priest – Peepal Media

ಅಯೋಧ್ಯೆಯಲ್ಲಿ ಭೀಕರ ಘಟನೆ: ಅರ್ಚಕ ಹತ್ಯೆ
ನವದೆಹಲಿ: ಅಯೋಧ್ಯೆಯಲ್ಲಿ ಅತ್ಯಂತ ಕೆಟ್ಟ ಘಟನೆ ನಡೆದಿದೆ. ರಾಮಜನ್ಮಭೂಮಿಯಲ್ಲಿರುವ ಪ್ರಸಿದ್ಧ ಹನುಮಾನ್ ಗರ್ಹಿ ದೇವಸ್ಥಾನದ ಅರ್ಚಕನನ್ನು ಅಪರಿಚಿತ ದುಷ್ಕರ್ಮಿಗಳು ಕತ್ತು ಹಿಸುಕಿ ಕೊಂದಿದ್ದಾರೆ.

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕರಣ್ ನಯ್ಯರ್ ಪ್ರಕಾರ “ಪೂಜಾರಿ ರಾಮ್ ಸಹರೆ ದಾಸ್ (44) ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಪೂಜೆಗಳನ್ನು ನಡೆಸುತ್ತಾರೆ. ಅವರು ತಮ್ಮ ಇಬ್ಬರು ಶಿಷ್ಯರೊಂದಿಗೆ ದೇವಸ್ಥಾನದ ಪಕ್ಕದ ಕೋಣೆಯಲ್ಲಿ ತಂಗುತ್ತಾರೆ. ರಾಮ ಜನ್ಮಭೂಮಿ ಆವರಣದ ತೀವ್ರ ಭದ್ರತಾ ವಲಯದ ಕೊಠಡಿಯಲ್ಲಿ ರಾಮ್ ಸಹಾರೆ ಶವವಾಗಿ ಬಿದ್ದಿದ್ದರು.”

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಅವರನ್ನು ಕತ್ತು ಕೊಯ್ದು ಕೊಲೆ ಮಾಡಿರುವುದು ಪೊಲೀಸರಿಗೆ ಗೊತ್ತಾಗಿದೆ. ಚೆನ್ನಾಗಿ ತಿಳಿದವರೇ ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆಯಲ್ಲಿ ತನಿಖೆ ನಡೆಸಲಾಗುತ್ತಿದೆ.

ಇಂದು ಬೆಳಗ್ಗೆ 7 ಗಂಟೆಗೆ ಈ ದುಷ್ಕೃತ್ಯ ನಡೆದಿದೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ರಾಮ್ ಸಹಾರೆ ಪೂಜೆಗೆ ಬಾರದೇ ಇದ್ದುದರಿಂದ ಅವರ ಸಹ ಅರ್ಚಕರು ಅವರನ್ನು ಹುಡುಕಲು ಹೋದಾಗ ಮೃತದೇಹ ಪತ್ತೆಯಾಗಿದೆ. ದಾಳಿಕೋರರು ಹರಿತವಾದ ಆಯುಧದಿಂದ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ನಿನ್ನೆ ರಾತ್ರಿ ಅರ್ಚಕ ಹಾಗೂ ಆತನ ಶಿಷ್ಯರ ನಡುವೆ ಘರ್ಷಣೆ ನಡೆದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅರ್ಚಕರ ಶಿಷ್ಯರೇ ಕೊಲೆ ಮಾಡಿರಬಹುದು ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಬ್ಬ ಶಿಷ್ಯ ಓಡಿಹೋದ. ನಾಲ್ಕು ಪೊಲೀಸ್ ತಂಡಗಳು ಆತನನ್ನು ಬೆನ್ನಟ್ಟಿ ಬೇಟೆಯಾಡುತ್ತಿವೆ.

ಬಿಜೆಪಿ ಸೇರಿದ ಕೇರಳ ಕ್ಯಾಥೋಲಿಕ್ ಪಾದ್ರಿ: ವಿವರಣೆ ಕೇಳಿದ ಚರ್ಚ್
ತಿರುವನಂತಪುರಂ: ಕೇರಳದ ಕ್ಯಾಥೋಲಿಕ್ ಪಾದ್ರಿ ರೆವ್ ಕುರಿಯಾಕೋಸ್ ಮಟ್ಟೆಮ್ ಬಿಜೆಪಿ ಸದಸ್ಯತ್ವ ಪಡೆದಿದ್ದರು. ಇಡುಕ್ಕಿ ಜಿಲ್ಲೆಯ ಸೇಂಟ್ ಥಾಮಸ್ ಕ್ಯಾಥೋಲಿಕ್ ಚರ್ಚ್‌ನ ವಿಕಾರ್ ಆಗಿದ್ದ ಅವರು, ಆ ಸ್ಥಾನದಿಂದ ಕೆಳಗಿಳಿದ ಒಂದು ದಿನದ ನಂತರ, ಪ್ರಕರಣವನ್ನು ಈಗ ಮೇಲಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ ಎಂದು ಚರ್ಚ್ ವಕ್ತಾರ ಹೇಳಿದ್ದಾರೆ.

ಇಡುಕ್ಕಿ ಧರ್ಮಪ್ರಾಂತ್ಯದ ವಕ್ತಾರ ರೆ.ಫಾ.ಜಿನ್ಸ್ ಕರಕಟ್ಟಿಲ್ ಮಾತನಾಡಿ, ಚರ್ಚ್ ಆವರಣವನ್ನು ಪಕ್ಷದ ಕೆಲಸಗಳಿಗೆ ಬಳಸುವಂತಿಲ್ಲ ಕಟ್ಟಿನಿಟ್ಟಾಗಿ ತಿಳಿಸಿದ್ದಾರೆ.

“ಪ್ರಸ್ತುತ, ಅವರನ್ನು ವಿಕಾರ್ ಸ್ಥಾನದಿಂದ ಕೆಳಗಿಳಿಸಲಾಗಿದೆ ಮತ್ತು ನಾವು ವಿಷಯವನ್ನು ಪರಿಶೀಲಿಸಲು ಆಯೋಗವನ್ನು ರಚಿಸುತ್ತೇವೆ. ಈ ನಿರ್ಧಾರವನ್ನು ತೆಗೆದುಕೊಂಡ ಪಾದ್ರಿಯನ್ನು ಆಯೋಗದ ಮುಂದೆ ಹಾಜರಾಗುವಂತೆ ತಿಳಿಸಲಾಗುವುದು ಮತ್ತು ಚರ್ಚ್ ಈ ಬಗ್ಗೆ ತಿಳಿದುಕೊಳ್ಳಲು ಬಯಸುತ್ತದೆ ಮತ್ತು ನಂತರ ನಿರ್ಧಾರಕ್ಕೆ ಬರಲಾಗುವುದು ಎಂದು ಕ್ಯಾರಕಟ್ಟಿಲ್ ಹೇಳಿದರು.

ಕ್ಯಾಥೋಲಿಕ್ ಚರ್ಚ್‌ನ ಇಡುಕ್ಕಿ ಡಯಾಸಿಸ್ ಅವರನ್ನು ವಿಕಾರ್ ಸ್ಥಾನದಿಂದ ತಾತ್ಕಾಲಿಕವಾಗಿ ಅಮಾನತು ಮಾಡಿ ಆದೇಶವನ್ನು ನೀಡಿದ್ದು, ಅವರು ಕೇಸರಿ ಪಕ್ಷದ ಸದಸ್ಯತ್ವವನ್ನು ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದ ಒಂದು ಗಂಟೆಯ ನಂತರ ಈ ನಿರ್ಧಾರವನ್ನು ಚರ್ಚ್‌ ತೆಗೆದುಕೊಂಡಿದೆ.

ಕೇರಳದ ಕ್ಯಾಥೋಲಿಕ್ ಪಾದ್ರಿಯೊಬ್ಬರು ಕೇಸರಿ ಪಕ್ಷಕ್ಕೆ ಸೇರುತ್ತಿರುವುದು ಇದೇ ಮೊದಲು ಎಂದು ಬಿಜೆಪಿ ಮೂಲಗಳು ಹೇಳಿವೆ.

62 ವರ್ಷದ ಕ್ಯಾಥೋಲಿಕ್ ಪಾದ್ರಿ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಬಿಜೆಪಿ ಕ್ರಿಶ್ಚಿಯನ್ನರ ಪಕ್ಷವಲ್ಲ ಎಂಬ ಸಾಮಾನ್ಯ ನಂಬಿಕೆಯನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದರು.

ಕೇರಳದಲ್ಲಿ, ರಾಜ್ಯದ 3.30 ಕೋಟಿ ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ನರು ಶೇಕಡಾ 18ರಷ್ಟಿದ್ದಾರೆ.