Potti Sriramulu – Peepal Media

ಗಾಂಧೀಜಿಯವರನ್ನೇ ಪ್ರಭಾವಿಸಿದ್ದ ದಿಟ್ಟ ಸತ್ಯಾಗ್ರಹಿ ಪೊಟ್ಟಿ ಶ್ರೀರಾಮುಲು
ಭಾರತದ  ಕ್ರಾಂತಿಕಾರಿ ಹೋರಾಟಗಾರರಲ್ಲಿ ಒಬ್ಬರಾದ, ಪೊಟ್ಟಿ ಶ್ರೀರಾಮುಲು ಅವರು 1901 ರಲ್ಲಿ ಗುರವಯ್ಯ ಮತ್ತು ಮಹಾಲಕ್ಷ್ಮಮ್ಮ ದಂಪತಿಗಳಿಗೆ ಪಾದಮಟಪಲ್ಲಿಯಲ್ಲಿ ಜನಿಸಿದರು. ಈ ಪ್ರದೇಶ ಒಂದು ಕಾಲದಲ್ಲಿ ನೆಲ್ಲೂರು ಜಿಲ್ಲೆಯೊಳಗೆ ಸೇರಿಕೊಂಡಿತ್ತು. ನಂತರ, ಕ್ಷಾಮ ಪರಿಸ್ಥಿತಿಗಳಿಂದಾಗಿ ಅವರ ಕುಟುಂಬವು ಮದ್ರಾಸಿಗೆ ಸ್ಥಳಾಂತರಗೊಂಡಿತು.

ಶ್ರೀರಾಮುಲು ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು ಮತ್ತು 1930 ರ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲು ಪಾಲಾದರು. 1941 ಮತ್ತು 1942 ರ ನಡುವೆ ಅವರು  ಏಕವ್ಯಕ್ತಿ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದರು ಮತ್ತು ಮೂರು ಬಾರಿ ಬಂಧಿತರಾಗಿದ್ದರು. ಅವರು ಮಹಾತ್ಮ ಗಾಂಧಿಯವರ ನಿಷ್ಠಾವಂತ ಅನುಯಾಯಿ, ಕಟ್ಟಾ ಬೆಂಬಲಿಗ ಮತ್ತು ಅವರ ಭಕ್ತರಾಗಿದ್ದರು. ಅವರು ಕೊಮರವೋಲುವಿನಲ್ಲಿ ಯರ್ನೇನಿ ಸುಬ್ರಹ್ಮಣ್ಯಂ ಸ್ಥಾಪಿಸಿದ ಗಾಂಧಿ ಆಶ್ರಮವನ್ನು ಕೂಡ ಸೇರಿದರು.

ಅವರು 1946-1948 ರ ಅವಧಿಯಲ್ಲಿ,  ನೆಲ್ಲೂರು ದೇವಾಲಯಗಳಂತಹ ಪವಿತ್ರ ಸ್ಥಳಗಳಿಗೆ ದಲಿತರ ಪ್ರವೇಶದ ಹಕ್ಕನ್ನು ಬೆಂಬಲಿಸಿ ಮೂರು ಸತ್ಯಗ್ರಹಗಳನ್ನು ಕೈಗೊಂಡರು. (ದಲಿತರು: ದಮನಿತ ಹಿಂದೂ ಜಾತಿಗಳ ಒಂದು ವಿವಾದಾತ್ಮಕ, ಭಿನ್ನಜಾತಿಯ ಗುಂಪು ಎನ್ನಿಸಿಕೊಂಡವರು. ಗಾಂಧಿ ಮತ್ತು ಅವರ ಬೆಂಬಲಿಗರ ಸದುದ್ದೇಶದಿಂದ, ಹರಿಜನ ಎಂಬ ಪದದಿಂದ ಉಲ್ಲೇಖಿಸಲ್ಪಟ್ಟರು) ನೆಲ್ಲೂರು ಮೂಲಪೇಟದಲ್ಲಿರುವ ವೇಣು ಗೋಪಾಲ ಸ್ವಾಮಿ ದೇವಸ್ಥಾನಕ್ಕೆ ದಲಿತರ ಪ್ರವೇಶ ಹಕ್ಕುಗಳನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ನಡೆಸಿದರು. ಅಂತಿಮವಾಗಿ ಹಕ್ಕುಗಳನ್ನು ಪಡೆದರು. ದಲಿತ ಸಮುದಾಯವನ್ನು ಮತ್ತಷ್ಟು ಉನ್ನತೀಕರಿಸಲು ಮದ್ರಾಸ್ ಸರ್ಕಾರವು ಅಂಗೀಕರಿಸಿದ ಅನುಕೂಲಕರ ಆದೇಶಗಳನ್ನು ಪಡೆಯಲು ಅವರು ಮತ್ತೆ ಉಪವಾಸ ಮಾಡಿದರು.

ಶ್ರೀರಾಮುಲು ಅವರ ಬದ್ಧತೆ ಮತ್ತು ಉಪವಾಸದ ಸಾಮರ್ಥ್ಯದ ಬಗ್ಗೆ ಪ್ರತಿಕ್ರಿಯಿಸಿದ ಮಹಾತ್ಮ ಗಾಂಧಿಯವರು ಒಮ್ಮೆ ಹೀಗೆ ಹೇಳಿದ್ದರು, “ನನಗೆ ಶ್ರೀರಾಮುಲು ಅವರಂತೆ ಇನ್ನೂ ಹನ್ನೊಂದು ಅನುಯಾಯಿಗಳು ಇದ್ದರೆ ನಾನು ಒಂದು ವರ್ಷದಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಗೆಲ್ಲುತ್ತೇನೆ.”

ಇಂದಿನ ನೆಲ್ಲೂರು ಜಿಲ್ಲೆಗೆ, ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆ ಎಂದೇ ಕರೆಯಲಾಗುತ್ತದೆ.