Olympic – Peepal Media

ವಿನೇಶ್‌ ಪೋಗಟ್‌: ಈ ದಿಟ್ಟ ಹುಡುಗಿಯನ್ನು ಭಾರತದ ಬೀದಿಗಳಲ್ಲಿ ಅಕ್ಷರಶಃ ಎಳೆದಾಡಲಾಗಿತ್ತು!
ಹನುಮಂತ ಹಾಲಿಗೇರಿ

“ನನ್ನ ಸಹ ಆಟಗಾರ್ತಿಯರ, ನನ್ನ ಗೆಳತಿಯರ ಮೇಲೆ ಕೆಲವು ತಿಂಗಳ  ಹಿಂದೆಯಷ್ಟೇ ನಮ್ಮವರಿಂದಲೇ ಲೈಂಗಿಕ ದೌರ್ಜನ್ಯ  ನಡಿತಲ್ಲ,  ಆಗ ಆದ ಅವಮಾನದ ಕೆಂಡ ಇನ್ನೂ ನನ್ನ ಎದೆಯಲ್ಲಿ ಹಾಗೆ ಉರಿಯುತ್ತಿದೆ. ಆಗ ನನಗೆ ಅನಿಸಿದ್ದು ಗೆಲುವೊಂದೆ ಇದಕ್ಕೆಲ್ಲ ಉತ್ತರ. ನಾನು ಒಲಂಪಿಕ್‌ನಲ್ಲಿ ಗೆಲುವು ದಾಖಲಿಸುವ ಮೂಲಕ ನಾವು ಮಹಿಳಾ ಕುಸ್ತಿ ಪಟುಗಳು ಅಂದ್ರೆ ಎಂಥ ತಾಕತ್ತು ಅನ್ನುವುದನ್ನುತೋರಿಸ್ತಿನಿ ನೋಡ್ತಿರಿ” ಎಂದಿದ್ದಳು ಈ ಹುಡುಗಿ ವಿನೇಶ್‌ ಪೊಗಟ್.‌

ಹೀಗಂತ ಟಿವಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಟೋಕಿಯೋದಲ್ಲಿ ಒಲಂಪಿಕ್‌ನಲ್ಲಿ ಕಂಚು ಗೆದ್ದು  ತಂದಿರುವ ಹೆಮ್ಮೆಯ ಕ್ರೀಡಾಪಟು ಭಜರಂಗ್‌ ಪೋನಿಯಾ. ಅಂಥ ದಿಟ್ಟ ಹುಡುಗಿಯ ಚಿನ್ನದ ಕನಸು ಈಗ ಭಗ್ನಗೊಂಡಿದೆ. ಈ ನೆಲದ ಮಗಳು ಚಿನ್ನ ತಂದೆ ತರುತ್ತಾಳೆ ಎಂದು ಕಾಯ್ತು ಕುಳಿತಿದ್ದ ಭಾರತೀಯರೆಲ್ಲರಿಗೂ ಸಹ ಈಗ ನಿರಾಶೆ ಮಡುವುಗಟ್ಟಿದೆ. ಕೇವಲ ತೂಕದಲ್ಲಿ 100 ಗ್ರಾಮ ವ್ಯತ್ಯಾಸವಾಯಿತೆಂಬ ಕ್ಷುಲ್ಲಕ ಕಾರಣಕ್ಕೆ ವಿನೇಶ್‌ ಪೊಗಟ್‌ ಅವರನ್ನು ಆಟದಿಂದ ಹೊರಗಿಟ್ಟಿರುವುದನ್ನು ಅನ್ಯಾಯ ಏನ್ನಬೇಕೋ, ವಿಧಿ ವಿಪರ್ಯಾಸವೆನ್ನಬೇಕೋ ಗೊತ್ತಾಗುತ್ತಿಲ್ಲ.

ಇತ್ತೀಚೆಗಷ್ಟೇ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಭಾರತೀಯ ಕುಸ್ತಿ ಸಂಸ್ಥೆ ವಿರುದ್ಧದ ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಮಹಿಳಾ ಕುಸ್ತಿಪಟುಗಳು ವಾರಗಟ್ಟಲೇ ಪ್ರತಿಭಟನೆ ನಡೆಸಿದ್ದರು. ಆಗ  ಯಥಾಪ್ರಕಾರ ನಮ್ಮ ದೇಶದ ಕ್ಷುಲ್ಲಕ ರಾಜಕಾರಣಿಗಳ ಕುಮ್ಮಕ್ಕಿನಿಂದಾಗಿ ಪೊಲೀಸರು ಈ ವಿನೇಶ್‌ ಪೋಗಟ್‌ಪ್ರತಿಭಟನಾ ನಿರತ ಕ್ರೀಡಾಪಟುಗಳನ್ನು ದರದರನೆ ಎಳೆದೊಯ್ದಿದ್ದರು. ಆದರೆ, ಆಗ ಅವರ ಬೆಂಬಲಕ್ಕೆ ಯಾವ ಸರ್ಕಾರವೂ ಬರಲಿಲ್ಲ. ಕುಸ್ತಿ ಸಂಸ್ಥೆಯ ಅಧ್ಯಕ್ಷ ಮತ್ತು ಸಂಸದ ಬೃಜ್‌ ಭೂಷಣ್‌ ಶರಣ್‌ ಸಿಂಗ್‌ ತಮ್ಮ ಅಧಿಕಾರ ಬಳಸಿ ಕುಸ್ತಿಪಟುಗಳ ಧರಣಿಯನ್ನು ಬಲವಂತವಾಗಿ ಅಂತ್ಯಗೊಳಿಸಿದ್ದರು. ನ್ಯಾಯ ಸಿಗದೇ ಇದ್ದ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದ ಪದಕಗಳನ್ನೇ ಕುಸ್ತಿಪಟುಗಳು ನದಿಗೆ ಬಿಸಾಡಿದ್ದ ಹೀನಾಯ ಘಟನೆಗೆ ಅಂದು ದೆಹಲಿ ಸಾಕ್ಷಿಯಾಗಿತ್ತು.

ಆ ಪ್ರತಿಭಟನೆಯ ಸಂದರ್ಭದಲ್ಲಿ ಒಳಗೊಳಗೆ ಉರಿಯುತ್ತ ಕುಳಿತಿದ್ದ ವಿನೇಶ್‌ಗೆ ಅಂದೇ ನಮ್ಮಗಳ ಗೆಲುವೊಂದೆ ಇದಕ್ಕೆಲ್ಲ ಉತ್ತರ. ನಾನು ಗೆದ್ದು ತೋರಿಸುತ್ತೇನೆ. ಇವರ ದೌರ್ಜನ್ಯಕ್ಕೆ ಅದೇ ನನ್ನ ಉತ್ತರ ಎಂದು ಸಂಕಲ್ಪ ಮಾಡಿದ್ದರು. ಆ ಮೂಲಕ ಅವರು, ದೌರ್ಜನ್ಯದ ವಿರುದ್ಧ ಹೋರಾಟ ನಡೆಸಲು ವಿಭಿನ್ನ ಮಾರ್ಗ ತುಳಿಯಲು ಹಟ ತೊಟ್ಟಿದ್ದರು.

ವಿಶ್ವಚಾಂಪಿಯನ್‌ ಆಗಲು ಹೊರಟಿರುವ ಈ ಹುಡುಗಿಯನ್ನು ಅವಳ ದೇಶದಲ್ಲಿ ಕಾಲಿನಿಂದ ಒದೆಯಲಾಗಿತ್ತು, ಈ ಹುಡುಗಿಯನ್ನು ತನ್ನ ದೇಶದ ಬೀದಿಗಳಲ್ಲಿ ಎಳೆದಾಡಲಾಗಿತ್ತು. ಈ ಹುಡುಗಿ ಈಗ ಜಗತ್ತನ್ನು ಗೆಲ್ಲಲು ಹೊರಟಿದ್ದಾಳೆ. ಆದರೆ ಈ ದೇಶದ ವ್ಯವಸ್ಥೆ ವಿರುದ್ಧ ಹೋರಾಡಿ ಆಕೆ ಸೋತಿದ್ದಳು.” ಎಂದು ವಿನೇಶ್‌ ಫೋಗಾಟ್‌ ಅವರ ಭಾವ ಕೂಡ ಆಗಿರುವ ಬಜರಂಗ್ ಪುನಿಯಾ ಟ್ವೀಟ್‌ ಮಾಡಿದ್ದಾರೆ.  ಅಷ್ಟೇ ಅಲ್ಲದೇ ಇಎಸ್‌ಪಿಎನ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಬಜರಂಗ್ ಪುನಿಯಾ, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ವಿನೇಶ್‌ ಫೋಗಾಟ್‌ ಭಾರತೀಯ ಯುವ ಮಹಿಳಾ ಕುಸ್ತಿಪಟುಗಳ ಭವಿಷ್ಯ ಸಲುವಾಗಿ ಪದಕ ಗೆಲ್ಲಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.

“ನಾನು ಕುಸ್ತಿಪಟುಗಳ ಭವಿಷ್ಯ ಸಲುವಾಗಿ ಹೋರಾಡುತ್ತಿದ್ದೇನೆ. ಇದು ನನಗೋಸ್ಕರ ಅಲ್ಲ. ನನ್ನ ವೃತ್ತಿಬದುಕು ಮುಗಿದಿದೆ. ಇದು ನನ್ನ ಕೊನೆಯ ಒಲಿಂಪಿಕ್ಸ್‌. ನಾನು ಯುವ ಮಹಿಳಾ ಕುಸ್ತಿಪಟುಗಳ ಸಲುವಾಗಿ ಹೋರಾಡಬೇಕು. ದೇಶದಲ್ಲಿ ಯುವ ಮಹಿಳಾ ಕುಸ್ತಿಪಟುಗಳು ಯಾವುದೇ ಭಯ ಅಂಜಿಕೆ ಇಲ್ಲದೆ ಬಂದು ಕುಸ್ತಿ ಅಖಾಡದಲ್ಲಿ ಸುರಕ್ಷಿತವಾಗಿ ಹೋರಾಡುವಂತ್ತಾಗಬೇಕು. ಈ ಉದ್ದೇಶ ಸಲುವಾಗಿಯೇ ನಾನು ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ಈಗ ಇಲ್ಲಿದ್ದೇನೆ ಎಂದು ವಿನೇಶ್ ನನ್ನ ಬಳಿ ಹೇಳಿದ್ದರು,” ಎಂದು ಬಜರಂಗ್ ಪೂನಿಯಾ ಇಎಸ್‌ಪಿಎನ್‌ಗೆ ತಿಳಿಸಿದ್ದಾರೆ.

ವಿನೇಶ್‌ ಅವರ ಹಟ ಇನ್ನೇನು ಫಲಪ್ರದವಾಗುವುದರಲ್ಲಿತ್ತು. ಆ ಕ್ಷಣಕ್ಕಾಗಿ ಇಡೀ ಭಾರತ ಕಾಯ್ದು ಕುಳಿತಿತ್ತು.  ನಿನ್ನೆಯಷ್ಟೆ ಸೆಮಿಫೈನಲ್‌ನಲ್ಲಿ ವಿಜಯ ಸಾಧಿಸಿ ಐತಿಹಾಸಿಕ  ಬೆಳ್ಳಿ ಪದಕ ಖಾತರಿಪಡಿಸಿದ್ದ ವಿನೇಶ್‌ ಇವತ್ತು ಬೆಳಗ್ಗೆ ಮಾಡಿಕೊಂಡ ಸಣ್ಣ ಎಡವಟ್ಟಿನಿಂದ ಚಿನ್ನದ ಪದಕವನ್ನು ಜಸ್ಟ್‌ ಮಿಸ್‌ ಮಾಡಿಕೊಂಡಿರುವುದು ಭಾರತೀಯರೆಲ್ಲರ ಕಣ್ಣಲ್ಲಿ ನಿರಾಸೆ ಕವಿಯುವಂತಿದೆ ಮಾಡಿದೆ.

“ನಿನ್ನೆಯಷ್ಟೇ ನಡೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ ಗೆದ್ದ ಭಾರತದ ಸಿಂಹಿಣಿ ವಿನೇಶ್ ಫೋಗಟ್, 4 ಬಾರಿಯ ವಿಶ್ವ ಚಾಂಪಿಯನ್ ಮತ್ತು ಪ್ರಸ್ತುತ ಒಲಿಂಪಿಕ್ ಚಾಂಪಿಯನ್ ಕುಸ್ತಿಪಟುಗಳನ್ನು ಸೋಲಿಸಿ ವಿಜಯದ ನಗೆ ಬೀರಿದ್ದರು. ಆ ನಂತರ ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ವಿಶ್ವಚಾಂಪಿಯನ್‌ ಎದುರು ಜಯ ದಾಖಲಿಸಿದರು.

ಇಂದು,ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ಫ್ರೀಸ್ಟೈಲ್‌ ಕುಸ್ತಿಯ ಫೈನಲ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಸಲುವಾಗಿ ವಿನೇಶ್‌ ಫೋಗಾಟ್‌ ಅಮೆರಿಕದ ರೆಸ್ಲರ್‌ ಸಾರಾ ಹಿಲ್‌ಡೆಬ್ರಾಂಟ್‌ ಎದುರು ಪೈಪೋಟಿ ನಡೆಸಲಿದ್ದರು. ಗೆದ್ದರೆ ಚಿನ್ನ ಸೋತರೆ ಬೆಳ್ಳಿ ಪದಕಕ್ಕೆ ಕೊರಳೊಡ್ಡವವರಿದ್ದರು. ಆದರೆ ತೂಕದಲ್ಲಾದ ಸಣ್ಣ ಎಡವಟ್ಟಿನಿಂದ ಈ ದಿಟ್ಟ ಹುಡುಗಿಯ ಕನಸು ಭಗ್ನಗೊಂಡಿರುವುದು ಭಾರತೀಯ ಕ್ರೀಡಾಜಗತ್ತಿಗಾದ ದೊಡ್ಡ ಗಾಯವೇ ಸರಿ.

ಹನುಮಂತ ಹಾಲಿಗೇರಿ

ಬರಿಗಾಲಲ್ಲಿ ಆಡಿದ ಭಾರತ ತಂಡ, ದ ಫ್ಲೈಯಿಂಗ್ ಹೌಸ್ ವೈಫ್ ಮತ್ತು ಎಡಗೈ ಶೂಟರ್ ; 1948ರ ಲಂಡನ್ ಒಲಿಂಪಿಕ್ಸ್ ನ ಮೆಲುಕು
ಒಲಿಂಪಿಕ್ ಎಂದೊಡನೆ ಎಲ್ಲಾ ತಪ್ಪು ಕಾರಣಗಳಿಗಾಗಿ ನನಗೆ ನೆನಪಾಗುವುದು ಹಿಟ್ಲರ್ ಅದ್ದೂರಿಯಾಗಿ ಆಯೋಜಿಸಿದ 1936 ಬರ್ಲಿನ್ ಒಲಿಂಪಿಕ್ಸ್ ಮತ್ತು ಇಸ್ರೇಲಿ ಕ್ರೀಡಾಪಟುಗಳ ಮಾರಣಹೋಮ ನೆಡೆದ 1972ರ ಮ್ಯುನಿಕ್ ಒಲಿಂಪಿಕ್. ಬರ್ಲಿನಲ್ಲಿನ ಜೆಸ್ಸಿ ಒವೆನ್ಸ್ ಸಾಧನೆ ಮತ್ತು ಮ್ಯುನಿಕಿನಲ್ಲಿ ಮಾರ್ಕ್ ಸ್ಪಿಟ್ಜ್ ಸಾಧನೆ ಮಾಡಿದರು ಆ ಸಾಧನೆಗಳನ್ನ ಮರೆಮಾಚುವಂತೆ ದೈತ್ಯ ಹಿಟ್ಲರ್ ಮತ್ತು ಇಸ್ರೇಲಿ ಕ್ರೀಡಾಪಟುಗಳ ಹತ್ಯೆ ನನ್ನನ್ನ ಕಾಡಿದೆ. ಈ ಎರಡು ಅಸಾಧಾರಣ ಒಲಿಂಪಿಕ್ಸ್ಗಳ ನಡುವೆ ನಡೆದ 1948ರ ಲಂಡನ್ ಒಲಿಂಪಿಕ್ಸ್ ನಮ್ಮೆಲರ ಸಾಮೂಹಿಕ ನೆನಪಿನಿಂದ ಅಳಿಸಿಹೋಗಿದೆ. 1948ರ ಜುಲೈ ತಿಂಗಳಲ್ಲಿ ನಡೆದ ಈ ಒಲಿಂಪಿಕ್ಸ್ ಮೆಲಕು ಹಾಕುವ ಪ್ರಯತ್ನ ಈ ಬರಹದ್ದು.

1940ರಲ್ಲಿ ಟೋಕಿಯೋದಲ್ಲಿ, 1944ರಲ್ಲಿ ಲಂಡನಿನಲ್ಲಿ ನಡೆಯಬೇಕಿದ್ದ ಎರಡನೇ ಮಹಾಯುದ್ಧದಿಂದ ರದ್ದಾದವು. ಜಗತ್ತೇ ಬಣಗಳಾಗಿ, ಬುಲೆಟ್, ಬಾಂಬುಗಳಿಂದ ಲಕ್ಷಾಂತರ ಮುಗ್ಧರು ಹೆಣವಾಗುತ್ತಿದ್ದ ದಿನಗಳಲ್ಲಿ ಕ್ರೀಡೆ ಆಯೋಜಿಸುವುದಾದರೂ ಹೇಗೆ? ಅಪಾರ ಸಾವು ನೋವಿನ ನಂತರ 1945ರಲ್ಲಿ ಮಹಾಯುದ್ಧ ಕೊನೆಗೊಂಡಿತು. ವಿಷಮಗೊಂಡಿದ್ದ ಭುವಿಯನ್ನ ಶಾಂತತೆಯೆಡೆಗೆ ಮುನ್ನಡೆಸುವ ಜವಾಬ್ದಾರಿ ಲಂಡನ್ ನಗರದ ಮೇಲಿತ್ತು. ಅದರಂತೆ 1948ರಲ್ಲಿ ಒಲಿಂಪಿಕ್ಸ್ ಆಯೋಜನೆಗೊಂಡಿತು. ಮಹಾಯುದ್ಧದ ವೇಳೆ ಜರ್ಮನಿ ನೀಡಿದ ಆಘಾತವನ್ನ ಮರೆಯದ ಇಂಗ್ಲೆಂಡ್ ತನ್ನ ನೆಲದಲ್ಲಿ ನೆಡೆದ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಜರ್ಮನಿಗೆ ಆಹ್ವಾನ ನೀಡಲಿಲ್ಲ. ಏನೇನೋ ಸಬೂಬು ಹೇಳಿ ಜಪಾನನ್ನೂ ಕೂಡ ಹೊರಗಿಡಲಾಯಿತು. ಅರಬ್ ದೇಶಗಳ ಆಕ್ಷೇಪಣೆಯಿಂದ ಇಸ್ರೇಲಿ ಕ್ರೀಡಾಪಟುಗಳಿಗೆ ಅವಕಾಶ ನಿರಾಕರಿಸಲಾಯಿತು. ಲಂಡನ್ ಒಲಿಂಪಿಕ್ಸ್ ತವರಾದ ವೆಂಬ್ಲಿ ಕ್ರೀಡಾಂಗಣ ರಾಜಕೀಯ ಪಗಡೆ ಹಾಸಾಯಿತು.

ಲಂಡನ್ ಒಲಿಂಪಿಕ್ಸ್ ಭಾರಿ ಸಂಯಮ ಹಾಗು ಆರ್ಥಿಕ ಬಿಗುವಿನಿಂದ ಆಯೋಜಿಸಿದ ಕ್ರೀಡಾಕೂಟ. ಯುದ್ಧದ ಭೀಕರ ಪರಿಣಾಮಗಳು, ಆರ್ಥಿಕ ಬಿಕ್ಕಟ್ಟು ಯಾವುದೇ ಆಡಂಬರಕ್ಕೆ ಅವಕಾಶ ನೀಡಲಿಲ್ಲ. ಚಿನ್ನದ ಪದಕಗಳನ್ನೂ ಕೂಡ ಹೊನ್ನಿನ ತಗಡಿನಿಂದ ಮಾಡಿಸಲಾಗಿತ್ತು. ವೆಂಬ್ಲಿ ಕ್ರೀಡಾಂಗಣವನ್ನ ಬಹಳ ಶ್ರಮದಿಂದ ಸಜ್ಜುಗೊಳಿಸಲಾಗಿತ್ತು. ಬೇರೆ ಒಲಿಂಪಿಕ್ಸ್ ಗಳಲ್ಲಿ ಕ್ರೀಡಾಪಟುಗಳಿಗೆ ವಿಶೇಷ ಗ್ರಾಮವೊಂದನ್ನ ನಿರ್ಮಿಸಲಾಗುತ್ತಿತ್ತು ಆದರೆ ಲಂಡನಿಗೆ ಬಂದ ಕ್ರೀಡಾಳುಗಳು ಮಿಲಿಟರಿ ಕ್ಯಾಂಪ್ಗಳಲ್ಲಿ ಮತ್ತು ಸ್ಕೂಲುಗಳಲ್ಲಿ ತಂಗಬೇಕಾಯಿತು!

ಯುದ್ಧದ ದಿನಗಳಲ್ಲಿ ಜರ್ಮನಿ ಲಂಡನ್ನಿನ ಮೇಲೆ ಬಾಂಬುಗಳ ಸುರಿಮಳೆಗೈದಿತ್ತು. ಸುಮಾರು ಅರ್ಧ ಮಿಲಿಯನ್ ಜನರ ಪ್ರಾಣ ತೆತ್ತಿದ್ದರು. 1948 ಇಂಗ್ಲೆಂಡ್ ಇನ್ನು ಯುದ್ಧದ ದುಷ್ಪರಿಣಾಮಗಳಿಂದ ದಿಂದ ಚೇತರಿಸಿಕೊಂಡಿರಲಿಲ್ಲ. ಆಹಾರಕ್ಕಾಗಿ ಎಲ್ಲೆಡೆ ಆಹಾಕಾರವಿದ್ದ ದಿನಗಳವು. ಅಂತಹ ಸಮಯದಲ್ಲಿ 4300 ಕ್ರೀಡಾಳುಗಳು ಲಂಡನ್ನಿಗೆ ಬಂದಿಳಿದಿದ್ದಾರೆ! ಆ ದಿನಗಳಲ್ಲಿ ಕ್ರೀಡೆಗೆಂದು ಬಂದವರು ಜೊತೆಗೆ ಆಹಾರವನ್ನೂ ಕೊಂಡೊಯ್ಯುವ ಪರಿಸ್ಥಿತಿ ಉದ್ಭವವಾಗಿತ್ತು.

ಅರ್ಜೆಂಟೀನಾ, ಅಮೇರಿಕಾ, ಡೆನ್ಮಾರ್ಕ್, ಫ್ರಾನ್ಸ್ ತಮ್ಮ ಕ್ರೀಡಾಳುಗಳಿಗೆ ನೂರಾರು ಟನ್ ದನದ ಮಾಂಸ, ಮೊಟ್ಟೆ, ಬೆಣ್ಣೆ, ಹಂದಿಯ ಮಾಂಸ, ಬ್ರೆಡ್ಡು ರವಾನಿಸಿದ್ದವು. ಇಂಗ್ಲೆಂಡ್ ಕೂಡ ಸ್ವಲ್ಪ ಮಟ್ಟಿಗೆ ಆಹಾರ ಆಮದು ಮಾಡಿಕೊಂಡು ಯುದ್ಧದ ದಿನಗಳಲ್ಲಿ ಆಗಸದಿಂದ ಬೀಳುವ ಬಾಂಬ್ಗಳಿಂದ ಪ್ರಾಣ ಉಳಿಸಿಕೊಳ್ಳಲು ಮಾಡಿಕೊಂಡಿದ್ದ ಸುರಂಗಗಳಲ್ಲಿಟ್ಟು ಕಾಯಲಿಕ್ಕೆ ಸೈನಿಕರನ್ನ, ಕೆಲವೆಡೆ ವಿದ್ಯಾರ್ಥಿಗಳನ್ನ ನಿಯೋಜಿಸಿತ್ತು. ಬೆಣ್ಣೆ, ಬ್ರೆಡ್ಡು, ಹಾಲು, ಚಾಕೋಲೇಟ್, ಟೀ, ಹಿಟ್ಟು, ವೈನ್ ಲೂಟಿಯಾಗುತ್ತಿದ್ದ ದಿನಗಳವು.

ಫುಟ್ಬಾಲ್ ಇತಿಹಾಸದ ಅತ್ಯಂತ ವಿಚಿತ್ರ ಪಂದ್ಯವೊಂದು ಲಂಡನ್ ಒಲಿಂಪಿಕ್ಸ್ ನಲ್ಲಿ ನಡೆಯಿತು. ಭಾರತದ ಫುಟ್ಬಾಲ್ ತಂಡ ಫ್ರೆಂಚ್ ತಂಡಕ್ಕೆ ಎದುರಾಳಿ. ಏಷ್ಯಾದ ಹೊರಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡದ ಭಾರತ ತಂಡದ ಫುಟ್ಬಾಲ್ ಆಟಗಾರರು ಬರಿಗಾಲಲ್ಲೇ ಮೈದಾನಕ್ಕಿಳಿದಿದ್ದರು! ವಸ್ತ್ರಸಂಹಿತೆಯ ಪ್ರಕಾರ ಅಂದಿನ ಸ್ವೀಡಿಷ್ ತೀರ್ಪುಗಾರ ಭಾರತವನ್ನ ತಕ್ಷಣ ಅನರ್ಹಗೊಳಿಸಬಹುದಿತ್ತು. ಆದರೆ ಅಂದು ಅಂಪೈರ್ ಭಾರತ ತಂಡವನ್ನ ಬರಿಗಾಲಲ್ಲೇ ಆಡಲು ಬಿಟ್ಟಿದ್ದ. ಫ್ರೆಂಚರಿಗೆ ಭಾರತ ಸುಲಭ ತುತ್ತಾಗಬಹುದೆಂದು ಅಂದುಕೊಂಡಿದ್ದವರಿಗೆ ಅಚ್ಚರಿ ಕಾದಿತ್ತು. ಭಾರತ ತಂಡ ಫ್ರೆಂಚ್ ತಂಡಕ್ಕೆ ತೀವ್ರ ಪೈಪೋಟಿ ನೀಡಿತು. ಫ್ರೆಂಚ್ ಮೊದಲ ಗೋಲ್ ಹೊಡೆದರೂ ಸಾರಂಗಪರಿ ಧನರಾಜ್ ರಾಮನ್ ಹೊಡೆದ ಗೋಲ್ ಭಾರತವನ್ನ ಐತಿಹಾಸಿಕ ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿತ್ತು. ಪಂದ್ಯದ ಅಂತ್ಯಕ್ಕೆ ಐದು ನಿಮಿಷಗಳಿರುವಾಗ ಭಾರತ ತಂಡಕ್ಕೆ ಪೆನಾಲ್ಟಿ ಅವಕಾಶ ಸಿಕ್ಕಿತ್ತು. ಶೈಲೇಂದ್ರ ನಾಥ್ ಮಾನ ಅವಕಾಶ ಕೈಚೆಲ್ಲಿದರು. ಫ್ರೆಂಚ್ ತಂಡ ಕೊನೆಯ ಗಳಿಗೆಯಲ್ಲಿ ಗೋಲ್ ಹೊಡೆದು ವಿಜಯಿಯಾದರು.

ಲಂಡನ್ ನಲ್ಲಿ ನೀಡಿದ ಈ ಅದ್ಭುತ ಪ್ರದರ್ಶನದಿಂದ 1950ರಲ್ಲಿ ಬ್ರೆಜಿಲ್ ನಲ್ಲಿ ನಡೆಯಬೇಕಿದ್ದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆಡಲು ಭಾರತ ತಂಡ ಅರ್ಹತೆಗಳಿಸಿತು. ಆದರೆ ಈ ಬಾರಿ ಬರಿಗಾಲಲ್ಲಿ ಆಡುವಂತಿಲ್ಲವೆಂದು ಫಿಫಾ ಪಟ್ಟುಹಿಡಿಯಿತು. ಶೂ ತೊಟ್ಟು ಪ್ರತಿಷ್ಠಿತ ಪಂದ್ಯಾವಳಿ ಆಡುವುದಕ್ಕಿಂತ ಬ್ರೆಜಿಲ್ ದೇಶಕ್ಕೆ ಹೋಗದೆ ಇರುವುದೇ ಇರುವುದೇ ಒಳಿತೆಂದು ಭಾರತ ನಿರ್ಧರಿಸಿತು!

1936ರ ಬರ್ಲಿನ್ ಒಲಿಂಪಿಕ್ಸ್ ಎಂದರೆ ಜೆಸ್ಸಿ ಒವೆನ್ಸ್ ಎಂತಾದರೆ, 1948ರ ಲಂಡನ್ ಒಲಿಂಪಿಕ್ಸ್ ಹಾಲೆಂಡ್ ದೇಶದ ಫ್ಯಾನಿ ಬ್ಲ್ಯಾಂಕರ್ಸ್ -ಕೊಯೆನ್ ನದ್ದು. (Fanny Blankers-Koen). ಫ್ಯಾನಿ 1936ರ ಒಲಿಂಪಿಕ್ಸ್ ನಲ್ಲಿ ಭಾಗವಹಸಿದಾಗ ಆಕೆಗೆ ಕೇವಲ 17ವರ್ಷ. ಬರ್ಲಿನಲ್ಲಾವುದೇ ಪದಕ ಗೆಲ್ಲಲಿಲ್ಲವಾದರೂ ದಿಗ್ಗಜ ಜೆಸ್ಸಿ ಒವೆನ್ಸ್ ಅನ್ನು ಕಣ್ಣಾರೆ ಕಂಡು ಸ್ಪೂರ್ತಿ ಪಡೆದಿದ್ದಳು . ಜೆಸ್ಸಿ ಒವೆನ್ಸ್ ಮಾಡಿದ ಸಾಧನೆಯನ್ನ ಸರಿಗಟ್ಟಬೇಕೆಂದುಕೊಂಡವಳಿಗೆ ಇತಿಹಾಸ ಬಾರಿ ಪೆಟ್ಟನ್ನೇ ನೀಡಿತ್ತು. 1936-1948 ನಡುವೆ ನಡೆಯಬೇಕಿದ್ದ ಎರಡು ಒಲಿಂಪಿಕ್ಸ್ಗಳು ಮಹಾಯುದ್ಧದಿಂದ ರದ್ದಾಗಿದ್ದವು.

ಲಂಡನ್ ಒಲಿಂಪಿಕ್ಸ್ ಶುರುವಾಗುವ ವೇಳೆಗೆ ಫ್ಯಾನಿ 30ವರ್ಷದವಳಾಗಿದ್ದಳು. ಆಕೆಗೆ ವಿವಾಹವಾಗಿ ಇಬ್ಬರು ಮಕ್ಕಳಿದ್ದರು. ಮನೆಮಡದಿಯಾದರು ಆಕೆ ಮಹದಾಸೆಗಳನ್ನ ಮಣ್ಣುಪಾಲು ಮಾಡಿರಲಿಲ್ಲ. ನಿರಂತರ ಅಭ್ಯಾಸದಲ್ಲಿ ತೊಡಗಿದ್ದಳು. ತುಂಡು ಚಡ್ಡಿ ತೊಟ್ಟು ಓಡುವಾಗ ಜನರ ಅಣಕಕ್ಕೆ, ಕೆಂಗಣ್ಣಿ ಫ್ಯಾನಿ ಗುರಿಯಾಗಿದ್ದೂ ಇದೆ. ಪತಿ ಯಾನ್ ಬ್ಲ್ಯಾಂಕರ್ಸ್ ತರಬೇತುದಾರಾನಾದುದರಿಂದ ಜನರ ನಿಂದನೆಯನ್ನ ನಿರ್ಲಕ್ಷ್ಯಸಿಸಿ ಆಕೆ ಸಾಧನೆಯತ್ತ ತನ್ನ ದೃಷ್ಟಿ ನೆಟ್ಟಳು. ಲಂಡನ್ ಒಲಿಂಪಿಕ್ಸ್ ನಲ್ಲಿ ಆಕೆ ಮಾಡಿದ ಸಾಧನೆ ಬಹುಶ ಸಾರ್ವಕಾಲಿಕ ಶ್ರೇಷ್ಠ ಸಾಧನೆಯೆಂದರೆ ಸುಳ್ಳಲ್ಲ. 100, 200 ಮೀಟರ್ ಓಟ. 80ಮೀಟರ್ ಹರ್ಡಲ್ ಓಟ ಮತ್ತು 4×100ರಿಲೆ ಓಟದಲ್ಲಿ ಆಕೆ ಚಿನ್ನದ ಪದಕ ಗೆದ್ದಳು. ವಿವಾಹಿತೆಯೊಬ್ಬಳು, ಮಕ್ಕಳನ್ನ ಹೆತ್ತವಳು ಸಾಧನೆ ಮಾಡಲಾರರು ಎಂಬ ನಂಬಿಕೆಯನ್ನ ಮಣ್ಣುಮಾಡಿದಳು. ಮೊದಲು ನಿಂದಿಸುತ್ತಿದ್ದ ಜನ ಆಕೆಗೆ ನೀಡಿದ ಬಿರುದು- ದ ಫ್ಲೈಯಿಂಗ್ ಹೌಸ್ ವೈಫ್ (The Flying Housewife) ಎಂದು. ಒಲಿಂಪಿಕ್ಸ್ ನಂತರ ಆಂಸ್ಟರ್ಡ್ಯಾಮ್ ನಗರದಲ್ಲಿ ಆಕೆಯ ಮೆರವಣಿಗೆ ನೆಡೆಯಿತು. ಶುಭ ಹಾರೈಸಲು ಬಾರಿ ಸಂಖ್ಯೆಯಲ್ಲಿ ನೆರೆದಿದ್ದರು. ಅಭಿಮಾನಿಯೊಬ್ಬ ಫ್ಯಾನಿಗೆ ಸೈಕಲ್ ವೊಂದನ್ನ ಕೊಡುಗೆ ನೀಡಿದನಂತೆ. ” ಕೆಲ ಮೀಟರ್ ಓಡಿದಕ್ಕೆ ಇಷ್ಟು ದುಬಾರಿ ಕೊಡುಗೆಯೇ” ಎಂದು ಫ್ಯಾನಿ ಉದ್ಗರಿಸಿದ್ದಳಂತೆ! ಫ್ಯಾನಿ “೨೦ನೇ ಶತಮಾನದ ಶ್ರೇಷ್ಠ ಕ್ರೀಡಾಪಟು”ವೆಂದು ಅಂತರರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್ 1999ರಲ್ಲಿ ಘೋಷಿಸಿತು.

ಲಂಡನ್ ಒಲಿಂಪಿಕ್ಸ್ ಕಥನ ಸಾರ್ಜೇಂಟ್ ಕರೋಲಿ ಟಕಾಕ್ಸ್ (karoly Takacs) ಪ್ರಸ್ತಾಪವಿಲ್ಲದೆ ಸಂಪೂರ್ಣವಾಗುವುದಿಲ್ಲ. ಟಕಾಕ್ಸ್ ಹಂಗೇರಿಯ ಶ್ರೇಷ್ಠ ಶೂಟರ್. ಅವನ ಬಲಗೈ ಬಳಸಿ ಟ್ರಿಗರ್ ಎಳೆದರೆ ಗುಂಡು ಗುರಿತಲುಪದೇ ಇರುತ್ತಿರಲಿಲ್ಲ. ಪ್ರತಿ ಬಾರಿಯೂ bulls eye. ಆತ 1936ರ ಒಲಿಂಪಿಕ್ಸ್ ನಲ್ಲಿ ಭಾಗವಹಿಸಬೇಕಿತ್ತು. ಹಂಗೇರಿ ಸೇನೆಯ ಮೇಲಧಿಕಾರಿಗಳಿಗೆ ಮಾತ್ರ ಒಲಿಂಪಿಕ್ಸ್ನಂತಹ ಪ್ರತಿಷ್ಠಿತ ಶೂಟರ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅನುಮತಿಯಿದ್ದ ಕಾರಣದಿಂದ ಆತನಿಗೆ ಅವಕಾಶ ಕೈತಪ್ಪಿತ್ತು. ನಿರಾಶನಾಗದೆ ಶ್ರದ್ಧೆಯಿಂದ ದುಡಿದು ಸೇನೆಯಲ್ಲಿ ಲೆಫ್ಟ್ನೆಂಟ್ ಆದ.

ದುರದೃಷ್ಟವಶಾತ್ ಒಮ್ಮೆ ಆತನ ಬಲಗೈಯಲ್ಲಿದ್ದ ದೋಷಪೂರಿತ ಗ್ರೆನೇಡೊಂದು ಸ್ಫೋಟಿಸಿತು. ಟಕಾಕ್ಸ್ ಬಲಗೈ ಛಿದ್ರಗೊಂಡಿತು. ಅಲ್ಲಿಗೆ ಟಕಾಕ್ಸ್ ಒಲಿಂಪಿಕ್ಸ್ ಪದಕ ಗೆಲ್ಲುವ ಕನಸು ಕೂಡ ಭಗ್ನಗೊಂಡಿತು ಅಂದಿಕೊಂಡಿರ? ಹೂ ಹೂ. ಟಕಾಕ್ಸ್ ತನ್ನ ಎಡಗೈಯಲ್ಲಿ ತರಬೇತಿ ಆರಂಭಿಸಿದ. ಬಹುಬೇಗ ಎಲ್ಲಾ ಚಾಂಪಿಯನ್ಷಿಪಗಳಲ್ಲೂ ಜಯಿಸಿದ. ಒಲಿಂಪಿಕ್ಸ್ ಆಡಲು ಅರ್ಹನಾದ.

ಒಲಿಂಪಿಕ್ಸ್ ಫೈನಲ್ ಸುತ್ತಿನಲ್ಲಿ ಟಕಾಕ್ಸ್ ಎದುರಾಳಿ ಅರ್ಜೆಂಟೀನಾದ ಕಾರ್ಲೋಸ್ ಡಿಯಾಜ್ ಸಾಯೆನ್ಜ್ ವಾಲಿಯೆಂಟೇ. “ನೀನು ಲಂಡನ್ಗೇಕೆ ಬಂದೆ?” ಎಂದು ಕಾರ್ಲೋಸ್ ಟಕಾಕ್ಸ್ನನ್ನು ಚೇಡಿಸಿದನಂತೆ. ಸ್ಥಿತಪ್ರಜ್ಞಾನಾದ ಟಕಾಕ್ಸ್ ಸರಳವಾಗಿ “ನಾನು ಕಲಿಯಲು ಬಂದೆ” ಎಂದನಂತೆ. ಕೊನೆಯ ಸುತ್ತಿನಲ್ಲಿ ಟಕಾಕ್ಸ್ ಪ್ರದರ್ಶನ ನೋಡಿದ್ದ, ದ್ವೀತಿಯ ಬಹುಮಾನ ಗೆದ್ದ ಕಾರ್ಲೋಸ್ ಹೇಳಿದನಂತೆ ” ಶುಭಾಶಯಗಳು ಟಕಾಕ್ಸ್, ನೀನು ತುಂಬಾನೇ ಕಲಿತುಬಿಟ್ಟಿದ್ದೀಯ.” ಎಂದು. ಟಕಾಕ್ಸ್ ಮುಂದುವರೆದು 1952ರ ಹೆಲ್ಸಿಂಕಿ ಒಲಿಂಪಿಕ್ಸ್ನಲ್ಲೂ ಚಿನ್ನದ ಪದಕ ಪಡೆದ. ಇಂದಿಗೂ ಹಂಗೇರಿಯಲ್ಲಿ ಟಕಾಕ್ಸ್ ಹೋರಾಟ, ಶ್ರಮ ಮತ್ತು ಆಶಾವಾದದ ಪ್ರತೀಕ.

ಕ್ರೀಡೆಯೆಂದರೆ ಇಂದಿಗೂ ಕೆಲವರು ಮೂಗು ಮುರಿಯುತ್ತಾರೆ. ಕ್ರೀಡೆಯಂದರೆ ವಿಲಾಸಿ ಜೀವಿಗಳ ಶೋಕಿ, ಅದೊಂದು ದುಬಾರಿ ಹವ್ಯಾಸವೆಂದುಕೊಂಡು, ಕ್ರೀಡೆಯನ್ನ ಸಾರಾಸಗಟಾಗಿ ತಳ್ಳಿ ಹಾಕುವವರಿದ್ದಾರೆ. ಕೆಲ ಕ್ರೀಡೆಗಳು ವಿಲಾಸಿ ಜನರಿಗೆ ಮಾತ್ರ ಸೀಮಿತವಾಗಿರಬಹುದು ಆದರೆ ಕ್ರೀಡೆಯಲ್ಲಿ ನಿಮಗೆ ಸದಾ ಹ್ಯೂಮನ್ ಸ್ಟೋರೀಸ್ ಸಿಗುತ್ತಲೇ ಇರುತ್ತವೆ. ಇಲ್ಲಿ ಎಲ್ಲಾ ಅಡೆತಡೆಗಳನು ಮೀರಿ ಸಾಧನೆ ಮಾಡಿದ ಜೆಸ್ಸಿ ಒವೆನ್ಸ್, ಫ್ಯಾನಿ, ಟಕಾಕ್ಸ್ ನಂತಹ ಸಾಧಕರಿದ್ದಾರೆ. ಸ್ಟೆರೊಯ್ಡ್ಸ್ ಸೇವಿಸಿ ಓಟ ಗೆದ್ದ ಬೆನ್ ಜಾನ್ಸನ್ ನಂತಹ ಖಳನಾಯಕರಿದ್ದಾರೆ.

ಕ್ರೀಡೆ ಎಲ್ಲಾ ಕಾಲದ ಆಗುಹೋಗುಗಳಿಗೆ ಸದಾ ಸ್ಪಂದಿಸುತ್ತಾ ಸಾಗಿದೆ. ಹಿಟ್ಲರ್ ಬರುವನ್ನು ಮೊದಲೇ ಸೂಚಿಸಿದೆ. ಆತನ ವರ್ಣಭೇದ ನೀತಿಗೆ ಎಂದಿಗೂ ಗೆಲುವುಸಿಗದೆಂದು ಮಹಾಯುದ್ಧದ ಮುನ್ನವೇ ಸಾರಿದೆ. ಮಹಾಯುದ್ಧಗಳು ನೆಡೆದಾಗ ಕ್ರೀಡೆ ದಿಗಿಲುಗೊಂಡು ಅವಿತಿದೆ. ರಾಜಕೀಯ, ಕಲೆ, ಸಮಾಜ, ವಿಜ್ಞಾನ, ಜಾಗತಿಕ ಬೆಳವಣಿಗೆಗಳು, ವಿತ್ತ ನೀತಿಗಳು, ರಾಜ್ಯಶಾಸ್ತ್ರ, ವರ್ಗ/ಜಾತಿ ಸಂಘರ್ಷ, ರಾಜತಾಂತ್ರಿಕತೆ ಮತ್ತು ದೇಶದ ಸ್ವಾಸ್ತ್ಯವನ್ನ ಕ್ರೀಡೆಯ ಮೂಲಕವು ಓದಬಹುದೆಂಬುದು ಸತ್ಯ.

ಹರೀಶ್ ಗಂಗಾಧರ್

ಒಲಿಂಪಿಕ್, ಪ್ಯಾರಾಲಿಂಪಿಕ್ಸ್ ವಿಜೇತರಿಗೆ ಗ್ರೂಪ್ ‘ಎ’ ಸರ್ಕಾರಿ ಉದ್ಯೋಗದ ಭರವಸೆ: ಬಸವರಾಜ್ ಬೊಮ್ಮಾಯಿ
ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಉದ್ಯೋಗಗಳಿಗೆ ಕ್ರೀಡಾಪಟುಗಳ ನೇರ ನೇಮಕಾತಿಗೆ ಸಚಿವ ಸಂಪುಟ ಅನುಮೋದನೆ ನೀಡಲಿದ್ದು, ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಆಯ್ಕೆ ಸಮಿತಿಯ ಮೂಲಕ ಈ ನೇಮಕಾತಿಯನ್ನು ಮಾಡಲಾಗುತ್ತದೆ ಮತ್ತು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ಸ್ ವಿಜೇತರಿಗೆ ‘ಎ’ ಗುಂಪಿನ ಉದ್ಯೋಗಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಭರವಸೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಏಕಲವ್ಯ ಮತ್ತು ಇತರ ಕ್ರೀಡಾ ಪ್ರಶಸ್ತಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏಷ್ಯನ್ ಗೇಮ್ಸ್ ಮತ್ತು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ‘ಬಿ’ ಗುಂಪಿನಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು. ಇತರ ಕ್ರೀಡಾಕೂಟಗಳಲ್ಲಿ ಪದಕ ಪಡೆದವರಿಗೆ ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ಹುದ್ದೆಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಈ ವರ್ಷ ಆಗಸ್ಟ್ 15 ರಿಂದ ಸರ್ಕಾರವು 75 ಕ್ರೀಡಾಪಟುಗಳನ್ನು ದತ್ತು ತೆಗೆದುಕೊಂಡಿದೆ ಮತ್ತು ಮುಂದೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ತರಬೇತಿ ನೀಡಲಿದೆ. ಕ್ರೀಡಾಪಟುಗಳಿಗೆ ನಾಲ್ಕು ವರ್ಷಗಳ ಕಾಲ ಉತ್ತಮ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದ್ದು, ಅವರು ಕ್ರೀಡೆಯನ್ನು ಮುಂದುವರಿಸಲು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದಕ್ಕಾಗಿ, ಸರ್ಕಾರವು ಪ್ರತಿ ಕ್ರೀಡಾಪಟುವಿಗೆ 10 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ ಮತ್ತು ಅಗತ್ಯದ ಮೇಲೆ ಹೆಚ್ಚಿನ ಹಣವನ್ನು ನೀಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡೆಗಳ ಅಭಿವೃದ್ಧಿಗಾಗಿ ಯುವ ನೀತಿಯನ್ನು ತರಲಾಗುವುದು ಎಂದು ಹೇಳಿದ ಅವರು. ʼಗೃಹ ಇಲಾಖೆಯಲ್ಲಿ ಶೇ.2ರಷ್ಟು ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಮೀಸಲಿಡಲಾಗಿದೆ, ಹೀಗಾಘಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನೀತಿಗಳನ್ನು ಜಾರಿಗೆ ತರುವ ಕ್ರಮಗಳಿಗೆ ಆದ್ಯತೆ ನೀಡಲಾಗುವುದುʼ ಎಂದು ಬೊಮ್ಮಾಯಿ ಹೇಳಿದರು.