pakistana vs afganistana – Peepal Media

ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನಕ್ಕೆ ರೋಚಕ ಗೆಲುವು; ಭಾರತಕ್ಕೆ ಸೋಲು
ಕೊನೆಯವರೆಗೂ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಪಾಕ್ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಈ ಪಂದ್ಯವನ್ನು ಅಫ್ಘಾನಿಸ್ತಾನ ಗೆದ್ದರೆ ಭಾರತದ ಫೈನಲ್ ಆಸೆ ಜೀವಂತವಾಗಿರುತ್ತದೆ ಎಂಬ ಆಸೆಯಲ್ಲಿ ಪಂದ್ಯ ನೋಡುತ್ತಿದ್ದ ಭಾರತೀಯ ಅಭಿಮಾನಿಗಳಿಗೆ ಪಾಕಿಸ್ತಾನದ ಬೋಲರ್ ನಸೀಮ್ ಶಾ ತಮ್ಮ ಅನಿರೀಕ್ಷಿತ ಬ್ಯಾಟಿಂಗ್ ನಿಂದಾಗಿ ಶಾಕ್ ಕೊಟ್ಟರು. ಅಫ್ಘಾನಿಸ್ತಾನ ಬೋಲರ್ ಫಾರೂಕಿ ಎಸೆದ ಕೊನೆಯ ಓವರ್ ನ ಎರಡು ಬಾಲ್ ಗಳನ್ನು ಸತತವಾಗಿ ಸಿಕ್ಸರ್ ಗೆ ಅಟ್ಟುವುದರ ಮೂಲಕ ಭಾರತ ಮತ್ತು ಅಫ್ಘಾನಿಸ್ತಾನ ಎರಡೂ ತಂಡಗಳನ್ನು ಒಟ್ಟಿಗೇ ಸೋಲಿಸಿದರು ನಸೀಮ್ ಶಾ. ಪಾಕಿಸ್ತಾನದ ಈ ಗೆಲುವಿನಿಂದಾಗಿ ಈ ಬಾರಿಯ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸೆಣೆಸಲಿವೆ. ಇನ್ನು ನಾಮ್ ಕೇ ವಾಸ್ತೇ ಎನ್ನುವಂತೆ ಭಾರತ ಮತ್ತು ಅಫ್ಘಾನಿಸ್ತಾನ ಔಪಾರಿಕ ಪಂದ್ಯದಲ್ಲಿ ಆಡಲಿವೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಅಫ್ಘಾನಿಸ್ತಾನಕ್ಕೆ ಬ್ಯಾಟಿಂಗ್ ಕೊಟ್ಟ ಪಾಕಿಸ್ತಾನಕ್ಕೆ ಆರಂಭದಲ್ಲಿ ಸ್ವಲ್ಪ ಸಮಯ ಆಘಾತ ಕಾದಿತ್ತು. ಅಫ್ಘಾನಿಸ್ತಾನದ ಆರಂಭಿಕರಾದ್ ಜೈಜಿ ಮತ್ತು ಗುರ್ ಬಾಜ್ ಇಬ್ಬರೂ ತಂಡಕ್ಕೆ ಉತ್ತಮ ಆರಂಭ ಕೊಟ್ಟರು. ಆದರೆ ಇವರಿಬ್ಬರೂ ಔಟ್ ಆದ ನಂತರ ಅಫ್ಘಾನಿಸ್ತಾನ ತಂಡ ಸತತವಾಗಿ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಾ ಹೋಗಿ 129 ರನ್ ಗಳ ಅಲ್ಪ ಮೊತ್ತ ದಾಖಲಿಸಿತು. ಇವರಿಬ್ಬರ ನಂತರ ಇಬ್ರಾಹಿಂ ಜದ್ರಾನ್ ಮಾತ್ರ 35 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ಇನ್ನಿಂಗ್ಸ್ ಆರಂಭಿಸಿದಾಗ ಈ ಮೊತ್ತ ಪಾಕ್ ತಂಡಕ್ಕೆ ಸುಲಭ ತುತ್ತಾಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಮೊದಲ ಓವರ್ ನಲ್ಲಿ ತಾವು ಎದುರಿಸಿದ ಮೊದಲ ಚೆಂಡಿನಲ್ಲೇ ಔಟ್ ಆಗುವುದರ ಮೂಲಕ ಪಾಕ್ ನಾಯಕ ಬಾಬರ್ ಅಜಮ್ ತಮ್ಮ ಕಳಪೆ ಫಾರ್ಮ್ ಮುಂದುವರಿಸಿದರು. ಆನಂತರ ಇಫ್ತಿಕಾರ್ ಮತ್ತು ಶಾದಾಬ್ ತಂಡಕ್ಕೆ ಚೇತರಿಕೆ ನೀಡಿ ಪಾಕ್ ತಂಡ 3 ವಿಕೆಟ್ ಗೆ 87 ರನ್ ಗಳಿಸಿದಾಗ ಎಲ್ಲರೂ ಪಂದ್ಯ ಮುಗಿಯಿತು ಎಂದೇ ಭಾವಿಸಿದ್ದರು. ಆದರೆ, ಅಲ್ಲಿಂದ ನಾಟಕೀಯವಾಗಿ ಕುಸಿತ ಕಂಡ ಪಾಕ್ ತಂಡ 118 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು.

ಆದರೆ ಕೊನೆಯ ಓವರ್ ನಲ್ಲಿ ಇರುವ ಒಂದು ವಿಕೆಟ್ ನಿಂದ 11 ರನ್ ಗಳಿಸಬೇಕಿದ್ದ ಪಾಕ್ ಗೆ ತಂಡದ ವೇಗದ ಬೋಲರ್ ನಸೀಮ್ ಶಾ ಆಪದ್ಭಾಂಧವರಾದರು. ಕೊನೆಯ ಓವರ್ ನ ಮೊದಲ ಎರಡೂ ಎಸೆತಗಳನ್ನು ಫುಲ್ ಟಾಸ್ ಹಾಕಿದ ಬೋಲರ್ ಫಾರೂಕಿ ಅವರ ದೌರ್ಬಲ್ಯವನ್ನು ಉಪಯೋಗಿಸಿಕೊಂಡ ನಸೀಮ್ ಎರಡು ಸಿಕ್ಸರ್ ಬಾರಿಸಿ ತಮ್ಮ ತಂಡಕ್ಕೆ ಫೈನಲ್ ಪ್ರವೇಶ ದೊರಕಿಸಿಕೊಟ್ಟರು. ಒಂದು ವಿಕೆಟ್ ಕಿತ್ತು, 36 ರನ್ ಸಿಡಿಸಿದ ಶಾದಾಬ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಜಮ್ಮು-ಕಾಶ್ಮೀರ| ದೇಶವಿರೋಧಿ ಘೋಷಣೆ: ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ
ಜಮ್ಮು :  ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನದ ಪಂದ್ಯ ಮುಗಿದ ನಂತರ ಜಮ್ಮುವಿನ ಮೌಲಾನಾ ಆಜಾದ್ ಸ್ಮಾರಕ (ಎಂಎಎಂ) ಕಾಲೇಜಿನಲ್ಲಿ ದೇಶವಿರೋಧಿ ಘೋಷಣೆಗಳು ಕೇಳಿಬಂದಿದ್ದು, ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಬುಧವಾರ ನಡೆದ ಏಷ್ಯಾ ಕಪ್ ಟಿ20 ಕ್ರಿಕೆಟ್‌ ಟೂರ್ನಿಯ ಸೂಪರ್‌-4 ಹಂತದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳು ಸೆಣಸಾಡಿದ್ದು, ಪಂದ್ಯದಲ್ಲಿ ಪಾಕಿಸ್ತಾನ ತಂಡವು ಜಯಗಳಿಸಿತು.ನಂತರ ಕ್ರೀಡಾಂಗಣದಲ್ಲೇ ಅಪ್ಘಾನಿಸ್ತಾನದ ಅಭಿಮಾನಿಗಳು ಪಾಕೀಸ್ತಾನ ತಂಡದ ಅಭಿಮಾನಿಗಳ ಮೇಲೆ ದುರ್ವರ್ತನೆ ತೋರಿದ್ದರು,

ಎಂಎಎಂ ಕಾಲೇಜು ಪ್ರಾಂಶುಪಾಲ ಪ್ರೊ.(ಡಾ.) ಗುರು ದೇವ್ ಸಿಂಗ್ ರಕ್ವಾಲ್

ಈ ಹಿನ್ನಲೆ ಹಾಸ್ಟೆಲ್‌ನಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಿದವರ ಮೇಲೆ ದೂರುಗಳನ್ನು ಸ್ವೀಕರಿಸಿದ್ದು, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಂಎಎಂ ಕಾಲೇಜು ಪ್ರಾಂಶುಪಾಲ, ಜಿ.ಎಸ್.ರಕ್ವಾಲ್ ತಿಳಿಸಿದ್ದಾರೆ.