One Fertilizer' Scheme: Launched by PM Modi – Peepal Media

‘ಒಂದು ದೇಶ, ಒಂದು ರಸಗೊಬ್ಬರ’ ಯೋಜನೆ: ಪ್ರಧಾನಿ ಮೋದಿ ಚಾಲನೆ
ದೆಹಲಿ: ‘ಒಂದು ದೇಶ, ಒಂದು ರಸಗೊಬ್ಬರ’ (ONOF) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಚಾಲನೆ ನೀಡಿದರು. ಈ ಮೂಲಕ ದೇಶದ ಅನ್ನದಾತರಿಗೆ ‘ಭಾರತ್‌’ ಬ್ರ್ಯಾಂಡ್‌ನಡಿ ಸಬ್ಸಿಡಿ ದರದ ಯೂರಿಯಾ ರಸ ಗೊಬ್ಬರ ದೊರೆಯಲಿದೆ ಎಂದು ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ಅವರು ʼ600 ಕಿಸಾನ್‌ ಸಮೃದ್ದಿ ಕೇಂದ್ರʼಗಳಿಗೂ ಚಾಲನೆ ನೀಡಿ, ರಸಗೊಬ್ಬರ ಕುರಿತು ಮಾಹಿತಿ ಒದಗಿಸುವ ‘ಇಂಡಿಯನ್‌ ಎಡ್ಜ್‌’ ವಿದ್ಯುನ್ಮಾನ ನಿಯತಕಾಲಿಕೆಯನ್ನೂ ಬಿಡುಗಡೆಗೊಳಿಸಿದರು.

ಈ ಯೋಜನೆಯು ಒಂದು ಭಾರತ, ಒಂದು ರಸಗೊಬ್ಬರ ಯೋಜನೆಯಡಿ ಎಲ್ಲಾ ರಸಗೊಬ್ಬರ ಉತ್ಪಾದಕ ಕಂಪನಿಗಳು ಇನ್ನು ಮುಂದೆ ‘ಭಾರತ್‌’ ಬ್ರ್ಯಾಂಡ್‌ನಡಿಯಲ್ಲಿಯೇ ಮಾರಾಟ ಮಾಡುವುದು ಕಡ್ಡಾಯವಾಗಲಿದೆ. ಡಿಎಪಿ (D Ammonium Phosphate), ಮ್ಯುರಿಯೇಟ್‌ ಆಫ್‌ ಪೊಟಾಶ್‌ (MOP), ನೈಟ್ರೊಜನ್‌ ಫಾಸ್ಪರಸ್‌ ಪೊಟ್ಯಾಶಿಯಂ (NPK), ಯುರಿಯಾ ರಸಗೊಬ್ಬರಗಳನ್ನು ಉತ್ಪಾದಿಸುವ ಕಂಪನಿಗಳು ಇನ್ನು ಬ್ಯಾಗ್‌ನ ಮೂರನೇ ಒಂದರಷ್ಟು ಜಾಗದಲ್ಲಿಕಂಪನಿಯ ಹೆಸರು, ಲೋಗೊ, ಉತ್ಪನ್ನ ಕುರಿತ ಮಾಹಿತಿ ನಮೂದಿಸಬೇಕು. ಮೂರನೇ ಎರಡಷ್ಟು ಜಾಗದಲ್ಲಿ’ಭಾರತ್‌’ ಬ್ರ್ಯಾಂಡ್‌ ಹಾಗೂ ‘ಪ್ರಧಾನಮಂತ್ರಿ ಭಾರತೀಯ ಜನ ಉರ್ವಾರಕ್‌ ಪರಿಯೋಜನಾ’ದ ಲೋಗೊ ಮುದ್ರಿಸುವುದು ಕಡ್ಡಾಯವಾಗಲಿದೆ.

ಈ ಯೋಜನೆಯಿಂದ ರೈತರಿಗೆ ಏನು ಲಾಭ ವಾಗಲಿದೆ ಎನ್ನುವ ಕುರಿತು ಹೇಳಿದ ಅವರು, ʼಸಾಮಾನ್ಯವಾಗಿ ಅನೇಕ ರೀತಿಯ ಬ್ರ್ಯಾಂಡ್‌ನ ರಸಗೊಬ್ಬರಗಳು ಮಾರುಕಟ್ಟೆಯಲ್ಲಿಲಭ್ಯ ಇದ್ದ ಕಾರಣ ರೈತರು ಪೋಷಕಾಂಶಗಳ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗುತ್ತಿದ್ದರು. ಹೆಚ್ಚಿನ ಕಮಿಷನ್‌ ಆಸೆಯಿಂದ ಚಿಲ್ಲರೆ ಮಾರಾಟಗಾರರು ಒಂದೇ ಬ್ರ್ಯಾಂಡ್‌ನ ಉತ್ಪನ್ನವನ್ನೇ ಹೆಚ್ಚು ಉತ್ತೇಜಿಸುತ್ತಿದ್ದರಿಂದ ರೈತರಿಗೆ ಉತ್ತಮ ಪೋಷಕಾಂಶಗಳಿರುವ ರಸಗೊಬ್ಬರ ದೊರೆಯುತ್ತಿರಲಿಲ್ಲ. ಈಗ ಒಂದೇ ಬ್ರ್ಯಾಂಡ್‌ನಡಿ ಮಾರಾಟವಾಗಲಿರುವ ಕಾರಣ ರೈತರಿಗೆ ಅನುಕೂಲವಾಗಲಿದೆʼ ಎಂದು ಹೇಳಿದರು.