Pradeep Kurulkar – Peepal Media

DRDO ವಿಜ್ಞಾನಿ, ಆರ್‌ಎಸ್‌ಎಸ್ ನಿಕಟವರ್ತಿ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ ಎಟಿಎಸ್
ಬೆತ್ತಲೆ ವಿಡಿಯೋಗಾಗಿ ಪಾಕಿಸ್ತಾನ ಮೂಲದ ಬೇಹುಗಾರಿಕೆಗೆ ಭಾರತದ ರಕ್ಷಣಾ ವ್ಯವಸ್ಥೆಯ ಗೌಪ್ಯ ಮಾಹಿತಿಗಳನ್ನು ಮಾರಿದ DRDO ವಿಜ್ಞಾನಿ, RSS ನಿಕಟವರ್ತಿ ಪ್ರದೀಪ್ ಕುರುಲ್ಕರ್ ಅವರ ಮೇಲೆ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ ಜಾರ್ಜ್ ಶೀಟ್ ಸಲ್ಲಿಸಿದೆ. ಚಾರ್ಜ್ ಶೀಟ್ ನಲ್ಲಿ ಭಾರತದ ಕ್ಷಿಪಣಿ, ಡ್ರೋನ್ ಮತ್ತು ರೊಬೊಟಿಕ್ಸ್ ತಂತ್ರಜ್ಞಾನಗಳ ಕುರಿತ ಸೂಕ್ಷ್ಮ ವಿವರಗಳನ್ನು ಪಾಕಿಸ್ತಾನ ಮೂಲದ ಮಹಿಳಾ ಗುಪ್ತಚರ ಅಧಿಕಾರಿಯೊಂದಿಗೆ ಹಂಚಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಗೂಢಚರ್ಯೆ ಮತ್ತು ನೆರೆಯ ರಾಷ್ಟ್ರದ ಬೇಹುಗಾರಿಕಾ ಸಿಬ್ಬಂದಿಯೊಂದಿಗೆ ದೇಶದ ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡ ಆರೋಪದ ಮೇಲೆ 2023 ರ ಮೇ 3 ರಂದು ಭಾರತದ ಭಯೋತ್ಪಾದಕ ನಿಗ್ರಹ ದಳ ಬಂಧಿಸಿತ್ತು. ಈ ಪ್ರಕರಣದ ವಿಚಾರಣೆ ಅಡಿಯಲ್ಲಿ ಈಗಾಗಲೇ 203 ಸಾಕ್ಷಿಗಳನ್ನು ಎಟಿಎಸ್ ವಿಚಾರಣೆ ನಡೆಸಿದೆ.

ವಿಚಾರಣೆ ನಂತರ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ DRDO ವಿಜ್ಞಾನಿ ಪ್ರದೀಪ್ ಕುರುಲ್ಕರ್ ಬೆತ್ತಲೆ ವಿಡಿಯೋಗಾಗಿ ಜರಾ ದಾಸ್‌ಗುಪ್ತಾ ಮತ್ತು ಜೂಹಿ ಅರೋರಾ ಎಂಬ ಹೆಸರಿನಿಂದ ಈತನಿಗೆ ಗುರುತಿಸಲ್ಪಟ್ಟ ವ್ಯಕ್ತಿಗಳೊಂದಿಗೆ ಈಗಾಗಲೇ ಅನೇಕ ಸ್ಪೋಟಕ ಮತ್ತು ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡದ್ದು ಬೆಳಕಿಗೆ ಬಂದಿದೆ. ಲಂಡನ್ ಕೋಡ್ ನಿಂದ ಆರಂಭವಾಗುವ +44 ನಂಬರ್‌ನ ಅಡಿಯಲ್ಲಿ ಈ ವ್ಯಕ್ತಿ ಸಂವಹನ ನಡೆಸಿದ್ದು ಅದರ ಸಂಪೂರ್ಣ ಆಪರೇಟಿಂಗ್ ಸಿಸ್ಟಮ್ ಪಾಕಿಸ್ತಾನದ ಮೂಲದ್ದು ಎಂದು ತನಿಖೆಯಿಂದ ತಿಳಿದು ಬಂದಿದೆ.

ಆಪಾದಿತ ಪ್ರದೀಪ್ ಕುರುಲ್ಕರ್ ಇಲ್ಲಿಯವರೆಗೆ ಜಾರಾ ದಾಸ್‌ಗುಪ್ತಾ ಎಂಬ ಹೆಸರಿನ ವ್ಯಕ್ತಿಯೊಂದಿಗಿನ ಸಂದೇಶಗಳಲ್ಲಿ, DRDO ನಲ್ಲಿ ಕೆಲಸ ಮಾಡುತ್ತಿರುವ ಉಲ್ಕಾಪಾತದ ಕ್ಷಿಪಣಿ, ಬ್ರಹ್ಮೋಸ್ ಕ್ಷಿಪಣಿಗಳು, ರಾಫೆಲ್, ಆಕಾಶ್ ಮತ್ತು ಅಸ್ತ್ರ ಕ್ಷಿಪಣಿ ವ್ಯವಸ್ಥೆಗಳ ಬಗ್ಗೆ ಮತ್ತು ಅದರ ಅಭಿವೃದ್ಧಿಯಲ್ಲಿ ಅಗ್ನಿ-6 ಕ್ಷಿಪಣಿ ಉಡಾವಣೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಅಷ್ಟೆ ಅಲ್ಲದೆ ಮಾನವರಹಿತ ಯುದ್ಧ ವೈಮಾನಿಕ ವಾಹನ, ಭಾರತ್ ಕ್ವಾಡ್‌ಕಾಪ್ಟರ್ ಮತ್ತು DRDO ಅಭಿವೃದ್ಧಿಪಡಿಸುತ್ತಿರುವ ಮಧ್ಯಮ ಎತ್ತರದ ದೀರ್ಘ-ಸಹಿಷ್ಣುತೆಯ ಮಾನವರಹಿತ ಯುದ್ಧ ವಿಮಾನವಾದ ರುಸ್ತಮ್‌ನಲ್ಲಿ DRDO ನಡೆಯುತ್ತಿರುವ ಕೆಲಸದ ಬಗ್ಗೆ ಚರ್ಚಿಸಿದ್ದಾನೆ ಎಂದು ಜಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿದ ಬಗ್ಗೆ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಈಗಾಗಲೇ ತಿಳಿದಿರುವ ಮಾಹಿತಿಯಂತೆ ಡಿಆರ್‌ಡಿಒ ಅಧಿಕಾರಿ ಪ್ರದೀಪ್ ಕುರುಲ್ಕರ್ ಹಲವು ವರ್ಷಗಳಿಂದ ಆರ್‌ಎಸ್‌ಎಸ್ ಸ್ವಯಂಸೇವಕರಾಗಿದ್ದಾರೆ. ಜೊತೆಗೆ ಅವರ ಕುಟುಂಬವು ನಾಲ್ಕು ತಲೆಮಾರುಗಳಿಂದ ಸಂಘದೊಂದಿಗೆ ಸಂಬಂಧ ಹೊಂದಿದೆ. ಇಲ್ಲಿಯವರೆಗೆ ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳು ಆಯೋಜಿಸಿದ್ದ ಹಲವಷ್ಟು ಕಾರ್ಯಕ್ರಮಗಳಲ್ಲಿ ಪ್ರದೀಪ್ ಕುರುಲ್ಕರ್ ಭಾಗಿಯಾಗಿದ್ದು, ತಾನೊಬ್ಬ RSS ನಿಕಟವರ್ತಿ ಎಂಬುದನ್ನು ಹೇಳಿಕೊಂಡಿದ್ದಾರೆ.