Nobel Prize – Peepal Media

ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಅನ್ನಿ ಎರ್ನಾಕ್ಸ್
ಸಾಹಿತ್ಯ ವಿಭಾಗದಲ್ಲಿ ೨೦೨೨ನೇ ಸಾಲಿನ ನೊಬೆಲ್‌ ಪ್ರಶಸ್ತಿಯು ಫ್ರೆಂಚ್‌ ಲೇಖಕಿ ಅನ್ನಿ ಥೆರೆಸ್‌ ಬ್ಲಾಂಚೆ ಎರ್ನಾಕ್ಸ್ ಮುಡಿಗೇರಿದೆ. ನೊಬೆಲ್‌ ಸಾಹಿತ್ಯ  ಪ್ರಶಸ್ತಿಯನ್ನು ಗೆದ್ದ ಈ ಮೊದಲ ಮಹಿಳೆಯನ್ನು ಪರಿಚಯಿಸಿದ್ದಾರೆ ಲೇಖಕಿ ಶ್ರೀದೇವಿ ಕೆರೆಮನೆ.

ಆರಂಭಿಕ ಜೀವನ ಮತ್ತು ಶಿಕ್ಷಣ

ಸಪ್ಟೆಂಬರ್ 1, 1940ರಂದು ಅಲ್ಫೋನ್ಸ್ ಹಾಗೂ ಬ್ಲಾಂಚೆ ಡುಚ್ನೆಸ್‍ರವರ ಮಗಳಾಗಿ ನಾರ್ಮಂಡಿಯ ಜರ್ಮನ್ ಆಕ್ರಮಿತ ಫ್ರಾನ್ಸ್‌ನ ಲಿಲ್ಲೆಬೋನ್‍ನಲ್ಲಿ ಜನಿಸಿದ ಅನ್ನಿ ಥೆರೆಸ್ ಬ್ಲಾಂಚೆ ಡುಚೆಸ್ನೆ ಒಬ್ಬರು ಫ್ರೆಂಚ್ ಬರೆಹಗಾರ್ತಿ, ಸಾಹಿತ್ಯದ ಪ್ರಾಧ್ಯಾಪಕಿ. ಇವರ ಜನನವಾದ ಕೆಲವು ವರ್ಷಗಳ ನಂತರ ಲಿಲ್ಲೆಬೋನ್ ಹತ್ತಿರದ ಯ್ವೆಟಾಟ್ ಪ್ರದೇಶಕ್ಕೆ ಸ್ಥಳಾಂತರಗೊಂಡ ಅವರ ಪೋಷಕರು ಪಟ್ಟಣದ ಕಾರ್ಮಿಕ ವರ್ಗದ ಭಾಗದಲ್ಲಿ ಕೆಫೆ ಕಮ್ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದರು. ಯ್ವೆಟಾಟ್‍ನಲ್ಲಿ ಮಾಧ್ಯಮಿಕ ಶಿಕ್ಷಣ ಪಡೆಯುವಾಗಲೇ ಕಾರ್ಮಿಕ ವರ್ಗದಿಂದ ಬಂದಂತಹ ಹೆಣ್ಣುಮಕ್ಕಳು ಅನುಭವಿಸಬೇಕಾದ ಅವಮಾನ ಎಂತಹುದು ಎಂಬುದನ್ನು ಅರಿತುಕೊಂಡ ಇವರು ಅದನ್ನು ಮೆಟ್ಟಿ ಮುಂದುವರೆಯಲು ನಿರ್ಧರಿಸಿದ್ದು ಆಗಲೇ. 1958ರಲ್ಲಿ ಅಂದರೆ ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿಯೇ ಬೇಸಿಗೆ ಶಿಬಿರದಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಕೆಲಸಕ್ಕಾಗಿ ಮನೆಯನ್ನು ತೊರೆದು ತಮ್ಮದೆ ವಯಸ್ಸಿನ ಮಕ್ಕಳೊಡನೆ ವಾಸಿಸಲಾರಂಭಿಸಿದರು. ಆ ಸಮಯದಲ್ಲಿಯೇ ತಮ್ಮ ಮೊದಲ ಲೈಂಗಿಕ ಅನುಭವವನ್ನು ಪಡೆದಿದ್ದಾಗಿ ತಮ್ಮ ಇತ್ತೀಚಿನ ಕೃತಿ ಎ ಗರ್ಲ್ಸ್‌ ಸ್ಟೋರಿ (ಮೆಮೊಯಿರ್ ಡಿ ಫಿಲ್ಲೆ-೨೦೧೬) ನಲ್ಲಿ ಹೇಳಿಕೊಂಡಿದ್ದಾರೆ.

1960ರಲ್ಲಿ ಲಂಡನ್‍ಗೆ ಪ್ರಯಾಣ ಬೆಳೆಸಿದ ಅವರು ಅಲ್ಲಿ  ಔ ಫೇರ್ (ಮನೆಗೆಲಸ, ಮಕ್ಕಳನ್ನು ನೋಡಿಕೊಳ್ಳುವುದು, ಆಹಾರ ಸರಬರಾಜು ಮಾಡುವುದು ಮುಂತಾದ ಕೆಲಸಗಳು) ಆಗಿ ಕೆಲಸ ಪ್ರಾರಂಭಿಸಿದರಾದರೂ ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ರೂಯೆನ್ ಮತ್ತು ನಂತರ ಬೋರ್ಡೆಕ್ಸ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿ  ಶಾಲಾ-ಶಿಕ್ಷಕಿಯಾಗುವ ತರಬೇತಿಯನ್ನು ಮುಗಿಸಿ ಅರ್ಹತೆ ಪಡೆದರು. ಅದೇ ವರ್ಷದ ಕೊನೆಗೆ ಫಿಲಿಪ್ ಎರ್ನಾಕ್ಸ್ ಅವರನ್ನು ವಿವಾಹವಾದರು, ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ವೈಯಕ್ತಿಕ ಕಾರಣಗಳಿಗಾಗಿ ದಂಪತಿಗಳು 1980 ರ ದಶಕದ ಆರಂಭದಲ್ಲಿ ಬೇರ್ಪಟ್ಟರು.

1970 ರ ದಶಕದ ಆರಂಭದಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು. 1971ರಲ್ಲಿ ಆಧುನಿಕ ಸಾಹಿತ್ಯದಲ್ಲಿ ಉನ್ನತ ಪದವಿಯನ್ನು ಗಳಿಸಿದರು. ಪೆಂಟೊಯಿಸ್‍ನಲ್ಲಿ ರಾಷ್ಟ್ರೀಯ ದೂರ ಶಿಕ್ಷಣ ಕೇಂದ್ರಕ್ಕೆ ಸೇರುವ ಮೊದಲು 23 ವರ್ಷಗಳ ಕಾಲ ಅಲ್ಲಿಯೇ ಕೆಲಸ ಮಾಡಿದರು. ಆಸಮಯದಲ್ಲಿಯೇ ತಮ್ಮ ಮೊದಲ ಕಾದಂಬರಿಯ ಬರವಣಿಗೆಯನ್ನು ಪ್ರಾರಂಭಿಸಿದರು.

ಸಾಹಿತ್ಯಿಕ ಜೀವನ..

ಅನ್ನಿ ಎರ್ನಾಕ್ಸ್ 1974ರಲ್ಲಿ ʼಕ್ಲೀನ್ಡ್ ಔಟ್ʼ ಎಂಬ ಆತ್ಮಚರಿತ್ರೆಯ ಕಾದಂಬರಿಯನ್ನು ಬರೆಯುವ ಮೂಲಕ ತಮ್ಮ ಸಾಹಿತ್ಯಿಕ ಜೀವನವನ್ನು ಪ್ರಾರಂಭಿಸಿದರು. 1984ರಲ್ಲಿ ಲಾ ಪ್ಲೇಸ್ ( ಎ ಮ್ಯಾನ್ಸ್ ಪ್ಲೇಸ್ ) ಗೆ ರೆನಾಡಾಟ್ ಪ್ರಶಸ್ತಿಯನ್ನು ಪಡೆದುಕೊಂಡರು. ಇದು ತಮ್ಮ ತಂದೆಯೊಂದಿಗಿನ ಸಂಬಂಧ ಮತ್ತು ಫ್ರಾನ್ಸ್ ನ ಸಣ್ಣ ಪಟ್ಟಣದಲ್ಲಿ ಬೆಳೆದ ಅವರ ಅನುಭವಗಳ ಮೇಲೆ ಮತ್ತು ಅವರ ನಂತರದ ಪ್ರೌಢಾವಸ್ಥೆ ಮತ್ತು ಪೋಷಕರಿಂದ ದೂರವಾಗುವಂತಹ ಹಲವಾರು ಸನ್ನಿವೇಶಗಳನ್ನು ಕೇಂದ್ರೀಕರಿಸುವ ಆತ್ಮಚರಿತ್ರೆಯ ನಿರೂಪಣೆಯಾಗಿದೆ.

ತಮ್ಮ ವೃತ್ತಿಜೀವನದ ಆರಂಭದಲ್ಲಿ, ಅವರು ಕಾಲ್ಪನಿಕ ಕಥೆಯಿಂದ ಆತ್ಮಚರಿತ್ರೆಯತ್ತ ಗಮನ ಹರಿಸಿದರಾದರೂ ಅವರ ಬರಹಗಳಲ್ಲಿರುವ ಐತಿಹಾಸಿಕ ಮತ್ತು ವೈಯಕ್ತಿಕ ಅನುಭವಗಳ ಸಂಯೋಜನೆ ವಿಶಿಷ್ಟ ಹೊಳಹನ್ನು ನೀಡುತ್ತದೆ. ತಮ್ಮ ಹೆತ್ತವರ ಸಾಮಾಜಿಕ ನಡುವಳಿಕೆಗಳು ಹಾಗೂ ಸಂಬಂಧಗಳು, ತಮ್ಮ ಹದಿಹರೆಯದ ನೆನಪುಗಳು, ಅವರ ಮದುವೆ, ಯುರೋಪಿಯನ್ ವ್ಯಕ್ತಿಯೊಂದಿಗೆ ಅವರ ಭಾವೋದ್ರಿಕ್ತ ಸಂಬಂಧ , ಅವರ ಗರ್ಭಪಾತ, ಆಲ್ಝೈಮರ್ನ ಕಾಯಿಲೆ, ಅವಳ ತಾಯಿಯ ಸಾವು, ಸ್ತನ ಕ್ಯಾನ್ಸರ್ ಇತ್ಯಾದಿಗಳ  ಮೇಲೆ ಬರೆದರು.

ಎ ವುಮನ್ಸ್ ಸ್ಟೋರಿ, ಎ ಮ್ಯಾನ್ಸ್ ಪ್ಲೇಸ್, ಮತ್ತು ಸಿಂಪಲ್ ಪ್ಯಾಶನ್ ಅನ್ನು ದಿ ನ್ಯೂಯಾರ್ಕ್ ಟೈಮ್ಸ್ ಅತ್ಯಂತ ಮಹತ್ವದ ಕೃತಿಗಳು ಎಂದು ಗುರುತಿಸಿತು. ಎ ವುಮನ್ಸ್ ಸ್ಟೋರಿ ಲಾಸ್ ಏಂಜಲೀಸ್ ಟೈಮ್ಸ್ ಬುಕ್ ಪ್ರೈಜ್‍ನ ಕೊನೆಯ ಹಂತ ತಲುಪಿದ್ದನ್ನು ಇಲ್ಲಿ ಸ್ಮರಿಸಬಹುದು. 1998ರ ಪಬ್ಲಿಷರ್ಸ್ ವೀಕ್ಲಿಯು ಶೇಮ್ ಕೃತಿಯನ್ನು ಬೆಸ್ಟ್ ಬುಕ್ ಎಂದು ಹೆಸರಿಸಿತು.  ʼಐ ರಿಮೇನ್ ಇನ್ ಡಾರ್ಕ್‌ ನೆಸ್ ಎ ಟಾಪ್ ಮೆಮೊಯಿರ್ ಆಫ್ 1999ʼ ಕೃತಿಯನ್ನು ದಿ ವಾಷಿಂಗ್ಟನ್ ಪೋಸ್ಟ್ ಮತ್ತು ʼದಿ ಪೊಸೆಷನ್ʼ ಅನ್ನು ಮೋರ್ ಮ್ಯಾಗಜೀನ್ 2008 ರ ಟಾಪ್ ಟೆನ್ ಬುಕ್ ಎಂದು ಪಟ್ಟಿ ಮಾಡಿದೆ.

ಅವರ 2008 ರ ಐತಿಹಾಸಿಕ ಆತ್ಮಚರಿತ್ರೆ ʼದ ಇಯರ್ಸ್ʼ  (ಲೆಸ್ ಅನ್ನೀಸ್)  ಫ್ರೆಂಚ್ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು, ಇದನ್ನು ಅನೇಕರು ಅವರ ಅತ್ಯಂತ ಮಹತ್ವದ ಕೃತಿ ಎಂದು ಪರಿಗಣಿಸಿದ್ದಾರೆ.  ಈ ಪುಸ್ತಕದಲ್ಲಿ, ಎರ್ನಾಕ್ಸ್ ತಮ್ಮ ಬಗ್ಗೆ ಮೊದಲ ಬಾರಿಗೆ ಮಧ್ಯಮ ಪುರುಷದಲ್ಲಿಟ್ಟು (‘ಎಲ್ಲೆ’ ಅಥವಾ ಇಂಗ್ಲಿಷ್‍ನಲ್ಲಿ ‘ಆಕೆ’) ಬರೆದಿದ್ದಾರೆ. ಇದು ಎರಡನೇ ವಿಶ್ವಯುದ್ಧದ ನಂತರ 2000ರ ದಶಕದ ಆರಂಭದವರೆಗೆ ಫ್ರೆಂಚ್ ಸಮಾಜದ ಮೇಲೆ ಎದ್ದುಕಾಣುವ ನೋಟವನ್ನು ನೀಡುತ್ತದೆ.  ಇದು ಮಹಿಳೆಯ ಕಥೆಯಷ್ಟೇ ಆಗಿರದೆ ಅವಳು ವಾಸಿಸುತ್ತಿದ್ದ ಸಮಾಜದ ಕಥೆಯಾಗಿದೆ.

ಪ್ರಶಸ್ತಿಗಳು ಮತ್ತು ಗೌರವಗಳು

ʼದಿ ಇಯರ್ಸ್ʼ ಕೃತಿಯು 2008  ಮಾರ್ಗುರೈಟ್ ಡುರಾಸ್ ಪ್ರಶಸ್ತಿ, 2008‌ ರ ಪ್ರಿಕ್ಸ್ ಡಿ ಲಾ ಲಾಂಗ್ಯೂ ಫ್ರಾಂಚೈಸ್ , 2009 ರ ಟೆಲಿಗ್ರಾಮ್ ರೀಡರ್ಸ್ ಪ್ರಶಸ್ತಿ ಮತ್ತು 2016 ಸ್ಟ್ರೆಗಾ ಯುರೋಪಿಯನ್ ಪ್ರಶಸ್ತಿ, 31 ನೇ ವಾರ್ಷಿಕ ಫ್ರೆಂಚ್-ಅಮೇರಿಕನ್ ಫೌಂಡೇಶನ್ ಅನುವಾದ ಪ್ರಶಸ್ತಿಗೆ ಅಲಿಸನ್ ಎಲ್ ಸ್ಟ್ರೇಯರ್ ಅನುವಾದಿಸಿದ ʼದಿ ಇಯರ್ಸ್ʼ ಕೃತಿ ಅಂತಿಮ ಸ್ಪರ್ಧಿಯಾಗಿತ್ತು ಮತ್ತು 2019 ರಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಅದು  ಅನುವಾದದಲ್ಲಿ ಮಹಿಳೆಯರಿಗಾಗಿ ಕೊಡಮಾಡುವ 2019 ವಾರ್ವಿಕ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಒಟ್ಟಾರೆಯಾಗಿ ತಮ್ಮ ಸಾಹಿತ್ಯಿಕ ಔಟ್‍ಪುಟ್‍ಗಾಗಿ ಪ್ರೀಮಿಯೊ ಹೆಮಿಂಗ್‍ವೇ ಪ್ರಶಸ್ತಿಯನ್ನು ಪಡೆದಿರುವುದು ಗಣನೀಯ ಸಾಧನೆ. 2019ರಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳ ಸರಮಾಲೆಯನ್ನೇ ಮುಡಿಗೇರಿಸಿಕೊಂಡಿರುವ ಇವರಿಗೆ 6 ಅಕ್ಟೋಬರ್ 2022ರಂದು 2022 ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ನೊಬೆಲ್‌ ಪ್ರಶಸ್ತಿ ಎಂದರೆ..

ಆಲ್ಫ್ರೆಡ್ ನೊಬೆಲ್ ಅವರು ತಮ್ಮ ಕೊನೆಯ ಉಯಿಲಿನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಶಾಂತಿ, ಶರೀರಶಾಸ್ತ್ರ ಅಥವಾ ಔಷಧ ಮತ್ತು ಸಾಹಿತ್ಯದಲ್ಲಿ “ಮನುಕುಲಕ್ಕೆ ಹೆಚ್ಚಿನ ಪ್ರಯೋಜನವನ್ನು” ನೀಡುವವರಿಗೆ ಬಹುಮಾನಗಳ ಸರಣಿಯನ್ನು ರಚಿಸಲು ತನ್ನ ಹಣವನ್ನು ಬಳಸಬೇಕೆಂದು ಷರತ್ತು ವಿಧಿಸಿದರು. ನೊಬೆಲ್ ತಮ್ಮ ಜೀವಿತಾವಧಿಯಲ್ಲಿ ಹಲವಾರು ಉಯಿಲುಗಳನ್ನು ಬರೆದರೂ, ಕೊನೆಯದನ್ನು ಅವರು ಸಾಯುವ ಒಂದು ವರ್ಷದ ಮೊದಲು ಬರೆದು 27 ನವೆಂಬರ್ 1895 ರಂದು ಪ್ಯಾರಿಸ್‍ನಲ್ಲಿರುವ ಸ್ವೀಡಿಷ್-ನಾರ್ವೇಜಿಯನ್ ಕ್ಲಬ್‍ನಲ್ಲಿ ಸಹಿ ಹಾಕಿದರು. ನೊಬೆಲ್ ಐದು ನೊಬೆಲ್ ಪ್ರಶಸ್ತಿಗಳನ್ನು ಸ್ಥಾಪಿಸಲು ಮತ್ತು ನೀಡಲು ತನ್ನ ಒಟ್ಟು ಆಸ್ತಿಯ 94%  ಅಂದರೆ 31 ಮಿಲಿಯನ್ ಸ್ವೀಡಿಷ್ ಕ್ರೋನರ್ ಬಳಸಲು ಅನುಮತಿ ನೀಡಿದ್ದರು.

ಪ್ರತಿ ವರ್ಷ, ಸ್ವೀಡಿಷ್ ಅಕಾಡೆಮಿ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಗಾಗಿ ಅಭ್ಯರ್ಥಿಗಳ ನಾಮನಿರ್ದೇಶನಗಳಿಗಾಗಿ ವಿನಂತಿಗಳನ್ನು ಕಳುಹಿಸುತ್ತದೆ. ಅಕಾಡೆಮಿಯ ಸದಸ್ಯರು, ಸಾಹಿತ್ಯ ಅಕಾಡೆಮಿಗಳು ಮತ್ತು ಸಮಾಜಗಳ ಸದಸ್ಯರು, ಸಾಹಿತ್ಯ ಮತ್ತು ಭಾಷೆಯ ಪ್ರಾಧ್ಯಾಪಕರು, ಮಾಜಿ ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತರು ಮತ್ತು ಬರಹಗಾರರ ಸಂಘಟನೆಗಳ ಅಧ್ಯಕ್ಷರು ಹೀಗೆ ಬಹಳಷ್ಟು ಜನರಿಗೆ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಲು ಅವಕಾಶವಿದೆ. ಸ್ವತಃ ನಾಮನಿರ್ದೇಶನ ಮಾಡಲು ಅನುಮತಿ ಇಲ್ಲ.

ಸ್ವೀಡಿಷ್ ಅಕಾಡೆಮಿಯು ಜೀವಿತಾವಧಿ ಚುನಾಯಿತರಾದ 18 ಸದಸ್ಯರನ್ನು ಹೊಂದಿದೆ. 2018ರವರೆಗೆ ಯಾರಿಗೂ ತಾಂತ್ರಿಕವಾಗಿ ಹೊರಹೋಗಲು ಅನುಮತಿಯಿರಲಿಲ್ಲ. 2 ಮೇ 2018 ರಂದು ಕಿಂಗ್ ಕಾರ್ಲ್ ಗುಸ್ತಾಫ್ ಅಕಾಡೆಮಿಯ ನಿಯಮಗಳನ್ನು ತಿದ್ದುಪಡಿ ಮಾಡಿ ಸದಸ್ಯರು ರಾಜೀನಾಮೆ ನೀಡಲು ಅವಕಾಶ ನೀಡಿದರು. ಎರಡು ವರ್ಷಕ್ಕಿಂತ ಹೆಚ್ಚು ಕಾಲ ಅಕಾಡೆಮಿಯ ಕೆಲಸದಲ್ಲಿ ನಿಷ್ಕ್ರಿಯರಾಗಿರುವ ಸದಸ್ಯರಿಗೆ ರಾಜೀನಾಮೆ ನೀಡುವಂತೆಯೂ ಹೊಸ ನಿಯಮಗಳಲ್ಲಿ ಹೇಳಲಾಗಿದೆ. ನೊಬೆಲ್ ಸಮಿತಿಯ ಸದಸ್ಯರು ಅಕಾಡೆಮಿಯ ಸದಸ್ಯರಲ್ಲಿ ಮೂರು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ ಮತ್ತು ವಿಶೇಷವಾಗಿ ನೇಮಕಗೊಂಡ ಪರಿಣಿತ ಸಲಹೆಗಾರರಿಂದ ಸಹಾಯ ಪಡೆಯುತ್ತಾರೆ.

ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ..

ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯು 1901 ರಿಂದ ಪ್ರತಿವರ್ಷ ಯಾವುದೇ ದೇಶದ ಲೇಖಕರಿಗೆ ನೀಡಲಾಗುವ ಸ್ವೀಡಿಷ್ ಸಾಹಿತ್ಯ ಪ್ರಶಸ್ತಿಯಾಗಿದ್ದು ಸ್ವೀಡಿಷ್ ಕೈಗಾರಿಕೋದ್ಯಮಿ ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯಂತೆ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ, ಆದರ್ಶವಾದಿ ದಿಕ್ಕಿನಲ್ಲಿ ಅತ್ಯುತ್ತಮ ಕೆಲಸ ಮಾಡಿದ ಲೇಖಕರಿಗೆ ನೀಡಲಾಗುತ್ತದೆ.  ಕೆಲವೊಮ್ಮೆ ವೈಯಕ್ತಿಕ ಕೃತಿಗಳನ್ನು ವಿಶೇಷವಾಗಿ ಗಮನಾರ್ಹವೆಂದು ಉಲ್ಲೇಖಿಸಲಾಗಿದೆಯಾದರೂ, ಪ್ರಶಸ್ತಿಯು ಒಟ್ಟಾರೆಯಾಗಿ ಲೇಖಕರ ಕೃತಿಯ ಮೇಲೆ ಆಧಾರಿತವಾಗಿದೆ. ಸ್ವೀಡಿಷ್ ಅಕಾಡೆಮಿ ಇದನ್ನು ತೀರ್ಮಾನಿಸುವ ಹಕ್ಕನ್ನು ಪಡೆದಿದೆ. ಸಾಮಾನ್ಯವಾಗಿ ಅಕ್ಟೋಬರ್ ಮೊದಲ ವಾರದಲ್ಲಿ ಇದನ್ನು ಘೋಷಿಸಲಾಗುತ್ತದೆ. 1901 ರಲ್ಲಿ, ಫ್ರೆಂಚ್ ಕವಿ ಮತ್ತು ಪ್ರಬಂಧಕಾರ ಸುಲ್ಲಿ ಪ್ರುದೊಮ್ಮೆ (1839-1907) ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಮೊದಲ ಸಾಹಿತಿ.

ಈ ನಿಟ್ಟಿನಲ್ಲಿ ನೋಡಿದೆರೆ ನೊಬೆಲ್ ಪಡೆದವರಲ್ಲಿ ಎರ್ನಾಕ್ಸ್ 16ನೇ ಫ್ರೆಂಚ್ ಸಾಹಿತಿಯಾದರೂ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಮೊದಲ ಫ್ರೆಂಚ್ ಮಹಿಳೆ. ಅವರ  ಕಲೆಕ್ಟಿವ್ ಆಟೋಬಯಾಗ್ರಫಿ (Les Annees) ಗೆ ಅಂದರೆ ಅವರ ಸಮಗ್ರ ಆತ್ಮಚರಿತ್ರೆಗೆ ನೊಬೆಲ್ ಬಹುಮಾನ ದೊರೆತಿದೆ. ಅವರನ್ನು ಅಭಿನಂದಿಸುತ್ತಾ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್  ಅವರು “ಮಹಿಳೆಯರ ಮತ್ತು ಮರೆತು ಹೋದವರ ಸ್ವಾತಂತ್ರ್ಯದ ಧ್ವನಿ” ಎಂದು ಹೇಳಿರುವುದು ಎರ್ನಾಕ್ಸ್‌ ಗೆ ಸಂದ ಮತ್ತೊದು ಹೆಮ್ಮೆಯ ಗರಿ ಎಂದೇ ಹೇಳಬಹುದು.

ಶ್ರೀದೇವಿ ಕೆರೆಮನೆ
ವೃತ್ತಿಯಿಂದ ಫ್ರೌಢ ಶಾಲಾ ಶಿಕ್ಷಕಿ. ಸಾಹಿತ್ಯ ರಚನೆ ಹವ್ಯಾಸ.