Prahlad Joshi – Peepal Media

ಪ್ರಹ್ಲಾದ್ ಜೋಷಿ ವಿರುದ್ಧ ಸಿಡಿದೆದ್ದ ಲಿಂಗಾಯತ ಮಠಾಧೀಶರು ; ಟಿಕೆಟ್ ಬದಲಿಸಲು ಬಿಜೆಪಿಗೆ ಗಡುವು
ರಾಜಕೀಯವನ್ನು ತಿಳಿದು ಮಾಡಬೇಕೇ ಹೊರತು ತುಳಿದು ಮಾಡಬಾರದು. ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ಇತರೆ ಸಮುದಾಯಗಳನ್ನು ತುಳಿದು ರಾಜಕೀಯ ಮಾಡುತ್ತಿದ್ದಾರೆ. ಧಾರವಾಡ ಲೋಕಸಭಾ ಮತಕ್ಷೇತ್ರದಿಂದ ಅವರಿಗೆ ನೀಡಿರುವ ಟಿಕೆಟ್‌ನ್ನು ಬಿಜೆಪಿ ವರಿಷ್ಠರು ಮಾ. 31ರೊಳಗೆ ಬದಲಾಯಿಸಬೇಕು. ಇಲ್ಲದಿದ್ದಲ್ಲಿ ಏ. 2ರಂದು ನಮ್ಮ ನಿರ್ಧಾರ ಪ್ರಕಟಿಸಬೇಕಾಗುತ್ತದೆ ಎಂದು ರಾಜ್ಯದ 40 ಮಠಾಧೀಶರ ಸಮೂಹ ಬಿಜೆಪಿ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ.

ಮೂರುಸಾವಿರಮಠದ ಆವರಣದಲ್ಲಿ ವಿವಿಧ ಮಠಾಧೀಶರೊಂದಿಗೆ ಚಿಂತನ ಮಂಥನ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದರು. ಚಿಂತನ ಮಂಥನ ಸಭೆಯಲ್ಲಿ ಬರೋಬ್ಬರಿ ವಿವಿಧ ಜಿಲ್ಲೆಗಳ 40ಕ್ಕೂ ಹೆಚ್ಚು ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ಜೋಶಿ ಅವರಿಗೆ ಅಧಿಕಾರ ಮತ್ತು ಸಂಪತ್ತಿನ ಮದವೇರಿದೆ, ಲಿಂಗಾಯತ, ಕುರುಬ ಸೇರಿದಂತೆ ಎಲ್ಲ ಸಮುದಾಯವನ್ನು ತುಳಿದಿದ್ದಾರೆ. ಸ್ವಾಮೀಜಿಗಳನ್ನು ಅವಮಾನಿಸಿದ್ದಾರೆ. ನಮ್ಮ ವಿರೋಧ ಅವರ ವ್ಯಕ್ತಿತ್ವಕ್ಕೆ ಹೊರತು ಪಕ್ಷ ಅಥವಾ ಸಮಾಜಕ್ಕೆ ಅಲ್ಲ. ಶ್ರೀಮಠದಲ್ಲಿ ನಡೆದ ಚಿಂಥನ ಮಂತನ ಸಭೆಯಲ್ಲಿ ಮಠಾಧಿಪತಿಗಳು ಸೇರಿ ಈ ನಿರ್ಣಯ ಕೈಗೊಳ್ಳಲಾಗಿದೆ. ಬಿಜೆಪಿ ಹೈಕಮಾಂಡ್‌ ಪ್ರಹ್ಲಾದ ಜೋಶಿ ಅವರನ್ನು ಮಾ. 31ರೊಳಗೆ ಬದಲಿಸಿ ಬೇರೊಬ್ಬರಿಗೆ ಟಿಕೆಟ್‌ ಘೋಷಿಸಬೇಕು. ಇಲ್ಲದಿದ್ದಲ್ಲಿ ಏ. 2ರಂದು ಮತ್ತೊಮ್ಮೆ ಲಿಂಗಾಯತ ಸ್ವಾಮೀಜಿಗಳ ಸಭೆ ಕರೆದು ನಮ್ಮ ಮುಂದಿನ ನಡೆ ಏನು ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಸ್ಥಳೀಯರೇ ಆದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಈ ಬಾರಿ ಹುಬ್ಬಳ್ಳಿ ಧಾರವಾಡ ಲೋಕಸಭಾ ಟಿಕೆಟ್ ಗೆ ಲಿಂಗಾಯತ ಮಠಾಧೀಶರು ಪ್ರಯತ್ನಿಸಿದ್ದರು. ಆದರೆ ಅವರಿಗೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲೂ ಅಸಮಾಧಾನ ಹೊರ ಹಾಕಿದ ಮಠಾಧೀಶರು ‘ಮಾಜಿ ಮುಖ್ಯಮಂತ್ರಿಗಳಿಗೆ ಬೇರೆ ಕ್ಷೇತ್ರ ನೀಡಿದಂತೆ, ಕಳೆದ 4 ಚುನಾವಣೆಯಲ್ಲಿ ಲಿಂಗಾಯತರೆಲ್ಲರೂ ಜೋಶಿ ಅವರ ಬೆನ್ನಿಗೆ ನಿಂತು ಗೆಲ್ಲಿಸಿ ಕೇಂದ್ರ ಸಚಿವರನ್ನಾಗಿ ಮಾಡಿದ್ದಾರೆ. ಆ ಉಪಕಾರಕ್ಕೆ ಜೋಶಿ ಈ ಬಾರಿ ಕ್ಷೇತ್ರ ತ್ಯಾಗ ಮಾಡಲಿ. ಲಿಂಗಾಯತ ಕ್ಷೇತ್ರದಲ್ಲಿ ಬ್ರಾಹ್ಮಣರು ಅನಿವಾರ್ಯವೇ?. ಆದರೆ ಬ್ರಾಹ್ಮಣರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಲಿಂಗಾಯತರನ್ನು ಚುನಾವಣೆಯಲ್ಲಿ ನಿಲ್ಲಿಸಿ ಆರಿಸಿ ತರಲಿ ಎಂದು ಸವಾಲು ಹಾಕಿದರು.

ಮಾಜಿ ಮುಖ್ಯಮಂತ್ರಿಯೊಬ್ಬರು ಮರಳಿ ಪಕ್ಷಕ್ಕೆ ಹೋದಾಗ ಶುಭಾಶಯ ಹೇಳಲು ಮನಸ್ಸಿದ್ದರೂ ಹಿಂಬಾಲಕರು ಇವರ ಭಯಕ್ಕೆ ಯಾರೂ ಹೋಗುತ್ತಿಲ್ಲ. ಐಟಿ, ಇಡಿ ಸಂಸ್ಥೆಗಳ ಮೇಲೆ ಇನ್ನಿಲ್ಲದ ಪ್ರಭಾವ ಬೀರಿ ಎಲ್ಲೆಡೆ ಭಯ ಸೃಷ್ಟಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮೂಲಕ ಪಕ್ಷದ ಒಳಗೂ ಸಹ ನಾಯಕರಲ್ಲಿ ಅಷ್ಟೊಂದು ಭಯ ಸೃಷ್ಟಿಸಿದ್ದಾರೆ. ಇದು ಪಕ್ಷ ಸಂಘಟಿಸುವ ಮಾರ್ಗ ಅಲ್ಲ ಎಂದು ಪ್ರಹ್ಲಾದ್ ಜೋಶಿ ವಿರುದ್ಧ ಮಠಾಧೀಶರು ಕಿಡಿಕಾರಿದ್ದಾರೆ.

ಅಭಿನಂದನೆಯಲ್ಲೂ ತಾರತಮ್ಯ ಪ್ರದರ್ಶಿಸಿದ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ಟ್ವಿಟ್ ಗೆ ಖಂಡನೆ
ಕ್ರಿಕೆಟ್ ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಚಕ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ ತಂಡಕ್ಕೆ ಎಲ್ಲೆಡೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಅದರಲ್ಲಿ ವಿರಾಟ್ ಕೊಹ್ಲಿಯವರ ಅದ್ಭುತ ಆಟದಷ್ಟೇ ಮೊಹಮ್ಮದ್ ಶಮಿಯವರ ವಿಕೆಟ್ ಕಬಳಿಕೆ ಕೂಡಾ ಹೆಚ್ಚು ಮಹತ್ವ ಪಡೆದಿದೆ.

ಕೊನೆಯ ಹಂತದಲ್ಲಿ ಕಿವೀಸ್ ನ ಎರಡು ನಿರ್ಣಾಯಕ ವಿಕೆಟ್ ಗಳನ್ನು ಮೊಹಮ್ಮದ್ ಶಮಿ ಪಡೆಯದೇ ಇದ್ದರೆ ಭಾರತದ ಫೈನಲ್ ಕನಸು ಕನಸಾಗಿಯೇ ಉಳಿಯುತ್ತಿತ್ತು. ಇದೇ ಕಾರಣಕ್ಕಾಗಿ ಸೆಮಿಫೈನಲ್ ನಲ್ಲಿ ವಿರಾಟ್ ಕೊಹ್ಲಿಯವರ ಶತಕದ ಹೊರತಾಗಿಯೂ ಅದ್ಭುತ ಬೌಲಿಂಗ್ ಪ್ರದರ್ಶನಕ್ಕೆ ಮೊಹಮ್ಮದ್ ಶಮಿ ಮ್ಯಾನ್ ಆಫ್ ದಿ ಮ್ಯಾಚ್ ಗರಿಯನ್ನು ಮುಡಿಗೇರಿಸಿಕೊಂಡರು.

ಟೀಮ್ ಇಂಡಿಯಾದ ಇಂತಹ ಅದ್ಭುತ ಪ್ರದರ್ಶನಕ್ಕೆ ಭಾರತದ ಅನೇಕ ರಾಜಕಾರಣಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿಯವರು ತಮ್ಮ ‘X’ ಖಾತೆಯಲ್ಲಿ ಹಂಚಿಕೊಂಡ ಅಭಿನಂದನೆಯ ಟ್ವಿಟ್ ಒಂದು ಎಲ್ಲೆಡೆ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಭಾರತದ ಸಂಭ್ರಮಾಚರಣೆಯಲ್ಲೂ ಬಿಜೆಪಿ ಸಂಸದನ ಮುಸ್ಲಿಂ ದ್ವೇಷದ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ.

ಸಂಸದ ಪ್ರಹ್ಲಾದ್ ಜೋಷಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಂತೆ, ‘ಅಂದು ಇಂದು ಎಂದೆಂದೂ… ಟೀಂಭಾರತ ಜೈ ಹೋ.. ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಮಾಂಚನಕಾರಿ ಆಟದ ಮೂಲಕ ಗೆಲುವಿನ ಕಿರೀಟವನ್ನು ಮುಡಿಗೇರಿಸಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಹಾಗೂ ಶತಕದ ಗಡಿ ದಾಟಿ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರಿಗೆ ಅಭಿನಂದನೆಗಳು…’ ಎಂಬುದಾಗಿ ಹಂಚಿಕೊಂಡಿದ್ದಾರೆ.

ಅಂದು ಇಂದು ಎಂದೆಂದೂ… ಟೀಂಭಾರತ ಜೈ ಹೋ 🇮🇳

ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಮಾಂಚನಕಾರಿ ಆಟದ ಮೂಲಕ ಗೆಲುವಿನ ಕಿರೀಟವನ್ನು ಮುಡಿಗೇರಿಸಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಹಾಗೂ ಶತಕದ ಗಡಿ ದಾಟಿ ದಾಖಲೆ ನಿರ್ಮಿಸಿದ @imVkohli ಹಾಗೂ @ShreyasIyer15 ಅವರಿಗೆ ಅಭಿನಂದನೆಗಳು.

ಫೈನಲ್ ಪಂದ್ಯದಲ್ಲೂ…
— Pralhad Joshi (@JoshiPralhad) November 15, 2023

ಆದರೆ ಪ್ರಹ್ಲಾದ್ ಜೋಷಿ ನಿಜವಾದ ಮ್ಯಾನ್ ಆಫ್ ದಿ ಮ್ಯಾಚ್ ಮುಡಿಗೇರಿಸಿಕೊಂಡ ಮೊಹಮ್ಮದ್ ಶಮಿ ಅವರ ಆಟವನ್ನು ತಪ್ಪಿಯೂ ಕೂಡಾ ಎಲ್ಲಿಯೂ ಉಲ್ಲೇಖಿಸದ ಬಗ್ಗೆ ಅವರ ಖಾತೆಯಲ್ಲೇ ಟೀಕೆಗಳು ವ್ಯಕ್ತವಾಗಿದೆ.

ಮೊಹಮ್ಮದ್ ಶಮಿ ಕೂಡಾ ಟೀಂ ಇಂಡಿಯಾ ಆಟಗಾರ. ಅಷ್ಟೇ ಅಲ್ಲದೆ ಪ್ಲೇಯರ್ ಆಫ್ ದ ಮ್ಯಾಚ್ ಮುಡಿಗೇರಿಸಿಕೊಂಡಿದ್ದಾರೆ. ವಿಶೇಷವಾಗಿ ವರ್ಡ್ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಹೆಗ್ಗಳಿಕೆ ಶಮಿ ಅವರದ್ದಾಗಿದೆ. ಅಂದರೆ ಅದು ಭಾರತದ ಹೆಗ್ಗಳಿಕೆ ಕೂಡಾ. ಇಂತಹ ಸಂದರ್ಭದಲ್ಲಿ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ, ಶಮಿಯವರ ಈ ಸಾಧನೆ ಉಲ್ಲೇಖಿಸದೇ ಇರುವುದು ಜೋಷಿಯವರ ಧರ್ಮ ದ್ವೇಷವನ್ನು ಪರೋಕ್ಷವಾಗಿ ಎತ್ತಿ ಹಿಡಿದಿದೆ ಎಂಬ ರೀತಿಯಾಗಿ ಟೀಕೆಗಳು ವ್ಯಕ್ತವಾಗಿದೆ.

“ಸೆಮಿಫೈನಲ್ ನಲ್ಲಿ ಏಳು ವಿಕೆಟ್ ಪಡೆದ ಶಮಿಯವರು ಸಹಜವಾಗಿಯೇ ಮ್ಯಾನ್ ಆಫ್ ದಿ ಮ್ಯಾಚ್ ಆದರು.ಅದನ್ನು ನಮ್ಮ ಶತಕವೀರರಾದ ಕೊಹ್ಲಿ ಮತ್ತು ಅಯ್ಯರ್ ಸೇರಿದಂತೆ ಇಡೀ ಟೀಂ ಸಂಭ್ರಮಿಸಿತು ಕೂಡಾ. ಇದ್ಯಾವುದೂ ಶ್ರೀ ಪ್ರಹ್ಲಾದ ಜೋಷಿಯವರಿಗೆ ಅರ್ಥವಾಗಲೇ ಇಲ್ಲ. ಇಂಥವರೇ ನಮ್ಮ ನಾಡಿನ ಇತಿಹಾಸವನ್ನು ಹೀಗೆಯೇ ಬರೆದದ್ದು ಮತ್ತು ಬರೆಯ ಬಯಸುವುದು ಎಂಬುದನ್ನು ಮರೆಯದಿರೋಣ.” ಎಂದು ಚಿಂತಕರಾದ ಪುರುಷೋತ್ತಮ ಬಿಳಿಮಲೆಯವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ‌.

ಇನ್ನೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ಕೂಡಾ ತಮ್ಮ ಅಭಿನಂದನೆಯ ಟ್ವಿಟ್ ನಲ್ಲಿ ಮೊಹಮ್ಮದ್ ಶಮಿಯವರ ಸಾಧನೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಆದರೆ ಬಿಜೆಪಿ ಸಂಸದ ಉದ್ದೇಶಪೂರ್ವಕವಾಗಿಯೇ ಶಮಿ ಅವರ ಮುಸ್ಲಿಂ ಧರ್ಮದ ಕಾರಣಕ್ಕೆ ಅವರ ಹೆಸರನ್ನು ಮರೆಮಾಚಿದ್ದಾರೆ ಎಂದು ನೆಟ್ಟಿಗರು ದೂರಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರ ‘ಇಂಡಿಯಾ’ ಹೆಸರಿನ ಬದಲಾಗಿ ಬಹುತೇಕ ಕಡೆಗಳಲ್ಲಿ ‘ಭಾರತ’ ಎಂಬುದಾಗಿ ಬಳಸುತ್ತಿರುವುದು ಎಲ್ಲೆಡೆ ಸುದ್ದಿಯಾಗಿದೆ. ಪ್ರಹ್ಲಾದ್ ಜೋಷಿಯವರ ಟ್ವಿಟ್ ನ ಶುರುವಿನಲ್ಲೂ ‘ಟೀಂ ಭಾರತ..’ ಎಂದು ಉಲ್ಲೇಖಿಸಿದ್ದಾರೆ. ‘ಟೀಮ್ ಇಂಡಿಯಾ’ ಎಂಬ ಪದ ಎಲ್ಲೆಡೆ ಜನಜನಿತವಾಗಿದ್ದರೂ ಜೋಷಿಯವರು ‘ಭಾರತ’ ಪದವನ್ನು ಅಷ್ಟು ಸೂಕ್ಷ್ಮತೆಯಿಂದ ಬಳಸಿದ್ದಾರೆ. ಹೀಗಿರುವಾಗ ಶಮಿಯವರ ಆಟವನ್ನು ಉಲ್ಲೇಖಿಸದೇ ಇರುವುದು ಉದ್ದೇಶಪೂರ್ವಕವಾಗಿದೆ ಎಂದೇ ಹೇಳಲಾಗಿದೆ.

ಹಿಂದಿ ಇವರಪ್ಪನ ಭಾಷೆಯಲ್ಲ ಬಿಡಿ: ಪ್ರಹ್ಲಾದ್‌ ಜೋಶಿ ವಿರುದ್ದ ಮೋಹನ್‌ ದಾಸರಿ ವಾಗ್ದಾಳಿ
ಬೆಂಗಳೂರು: ರಾಜ್ಯದಲ್ಲಿ ಕನ್ನಡ ಭಾಷೆ ನಂತರದ ಸ್ಥಾನವನ್ನು ಇಂಗ್ಲೀಷ್‌ ಬದಲು ಹಿಂದಿಗೆ ನೀಡಿ ಎಂಬ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿಯವರ ಹೇಳಿಕೆ ಕುರಿತು ಆಮ್‌ ಆದ್ಮಿ ಪಾರ್ಟಿ ಬೆಂಗಳೂರು ಅಧ್ಯಕ್ಷ ಮೊಹನ್‌ ದಾಸರಿ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಮೊದಲ ಆದ್ಯತೆ ಕನ್ನಡಕ್ಕೆ ನೀಡಬೇಕು. ನಂತರದ ಸ್ಥಾನವನ್ನು ಇಂಗ್ಲೀಷ್‌ಗೆ ನೀಡುವ ಬದಲು ಹಿಂದಿಗೆ ನೀಡಬೇಕು. ಹಿಂದಿ ಫಲಕಗಳಿಗೆ ಮಸಿ ಬಳಿಯುತ್ತಾರೆ,ಆದರೆ ಇಂಗ್ಲೀಷ್‌ ಭಾಷೆಯನ್ನು ಮಾತ್ರ ಸರಳವಾಗಿ ಸ್ವೀಕರಿಸುತ್ತಾರೆ. ಇಂಗ್ಲೀಷ್‌ ನಮ್ಮ ಅಪ್ಪನ ಭಾಷೇನಾ? ಎಂದು ಜೋಶಿಯವರು ಪ್ರಶ್ನಿಸಿದ್ದರು.

ಇದಕ್ಕೆ ಹಲವರು ಟೀಕೆ ಮಾಡಿದ್ದು, ಜೋಶಿಯವರೆ, ನಿಮ್ಮ 3 ಜನ ಹೆಣ್ಣು ಮಕ್ಕಳಲ್ಲಿ ಒಬ್ಬರು ವಿದೇಶದಲ್ಲಿ ಪದವಿ, ಇನಿಬ್ಬರು ಪ್ರತಿಷ್ಠಿತ ಕ್ರಶ್ಚಿಯನ್‌ ವಿದ್ಯಾಕೇಂದ್ರದಲ್ಲಿ CBSE ಇಂಗ್ಲೀಷ್‌ ಮಾದ್ಯಮದಲ್ಲಿ ವಿದ್ಯಾಭ್ಯಾಸ ಪಡೆದವರು, ಇವರಲ್ಲಿ ಒಬ್ಬರು ಸಹ ಕನ್ನಡ ಮತ್ತು ನಿಮ್ಮ ಹಿಂದಿ ಭಾಷೆಯನ್ನು 2ನೇ ಭಾಷೆಯಾಗಿ ಕಲಿತಿಲ್ಲ. ಮೊದಲು ಕಂಡವರ ಮಕ್ಕಳನ್ನು ಹಿಂದಿ ಬಾವಿಗೆ ತಳ್ಳೋ ದುರ್ಬುದ್ದಿ ಬಿಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳನ್ನು ಪೋಸ್ಟ್‌ ಮಾಡುವ ಮೂಲಕ ಕಿಡಿಕಾರಿದ್ದರು.

ಈ ಕುರಿತು ಮೋಹನ್‌ ದಾಸರಿ ಟ್ವೀಟ್‌ ಮಾಡಿದ್ದು, ಹಿಂದಿಯಂತೂ ಇವರಪ್ಪರ ಭಾಷೆಯಲ್ಲ ಅಂತ ಗೊತ್ತಯಿತು ಬಿಡಿ. ತಮ್ಮ ತಮ್ಮ ಮಕ್ಕಳನ್ನು ಮಾತ್ರ ವಿದೇಶಗಳಲ್ಲಿ, CBSE ಮತ್ತಿತರ ಇಂಗ್ಲೀಷ್ ಪಠ್ಯದಲ್ಲಿ ಓದಿಸಿ ಬಡ ಮಕ್ಕಳು ಮಾತ್ರ ಹಿಂದಿ ಹಿಂದಿ ಅಂತ ನಿರುದ್ಯೊಗಿಗಳಾಗಿ ಬದುಕುತ್ತಿರ ಬೇಕಲ್ಲವೇ ಜೋಶಿಗಳೇ.? ಎಂದು ಪ್ರಶ್ನಿಸಿದ್ದಾರೆ.

ಹಿಂದಿಯಂತೂ ಇವರಪ್ಪರ ಭಾಷೆಯಲ್ಲ ಅಂತ ಗೊತ್ತಯಿತು ಬಿಡಿ. ತಮ್ಮ ತಮ್ಮ ಮಕ್ಕಳನ್ನು ಮಾತ್ರ ವಿದೇಶಗಳಲ್ಲಿ, CBSE ಮತ್ತಿತರ ಇಂಗ್ಲೀಷ್ ಪಠ್ಯದಲ್ಲಿ ಓದಿಸಿ ಬಡ ಮಕ್ಕಳು ಮಾತ್ರ ಹಿಂದಿ ಹಿಂದಿ ಅಂತ ನಿರುದ್ಯೊಗಿಗಳಾಗಿ ಬದುಕುತ್ತಿರ ಬೇಕಲ್ಲವೇ ಜೋಶಿಗಳೇ..??? pic.twitter.com/gHN9wvUbc8
— Mohan Dasari – ಮೋಹನ್ ದಾಸರಿ (@MohanDasari_) December 13, 2022