nirmalaseetaraman – Peepal Media

ದೊಡ್ಡ ದೊಡ್ಡ ಬ್ಯಾಂಕ್ ಗಳಿಗೆ ಬೆದರಿಕೆ ಕರೆ : ಹಣಕಾಸು ಸಚಿವರ ರಾಜೀನಾಮೆಗೆ ಪಟ್ಟು
ಆರ್‌ಬಿಐ ಕಚೇರಿ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು  ಐಸಿಐಸಿಐ  ಬ್ಯಾಂಕ್‌ಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗುವುದು ಎಂದು  ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಮಂಗಳವಾರ ಬೆದರಿಕೆ ಇಮೇಲ್ ಬಂದಿದೆ.

ಇಮೇಲ್ ನಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಲ್ಲದೆ, ಮುಂಬೈನ 11 ಸ್ಥಳಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಿದ ಎಲ್ಲಾ ಸ್ಥಳಗಳಲ್ಲಿ ಪೊಲೀಸರು ಪರಿಶೀಲಿಸಿದ ನಂತರ ಯಾವುದೇ ಬಾಂಬ್ ಅಥವಾ ಸ್ಪೋಟಕಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

“ಬೆದರಿಕೆ ಬಂದ ಮುಂಬೈನ 11 ಪ್ರಮುಖ ಸ್ಥಳಗಳಲ್ಲಿ ಒಟ್ಟು 11 ಬಾಂಬ್ ಬೆದರಿಕೆಗಳು ಬಂದಿದ್ದು, ಪೊಲೀಸರು ಈ ಎಲ್ಲ ಸ್ಥಳಗಳಿಗೆ ತೆರಳಿ ತನಿಖೆ ನಡೆಸಿದರೂ ಏನೂ ಪತ್ತೆಯಾಗಿಲ್ಲ.

“ನಾವು ಮುಂಬೈನ ವಿವಿಧ ಸ್ಥಳಗಳಲ್ಲಿ 11 ಬಾಂಬ್‌ಗಳನ್ನು ಇರಿಸಿದ್ದೇವೆ. ಆರ್‌ಬಿಐ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಭಾರತದ ಇತಿಹಾಸದಲ್ಲಿ ಕಂಡು ಕೇಳರಿಯದ ಅತಿದೊಡ್ಡ ಹಗರಣವನ್ನು ಕಾರ್ಯಗತಗೊಳಿಸಿವೆ. ಈ ಹಗರಣದಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೆಲವು ಉನ್ನತ ಬ್ಯಾಂಕಿಂಗ್ ಅಧಿಕಾರಿಗಳು ಮತ್ತು ಕೆಲವು ಕೇಂದ್ರ ಮಂತ್ರಿಗಳು ಭಾಗಿಯಾಗಿದ್ದಾರೆ, ಇದಕ್ಕೆ ನಮ್ಮ ಬಳಿ ಸಾಕಷ್ಟು ದೃಢವಾದ ಪುರಾವೆಗಳಿವೆ, ಎಂದು ಉಲ್ಲೇಖಿಸಲಾಗಿದೆ.

“ಆರ್‌ಬಿಐ ಗವರ್ನರ್ ಮತ್ತು ಹಣಕಾಸು ಮಂತ್ರಿ ಇಬ್ಬರೂ ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಮತ್ತು ಹಗರಣದ ಸಂಪೂರ್ಣ ಬಹಿರಂಗಪಡಿಸುವಿಕೆಯೊಂದಿಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ. ಅವರಿಬ್ಬರಿಗೂ ಮತ್ತು ಅವರಲ್ಲಿ ಭಾಗಿಯಾಗಿರುವ ಎಲ್ಲರಿಗೂ ಅವರು ಅರ್ಹವಾದ ಶಿಕ್ಷೆಯನ್ನು ನೀಡಬೇಕೆಂದು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ, ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮಧ್ಯಾಹ್ನ 1.30 ರ ಮೊದಲು, ಎಲ್ಲಾ 11 ಬಾಂಬ್‌ಗಳು ಒಂದೊಂದಾಗಿ ಸ್ಫೋಟಿಸುತ್ತವೆ,” ಎಂದು ಇಮೇಲ್ ಹೇಳಿದೆ.

ರಾಜ್ಯಕ್ಕೆ ಅನುಧಾನ ಬಿಡುಗಡೆ ಮಾಡುವಂತೆ ನಿರ್ಮಲಾ ಸೀತಾರಾಮನ್ ಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ವಿವಿಧ ಅಭಿವೃದ್ಧಿ ಯೋಜನೆಗಳು ಸೇರಿದಂತೆ, ಈವರೆಗೆ ಕರ್ನಾಟಕ ರಾಜ್ಯದ ಬಗ್ಗೆ ಬಿಜೆಪಿ ತೋರುತ್ತಿದ್ದ ಮಲತಾಯಿ ದೋರಣೆಯನ್ನು ಉಲ್ಲೇಖಿಸಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಗೆ ಪತ್ರ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಪತ್ರದಲ್ಲಿ ರಾಜ್ಯಕ್ಕೆ ನಿರ್ದಿಷ್ಟ ಅನುದಾನ ಬಿಡುಗಡೆ ಮಾಡಿ ಎಂದು ಆಗ್ರಹಿಸಿದ್ದಾರೆ.

15ನೇ ಹಣಕಾಸು ಆಯೋಗ ಆದಾಯ ರಾಜ್ಯ ಮಲತಾಯಿ ಧೋರಣೆ ತೋರುತ್ತಿದೆ. ಜಿಎಸ್​ಡಿಪಿ (GSDP) ಲೆಕ್ಕ ಹಾಕಲು ಹೊಸ ನಿಯಮ ಅನುಸರಿಸುತ್ತಿರುವ ಹಿನ್ನಲೆ ಇತರೆ ರಾಜ್ಯಗಳ GSDP ಸರಾಸರಿ ಶೇ. 9 ರಷ್ಟು ಇದೆ, ಕರ್ನಾಟಕವೂ ಶೇ. 30 ರಷ್ಟಿದೆ. ಕೇಂದ್ರದಿಂದ ರಾಜ್ಯಕ್ಕೆ ಪಾಲು ಶೇ. 4.2 ರಿಂದ 1.1 ಇಳಿಕೆಯಾಗಿದೆ ಎಂದು ನಿರ್ಮಲಾ ಸೀತಾರಾಮ್ ಅವರಿಗೆ ಆಗ್ರಹಿಸಿದ್ದಾರೆ.

14ನೇ ಹಣಕಾಸು ಆಯೋಗ ಪ್ರಕಾರ ಶೇ. 4.71 ರಷ್ಟಿತ್ತು. ಆದ್ರೆ, 15ನೇ ಹಣಕಾಸು ಆಯೋಗ ಪ್ರಕಾರ ಶೇ. 3.64 ಇದೆ. 2011-12ರ ಪ್ರಕಾರ ಐಟಿ ಕ್ಷೇತ್ರದಲ್ಲಿ ರಾಜ್ಯ ಅತ್ಯುತ್ತಮ ಬೆಳವಣಿಗೆ ಕಂಡಿದೆ. 14ನೇ-15ನೇ ಹಣಕಾಸು ಆಯೋಗ ತುಲನೆಯಲ್ಲಿ ಕರ್ನಾಟಕಕ್ಕೆ ಬರಬೇಕಾದ ಒಟ್ಟು ಪಾಲಿನಲ್ಲಿ 37,011 ಕೋಟಿ ರೂ.ಗೆ ಕಡಿತವಾಗಿದೆ. 2020-21ರ ಆರ್ಥಿಕ ವರ್ಷ ಪ್ರಕಾರ 15ನೇ ಹಣಕಾಸು ಆಯೋಗವೂ 5,495 ಕೋಟಿ ರೂ.ಗೆ ಶಿಫಾರಸ್ಸು ಮಾಡಿತ್ತು ಎಂದು ಹೇಳಿದ್ದಾರೆ.

2021-26ರ ಹಣಕಾಸು ಆಯೋಗ 6,000 ಕೋಟಿ ರೂ. ಹಣವನ್ನು ಬೆಂಗಳೂರಿನ ನೀರಾವರಿ ಕಾಮಗಾರಿ ಹಾಗೂ ಪೆರಿಫೆರಲ್​ ರಿಂಗ್​ ರಸ್ತೆ ನಿರ್ಮಾಣಕ್ಕೆ ನೀಡಿತ್ತು. ಆದ್ರೆ, ಯಾವುದೇ ಅನುದಾನ ಕರ್ನಾಟಕ ಸರ್ಕಾರಕ್ಕೆ ಲಭಿಸಿಲ್ಲ. ಇದರಿಂದ ರಾಜ್ಯದ ಹಣಕಾಸು ಸ್ಥಿತಿಗೆ ಭಾರೀ ಹಿನ್ನಡೆಯಾಗಿದೆ. ರಾಜ್ಯದ ಹಣಕಾಸು ಸ್ಥಿತಿಯನ್ನು ಅರ್ಥಮಾಡಿಕೊಂಡು, ವಿಶೇಷ ಮತ್ತು ನಿರ್ದಿಷ್ಟ ಅನುದಾನ ಮೊದಲ ಆದ್ಯತೆ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಪತ್ರದ ಮೂಲಕ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.