Prashant Kishor – Peepal Media

ಬಿಪಿಸಿಎಸ್ ಪ್ರತಿಭಟನೆ: ಐದನೇ ದಿನದ ಉಪವಾಸ ಹೋರಾಟದಂದು ಪ್ರಶಾಂತ್‌ ಕಿಶೋರ್‌ ಬಂಧನ
ಹೊಸದಿಲ್ಲಿ: ಬಿಹಾರದ ಲೋಕಸೇವಾ ಆಯೋಗದ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕಳೆದ ವಾರ ಪಾಟ್ನಾದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಪ್ರಶಾಂತ್ ಕಿಶೋರ್ ಅವರನ್ನು ಇಂದು ಮುಂಜಾನೆ ಬಂಧಿಸಲಾಗಿದೆ.

ಜನ್ ಸೂರಾಜ್ ಎಂಬ ಸಂಘಟನೆಯನ್ನು ಸ್ಥಾಪಿಸಿದ ಚುನಾವಣಾ ತಂತ್ರಗಾರ ಪ್ರಶಾಂತ್  ಕಿಶೋರ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ನಗರದ ಏಮ್ಸ್‌ಗೆ ಪೊಲೀಸರು ಕರೆದೊಯ್ದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಗಾಂಧಿ ಮೈದಾನದಲ್ಲಿ ಕಿಶೋರ್ ಅವರ ಧರಣಿ “ಕಾನೂನುಬಾಹಿರ” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಉಲ್ಲೇಖಿಸಿದೆ. ಮೈದಾನ ಪ್ರತಿಭಟನೆ ಮಾಡಲು ನಿರ್ಬಂಧಿತವಾಗಿದೆ ಎಂದು ಸಿಂಗ್ ಅವರು ಅನೇಕ ಸುದ್ದಿ ವರದಿಗಳಲ್ಲಿ ಉಲ್ಲೇಖಿಸಿದ್ದಾರೆ.

#WATCH | BPSC protest | Bihar: Patna Police detains Jan Suraaj chief Prashant Kishor who was sitting on an indefinite hunger strike at Gandhi Maidan pic.twitter.com/cOnoM7EGW1
— ANI (@ANI) January 5, 2025

ಪೊಲೀಸರು ಸ್ಥಳ ತೆರವು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮೈದಾನದಲ್ಲಿನ ಪೊಲೀಸ್ ಕ್ರಮದ ಕೆಲವು ವೀಡಿಯೊಗಳು ಪ್ರತಿಭಟನಾಕಾರರ ವಿರುದ್ಧ ಬಲ ಪ್ರಯೋಗ ಮಾಡಿರುವುದನ್ನು ತೋರಿಸುತ್ತವೆ. ಕಿಶೋರ್‌ಗೆ ಪೊಲೀಸರು ಕಪಾಳಕ್ಕೆ ಹೊಡೆದಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಪರೀಕ್ಷೆಯನ್ನು ರದ್ದುಗೊಳಿಸಲು “48 ಗಂಟೆಗಳ ಅಲ್ಟಿಮೇಟಮ್” ನೀಡಿದ ಮೂರು ದಿನಗಳ ನಂತರ ಕಿಶೋರ್ ಜನವರಿ 2 ರಂದು ತನ್ನ ಉಪವಾಸವನ್ನು ಪ್ರಾರಂಭಿಸಿದರು.

ಪೇಪರ್ ಸೋರಿಕೆಯ ಆರೋಪಗಳು ಕೇಳಿಬಂದ ನಂತರ BPSC ಯ 70 ನೇ ಸಂಯೋಜಿತ ಪ್ರಾಥಮಿಕ ಸ್ಪರ್ಧಾತ್ಮಕ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಬಿಹಾರದಾದ್ಯಂತ ಪ್ರತಿಭಟನೆ ನಡೆಯಿತು.

“ನನ್ನ ಪ್ರಾಥಮಿಕ ಬೇಡಿಕೆ, ಸಹಜವಾಗಿ, ಡಿಸೆಂಬರ್ 13 ರಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸುವುದು ಮತ್ತು ಹೊಸ ಪರೀಕ್ಷೆಯನ್ನು ನಡೆಸುವುದು. ಪರೀಕ್ಷೆಯ ಮೂಲಕ ಭರ್ತಿ ಮಾಡಬೇಕಾದ ಹುದ್ದೆಗಳನ್ನು ವಾಸ್ತವಿಕವಾಗಿ ಮಾರಾಟಕ್ಕೆ ಇಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಅಂತಹ ಭ್ರಷ್ಟ ಅಧಿಕಾರಿಗಳನ್ನು ಗುರುತಿಸಿ ನ್ಯಾಯಾಂಗದ ಮುಂದೆ ತರಬೇಕು,” ಎಂದು ಕಿಶೋರ್ ಅವರು ತಮ್ಮ ಉಪವಾಸವನ್ನು ಆರಂಭಿಸುವಾಗ ಹೇಳಿರುವುದನ್ನು ಪಿಟಿಐ ವರದಿ ಮಾಡಿದೆ.

ನಿತೀಶ್‌ ಕುಮಾರ್ ಒಬ್ಬ ಒಳ್ಳೆಯ ʼಪಲ್ಟುಕುಮಾರ್ʼ: ಪ್ರಶಾಂತ್‌ ಕಿಶೋರ್
ದೆಹಲಿ: ಬಿಹಾರದ ಹಿರಿಯ ರಾಜಕಾರಣಿ ನಿತೀಶ್ ಕುಮಾರ್ ಅವರು ಆಗಾಗ ನಿಷ್ಠೆ ಬದಲಿಸುವ ಒಬ್ಬ ಓಳ್ಳೆಯ ‘ಪಲ್ಟುಮಾರ್’ ಅಥಬಾ ʼಪಲ್ಟುಕುಮಾರ್ʼ ಎಂದು ಚುನಾವಣಾ ರಣ ತಂತ್ರಗಾರ ಪ್ರಶಾಂತ್‌ ಕಿಶೋರ್ ವ್ಯಂಗ್ಯವಾಡಿದ್ದಾರೆ.

ಹಿಂದಿಯಲ್ಲಿ ‘ಪಲ್ಟುಮಾರ್’ ಎಂದರೆ, ಯಾವುದಾದರೂ ವ್ಯಕ್ತಿ ತನ್ನ ನಿಷ್ಠೆಯನ್ನು ಬದಲಿಸುತ್ತಲೇ ಹೋಗುವುದಾಗಿದೆ. ಕಳೆದ ಒಂದು ದಶಕದ ಅವಧಿಯಲ್ಲಿ ನಿತೀಶ್ ಕುಮಾರ್ ಅವರು ಐದು ಬಾರಿ ತಮ್ಮ ರಾಜಕೀಯ ನಿಷ್ಠೆಯನ್ನು ಬದಲಿಸಿದ್ದಾರೆ. ಹೀಗಾಗಿ ಅವರೊಬ್ಬ ಅತ್ಯುತ್ತಮ ಪಲ್ಟುಮಾರ್’ ಅಥವಾ ‘ಪಲ್ಟುಕುಮಾರ್’ ಎಂದು ಜನರೇ ಆಡಿಕೊಳ್ಳುತ್ತಿದ್ದಾರೆ ಎಂದು ಕಿಶೋರ್ ಸುದ್ದಿಮಾಧ್ಯಮಗಳಿಗೆ ಪ್ರತಿಕ್ರಿಯಿಸುವ ವೇಳೆ ತಿಳಿಸಿದ್ದಾರೆ.

“ನಾನು ಮೊದಲಿನಿಂದಲೂ ನಿತೀಶ್ ಕುಮಾರ್ ಯಾರ ಪರ ಬೇಕಾದರೂ ವಾಲಬಹುದು ಎಂದು ಹೇಳುತ್ತಲೇ ಬರುತ್ತಿದ್ದೇನೆ. ಒಂದು ಕಡೆಯಿಂದ ಇನ್ನೊಂದು ಕಡೆ ಪಲ್ಟಿ ಹೊಡೆಯುವುದು ಅವರ ರಾಜಕೀಯ ಜೀವನದ ಒಂದು ಭಾಗವೇ ಆಗಿದೆ. ಆದರೆ, ಬಿಹಾರದಲ್ಲಿನ ಇಂದಿನ ಬೆಳವಣಿಗೆಗಳನ್ನು ನೋಡಿದರೆ ಬಿಜೆಪಿಯ ಮೋದಿ, ಅಮಿತ್ ಶಾ ಸೇರಿದಂತೆ ಎಲ್ಲ ಪಕ್ಷಗಳು ಮತ್ತು ಎಲ್ಲ ರಾಜಕಾರಣಿಗಳು ‘ಪಲ್ಟುಮಾರ್ ಗಳೆ ಆಗಿದ್ದಾರೆ ಎಂಬುದು ಸಾಬೀತಾಗುತ್ತದೆ ಎಂದು ಪ್ರಶಾಂತ್ ಕಿಶೋರ್ ಟೀಕಿಸಿದ್ದಾರೆ.

ಇದಕ್ಕೂ ಮೊದಲು 2018ರಲ್ಲಿ ಪ್ರಶಾಂತ್ ಕಿಶೋರ್ ಅವರು ನಿತೀಶ್‌ ಕುಮಾರ್ ಅವರ ಜೆಡಿಯು ಪಕ್ಷದ ಉಪಾಧ್ಯಕ್ಷ ಹುದ್ದೆಯವರೆಗೂ ಏರಿದ್ದರು. ಆದರೆ, ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ ಜೆಡಿಯು ನಿರ್ಧಾರವನ್ನು ಟೀಕಿಸಿದ್ದರಿಂದಾಗಿ ಅವರನ್ನು ಜೆಡಿಯು ಪಕ್ಷದಿಂದ ಹೊರಗೆ ಹಾಕಲಾಗಿತ್ತು.