next cm – Peepal Media

ʼಮುಂದಿನ ಸಿಎಂ ಸಿದ್ದರಾಮಯ್ಯ ಆಗಲಿʼ: ಶ್ರೀರಾಮುಲು ಸ್ಫೋಟಕ ಹೇಳಿಕೆ
ಬಳ್ಳಾರಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು  ಮತ್ತೋಮ್ಮೆ ಸಿಎಂ ಆಗಲಿ ಎಂದು ಸಾರಿಗೆ ಸಚಿವ ಶ್ರೀರಾಮುಲು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಳ್ಳಾರಿ ಜಿಲ್ಲಾ ಕುರುಬರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮುಲು ಅವರು ಎಲ್ಲಾ ಹಿಂದುಳಿದ ಜಾತಿಗಳು ಒಂದಾಗಬೇಕೆಂಬ ಪ್ರಯತ್ನವನ್ನು ನಾನು ಮತ್ತು ಸಿದ್ದರಾಮಯ್ಯ ಮಾಡುತ್ತಿದ್ದೇವೆ ಎಂದರು.

ಸಿದ್ದರಾಮಯ್ಯ ಮತ್ತು ನನ್ನ ಗೆಳೆತನವೇ ಬೇರೆ, ಬೇಕಾದರೆ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಹೇಗೆ ಗೆಲುವು ದಾಖಲಿಸಿದರೆಂದು ಒಮ್ಮೆ ಕೇಳಿ, ಅವರು ಬಹಿರಂಗವಾಗಿ ಹೇಳಲ್ಲ, ಸಂದರ್ಭ ಬಂದರೆ ಹೇಳುತ್ತೇನೆ. ಹಿಂದುಳಿದ ಸಮುದಾಯವನ್ನು ನಾವು ಬಿಟ್ಟು ಕೊಡುವುದಕ್ಕೆ ರೆಡಿ ಇಲ್ಲ. ಏಕೆಂದರೆ ಅದು ನಮ್ಮ ಸಮುದಾಯ” ಎಂದರು.

ಬಿಜೆಪಿಯಲ್ಲಿ ಹಿಂದುಳಿದ ಸಮುದಾಯದಿಂದ ನನಗೂ ಅವಕಾಶ ಬಂದರೆ ಬಿಜೆಪಿಯಿಂದ ಮುಖ್ಯಮಂತ್ರಿಯಾಗುವೆ. ರಾಮುಲು ಮುಖ್ಯಮಂತ್ರಿ ಆಗಬೇಕೆಂದು ಸಿದ್ದರಾಮಯ್ಯ ಅವರನ್ನು ಕೇಳಿದರೆ ಅವರೂ ಒಪ್ಪುತ್ತಾರೆ. ಜಾತಿ ವ್ಯವಸ್ಥೆಯಲ್ಲಿ ಇವೆಲ್ಲಾ ಮಾಡಬೇಕು, ಏಕೆಂದರೆ ಎಲ್ಲೋ ಒಂದು ಕಡೆ ಕ್ರಾಂತಿಯಾಗಬೇಕು, ನಮ್ಮಲ್ಲಿ ಯಾವಾಗಲು ಹೊಡಕಾಗಬಾರದು ಎಂದು ಹೇಳಿದರು.

ಈ ಹೇಳಿಕೆ ಕುರಿತು ಕುಳಿತಿದ್ದ ಜನರು ಕೇಳಿದ ಪ್ರಶ್ನೆಗೆ ನಾನು ಯಾರ ಗುಲಾಮನಲ್ಲ, ನನ್ನ ಕೆಲಸ ನಾನು ಮಾಡುತ್ತೇನೆ, ನಾನು ಬಹಿರಂಗವಾಗಿ ಹೇಳುತ್ತೇನೆ ಸಿದ್ದರಾಮಯ್ಯ ನವರು ಮುಂದಿನ ಸಿಎಂ ಆಗಬೇಕು ಎಂದು ಸ್ಫೋಟಕ ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯನವರನ್ನು ಹೊಗಳಿದ್ದಾರೆ.