Oppenheimer – Peepal Media

ಭಗವದ್ಗೀತೆ ಪಠಣದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ; ಓಪನ್ ಹೈಮರ್ ಚಿತ್ರದ ಬಗ್ಗೆ ಆಕ್ರೋಶ
ವಿಶ್ವದ ಮೊದಲ ಪರಮಾಣು ಬಾಂಬ್‌ನ ಪರಿಕಲ್ಪನೆ ಹೊಂದಿದ್ದ ರಾಬರ್ಟ್ ಓಪನ್’ಹೈಮರ್ ಅವರ ಜೀವನ ಚರಿತ್ರೆ ಆಧಾರಿತ ‘ಓಪನ್ ಹೈಮರ್’ ಚಿತ್ರ ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದ್ದರೆ, ಭಾರತದಲ್ಲಿ ಈ ಚಿತ್ರದ ಬಗ್ಗೆ ಅಪಸ್ವರ ಎದ್ದಿದೆ. ಚಿತ್ರದಲ್ಲಿ ರೊಮ್ಯಾಂಟಿಕ್ ಸನ್ನಿವೇಶದಲ್ಲಿ ‘ಭಗವದ್ಗೀತೆ’ ಪಠಣದ ದೃಶ್ಯ ಇರುವುದರ ಬಗ್ಗೆ ಕೇಂದ್ರ ಬಿಜೆಪಿ ಸಚಿವ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜುಲೈ 1 ರಂದು ಎಲ್ಲೆಡೆ ಬಿಡುಗಡೆಯಾದ ‘ಓಪನ್ ಹೈಮರ್’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದ್ದಂತೆ ಇತ್ತ ಭಾರತೀಯ ಸೆನ್ಸಾರ್ ಬೋರ್ಡ್ ಮೇಲೆ ಬಿಜೆಪಿ ಹಿನ್ನೆಲೆಯ ವ್ಯಕ್ತಿಗಳು ತಿರುಗಿ ಬಿದ್ದಿದ್ದಾರೆ.

ಸೆನ್ಸಾರ್ ಮಂಡಳಿ ಇಂತಹ ಆಕ್ಷೇಪಾರ್ಹ ದೃಶ್ಯಗಳನ್ನು ಅದು ಹೇಗೆ ಬಿತ್ತರಿಸಲು ಅನುಮತಿ ನೀಡಿದೆ. ಈ ಬಗ್ಗೆ ನಾನು ದೂರು ಸಲ್ಲಿಸುತ್ತೇನೆ ಮತ್ತು ಸೆನ್ಸಾರ್ ಮಂಡಳಿ ಅಧಿಕಾರಿಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇನೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಆಕ್ಷೇಪಿಸಿದ್ದಾರೆ.

“ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಈ ದೃಶ್ಯದೊಂದಿಗೆ ಚಲನಚಿತ್ರವನ್ನು ಹೇಗೆ ಅನುಮೋದಿಸುತ್ತದೆ ಎಂದು ಒಬ್ಬರು ಗೊಂದಲಕ್ಕೊಳಗಾಗಿದ್ದಾರೆ” ಎಂದು ಭಾರತ ಸರ್ಕಾರದ ಮಾಹಿತಿ ಆಯುಕ್ತ ಉದಯ್ ಮಹೂರ್ಕರ್ ಅವರು ‘ಸೇವ್ ಕಲ್ಚರ್ ಸೇವ್ ಇಂಡಿಯಾ ಫೌಂಡೇಶನ್’ ಪತ್ರಿಕಾ ಪ್ರಕಟಣೆಯನ್ನು ಹಂಚಿಕೊಂಡಿದ್ದಾರೆ.

MOVIE OPPENHEIMER’S ATTACK ON BHAGWAD GEETA

Press Release of Save Culture Save India Foundation

Date: July 22, 2023

It has come to the notice of Save Culture Save India Foundation that the movie Oppenheimer which was released on 21st July contains scenes which make a scathing… pic.twitter.com/RmJI0q9pXi
— Uday Mahurkar (@UdayMahurkar) July 22, 2023

“ಚಿತ್ರದಲ್ಲಿನ ಒಂದು ದೃಶ್ಯದಲ್ಲಿ ಭಗವದ್ಗೀತೆ ಪಠಿಸುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಪುರುಷನನ್ನು ಗಟ್ಟಿಯಾಗಿ ಓದುವಂತೆ ಮಾಡುವುದನ್ನು ತೋರಿಸುತ್ತದೆ ಮತ್ತು ಆ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ನಡೆಯುತ್ತಿರುತ್ತದೆ.. ಇದನ್ನು ಮಾಹಿತಿ ತಂತ್ರಜ್ಞಾನ ಸಚಿವಾಲಯವು ತುರ್ತು ಆಧಾರದ ಮೇಲೆ ತನಿಖೆ ನಡೆಸಬೇಕು ಮತ್ತು ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ‘ಸೇವ್ ಕಲ್ಚರ್ ಸೇವ್ ಇಂಡಿಯಾ ಫೌಂಡೇಶನ್’ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.