪ್ಪಾದಿತ್ಯ ಸಿನ್ಹಾ, ಸತ್ಯಂ ತಿವಾರಿ ಮತ್ತು ಪ್ರಬೀರ್ ಪುರ್ಕಾಯಸ್ಥ ಅವರ ಮಗ ಪ್ರತೀಕ್‌ರನ್ನು ಕೂಡ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಪತ್ರಕರ್ತರ ಮನೆಗಳ ಮೇಲೆ ದೆಹಲಿ ಪೊಲೀಸ್‌ ದಾಳಿ: ನ್ಯೂಸ್‌ಕ್ಲಿಕ್‌ ಮೇಲೆ UAPA ಅಡಿಯಲ್ಲಿ ಕೇಸ್

ದಿ ವೈರ್‌ ವರದಿಯಲ್ಲಿ ಪೊಲೀಸ್‌ ಹೇಳಿಕೆ ವರದಿಯಾಗಿದ್ದು, ಸ್ಪೆಷಲ್‌ ಸೆಲ್‌ನ ಡಿಸಿಪಿ (ಪಿಆರ್‌ಒ) ಸುಮನ್ ನಲ್ವಾ , “ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆಸಲಾದ ಶೋಧ  ಹಾಗೂ ವಿಚಾರಣೆಯಲ್ಲಿ ಒಟ್ಟು 37 ಪುರುಷ ಶಂಕಿತರನ್ನೂ, ಒಂಬತ್ತು ಮಹಿಳಾ ಶಂಕಿತರನ್ನು ಪ್ರಶ್ನಿಸಲಾಗಿದೆ. ಅವರ ನಿವಾಸಗಳಿಂದ ಡಿಜಿಟಲ್ ಉಪಕರಣಗಳು, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ,” ಎಂದಿದ್ದಾರೆ.

ಈ ಸಂದರ್ಭದಲ್ಲಿ ನ್ಯೂಸ್‌ಕ್ಲಿಕ್‌ನ ಪತ್ರಕರ್ತರಲ್ಲಿ ಭಾರತದಲ್ಲಿ ನಡೆದ ರೈತರ ಪ್ರತಿಭಟನೆ ಮತ್ತು ಕೋವಿಡ್ ಸಾಂಕ್ರಾಮಿಕದಂತಹ ಘಟನೆಗಳ ಕುರಿತು ವರದಿ ಮಾಡಿದ್ದಾರೆಯೇ….ಇತ್ಯಾದಿ ಪ್ರಶ್ನೆಗಳನ್ನು ಕೇಳಲಾಗಿದೆ.

ನ್ಯೂಸ್‌ಕ್ಲಿಕ್ ಪತ್ರಕರ್ತ ಊರ್ಮಿಳೇಶ್ ಅವರ ವಕೀಲ ಗೌರವ್ ಯಾದವ್, “ನಾವು ಬೆಳಿಗ್ಗೆ 10 ಗಂಟೆಯಿಂದ ದೆಹಲಿಯ ಪೊಲೀಸ್ ವಿಶೇಷ  ಕಚೇರಿಯ ಹೊರಗಿದ್ದೇವೆ. ಮತ್ತು ನಮ್ಮ ಕ್ಲೈಂಟನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ, ನಮಗೆ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಎಫ್‌ಐಆರ್‌ನ ಪ್ರತಿ ಸೇರಿದಂತೆ  ನಮಗೆ ಯಾವುದೇ ದಾಖಲೆಗಳನ್ನು ಒದಗಿಸಲಾಗಿಲ್ಲ- ಸಿಕ್ಕಿಲ್ಲ,” ಎಂದು ಹೇಳುತ್ತಾರೆ.

ಶಬ್ನಮ್ ಹಶ್ಮಿ, ಅಕ್ಟೋಬರ್‌ 3, 2023  ತಮ್ಮ Xನಲ್ಲಿ – “ಇಂದು ಮುಂಜಾನೆ 6 ಗಂಟೆಗೆ ದೆಹಲಿ ಪೊಲೀಸರ ವಿಶೇಷ ದಳ ಸೋಹೈಲ್ ಹಶ್ಮಿ ನಿವಾಸದ ಮೇಲೆ ದಾಳಿ ನಡೆಸಿದೆ. 6 ಜನರಿರುವ ಮನೆಯ ಮಲಗುವ ಕೋಣೆಗೂ ನುಗ್ಗಿದ್ದಾರೆ. ಎರಡು ಗಂಟೆಗಳ ಕಾಲ ಅವರನ್ನು ವಿಚಾರಣೆ ನಡೆಸಲಾಗಿದೆ. ಅವರ ಕಂಪ್ಯೂಟರ್, ಫೋನ್, ಹಾರ್ಡ್ ಡಿಸ್ಕ್ ಮತ್ತು ಫ್ಲ್ಯಾಷ್ ಡ್ರೈವ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂದು ಮುಂಜಾನೆ ವಿಶೇಷ ಸೆಲ್‌ನಿಂದ ದಾಳಿಗೆ ಒಳಗಾದ ಅನೇಕ ಪತ್ರಕರ್ತರ ಮನೆಗಳಲ್ಲಿ ಇದೂ ಒಂದಾಗಿದೆ. ಪತ್ರಕರ್ತರು, ಬುದ್ಧಿಜೀವಿಗಳು, ಕಲಾವಿದರು ಮತ್ತು ಸಾಮಾನ್ಯ ನಾಗರಿಕರ ಪ್ರಜಾಸತ್ತಾತ್ಮಕ ಧ್ವನಿಗಳನ್ನು ಉಸಿರುಗಟ್ಟಿಸುವುದು ಈ ಸರ್ಕಾರದ ಅಡಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಕಾನೂನು ಪ್ರಕ್ರಿಯೆಗಳ ಹೆಸರಿನಲ್ಲಿ ಇಂದು ಸಾಮಾನ್ಯ ಜನರು ಎದುರಿಸುತ್ತಿರುವುದು ಬೆದರಿಕೆ, ಕಿರುಕುಳ ಮತ್ತು ಭಯ. ಸಂವಿಧಾನದ ಹಕ್ಕುಗಳನ್ನು ಚಲಾಯಿಸುವ ನಾಗರಿಕರನ್ನು ತಡೆಯಲು ಸರ್ಕಾರದ ಇಂತಹ ಬೆದರಿಸುವ ತಂತ್ರಗಳಿಂದ ನಾವು ಮೌನವಾಗುವುದಿಲ್ಲ. ನಮ್ಮೊಂದಿಗೆ ನಿಂತಿರುವ ಸ್ನೇಹಿತರಿಗೆ ಮತ್ತು ಇತರರಿಗೆ ನಮ್ಮ ಕೃತಜ್ಞತೆ ಮತ್ತು ಧನ್ಯವಾದಗಳು”

ಪತ್ರಕರ್ತ ಅಭಿಸಾರ್‌ ಶರ್ಮಾರವರ ಮನೆ ಮೇಲೆ ಕೂಡ ದಾಳಿ ನಡೆಸಲಾಗಿದ್ದು, ಅವರ ಫೋನ್‌ ಹಾಗೂ ಲ್ಯಾಪ್‌ಟಾಪ್‌ ವಶಪಡಿಸಿಕೊಂಡಿರುವ ಬಗ್ಗೆ X ನಲ್ಲಿ ತಿಳಿಸಿದ್ದಾರೆ.

ಪತ್ರಕರ್ತೆ ಭಾಷಾ ಸಿಂಗ್‌ ಅವರ ಫೋನನ್ನೂ ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದು, ತನ್ನ ಕೊನೆಯ ಟ್ವೀಟನ್ನು X ನಲ್ಲಿ ಹಂಚಿಕೊಂಡಿದ್ದಾರೆ.

ನ್ಯೂಸ್‌ ಕ್ಲಿಕ್‌ನ ಪತ್ರಕರ್ತೆ ಅರಿತ್ರಿ X ನಲ್ಲಿ ಹೀಗೆ ಟ್ವೀಟ್ ಮಾಡಿದ್ದಾರೆ, “ ದೆಹಲಿ ಪೊಲೀಸರು ಬೆಳಿಗ್ಗೆ 6 ಗಂಟೆಗೆ ನನ್ನ ಮನೆಗೆ ನುಗ್ಗಿದರು. ನನ್ನ ಲ್ಯಾಪ್‌ಟಾಪ್, ಫೋನ್, ಹಾರ್ಡ್ ಡಿಸ್ಕ್ ಇತ್ಯಾದಿಗಳನ್ನು ತೆಗೆದುಕೊಂಡು ನಾನು ಮಾಡಿದ ವರದಿಯ ಬಗ್ಗೆ ಪ್ರಶ್ನಿಸಿದರು. ಇದು @NewsClick ವಿರುದ್ದ ದಾಖಲಾಗಿರುವ ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದೆ.ಪತ್ರಕರ್ತರಾಗಲು ಇದು ಒಳ್ಳೆಯ ಸಂದರ್ಭ. #PressFreedom”

ಕಾರ್ಟೂನಿಸ್ಟ್‌ ಇರ್ಫಾನ್‌ ಕೆ ತಮ್ಮ ಮನೆಯ ದೆಹಲಿ ಪೊಲೀಸರು ಮೇಲೆ ದಾಳಿ ನಡೆಸಿ ಇಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡಿರುವ ಬಗ್ಗೆ Xನಲ್ಲಿ ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಈ ದಾಳಿಗಳ ಬಗ್ಗೆ ನೀಡಿರುವ ಹೇಳಿಕೆ ದಿ ವೈರ್‌ ನಲ್ಲಿ ವರದಿಯಾಗಿದ್ದು, “ತನಿಖಾ ಸಂಸ್ಥೆಗಳು ಸ್ವತಂತ್ರವಾಗಿವೆ ಮತ್ತು ಅವರು ನಿಯಮಗಳನ್ನು ಅನುಸರಿಸಿ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ… ನಾನು ದಾಳಿಗಳನ್ನು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ಯಾರಾದರೂ ತಪ್ಪು ಮಾಡಿದ್ದರೆ, ತನಿಖಾ ಸಂಸ್ಥೆಗಳು ತಮ್ಮ ಕೆಲಸವನ್ನು ಮಾಡುತ್ತವೆ. ತಪ್ಪು ಮೂಲಗಳಿಂದ ನಿಮಗೆ ಹಣ ಬಂದಿದ್ದರೆ ಅಥವಾ ಆಕ್ಷೇಪಾರ್ಹ ಏನಾದರೂ ನಡೆದಿದ್ದರೆ ತನಿಖಾ ಸಂಸ್ಥೆಗಳು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಎಲ್ಲಿಯೂ ಬರೆಯಲಾಗಿಲ್ಲ,” ಎಂದು ಹೇಳಿದ್ದಾರೆ.

ಪ್ರೆಸ್‌ ಕ್ಲಬ್‌ ಆಫ್‌ ಇಂಡಿಯಾ ಈ ದಾಳಿಯನ್ನು ಖಂಡಿಸಿ ಟ್ವೀಟ್‌ ಮಾಡಿದೆ.

DIGIPUB News India Foundation ಈ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ಈ ನಡೆಯನ್ನು ಖಂಡಿಸಿ ಟ್ವೀಟ್‌ ಮಾಡಿದೆ.

ನ್ಯೂಸ್‌ಕ್ಲಿಕ್ ಪತ್ರಕರ್ತರ ಮನೆಗಳ ಮೇಲೆ ದಾಳಿ: ಮಾಧ್ಯಮಗಳ ಬಾಯಿ ಮುಚ್ಚಿಸುವ ಯತ್ನ – ಎಡಿಟರ್ಸ್‌ ಗಿಲ್ಡ್‌
ನವದೆಹಲಿ, ಅಕ್ಟೋಬರ್ 3: ಆನ್‌ಲೈನ್ ಪೋರ್ಟಲ್ ನ್ಯೂಸ್‌ಕ್ಲಿಕ್‌ಗೆ ಸಂಬಂಧಪಟ್ಟ ಪತ್ರಕರ್ತರ ನಿವಾಸಗಳ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿರುವ ಬಗ್ಗೆ  ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಕಳವಳ ವ್ಯಕ್ತಪಡಿಸಿದೆ. ಮಂಗಳವಾರ ನಡೆದಿರುವ ಮೂವತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆದಿರುವ ದಾಳಿಗಳನ್ನು  “ಮಾಧ್ಯಮಗಳ ಬಾಯಿ ಮುಚ್ಚಿಸುವ ಮತ್ತೊಂದು ಪ್ರಯತ್ನ” ಎಂದು ಟೀಕಸಿದೆ.

ಆಗಸ್ಟ್ 17 ರಂದು ಯುಎಪಿಎ ಮತ್ತು 153A (ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಮತ್ತು 120B (ಕ್ರಿಮಿನಲ್ ಪಿತೂರಿ) ಸೇರಿದಂತೆ ಐಪಿಸಿಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿರುವ  ದೂರಿಗೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿವೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಎಡಿಟರ್ಸ್ ಗಿಲ್ಡ್ ಇಂದು ಮುಂಜಾನೆ ಹಿರಿಯ ಪತ್ರಕರ್ತರ ಮನೆಗಳ ಮೇಲೆ ನಡೆದ  ಈ ದಾಳಿಯ ಬಗ್ಗೆ “ಅತೀವ ಕಳವಳಕಾರಿ” ಎಂದು ಹೇಳಿಕೆ ನೀಡಿದೆ. ಈ ಸಂದರ್ಭದಲ್ಲಿ ಅವರ ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಇತರ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಿರಿಯ ಪತ್ರಕರ್ತರನ್ನು ದೆಹಲಿ ಪೊಲೀಸರು ‘ತನಿಖೆ’ಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಪತ್ರಕರ್ತರ ಮನೆಗಳ ಮೇಲೆ ದೆಹಲಿ ಪೊಲೀಸ್‌ ದಾಳಿ: ನ್ಯೂಸ್‌ಕ್ಲಿಕ್‌ ಮೇಲೆ UAPA ಅಡಿಯಲ್ಲಿ ಕೇಸ್

ಈ ದಾಳಿ ಮಾಧ್ಯಮಗಳನ್ನು ಮೌನವಾಗಿಸುವ ಮತ್ತೊಂದು ಪ್ರಯತ್ನ ಎಂದು ಕಳವಳ ವ್ಯಕ್ತಪಡಿಸಿರುವ EGI “ನಿಜವಾದ ಅಪರಾಧಗಳು ನಡೆದಿದ್ದರೆ ಕಾನೂನು ತನ್ನ ಮಾರ್ಗವನ್ನು ತೆಗೆದುಕೊಳ್ಳಬೇಕು. ಕಠೋರ ಕಾನೂನುಗಳ ಅಡಿಯಲ್ಲಿ ಬೆದರಿಸುವುದು, ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ, ಭಿನ್ನ ಮತ್ತು ವಿಮರ್ಶಾತ್ಮಕ ಧ್ವನಿಗಳನ್ನು ನಿಯಂತ್ರಿಸುವುದು ಸರಿಯಲ್ಲ, ”ಎಂದು ಹೇಳಿಕೆ ನೀಡಿದೆ.

“ಪ್ರಜಾಪ್ರಭುತ್ವದಲ್ಲಿ ಸ್ವತಂತ್ರ ಮಾಧ್ಯಮಗಳ ಪ್ರಾಮುಖ್ಯತೆಯನ್ನು ನಾವು ಸರ್ಕಾರಕ್ಕೆ ನೆನಪಿಸುತ್ತೇವೆ. ಅವುಗಳನ್ನು ನಾಲ್ಕನೇ ಸ್ತಂಭವೆಂದು ಗೌರವಿಸಿ, ರಕ್ಷಿಸಲು ಒತ್ತಾಯಿಸುತ್ತೇವೆ” ಎಂದು ಆಗ್ರಹಿಸಿದೆ.