PAK VS NZ – Peepal Media

ಟಿ-20 ವಿಶ್ವಕಪ್‌: ನ್ಯೂಜಿಲೆಂಡ್ – ಪಾಕಿಸ್ತಾನ ನಡುವೆ ಮೊದಲ ಸೆಮಿಫೈನಲ್
ಸಿಡ್ನಿ: T20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯವು ಪಾಕ್-ನ್ಯೂಜಿಲೆಂಡ್ ತಂಡಗಳ ನಡುವೆ ಇಂದು ಮಧ್ಯಾಹ್ನ 1:30 ಕ್ಕೆ ಸಿಡ್ನಿಯ ಎಸ್‌ಸಿಜಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮೊದಲ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡವು ಎರಡನೇ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿ ಉಳಿದಿರುವ ಪಾಕ್ ನೊಂದಿಗೆ ಸೆಣಸಲಿದೆ.

ಉತ್ತಮ ಫಾರ್ಮ್ ನಲ್ಲಿರುವ ನ್ಯೂಜಿಲೆಂಡ್ ತಂಡಕ್ಕೆ ಟೀಮ್ ಸೌಥಿ, ಟ್ರೆಂಟ್ ಬೌಲ್ಟ್ ಮತ್ತು ಲಾಕಿಫರ್ಗ್ಯೂಸನ್ ಬೌಲಿಂಗ್ ಬಲವಾದರೆ ಕೇನ್ ವಿಲಿಮ್ಸನ್ , ಮಾರ್ಟಿನ್ ಗುಪ್ಟಿಲ್ , ರೋಸ್ ಟೈಲರ್ ,ಹೆನ್ರಿ ನಿಕೋಲಸ್ ಬ್ಯಾಟಿಂಗ್ ಬಲವಾಗಿ ನಿಲ್ಲಲಿದ್ದು ಸೆಮಿ ಫೈನಲ್ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಪಾಕಿಸ್ತಾನ ತಂಡವು ಅದೃಷ್ಟದೊಂದಿಗೆ ಸೆಮಿಫೈನಲ್ ಪ್ರವೇಶಿಸಿದ್ದು ಪಂದ್ಯವನ್ನ ಯಾವುದೇ ಸಮದಲ್ಲಿ ಬೇಕಾದರೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬಲ್ಲ ಆಟಗಾರರನ್ನ ಹೊಂದಿದೆ. ಪಾಕ್ ತಂಡಕ್ಕೆ ಬಾಬರ್ ಅಜ಼ಾಮ್ , ಅಸಿಫ್ ಅಲಿ ,ಫಖರ್ ಜಾ಼ಮನ್ ಬ್ಯಾಟಿಂಗ್ ಬಲವಿದ್ದರೂ ಸಾದಬ್ ಖಾನ್ , ಇಫ್ತಿಕರ್ ಅಹ್ಮದ್ ಉತ್ತಮ ಫಾರ್ಮ್‌ನಲ್ಲಿರುವುದು ಪಾಕ್ ತಂಡಕ್ಕೆ ಅತಿ ಹೆಚ್ಚಿನ ಬಲ ಎನ್ನಬಹುದಾಗಿದೆ.

ಹಿಂದೆ T20 ಪಂದ್ಯಗಳ ಬಲಾಬಲವನ್ನು ನೋಡುವುದಾದರೆ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ಗಿಂತಲೂ ಉತ್ತಮ ಪ್ರದರ್ಶನ ನೀಡಿರುವುದನ್ನು ಕಾಣಬಹುದು.

ಇಂದಿನ ಪಂದ್ಯದಲ್ಲಿ ಈ ಎರಡೂ ತಂಡಗಳು ಸಮಬಲದಲ್ಲಿ ಸೆಣಸಾಡುವ ನೀರಿಕ್ಷೆಯು ಕ್ರಿಕೆಟ್ ಅಭಿಮಾನಿಗಳಲ್ಲಿದ್ದು ಯಾವ ತಂಡ ಫೈನಲ್ ಪ್ರವೇಶಿಸಬಹುದೆಂದು ಕೂತೂಹಲದಿಂದ ಕಾಯುತ್ತಿದ್ದಾರೆ. ಇಂದು ಮಧ್ಯಾಹ್ನ ಸ್ಟಾರ್ ಸ್ಪೋರ್ಟ್ ಚಾನಲ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.