pankaj udhas – Peepal Media

ಪಂಕಜ್ ಉಧಾಸ್ ಇನ್ನಿಲ್ಲ, 72ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಖ್ಯಾತ ಗಜಲ್ ಗಾಯಕ
ಖ್ಯಾತ ಗಜಲ್ ಗಾಯಕ ಪಂಕಜ್ ಉಧಾಸ್ ವಿಧಿವಶರಾಗಿದ್ದಾರೆ. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. 17 ಮೇ 1951ರಂದು ಗುಜರಾತ್‌ನ ಜೇಟ್‌ಪುರದಲ್ಲಿ ಜನಿಸಿದರು. ಪಂಕಜ್ ಉದಾಸ್ ಅವರ ಪುತ್ರಿ ನಯಾಬ್ ಉಧಾಸ್ ಅವರು ತಮ್ಮ ತಂದೆಯ ನಿಧನವನ್ನು ಖಚಿತಪಡಿಸಿದ್ದಾರೆ.

ಈ ದುಃಖದ ಸುದ್ದಿಯನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ನಯಾಬ್ ಉಧಾಸ್, ‘ಭಾರವಾದ ಹೃದಯ ಮತ್ತು ಅತೀವ ದುಃಖದಿಂದ ಪದ್ಮಶ್ರೀ ಪಂಕಜ್ ಉಧಾಸ್ ಅವರು ದೀರ್ಘಕಾಲದ ಅನಾರೋಗ್ಯದಿಂದ 26 ಫೆಬ್ರವರಿ 2024ರಂದು ನಿಧನರಾದರು ಎಂದು ನಿಮಗೆಲ್ಲರಿಗೂ ತಿಳಿಸಬೇಕಾಗಿದೆ’ ಎಂದು ಬರೆದಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಪಂಕಜ್ ಉದಾಸ್ ಫೆಬ್ರವರಿ 26ರಂದು ಬೆಳಿಗ್ಗೆ 11 ಗಂಟೆಗೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಗಾಯಕ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯ ಸರಿ ಇರಲಿಲ್ಲ. ಗಾಯಕನ ನಿಧನದ ಸುದ್ದಿಯಿಂದ ಚಿತ್ರರಂಗದಲ್ಲಿ ಶೋಕ ಅಲೆ ಎದ್ದಿದೆ. ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ನೆನೆದು ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಪಂಕಜ್ ಉದಾಸ್ ಅವರ ನಿಧನದಿಂದ ಚಿತ್ರರಂಗದ ಎಲ್ಲರೂ ದುಃಖಿತರಾಗಿದ್ದಾರೆ. ಜನಪ್ರಿಯ ಗಾಯಕ ಮತ್ತು ಸಂಗೀತ ಸಂಯೋಜಕ ಶಂಕರ್ ಮಹದೇವನ್ ಆಘಾತಕ್ಕೊಳಗಾಗಿದ್ದಾರೆ. ಪಂಕಜ್ ಉದಾಸ್ ಅವರ ನಿಧನ ಸಂಗೀತ ಲೋಕಕ್ಕೆ ದೊಡ್ಡ ನಷ್ಟ ಎಂದು ಬಣ್ಣಿಸಿದ್ದಾರೆ. ಇದನ್ನು ಸರಿದೂಗಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಹಾಗೆಯೇ, ಸೋನು ನಿಗಮ್ ಕೂಡ ಪಂಕಜ್ ಉದಾಸ್ ನಿಧನದ ಬಗ್ಗೆ ಭಾವನಾತ್ಮಕ ಪೋಸ್ಟ್ ಅನ್ನು ಬರೆದಿದ್ದಾರೆ.

ಸೋನು ನಿಗಮ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಅದರಲ್ಲಿ, ‘ನನ್ನ ಬಾಲ್ಯದ ಪ್ರಮುಖ ಭಾಗ ಇಂದು ಕಳೆದುಹೋಗಿದೆ. ಶ್ರೀ ಪಂಕಜ್ ಉದಾಸ್ ಜೀ, ನೀವು ಯಾವಾಗಲೂ ನೆನಪಿನಲ್ಲಿರುತ್ತೀರಿ. ನೀವು ಇನ್ನಿಲ್ಲವೆಂದು ತಿಳಿದು ನನ್ನ ಹೃದಯ ಭಾರವಾಯಿತು. ಓಂ ಶಾಂತಿ’ ಎಂದು ಬರೆದಿದ್ದಾರೆ.

ಕನ್ನಡದ ಸುದೀಪ್‌ ಅಭಿನಯದ ಪ್ರಥಮ ಚಿತ್ರ ಸ್ಪರ್ಶ ಚಿತ್ರಕ್ಕೆ ಈರಣ್ಣ ಇಟಗಿಯವರು ರಚಿಸಿದ್ದ “ಚಂದಕ್ಕಿಂತ ಚಂದ ನೀನೇ ಸುಂದ ಎನ್ನುವ ಗೀತೆಗೂ ಪಂಕಜ್‌ ಉಧಾಸ್‌ ದನಿಯಾಗಿದ್ದರು.

“ತೋಡಿ ತೋಡಿ ಪಿಯಾ ಕರೋ”, “ಚಿಟ್ಟಿ ಆಯಿ ಹೈ” ಅವರ ಕೆಲವು ಜನಪ್ರಿಯ ಗಜಲ್‌ಗಳು.