pa ranjith – Peepal Media

ʼಪಾಲಾರ್ʼ ಚಿತ್ರ ಒಂದು ಮೈಲುಗಲ್ಲಾಗಲಿ: ಖ್ಯಾತ ತಮಿಳು ನಿರ್ದೇಶಕ ʼಪ.ರಂಜಿತ್‌ʼ
ಬೆಂಗಳೂರು: ಯುವ ನಿರ್ದೇಶಕ ಜೀವಾ ನವೀನ್ ಅವರು ನಿರ್ದೇಶನಮಾಡಿರುವ ಕನ್ನಡ ಚಲನಚಿತ್ರದ ʼಪಾಲಾರ್ʼ ಟ್ರೈಲರ್ ಸೋಮವಾರ ಬಿಡುಗಡೆಯಾಗಿದ್ದು, ಖ್ಯಾತ ತಮಿಳು ಚಲನಚಿತ್ರ ನಿರ್ದೇಶಕ ʼಪ.ರಂಜಿತ್‌ʼ ಅವರು ಸಿನಿಮಾದ ಟ್ರೈಲರನ್ನು ತಮ್ಮ ಟ್ವಿಟರ್‌ ಖಾತೆಯ ಮೂಲಕ ಲೋಕಾರ್ಪಣೆಗೊಳಿಸಿ ಪಾಲಾರ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಕರ್ನಾಟಕದಾದ್ಯಂತ ʼಪಾಲಾರ್‌ʼ ಟ್ರೈಲರ್‌ ಸದ್ದು ಮಾಡುತ್ತಿದ್ದು, ದಲಿತರ ಮೇಲಾಗುವ ದೌರ್ಜನ್ಯ, ಜಾತಿಯತೆಯ ತಾರತಮ್ಯ    ಸವರ್ಣಿಯರ ದಬ್ಬಾಳಿಕೆ,  ಮತ್ತು ದಲಿತ ಪ್ರತಿರೋಧದ ಕಥಾವಸ್ತುವನ್ನು ಒಳಗೊಂಡ ಸಿನಿಮಾ ಪಾಲಾರ್.‌

ಈ ಸಿನಿಮಾ ಕುರಿತು ಖ್ಯಾತ ತಮಿಳು ಚಲನಚಿತ್ರ ನಿರ್ದೇಶಕ ʼಪ.ರಂಜಿತ್‌ʼ ಟ್ವೀಟ್‌ ಮಾಡಿದ್ದು, ಜೀವಾ ನವೀನ್  ನಿರ್ದೇಶನದ  ಹಾಗೂ ಸೌನವಿ ಫಿಲ್ಮ್ಸ್ ಅರ್ಪಿಸುವ ಕನ್ನಡ ಚಲನಚಿತ್ರ ʼಪಾಲಾರ್ʼ ಟ್ರೈಲರ್ ಅನ್ನು ಅರ್ಪಿಸುತ್ತಿದ್ದೇನೆ. ಕಥೆಯು ನೈಜ ಘಟನೆಗಳ ಆಧಾರದ ಮೇಲೆ ನಿರ್ಮಾಣವಾಗಿದ್ದು, ʼಪಾಲಾರ್ʼ ಸಿನಿಮಾ ಕನ್ನಡ ಚಲನಚಿತ್ರರಂಗದಲ್ಲಿ ಮೈಲಿಗಲ್ಲಾಗಲಿ ಎಂದು ಶುಭಹಾರೈಸಿದ್ದಾರೆ.

ಸಿನಿಮಾದಲ್ಲಿ  ‘ಸಿನಿಮಾ ಬಂಡಿ’ ಖ್ಯಾತಿಯ ನಟಿ, ಗಾಯಕಿ ವೈ.ಜಿ.ಉಮಾ ಮುಖ್ಯ ಪಾತ್ರದಲ್ಲಿ, ನಾಯಕನಾಗಿ ರಾಷ್ಟ್ರೀಯ ನಾಟಕ ಶಾಲೆಯ ತಿಲಕ್ ರಾಜ್ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ನೂರಕ್ಕು ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ. ಹಾಗಯೇ ಚಿತ್ರಕ್ಕೆ ಆಲಿಫ್‌ ರೆಹಾನ್‌ರವರ ಛಾಯಗ್ರಾಹಣ, ವಲಿ ಕುಲಾಯಿಸ್‌ ಸಂಕಲನ, ರಾಜಮೌಳಿ ತಂಡದ ಸಾಹಿತಿ ವರದರಾಜ್‌ ಚಿಕ್ಕಬಳ್ಳಾಪುರ ಹಾಡುಗಳನ್ನು ರಚಿಸಿದ್ದು, ಸುಬ್ರಹ್ಮಣ್ಯ ಆಚಾರ್ಯ ಅವರ ಸಂಗೀತವಿದೆ. ಸುಪ್ರೀತ್‌ ಪಲ್ಗುಣ, ಸುಭ್ರಹ್ಮಣ್ಯ ಆಚಾರ್ಯ ಜೊತೆಗೆ ಉಮಾ ವೈ.ಜಿ. ಹಾಡುಗಳಿಗೆ ದನಿಯಾಗಿದ್ದಾರೆ.

Presenting The Trailer of Kannada Feature film #PAALAAR  Directed by @naveen1prince  Based on true events @SounaviFilms

Link: https://t.co/Ns6EqfW9xJ

@PaalaarMovie ಪಾಲಾರ್ ಸಿನಿಮಾ ಕನ್ನಡ ಚಲನಚಿತ್ರರಂಗದಲ್ಲಿ ಮೈಲಿಗಲ್ಲು ಆಗಲಿ ಎಂದು ಶುಭ ಕೋರುತ್ತೇನೆ #DalitLivesMatter #JaiBhim #Paalaar
— pa.ranjith (@beemji) November 29, 2022

‘ತಂಗಲಾನ್ʼ ಚಿತ್ರಕ್ಕೆ ಜೊತೆಯಾದ ನಟ ವಿಕ್ರಮ್ ಮತ್ತು ನಿರ್ದೇಶಕ ಪ. ರಂಜಿತ್
ಬೆಂಗಳೂರು: ಚಿಯಾನ್ ವಿಕ್ರಮ್ ಅಭಿನಯದ, ಪ. ರಂಜಿತ್ ನಿರ್ದೇಶನದ ಹೊಸ ಚಿತ್ರಕ್ಕೆ ಕೊನೆಗೂ ಟೈಟಲ್ ಸಿಕ್ಕಿದೆ. ಈ ಚಿತ್ರಕ್ಕೆ ‘ತಂಗಲಾನ್ʼ ಎಂದು ನಾಮಕರಣ ಮಾಡಲಾಗಿದ್ದು, ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

ಈ ಹಿಂದೆ ರಜನಿಕಾಂತ್ ಅಭಿನಯದ ಕಬಾಲಿ, ಕಾಲ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಪ. ರಂಜಿತ್, ವಿಕ್ರಮ್ ಅಭಿನಯದಲ್ಲಿ ಕೋಲಾರ ಗೋಲ್ಡ್ ಫೀಲ್ಡ್ ಹಿನ್ನೆಲೆಯಲ್ಲಿ ಒಂದು ಚಿತ್ರ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಈ ಚಿತ್ರ ಈಗ ಅಧಿಕೃತವಾಗಿರುವುದಷ್ಟೇ ಅಲ್ಲ, ಸೋಮವಾರ ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರದ ಟೈಟಲ್ ಟೀಸರ್ ಸಹ ಅನಾವರಣಗೊಂಡಿದೆ.

‘ತಂಗಲಾನ್ʼ ಚಿತ್ರದಲ್ಲಿ ವಿಕ್ರಮ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹಬ್ಬದ ದಿನ ಅವರ ಚಿತ್ರವೊಂದರ ಟೀಸರ್ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಈ ಚಿತ್ರದಲ್ಲಿ ವಿಕ್ರಮ್ ಜೊತೆಗೆ ಪಾರ್ವತಿ, ಮಾಳವಿಕಾ ಮೋಹನನ್, ಪಶುಪತಿ, ಹರಿಕೃಷ್ಣನ್, ಅನ್ಬುದುರೈ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಈ ಚಿತ್ರಕ್ಕೆ ಎ. ಕಿಶೋರ್ ಛಾಯಾಗ್ರಹಣ ಮಾಡುತ್ತಿದ್ದು, ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ. ರಂಜಿತ್ ಅವರೇ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿದ್ದು ಅವರಿಗೆ ಬರವಣಿಗೆಯಲ್ಲಿ ತಮಿಳ್ ಪ್ರಭಾ ಸಹಾಯ ಮಾಡಿದ್ದಾರೆ. ಎಸ್.ಎಸ್. ಮೂರ್ತಿ ಕಲಾನಿರ್ದೇಶನ ಮತ್ತು ಆರ್.ಕೆ. ಸೆಲ್ವಾ ಅವರ ಸಂಕಲನವಿದೆ.

ಕೆಜಿಎಫ್ ಹಿನ್ನೆಲೆಯಲ್ಲಿ ಸಾಗುವ ಈ ಆಕ್ಷನ್ ಚಿತ್ರವನ್ನು ಸ್ಟುಡಿಯೋ ಗ್ರೀನ್ ಸಂಸ್ಥೆಯಡಿ ಕೆ.ಇ. ಜ್ನಾನವೇಲ್ ರಾಜ ನಿರ್ಮಿಸುತ್ತಿದ್ದಾರೆ. ದೊಡ್ಡ ಬಜೆಟ್ನಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ನಿರ್ಮಾಣದಲ್ಲಿ ಪ. ರಂಜಿತ್ ಅವರ ನೀಲಂ ಪ್ರೊಡಕ್ಷನ್ಸ್ ಸಹ ಕೈಜೋಡಿಸಿದೆ.