politics – Peepal Media

ನಟಿ ವಿಜಯಲಕ್ಷ್ಮಿ ದರ್ಶನ್‌ಗೆ ಅಶ್ಲೀಲ ಸಂದೇಶ: ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್‌ ದಾಖಲು
ಬೆಂಗಳೂರು: ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ 4-5 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಶ್ಲೀಲ ಕಮೆಂಟ್‌ಗಳನ್ನು ಹಾಕಿದವರ ವಿರುದ್ಧ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣ ಮಾನಿಟರಿಂಗ್ ಸೆಲ್‌ನಿಂದ ಸ್ವಯಂಪ್ರೇರಿತವಾಗಿ ಈ ದೂರು ದಾಖಲಿಸಲಾಗಿದೆ.

ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಅಶ್ಲೀಲ ಸಂದೇಶಗಳ ಪ್ರಕರಣದ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ. ವಿಜಯಲಕ್ಷ್ಮಿ ದರ್ಶನ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಕಮೆಂಟ್‌ಗಳನ್ನು ಮಾಡಲಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗವು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ.

ಮಹಿಳಾ ಆಯೋಗದಿಂದ ಪೊಲೀಸ್ ಆಯುಕ್ತರಿಗೆ ಪತ್ರ

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಅವರು ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ರಮ್ಯಾ ಅವರಿಗೆ ಕಳುಹಿಸಿದ ಅಶ್ಲೀಲ ಸಂದೇಶಗಳಂತೆಯೇ ವಿಜಯಲಕ್ಷ್ಮಿ ಅವರಿಗೂ ಅಸಭ್ಯವಾಗಿ ಮತ್ತು ಕೆಟ್ಟದಾಗಿ ಕಮೆಂಟ್‌ಗಳನ್ನು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಆ ಪತ್ರದಲ್ಲಿ ತಿಳಿಸಲಾಗಿದೆ.

ಇಂತಹ ಕೃತ್ಯಗಳ ಬಗ್ಗೆ ಎಚ್ಚರಿಕೆ ನೀಡಿದ ಅವರು, ರಮ್ಯಾ ಅಥವಾ ವಿಜಯಲಕ್ಷ್ಮಿ ಮಾತ್ರವಲ್ಲದೆ ಯಾವುದೇ ಮಹಿಳೆಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಕಮೆಂಟ್ ಮಾಡುವುದು ಅಥವಾ ಅವಹೇಳನ ಮಾಡುವುದು ಗಂಭೀರ ಅಪರಾಧ. ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಅವರಿಗೆ ಜೈಲು ಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ.ವಿ.ಪ್ರಭಾಕರ್
ಬೆಂಗಳೂರು ಆ 19: ನೋಟಕ್ಕೆ ಹೃದಯವಂತಿಕೆಯ ಸ್ಪರ್ಷ ಸಿಕ್ಕಾಗ ಅದ್ಭುತ ಫೋಟೋ ಜರ್ನಲಿಸ್ಟ್ ಹುಟ್ಟುತ್ತಾನೆ. ಆತ ಆ ಕ್ಷಣದಲ್ಲಿ ತೆಗೆದ ಚಿತ್ರ ಚರಿತ್ರೆಯಾಗುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ಬೆಂಗಳೂರು ಫೋಟೋ ಜರ್ನಲಿಸ್ಟ್ ಸಂಘ ಆಯೋಜಿಸಿದ್ದ “ವಿಶ್ವ ಛಾಯಾಗ್ರಾಹಕ ದಿನ”ವನ್ನು ಉದ್ಘಾಟಿಸಿ ಮಾತನಾಡಿದರು.

ಮಗು ಮಾತಾಡುವುದಕ್ಕಿಂತ ಮೊದಲು ನೋಟದಿಂದಲೇ ಜಗತ್ತನ್ನು ಗ್ರಹಿಸುತ್ತದೆ. ನೋಟಕ್ಕೆ ಭಾಷೆಯ, ಪದಗಳ, ವಾಕ್ಯಗಳ ಹಂಗಿಲ್ಲ. ಪ್ರೀತಿ, ಪ್ರೇಮದ ಅಂಕುರ ಆಗೋದು ನೋಟದಿಂದಲೇ ಹೊರತು, ಮಾತಿನಿಂದಲ್ಲ. ಅದಕ್ಕೇ “Love at First Sight” ಎಂದು ಹೇಳೋದು. ಹೀಗಾಗಿ ಫೋಟೋ ಜರ್ನಲಿಸ್ಟ್ ಗಳಿಗೆ ನೋಟ, ಒಳನೋಟ ಬಹಳ ಮುಖ್ಯ ಎಂದರು.

ಫೋಟೋ ಜರ್ನಲಿಸ್ಟ್ ಗಳೇ ಸಂಘಟಿಸಿರುವ ಇವತ್ತಿನ ಕಾರ್ಯಕ್ರಮದಲ್ಲಿ ನನಗೆ ಕೆವಿನ್ ಕಾರ್ಟರ್ ಮತ್ತು ಸಂಗೊಳ್ಳಿಯ ಸಂಗವ್ವ ಇಬ್ಬರೂ “ಫೋಟೋ ಜರ್ನಲಿಸಂನ ದೃಶ್ಯ ಪಠ್ಯಗಳು” ಎಂದು ಹೇಳಲು ಇಚ್ಚಿಸುತ್ತೇನೆ.

ಆಫ್ರಿಕಾದ ಫೋಟೋ ಜರ್ನಲಿಸ್ಟ್ ತೆಗೆದ ಒಂದು ಫೋಟೋ ಇವತ್ತಿಗೂ ತೀವ್ರ ಚರ್ಚೆಯ ಸಂಗತಿಯಾಗಿಯೇ ಉಳಿದಿದೆ.

ಯುದ್ಧ ಸಂತ್ರಸ್ಥ ಸುಡಾನ್ ದೇಶದಲ್ಲಿ ತೆಗೆದ ಫೋಟೋ ಅದು. ಗಂಜಿ ಕೇಂದ್ರಕ್ಕೆ ತೆವಳುತ್ತಿದ್ದ ಒಂದು ಮಗು ಹಸಿವಿನಿಂದ ನೆಲಕ್ಕೇ ತಲೆಕೊಟ್ಟು ನಿತ್ರಾಣಗೊಂಡಿದೆ. ಅಲ್ಲೇ ಒಂದು ರಣಹದ್ದು ಮಗುವನ್ನೇ ತಿನ್ನಲು ಹೊಂಚು ಹಾಕಿ ಕುಳಿತಿದೆ. ಈ ಫೋಟೋಗೆ 1994 ರಲ್ಲಿ ವಿಶ್ವಶ್ರೇಷ್ಠ ಪುಲಿಟ್ಜರ್ ಪ್ರಶಸ್ತಿ ಬಂತು. ಆದರೆ ಪ್ರಶಸ್ತಿ ಪಡೆದ ಕೆವಿನ್ ಕಾರ್ಟರ್ ಮೂರು ತಿಂಗಳಲ್ಲಿ ಅಳುಕಿನಿಂದ ಆತ್ಮಹತ್ಯೆ ಮಾಡಿಕೊಂಡರು. ಇದು ಪತ್ರಿಕಾ ವೃತ್ತಿಯ ಚರಿತ್ರೆಯಲ್ಲಿ ಅಳಿಸಲಾಗದ ಒಂದು ಪಠ್ಯ.

ಕೆವಿನ್ ತೆಗೆದ ಒಂದು ಫೋಟೋ ಹುಟ್ಟಿಸಿದ ಪ್ರಶ್ನೆಗಳು ಆತನನ್ನು ಆತ್ಮಹತ್ಯೆಗೆ ದೂಡಿದರೆ, ಅದೊಂದು ಫೋಟೋದ ಮೇಲೆ ನೂರಾರು ಭಾಷೆಗಳಲ್ಲಿ ಕೋಟಿಗಟ್ಟಲೆ ಪದಗಳು, ವಾಕ್ಯಗಳಲ್ಲಿ ಚರ್ಚೆ ನಡೆಯಿತು. ಹೀಗಾಗಿ ನೋಟವೇ ಒಂದು ಭಾಷೆ. ಇದು ವಿಶ್ವ ಭಾಷೆಯಾಗಿದೆ ಎಂದು ಕೆ.ವಿ.ಪ್ರಭಾಕರ್ ವಿವರಿಸಿದರು.

ಹಾಗೆಯೇ ಒಂದೂ ಮಾತು, ಒಂದೇ ಒಂದು ಪದದ ಸಹವಾಸವಿಲ್ಲದೆ ಸಂಗೊಳ್ಳಿಯ ಸಂಗವ್ವ ವಿಶ್ವಕ್ಕೇ ಪರಿಚಯವಾದರು. ಸರ್ಕಾರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಘೋಷಿಸಿದಾಗ ಕುಹಕ, ಅಣಕ, ಟೀಕೆ, ವಿಮರ್ಷೆಗಳ ಮಹಾಪೂರವೇ ಹರಿಯುತ್ತಿತ್ತು. ಆದರೆ, ಉಚಿತ ಬಸ್ ಹತ್ತುವಾಗ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ಸಂಗವ್ವ ಸರ್ಕಾರಿ ಬಸ್ ನ ಮೆಟ್ಟಿಲುಗಳಿಗೆ ನಮಸ್ಕರಿಸಿದ ಒಂದು ಫೋಟೋ ಎಲ್ಲಾ ಕುಹಕ, ಅಣಕಗಳನ್ನು ಅಳಿಸಿಹಾಕಿತು. 24 ಗಂಟೆಯಲ್ಲಿ ಸಂಗವ್ವ ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಆಗಿಬಿಟ್ಟರು.

ಹೀಗಾಗಿ ಕೆವಿನ್ ಕಾರ್ಟರ್ ಮತ್ತು ಸಂಗೊಳ್ಳಿಯ ಸಂಗವ್ವ ಫೋಟೋ ಜರ್ನಲಿಸಂನ ಎರಡು ಪಠ್ಯಗಳು ಎಂದು ನಾನು ಭಾವಿಸುತ್ತೇನೆ.

ವರದಿಗಳು, ಮಾತುಗಳು, ಪದಗಳು ಸುಳ್ಳು ಹೇಳಬಹುದು ಅಥವಾ ಸತ್ಯವನ್ನು ತಿರುಚಬಹುದು. ಆದರೆ, ಫೋಟೋಗಳು, ನೋಟಗಳು ಸುಳ್ಳು ಹೇಳುವುದಿಲ್ಲ. ನಾವು ಬರೆಯುವ ಸುದ್ದಿಗಳಿಗೆ ಸತ್ಯದ ಮೊಹರೆ ಒತ್ತುವುದು ಫೋಟೋಗಳು ಎಂದರು.‌

ಫೋಟೋಗ್ರಫಿ ಪತ್ರಿಕೋದ್ಯಮದ ಅವಿಭಾಜ್ಯ ಅಂಗ. ಫೋಟೋಗಳು ಘಟನೆಯ ನೈಜ ಚಿತ್ರಣವನ್ನು ಓದುಗರ ಗ್ರಹಿಕೆಗೆ ಒದಗಿಸುತ್ತವೆ.

ಆಧುನಿಕ ತಂತ್ರಜ್ಞಾನ ಫೋಟೋಗ್ರಫಿ ಹೆಚ್ಚಿನಮೌಲ್ಯತಂದುಕೊಟ್ಟಿದೆ. ಕೃತಕ‌ ಬುದ್ದಿಮತ್ತೆ ಒಂದು ಸವಾಲು ಮತ್ತು ಅವಕಾಶವೂ ಹೌದು. ಯಾವುದೇ ತಂತ್ರಜ್ಞಾನ ಬಂದರೂ ಅದಕ್ಕೆ ಸ್ವಂತ ಕಾಲ್ಪನಿಕ‌ ಶಕ್ತಿ ಇರುವುದಿಲ್ಲ. ಎಲ್ಲಿಯವರೆಗೂ ಫೋಟೋ ಜರ್ನಲಿಸ್ಟ್ ಗಳ ಕಲ್ಪನಾ ಸಾಮರ್ಥ್ಯ ಸೃಜನಶೀಲ ಮತ್ತು ಶ್ರೀಮಂತ ಹಾಗೂ ಸಹೃದಯತೆಯಿಂದ ಕೂಡಿರುತ್ತದೋ ಅಲ್ಲಿಯವರೆಗೂ ಯಾವ ತಂತ್ರಜ್ಞಾನವೂ ಅಪಾಯ ಒಡ್ಡುವುದಿಲ್ಲ ಎಂದು ವಿವರಿಸಿದರು.

ಸುಮಾರು 20 ವರ್ಷಗಳ ಹಿಂದೆ ಫೋಟೋಗ್ರಫಿ ಈಗಿನಷ್ಟು ಸರಾಗ ಮತ್ತು ಸುಲಭವಾಗಿರಲಿಲ್ಲ ಬಹಳ ಕಷ್ಟ ಪಡಬೇಕಾಗಿತ್ತು. ಆದರೆ ಬದಲಾದ ತಂತ್ರಜ್ಞಾನದಿಂದಾಗಿ ಫೋಟೋಗ್ರಫಿ ಅತ್ಯಂತ ಸುಲಭವಾಗಿದ್ದು, ಸೃಜನಶೀಲತೆ ರೂಪಿಸಿಕೊಂಡು ಫೋಟೋಗಳ ಮೂಲಕವೇ ಅರ್ಥಪೂರ್ಣ ಸ್ಟೋರಿಗಳನ್ನು ಸೃಷ್ಟಿಸುವ ಶಕ್ತಿ -ಸಾಮರ್ಥ್ಯ ರೂಡಿಸಿಕೊಂಡರೆ ಮಾತ್ರ ಈಗಿನ ಸ್ಪರ್ಧಾಜಗತ್ತಿನಲ್ಲಿ ಉಳಿಯಲು ಸಾಧ್ಯ ಎಂದರು.

ಇವತ್ತಿಗೂ ಗ್ರಾಮೀಣ ಮತ್ತು ತಾಲ್ಲೂಕು ಮಟ್ಟದಲ್ಲಿ ಸುದ್ದಿ ಬರೆಯುವ ವರದಿಗಾರರಿಗಿಂತ ಫೋಟೋಗ್ರಾಫರ್ ಗಳಿಗೇ ಹೆಚ್ಚು ಬೇಡಿಕೆ ಇದೆ. ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯ ಒಂದು ಫೋಟೋ ಬಂದರೆ ಸಾಕು ಎಂದು ರಾಜಕಾರಣಿಗಳು ಕಾತರಿಸುತ್ತಾರೆ. ಯಾವುದೇ ಭಾಷೆಯವರಿಗಾದರೂ, ಅನಕ್ಷರಸ್ಥರಿಗೂ ಕೂಡ ಫೋಟೋ ಮೂಲಕ ಸಂವಹನ ನಡೆಸಬಹುದಾದ ಸಾಧ್ಯತೆಯೇ ಫೋಟೋ ಜರ್ನಲಿಸ್ಟ್ ಗಳ ಮಹತ್ವವನ್ನು ಹೇಳುತ್ತದೆ.

ಒಂದು ವರದಿಯನ್ನು ಸಂಪಾದಕರು ತೆಗೆದು ಪಕ್ಕಕ್ಕಿಡಬಹುದು. ಆದರೆ ಉತ್ತಮವಾದ ಒಂದು ಫೋಟೋವನ್ನು ಯಾರೂ ಪಕ್ಕಕ್ಕಿಡುವುದಿಲ್ಲ. ಆದ್ದರಿಂದ ಪತ್ರಿಕೆಗಳಲ್ಲಿ ಲಭ್ಯವಿರುವ ಸ್ಪೇಸ್ ಅನ್ನು ಸಮರ್ಥವಾಗಿ ಸದುಪಯೋಗಪಡಿಸಿಕೊಳ್ಳಿ ಎಂದು ಕೆವಿಪಿ ಕರೆ ನೀಡಿದರು.

ಡೆಕ್ಕನ್ ಹರಾಲ್ಡ್ ಸಂಸ್ಥೆಯ ಮುಖ್ಯಸ್ಥರಾದ ಕೆ.ಎನ್.ಶಾಂತಕುಮಾರ್, ಮಾಧ್ಯಮ ಅಕಾಡೆಮಿ‌ ಅಧ್ಯಕ್ಷೆ ಆಯೆಷಾ ಖಾನುಂ, ಹಿರಿಯ ಫೋಟೋ ಜರ್ನಲಿಸ್ಟ್ ಭಾಗ್ಯಪ್ರಕಾಶ್, ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷರಾದ ಮೋಹನ್, ಹಿರಿಯ ಪತ್ರಕರ್ತ ಸದಾಶಿವ ಶೆಣೈ ಅವರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ | ಲಂಚ ಪಡೆಯುತ್ತಿದ್ದ ಆರೋಪ: ಉಪ ತಹಶೀಲ್ದಾರ್ ಸೇರಿ ಮೂವರ ಬಂಧನ
ಮಂಗಳೂರು: ಲಂಚ ಸ್ವೀಕರಿಸಿದ ಆರೋಪದ ಮೇಲೆ ಬಂಟ್ವಾಳದ ಉಪ ತಹಶೀಲ್ದಾರ್ ರಾಜೇಶ್ ನಾಯಕ್, ಕೇಸ್ ವರ್ಕರ್ ಸಂತೋಷ್ ಮತ್ತು ಮಧ್ಯವರ್ತಿ ಗಣೇಶ್ ವಾಮದಪದವು ಅವರನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮಧ್ಯವರ್ತಿಯ ಮೂಲಕ 20,000 ರೂಪಾಯಿ ಲಂಚ ಸ್ವೀಕರಿಸುವಾಗ ಉಪ ತಹಶೀಲ್ದಾರ್ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.

ಸಂತ್ರಸ್ತರ ದೂರಿನ ಪ್ರಕಾರ, 2021ರಲ್ಲಿ ದೂರುದಾರರು ತಮ್ಮ ತಾಯಿಯ ಪೌತಿ ಖಾತೆಗಾಗಿ ಬಂಟ್ವಾಳ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಕಾನೂನು ವಿವಾದದ ನಂತರ, ಉಪ ಆಯುಕ್ತರ ನ್ಯಾಯಾಲಯವು ಭೂ ಮಂಜೂರಾತಿ ಆದೇಶವನ್ನು ಎತ್ತಿಹಿಡಿದು, ಸಜೀಪ ಮುನ್ನೂರು ಗ್ರಾಮದ ಸರ್ವೆ ನಂ 102/1ರಲ್ಲಿ ಪೌತಿ ಖಾತಾ ಮಾಡಿಕೊಡುವಂತೆ ಸಹಾಯಕ ಆಯುಕ್ತರ ನ್ಯಾಯಾಲಯಕ್ಕೆ ಸೂಚಿಸಿತು. ಸಹಾಯಕ ಆಯುಕ್ತರು ಬಂಟ್ವಾಳ ತಹಶೀಲ್ದಾರ್‌ಗೆ ಈ ಆದೇಶವನ್ನು ಜಾರಿಗೆ ತರುವಂತೆ ನಿರ್ದೇಶಿಸಿದರು.

ಆದರೆ, ಕಡತವು ಏಪ್ರಿಲ್ 2025ರಿಂದ ಬಂಟ್ವಾಳ ತಹಶೀಲ್ದಾರ್ ಕಚೇರಿಯಲ್ಲಿ ಬಾಕಿ ಉಳಿದಿತ್ತು. ದೂರುದಾರರು ಕೇಸ್ ವರ್ಕರ್ ಸಂತೋಷ್ ಅವರನ್ನು ಸಂಪರ್ಕಿಸಿದಾಗ, ದಾಖಲೆಗಳನ್ನು ಪ್ರಕ್ರಿಯೆಗೊಳಿಸಲು 1,500 ರೂಪಾಯಿ ಲಂಚ ಕೇಳಿದ್ದಾರೆ. ಉಪ ತಹಶೀಲ್ದಾರ್ ರಾಜೇಶ್ ನಾಯಕ್ ಪೌತಿ ಖಾತಾ ಪ್ರವೇಶಕ್ಕೆ ಅನುಮೋದನೆ ನೀಡಲು 20,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ದೂರುದಾರರು ಮಂಗಳೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಬುಧವಾರದಂದು ಲೋಕಾಯುಕ್ತ ತಂಡವು ಕಾರ್ಯಾಚರಣೆ ನಡೆಸಿ, ಮಧ್ಯವರ್ತಿ ಗಣೇಶ್ ಮೂಲಕ 20,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ರಾಜೇಶ್ ನಾಯಕ್ ಅವರನ್ನು ಬಂಧಿಸಿದೆ.

ಬಂಧಿತರಾದ ಮೂವರನ್ನು ವಿಚಾರಣೆ ನಡೆಸಲಾಗುತ್ತಿದೆ, ಮತ್ತು ಈ ಪ್ರಕರಣದಲ್ಲಿ ಬಂಟ್ವಾಳ ತಹಶೀಲ್ದಾರ್ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ.

ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ (ಪ್ರಭಾರ) ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಡಿವೈಎಸ್‌ಪಿ ಡಾ. ಗಣ ಪ ಕುಮಾರ್, ಡಿವೈಎಸ್‌ಪಿ ಸುರೇಶ್ ಕುಮಾರ್ ಪಿ, ಇನ್ಸ್‌ಪೆಕ್ಟರ್‌ಗಳಾದ ಭಾರತಿ ಜಿ ಮತ್ತು ಚಂದ್ರಶೇಖರ್ ಕೆ ಎನ್, ಹಾಗೂ ಇತರ ಲೋಕಾಯುಕ್ತ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಉಪ ತಹಶೀಲ್ದಾರ್ ಸೇರಿ ಮೂವರನ್ನು ಲೋಕಾಯುಕ್ತರು ಬಂಧಿಸಿದ್ದಾರೆ.

ತಮಿಳುನಾಡು ರಾಜ್ಯಪಾಲ ರವಿಯವರನ್ನು ಬಹಿಷ್ಕರಿಸಿ, ಕುಲಪತಿಯಿಂದ ಡಾಕ್ಟರೇಟ್ ಪಡೆದು ದ್ರಾವಿಡ ಮಾದರಿ ನನ್ನ ತತ್ವ ಎಂದ ವಿದ್ಯಾರ್ಥಿ
ತಿರುನಲ್ವೇಲಿ: ಮನೋನ್ಮನೀಯಂ ಸುಂದರನಾರ್ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಘಟಿಕೋತ್ಸವ ಸಮಾರಂಭದಲ್ಲಿ, ಒಬ್ಬ ಮಹಿಳಾ ಡಾಕ್ಟರೇಟ್ ಪದವಿ ಪಡೆದ ವಿದ್ಯಾರ್ಥಿ ರಾಜ್ಯಪಾಲ ಆರ್.ಎನ್. ರವಿ ಅವರನ್ನು ಬಹಿಷ್ಕರಿಸಿದರು.

ವೇದಿಕೆಯ ಮೇಲೆ ಕುಲಪತಿ ಎನ್. ಚಂದ್ರಶೇಖರ್ ಸೇರಿದಂತೆ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ರಾಜ್ಯಪಾಲರ ಪಕ್ಕದಲ್ಲಿ ನಿಂತಿದ್ದಾಗ, ಪದವಿ ಸ್ವೀಕರಿಸಲು ಬಂದ ಇತರ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ರಾಜ್ಯಪಾಲರ ಬಳಿ ತೆರಳಿ, ತಮ್ಮ ಪ್ರಮಾಣಪತ್ರಗಳನ್ನು ಅವರಿಗೆ ನೀಡಿ, ಫೋಟೋ ತೆಗೆದುಕೊಂಡು ಅವರಿಂದ ಪದವಿ ಸ್ವೀಕರಿಸಿದರು.

ಆದರೆ, ಜೀನ್ ರಾಜನ್ ಎಂಬ ಡಾಕ್ಟರೇಟ್ ಪದವಿ ವಿದ್ಯಾರ್ಥಿ ರಾಜ್ಯಪಾಲರನ್ನು ನಿರ್ಲಕ್ಷಿಸಿ, ನೇರವಾಗಿ ಕುಲಪತಿ ಚಂದ್ರಶೇಖರ್ ಅವರ ಬಳಿಗೆ ಹೋಗಿ, ತಮ್ಮ ಪ್ರಮಾಣಪತ್ರವನ್ನು ಅವರಿಗೆ ನೀಡಿ, ಅವರಿಂದಲೇ ಪದವಿಯನ್ನು ಸ್ವೀಕರಿಸಿದರು.

ರಾಜನ್ ತಮ್ಮನ್ನು ದಾಟಿ ಹೋಗುತ್ತಿದ್ದಂತೆಯೇ, ರಾಜ್ಯಪಾಲ ರವಿ ಅವರು ತಮ್ಮ ಪಕ್ಕದಲ್ಲಿ ನಿಂತು ಪದವಿ ಪಡೆಯುವಂತೆ ಸನ್ನೆ ಮಾಡಿದರು. ಆದರೆ, ಅವರು ರಾಜ್ಯಪಾಲರ ಸನ್ನೆಯನ್ನು ನಿರ್ಲಕ್ಷಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜನ್, “ರಾಜ್ಯಪಾಲರು ರಾಜ್ಯಕ್ಕಾಗಿ ಏನು ಮಾಡಿದ್ದಾರೆ?” ಎಂದು ಪ್ರಶ್ನಿಸಿದರು. “ಇದು ನನ್ನ ಪದವಿ ಮತ್ತು ಅದನ್ನು ಯಾರಿಂದ ಸ್ವೀಕರಿಸಬೇಕು ಎಂದು ನಿರ್ಧರಿಸುವುದು ನನ್ನ ಆಯ್ಕೆ” ಎಂದು ಅವರು ಹೇಳಿದರು.

ರಾಜ್ಯಪಾಲರು “ತಮಿಳು ಮತ್ತು ತಮಿಳುನಾಡು” ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ, ಇದು ತನಗೆ ಬೇಸರ ತಂದಿದೆ. ಹಾಗಾಗಿ ಅವರಿಂದ ಪದವಿ ಪಡೆಯಲು ಇಷ್ಟಪಡಲಿಲ್ಲ ಎಂದು ಅವರು ಆರೋಪಿಸಿದರು.

ವೇದಿಕೆಯ ಮೇಲೆ ಕುಲಪತಿಗಳು ರಾಜ್ಯಪಾಲರಿಂದ ಪದವಿ ಪಡೆಯುವಂತೆ ಸೂಚಿಸಿದರೂ, ಅವರು ಅದಕ್ಕೆ ಒಪ್ಪಲಿಲ್ಲ. ಜೀನ್ ರಾಜನ್ ಅವರು ನಾಗರ್‌ಕೋಯಿಲ್‌ನಲ್ಲಿರುವ ಒಂದು ಕಂಪನಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.

ತಾವು “ದ್ರಾವಿಡ ಮಾದರಿ”ಯಲ್ಲಿ ನಂಬಿಕೆ ಇಟ್ಟಿದ್ದು, ತಮ್ಮ ನಿರ್ಧಾರವು ಅದರ ಆಧಾರದ ಮೇಲಿದೆ ಎಂದು ಅವರು ಹೇಳಿದರು. ಜೀನ್ ರಾಜನ್ ಅವರ ಪತಿ ನಾಗರ್‌ಕೋಯಿಲ್ ಪಟ್ಟಣದಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷದ ಪದಾಧಿಕಾರಿ ಎಂದು ವರದಿಯಾಗಿದೆ.

ಈ ಕಾರ್ಯಕ್ರಮದಲ್ಲಿ ರಿಜಿಸ್ಟ್ರಾರ್ ಜೆ. ಸಾಕ್ರಟೀಸ್ ಸೇರಿದಂತೆ ಇತರ ವಿಶ್ವವಿದ್ಯಾಲಯ ಅಧಿಕಾರಿಗಳು ಭಾಗವಹಿಸಿದ್ದರು.

ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್
ದೆಹಲಿ: ಒಲಿಂಪಿಕ್ ಪದಕ ವಿಜೇತ, ರೆಸ್ಲರ್ ಸುಶೀಲ್ ಕುಮಾರ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಜೈಲುಶಿಕ್ಷೆ ಎದುರಿಸುತ್ತಿದ್ದಾರೆ.

ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನ್ಕರ್ ಹತ್ಯೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ವಿರುದ್ಧ ಆರೋಪಗಳಿವೆ. ಮಾರ್ಚ್ 4 ರಂದು ದೆಹಲಿ ಹೈಕೋರ್ಟ್ ಸುಶೀಲ್‌ಗೆ ಜಾಮೀನು ನೀಡಿತ್ತು. ಆದರೆ, ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ಸುಪ್ರೀಂ ಕೋರ್ಟ್ ಪೀಠ ಆ ಜಾಮೀನನ್ನು ರದ್ದುಪಡಿಸಿದೆ.

ಒಂದು ವಾರದೊಳಗೆ ಸುಶೀಲ್ ಶರಣಾಗಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಆಸ್ತಿಯೊಂದರ ವಿಚಾರವಾಗಿ ರೆಸ್ಲರ್‌ಗಳ ನಡುವೆ ವಿವಾದ ಉಂಟಾಗಿತ್ತು. ಮೇ 2021 ರಲ್ಲಿ ಸುಶೀಲ್ ಕುಮಾರ್ ಮತ್ತು ಇತರರು ಧನ್ಕರ್ ಮೇಲೆ ಹಲ್ಲೆ ಮಾಡಿದ್ದರು. ಆ ಘಟನೆಯಲ್ಲಿ ಧನ್ಕರ್ ಅವರ ಇಬ್ಬರು ಸ್ನೇಹಿತರೂ ಗಾಯಗೊಂಡಿದ್ದರು. ಮರಣೋತ್ತರ ವರದಿಯ ಪ್ರಕಾರ, ಧನ್ಕರ್ ಅವರ ತಲೆಗೆ ತೀವ್ರ ಗಾಯಗಳಾಗಿದ್ದವು.

ಸಚಿವ ರಾಜಣ್ಣ ವಜಾ | ಇದು ದಲಿತರಿಗೆ ಮಾಡಿದ ಅವಮಾನ: ನಿಖಿಲ್‌ ಕುಮಾರಸ್ವಾಮಿ
ದಾವಣಗೆರೆ: ಸಹಕಾರ ಸಚಿವರಾಗಿದ್ದ ಕೆ.ಎನ್‌. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವ ಮೂಲಕ ಕಾಂಗ್ರೆಸ್‌ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಅಗೌರವ ತೋರಿದೆ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವುದಾಗಿ ಹೇಳುವ ಕಾಂಗ್ರೆಸ್, ಅದೇ ಸಮುದಾಯದ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು. ರಾಜಣ್ಣ ಅವರಂತಹ ಹಿರಿಯ ನಾಯಕರಿಂದ ಗೌರವಯುತವಾಗಿ ರಾಜೀನಾಮೆ ಪಡೆಯುವ ಅವಕಾಶ ಕಾಂಗ್ರೆಸ್‌ಗೆ ಇತ್ತು, ಆದರೆ ಏಕಾಏಕಿ ಅವರನ್ನು ಸಂಪುಟದಿಂದ ಕಿತ್ತುಹಾಕಿ ಮುಜುಗರಕ್ಕೀಡು ಮಾಡಿದೆ ಎಂದು ಅವರು ಟೀಕಿಸಿದರು.

‘ಆಂತರಿಕ ಪ್ರಜಾಪ್ರಭುತ್ವವಿಲ್ಲ’

“ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಸತ್ಯವನ್ನು ನುಡಿದ ರಾಜಣ್ಣ ಅವರನ್ನು ಬಲಿಪಶು ಮಾಡಲಾಗಿದೆ. ಮತ ಕಳ್ಳತನದ ಬಗ್ಗೆ ರಾಜಣ್ಣ ನೀಡಿದ ಹೇಳಿಕೆಯಲ್ಲಿ ತಪ್ಪೇನಿದೆ?” ಎಂದು ನಿಖಿಲ್ ಪ್ರಶ್ನಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮೈತ್ರಿ ಮುಂದುವರಿಕೆ

ಇದೇ ವೇಳೆ, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನಿಖಿಲ್‌, “ಸ್ಥಳೀಯ ಸಂಸ್ಥೆಗಳು ಸೇರಿದಂತೆ ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದರು. ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸುವ ಪ್ರಸ್ತಾವನೆಗೆ ಬಿಜೆಪಿ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಸಿದ್ಧಪಡಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದರು.

“ವಿಧಾನಸಭಾ ಚುನಾವಣೆಗೂ ಮುನ್ನ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆಯಲಿವೆ. ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯಕರ್ತರಿಗೆ ಅಧಿಕಾರ ಸಿಕ್ಕರೆ ವಿಧಾನಸಭಾ ಚುನಾವಣೆ ಸುಲಭವಾಗಲಿದೆ. ಪಕ್ಷ ಸಂಘಟನೆಗೆ ಒತ್ತು ನೀಡಲು ಮತ್ತು ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸಲು ರಾಜ್ಯದಲ್ಲಿ ಎರಡು ಸಮಾವೇಶಗಳನ್ನು ನಡೆಸಲು ತೀರ್ಮಾನಿಸಲಾಗಿದೆ” ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಮಾನನಷ್ಟ ಮೊಕದ್ದಮೆ: ಮೇಧಾ ಪಾಟ್ಕರ್‌ಗೆ ಸುಪ್ರೀಂನಲ್ಲಿ ಹಿನ್ನಡೆ
ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ (70) ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನೆಡೆಯಾಗಿದೆ. ಮಾನನಷ್ಟ ಮೊಕದ್ದಮೆಯಲ್ಲಿ ಜುಲೈ 29ರಂದು ದೆಹಲಿ ಹೈಕೋರ್ಟ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ನೀಡಿದ ತೀರ್ಪಿನಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಆದರೆ ಅವರಿಗೆ ವಿಧಿಸಲಾದ ₹1 ಲಕ್ಷ ದಂಡವನ್ನು ರದ್ದುಗೊಳಿಸಿದೆ.

ಪ್ರಸ್ತುತ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು 2001ರಲ್ಲಿ ಮೇಧಾ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕಳೆದ ವರ್ಷ ಮೇ ತಿಂಗಳಲ್ಲಿ ಮೇಧಾ ಅವರನ್ನು ತಪ್ಪಿತಸ್ಥರೆಂದು ನಿರ್ಧರಿಸಿ ಮೂರು ತಿಂಗಳ ಜೈಲು ಮತ್ತು ₹1 ಲಕ್ಷ ದಂಡ ವಿಧಿಸಿದ್ದರು.

ಈ ವರ್ಷದ ಏಪ್ರಿಲ್‌ನಲ್ಲಿ ಸೆಷನ್ಸ್ ಕೋರ್ಟ್ ಮೇಧಾ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದ್ದರೂ, ಜೈಲು ಶಿಕ್ಷೆಯನ್ನು ರದ್ದುಪಡಿಸಿ ಪ್ರೊಬೇಷನ್ ಮೇಲೆ ಬಿಡುಗಡೆ ಮಾಡಲು ಆದೇಶಿಸಿತ್ತು. ದೆಹಲಿ ಹೈಕೋರ್ಟ್ ಈ ತೀರ್ಪನ್ನು ಎತ್ತಿಹಿಡಿದಿತ್ತು.

ಮುಂದಿನ ವರ್ಷದಿಂದ ಮೊಟ್ಟೆ ವಿತರಣೆಗೆ ಪೋಷಕರ ಒಪ್ಪಿಗೆ ಪಡೆಯುತ್ತೇವೆ: ಸಚಿವ ಮಧು ಬಂಗಾರಪ್ಪ
ಬೆಂಗಳೂರು: ಶಾಲಾ ಮಕ್ಕಳಿಗೆ ಬಿಸಿಯೂಟದಲ್ಲಿ ಮೊಟ್ಟೆಗಳನ್ನು ವಿತರಿಸುವ ಕುರಿತು ಅಜೀಂ ಪ್ರೇಮ್‌ಜಿ ಫೌಂಡೇಶನ್ ನಡೆಸಿದ ಅಚ್ಚರಿಯ ಪರಿಶೀಲನೆಯಲ್ಲಿ, ಕೆಲವು ಶಾಲೆಗಳಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಸದಸ್ಯರ ಸೂಚನೆಯ ಮೇರೆಗೆ ಮೊಟ್ಟೆ ವಿತರಣೆ ಆಗುತ್ತಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಈ ವರ್ಷದಿಂದ ಮಕ್ಕಳ ದಾಖಲಾತಿ ಸಮಯದಲ್ಲಿ ಅಥವಾ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಪೋಷಕರಿಂದ ಒಪ್ಪಿಗೆ ಪತ್ರ ಪಡೆಯಲು ನಿರ್ಧರಿಸಿದೆ.

ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಪೌಷ್ಟಿಕಾಂಶದ ಹೆಚ್ಚುವರಿಯಾಗಿ ಮೊಟ್ಟೆಗಳನ್ನು ವಿತರಿಸಲು ಅಜೀಂ ಪ್ರೇಮ್‌ಜಿ ಫೌಂಡೇಶನ್ 1,500 ಕೋಟಿ ರೂ. ನೀಡುವುದಾಗಿ ಪ್ರತಿಜ್ಞೆ ಮಾಡಿದೆ. ಸೋಮವಾರ, ಬಿಜೆಪಿ ಎಂಎಲ್‌ಸಿ ಎನ್. ರವಿ ಕುಮಾರ್ ಅವರು ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆಗಳನ್ನು ನೀಡುತ್ತಿಲ್ಲ ಎಂದು ಪ್ರಶ್ನಿಸಿದಾಗ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಕೆಲವು ಪೋಷಕರು ತಮ್ಮ ಮಕ್ಕಳಿಗೆ ವಾರದ ಕೆಲವು ದಿನಗಳಲ್ಲಿ ಮೊಟ್ಟೆ ತಿನ್ನಿಸುವುದು ಬೇಡ ಎಂದು ತಿಳಿಸಿದ್ದಾರೆ ಎಂದು ಒಪ್ಪಿಕೊಂಡರು.

“ಆದ್ದರಿಂದ, ನಾವು ಮಕ್ಕಳ ದಾಖಲಾತಿ ಸಮಯದಲ್ಲಿಯೇ ಪೋಷಕರಿಂದ ಒಪ್ಪಿಗೆ ಪಡೆಯಲು ನಿರ್ಧರಿಸಿದ್ದೇವೆ. ಅವರಿಗೆ ಮೊಟ್ಟೆ ಬೇಕೇ ಅಥವಾ ಬಾಳೆಹಣ್ಣು ಬೇಕೇ ಎಂಬುದನ್ನು ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ. ಇಂತಹ ವಿಷಯಗಳಲ್ಲಿ ಪೋಷಕರ ಅನುಮತಿ ಪಡೆಯುವುದು ಒಳ್ಳೆಯದು,” ಎಂದು ಸಚಿವರು ಹೇಳಿದರು.

ಆದರೆ, ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಲು ಮೀಸಲಿಟ್ಟ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪಗಳನ್ನು ಮಧು ಬಂಗಾರಪ್ಪ ಅವರು ತಳ್ಳಿಹಾಕಿದರು. “ಹಣದ ದುರುಪಯೋಗವಾಗಿಲ್ಲ. ಮೊಟ್ಟೆಗಳ ಬೆಲೆ ಏರಿಳಿತವಾಗುತ್ತದೆ, ಮತ್ತು ಉಳಿದ ಹಣವನ್ನು ಆಯಾ SDMCಗಳು ಇಟ್ಟುಕೊಳ್ಳುತ್ತವೆ.”

ಅಜೀಂ ಪ್ರೇಮ್‌ಜಿ ಫೌಂಡೇಶನ್ ಪರಿಶೀಲಿಸಿದ 762 ಶಾಲೆಗಳಲ್ಲಿ 568 ಶಾಲೆಗಳಲ್ಲಿ ಮೊಟ್ಟೆ ವಿತರಣೆಯಾಗಿಲ್ಲ ಎಂದು ಕಂಡುಬಂದಿದೆ. ಫೌಂಡೇಶನ್ ತನ್ನ ವರದಿಯನ್ನು ಸಲ್ಲಿಸಿದ ನಂತರ, ಇಲಾಖೆಯು SDMCಗಳಿಗೆ ನೋಟಿಸ್ ಜಾರಿ ಮಾಡಿದೆ.

ಸೆಪ್ಟೆಂಬರ್ ಕ್ರಾಂತಿ ಎಂದಿದ್ದ ರಾಜಣ್ಣ ಆಗಸ್ಟ್​​​​​ನಲ್ಲೇ ಔಟ್ ?
ಬೆಂಗಳೂರು : ಇತ್ತೀಚೆಗೆ ಮಾತೆತ್ತಿದರೆ ಸಾಕು ಸೆಪ್ಟೆಂಬರ್ ಕ್ರಾಂತಿ ಎನ್ನುತ್ತಿದ್ದ ಮಧುಗಿರಿಯ ಹಿರಿಯ ಶಾಸಕ ಕೆ.ಎನ್.ರಾಜಣ್ಣ (KN Rajanna) ಅವರು ಆಗಸ್ಟ್​​​ನಲ್ಲೇ ತಮ್ಮ ಸಚಿವ ಸ್ಥಾನ‌ಬಿಟ್ಟಿದ್ದಾರೆ (Ministerial Position). ಸಹಕಾರ ಸಚಿವರಾಗಿದ್ದ ರಾಜಣ್ಣ ದಿಢೀರ್ ರಾಜೀನಾಮೆ (Resignation) ಕುರಿತಂತೆ ರಾಜ್ಯ (State) ರಾಜಕೀಯದಲ್ಲಿ (Politics) ಭಾರೀ ಸಂಚಲನಕ್ಕೆ ಕಾರಣವಾಗಿದೆ.

ರಾಜಣ್ಣ ರಾಜೀನಾಮೆಗೆ ಕಾರಣಗಳು ಏನು ಎಂಬ ಬಗ್ಗೆಯೂ ಚರ್ಚೆ ಶುರುವಾಗಿದೆ. ಇದರ ಬೆನ್ನಲ್ಲೇ ರಾಜಣ್ಣ ರಾಜೀನಾಮೆ ನೀಡಿಲ್ಲ, ಬದಲಾಗಿ ಸಂಪುಟದಿಂದಲೇ ಅವರನ್ನು ವಜಾ ಮಾಡಲಾಗಿದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಈ ಕುರಿತಂತೆ ರಾಜ್ಯಪಾಲರ ಕಚೇರಿಯಿಂದ ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬಂದಿದ್ದು, ಅದರಲ್ಲಿ “Removal” ಎಂಬ ಶಬ್ದವನ್ನು ಬಳಸಲಾಗಿದೆ.

ರಾಜಣ್ಣ ರಾಜೀನಾಮೆ ಅಲ್ಲ, ವಜಾ

ಸಿಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟದ ಹಿರಿಯ ಸಹೋದ್ಯೋಗಿ ಆಗಿದ್ದ ರಾಜಣ್ಣ ಅವರು ಅಧಿಕೃತವಾಗಿ ವಜಾಗೊಂಡಿದ್ದಾರೆ. ಹೈಕಮಾಂಡ್ ಖಡಕ್ ಸೂಚನೆ ಮೇರೆಗೆ ಅವರು ಸಚಿವ ಸ್ಥಾನಕ್ಕೆ ನೀಡಿದ್ದಾರೆ ಎನ್ನಲಾಗುತ್ತಿತ್ತು. ಆದರೆ ರಾಜಣ್ಣ ರಾಜೀನಾಮೆ ನೀಡಿಲ್ಲ, ಬದಲಾಗಿ ಅವರನ್ನು ಸಚಿವ ಸಂಪುಟದಿಂದಲೇ ವಜಾ ಮಾಡಲಾಗಿದೆ.

ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ. ಸಹಕಾರ ಸಚಿವ ಕೆ.ಎನ್. ರಾಜಣ್ಣರನ್ನು ಸಚಿವ ಸಂಪುಟದಿಂದ ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕುವ ಕುರಿತು ಮಾನ್ಯ ಮಾಡಿ ರಾಜ್ಯಪಾಲರು ಸಹಿ ಮಾಡಿದ ಮೂಲ ಅಧಿಸೂಚನೆಯನ್ನು ರವಾನಿಸಲಾಗಿದ್ದು, ಮುಂದಿನ ಅಗತ್ಯ ಕ್ರಮಕ್ಕಾಗಿ ಕಳುಹಿಸಲು ನನಗೆ ಸೂಚಿಸಲಾಗಿದೆ ಅಂತ ಪತ್ರದಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ.

ವಿಮಾನ ದುರಂತ, ಆರ್ ಸಿಬಿ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಅಧಿವೇಶನದಲ್ಲಿ ಸಂತಾಪ
ಬೆಂಗಳೂರು : ರಾಜ್ಯ ವಿಧಾನಮಂಡಲ ಅಧಿವೇಶನ (Vidhanasabha Session)  ಇಂದಿನಿಂದ ಆರಂಭವಾಗಿದ್ದು, ಈ ವೇಳೆ ಗುಜರಾತ್ ವಿಮಾನ ದುರಂತ, ಆರ್ ಸಿಬಿ ವಿಜಯೋತ್ಸವ ಕಾಲ್ತುಳಿತ, ಹಾಗೂ ಪಹಲ್ಗಾಮ್ ದಾಳಿಯ ವೇಳೆ ಮೃತಪಟ್ಟಿದ್ದ ಎಲ್ಲರಿಗೂ ಕೂಡ ಸಿಎಂ ಸಿದ್ದರಾಮಯ್ಯ (CM Siddaramaiah)  ಸಂತಾಪ ಸೂಚಿಸಿದ್ದಾರೆ.

ಈಗಾಗಲೇ ವಿಧಾನ ಸಭೆಯಲ್ಲಿ ಚರ್ಚೆ ಆರಂಭವಾಗಿದ್ದು, ಅದಕ್ಕೂ ಮೊದಲಿಗೆ ಗುಜರಾತ್ ಏರ್ ಇಂಡಿಯಾದಲ್ಲಿ ದುರಂತ ಆರ್ ಸಿಬಿ ವಿಜಯೋತ್ಸವದ ವೇಳೆ ಮೃತಪಟ್ಟ, ಹಾಗೂ ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದ ಕರ್ನಾಟಕದ ಮಂಜುನಾಥ್ ರಾವ್ ಮತ್ತು ಭರತ್ ಭೂಷಣ್ ಸೇರಿದಂತೆ ಒಟ್ಟು 28 ಜನ ಮೃತಪಟ್ಟಿರುವುದು ದುಃಖದ ಸಂಗತಿ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಇದಕ್ಕೂ ಮೊದಲು ಸನ್ಮಾನ್ಯ ಸಭಾಪತಿಗಳಾದ ಯುಟಿ ಖಾದರ್ ಫರೀದ್ ಅವರು, ಡಾ. ಪಾಂಡುರಂಗ ಬಾಪು ಪಾಟೀಲ್, ಎನ್ ರಾಜಣ್ಣ, ವಿಧಾನ ಪರಿಷತ್ ಮಾಜಿ ಹಂಗಾಮಿ ಸಭಾಪತಿಗಳಾದ ಡಾ. ಎಸ್ ಎನ್ ತಿಪ್ಪಣ್ಣ , ಮಾಜಿ ಉಪಸಭಾ ಪತಿ ಹಂಗಾಮಿ ಸಭಾಪತಿ ಡೇವಿಡ್ ಶ್ರೀ ಮೋಹನ್, ರಾಜ್ಯ ಸಭೆಯ ಮಾಜಿ ಸದಸ್ಯರಾದ ಡಾ.  ಕೆ. ಕಸ್ತೂರಿ ರಂಗನ್, ಖ್ಯಾತ ಕೃಷಿ ವಿಜ್ಞಾನಿ ಪ್ರೊ. ಸುಬ್ಬಣ್ಣ ಅಯ್ಯಪ್ಪನ್, ಅಣು ವಿಜ್ಞಾನಿ ಎಂ. ಆರ್. ಶ್ರೀನಿವಾಸನ್, ಹಿರಿಯ ಸಾಹಿತಿ ಪ್ರೊ. ಸಿದ್ದಲಿಂಗಯ್ಯ, ಹಿರಿಯ ಕವಿ ಡಾ. ಹೆಚ್ ಎಸ್ ವೆಂಕಟೇಶ ಮೂರ್ತಿ, ಬಹುಬಾಷಾ ಹಿರಿಯ ನಟಿ ಶ್ರೀಮತಿ ವಿ ಸರೋಜಾ ದೇವಿ, ಮತ್ತು ಕ್ರೈಸ್ತ ಧರ್ಮ ಗುರು ಪೋಪ್ ಫ್ರಾನ್ಸಿಸ್ ನಿಧನ ಹೊಂದಿದ್ದನ್ನು, ಹಾಗೂ ಪಹಲ್ಗಾಮ್ ಉಗ್ರರ ದಾಳಿಗೆ ಹತರಾದವರಿಗೆ,  ಗುಜರಾತ್ ಏರ್ ಇಂಡಿಯಾದಲ್ಲಿ ದುರಂತ ಆರ್ ಸಿಬಿ ವಿಜಯೋತ್ಸವದ ವೇಳೆ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.