Offence – Peepal Media

ಪತ್ನಿಯ ಒಪ್ಪಿಗೆ ಇಲ್ಲದ ಲೈಂಗಿಕ ಕ್ರಿಯೆ ಅತ್ಯಾಚಾರವಾಗುತ್ತದೆ – ಜಸ್ಟಿಸ್‌ ದೀಪಕ್‌ ಗುಪ್ತಾ
ಲೈಂಗಿಕ ಕ್ರಿಯೆಗೆ ಮಹಿಳೆಯರಿಗೆ ತಮ್ಮ ಪತಿ ‘ನೋ’ ಎಂದು ಹೇಳುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರು ಖಾಸಗಿತನದ ಹಕ್ಕಿನ (Right to Privacy) ಹಿನ್ನೆಲೆಯಲ್ಲಿ ವೈವಾಹಿಕ ಅತ್ಯಾಚಾರದ (Marital Rape) ಬಗ್ಗೆ ಮಾತನಾಡುತ್ತಾ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಲೈವ್‌ಲಾ (LiveLaw) 10 ನೇ ವಾರ್ಷಿಕೋತ್ಸವದ ಉಪನ್ಯಾಸ ಸರಣಿಯನ್ನು ವೈವಾಹಿಕ ಜೀವನದಲ್ಲಿ ನಡೆಯುವ ಅತ್ಯಾಚಾರದ ಕುರಿತು ವಿವರಿಸುತ್ತಾ “ಗಂಡನ ಬಳಿ ಸೆಕ್ಸ್‌ಗೆ ‘ಬೇಡ’ ಎಂದು ಹೇಳುವ ಹಕ್ಕಿದೆ. ದಂಪತಿಗಳು ಎಂಬ ಕಾರಣಕ್ಕೆ ಸಂಭೋಗ ಬೇಡ ಎನ್ನುವ ಹಕ್ಕು ಪತ್ನಿಗೆ ಇದೆ. ಅವಳು ಇಲ್ಲ ಎಂದು ಹೇಳಿದಾಗ ಅದು ಇಲ್ಲವೆಂದೇ ಎಂದರ್ಥ,” ಏಂದು ಗುಪ್ತಾ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ನೀಡಲು ಬಾಕಿ ಇರುವ ವೈವಾಹಿಕ ಜೀವನದಲ್ಲಿ ನಡೆಯುವ ಅತ್ಯಾಚಾರದ ಕುರಿತು ಹೇಳಿಕೆ ನೀಡಿದ್ದು“ಇದಕ್ಕಿಂತ ಹೆಚ್ಚೇನೂ ಇಲ್ಲ. ಇದು ತುಂಬಾ ಸರಳವಾದ ವಾದ. ನಾವು ನಮ್ಮ ಪುರುಷಪ್ರಧಾನ ಮತ್ತು ಹಳೆಯ ವ್ಯವಸ್ಥೆಯನ್ನು ಮೀರಿ ನಿಲ್ಲಬೇಕು, ” ಎಂದು ಹೇಳಿದ್ದಾರೆ.

2017ರ ಇಂಡಿಪೆಂಡೆಂಟ್ ಥಾಟ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ತೀರ್ಪಿನಲ್ಲಿ (Independent Thought v. Union of India) ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಹಾಗೂ ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರ ಸುಪ್ರೀಂ ಕೋರ್ಟ್ ಪೀಠದ “15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ಪತ್ನಿಯೊಂದಿಗೆ ಲೈಂಗಿಕ ಸಂಭೋಗ ನಡೆಸುವುದು ಮಾತ್ರವಲ್ಲ, ಪತ್ನಿಯ ಒಪ್ಪಿಗೆ ಇಲ್ಲದೆ ನಡೆಸುವ ಲೈಂಗಿಕ ಕ್ರಿಯೆಯು ಅತ್ಯಾಚಾರವೇ ಆಗಿದೆ” ಎಂಬ ತೀರ್ಪನ್ನು ನೀಡಿತ್ತು.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 375 ರ ಪ್ರಕಾರ, ಅತ್ಯಾಚಾರವೆಂದರೆ ಮಹಿಳೆಯ ಸಮ್ಮತಿಯಿಲ್ಲದ ಸಂಭೋಗವನ್ನು ಸೇರಿದಂತೆ ಎಲ್ಲಾ ರೀತಿಯ ಲೈಂಗಿಕ ದೌರ್ಜನ್ಯ. ಸೆಕ್ಷನ್ 375 ಕ್ಕೆ ಇರುವ ಎಕ್ಸೆಪ್ಶನ್ 2ರ ಅಡಿಯಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಪತಿ ಮತ್ತು ಹೆಂಡತಿಯ ನಡುವಿನ ಲೈಂಗಿಕ ಸಂಭೋಗ “ಅತ್ಯಾಚಾರ” ಆಗುವುದಿಲ್ಲ ಎಂದಿತ್ತು. ಆದರೆ 2017ರ ಇಂಡಿಪೆಂಡೆಂಟ್ ಥಾಟ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ತೀರ್ಪಿನಲ್ಲಿ ಪತ್ನಿಯ ಸಮ್ಮತಿ ಇಲ್ಲದ ಯಾವುದೇ ಲೈಂಗಿಕ ಚಟುವಟಿಕೆಯೂ ಅತ್ಯಾಚಾರವಾಗುತ್ತದೆ.