nirmala – Peepal Media

ಕೇಂದ್ರ ಬಜೆಟ್‌ 2024ರ ಮುಖ್ಯಾಂಶ: ಬಡವ, ಮಹಿಳೆ, ಯುವಕ, ಅನ್ನದಾತರ ಉದ್ಧಾರವೇ ಕೇಂದ್ರದ ಗುರಿ!
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರ ಗುರುವಾರ ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ 2024 ಅನ್ನು ಮಂಡಿಸಿದ್ದಾರೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ನರೇಂದ್ರ ಮೋದಿ ಸರ್ಕಾರದ ಕೊನೆಯ ಬಜೆಟ್ ಇದಾಗಿದೆ.

"ಕಳೆದ ಹತ್ತು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಆಳವಾದ ಧನಾತ್ಮಕ ರೂಪಾಂತರವನ್ನು ಕಂಡಿದೆ. ಭಾರತದ ಜನರು ಭರವಸೆ ಮತ್ತು ಆಶಾವಾದದಿಂದ ಭವಿಷ್ಯವನ್ನು ಎದುರು ನೋಡುತ್ತಿದ್ದಾರೆ" - ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಗರೀಬ್ (ಬಡವರು), ಮಹಿಳಾ (ಮಹಿಳೆಯರು), ಯುವ (ಯುವಕರು) ಮತ್ತು ಅನ್ನದಾತ (ರೈತರು) ಅವರ ಅಗತ್ಯತೆಗಳು, ಆಕಾಂಕ್ಷೆಗಳು ಮತ್ತು ಕಲ್ಯಾಣವು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ “ಮಹತ್ವದ ಆದ್ಯತೆ” ಎಂದು ಅವರು ಹೇಳಿದ್ದಾರೆ.

ಸಾರ್ವತ್ರಿಕ ಚುನಾವಣೆಯ ನಂತರ ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದ ನಂತರ ಮುಂದಿನ ಪೂರ್ಣ ಪ್ರಮಾಣದ ಬಜೆಟ್ ಅನ್ನು ಜುಲೈನಲ್ಲಿ ಮಂಡಿಸಲಾಗುವುದು ಎಂದು ಹೇಳಿರುವ ನಿರ್ಮಲಾ, ಸ್ಪಷ್ಟವಾಗಿ ಇದೊಂದು ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿರುವ ಬಜೆಟ್‌ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

2024-25ರ ಕೇಂದ್ರ ಬಜೆಟ್‌ನ ಪ್ರಮುಖ ಮುಖ್ಯಾಂಶಗಳು:

ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಬಂದಿದ್ದಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (ಪಿಎಂಎವೈ-ಜಿ) ಅಡಿಯಲ್ಲಿ ಇನ್ನೂ ಎರಡು ಕೋಟಿ ಮನೆಗಳನ್ನು ಘೋಷಿಸಲಾಗಿದೆ.

ತಂತ್ರಜ್ಞಾನ ಪರಿಣಿತ ಯುವಕರಿಗೆ ‘ಸುವರ್ಣ ಯುಗ’: ಸನ್‌ರೈಸ್ ಡೊಮೇನ್‌ಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರವನ್ನು ಗಣನೀಯವಾಗಿ ಹೆಚ್ಚಿಸಲು ಖಾಸಗಿ ವಲಯವನ್ನು ಉತ್ತೇಜಿಸಲು 50 ವರ್ಷಗಳವರೆಗೆ ಬಡ್ಡಿ ರಹಿತ ಸಾಲದೊಂದಿಗೆ 1 ಲಕ್ಷ ಕೋಟಿ ರೂಪಾಯಿಗಳ ಕಾರ್ಪಸ್ ಅನ್ನು ಸ್ಥಾಪಿಸಲಾಗುವುದು.

ಮನೆಯ ಛಾವಣಿಗಳಿಗೆ ಸೋಲಾರ್‌ ಅಳವಡಿಸುವ ಮೂಲಕ ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್. ಈ ಯೋಜನೆಯು ರಾಮಮಂದಿರ ಶಂಕುಸ್ಥಾಪನೆಯ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಸಂಕಲ್ಪವಾಗಿದೆ.

ಪ್ರವಾಸೋದ್ಯಮ ಕ್ಷೇತ್ರಗಳ ‘ಸಮಗ್ರ’ ಅಭಿವೃದ್ಧಿ: ದೇಶೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬಂದರು ಸಂಪರ್ಕ ಯೋಜನೆಗಳು, ಪ್ರವಾಸೋದ್ಯಮ ಮೂಲಸೌಕರ್ಯ ಮತ್ತು ಸೌಕರ್ಯಗಳನ್ನು ಲಕ್ಷದ್ವೀಪ ಸೇರಿದಂತೆ ಭಾರತಕ್ಕೆ ಸೇರಿದ ದ್ವೀಪಗಳಿಗೆ ನೀಡುವುದು.

ಪ್ರಧಾನ ಮಂತ್ರಿ-ಜನ್ ಧನ್ ಖಾತೆಗಳನ್ನು ಬಳಸಿಕೊಂಡು ಸರ್ಕಾರದಿಂದ 34 ಲಕ್ಷ ಕೋಟಿ ರೂಪಾಯಿಗಳ ನೇರ ಲಾಭ ವರ್ಗಾವಣೆ ಮಾಡಿರುವುದರಿಂದ ಕೇಂದ್ರ ಸರ್ಕಾರಕ್ಕೆ 2.7 ಲಕ್ಷ ಕೋಟಿ ರೂಪಾಯಿಗಳ ಉಳಿತಾಯವಾಗಿದೆ. ಪಿಎಂ-ಸ್ವನಿಧಿ PM-SVANidhi ಮೂಲಕ 78 ಲಕ್ಷ ಬೀದಿ ವ್ಯಾಪಾರಿಗಳಿಗೆ ಸಾಲದ ನೆರವು. ಆ ಒಟ್ಟು ಮೊತ್ತದಿಂದ 2.3 ಲಕ್ಷ ಮಂದಿ ಮೂರನೇ ಬಾರಿಗೆ ಸಾಲ ಪಡೆದ್ದಾರೆ.

ಪರಿಷ್ಕೃತ ವಿತ್ತೀಯ ಕೊರತೆ – ಸರ್ಕಾರದ ಆದಾಯ ಮತ್ತು ವೆಚ್ಚಗಳ ನಡುವಿನ ಅಂತರ – 2023-24ರ GDP ಯ 5.8% ದಷ್ಟಿದೆ. 2025-26ರಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇಕಡಾ 4.5 ಕ್ಕಿಂತ ಕಡಿಮೆಗೊಳಿಸುವುದು ಗುರಿಯಾಗಿದೆ.

ಬಂಡವಾಳ ವೆಚ್ಚವನ್ನು 11.11 ಲಕ್ಷ ಕೋಟಿ ರುಪಾಯಿಗೆ ಹೆಚ್ಚಿಸಲಾಗಿದೆ: ಬಂಡವಾಳ ವೆಚ್ಚವನ್ನು 11.1% ರಿಂದ ರೂ 11.11 ಲಕ್ಷ ಕೋಟಿಗೆ – GDP ಯ 3.4 ಶೇಕಡಾಕ್ಕೆ ಹೆಚ್ಚಿಸಲು ಬಜೆಟ್ ಪ್ರಸ್ತಾಪಿಸಿದೆ.

ರಕ್ಷಣಾ ಉದ್ದೇಶಗಳಿಗಾಗಿ ಡೀಪ್-ಟೆಕ್ ತಂತ್ರಜ್ಞಾನಗಳು ಮತ್ತು ‘ಆತ್ಮನಿರ್ಭರ್ತ’ಯನ್ನು (ಸ್ವಾವಲಂಬನೆ) ಹೆಚ್ಚಿಸುವುದು.