power – Peepal Media

ಅ.1 ರಿಂದ ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ಶಾಕ್!
ರಾಜ್ಯ ಸರ್ಕಾರ ಒಂದು ವರ್ಷದ ಅವಧಿಯಲ್ಲಿ 3 ನೇ ಬಾರಿಯ ವಿದ್ಯುತ್ ದರ ಪರಿಷ್ಕರಣೆ ನಡೆಸಿದ್ದು, ರಾಜ್ಯದ ಜನತೆಗೆ ಶಾಕ್ ಮೇಲೆ ಶಾಕ್ ಕೊಡಲು ಹೊರಟಿದೆ. ಅದರಂತೆ ಬರುವ ಅಕ್ಟೋಬರ್ 1 ರಿಂದ ಹೊಸ ಪರಿಷ್ಕರಣಾ ದರ ಅನ್ವಯವಾಗಲಿದ್ದು, ಬೆಲೆಯೇರಿಕೆಗಳ ಪಟ್ಟಿಗೆ ವಿದ್ಯುತ್ ದರವೂ ಸೇರಲಿದೆ.

ಈ ಹಿಂದೆ ಸರ್ಕಾರ 6 ತಿಂಗಳಿಗೊಮ್ಮೆ ದರ ಪರಿಷ್ಕರಣೆ ನಡೆಸುವ ಬಗ್ಗೆ ಹೇಳಿದ್ದು ಈಗ 3 ತಿಂಗಳಲ್ಲಿ ಎರಡನೇ ಬಾರಿಯ ದರ ಪರಿಷ್ಕರಣೆ ಇದಾಗಿದೆ. ಕಳೆದ ಜುಲೈ ತಿಂಗಳಲ್ಲಿ 31 ಪೈಸೆಯಷ್ಟು ಬೆಸ್ಕಾಂ ದರದಲ್ಲಿ ಏರಿಕೆಯಾಗಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ 21 ಪೈಸೆ, ಸೆಸ್ಕಾಂ ವ್ಯಾಪ್ತಿಯಲ್ಲಿ 19 ಪೈಸೆ, ಹೆಸ್ಕಾಂ 27 ಪೈಸೆ, ಜೆಸ್ಕಾಂ ವ್ಯಾಪ್ತಿಯಲ್ಲಿ 26 ಪೈಸೆಯಷ್ಟು ದರ ಏರಿಸಲಾಗಿತ್ತು.

ಕಳೆದ ವರ್ಷ ಏಪ್ರಿಲ್ ನಿಂದ ಜೂನ್ ವರೆಗೆ 643 ಕೋಟಿ ವಿದ್ಯುತ್ ಖರೀದಿ ವೆಚ್ಚ ಏರಿಕೆ ಕಂಡಿದ್ದು, 80 ಪೈಸೆ ಇಂದನ ವೆಚ್ಚ ಶುಲ್ಕ ವಸೂಲಿ ಮಾಡಲು ಅವಕಾಶ ನೀಡುವಂತೆ ಕೋರಿ KERC ಗೆ ಬೆಸ್ಕಾಂ ಅರ್ಜಿ ಸಲ್ಲಿಸಿ ಮನವಿ ಸಲ್ಲಿಸಲಾಗಿತ್ತು. ಕಲ್ಲಿದ್ದಲು ದರ ಗಣನೀಯ ಏರಿಕೆಯಿಂದ FAC ದರ ಹೆಚ್ಚಿಸಲಾಗಿದೆ. ಹೀಗಾಗಿ ವೆಚ್ಚವು ಯೂನಿಟ್ ಗೆ 48 ಪೈಸೆಯಿಂದ 86 ಪೈಸೆಯಷ್ಟು ಏರಿಕೆ ಕಂಡಿದೆ. ಹಾಗಾಗಿ ವಿದ್ಯುತ್ ಬೆಲೆ ಏರಿಕೆ ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ವಿದ್ಯುತ್ ಉತ್ಪಾದನಾ ಕೇಂದ್ರ, ಕರ್ನಾಟಕ ವಿದ್ಯುತ್ ನಿಗಮ ಮತ್ತು ಉಡುಪಿ ಶಾಖೋತ್ಪನ್ನ ವಿದ್ಯುತ್ ಘಟಕದ ಮೂಲಕ ಎಲ್ಲಾ ಎಸ್ಕಾಂ ಗಳು ವಿದ್ಯುತ್ ಖರೀದಿಸುತ್ತಿವೆ. 3 ತಿಂಗಳಿಗೊಮ್ಮೆ ದರ ಪರಿಷ್ಕರಣೆ ಗ್ರಾಹಕರಿಗೆ ಹೊರೆ ಆಗಬಹುದಾದ್ದರಿಂದ ಇನ್ನು 6 ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೀಗಾಗಿ ರಾಜ್ಯದ ಜನ ಅನಿವಾರ್ಯವಾಗಿ ಇಂಧನ ದರದ ಏರಿಕೆಯ ಬಿಸಿಗೆ ಒಗ್ಗಿಸಿಕೊಳ್ಳಲೇಬೇಕಿದೆ.