praveen nettaru – Peepal Media

ಮತೀಯ ದುಷ್ಕರ್ಮಿಗಳಿಂದ ಕೊಲೆಯಾದ ಮಸೂದ್, ಫಾಸಿಲ್, ಜಲೀಲ್ ಮತ್ತು ದೀಪಕ್ ರಾವ್ ಕುಟುಂಬಕ್ಕೆ ಪರಿಹಾರ ಘೋಷಣೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕೋಮು ಗಲಭೆ ಮತ್ತು ಸಂಘಪರಿವಾರದ ಕಾರ್ಯಕರ್ತರಿಂದ ಕೊಲೆಗೀಡಾದ ಮಸೂದ್, ಫಾಜಿಲ್, ಜಲೀಲ್ ಹಾಗೂ ದೀಪಕ್ ರಾವ್ ಕುಟುಂಬಕ್ಕೆ ಸಿದ್ದರಾಮಯ್ಯ ಸರ್ಕಾರ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಕಳೆದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಕೋಮು ಗಲಭೆಯಲ್ಲಿ ಮೃತಪಟ್ಟ ಸಂಘ ಪರಿವಾರದ ಹಿನ್ನೆಲೆಯ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಮಾತ್ರ ಪರಿಹಾರ ನೀಡಿ, ಇದೇ ಮಾದರಿಯಲ್ಲಿ ಕೊಲೆಯಾದ ಮಸೂದ್, ಫಾಜಿಲ್ ‌ಹಾಗೂ ಜಲೀಲ್ ಕುಟುಂಬವನ್ನು ನಿರ್ಲಕ್ಷಿಸಿತ್ತು. ಆ ಸಂದರ್ಭದಲ್ಲಿ ಜನಪರ ಸಂಘಟನೆಗಳ ಕಡೆಯಿಂದ ಕನಿಷ್ಟ ಕೊಲೆಯಾದ ಮುಸ್ಲಿಂ ಯುವಕರ ಮನೆಗಳಿಗೆ ಭೇಟಿ ಆದರೂ ಮಾಡಬೇಕೆಂಬ ಒತ್ತಾಯವಿದ್ದರೂ ಬಸವರಾಜ ಬೊಮ್ಮಾಯಿ ಅದಕ್ಕೆ ಕುಂಟು ನೆಪ ಹೇಳಿ ತಪ್ಪಿಸಿಕೊಂಡಿದ್ದರು.

ಇನ್ನು ಪರಿಹಾರದ ವಿತರಣೆ ಸಂದರ್ಭದಲ್ಲಿ ಕೂಡಾ ಬಿಜೆಪಿ ಸರ್ಕಾರ ಸಂಪೂರ್ಣ ತಾರತಮ್ಯ ಮೆರೆದಿದ್ದು ಸ್ಪಷ್ಟವಾಗಿ ಗೋಚರವಾಗಿತ್ತು. ದಕ್ಷಿಣ ಕನ್ನಡ ಭಾಗದ ಪ್ರವೀಣ್ ನೆಟ್ಟಾರು, ಶಿವಮೊಗ್ಗದ ಹರ್ಷ ರಂತಹ ಹಿಂದೂ ಸಂಘಟನೆ ಹಿನ್ನೆಲೆಯ ಕುಟುಂಬಗಳಿಗೆ ಮಾತ್ರ ಲಕ್ಷಗಟ್ಟಲೆ ಪರಿಹಾರ ನೀಡಿತ್ತು.

ಆ ಸಂದರ್ಭದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ ಮಾಡಿದ ತಾರತಮ್ಯದ ವಿರುದ್ಧ ಗುಡುಗಿದ್ದ ಕಾಂಗ್ರೆಸ್ ಪಕ್ಷ ಅಂದೇ ನ್ಯಾಯ ಎಲ್ಲರಿಗೂ ಸರಿಸಮನಾಗಿ ಇರಬೇಕು.. ಪರಿಹಾರ ವಿತರಣೆಯಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಮಾಡಬಾರದು ಎಂದು ಎಚ್ಚರಿಸಿತ್ತು. ಹಾಗೆಯೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿರ್ಲಕ್ಷ್ಯಕ್ಕೆ ಒಳಗಾದ ಇತರೆ ಯುವಕರ ಕುಟುಂಬಕ್ಕೂ ಪರಿಹಾರ ನೀಡುತ್ತೇವೆ ಎಂಬ ಭರವಸೆ ನೀಡಿತ್ತು.

ಸಧ್ಯ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಿಂಗಳ ಆಸುಪಾಸಿನಲ್ಲೇ ಈಗ ಸಂಘಪರಿವಾರದ ಹೊರತಾಗಿ ಕೋಮು ಗಲಭೆಯಲ್ಲಿ ಮೃತಪಟ್ಟ ಯುವಕರ ಕುಟುಂಬಕ್ಕೆ ಪರಿಹಾರ ವಿತರಣೆಯ ಘೋಷಣೆ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳರವರು ಸರ್ಕಾರದ ನಿರ್ಧಾರಕ್ಕೆ ಧನ್ಯವಾದ ಸೂಚಿಸಿ, ಅದೇ ರೀತಿ ಇತ್ತೀಚೆಗೆ ಸಂಘ ಪರಿವಾರದ ಹಿನ್ನೆಲೆಯವರಿಂದ ಮೃತಪಟ್ಟ ನರಗುಂದದ ಸಮೀರ್ ಹಾಗೂ ಮಂಡ್ಯದ ಇದ್ರೀಷ್ ಪಾಷ ಕುಟುಂಬಕ್ಕೂ ಪರಿಹಾರ ಸಿಗುವ ಬಗ್ಗೆ ಭರವಸೆ ಮಾತನ್ನಾಡಿದ್ದಾರೆ.

ಪ್ರವೀಣ್ ನೆಟ್ಟಾರು ಕೊಲೆ – ಇನ್ನೂ ನಾಲ್ವರು ಆರೋಪಿಗಳ ಹುಡುಕಾಟದಲ್ಲಿ ಎನ್‌ಐಎ
ಪುತ್ತೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದು, ಅವರು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಿದೆ.

ಈ ಹಿನ್ನಲೆಯಲ್ಲಿ, ಬೆಳ್ಳಾರೆ ನಿವಾಸಿ ಮುಹಮ್ಮದ್ ಮುಸ್ತಫಾ ಮತ್ತು ಸಿದ್ದೀಕ್ ಅಲಿಯಾಸ್ ಚಿತ್ರಕಲಾವಿದ ಸಿದ್ದಿಕ್, ಸುಳ್ಯ ನಿವಾಸಿ ಉಮ್ಮರ್ ಫಾರೂಕ್ ಹಾಗೂ ಮಡಿಕೇರಿಯ ತುಫೈಲ್ ಎಂ.ಎಚ್ ಎಂಬ ನಾಲ್ವರು ತಲೆಮರೆಸಿಕೊಂಡಿದ್ದು, ಈ ಅಪರಾಧಿಗಳಿಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದೇಶಾದ್ಯಂತ ಹುಡುಕಾಟ ನಡೆಸುತ್ತಿದೆ ಎಂದು ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಎನ್‌ಐಎ, ತುಫೈಲ್ ವಿದೇಶಕ್ಕೆ ಪಲಾಯನ ಮಾಡಿರಬೇಕು ಎಂದು ಶಂಕಿಸಲಾಗಿದೆ. ಉಳಿದ ಮೂರರಲ್ಲಿ, ಪಾಸ್ಪೋರ್ಟ್ ಪಡೆಯಲು ಸಹಾಯ ಮಾಡುವ ಸೈಬರ್ ಕೇಂದ್ರಗಳಲ್ಲಿನ ತನಿಖೆಯ ಸಮಯದಲ್ಲಿ ಎನ್ಐಎಗೆ ಯಾವುದೇ ಸುಳಿವು ಸಿಕ್ಕಿಲ್ಲ. ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶರೀಖ್ ಗೆ ಪ್ರವೀಣ್ ಹಂತಕರೊಂದಿಗೆ ಈ ಹಿಂದೆ ನಂಟು ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಮಡಿಕೇರಿಯಿಂದ ಸುಳ್ಯ ಮತ್ತು ಪುತ್ತೂರಿಗೆ ಬಂದಿದ್ದ ಶಾರೀಕ್ ನಂತರ ಮಂಗಳೂರಿಗೆ ಹೋಗಿದ್ದರು.ಈ ಘಟನೆಯ ಮಾಸ್ಟರ್ ಮೈಂಡ್ ಮತೀನ್ ತಾಹಾ ವಿದೇಶದಲ್ಲಿದ್ದು, ಮುಸ್ಲಿಂ ಯುವಕರನ್ನು ಭಯೋತ್ಪಾದಕ ಕೃತ್ಯಗಳತ್ತ ಆಕರ್ಷಿಸುತ್ತಿದ್ದಾನೆ. ಹೀಗಾಗಿ ಪ್ರವೀಣ್ ನ ಹಂತಕರು ಆತನೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂಬ ಬಗ್ಗೆಯೂ ನಾವು ತಿನಿಖೆ ನಡೆಸುತ್ತಿದ್ದೇವೆ. ಸ್ಥಳೀಯರ ಸಹಾಯವಿಲ್ಲದೆ ಬಾಂಬ್ ಸ್ಫೋಟವನ್ನು ಯೋಜಿಸುವುದು ಮತ್ತು ಕಾರ್ಯಗತಗೊಳಿಸುವುದು ಶರೀಖ್ ಗೆ ಅಸಾಧ್ಯ ಎಂದು ಪೊಲೀಸರು ಹೇಳುತ್ತಾರೆ. ಪ್ರವೀಣ್‌ನ ಹಂತಕರು ತಲೆಮರೆಸಿಕೊಂಡಿದ್ದರು. ಅವರಿಗೆ ಆಶ್ರಯ ನೀಡುವಲ್ಲಿ ಶಾರೀಕ್ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎನ್‌ಐಎ ತಿಳಿಸಿದೆ.

ನಿಷೇಧಿತ ಪಿಎಫ್ಐ ಸದಸ್ಯರಾದ ಮೊಹಮ್ಮದ್ ಮುಸ್ತಫಾ.ಎಸ್ ಮತ್ತು ತುಫೈಲ್ ಎಂ.ಎಚ್ ಬಗ್ಗೆ ಸುಳಿವು ನೀಡುವವರಿಗೆ ಐದು ಲಕ್ಷ ರೂ.ಗಳ ಬಹುಮಾನ ಮತ್ತು ಪ್ರವೀಣ್ ಹಂತಕರಿಗೆ ಆಶ್ರಯ ಮತ್ತು ಆರ್ಥಿಕ ನೆರವು ನೀಡಿದ ಆರೋಪ ಹೊತ್ತಿರುವ ಉಮ್ಮರ್ ಫಾರೂಕ್ ಮತ್ತು ಅಬೂಬಕ್ಕರ್ ಸಿದ್ದೀಕ್ ಅವರ ಬಗ್ಗೆ ಮಾಹಿತಿ ನೀಡಿದವರಿಗೆ ಎರಡು ಲಕ್ಷ ರೂ.ಗಳ ಬಹುಮಾನವನ್ನು ಎನ್ಐಎ ಘೋಷಿಸಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ ಎನ್‌ಐಎ
ಪುತ್ತೂರು: ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ಮತ್ತೆ ಮೂವರು  ಆರೋಪಿಗಳ್ನನ್ನು ಬಂಧಿಸಿದೆ.

ಪ್ರವೀಣ್‌ ನೆಟ್ಟಾರು

ಎನ್‌ಐಎ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಬಂಧಿತರು ಎಸ್‌.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಬೆಳ್ಳಾರೆ ಗ್ರಾಮ ಪಂಚಾಯತ್‌ ಸದಸ್ಯ ಇಕ್ಬಾಲ್‌ ಬೆಳ್ಳಾರೆ, ಸುಳ್ಯಾದ ಇಬ್ರಾಹಿಂ ಶಾಫಿ ಎಂದು ತಿಳಿದುಬಂದಿದೆ.

ಮಾಹಿತಿ ಪ್ರಕಾರ, ಎನ್‌ಐಎ ಅಧಿಕಾರಿಗಳು ಇಂದು ಬೆಳಗ್ಗೆ ಉಪ್ಪಿನಂಗಡಿ ಮತ್ತು ಸುಳ್ಯಾದಲ್ಲಿ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರವೀಣ್‌ ನೆಟ್ಟರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಪೊಲೀಸರು ಆಗಷ್ಟ್‌ ತಿಂಗಳು ಒಟ್ಟು ಹತ್ತು ಮಂದಿಯನ್ನು ಬಂಧಿಸಿದ್ದರು. ಹೀಗೆ ತಿಂಗಳುಗಳು ಕಳೆಯುತ್ತಿದ್ದಂತೆ, ಪ್ರವೀಣ್‌ ಕೊಲೆ ಪ್ರಕರಣದಲ್ಲಿ ಆರೋಪಿಗಳ ಬಂಧನ ಹೆಚ್ಚಾಗುತ್ತಿದ್ದು, ಈ ಪ್ರಕರಣದಲ್ಲಿ ಇನ್ನು ಎಷ್ಟು ಮಂದಿ ಬಂಧನವಾಗುತ್ತಾರೆಂದು ಕಾದು ನೋಡಬೇಕಾಗಿದೆ.

ಚುರುಕುಗೊಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ಎನ್‌ಐಎ ತನಿಖೆ
ಮಂಗಳೂರು: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮತ್ತು ಸುಳ್ಯ ಪಟ್ಟಣಗಳ 35ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ದಾಳಿ ನಡೆಸುತ್ತಿದೆ.

ಪ್ರವೀಣ್‌ ನೆಟ್ಟಾರು ಬಿಜೆಪಿ ಯುವಮೋರ್ಚಾ ಕಾರ್ಯಕರ್ತನಾಗಿದ್ದು, ಜುಲೈ 27 ರಂದು ಹತ್ಯೆ ಮಾಡಲಾಗಿತ್ತು. ಹತ್ಯೆಯ ತನಿಖೆಯನ್ನು ಎನ್‌ಐಎ ಅಧಿಕಾರಿಗಳು ನಡೆಸುತ್ತಿದ್ದಾರೆ.

ಪ್ರವೀಣ್‌ ನೆಟ್ಟಾರು ಹತ್ಯೆಯಲ್ಲಿ ಕೆಲವು ಸಂಘಟನೆಗಳ ಕೈವಾಡವಿರುವ ಮಾಹಿತಿ ತಿಳಿದು ಬಂದಿದೆ ಎಂದು ಅಧಿಕಾರಿಗಳು ಹೇಳಿದರು.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ಬಂಧಿತ ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ನಡೆಸಿದ ಪೊಲೀಸರು
ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿಯ ಯುವಮೋರ್ಚಾದ ಅಧ್ಯಕ್ಷ  ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಮೂವರು ಆರೋಪಿಗಳನ್ನು  ಬಂಧಿಸುವಲ್ಲಿ ಇಂದು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸುಳ್ಯ ನಿವಾಸಿ  ಶಿಯಾಬುದ್ದಿನ್‌ ಆಲಿ(33) ರಿಯಾಜ್ ಅಂಕತಡ್ಕ(27) ಮತ್ತು  ಎಲಿಮಲೆಯ ಬಶೀರ್‌ (29)ಎಂಬುದಾಗಿ ಎಡಿಜಿಪಿ ಅಲೋಕ್‌ ಕುಮಾರ್‌ ಮಧ್ಯಾಹ್ನ ಪತ್ರಿಕಾಗೋಷ್ಟಿಯಲ್ಲಿ ಖಚಿತಪಡಿಸಿದ್ದಾರೆ. ಆರೋಪಿಗಳನ್ನು ಮಂಗಳೂರು ಸಮೀಪದ ತಲಪಾಡಿಯಲ್ಲಿ ಬಂಧಿಸಲಾಗಿತ್ತು. ಇದರೊಂದಿಗೆ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಹತ್ಯೆ ಮಾಡಿದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು ಆಗಾಗ ತಮ್ಮ ನೆಲೆಯನ್ನು ಬದಲಾಯಿಸುತ್ತಿದ್ದರು. ಅವರ ಶೋಧ ಕಾರ್ಯಕ್ಕೆ ವಿಶೇಷ ತಂಡವನ್ನು ರಚಿಸಲಾಗಿತ್ತು.  ಖಚಿತ ಮಾಹಿತಿಯ ಮೇರೆಗೆ ಇಂದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದರು.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್‌ ವಶಕ್ಕೆ ಪಡೆದು ಮಹಜರು, ಕೊಲೆಗೆ ಬಳಸಿದ ಆಯುಧಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಎನ್‌ಐಎಗೆ ಹಸ್ತಾಂತರ ಮಾಡಲಾಗುವುದು ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಮಾಹಿತಿ ನೀಡಿದ್ದರು.

ಅದರಂತೆ ಇದೀಗ ಆರೋಪಿಗಳನ್ನು ಬೆಳ್ಳಾರೆಗೆ ಕರೆತಂದು ಮಹಜರು ನಡೆಸಲಾಗಿದೆ. ಬೆಳ್ಳಾರೆಯಲ್ಲಿ ಹತ್ಯೆ ನಡೆದ ಸ್ಥಳ, ಮತ್ತಿತರ ಕಡೆಗಳಿಗೆ ಆರೋಪಿಗಳನ್ನು ಕರೆತಂದು ತನಿಖೆ ನಡೆಸಲಾಗಿದೆ. ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಕರೆತರುತ್ತಿರುವ ಹಿನ್ನೆಲೆಯಲ್ಲಿ ಬಿಗು ಪೊಲೀಸ್‌ ಭದ್ರತೆ ಏರ್ಪಡಿಸಲಾಗಿತ್ತು.

ಜುಲೈ 26 ರಂದು ರಾತ್ರಿ 8.30ಕ್ಕೆ ಬೈಕ್‌ನಲ್ಲಿ ಬಂದ ಅಪರಿಚಿತರು ಬೆಳ್ಳಾರೆಯ ಮಾಸ್ತಿಕಟ್ಟೆ ಎಂಬಲ್ಲಿ ದಾಳಿ ನಡೆಸಿ ತಲವಾರಿನಿಂದ ಪ್ರವೀಣ್‌ ಅವರನ್ನು ಹತ್ಯೆಗೈದು ಪರಾರಿಯಾಗಿದ್ದರು.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಮತ್ತೊಬ್ಬ ಆರೋಪಿ ಬಂಧನ
ಪುತ್ತೂರು: ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಇಂದು (ಮಂಗಳವಾರ) ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರವೀಣ್‌ ಕೊಲೆಗೆ ಸಂಬಂಧಿಸಿದಂತೆ ಒಟ್ಟು 7 ಮಂದಿಯನ್ನು ಬಂಧಿಸಿದ್ದು, ಇಂದು ಬಂಧನವಾದ ವ್ಯಕ್ತಿಯು ಸುಳ್ಯದ ಜಟ್ಟಿಪಳ್ಳ ನಿವಾಸಿ, 33 ವರ್ಷದ ಅಬ್ದುಲ್‌ ಕಬೀರ್‌ ಎಂದು ತಿಳಿದು ಬಂದಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ತನ್ನ ರಾಜಕೀಯಕ್ಕೆ ಬಳಸಿಕೊಂಡಿತೇ ಬಿಜೆಪಿ?
ಪ್ರತೀ ಬಾರಿಯೂ ದೇಶ ಅಥವಾ ರಾಜ್ಯದಲ್ಲಿ ಕೊಲೆ, ಸುಲಿಗೆ, ಬಾಂಬ್ ಸ್ಫೋಟ, ಕೋಮು ಗಲಭೆಯಂತಹ ಅಹಿತಕರ ಘಟನೆ ನಡೆದಾಗ ಒಂದೋ ಪಾಕಿಸ್ತಾನ ಇಲ್ಲವಾದರೆ ಕೇರಳ ಸುದ್ದಿಯಲ್ಲಿ ಮುಂಚೂಣಿಗೆ ಬರುತ್ತವೆ. ಇದೊಂದು ರಾಜಕೀಯದ ಭಾಗವೇ ಎಂಬ ಅನುಮಾನ ಸೃಷ್ಟಿಯಾಗಿದ್ದು ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯ ದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಕೊಟ್ಟ ಮಾಹಿತಿಯ ಬಗ್ಗೆ.

ಅಷ್ಟಕ್ಕೂ ನಿನ್ನೆ(ಆಗಸ್ಟ್ 5) ಗೃಹ ಸಚಿವರು ಕೊಟ್ಟ ಮಾಹಿತಿ ಏನು?
ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಕೊಲೆಯಾದ ಪ್ರವೀಣ್‌ ನೆಟ್ಟಾರು ಕೊಲೆಯನ್ನು  ಕೇರಳದವರು ಮಾಡಿದ್ದಾರೆ ಎನ್ನಲಾಗಿತ್ತು. ಆದರೆ, ಹಂತಕರು ಸ್ಥಳೀಯರೇ ಹೊರತು ಕೇರಳದವರು ಅಲ್ಲ ಎಂಬುದಾಗಿ ಗೃಹ ಸಚಿವರು ನಿನ್ನೆ ನಡೆದ ಸಂದರ್ಶನದಲ್ಲಿ ಹೇಳಿದ್ದಾರೆ.

ಹಾಗಾದರೆ ಕೊಲೆ ನಡೆದ ದಿನದ ಆಸುಪಾಸಿನಲ್ಲಿ “ಕೇರಳ Registration ಹೊಂದಿರುವ ಗಾಡಿಯಲ್ಲಿ ಬಂದು ಕೊಲೆ ಮಾಡಿದ್ದಾರೆ.., ಕೇರಳ ಮೂಲದವರೇ ನಡೆಸಿದ ಕೃತ್ಯ ಇದು..” ಎಂಬಂತೆ ಸುದ್ದಿ ಹಬ್ಬಿಸಿದ್ದು, ಕರ್ನಾಟಕ, ಕೇರಳದ ಗಡಿ ಭಾಗಗಳಲ್ಲಿ ವಾಹನಗಳ ಗಂಭೀರ ತಪಾಸಣೆ ನಡೆದದ್ದು ಕೇವಲ ಕಣ್ಣೊರೆಸುವ ತಂತ್ರವೇ? ಹೀಗೊಂದು ಅನುಮಾನ ಮತ್ತು ಇಂತಹ ಸುದ್ದಿ ಹಬ್ಬಿಸಲು ಇರುವ ಮೂಲ ಕಾರಣವನ್ನು ಗಂಭೀರವಾಗಿ ತಗೆದುಕೊಳ್ಳಬೇಕಿದೆ.

ಇದರ ಜೊತೆಗೆ ನಿರ್ದಿಷ್ಟವಾಗಿ ಒಂದು ಸಮುದಾಯವನ್ನೇ ಗುರಿ ಮಾಡಿ ‘ಇವರೇ ನಿಜವಾದ ಅಪರಾಧಿಗಳು’ ಎಂಬಂತೆ ಬಿಂಬಿಸುವುದು ಸಹ ಬಿಜೆಪಿ ಪಕ್ಷ ಹಿಂದಿನಿಂದಲೂ ರೂಢಿಸಿಕೊಂಡು ಬಂದ ರಾಜಕೀಯ ತಂತ್ರಗಾರಿಕೆ ಎಂಬುದು ಸಾಮಾಜಿಕ ಜಾಲತಾಣಗಳ ಮೂಲಕ ಕೇಳಿ ಬರುತ್ತಿರುವ ಮಾತು. ಇದಕ್ಕೆ ಪೂರಕ ಎಂಬಂತಹ ಘಟನೆ ಸುರತ್ಕಲ್ ನಲ್ಲಿ ಫಾಸಿಲ್ ಎಂಬ ಯುವಕನ ಹತ್ಯೆ. ಹತ್ಯೆ ನಡೆದ ಬೆನ್ನಲ್ಲೇ ಆರೋಪಿಗಳು “ಪ್ರೇಮ ಪ್ರಕರಣ, ಮುಸ್ಲಿಂ ಒಳಪಂಗಡದ ಜಗಳ” ಎಂಬಂತೆ ವೈರಲ್ ಮಾಡಿದ್ದನ್ನು ಗಮನಿಸಬೇಕು. ಇಂತಹ ಹಲವಷ್ಟು ಕೃತ್ಯಗಳನ್ನು ಬಿಜೆಪಿ ಹಿನ್ನೆಲೆಯ ವ್ಯಕ್ತಿಗಳು ಮಾಡಿದಾಗ ಅವರನ್ನು ಮಾನಸಿಕ ಅಸ್ವಸ್ಥರು ಎಂಬಂತೆ Certificate ನೀಡಿ ತಿಪ್ಪೆ ಸಾರಿಸಿದ ಹೆಚ್ಚು ಪ್ರಕರಣಗಳು ಇನ್ನೂ ಕಣ್ಣ ಮುಂದಿವೆ.

ಹೀಗೆ ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ “ಕಮ್ಯುನಿಸ್ಟರ ಕೈವಾಡ ಅಥವಾ ಮುಸ್ಲಿಂ ಮೂಲಭೂತವಾದಿಗಳ ಕೈವಾಡ”ದ ಬಗ್ಗೆ ಬಿಂಬಿಸಲು ಹೊರಟ ಬಗ್ಗೆ ಅನುಮಾನಗಳು ದಟ್ಟವಾಗಿದೆ. ಎಷ್ಟೋ ಸಂದರ್ಭದಲ್ಲಿ ಆಡಳಿತದಲ್ಲಿ ಇರುವ ಬಿಜೆಪಿ ಪಕ್ಷವೇ ತನಿಖೆಗೂ ಮೊದಲೇ ಪ್ರತಿಭಟನೆ, ಪ್ರತೀಕಾರದ ಮಾತನ್ನಾಡುವುದು ಇಂತಹ ಪ್ರಕರಣಗಳು ಹಳ್ಳ ಹಿಡಿಸುವ ಉದ್ದೇಶ ಇರಬಹುದು ಎಂಬುದು ಸಧ್ಯಕ್ಕೆ ಎದ್ದಿರುವ ಅನುಮಾನ.

ನಿನ್ನೆಯ ದಿನ ಗೃಹ ಮಂತ್ರಿಗಳು ಆರೋಪಿಗಳು ಕರ್ನಾಟಕದವರೇ ಎಂದಿದ್ದಾರೆ. ಹಾಗಾದರೆ ಸಾವಿನ ಸಂದರ್ಭವನ್ನೂ ಬಿಜೆಪಿ ತನ್ನ ಅನುಕೂಲಕ್ಕೆ ಬಳಸಿಕೊಂಡಿತೇ ಎಂಬುದು ಈಗ ಎದ್ದಿರುವ ಪ್ರಶ್ನೆ. ಇದರ ಜೊತೆಗೆ ಶುರುವಿನಲ್ಲಿ ತನಿಖೆ ದಾರಿ ತಪ್ಪಿಸಿದವರ ವಿರುದ್ಧ ಏನು ಕ್ರಮ ಕೈಗೊಳ್ಳುವರು ಎಂಬುದನ್ನೂ ಗೃಹ ಮಂತ್ರಿಗಳು ಸ್ಪಷ್ಟಪಡಿಸುತ್ತಾರೆಯೇ?

ಇದು ಯಾವ ರೀತಿಯ ಪ್ರಜಾಪ್ರಭುತ್ವ ಸರ್ಕಾರ ? : ಯು.ಟಿ. ಖಾದರ್‌
ಮಂಗಳೂರು : ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸರ್ಕಾರ ಹತ್ಯೆಯಾದ ಪ್ರವೀಣ್‌ ಕುಟುಂಬಕ್ಕೆ ಪರಿಹಾರ ನೀಡಿದ್ದು, ಇದೇ ವೇಳೆ ಹತ್ಯೆಯಾಗಿರುವ ಮಸೂಧ್‌ ಮತ್ತು ಫಾಝಿಲ್‌ ಕುಟುಂಬಕ್ಕೆ ಪರಿಹಾರ ನೀಡದಿರುವುದನ್ನ ಖಂಡಿಸಿ ವಿಧಾನಸಭೆಯ ಕಾಂಗ್ರೆಸ್ ಉಪನಾಯಕ ಯು.ಟಿ. ಖಾದರ್,  ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರವೀಣ್‌ ಹತ್ಯೆಯಾದ ಬಳಿಕ ಬಸವರಾಜ್‌ ಬೊಮ್ಮಾಯಿ ಮನೆಗೆ ತೆರಳಿದ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಕುಟುಂಬಕ್ಕೆ  25 ಲಕ್ಷ ಹಣ ಪರಿಹಾರ ನೀಡಿದ್ದಾರೆ. ಈ ವಿಚಾರವಾಗಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ʼಖಾದರ್‌ʼ ಒಬ್ಬ ರಾಜ್ಯದ ಮುಖ್ಯಮಂತ್ರಿ,  ಈ ರೀತಿಯ ಘಟನೆಗಳಾದಾಗ ಒಂದು ಕುಟುಂಬಕ್ಕೆ ಮಾತ್ರ ಸಮಾಧಾನ ಹೇಳುವುದು ಪರಿಹಾರ ಘೋಷಿಸುವುದು, ಇನ್ನೊಬ್ಬರಿಗೆ ಪರಿಹಾರ ಘೋಷಿಸದೆ ಇರುವಂತದ್ದು ಎಷ್ಟರಮಟ್ಟಿಗೆ ಸರಿ, ಇದು ಯಾವ ರೀತಿಯ ಪ್ರಜಾಪ್ರಭುತ್ವ ಸರ್ಕಾರ ಎಂದು  ಕಿಡಿಕಾರಿದ್ದಾರೆ. ಪ್ರತಿಯೊಬ್ಬ ತಾಯಿಗೂ ತನ್ನ ಮಕ್ಕಳನ್ನ ಕಳೆದುಕೊಂಡಾಗ ನೋವಾಗುತ್ತದೆ. ಅದರ ಬದಲು ಪ್ರವೀಣ್‌ ತಾಯಿಗೆ ಬೇರೆ ಮಸೂಧ್‌ ಮತ್ತು ಫಾಝಿಲ್‌ ತಾಯಂದಿರಿಗೆ ಬೇರೆ ನೋವು ಇರುವುದಿಲ್ಲ. ಎಲ್ಲಾ ತಾಯಂದಿರಿಗೂ ಸಮಾನ ನೋವಿರುತ್ತದೆ, ಆದರೆ ಬೊಮ್ಮಾಯಿ ಅವರು ಒಂದು ಕುಟುಂಬಕ್ಕೆ ಮಾತ್ರ ಸಮಾಧಾನ ಹಾಗೂ ಪರಿಹಾರ ನೀಡಿ ಉಳಿದ ಕುಟುಂಬಗಳಿಗೆ ಏನೂ ಹೇಳದೆ ಹೋಗಿರುವುದು ಸಮಂಜಸವಲ್ಲ. ಹಾಗಾಗಿ ಉಳಿದ ಕುಟುಂಬಗಳಿಗೂ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಪ್ರವೀಣ್‌ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ಮಂಗಳವಾರ ರಾತ್ರಿ ಬಿಜೆಪಿಯ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಪಿ ಋಷಿಕೇಶ ಸೋನಾವಾಣೆ ಹೇಳಿಕೆ ನೀಡಿದ್ದಾರೆ.

ಸವಣೂರು ಮೂಲದ ಝಾಕೀರ್ (29) ಮತ್ತು ಶಫೀಕ್ ಬೆಳ್ಳಾರೆ (27) ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾಗಿದ್ದು, ವಿಚಾರಣೆ ವೇಳೆ ಆರೋಪಿಗಳು ಹಲವು ಮಾಹಿತಿಗಳನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಈ ವಿಚಾರವಾಗಿ ಪೊಲೀಸರು  5 ತಂಡಗಳನ್ನು ರಚಿಸಿದ್ದು ಆರೋಪಿಗಳನ್ನು ಬಂಧಿಸಲು ತಂಡಗಳನ್ನು ಕೇರಳಕ್ಕೆ ಕಳುಹಿಸಲಾಗಿದೆ.

ಮಸೂದ್ ಮನೆಗೂ ಭೇಟಿ ನೀಡಿ: ಡಿವೈಎಫ್ಐ ಆಗ್ರಹ
ಮಂಗಳೂರು:  ಬೊಮ್ಮಾಯಿಯವರು ಕರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿ. ಆರು ಕೋಟಿ ಕನ್ನಡಿಗರಿಗೂ ಅವರೇ ಮುಖ್ಯಮಂತ್ರಿ. ಬಿಜೆಪಿ ಪಕ್ಷದವರಿಗೆ, ಒಂದು ಮತ ಧರ್ಮಕ್ಕೆ ಮಾತ್ರ ಮುಖ್ಯಮಂತ್ರಿ ಅಲ್ಲ. ಪ್ರವೀಣ್‌ ನೆಟ್ಟಾರು ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಕೊಲೆಗೀಡಾದ ಮಸೂದ್‌ ಮನೆಗೂ ಭೇಟಿ ನೀಡಿ ಎಂದು ಡಿವೈಎಫ್ಐ ಕರ್ನಾಟಕ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಈ ಕುರಿತು ಫೇಸ್‌ಬುಕ್ ನಲ್ಲಿ ಈ ಕುರಿತು ಪೋಸ್ಟ್‌ ಬರೆದಿರುವ ಮುನೀರ್‌ ಕಾಟಿಪಳ್ಳ, ಬೆಳ್ಳಾರೆಯಲ್ಲಿ ಕೊಲೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಇಂದು ನೀವು ಭೇಟಿ ನೀಡುವಾಗ, ಅದೇ ಗ್ರಾಮದಲ್ಲಿ ವಾರದ ಹಿಂದೆ ಮತೀಯ ದ್ವೇಷಕ್ಕೆ ಬಲಿಯಾದ ಅಮಾಯಕ ಹುಡುಗ ಮಹಮ್ಮದ್ ಮಸೂದ್ ಮನೆಗೂ ಭೇಟಿ ನೀಡಬೇಕು. ಪ್ರವೀಣ್ ನ ವಿಧವೆ ಹೆಂಡತಿ, ಅನಾಥ ತಂದೆ ತಾಯಿಯರಿಗೆ ಸಾಂತ್ವನ ಹೇಳುವಾಗ, ಮಸೂದ್ ನ ವಿಧವೆ ತಾಯಿಗೂ ಸಾಂತ್ವನ ಹೇಳಬೇಕು. ಯಾವುದೇ ಕಾರಣಕ್ಕೂ ತಾರತಮ್ಯ ಎಸಗಬಾರದು ಎಂದು ಆಗ್ರಹಿಸಿದ್ದಾರೆ.

ಕೊಲೆಗೀಡಾದ ಎರಡೂ ಕುಟುಂಬದ ಹೆಣ್ಣು ಜೀವಗಳು ಸಮಾನವಾಗಿ ನೊಂದಿವೆ. ಮುಖ್ಯಮಂತ್ರಿಗಳೇ ರಾಜಧರ್ಮ ಪಾಲಿಸಿ.‌ ಇಲ್ಲದಿದ್ದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ನೀವು ಅಯೋಗ್ಯರಾಗಿ ಬಿಡುತ್ತೀರಿ. ಕನ್ನಡ ನಾಡಿನ ಮಹಾನ್ ಪರಂಪರೆಗೆ, ಮುಖ್ಯಮಂತ್ರಿ ಸ್ಥಾನದ ಘನತೆಗೆ ಅಪಚಾರ ಎಸಗಬೇಡಿ‌ ಎಂದು  ಅವರು ಮನವಿ ಮಾಡಿದ್ದಾರೆ.