Oxfam India's Discrimination Report 202 – Peepal Media

ಹೆಚ್ಚಿದೆ ಭಾರತದ ಉದ್ಯೋಗ ವಲಯದಲ್ಲಿ ಲಿಂಗ ತಾರತಮ್ಯ!
ಭಾರತದಲ್ಲಿ ಪುರುಷರಷ್ಟೇ ಕೌಶಲ್ಯ, ಶೈಕ್ಷಣಿಕ ಅರ್ಹತೆ, ಅನುಭವ ಹೊಂದಿದ್ದರೂ ಮಹಿಳೆಯರು ಕಡಿಮೆ ವೇತನ ಹಾಗೂ ವೃತ್ತಿಯಲ್ಲಿ ಅಸಮಾನತೆಯನ್ನು ಎದುರಿಸುತ್ತಿದ್ದಾರೆ ಎಂದು ಆಕ್ಸ್ಫ್ಯಾಮ್ ವರದಿ ತಿಳಿಸಿದೆ.

Oxfam India’s Discrimination Report 2022 ರ ಪ್ರಕಾರ ಉದ್ಯೋಗ ನೀಡುವವರ ಪೂರ್ವಗ್ರಹಗಳು ಹಾಗೂ ಸಾಮಾಜಿಕ ಕಾರಣಗಳಿಂದ ಮಹಿಳೆಯರು ಕಡಿಮೆ ವೇತನ ಪಡೆಯುತ್ತಿದ್ದಾರೆ ಎಂದು ಹೇಳಿದೆ.

ಸಾಮಾಜಿಕವಾಗಿ ಅಂಚಿನಲ್ಲಿರುವ ಸಮುದಾಯಗಳು, ಜಾತಿ ವ್ಯವಸ್ಥೆಯ ತಳಮಟ್ಟದಲ್ಲಿ ಇರುವವರು, ಬುಡಕಟ್ಟು ಹಾಗೂ ಮುಸಲ್ಮಾನರು ಔದ್ಯೋಗಿಕ ವಲಯದಲ್ಲಿ ಈ ಅಸಮಾನತೆಯನ್ನು ಎದುರಿಸುತ್ತಿದ್ದಾರೆ.

ಕಾರ್ಮಿಕರಲ್ಲಿ ಸಮಾನವಾದ ಕೌಶಲ್ಯ, ಅನುಭವ ಇದ್ದರೂ ಜಾತಿ, ಸಾಮಾಜಿಕ ಹಿನ್ನಲೆಯ ಕಾರಣಕ್ಕೆ ವಿಭಜಿಸಲಾಗಿದೆ ಎಂದು ಆಕ್ಸ್ಫ್ಯಾಮ್ ನ ಮುಖ್ಯಸ್ಥ ಅಮಿತಾಬ್ ಬೆಹರ್ ತಿಳಿಸಿದ್ದಾರೆ.

ಉದ್ಯೋಗ, ವೇತನ, ಅರೋಗ್ಯ, ಕೃಷಿ ಸಾಲಗಳ ಬಗೆಗಿನ 2004 ರಿಂದ 2020 ರ ವರೆಗಿನ ಸರ್ಕಾರಿ ದಾಖಲೆಗಳ ಮಾಹಿತಿಯ ಮೂಲಕ ಈ ವರದಿ ಮಾಡಲಾಗಿದೆ.

ಈ ವರದಿಯ ಪ್ರಕಾರ ಭಾರತದ ಪ್ರತೀ ಪುರುಷ ಮಹಿಳೆಗಿಂತ ತಿಂಗಳಿಗೆ ಸರಾಸರಿ 4,000 ರೂಪಾಯಿ ಹೆಚ್ಚು ವೇತನ ಪಡೆಯುತ್ತಾನೆ. ಮುಸ್ಲಿಮೇತರರು ಮುಸ್ಲಿಮರಿಗಿಂತ. 7,000 ರೂಪಾಯಿ ಹೆಚ್ಚಿನ ವೇತನ ಪಡೆಯುತ್ತಾರೆ. ದಲಿತ ಹಾಗೂ ಬುಡಕಟ್ಟು ಸಮುದಾಯದ ಜನರು ಇತರರಿಗಿಂತ ಸರಾಸರಿ 5,000 ರೂಪಾಯಿ ಕಡಿಮೆ ವೇತನ ಪಡೆಯುತ್ತಾರೆ.

ಭಾರತ ಸರ್ಕಾರದ ಮಾಹಿತಿಯ ಪ್ರಕಾರ 2020-21 ರಲ್ಲಿ ಒಟ್ಟಾರೆ ಕಾರ್ಮಿಕರ ಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಕೇವಲ 25.1%. ಇದು ಬ್ರೆಜಿಲ್, ರಷ್ಯಾ, ಚೈನಾ ಹಾಗೂ ದಕ್ಷಿಣ ಆಫ್ರಿಕಾ ದೇಶಗಳಿಗಿಂತ ಕಡಿಮೆ. 2004-05 ರಲ್ಲಿ 42.7% ಇದ್ದ ಮಹಿಳಾ ಉದ್ಯೋಗಿಗಳ ಸಂಖ್ಯೆಯಲ್ಲಿ ಆಘಾತಕಾರಿಯಾಗಿ ಇಳಿಕೆಯಾಗಿದೆ.

ದೇಶ ಆರ್ಥಿಕವಾಗಿ ಬೆಳೆಯುತ್ತಿದ್ದರೂ ಮಹಿಳೆಯರನ್ನು ಉದ್ಯೋಗಕ್ಕೆ ಬಿಡದೇ ಇರುವ ಪ್ರಮಾಣ ಹೆಚ್ಚಳವಾಗಿದೆ. ಇದು ಕೋವಿಡ್ -19 ನಂತರ ಹೆಚ್ಚಳವಾಗಿದೆ.

ಲಿಂಗ ತಾರತಮ್ಯದ ಈ ಹೆಚ್ಚಳ ಮಹಿಳೆಯರನ್ನು ಉದ್ಯೋಗ ಮಾಡಲು ಮಾಡದೆ ಮನೆ, ಕುಟುಂಬದ ಜವಾಬ್ದಾರಿ ಹೊರುವಂತೆ ಮಾಡಿರುವುದನ್ನು ತೋರಿಸುತ್ತದೆ.

ವರದಿಯ ಪ್ರಕಾರ ಕೇವಲ ಮಹಿಳೆಯರು ಮಾತ್ರವಲ್ಲ, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಕೂಡ ಔದ್ಯೋಗಿಕ ಅಸಮಾನತೆಯನ್ನು ಅನುಭವವಿಸುತ್ತಿದ್ದಾರೆ.

ಕೋವಿಡ್ -19 ನ ಅರಂಭಿಕ ದಿನಗಳಲ್ಲಿ ಹೆಚ್ಚಾಗಿರುವ ನಿರುದ್ಯೋಗಿಗಳ ಸಂಖ್ಯೆಯಲ್ಲಿ 17% ಮುಸಲ್ಮಾನರು ಎಂದು ಆಕ್ಸ್ಫ್ಯಾಮ್ ವರದಿ ಮಾಡಿದೆ.

ವರದಿ: ಚರಣ್‌ ಐವರನಾಡು