Pravesh shukla – Peepal Media

ಆದಿವಾಸಿ ಮೇಲೆ ಮೂತ್ರ ವಿಸರ್ಜನೆ ಪ್ರಕರಣ : ವಿಡಿಯೋ ನಕಲಿ ಎಂಬಂತೆ ತಿರುಚಲು ಪ್ರಯತ್ನ
ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದಡಿ ಬಿಜೆಪಿ ಮುಖಂಡ ಪ್ರವೇಶ್​ ಶುಕ್ಲಾ ಎಂಬವರನ್ನು ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಪ್ರಕರಣವನ್ನು ಬೇರೆ ರೀತಿಯಲ್ಲಿ ತಿರುಚಲು ಪ್ರವೇಶ್ ಶುಕ್ಲ ಪ್ರಯತ್ನಿಸಿದ ಬಗೆಗಿನ ಮಾಹಿತಿ ತಡವಾಗಿ ಹೊರಬಿದ್ದಿದೆ.

ಮಂಗಳವಾರ ಸಂಜೆಯ ವೇಳೆಗೆ ಎಲ್ಲೆಡೆ ವೈರಲ್ ಆದ ಮೂತ್ರ ವಿಸರ್ಜನೆ ಮಾಡಿರುವ ಈ ವಿಡಿಯೋ ತನ್ನದಲ್ಲ ಎಂದು ಹೇಳುವಂತೆ ಪ್ರವೇಶ್ ಶುಕ್ಲ ಬಲವಂತವಾಗಿ ಸಂತ್ರಸ್ತನ ಮೇಲೆ ಒತ್ತಡ ಹೇರಿರುವ ಮಾಹಿತಿ ಹೊರಬಿದ್ದಿದೆ. ಈ ವಿಡಿಯೋ ನಕಲಿ, ವಿಡಿಯೋದಲ್ಲಿ ಇರುವುದು ತನ್ನ ಮಗನಲ್ಲ ಎಂದು ಹೇಳಿದ ಪತ್ರಕ್ಕೆ ಪ್ರವೇಶ್ ಶುಕ್ಲ ಬಲವಂತವಾಗಿ ಯುವಕನ ತಂದೆಯಿಂದ ಸಹಿ ಮಾಡಿಸಿಕೊಂಡಿದ್ದಾನೆ.

ಸಧ್ಯ ಸಹಿ ಮಾಡಿಸಿಕೊಂಡ ಪತ್ರದ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಸಹಿ ಮಾಡಿಸಿಕೊಂಡ ಪತ್ರದ ಬಗ್ಗೆ ತನಿಖೆಗೂ ಸಹ ಒತ್ತಡ ಹೆಚ್ಚಿದೆ. ಈ ನಡುವೆ ‘ತಮ್ಮ ಮಗ ಬಿಜೆಪಿ ಪ್ರತಿನಿಧಿ ಎಂಬ ಕಾರಣಕ್ಕೆ ರಾಜಕೀಯ ಪಿತೂರಿಯಿಂದ ವಿಡಿಯೋ ಎಡಿಟ್​ ಮಾಡಿ ವೈರಲ್ ಮಾಡಲಾಗಿದೆ’ ಎಂದು ಪ್ರವೇಶ್​ ಶುಕ್ಲಾ ತಂದೆ ಮತ್ತು ಕುಟುಂಬಸ್ಥರು ದೂರಿದ್ದಾರೆ. ಸಧ್ಯಕ್ಕೆ ವಶಕ್ಕೆ ಪಡೆದಿರುವ ಶುಕ್ಲಾನನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ.

ಆದರೆ ‘ಈ ವಿಡಿಯೋ ನಕಲಿ ಅಲ್ಲ, ಇದು ನಕಲಿ ಎಂದು ಹೇಳಲು ಆತನ ಮೇಲೆ ಪ್ರಭಾವ ಬಳಸಿ ಒತ್ತಡ ತಂದು ಆತನ ತಂದೆಯಿಂದ ಸಹಿ ಹಾಕಿಸಿಕೊಳ್ಳಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಮೂರು ಮಂದಿ ಇದ್ದ ಬಗ್ಗೆಯೂ ಮಾಹಿತಿ ತಿಳಿದಿದೆ. ಆ ಮೂವರನ್ನು ನಾವು ವಿಚಾರಣೆ ಮಾಡಲಿದ್ದೇವೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಇಂತಹ ಅಮಾನವೀಯ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಮಧ್ಯಪ್ರದೇಶ ದೇಶದಲ್ಲೇ ಅತಿ ಹೆಚ್ಚು ದಲಿತ ದೌರ್ಜನ್ಯ ನಡೆಯುತ್ತಿರುವ ರಾಜ್ಯವಾಗಿದೆ. ಇಂತಹ ಅಪರಾಧ ಪ್ರಕರಣ ಮಾನವೀಯತೆ ತಲೆ ತಗ್ಗಿಸುವಂತೆ ಮಾಡಿದೆ. ಎಂದು ರಾಹುಲ್ ಗಾಂಧಿ ಈ ಪ್ರಕರಣದ ಬಗ್ಗೆ ಟ್ವಿಟ್ ಮಾಡಿದ್ದಾರೆ.

https://twitter.com/RahulGandhi/status/1676485839985991680?s=19

ಇನ್ನೊಂದು ಕಡೆ ‘ಪರ್ವೇಶ್ ಶುಕ್ಲಾ ಮನೆಯ ಕೆಲವು ಭಾಗ ಅತಿಕ್ರಮಣವಾಗಿ ನಿರ್ಮಾಣವಾಗಿದ್ದು ಅದರ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಸಿಹಾಬಲ್ ಎಸ್‌ಡಿಎಂ ಅಧಿಕಾರಿ ಆರ್‌ಪಿ ತ್ರಿಪಾಠಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಆರೋಪಿ ಪರ್ವೇಶ್ ಶುಕ್ಲಾ ಅವರ ಮನೆ ಮೂರು ಜನರ ಭಾಗವಾಗಿದೆ. ಇದರಲ್ಲಿ ಕೆಲವು ಭಾಗವನ್ನು ಅತಿಕ್ರಮಣ ಮಾಡಿ ನಿರ್ಮಿಸಿದ್ದರು. ಇದನ್ನು ಕೆಡವಲಾಗಿದೆ. ಮೂತ್ರ ವಿಸರ್ಜನೆ ಅಪರಾಧದ ಹೊರತಾಗಿ, ಪರ್ವೇಶ್ ಶುಕ್ಲಾ ವಿರುದ್ಧ ಕ್ರಿಮಿನಲ್ ಪ್ರಕರಣ ಸಹ ದಾಖಲಾಗಿವೆ. ಸರ್ಕಾರದ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್‌ಡಿಎಂ ತಿಳಿಸಿದ್ದಾರೆ.

ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ; ಆರೋಪಿಗೆ ಬಿಜೆಪಿ ಜೊತೆಗೆ ನಂಟು!
ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಬುಡಕಟ್ಟು ಕಾರ್ಮಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೋ ಆರು ದಿನಗಳ ಹಳೆಯದಾಗಿದ್ದು, ಮಂಗಳವಾರ ಸಂಜೆಯ ವೇಳೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಆರೋಪಿಯನ್ನು ಪ್ರವೇಶ್ ಶುಕ್ಲಾ ಎಂದು ಗುರುತಿಸಲಾಗಿದೆ. ಪೊಲೀಸರು ಅವರ ವಿರುದ್ಧ ಐಪಿಸಿಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಿದ್ದಾರೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ವೀಡಿಯೋವನ್ನು ಗಮನದಲ್ಲಿಟ್ಟುಕೊಂಡು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಲು ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಯನ್ನು ಜಾರಿಗೊಳಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.

https://twitter.com/ChouhanShivraj/status/1676216922243997697?t=AXfV3nT2xe_nXUFCtBZCsg&s=19

ಆರೋಪಿಗೆ ಬಿಜೆಪಿ ಜತೆ ನಂಟು ಇದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಪ್ರವೇಶ್ ಶುಕ್ಲ ಮಧ್ಯಪ್ರದೇಶದ ಬಿಜೆಪಿ ನಾಯಕರ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದದ್ದು ಆತನ ಸಾಮಾಜಿಕ ಜಾಲತಾಣಗಳ ಚಿತ್ರಗಳಲ್ಲಿ ಕಾಣಬಹುದು. ‘ಸುಸಂಸ್ಕೃತ ಸಮಾಜದಲ್ಲಿ ಬುಡಕಟ್ಟು ಸಮುದಾಯದ ಯುವಕರೊಂದಿಗೆ ಇಂತಹ ಹೇಯ ಕೃತ್ಯಕ್ಕೆ ಅವಕಾಶವಿಲ್ಲ. ಆರೋಪಿ ಬಿಜೆಪಿ ಪಕ್ಷದವನೇ ಆಗಿದ್ದು ಬಿಜೆಪಿ ಪಕ್ಷ ಇದರ ಹೊಣೆ ಹೊರಬೇಕು” ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಘಟನೆಯು ಇಡೀ ಮಧ್ಯಪ್ರದೇಶವನ್ನು ನಾಚಿಕೆಗೇಡು ಮಾಡಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಮತ್ತು ಮಧ್ಯಪ್ರದೇಶದಲ್ಲಿ ಆದಿವಾಸಿಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸಬೇಕು. ಈಗಾಗಲೇ ಮಧ್ಯಪ್ರದೇಶ ರಾಜ್ಯ ಆದಿವಾಸಿಗಳ ಮೇಲಿನ ದೌರ್ಜನ್ಯದ ವಿಷಯದಲ್ಲಿ ಮೊದಲ ಸಾಲಿನಲ್ಲಿದೆ. ಇದನ್ನು ನಿಯಂತ್ರಣಕ್ಕೆ ತರಬೇಕು ಎಂದು ಆಗ್ರಹಿಸಿದ್ದಾರೆ.

ಆದರೆ ಘಟನೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಮಾಧ್ಯಮ ಉಸ್ತುವಾರಿ ಆಶಿಶ್ ಅಗರ್ವಾಲ್, ಆರೋಪಿಯು ಪಕ್ಷದೊಂದಿಗಿನ ಸಂಬಂಧ ಹೊಂದಿರುವುದನ್ನು ನಿರಾಕರಿಸಿದ್ದಾರೆ. “ಬುಡಕಟ್ಟು ಸಮುದಾಯದ ವಿರುದ್ಧ ನಡೆಯುವ ಪ್ರತಿಯೊಂದು ಹೇಯ ಕೃತ್ಯವನ್ನು ಬಿಜೆಪಿ ಸದಾ ವಿರೋಧಿಸುತ್ತದೆ. ಈ ವ್ಯಕ್ತಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಬಿಜೆಪಿ ಕೂಡಾ ಆಗ್ರಹಿಸುತ್ತದೆ” ಎಂದು ಹೇಳಿದ್ದಾರೆ.

ಆದರೆ ಹಲವಷ್ಟು ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳಲ್ಲಿ ಆರೋಪಿ ಪ್ರವೇಶ್ ಶುಕ್ಲ ಬಿಜೆಪಿ ಪಕ್ಷದ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದು ಬಹಿರಂಗಪಡಿಸುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳು ಹಲವಷ್ಟು ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಆರೋಪಿ ಬಿಜೆಪಿ ಪಕ್ಷದ ಸಂಪರ್ಕದಲ್ಲಿ ಇರುವವನು ಎಂದು ಸಾಕ್ಷೀಕರಿಸುತ್ತಿವೆ.