press meet – Peepal Media

ಮೋದಿ ಪತ್ರಿಕಾಗೋಷ್ಠಿ; ಕರಾರಿನ ಮೇಲೆ ಪತ್ರಕರ್ತರ ಪ್ರಶ್ನೆ ಎದುರಿಸಲಿರುವ ಭಾರತದ ಪ್ರಧಾನಿ
2014 ರಲ್ಲಿ ಪ್ರಧಾನಿಯಾದ ಬಳಿಕ ಭಾರತದಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡದವರು ಈಗ ಅಮೇರಿಕಾದಲ್ಲಿ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವ ಅಪರೂಪದ ಪ್ರಸಂಗ ನರೇಂದ್ರ ಮೋದಿಗೆ ಎದುರಾಗಿದೆ. ಮೂರು ದಿನಗಳ ಅಮೇರಿಕಾ ಭೇಟಿಯ ಕೊನೆಯ ದಿನ ಜೋ ಬಿಡೆನ್ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರ ಮೋದಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂತರರಾಷ್ಟ್ರೀಯ ಮಾಧ್ಯಮ CNN ಮಾಡಿರುವ ವರದಿಯಲ್ಲಿ ನರೇಂದ್ರ ಮೋದಿಯವರ ಪತ್ರಿಕಾಗೋಷ್ಠಿ ಕುರಿತು ಪ್ರಸ್ತಾಪವಾಗಿದೆ. ಮೋದಿ ಮತ್ತು ಜೋ ಬಿಡೆನ್ ಜಂಟಿ ಪತ್ರಿಕಾಗೋಷ್ಠಿ ನಡೆಸುವ ಶ್ವೇತಭವನದ ಪ್ರಸ್ತಾಪಕ್ಕೆ ಭಾರತೀಯ ಅಧಿಕಾರಿಗಳು ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಅಪರಿಚಿತ ಯುಎಸ್ ಅಧಿಕಾರಿಗಳು ಸಿಎನ್‌ಎನ್‌ಗೆ ತಿಳಿಸಿದ್ದಾರೆ. ಆದರೆ “ಸುದೀರ್ಘ ಮತ್ತು ಸೂಕ್ಷ್ಮ” ವಿಚಾರಗಳ ಹೊರತಾಗಿ ಕೇಳುವ ಪ್ರಶ್ನೆಗಳಿಗಷ್ಟೆ ಅವಕಾಶ ಎಂಬ ಭಾರತೀಯ ಅಧಿಕಾರಿಗಳ ಕರಾರಿಗೆ ಪತ್ರಿಕಾ ಕಾರ್ಯಕ್ರಮಕ್ಕೆ ಒಪ್ಪಿಕೊಂಡರು ಎಂದು CNN ವರದಿ ಮಾಡಿದೆ.

ಇಂದಿನ ಪತ್ರಿಕಾಗೋಷ್ಠಿಯ ಸ್ವರೂಪವು ಯುಎಸ್ ಪ್ರೆಸ್‌ನಿಂದ ಒಂದು ಮತ್ತು ಭಾರತೀಯ ಪತ್ರಕರ್ತರಿಂದ ಒಂದು ಪ್ರಶ್ನೆಗೆ ಮಾತ್ರ ಅವಕಾಶ ನೀಡುತ್ತದೆ. ಸಮಾವೇಶದ ಮೂಲಕ, ನಾಯಕರು ಪ್ರತಿ ಬದಿಯಲ್ಲಿ ಇಬ್ಬರು ವರದಿಗಾರರಿಂದ ಪ್ರಶ್ನೆಗಳನ್ನು ತೆಗೆದುಕೊಳ್ಳುತ್ತಾರೆ. ಆ ನಂತರ ಮೋದಿಯವರು ಪ್ರಶ್ನೆಗೆ ಉತ್ತರಿಸಲಾಗುತ್ತದೆ.

ಈ ಬೆಳವಣಿಗೆಯ ಬಗ್ಗೆ ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಪ್ರಧಾನಿ ಮೋದಿ ಅವರು ಭೇಟಿಯ ಕೊನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಒಪ್ಪಿದ್ದಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಡುವುದು ಅತ್ಯವಶ್ಯಕ ಎಂದು ನಾವು ಭಾವಿಸುತ್ತೇವೆ ಮತ್ತು ಅದು ಮುಖ್ಯವೆಂದು ಅವರು ಭಾವಿಸಿದರೆ ನಮಗೆ ಸಂತೋಷವಾಗುತ್ತದೆ.” ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿಯಾದ ನಂತರ ನರೇಂದ್ರ ಮೋದಿ ಐದು ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದರೂ, ಆ ಭೇಟಿಯ ಸಂಪೂರ್ಣ ರಾಜತಾಂತ್ರಿಕ ಸ್ಥಾನಮಾನದೊಂದಿಗೆ ನಡೆದದ್ದು ಇದೇ ಮೊದಲನೆಯದು. ಹಾಗಾಗಿ ಈ ಭೇಟಿಯಲ್ಲಿ 75 ಸೆನೆಟರ್ ಗಳು ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯರು ಮೋದಿ ಅವರೊಂದಿಗೆ ಮಾನವ ಹಕ್ಕುಗಳ ಸಮಸ್ಯೆಗಳನ್ನು ಎತ್ತುವಂತೆ ಒತ್ತಾಯಿಸಿದ್ದರಿಂದ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಒತ್ತಡಕ್ಕೆ ಒಳಗಾಗಿದ್ದಾರೆ.

“ಸ್ವತಂತ್ರ, ವಿಶ್ವಾಸಾರ್ಹ ವರದಿಗಳ ಸರಣಿಯು ಭಾರತದಲ್ಲಿ ರಾಜಕೀಯ ಅವಕಾಶಗಳ ಕುಗ್ಗುವಿಕೆ, ಧಾರ್ಮಿಕ ಅಸಹಿಷ್ಣುತೆಯ ಏರಿಕೆ, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಪತ್ರಕರ್ತರನ್ನು ಗುರಿಯಾಗಿಸುವುದು ಮತ್ತು ಪತ್ರಿಕಾ ಸ್ವಾತಂತ್ರ್ಯ ಮತ್ತು ಇಂಟರ್ನೆಟ್ ಪ್ರವೇಶದ ಮೇಲೆ ಹೆಚ್ಚುತ್ತಿರುವ ನಿರ್ಬಂಧಗಳ ಕಡೆಗೆ ಹೆಚ್ಚಿನ ಪರಿಣಾಮಗಳನ್ನು ಪ್ರತಿಬಿಂಬಿಸುತ್ತದೆ” ಎಂದು ಶ್ವೇತಭವನಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದರು. ಇದರ ನಡುವೆ ಭಾರತ ಮತ್ತು ಅಮೇರಿಕಾ ಹಲವಷ್ಟು ವರ್ಷಗಳಿಂದ ಉತ್ತಮ ಬಾಂಧವ್ಯ ಹೊಂದಿದ್ದು, ಮುಜುಗರಕ್ಕೆ ಸಿಕ್ಕುವ ಪ್ರಶ್ನೆಗಳಿಂದ ಬಾಂಧವ್ಯದಲ್ಲಿ ಒಡಕು ಉಂಟಾಗಬಾರದು ಎಂಬ ಉದ್ದೇಶದಿಂದ ಕರಾರಿನ ಪತ್ರಿಕಾಗೋಷ್ಠಿಗೆ ಉತ್ತರಿಸಲಾಗುವುದು ಎಂದು ಶ್ವೇತ ಭವನದ ಮೂಲಗಳಿಂದ ತಿಳಿದು ಬಂದಿದೆ.

ಬುಧವಾರದ ದಿನ ಆರು ಜಾಗತಿಕ ಪತ್ರಕರ್ತ ಸಂಸ್ಥೆಗಳ ಗುಂಪು ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ ನಡೆಯುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್‌ನಲ್ಲಿನ ವರದಿ ಹೇಳಿತ್ತು. ಪತ್ರಿಕಾ ಸಂಸ್ಥೆಗಳು ಭಾರತದಲ್ಲಿ ಪತ್ರಕರ್ತರು ದೈಹಿಕ ಹಿಂಸೆ, ಕಿರುಕುಳ, ನಕಲಿ ಮೊಕದ್ದಮೆಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ದ್ವೇಷದ ಪ್ರಚಾರಗಳನ್ನು ಎದುರಿಸುತ್ತಿದ್ದಾರೆ ಎಂಬ ಕಾರಣಕ್ಕೆ ಪ್ರತ್ಯೇಕ ಸಂವಾದ ಸಭೆಗಳನ್ನು ಆಯೋಜಿಸಿದ್ದೂ ಸಹ ಅಮೇರಿಕಾದಲ್ಲಿ ಈ ಭಾರಿಯ ಮೋದಿ ಭೇಟಿ ಸಂದರ್ಭದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಪ್ರಾಥಮಿಕ ಶಾಲೆಗಳನ್ನು ಸರಸ್ವತಿ ಶಿಶು ಮಂದಿರಗಳನ್ನಾಗಿಸುವ ಹುನ್ನಾರ: ತಜ್ಞರ ವಿರೋಧ
ಬೆಂಗಳೂರು: ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹೊರಡಿಸಿದ ಹೊಸದೊಂದು ಸುತ್ತೋಲೆ ಈಗ ವಿವಾದಕ್ಕೆ ಸಿಲುಕಿದ್ದು, ಹಲವು ನಾಗರಿಕರು ಮತ್ತು ಪ್ರಜ್ಞಾವಂತರು ಸುತ್ತೋಲೆಯನ್ನು ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಚಿವರು ತಮ್ಮ ಸುತ್ತೋಲೆಯಲ್ಲಿ ʼಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ದೃಡತೆ, ಏಕಾಗ್ರತೆ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನವನ್ನು ಮಾಡಿಸುವುದು ಅಗತ್ಯವಾಗಿದೆʼ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಸುತ್ತೋಲೆಗೆ ಪ್ರತಿಕ್ರಿಯಿಸಿ ನಾಡಿನ ಹಿರಿಯ ಶಿಕ್ಷಣ ತಜ್ಞರು ಮತ್ತು ಸಾಹಿತಿಗಳು ಜಂಟಿ ಪತ್ರಿಕಾ ಹೇಳಿಕೆಯನ್ನು ಹೊರಡಿಸಿದ್ದು ಸಚಿವರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ರಯತ್ನವು ಸರಕಾರಿ ಶಾಲೆಗಳನ್ನು ಸರಸ್ವತಿ ಶಿಶು ಮಂದಿರಗಳನ್ನಾಗಿ ಪರಿವರ್ತಿಸುವ ಸಂಚಾಗಿದ್ದು, ತಾವು ಇದನ್ನು ಖಂಡಿಸುವುದಾಗಿ ಹೇಳಿಕೆ ನೀಡಿದ್ದಾರೆ.

ʼಅಲ್ಲದೆ ಪ್ರಸ್ತುತ ಸುತ್ತೋಲೆಯಲ್ಲಿ ಇಲಾಖೆಯ ನೀತಿಗಳನ್ನು ಗಾಳಿಗೆ ತೂರಿ ಆದೇಶ ಹೊರಡಿಸಲಾಗಿದೆ ಎಂದಿರುವ ಅವರು, ಅಲ್ಲದೆ ಕೊರೋನ ಕಾಲದ ಶಾಲೆ ಮುಚ್ಚುವಿಕೆಯಿಂದ ಮಕ್ಕಳ ಮೇಲೆ ಆದ ಮಾನಸಿಕ ಸಮಸ್ಯೆಗಳ ಪರಿಣಾಮಗಳನ್ನು ಹೋಗಲಾಡಿಸಲು ಯುನಿಸೆಫ್‌ ಹೊರಡಿಸಿದ ನೀತಿಯಲ್ಲಿ ಎಲ್ಲಿಯೂ ಧ್ಯಾನದ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಆದರೂ ಇಲಾಖೆಯು ಇಂತಹ ಸುತ್ತೋಲೆಯನ್ನು ಹೊರಡಿಸಿರುವುದು ಶಿಕ್ಷಣದ ಹಕ್ಕಿನ ಉಲ್ಲಂಘನೆಯಾಗಿದೆʼ ಎಂದು ಹೇಳಿದ್ದಾರೆ.

ಜಂಟಿ ಪತ್ರಿಕೆ ಹೇಳಿಕೆಯ ಪೂರ್ಣ ಪಾಠ ಈ ಕೆಳಗಿನಂತಿದೆ:

ದಿನಾಂಕ: 03/11/2022

ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ರಾಜ್ಯದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ದೃಡತೆ, ಏಕಾಗ್ರತೆ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನವನ್ನು ಮಾಡಿಸುವುದು ಅಗತ್ಯವಾಗಿದೆ ಎಂಬ ಸುತ್ತೋಲೆಯನ್ನು ಕಳುಹಿಸಿದ್ದಾರೆ.

ರಾಜ್ಯದಲ್ಲಿ ಸಾಂವಿಧಾನಿಕವಾಗಿ ಮತ್ತು ಶಿಕ್ಷಣ ಹಕ್ಕು ಕಾಯಿದೆಯ ಅನ್ವಯ ಸಮಾನತೆಯ ನೆಲೆಯಲ್ಲಿ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವುದನ್ನು ಬಿಟ್ಟು ಈ ಸಚಿವರು ತಮ್ಮ ಏಕಪಕ್ಷೀಯ ತೀರ್ಮಾನಗಳಿಂದ ದಿನಕ್ಕೊಂದು ಹೊಸ ಬಗೆಯ ವಿವಾದಗಳನ್ನು ಹುಟ್ಟು ಹಾಕುತ್ತಿದ್ದು, ಜಾತ್ಯತೀತ, ವೈಜ್ಞಾನಿಕ ನೆಲೆಯಲ್ಲಿ ಆಧುನಿಕ ಶಿಕ್ಷಣವನ್ನು ಕೊಡಮಾಡುವ ಬದಲು ಶಾಲಾ ಶಿಕ್ಷಣವನ್ನು ಅಸ್ತವ್ಯಸ್ತಗೊಳಿಸಲು ಪಣ ತೊಟ್ಟಂತೆ ವರ್ತಿಸುತ್ತಿದ್ದಾರೆ.

ಕೊರೋನ ಕಾಲದಲ್ಲಿ ಶಾಲೆಗಳನ್ನು ಮುಚ್ಚಿದ ಪರಿಣಾಮವಾಗಿ ಸಮಸ್ಯೆಗಳಾಗಿದ್ದು, ಅದನ್ನು ಸರಿಪಡಿಸಲು ಮಕ್ಕಳಿಗೆ ಪ್ರತಿನಿತ್ಯ ಧ್ಯಾನ ಮಾಡಿಸಬೇಕೆಂದೂ, ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಕೆಲವು ಶಾಲೆಗಳಲ್ಲಿ ಈಗಾಗಲೇ ಇದನ್ನು ಮಾಡಲಾಗಿದೆಯೆಂದೂ, ಆ ಸಂಘವು ಇದನ್ನು ಎಲ್ಲಾ ಶಾಲೆಗಳಿಗೆ ವಿಸ್ತರಿಸುವಂತೆ ಕೇಳಿರುವುದನ್ನು ಮನ್ನಿಸಿ ಇಂಥ ಸುತ್ತೋಲೆಯನ್ನು ಹೊರಡಿಸಲಾಗಿದೆಯೆಂದೂ ಸಚಿವರು ಹೇಳಿದ್ದಾರೆ.

ಈ ಸರಕಾರವು ಸಂವೇದನಾರಹಿತವೂ, ಅವೈಜ್ಞಾನಿಕವೂ ಆಗಿದೆ ಎನ್ನುವುದಕ್ಕೆ ಇದುವೇ  ಸ್ಪಷ್ಟ ಪುರಾವೆಯಾಗಿದೆ.

ಕೊರೋನ ಕಾಲದಲ್ಲಿ ರಾಜ್ಯದ ಅನೇಕ ವೈದ್ಯಕೀಯ ತಜ್ಞರು, ಮನೋರೋಗ ತಜ್ಞರು, ಶಿಕ್ಷಣ ತಜ್ಞರು, ಶಾಲಾಭಿವೃದ್ಧಿ ಸಮಿತಿಗಳು, ವಿದ್ಯಾರ್ಥಿಗಳು ಮತ್ತು ಹೆತ್ತವರು ಶಾಲೆಗಳನ್ನು ಮುಚ್ಚ್ದಂತೆ, ಮುಚ್ಚಿದ ಶಾಲೆಗಳನ್ನು ಕೂಡಲೇ ತೆರೆಯುವಂತೆ, ವಿದ್ಯಾಗಮವನ್ನು ನಿಲ್ಲಿಸದಂತೆ ಹಲವು ಬಾರಿ ಬೇಡಿಕೊಂಡರೂ, ಪ್ರತಿಭಟನೆಗಳನ್ನೂ ನಡೆಸಿದ್ದರು. ಇವನ್ನು ಲೆಕ್ಕಿಸದೆ ಸುಮಾರು ಎರಡು ವರ್ಷ ಶಾಲೆಗಳನ್ನು ಮುಚ್ಚಿ ಮಕ್ಕಳನ್ನು ಕಲಿಕೆಯಿಂದ ವಂಚಿತರಾಗಿಸಿ, ಆನ್ ಲೈನ್ ಶಿಕ್ಷಣದ ನೆಪದಲ್ಲಿ ಮೊಬೈಲ್ ಸಾಧನಗಳ ದಾಸ್ಯಕ್ಕೆ ತಳ್ಳಿದ ಸರಕಾರವು ಈಗ ಅದಕ್ಕೆ ಪರಿಹಾರವಾಗಿ ಧ್ಯಾನ ಮಾಡಬೇಕೆಂದು ಸುತ್ತೋಲೆ ಹೊರಡಿಸುತ್ತಿರುವುದು ಇನ್ನೂ ದೊಡ್ಡ ಅಪಚಾರವಾಗುತ್ತದೆ.

ಮಕ್ಕಳ ದೈಹಿಕ, ಮಾನಸಿಕ ಆರೋಗ್ಯಕ್ಕೆ, ಏಕಾಗ್ರತೆಗೆ, ಮೊಬೈಲ್ ಸಾಧನಗಳ ಚಟದಿಂದ ಮುಕ್ತಿಗೆ ಧ್ಯಾನ ಮಾಡುವುದರಿಂದ ಪ್ರಯೋಜನವಿದೆಯೆನ್ನಲು ಯಾವುದೇ ಆಧಾರಗಳಿಲ್ಲ, ದೇಶದ ಯಾ ವಿಶ್ವದ ಯಾವುದೇ ಭಾಗದಲ್ಲೂ ಇಂಥ ಪರಿಹಾರವನ್ನು ಯಾರೂ ಸೂಚಿಸಿಲ್ಲ, ಜಾರಿಗೊಳಿಸಿಯೂ ಇಲ್ಲ. ಆದ್ದರಿಂದ ಇಂಥ ಅವೈಜ್ಞಾನಿಕವಾದ ಕ್ರಮಗಳು ಮಕ್ಕಳಿಗೆ ಯಾವುದೇ ಸಹಾಯವನ್ನು ಮಾಡುವುದಿಲ್ಲ. ಮಕ್ಕಳು ಎಲ್ಲರೊಂದಿಗೆ ಬೆರೆತು, ಆಡಿ, ನಲಿದು ಬೆಳೆಯಬೇಕಲ್ಲದೆ ಅಂತರ್ಮುಖಿಗಳಾಗಿ ಧ್ಯಾನಿಸುವುದಲ್ಲ.

ಯುನಿಸೆಫ್ ಸಂಸ್ಥೆಯು ಕೊರೋನ ಕಾಲದಲ್ಲಿ ಶಾಲೆಗಳನ್ನು ಮುಚ್ಚುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಕೊರೋನ ಕಾಲದಲ್ಲಿ ಶಾಲೆಗಳ ಮುಚ್ಚುವಿಕೆಯಿಂದ ಮಕ್ಕಳಲ್ಲಾಗಿರುವ ಮಾನಸಿಕ ಸಮಸ್ಯೆಗಳನ್ನು  ನಿಭಾಯಿಸಲು ವಿಷದವಾದ ಕಾರ್ಯಸೂಚಿಗಳನ್ನು ಕೂಡಾ ಯುನಿಸೆಫ್ ಪ್ರಕಟಿಸಿದ್ದು, ಅದರಲ್ಲಿ ಎಲ್ಲಿಯೂ ಧ್ಯಾನ, ಯೋಗ, ಪ್ರಾಣಾಯಾಮ ಎಂಬ ಪದಗಳೇ ಕಾಣಸಿಗುವುದಿಲ್ಲ. ಆದ್ದರಿಂದ ರಾಜ್ಯದಲ್ಲಿ ಯುನಿಸೆಫ್ ಕಾರ್ಯಸೂಚಿಯ ಆಧಾರದಲ್ಲಿ ವೈಜ್ಞಾನಿಕ ಕ್ರಮಗಳನ್ನಷ್ಟೇ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ.

ಎಲ್ಲಕ್ಕಿಂತ ಮಿಗಿಲಾಗಿ, ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಶಾಲಾ ಚಟುವಟಿಕೆಗಳ ಭಾಗವಾಗಿ ಯಾವುದೇ ಕಲಿಕೆ ಅಥವಾ ಕಲಿಕೇತರ ಚಟುವಟಿಕೆಗಳನ್ನು ಶಿಕ್ಷಣ ಶಾಸ್ತ್ರದ ನೆಲೆಯಲ್ಲಿ ಗೊತ್ತುಪಡಿಸುವ ಪರಮಾಧಿಕಾರವನ್ನು ಕಾನೂನು ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ  ಇಲಾಖೆಗೆ ವಹಿಸಿ ಅದು ಸಕ್ಷಮ ಪ್ರಾಧಿಕಾರ ಎಂದು ಘೋಷಿಸಿದೆ. ಅದು ಈ ಕೆಳ ಕಂಡಂತಿದೆ:

29 Curriculum and evaluation procedure.

(1) The curriculum and the evaluation procedure for elementary education shall be laid down by an academic authority to be specified by the appropriate Government, by notification.

(2) The academic authority, while laying down the curriculum and the evaluation procedure under sub-section (1), shall take into consideration the following, namely:

(a) conformity with the values enshrined in the Constitution;

(b) all round development of the child;

(c) building up child’s knowledge, potentiality and talent;

(d) development of physical and mental abilities to the fullest extent;

(e) learning through activities, discovery and exploration in a child friendly and child-centered manner;

(f) medium of instructions shall, as far as practicable, be in child’s mother tongue;

(g) making the child free of fear, trauma and anxiety and helping the child to express views freely;

(h) comprehensive and continuous evaluation of child’s understanding of knowledge and his or her ability to apply the same

ಈ ಇಲಾಖೆಗಳು ಸೂಚಿಸದೇ ಇರುವ ಧ್ಯಾನ ಇತ್ಯಾದಿಗಳನ್ನು ಶಾಲೆಗಳಲ್ಲಿ ನಡೆಸುವುದಕ್ಕೆ ಶಿಕ್ಷಕರ ಸಂಘಕ್ಕೆ ಯಾವುದೇ ಅಧಿಕಾರವಿಲ್ಲ, ಅವು ಈಗಾಗಲೇ ಹಾಗೆ ಮಾಡಿರುವುದು ನ್ಯಾಯಬಾಹಿರವಾಗಿದ್ದು, ಅದನ್ನು ಸಮರ್ಥಿಸಿ, ವಿಸ್ತರಿಸಲು ಹೇಳುತ್ತಿರುವ ಸಚಿವರ ನಡೆಯು ವಿಷಾದನೀಯವೂ, ಆಘಾತಕಾರಿಯೂ ಆಗಿದೆ.

ಈ ಎಲ್ಲಾ ಅಂಶಗಳನ್ನು ಗಾಳಿಗೆ ತೂರಿ ತಮಗೆ ಮನಬಂದಂತೆ ಹಾಗೂ  ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಸಚಿವರ ನಡೆಯನ್ನು ನಾವು ಒಕ್ಕೊರಲಿನಿಂದ ಖಂಡಿಸುತ್ತೇವೆ. ಸಚಿವರು ಕ್ರಮೇಣವಾಗಿ ಸಾರ್ವಜನಿಕ ಶಾಲೆಗಳನ್ನು ಸರಸ್ವತಿ ಶಿಶು ಮಂದಿರಗಳನ್ನಾಗಿಸುವ ಹುನ್ನಾರ ನಡೆಸುತ್ತಿದ್ದು ಅವರ ಈ ಕಾನೂನು ಬಾಹಿರ ನಡೆಯನ್ನು ನಾವು ವಿರೋಧಿಸುತ್ತೇವೆ.

1.       ಪ್ರೊ. ನಿರಂಜನಾರಾಧ್ಯ ವಿಪಿ

2.       ಶ್ರೀ ಎಸ್ ಜಿ ಸಿದ್ದರಾಮಯ್ಯ

3.       ಡಾ. ವಿಜಯಮ್ಮ

4.       ಡಾ. ಕಾಳೇಗೌಡ ನಾಗವಾರ

5.       ಶ್ರೀ ಹಿಶಿ ರಾಮಚಂದ್ರೇಗೌಡ

6.       ಡಾ. ಶ್ರೀನಿವಾಸ ಕಕ್ಕಿಲ್ಲಾಯ

7.       ಡಾ. ಪಿವಿ ಭಂಡಾರಿ

8.       ಡಾ. ಯೋಗಾನಂದ ರೆಡ್ಡಿ

ಇಂದು ಮಧ್ಯಾಹ್ನ 3ಕ್ಕೆ ಗುಜರಾತ್, ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ
ದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ದಿನಾಂಕ ಅಥವಾ ವೇಳಾಪಟ್ಟಿಯನ್ನು ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಮುಖ್ಯ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಿದೆ ಎಂದು ಚುನಾವಣಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಗುಜರಾತ್ ಅಸೆಂಬ್ಲಿಯ ಅವಧಿ ಮುಂದಿನ ವರ್ಷ ಫೆಬ್ರವರಿ 18 ರಂದು ಕೊನೆಗೊಳ್ಳುತ್ತದೆ ಮತ್ತು ಹಿಮಾಚಲ ಪ್ರದೇಶದ ಅವಧಿಯು ಜನವರಿ 8 ರಂದು ಕೊನೆಗೊಳ್ಳುತ್ತದೆ.

Election Commission of India to hold a press conference later today, in Delhi. The election schedule of Assembly elections to Gujarat and Himachal Pradesh to be announced. pic.twitter.com/Xd2NGdfnmQ
— ANI (@ANI) October 14, 2022

ಭಾರತ ಐಕ್ಯತಾ ಯಾತ್ರೆ ಒಂದು ಚಳುವಳಿ; ಇದಕ್ಕೆ ಪಕ್ಷ, ವರ್ಗ ಯಾವುದೂ ಇಲ್ಲ: ಡಿ.ಕೆ ಶಿವಕುಮಾರ್
ಬೆಂಗಳೂರು : ಇಂದು ನರೇಗಾ ಕೂಲಿ ಕಾರ್ಮಿಕರು, ಅಂಗನನಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ರಸ್ತೆಗಳಲ್ಲಿ ಕಸ ಆಯುವ ವರ್ಗದ ಮಹಿಳೆಯರ ಜತೆ ರಾಹುಲ್ ಗಾಂಧಿ ಅವರು ಚರ್ಚೆ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ಈ ವರ್ಗದವರಿಗೆ ಅವರಿಗೆ ಆಗುತ್ತಿರುವ ತೊಂದರೆಗಳು, ಸರ್ಕಾರದಿಂದ ಅವರಿಗೆ ಅಗತ್ಯವಿರುವ ನೆರವಿನ ಬಗ್ಗೆ ಚರ್ಚೆ ಮಾಡಿದ್ದಾರೆ. ಲಕ್ಷ್ಮೀದೇವಿ ಎಂಬ ಹೆಣ್ಣುಮಗಳು ಕೈಗಳಿಲ್ಲದಿದ್ದರೂ ಕಾಲಲ್ಲೇ ಬರೆದು ಶಿಕ್ಷಕಿಯಾಗಿದ್ದು, ಅವರ ಜತೆಯೂ ರಾಹುಲ್ ಗಾಂಧಿ ಅವರ ಚರ್ಚೆ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ‌ʼಭಾರತ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಮಕ್ಕಳ ಆಯೋಗದವರು ದೂರು ದಾಖಲಿಸಿದ್ದಾರೆ. ಈಗಾಗಲೇ ನಮ್ಮ ರಾಷ್ಟ್ರೀಯ ವಕ್ತಾರರು ಈ ವಿಚಾರವಾಗಿ 50 ಪುಟಗಳ ವರದಿ ನೀಡಿದ್ದಾರೆ. ಬಿಜೆಪಿ ಸ್ನೇಹಿತರು ಒಂದು ವಿಚಾರ ಅರ್ಥಮಾಡಿಕೊಳ್ಳಬೇಕು. ಭಾರತ ಐಕ್ಯತಾ ಯಾತ್ರೆ ಒಂದು ಚಳುವಳಿ. ಇದಕ್ಕೆ ಪಕ್ಷ, ವರ್ಗ ಯಾವುದೂ ಇಲ್ಲ. ಯಾರು ಬೇಕಾದರೂ ಈ ಯಾತ್ರೆಯಲ್ಲಿ ಭಾಗವಹಿಸಬಹುದುʼ ಎಂದು ಹೇಳಿದರು.

ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಇಂದಿರಾಗಾಂಧಿ ಅವರ ಮೊಮ್ಮಗ ಇಂದು ಇಷ್ಟು ದೂರ ಹೆಜ್ಜೆ ಹಾಕುತ್ತಿದ್ದಾರೆ ಎಂದು ಮಕ್ಕಳನ್ನು ಕರೆ ತಂದು ತೋರಿಸುತ್ತಿದ್ದಾರೆ. ಹೀಗಾಗಿ ಹಳ್ಳಿಗಳಿಂದ ಜನ ಬರುತ್ತಿದ್ದಾರೆ, ರಾಹುಲ್ ಗಾಂಧಿ ಅವರ ಜತೆ ತಮ್ಮ ಕಷ್ಟ, ಸಂತೋಷ ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷ ಎಂದಿಗೂ ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಮ್ಮ ಸರ್ಕಾರ ಭ್ರೂಣದಲ್ಲಿರುವ ಮಕ್ಕಳಿಗೆ ಒಂದು ಕಾರ್ಯಕ್ರಮ ಕೊಟ್ಟರೆ, ಹುಟ್ಟಿದ ನಂತರ ಮತ್ತೊಂದು ಕಾರ್ಯಕ್ರಮ, ಶಾಲಾ ಮಕ್ಕಳಿಗೆ ಒಂದು ಕಾರ್ಯಕ್ರಮ ಸೇರಿದಂತೆ ಕಾಂಗ್ರೆಸ್ ಪಕ್ಷ ಸಾಮಾಜಿಕ ಬದ್ಧತೆ ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ದೇಶದ ಪ್ರತಿ ಪ್ರಜೆಗೆ ರಕ್ಷಣೆ ನೀಡಿ ಅವರ ಕಷ್ಟ ಅರಿತು ನೆರವು ನೀಡಿದ್ದೇವೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಆಯೋಗದ ಮೂಲಕ ದೂರು ದಾಖಲಿಸಿದ್ದು, ಇದಕ್ಕೆ ಯಾವುದೇ ಆಧಾರವಿಲ್ಲ. ಜನ ಕಾಂಗ್ರೆಸ್ ಪಕ್ಷಕ್ಕೆ ತೋರಿಸುತ್ತಿರುವ ಪ್ರೀತಿ ವಿಶ್ವಾಸ ಅಭಿಮಾನ ಕಂಡು ಅಸೂಯೆಯಿಂದ ಈ ದೂರು ಕೊಡಿಸಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಇನ್ನು ಇಂದು ಕಾಡು ಗೊಲ್ಲರು ರಾಹುಲ್ ಗಾಂಧಿ ಅವರ ಜತೆ ಚರ್ಚಿಸಿ ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ. ಮಾಜಿ ಸೈನಿಕರು ಕೂಡ ಭೇಟಿ ಮಾಡಿದ್ದಾರೆ ಎಂದು ಹೇಳಿದರು.

ನಿನ್ನೆ ನಮ್ಮ ಕಾರ್ಯಕರ್ತ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಬರುತ್ತಿರುವಾಗ ದುರ್ಘಟನೆಯಲ್ಲಿ ಮೃತಪಟ್ಟಿದ್ದಾನೆ. ಇಂದು ಆತನ ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸುವ ಕೆಲಸವನ್ನು ಸ್ಥಳೀಯ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಮುಂದೆ ನಾನು ಅವರ ಕುಟುಂಬವನ್ನು ಭೇಟಿ ಮಾಡುತ್ತೇನೆ. ಕೆಪಿಸಿಸಿ ವತಿಯಿಂದ ಆತನ ಕುಟುಂಬಕ್ಕೆ 10 ಲಕ್ಷ ರೂಪಾಯಿ ಘೋಷಣೆ ಮಾಡುತ್ತಿದ್ದೇನೆ. ನಾನೇ ಅವರ ಕುಟುಂಬವನ್ನು ಭೇಟಿ ಮಾಡಿ ಪರಿಹಾರ ನೀಡುತ್ತೇನೆ ಎಂದು ಹೇಳಿಕೊಂಡರು.

ಇನ್ನು ಎಐಸಿಸಿ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಅ.17ರಂದು ಎಲ್ಲ ಪ್ರದೇಶ ಕಾಂಗ್ರೆಸ್ ಸದಸ್ಯರು, ಮತ ಚಲಾಯಿಸಲಿದ್ದಾರೆ. ಭಾರತ ಯಾತ್ರಿಗಳು ಎಲ್ಲಿ ಯಾತ್ರೆ ತಂಗಿರುತ್ತದೆಯೋ ಅಲ್ಲಿಂದಲೇ ಪ್ರತ್ಯೇಕ ಬೂತಿನಲ್ಲಿ ಮತ ಹಾಕಲಿದ್ದಾರೆ. ರಾಹುಲ್ ಗಾಂಧಿ ಅವರು ಸೇರಿದಂತೆ 40 ಜನ ಭಾರತ ಯಾತ್ರಿಗಳು ಅಲ್ಲಿಂದಲೇ ಮತ ಚಲಾಯಿಸಲಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಚುನಾವಣಾ ಅಧಿಕಾರಿಗಳ ಅನುಮತಿ ಪಡೆದಿದ್ದೇವೆ. ಉಳಿದಂತೆ ನಾವೆಲ್ಲರೂ ಕೆಪಿಸಿಸಿ ಕಚೇರಿಯಲ್ಲಿ ಹೋಗಿ ಮತ ಚಲಾಯಿಸುತ್ತೇವೆ. ರಾಜ್ಯದಲ್ಲಿ 479 ಮಂದಿ ಮತ ಚಲಾಯಿಸಲಿದ್ದಾರೆ ಎಂದು ಚುನಾವಣೆ ಬಗ್ಗೆ ಮಾತನಾಡಿದರು.

ರಾಯಚೂರಿನಲ್ಲಿ ಸಿಎಂ ಭಾಷಣದಲ್ಲಿ ಮಾಡಿರುವ ಟೀಕೆ ಬಗ್ಗೆ ಕೇಳಿದಾಗ, ‘ಅವರ ಟೀಕೆಯನ್ನು ಸಂತೋಷದಿಂದ ಸ್ವೀಕರಿಸುತ್ತೇವೆ. ರಾಹುಲ್ ಗಾಂಧಿ ಹಾಗೂ ಅವರ ನಾಯಕತ್ವವನ್ನು ದೇಶದ ಜನ ಒಪ್ಪಿದ್ದಾರೆ. ಅವರಿಗೆ ಪ್ರಧಾನಿ ಆಗುವ ಅವಕಾಶ ಇದ್ದರೂ ಅದನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿನ ಅಧಿಕಾರವನ್ನು ತ್ಯಾಗ ಮಾಡಿ ಪಕ್ಷಕ್ಕಾಗಿ ಕಾರ್ಯಕರ್ತನಂತೆ ದುಡಿಯುತ್ತಿದ್ದಾರೆ. ಜನ ಸಂಘಟಿಸಿ, ಭಾರತ ಒಗ್ಗೂಡಿಸಲು, ಬೆಲೆ ಏರಿಕೆ ನಿರುದ್ಯೋಗ ವಿಚಾರ, ರೈತರ ವಿಚಾರ, ಶಾಂತಿ ಹಾಗೂ ಐಕ್ಯತೆ ಸ್ಥಾಪಿಸಲು ಹೋರಾಟ ಮಾಡುತ್ತಿದ್ದಾರೆ. ಇದನ್ನು ಅರಗಿಸಿಕೊಳ್ಳಲಾಗದೆ ಅವರು ಈ ರೀತಿ ಮಾತನಾಡುತ್ತಿದ್ದಾರೆʼಎಂದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ‘ನಾನು ಅವರ ಪಕ್ಷದ ಆಂತರಿಕ ವಿಚಾರದ ಬಗ್ಗೆ ಈಗ ಮಾತನಾಡುವುದಿಲ್ಲ. ಚುನಾವಣೆ ಸಮೀಪಿಸುತ್ತಿದ್ದು, ಜನ ಯಾವ ರೀತಿ ಬೆಂಬಲ ನೀಡುತ್ತಿದ್ದಾರೆ ಎಂಬುದಕ್ಕೆ ಮಾಧ್ಯಮಗಳ ಕ್ಯಾಮೆರಾಗಳೇ ಸಾಕ್ಷಿ. ನಮಗೆ ನಾಯಕರಲ್ಲ ಜನರೇ ಅಲೆಯಾಗಿ ಪರಿವರ್ತನೆಯಾಗುತ್ತಿದ್ದಾರೆ. ಆಕಾಶದಿಂದ ಹನಿಹನಿಯಾಗಿ ಬಿದ್ದ ನೀರು ನದಿಯಾಗಿ ಸಮುದ್ರ ಸೇರುವಂತೆ ಇಂದು ಕಾಂಗ್ರೆಸ್ ಪಕ್ಷ ದೇಶದಲ್ಲಿ ಬದಲಾವಣೆ ತರಲು ಮುಂದಾಗಿದೆ. ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದು ಪ್ರತಿಯೊಬ್ಬರ ಬದುಕಲ್ಲಿ ಬದಲಾವಣೆ ತರಲಿದೆʼ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಜೈರಾಮ್ ರಮೇಶ್, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಉಪಸ್ಥಿತರಿದ್ದರು.

ಇದನ್ನೂ ನೋಡಿ : ಒಳಗಿನ ʼತನ್ನತನ’ಕ್ಕೆ ಬೇಕಿದೆ ಸ್ವಾಗತ!

ವಿದ್ಯಾರ್ಥಿಗಳ ಮನದಾಳದ ಕಥೆ ವ್ಯಥೆ, ಖುಷಿ, ಪ್ರೀತಿ-ಪ್ರೇಮ, ತೊಳಲಾಟ, ಕುತೂಹಲ…ಹೀಗೆ ಏನೇ ಇರಬಹುದು ಅದಕ್ಕೊಂದು ಅಕ್ಷರ ರೂಪ ನೀಡಲು ಅವರಿಗೊಂದು ವೇದಿಕೆ ಕ್ಯಾಂಪಸ್‌ ಕನ್ನಡಿ. ಈ ವೇದಿಕೆಯ ಮೊದಲ ಬರಹಗಾರ್ತಿ ಗೌತಮಿ ತಿಪಟೂರು ಬರೆದ ಈ ಲೇಖನ ಓದಿ ಅವರನ್ನು ಪ್ರೋತ್ಸಾಹಿಸಿ.

ಒಳಗಿನ ʼತನ್ನತನ’ಕ್ಕೆ ಬೇಕಿದೆ ಸ್ವಾಗತ!

ಸರ್ವಪಕ್ಷ ಸಭೆ: ಸಿದ್ದರಾಮಯ್ಯ ಪತ್ರಿಕಾ ಗೋಷ್ಟಿ ವಿವರಗಳು
ಇಂದಿನ ಸರ್ವಪಕ್ಷ ಸಭೆಯ ನಂತರ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು  ನ್ಯಾ.ನಾಗಮೋಹನದಾಸ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಹೆಚ್ಚಿಸಬೇಕೆಂದು ಇಂದಿನ ಸರ್ವಪಕ್ಷಗಳ ಸಭೆಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾಗಿ ಹೇಳಿದರು

ಮುಂದುವರೆದು ಮಾತನಾಡಿದ ಅವರು ಮುಖ್ಯಮಂತ್ರಿಗಳು ತಕ್ಷಣ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು ಎಸ್ ಸಿ/ಎಸ್.ಟಿ ಮೀಸಲಾತಿ ಹೆಚ್ಚಿಸುವ ಬಗ್ಗೆ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ನಮ್ಮ ಸರ್ಕಾರ ಇದ್ದಾಗ ರಚನೆಯಾಗಿದ್ದ ನಾಗಮೋಹನ್‌ ದಾಸ್‌ ಅವರ ಸಮಿತಿ 7-2-2020ರಲ್ಲಿ ವರದಿಯನ್ನು ನೀಡಿದೆ.ಈ ವರದಿ ನೀಡಿ ಎರಡು ವರ್ಷ ಮೂರು ತಿಂಗಳು ಕಳೆದಿದೆ. ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಧರಣಿ ಆರಂಭ ಮಾಡಿ 240 ದಿನಗಳಾಗಿದೆ ಎಂದರು.

ಎಸ್‌.ಸಿ ಜನಾಂಗದ ಜನಸಂಖ್ಯೆಯಲ್ಲಿ ಏರಿಕೆ ಆಗಿದೆ, ಮೊದಲು ಎಸ್‌.ಸಿ ಜನಾಂಗದಲ್ಲಿ 6 ಜಾತಿಗಳು ಇದ್ದವು ಈಗ ಅದು 102 ಆಗಿದೆ. ಎಸ್‌.ಟಿ ಯಲ್ಲೂ 6 ಜಾತಿಗಳಿತ್ತು, ಅವು 52ಕ್ಕೆ ಏರಿದೆ. ಈಗ ಎಸ್‌,ಸಿ ಗಳಿಗೆ 15% ಹಾಗೂ ಎಸ್‌,ಟಿ ಗಳಿಗೆ 3% ಮೀಸಲಾತಿ ಇದೆ. ನಾಗಮೋಹನ್‌ ದಾಸ್‌ ಅವರ ವರದಿ ಎಸ್‌.ಸಿ ಮೀಸಲಾತಿಯನ್ನು 15% ಇಂದು 17% ಗೆ ಏರಿಕೆ ಮಾಡಬೇಕು ಹಾಗೂ ಎಸ್‌.ಟಿ ಗಳಿಗೆ 3% ಇಂದ 7% ಗೆ ಮೀಸಲಾತಿ ಏರಿಕೆ ಮಾಡಬೇಕು ಎಂದು ಶಿಫಾರಸು ಮಾಡಿರುವುದಾಗಿ ಅವರು ಹೇಳಿದರು.

2011ರ ಜನಗಣತಿ ಪ್ರಕಾರ ಎಸ್‌.ಸಿ. ಜನಸಂಖ್ಯೆ 17.15% ಇದೆ, ಎಸ್‌.ಟಿ 6.95% ಇತ್ತು, ಈಗ ಇದು ಇನ್ನೂ ಜಾಸ್ತಿಯಾಗಿದೆ. ಇದನ್ನು ನಾಗಮೋಹನ್‌ ದಾಸ್‌  ಸಮಿತಿ ಆಧಾರವಾಗಿಟ್ಟುಕೊಂಡು ಮೀಸಲಾತಿ ಹೆಚ್ಚಿಸುವಂತೆ ಶಿಫಾರಸು ಮಾಡಿದ್ದೇನೆ. ಎಸ್.ಸಿ‌ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳವಾಗಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿ‌ ಮಾಡಬೇಕಾಗುತ್ತದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ರಾಜ್ಯ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಮಾತ್ರ ಅವಕಾಶ ಇದೆ ಎಂದು ಅವರು ಸಭೆಗೆ ತಿಳಿಸಿದ್ದಾಗಿ ಹೇಳಿದರು.

ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿಯ ಮೂಲಕ ಮೀಸಲಾತಿಯನ್ನು ಹೆಚ್ಚಿಸಿ ಅದನ್ನು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರಿಸಿದರೆ ನ್ಯಾಯಾಲಯದಲ್ಲಿಯೂ ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಈ‌ ಕೆಲಸವನ್ನು ಮೊದಲು ಕೇಂದ್ರ ಸರ್ಕಾರ ಮಾಡಬೇಕು. ಇದನ್ನೆ  ನ್ಯಾಯಮೂರ್ತಿ ನಾಗಮೋಹನದಾಸ ಸಮಿತಿ ಶಿಫಾರಸು ಮಾಡಿದೆ ಎಂದು ಅವರು ಹೇಳಿದರು.

ಬಿಜೆಪಿಯವರು ನಮ್ಮ ಪಾದಯಾತ್ರೆಗೆ ಹೆದರಿದ್ದಾರೆ: ಸಿದ್ದರಾಮಯ್ಯ
ಮಂಡ್ಯ : ಭಾರತ ಐಕ್ಯತಾ ಯಾತ್ರೆ ಕುರಿತು ಹಲವಾರು ಕಾಂಗ್ರೆಸ್‌ ಮುಖ್ಯ ಅಭ್ಯರ್ಥಿಗಳು ಸೇರಿ ಇಂದು ಮಂಡ್ಯದ ನಾಗಮಂಗಲದಲ್ಲಿ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಜೊತೆಗೂಡಿ ಜಂಟಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದ್ರುವ ನಾರಾಯಣ ಮತ್ತು ಕೆಪಿಸಿಸಿ ಸಂವಹನ ಹಾಗೂ ಜಾಲತಾಣ ವಿಭಾಗದ ಅಧ್ಯಕ್ಷರಾದ ಪ್ರಿಯಾಂಕ್‌ ಖರ್ಗೆ ಅವರು ಹಾಜರಿದ್ದರು.

ಭಾರತ ಐಕ್ಯತಾ ಯಾತ್ರೆ ಕುರಿತು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯನವರು “ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂಬ ಒತ್ತಾಯ ಬಹಳ ವರ್ಷಗಳಿಂದ ಇದೆ. ಕೇಂದ್ರದಲ್ಲಿ ಈ ವರ್ಗಗಳ ಜನರಿಗೆ ಕೇಂದ್ರ ಸರ್ಕಾರಿ ನೌಕರಿಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌,ಸಿ ಗಳಿಗೆ 15% ಹಾಗೂ ಎಸ್‌,ಟಿ ಗಳಿಗೆ 7.5% ಇದೆ. ಎರಡೂ ಸೇರಿ 22.5% ಮೀಸಲಾತಿ ಇದೆ. ರಾಜ್ಯದಲ್ಲಿ ಎಸ್‌,ಸಿ ಗಳಿಗೆ 15% ಹಾಗೂ ಎಸ್‌,ಟಿ ಗಳಿಗೆ 3% ಒಟ್ಟು 18% ಮೀಸಲಾತಿ ಇದೆ. ಹಾಗಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇಲ್ಲ ಎಂದು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನ ಮೀಸಲಾತಿ ಹೆಚ್ಚಳ ಮಾಡುವಂತೆ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.

2011ರ ಜನಗಣತಿ ಪ್ರಕಾರ ಎಸ್‌,ಸಿ 17.15% ಹಾಗೂ ಎಸ್.ಟಿ ಜನರು 6.95% ಒಟ್ಟು 24.10% ಜನಸಂಖ್ಯೆ ಹೊಂದಿದ್ದಾರೆ. ಆದರೆ ಇವರಿಗೆ ಮೀಸಲಾತಿ ಇರುವುದು 18% ಮಾತ್ರ. ಹಾಗಾಗಿ ಸಮ್ಮಿಶ್ರ ಸರ್ಕಾರ ಇದ್ದಾಗ 2019ರಲ್ಲಿ ನಾಗಮೋಹನ್‌ ದಾಸ್‌ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆ ಮಾಡಿತ್ತು. ಈ ಸಮಿತಿ 2-7-2020ರಲ್ಲಿ ವರದಿ ಸಲ್ಲಿಸಿತ್ತು, ಆ ವೇಳೆಗೆ ಸಮ್ಮಿಶ್ರ ಸರ್ಕಾರ ಇರಲಿಲ್ಲ. ಈ ವರದಿ ನೀಡಿ 2 ವರ್ಷ 3 ತಿಂಗಳಾಯಿತು ಆದರೂ ಈ ಸರ್ಕಾರ ವರದಿಯನ್ನು ಒಪ್ಪಿಕೊಂಡಿಲ್ಲ ಮತ್ತು ಜಾರಿ ಮಾಡಿಲ್ಲ. ಇದೇ ಕಾರಣಕ್ಕಾಗಿ ವಾಲ್ಮೀಖಿ ಜನಾಂಗದ ಸ್ವಾಮೀಜಿ ಧರಣಿ ಆರಂಭ ಮಾಡಿದ್ದಾರೆ. ನಾನು ಮತ್ತು ಎಸ್‌,ಸಿ/ಎಸ್‌,ಟಿ ಜನಾಂಗದ ಶಾಸಕರು, ಬೇರೆ ಪಕ್ಷಗಳ ನಾಯಕರು, ಕೆಪಿಸಿಸಿ ಅಧ್ಯಕ್ಷರು ವರದಿ ಜಾರಿ ಮಾಡುವಂತೆ ಒತ್ತಾಯ ಮಾಡಿದ್ದೇವೆ ಎಂದು ಮಾತನಾಡಿದರು.

ವರದಿಈ ವರದಿಯ ಪ್ರಮುಖ ಅಂಶಗಳೆಂದರೆ ಎಸ್‌,ಟಿ ಜನಾಂಗದ ಮೀಸಲಾತಿಯನ್ನು 3% ಇಂದ 7% ಗೆ ಏರಿಕೆ ಮಾಡಬೇಕು. ಎಸ್‌,ಸಿ ಜನಾಂಗದವರಿಗೆ 15% ಇಂದ 17% ಗೆ ಏರಿಕೆ ಮಾಡಬೇಕು. ಅಂದರೆ ಒಟ್ಟು ಮೀಸಲಾತಿಯನ್ನು 6% ಏರಿಕೆ ಮಾಡಬೇಕು ಎಂದು ಶಿಫಾರಸು ಮಾಡಿದ್ದಾರೆ. ನಾಗಮೋಹನ್‌ ದಾಸ್‌ ಅವರು ಹೈಕೋರ್ಟ್‌ ನ ಮಾಜಿ ನ್ಯಾಯಮೂರ್ತಿಗಳು, ಸಂವಿಧಾನದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ. ಅವರು ಕೊಟ್ಟಿರುವ ಶಿಫಾರಸನ್ನು ಇಟ್ಟುಕೊಂಡು ಎರಡು ವರ್ಷಗಳಿಂದ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಬಿಜೆಪಿಯವರು ಮೀಸಲಾತಿಗೆ ವಿರುದ್ಧವಾಗಿರುವವರು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇಲ್ಲದವರು. ಸಾಮಾನ್ಯ ವರ್ಗದ ಬಡ ಜನರಿಗೆ ಒಂದೇ ದಿನದಲ್ಲಿ ತಿದ್ದುಪಡಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಿಲ್‌ ಪಾಸ್‌ ಮಾಡಿಕೊಂಡಿದ್ದಾರೆ. ನಾವು ಎಸ್‌,ಸಿ,ಪಿ/ಟಿ,ಎಸ್‌,ಪಿ ಕಾನೂನನ್ನು ಜಾರಿ ಮಾಡಿದ್ದೇವೆ. ಇದನ್ನು ಕೇಂದ್ರ ಸರ್ಕಾರ ಆಗಲೀ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜಾರಿ ಮಾಡಿದ್ದಾರ? ಇವರದ್ದು ಮೊಸಳೆ ಕಣ್ಣೀರು ಸುರಿಸುವ ಕೆಲಸ ಮಾತ್ರ. ಈ ಬಗ್ಗೆ ನಾನು ಸದನದಲ್ಲಿ ಪ್ರಸ್ತಾಪ ಮಾಡಿದ ಮೇಲೆ ಮುಂದೆ ಮಾಡುತ್ತೇವೆ ಎಂದು ಕಾಲಾಹರಣ ಮಾಡುತ್ತಿದ್ದಾರೆ ಎಂದು ಅವರು ಮಾಡಿರುವ ಒತ್ತಾಯದ ಬಗ್ಗೆ ಮಾತನಾಡಿದರು.

ಹೀಗೆ ಮಾತು ಮುಂದುವರೆಸಿದ ಸಿದ್ದರಾಮಯ್ಯನವರು ʼರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಇದೆ. ನಾಗಮೋಹನ್‌ ದಾಸ್‌ ಅವರ ಸಮಿತಿ ವರದಿ ಇದೆ. ಇದಲ್ಲದೆ ಸುಭಾಶ್‌ ಹಾಡಿ ಅವರ ನೇತೃತ್ವದಲ್ಲಿ ಇನ್ನೊಂದು ಸಮಿತಿ ರಚನೆ ಮಾಡಿದ್ದಾರೆ. ಇದು ಕಾನೂನು ಬಾಹಿರವಾದ ಸಮಿತಿ. ಮುಖ್ಯಮಂತ್ರಿಗಳು ನಾವೆಲ್ಲ ಒತ್ತಾಯ ಮಾಡಿದ ಮೇಲೆ ವಾಲ್ಮೀಕಿ ಗುರುಪೀಠದ ಶ್ರೀಗಳು ನಿರಂತರ ಹೋರಾಟ ಮಾಡಿದ ನಂತರ ನಾಳೆ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದಾರೆ. ಈ ಸಭೆ ಕರೆಯುವುದಾಗಿ ಮುಖ್ಯಮಂತ್ರಿಗಳು ಸದನದಲ್ಲಿ ಮಾತು ಕೊಟ್ಟಿದ್ದರು. ನಮ್ಮ ಪಕ್ಷದ ನಿಲುವು ನಾಗಮೋಹನ್‌ ದಾಸ್‌ ವರದಿ ಜಾರಿ ಮಾಡಬೇಕು ಎಂಬುದಾಗಿದೆ. ನಾವು ಮೀಸಲಾತಿ ಪರವಾಗಿ ಇರುವವರು. ಎಸ್‌,ಸಿ ಹಾಗೂ ಎಸ್‌,ಟಿ ಮೀಸಲಾತಿಯನ್ನು ಏರಿಕೆ ಮಾಡಬೇಕು ಎಂಬ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಇದನ್ನು ಸದನದಲ್ಲಿ ಚರ್ಚಿಸಿ ರೆಗ್ಯುಲೇಷನ್‌ ಪಾಸ್‌ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ನಂತರ ಕೇಂದ್ರ ಸರ್ಕಾರ 15 ದಿನಗಳ ಒಳಗೆ ಸಂವಿಧಾನ ತಿದ್ದುಪಡಿ ಮಾಡಬೇಕಾ ಅಥವಾ ಬೇಡವೇ ಎಂಬುದನ್ನು ನೋಡಿ ಜಾರಿ ಮಾಡಬೇಕು. ಇದು ನಮ್ಮ ಪಕ್ಷದ ನಿಲುವಾಗಿದೆ. ಇದೇ ಮಾತನ್ನು ನಾಳೆಯ ಸರ್ವ ಪಕ್ಷ ಸಭೆಯಲ್ಲಿ ಹೇಳುತ್ತೇವೆʼ ಎಂದು ಮೀಸಲಾತಿಯ ಪರವಾಗಿ ಮಾತನಾಡಿದ್ದಾರೆ.

ರಾಹುಲ್‌ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಸಿದ್ದರಾಮಯ್ಯ ʼಬಿಜೆಪಿಯವರು ನಮ್ಮ ಪಾದಯಾತ್ರೆಗೆ ಹೆದರಿದ್ದಾರೆ. ರಾಜ್ಯದಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ಚುನಾವಣೆ ಬರುತ್ತದೆ. ಈ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬುದು ಖಾತ್ರಿಯಾಗಿರುವುದರಿಂದ ಭಯಭೀತರಾಗಿ ಸುಳ್ಳು ಜಾಹಿರಾತುಗಳನ್ನು ನೀಡುತ್ತಿದ್ದಾರೆ. ಬಿಜೆಪಿ ಅವರ ಜಾಹಿರಾತಿನಲ್ಲಿ ಯಾವ ಸತ್ಯವೂ ಇಲ್ಲ, ಹಾಗಾಗಿ ನಾವು ಈ ಜಾಹಿರಾತಿಗೆ ಯಾವ ಮಹತ್ವವನ್ನು ನೀಡುವುದಿಲ್ಲʼ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ : ರಾಹುಲ್‌ ಗಾಂಧಿಯವರೇ ಕನ್ನಡಿಗರ ಈ ಸೊಲ್ಲು ಆಲಿಸಿ
ಭಾರತವನ್ನು ಜೋಡಿಸಲು ಚಾರಿತ್ರಿಕ “ಬಾರತ್‌ ಜೋಡೋ” ಪಾದಯಾತ್ರೆ ಹಮ್ಮಿಕೊಂಡಿರುವ ರಾಹುಲ್‌ ಗಾಂಧಿಯವರು ಕನ್ನಡಿಗರ ಆತಂಕಗಳನ್ನು ನಿವಾರಿಸುವ ಬದ್ಧತೆ ತೋರುರೆ, ಕನ್ನಡಿಗರ ಈ ಸೊಲ್ಲನ್ನು ಆಲಿಸುವವರೆ? ಪತ್ರಕರ್ತ, ಲೇಖಕ ಹರ್ಷಕುಮಾರ್‌ ಕುಗ್ವೆ ಕನ್ನಡಿಗರ ಹಕ್ಕೊತ್ತಾಯವೇನು ಎಂದು ಇಲ್ಲಿ ತಿಳಿಸಿದ್ದಾರೆ.

https://www.facebook.com/peepaltvkannada/videos/1200412170521513