prakash raj – Peepal Media

ದೇವನಹಳ್ಳಿ ಭೂ ಸ್ವಾಧೀನ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟ ಆಹೋರಾತ್ರಿ ಧರಣಿ ಘೋಷಣೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ, ಹೋಬಳಿಯ ಹದಿಮೂರು ಹಳ್ಳಿಗಳ ರೈತರು ತಮ್ಮ ಭೂಮಿಗಾಗಿ ನಡೆಸುತ್ತಿರುವ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿದೆ.

ಈ ರೈತರ 1,777 ಎಕರೆ ಭೂಮಿಯನ್ನು ವಶಪಡಿಸಿಕೊಂಡು, ಕಾರ್ಪೊರೇಟ್ ಕಂಪನಿಗಳಿಗೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ, 2025 ಜೂನ್ 26ರಿಂದ ಫ್ರೀಡಂ ಪಾರ್ಕಿನಲ್ಲಿ ಅನಿರ್ಧಿಷ್ಟ ಆಹೋರಾತ್ರಿ ಧರಣಿಗೆ ಕರೆ ನೀಡಿದೆ.

ರೈತರು ಕಳೆದ 1,180 ದಿನಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ಜೂನ್ 25, ಬುಧವಾರ ‘ದೇವನಹಳ್ಳಿ ಚಲೋ’ ಹಮ್ಮಿಕೊಳ್ಳುವ ಮೂಲಕ ಹೋರಾಟವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದ ಹೋರಾಟಗಾರರನ್ನು ಬುಧವಾರ ಪೊಲೀಸರು ಬಂಧಿಸಿದರು.

ಗುರುವಾರ ನಟ ಪ್ರಕಾಶ್ ರಾಜ್, ಹಿರಿಯ ಪತ್ರಕರ್ತೆ ವಿಜಯಾ, ಕೆ. ಎಸ್. ವಿಮಲಾ, ಸಿರಿಮನೆ ನಾಗರಾಜ್, ತಾರಾ, ಸುಷ್ಮಾ ಮತ್ತಿತರರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ತೆರಳಿದ್ದರು, ಈ ವೇಳೆ ಮೊದಲು ಅವರನ್ನು ಪೊಲೀಸರು ತಡೆದಿದ್ದು, ಆನಂತರದಲ್ಲಿ ಮುಖ್ಯಮಂತ್ರಿಗಳ ಭೇಟಿಗೆೆ ಅವಕಾಶ ಮಾಡಿಕೊಟ್ಟಿದ್ದಾರೆ.

ಕಾವೇರಿ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ರೈತ ಮುಖಂಡರ ಜೊತೆ ಮಾತುಕತೆ ನಡೆಸಿದ ಮುಖ್ಯಮಂತ್ರಿಗಳು ಜುಲೈ 4ರ ಬೆಳಗ್ಗೆ 11 ಗಂಟೆಗೆ ರೈತರ ಬೇಡಿಕೆ ಮತ್ತು ಸಮಸ್ಯೆ ಕುರಿತಾಗಿ ಸಮಗ್ರ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.

ಈ ವೇಳೆ ಮುಖ್ಯಮಂತ್ರಿಗಳು ಸಭೆ ನಡೆಸಿ, ರೈತರ ಭೂಮಿಯನ್ನು ಸ್ವಾದೀನ ಪಡಿಸಿಕೊಳ್ಳುವುದಿಲ್ಲ ಎಂಬ ನಿರ್ಧಾರ ಕೈಗೊಳ್ಳುವವರೆಗೂ ನಾವು ಸುಮ್ಮನೆ ಕೂರುವುದಿಲ್ಲ, ಫ್ರೀಡಂ ಪಾರ್ಕಿನಲ್ಲಿ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

ಜೂನ್ 26 ಮಧ್ಯಾಹ್ನ 1:30ಕ್ಕೆ ಪತ್ರಿಕಾಗೋಷ್ಠಿ ನಡೆಸಿದ ಸಂಯುಕ್ತ ಹೋರಾಟ ಕರ್ನಾಟಕ ಅನಿರ್ದಿಷ್ಟ ಆಹೋರಾತ್ರಿ ಧರಣಿಗೆ ಕರೆ ನೀಡಿದೆ.

ನಾನು ದ್ವೇಷದ ವಿರುದ್ಧ ಮತ ನೀಡಿದ್ದೇನೆ, ನೀವು?: ಪ್ರಕಾಶ್‌ ರಾಜ್‌
ಬೆಂಗಳೂರು: ಸಾಮಾಜಿಕ ಚಿಂತಕ, ಚಿತ್ರನಟ ಪ್ರಕಾಶ್‌ ರಾಜ್‌ ಬೆಂಗಳೂರಿನ ಮತಗಟ್ಟೆಯೊಂದರಲ್ಲಿ ಇಂದು ತಮ್ಮ ಮತ ಚಲಾಯಿಸಿದ ನಂತರ ಎಕ್ಸ್‌  ಪೋಸ್ಟ್‌ ನಲ್ಲಿ  ಎಲ್ಲರೂ ಮತದಾನ ಮಾಡುವಂತೆ ವಿನಂತಿಸಿ ವೀಡಿಯೋ ಸಂದೇಶವೊಂದನ್ನು ಫೋಸ್ಟ್‌ ಮಾಡಿದ್ದಾರೆ.

“ನಾನು ಬದಲಾವಣೆಗೆ ಮತ್ತು ದ್ವೇಷದ ವಿರುದ್ಧ ಮತ ನೀಡಿದ್ದೇನೆ. ಸಂಸತ್ತಿನಲ್ಲಿ ನನ್ನ ದನಿಯಾಗಬಲ್ಲರೆಂದು ನಾನು ನಂಬುವ ಪ್ರತಿನಿಧಿಗೆ ನಾನು ಮತ ಹಾಕಿದ್ದೇನೆ. ದಯವಿಟ್ಟು ಹೋಗಿ ನೀವು ಮತದಾನದ ಹಕ್ಕನ್ನು ಚಲಾಯಿಸಿ. ಬದಲಾವಣೆಗೆ ನಿಮ್ಮಕೊಡುಗೆಯೂ ಇರಲಿ, ಪ್ರೀತಿಯಿಂದ ನನ್ನ ಮನವಿ,” ಎಂದು ಅವರು ತಮ್ಮ ವೀಡಿಯೋ ಸಂದೇಶದಲ್ಲಿ ವಿನಂತಿಸಿಕೊಂಡಿದ್ದೇನೆ.

ವೀಡಿಯೋಗೆ ನೀಡಿದ ಶೀರ್ಷಿಕೆಯಲ್ಲಿ ಅವರು “ನಾನು ಮತದಾನ ಮಾಡಿದ್ದೇನೆ. ದಯವಿಟ್ಟು ಹೋಗಿ ಮತದಾನ ಮಾಡಿ ಜಸ್ಟ್‌ಆಸ್ಕಿಂಗ್, ಸೇವ್‌ ಡೆಮಾಕ್ರೆಸಿ ಸೇವ್‌ ಇಂಡಿಯಾ” ಎಂದು ಅವರು ಹ್ಯಾಸ್‌ ಟ್ಯಾಗ್‌ ಹಾಕಿದ್ದಾರೆ.

ಮತ ಚಲಾಯಿಸಿದ ನಂತರ ಮಾಧ್ಯಮವೊಂದರ ಜೊತೆ ಮಾತನಾಡಿದ ಪ್ರಕಾಶ್‌ ರಾಜ್‌, ನನ್ನ ಮತ ನನ್ನ ಹಕ್ಕಿಗೆ ಸಂಬಂಧಿಸಿದೆ, ಯಾರು ನನ್ನನ್ನು ಪ್ರತಿನಿಧಿಸಬೇಕೆಂದು, ಯಾರು ಸಂಸತ್ತಿನಲ್ಲಿ ನನ್ನ ದನಿಯಾಗಬೇಕೆಂದು ಆರಿಸುವ  ಅಧಿಕಾರ ನನ್ನದು. ಕಳೆದೊಂದು ದಶಕದಲ್ಲಿ ನಾವು ನೋಡಿರುವ ದ್ವೇಷ ಮತ್ತು ದೇಶವನ್ನು ಇಬ್ಬಾಗ ಮಾಡಿ ನೋಡುವ ರಾಜಕಾರಣದಿಂದ ಬೇಸರ ಬಂದಿತ್ತು.  ನೀವು ನಂಬಿಕೆಯಿರಿಸಿರುವ ಅಭ್ಯರ್ಥಿಗೆ ಮತ ನೀಡಿ. ನಾನು ನಂಬಿಕೆ ಇರಿಸಿದ ಅಭ್ಯರ್ಥಿಗೆ ಹಾಗು ಅವರು ಬದಲಾವಣೆಗೆ ಮತ ನೀಡಿದ್ದೇನೆ ಎಂದು ಅವರು ತಿಳಿಸಿದರು.

ಅಪಾರ್ಥ ಪಡೆದ ಟ್ವಿಟ್ : ಪ್ರಕಾಶ್ ರೈ ವಿರುದ್ಧ ದೂರು ದಾಖಲು
ಕರ್ನಾಟಕ, ಅ.22: ಚಂದ್ರಯಾನ-3 ಮಿಷನ್ ಕುರಿತು ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಅವರ ವಿರುದ್ಧ ಹಿಂದೂ ಸಂಘಟನೆಗಳ ಮುಖಂಡರು ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪ್ರಕಾಶ್‌ ರಾಜ್‌ ಅಗಸ್ಟ್‌ 20ರಂದು ಟ್ವೀಟರ್‌ ನಲ್ಲಿ “ಬ್ರೇಕಿಂಗ್‌ ನ್ಯೂಸ್:- ಚಂದ್ರನಿಂದ ಬಂದ ಮೊದಲ ಚಿತ್ರ #VikramLander ವಾವ್ #justasking” ಎಂದು ಚಹಾ ಮಾಡುವ ವ್ಯಕ್ತಿಯೊಬ್ಬನ ಕಾರ್ಟೂನ್‌ ಚಿತ್ರ ಹಂಚಿಕೊಂಡಿದ್ದರು. ಇದು ಕೇರಳದ ಚಾಯ್‌ವಾಲನ ಚಿತ್ರ ಎಂದು ಬರೆದುಕೊಂಡಿದ್ದಾರೆ.

BREAKING NEWS:-
First picture coming from the Moon by #VikramLander Wowww #justasking pic.twitter.com/RNy7zmSp3G
— Prakash Raj (@prakashraaj) August 20, 2023

ಜಗತ್ತಿನ ಯಾವುದೇ ಮೂಲೆಗೆ ಹೋದರೂ ಮಲಯಾಳಿಯೊಬ್ಬ ಇರುತ್ತಾನೆ. ಚಂದ್ರನಲ್ಲಿ ಮೊದಲ ಬಾರಿಗೆ ನೀಲ್‌ ಆರ್ಮ್‌ ಸ್ಟ್ರಾಂಗ್‌ ಕಾಲಿಟ್ಟಾಗ ಅಲ್ಲೊಂದು ಮಲಯಾಳಿ ಚಹಾ ಅಂಗಡಿ ಇತ್ತು ಎಂಬ ಹಾಸ್ಯ ಚಟಾಕಿಯೊಂದು ಪ್ರಚಲಿತದಲ್ಲಿದೆ. ಇದು ಕೇರಳಿಗರು ಹರಡಿರುವ ವಿಸ್ತಾರವನ್ನು ತೋರಿಸುತ್ತದೆ ಎಂಬುದು ಟ್ವಿಟ್ ನ ಅರ್ಥವಾಗಿತ್ತು.

Hate sees only Hate.. i was referring to a joke of #Armstrong times .. celebrating our kerala Chaiwala .. which Chaiwala did the TROLLS  see ??  .. if you dont get a joke then the joke is on you  .. GROW UP  #justasking https://t.co/NFHkqJy532
— Prakash Raj (@prakashraaj) August 21, 2023

ಇದೇ ದನಿಯಲ್ಲಿ ನಟ ಪ್ರಕಾಶ್‌ ರಾಜ್‌ ಮಾಡಿರುವ ಟ್ವೀಟನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲದವರು ಟ್ರೋಲ್‌ ಮಾಡಲು ಆರಂಭ ಮಾಡಿದ್ದು ಪ್ರಕರಣ ಕೂಡ ದಾಖಲಿಸಿದ್ದಾರೆ.

ಬೆಂಗಳೂರಿನಲ್ಲಿ ನಾಳೆಯಿಂದ ಮೂರು ದಿನಗಳ ಚಿತ್ರೋತ್ಸವ: ಪ್ರವೇಶ ಉಚಿತ
ಬೆಂಗಳೂರು: ಬೆಂಗಳೂರು ಫಿಲ್ಮ್‌ ಸೊಸೈಟಿ ವತಿಯಿಂದ ಶಾಂತಿನಗರದ ಸೈಂಟ್‌ ಜೋಸೆಫ್‌ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಾಳೆ ಅಂದರೆ 19 ನೇ ತಾರೀಖಿನಿಂದ 21 ರವರೆಗೆ ಮೂರು ದಿನಗಳ ಕಾಲ ಚಲನ ಚಿತ್ರೋತ್ಸವವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಹದಿನಾಲ್ಕು ಚಲನಚಿತ್ರಗಳ ಪ್ರದರ್ಶನವಿದ್ದು, ಸಿನಿಮಾಸಕ್ತ ಸಾರ್ವಜನಿಕರಿಗೆ ಈ ಚಿತ್ರೋತ್ಸವಕ್ಕೆ ಉಚಿತ ಪ್ರವೇಶವಿದ್ದು ಆಸಕ್ತರು ಭಾಗವಹಿಸುವಂತೆ ಸೊಸೈಟಿ ಮನವಿ ಮಾಡಿದೆ.

ಸ್ಯಾಂಡಲ್‌ ವುಡ್‌ ನ ಖ್ಯಾತ ನಟ ಪ್ರಕಾಶ್‌ ರಾಜ್‌ ಹಾಗೂ ಹರೀಂದರ್‌ ಕೌರ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಈ ಚಿತ್ರೋತ್ಸವದ ಉದ್ಘಾಟನೆ ನೆರವೇರಿಸಲಿದ್ದಾರೆ.

ಆಸಕ್ತರು ಚಲನಚಿತ್ರ ಪ್ರೇಮಿಗಳು ಈ ಲಿಂಕ್‌ ಬಳಸಿ ನೋಂದಾಯಿಸಿಕೊಳ್ಳಬಹುದು