pulwama attack – Peepal Media

ಪುಲ್ವಾಮಾ ದಾಳಿ: ಹುತಾತ್ಮ ಸೈನಿಕರ ಮನೆಯವರಿಂದ ನವೆಂಬರ್‌ 26ಕ್ಕೆ ಕೇಂದ್ರದ ವಿರುದ್ದ ಪ್ರತಿಭಟನೆ
ನವದೆಹಲಿ, ಅಕ್ಟೋಬರ್.‌18:  2019 ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಯೋಧರ ಕುಟುಂಬದ ಸದಸ್ಯರು ಸಂಭವಿಸಿದ ಲೋಪಗಳಿಗೆ ಹೊಣೆಗಾರಿಕೆಯನ್ನು ಸರಿಪಡಿಸಲು ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿ ನವೆಂಬರ್ 26 ರಂದು ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಿದ್ದಾರೆ.

ಮಾಜಿ ಅರೆಸೇನಾ ಪಡೆಗಳ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ ಬ್ಯಾನರ್‌ನಡಿಯಲ್ಲಿ (Confederation of Ex-Paramilitary Forces Welfare Associations), ಹತ್ಯೆಗೀಡಾದ ಯೋಧರ ಪತ್ನಿಯರು ಮತ್ತು  ಕುಟುಂಬ ಸದಸ್ಯರು ನವೆಂಬರ್ 26, ಸಂವಿಧಾನ ದಿನದಂದು ಪ್ರತಿಭಟಿಸಿ ಸರ್ಕಾರಕ್ಕೆ ಒತ್ತಾಯಿಸಲಿದ್ದಾರೆ.

“ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಜವಾನರ ಪತ್ನಿಯರು ಮತ್ತು ಕುಟುಂಬ ಸದಸ್ಯರನ್ನು ಕರೆತರಲು ನಾವು ಯೋಜಿಸಿದ್ದೇವೆ. ಪುಲ್ವಾಮಾ ದಾಳಿಯಾಗಿ ನಾಲ್ಕು ವರ್ಷಗಳು ಕಳೆದಿವೆ ಮತ್ತು ನಮ್ಮ 40 ಯೋಧರ ಹತ್ಯೆಗೆ ಕಾರಣವಾದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲು ಕೇಂದ್ರ ಸರ್ಕಾರ ವಿಫಲವಾಗಿದೆ,” ಎಂದು ಸಂಘದ ರಾಷ್ಟ್ರೀಯ ಸಂಯೋಜಕ ರಣಬೀರ್ ಸಿಂಗ್ ತಿಳಿಸಿದ್ದು ದಿ ಟೆಲಿಗ್ರಾಫ್‌ ವರದಿ ಮಾಡಿದೆ.

ಚುನಾವಣೆಯ ಸಮಯದಲ್ಲಿ ಯಾವಾಗಲೂ ರಾಷ್ಟ್ರೀಯತೆಯನ್ನು ಪ್ರಚಾರಕ್ಕೆ  ಬಳಸುವ ನರೇಂದ್ರ ಮೋದಿ ಸರ್ಕಾರವು 40 ಸಿಆರ್‌ಪಿಎಫ್ ಸಿಬ್ಬಂದಿಗಳ ಹತ್ಯೆಗೆ ಕಾರಣವಾದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ನೀಡಿಲ್ಲ ಎಂದು ಅವರು ಅವರು ಆರೋಪಿಸಿದ್ದಾರೆ. ಫೆಬ್ರವರಿ 14, 2019 ರಂದು ಸೈನಿಕರು ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಬಾಂಬ್ ಸ್ಫೋಟಗೊಂಡು ನಲವತ್ತು ಸೈನಿಕರು ಹತರಾಗಿದ್ದರು.

“ಹತರಾದ ಈ 40 ಸಿಆರ್‌ಪಿಎಫ್ ಸೈನಿಕರ ಕುಟುಂಬಗಳಿಗೆ ಗುಪ್ತಚರ ವರದಿಗಳ ನಿರ್ಲಕ್ಷ್ಯಕ್ಕೆ ಯಾರು ಹೊಣೆ ಎಂದು ತಿಳಿದುಕೊಳ್ಳುವ ಎಲ್ಲಾ ಹಕ್ಕುಗಳಿವೆ” ಎಂದು ಸಿಂಗ್ ಹೇಳಿದ್ದಾರೆ.

ಮೋದಿ ಸರ್ಕಾರದ ಗುಪ್ತಚರ ವೈಫಲ್ಯದ ಪರಿಣಾಮವಾಗಿ ದಾಳಿ ನಡೆದಿದೆ ಎಂದು ಆರೋಪಿಸಿ ದಿ ವೈರ್‌ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ನೀಡಿದ ಸಂದರ್ಶನ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಆ ಸಂದರ್ಶನದಲ್ಲಿ ಸೈನಿಕರಿಗೆ ಕೇಂದ್ರ ಸರ್ಕಾರವು ವಿಮಾನವನ್ನು ನೀಡಲು ನಿರಾಕರಿಸಿದ್ದು ಅವರ ಹತ್ಯೆಗೆ ಕಾರಣ ಎಂದು ನೇರ ಆರೋಪ ಮಾಡಿದ್ದರು. ಇದನ್ನು ಮೋದಿಯವರು ಗಮನಕ್ಕೆ ತಂದಾಗ ಅವರು “ತುಮ್ ಅಭಿ ಚುಪ್ ರಹೋ (ನೀನೂ ಈಗ ಸುಮ್ಮನಿರು)” ಎಂದು ಹೇಳಿದ್ದರು ಎಂದು ಮಲಿಕ್ ಹೇಳಿದ್ದರು.

ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಆರೋಗ್ಯ ವಿಮಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸತ್ಯಪಾಲ್‌ ಮಲಿಕ್ ವಿರುದ್ಧ ಸಮನ್ಸ್ ಜಾರಿ ಮಾಡಿತು.

ಸತ್ಯಪಾಲ್‌ ಮಲಿಕ್‌ ಅವರ ಆರೋಪಗಳನ್ನು ಉಲ್ಲೇಖಿಸಿ ರಣಬೀರ್ ಸಿಂಗ್, “ಇದಾಗಿ ನಾಲ್ಕು ವರ್ಷಗಳು ಕಳೆದಿವೆ, ಆದರೆ ಮೋದಿ ಸರ್ಕಾರವು ಹೊಣೆಗಾರಿಕೆಯನ್ನು ಸರಿಪಡಿಸಲು ವಿಫಲವಾಗಿದೆ. ಚುನಾವಣೆ ಗೆಲ್ಲುವುದೊಂದೇ ಅವರ ಆದ್ಯತೆ. ಸಂಸತ್ ಚುನಾವಣೆಗೂ ಮುನ್ನ ಈ ಬಾರಿಯೂ ಇದೇ ರೀತಿಯ ದಾಳಿಗಳು ನಡೆಯಬಹುದು. ಈ ದೇಶದ ಜನರು ಎಚ್ಚರದಿಂದಿರಬೇಕು” ಎಂದು ಕೇಂದ್ರ ಸರ್ಕಾರವನ್ನು ಆರೋಪಿಸಿದ್ದಾರೆ.

“ಇದರ ಬದಲು ಅವರ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಿಟ್ಟು ಬಾಯಿಮುಚ್ಚಿಸುವ ಪ್ರಯತ್ನವಾಗುತ್ತಿದೆ,” ಎಂದು ಮಲಿಕ್‌ ಅವರಿಗೆ ಸಿಬಿಐ ಕಳಿಸಿರುವ ಸಮನ್ಸ್‌ ಉಲ್ಲೇಖಿಸಿ ಸಿಂಗ್‌ ಹೇಳಿದ್ದಾರೆ.

ಲೋಕಸಭೆ ಚುನಾವಣೆಯ ವೇಳೆ 40 ಸಿಆರ್‌ಪಿಎಫ್ ಯೋಧರ ಹತ್ಯೆ ಮತ್ತು ಬಾಲಾಕೋಟ್‌ನಲ್ಲಿ ನಡೆದ ಐಎಎಫ್ ದಾಳಿಯನ್ನು ಮೋದಿ ರಾಜಕೀಯವಾಗಿ ಬಳಸಿಕೊಂಡಿದ್ದಾರೆ ಮತ್ತು ಮತದಾರರು ತಮ್ಮ ಮತವನ್ನು ಬಾಲಾಕೋಟ್‌ನಲ್ಲಿ ವೈಮಾನಿಕ ದಾಳಿಗೆ  ಹತರಾದ ವೀರ ಯೋಧರಿಗೆ ಅರ್ಪಿಸುವಂತೆ ಕೇಳಿಕೊಂಡಿದ್ದರು ಎಂದು ಮಲಿಕ್ ಹೇಳಿದ್ದರು.  ಪುಲ್ವಾಮಾ ದಾಳಿಯು 2019 ರ ಸಂಸತ್ ಚುನಾವಣೆಗೆ ಎಂಟು ವಾರಗಳ ಮೊದಲು ನಡೆದಿತ್ತು

ಚುನಾವಣೆ ಒಳಗೆಯೇ ದೇಶದಲ್ಲಿ ಸಂಭವಿಸುತ್ತಾ ದೊಡ್ಡ ದುರಂತ? ; ಈ ಬಗ್ಗೆ ಏನಂತಾರೆ ನಾಯಕರು
ಪುಲ್ವಾಮಾ ದುರ್ಘಟನೆ ಹಿಂದೆ ಬಿಜೆಪಿ ಪಕ್ಷದ ನೇರ ಕೈವಾಡದ ಬಗ್ಗೆ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ಹೇಳಿಕೆ, ನಂತರ 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಂತದ್ದೇ ಒಂದು ದುರಂತ ಅಥವಾ ಗಲಭೆ ಸೃಷ್ಟಿಸಿ ಚುನಾವಣೆಯಲ್ಲಿ ಮತ ಪಡೆಯಲು ಮುಂದಾಗಲಿದೆಯೇ ಎಂಬ ಅನುಮಾನ ಎಲ್ಲೆಡೆ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಸತ್ಯಪಾಲ್ ಮಲಿಕ್ “ಬಿಜೆಪಿ ಪಕ್ಷದವರು 2024 ಕ್ಕೆ ರಾಮಮಂದಿರ ಸ್ಪೋಟ ಅಥವಾ ಬಿಜೆಪಿ ಪಕ್ಷದ್ದೇ ಪ್ರಭಾವಿ ನಾಯಕರೊಬ್ಬರ ಹತ್ಯೆ ಮಾಡಿಯಾದರೂ ಅಧಿಕಾರ ಪಡೆಯಲು ಹಿಂದೇಟು ಹಾಕುವುದಿಲ್ಲ” ಎಂಬ ಹೇಳಿಕೆ ನೀಡಿ ಗಮನ ಸೆಳೆದಿದ್ದರು. ಈಗ ಶಿವಸೇನೆ ನಾಯಕ ಉದ್ದವ್ ಠಾಕ್ರೆ ಕೂಡಾ ಇದೇ ರೀತಿಯ ಅನುಮಾನ ವ್ಯಕ್ತಪಡಿಸಿದ್ದು, “ಗೋದ್ರಾ ಮಾದರಿಯ ಗಲಭೆ ಎಬ್ಬಿಸಿ ಬಿಜೆಪಿ ಮತ ಪಡೆಯುವ ಹುನ್ನಾರದ ಸಾಧ್ಯತೆ ಇದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪುಲ್ವಾಮಾ ದುರ್ಘಟನೆ ಬಗ್ಗೆ ಬಿಜೆಪಿಗೆ ಮೊದಲೇ ಇದ್ದ ಮಾಹಿತಿ, ದುರ್ಘಟನೆ ನಡೆದ ಬಗ್ಗೆ ಮಾಹಿತಿ ಸಿಕ್ಕರೂ ಪ್ರಧಾನಿ ನರೇಂದ್ರ ಮೋದಿ ಫೋಟೋಶೂಟ್ ನಲ್ಲಿ ಬ್ಯುಸಿ ಆಗಿದ್ದು, ಆ ನಂತರ ಸತ್ಯಪಾಲ್ ಮಲಿಕ್ ಅವರ ಹೇಳಿಕೆ ಇಲ್ಲಿ ಮಹತ್ವ ಪಡೆದುಕೊಳ್ಳುತ್ತಿದೆ.

ಅಷ್ಟೆ ಅಲ್ಲದೇ ಪುಲ್ವಾಮಾ ದಾಳಿಗೂ ಒಂದಷ್ಟು ದಿನಗಳ ಹಿಂದೆ ‘ರಿಪಬ್ಲಿಕ್ ಟಿವಿ’ ಮಾಲಿಕ ಅರ್ನಬ್ ಗೋಸ್ವಾಮಿ, BARC ಮುಖ್ಯಸ್ಥರ ಜೊತೆಗೆ ಮಾತನಾಡಿದ ವಾಟ್ಸಾಪ್ ಚಾಟ್ ಹಿಸ್ಟರಿ ಲೀಕ್ ಆಗುತ್ತದೆ. ಇದು ದೇಶದ ಬಹುತೇಕ ಮಾಧ್ಯಮಗಳ ಮೂಲಕವೂ ಜಗಜ್ಜಾಹೀರಾಗಿತ್ತು. ಅದರಲ್ಲಿ ಪುಲ್ವಾಮಾ ದಾಳಿಯ ಬಗ್ಗೆ ದೇಶದ ಪ್ರಮುಖ ವ್ಯಕ್ತಿಗಳಿಗೆ ಮಾಹಿತಿ ಇದ್ದ ಬಗ್ಗೆ ದಾಖಲೆ ಸಿಗುತ್ತದೆ. ಇಂತಹ ಸಂದರ್ಭಕ್ಕೂ ಸಹ ಬಿಜೆಪಿ ಪಕ್ಷ ಇದರ ತನಿಖೆಯನ್ನು ಬೇಕಂತಲೇ ಹಳ್ಳ ಹಿಡಿಸುವ ಕೆಲಸಕ್ಕೆ ಮುಂದಾಗಿದೆ ಎಂದು ಹಲವರು ಆರೋಪಿಸಿದ್ದಾರೆ. ಜೊತೆಗೆ ಸರ್ಕಾರ ಕೂಡಾ ಇದರ ತನಿಖೆಯ ಪ್ರಗತಿಯ ಬಗ್ಗೆ ಈ ವರೆಗೆ ವಿಚಾರ ಸ್ಪಷ್ಟಪಡಿಸಿಲ್ಲ.

ದೇಶದಲ್ಲಿ ಏನೇ ದೊಡ್ಡ ದುರಂತ ನಡೆದರೂ, ಸಾವು ನೋವುಗಳಾದರೂ ಅದರ ಹೊಣೆ ಸರ್ಕಾರವೇ ಹೊರಬೇಕು. ಭದ್ರತೆಯ ಲೋಪಗಳಿಂದ ಹಿಡಿದು, ಗಲಭೆ ನಿಯಂತ್ರಣದ ವರೆಗೂ ಸರ್ಕಾರದ್ದೇ ಮುಖ್ಯ ಜವಾಬ್ದಾರಿಯಾಗಿರುತ್ತದೆ. ಆದರೆ ಪುಲ್ವಾಮಾ ದುರ್ಘಟನೆ ನಂತರ ಆಡಳಿತಾರೂಢ ಬಿಜೆಪಿ ಪಕ್ಷ ಆಡಳಿತ ವಿರೋಧಿಯಾಗಿದ್ದ ಅಲೆಯನ್ನು ತನ್ನ ಪರವಾದ ಅಲೆಯನ್ನಾಗಿ ತಿರುಗಿಸಿಕೊಳ್ಳಲು ಯಶಸ್ವಿಯಾಗಿತ್ತು.

ಪಾಕಿಸ್ತಾನದ ಬಾಲಾಕೋಟ್ ಬಳಿ ಖಾಲಿ ಜಾಗಕ್ಕೆ ಬಾಂಬ್ ಎಸೆದು ಅಲ್ಲಿ ಉಗ್ರರ ತಾಣವನ್ನೇ ಧ್ವಂಸ ಮಾಡಿದ್ದೇವೆ, ಅಲ್ಲಿ ನೂರಾರು ಉಗ್ರರು ಹತರಾಗಿದ್ದಾರೆ, ಇದು ಪಾಕಿಸ್ತಾನ ಮತ್ತು ಉಗ್ರರ ಮೇಲೆ ಮೋದಿ ಸರ್ಕಾರದ ಪ್ರತಿಕಾರ ಎಂದೆಲ್ಲಾ ಮಾಧ್ಯಮಗಳು ಮೇಲಿಂದ ಮೇಲೆ ವರದಿ ಬಿತ್ತಿಸಿದ್ದವು. ಬಿಜೆಪಿ ಕೂಡಾ ಇದೇ ರೀತಿಯಾಗಿ ವಾದಿಸಿಕೊಂಡು ಬಂದಿತ್ತು.

ಆದರೆ ಅಸಲಿ ವಿಚಾರ ಏನೆಂದರೆ ಬಾಲಾಕೋಟ್ ದಾಳಿಯೇ ಒಂದು ಫೇಕ್ ಎಂದು ಪ್ರತ್ಯಕ್ಷದರ್ಶಿ ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಅಷ್ಟು ಹೊತ್ತಿಗಾಗಲೇ ಪುಲ್ವಾಮಾ ದಾಳಿಯ ನಂತರ ಆಡಳಿತದ ವಿರೋಧಿಯಾಗಿದ್ದ ಅಲೆಯನ್ನು ಬಿಜೆಪಿ ಪಕ್ಷ ಸಂಪೂರ್ಣವಾಗಿ ತನ್ನ ಪರವಾಗಿ ತಿರುಗಿಸಿಕೊಂಡಿತ್ತು. ಅಂದ್ರೆ ಎಂತಹ ದುರ್ಘಟನೆಯನ್ನೂ ಬಿಜೆಪಿ ತನ್ನ ಪರವಾದ ಅಲೆಯಾಗಿ ತಿರುಗಿಸಿಕೊಳ್ಳುವ ಛಾಥಿ ಹೊಂದಿದೆ ಎಂಬುದು ಸ್ಪಷ್ಟವಾಗಿತ್ತು.

ಸಧ್ಯ ಇಷ್ಟೆಲ್ಲಾ ಪೀಠಿಕೆಯ ಉದ್ದೇಶ ಏನೆಂದರೆ, 2024 ರ ಚುನಾವಣೆಗೂ ಕೇಂದ್ರದಲ್ಲಿರುವ ಬಿಜೆಪಿ ಇಂತದ್ದೇ ಒಂದು ದೊಡ್ಡ ಸ್ಪೋಟ ಅಥವಾ ರಾಮಮಂದಿರ ಉದ್ಘಾಟನೆಯ ನಂತರ ರಾಮಭಕ್ತರ ಮೇಲೆ ಏನಾದರೂ ದಾಳಿ ನಡೆಸಿ ಮತ ಪಡೆಯುವ ಹುನ್ನಾರ ಹೊಂದಿರಬಹುದಾ ಎಂಬುದಾಗಿ ಶಿವಸೇನೆ ನಾಯಕ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅನುಮಾನ ವ್ಯಕ್ತಪಡಿಸಿದ್ದಾರೆ‌.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡುವುದಕ್ಕೆ 2024ರ ಜನವರಿಯಲ್ಲಿ ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ ಸಾವಿರ ಸಾವಿರ ಸಂಖ್ಯೆಯಲ್ಲಿ ರಾಮಭಕ್ತರು ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಈಗಾಗಲೇ ಸಿಕ್ಕಿದೆ. ಆದರೆ ಈ ಕಾರ್ಯಕ್ರಮಕ್ಕೆ ಜನರನ್ನು ಬಸ್​ ಹಾಗು ಟ್ರಕ್‌ಗಳಲ್ಲಿ ಕರೆ ತರುವುದಕ್ಕೂ ಚಿಂತನೆ ನಡೆಯುತ್ತಿದೆ. ಆದರೆ ಉದ್ಘಾಟನೆ ಬಳಿಕ ತಮ್ಮ ಊರುಗಳಿಗೆ ಹಿಂತಿರುಗುವಾಗ ಗೋಧ್ರಾ ರೀತಿಯ ದುರ್ಘಟನೆ ನಡೆಸುವ ಸಾಧ್ಯತೆಯಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಭವಿಷ್ಯ ನುಡಿದಿರುವುದು ಆತಂಕಕ್ಕೆ ಕಾರಣವಾಗಿದೆ.

ಕೇವಲ ಉದ್ದವ್ ಠಾಕ್ರೆ ಮಾತ್ರವಲ್ಲದೆ, ಪುಲ್ವಾಮಾ ದುರ್ಘಟನೆಯ ಬಗ್ಗೆ ಇಂಚಿಂಚೂ ಮಾಹಿತಿ ಹೊರಹಾಕುವ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಕೂಡಾ ಇದೇ ವಿಚಾರದಲ್ಲಿ ಈ ಹಿಂದೆ ನೀಡಿದ ಹೇಳಿಕೆ ಕೂಡ ಹೆಚ್ಚು ಸದ್ದು ಮಾಡಿತ್ತು. ಒಟ್ಟಾರೆ 2024 ರ ಚುನಾವಣೆ ವೇಳೆಗೆ ಬಿಜೆಪಿ ಪಕ್ಷದ ಅಧಿಕಾರಾವಧಿಯಲ್ಲಿ ದೇಶದಲ್ಲಿ ಎಂತಹ ದುರ್ಘಟನೆ ನಡೆದರೂ ಆಶ್ಚರ್ಯವಿಲ್ಲ ಎಂಬುದಾಗಿ ಈ ಇಬ್ಬರು ನಾಯಕರ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ.

ಪುಲ್ವಾಮಾ ದಾಳಿಯ ಭಯೋತ್ಪಾದಕರನ್ನು ಬೆಂಬಲಿಸಿ ಫೇಸ್‌ಬುಕ್ ಪೋಸ್ಟ್: ಬೆಂಗಳೂರು ವಿದ್ಯಾರ್ಥಿಗೆ 5 ವರ್ಷ ಜೈಲು
ಬೆಂಗಳೂರು : ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಸೋಮವಾರದಂದು ವಿಶೇಷ ಎನ್‌ಐಎ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಬೆಂಗಳೂರಿನಲ್ಲಿ ಓದುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಫೈಜ್ ರಶೀದ್, ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಶ್ಲಾಘಿಸಿ ಭಾರತೀಯ ಸೇನೆಯನ್ನು ಟೀಕಿಸಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದನು. ಈ ಹಿನ್ನಲೆಯಲ್ಲಿ ಆರೋಪಿ ಫೈಜ್‌ ರಶೀದ್‌ಅನ್ನು ಬೆಂಗಳೂರು ಪೊಲೀಸರು ಫೆಬ್ರವರಿ 2019 ರಲ್ಲಿ ಬಂಧಿಸಿದ್ದರು.

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಎಂ.ಗಂಗಾಧರ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ.ಗಳ ದಂಡವನ್ನು ವಿಧಿಸಿದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ವಿವಿಧ ಸಮುದಾಯಗಳ ನಡುವೆ ಅಸಂಗತತೆ, ದ್ವೇಷ ಅಥವಾ ದ್ವೇಷದ ಭಾವನೆಗಳನ್ನು ಉತ್ತೇಜಿಸುವ ಅಪರಾಧ) 124 ಎ (ದೇಶದ್ರೋಹ) ಅಡಿಯಲ್ಲಿ ಮತ್ತು UAPA ಕಾಯಿದೆಯ ಸೆಕ್ಷನ್ 13 ರ ಅಡಿಯಲ್ಲಿ ಫೈಜ್‌ ರಶೀದ್‌ನ ವಿರುದ್ಧ ಬೆಂಗಳೂರಿನ ಬಾಣಸವಾಡಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಲಾಯಿತು. ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಅವರಿಗೆ ಜಾಮೀನು ನೀಡಲಾಗಿಲ್ಲ.

ಫೈಜ್ ಅವರು ʼಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಮೇಲಿನ ದಾಳಿಯನ್ನು ಸಂಭ್ರಮಿಸಿದ್ದರು ಮತ್ತು ಇದು ಗುಂಪು ಹತ್ಯೆ ಮತ್ತು ರಾಮಮಂದಿರ ಆಂದೋಲನಕ್ಕೆ ‘ಸೇಡು ತೀರಿಸಿಕೊಳ್ಳುವ ಟ್ರೈಲರ್’ ಎಂದು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ವಿವರಿಸಿದ್ದರುʼ ಎಂದು ಪ್ರಕರಣದ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಫೈಜ್ ಅವರ ಹೇಳಿಕೆಗಳು ಧರ್ಮಗಳ ನಡುವೆ ದ್ವೇಷವನ್ನು ಉಂಟುಮಾಡಬಹುದು ಎಂದು ಪೊಲೀಸರು ಹೇಳಿದ್ದು, ಫೈಜ್‌ ಕಮೆಂಟ್ ಹಾಕಲು ಬಳಸಿದ್ದ ಮೊಬೈಲ್‌ ಅನ್ನು ವಶಪಡಿಸಿಕೊಂಡಿದ್ದಾರೆ.

ಫೆಬ್ರವರಿ 14, 2019 ರಂದು ಭಾರತದ ಸಾರ್ವತ್ರಿಕ ಚುನಾವಣೆಗಳಿಗೆ ತಿಂಗಳ ಮೊದಲು ಸಂಭವಿಸಿದ ಪುಲ್ವಾಮ ದಾಳಿಯ ಬಗ್ಗೆ ಫೈಜ್‌ ಸಂಭ್ರಮಿಸಿದ್ದಾನೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರತೀಯ ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನಗಳ ಬೆಂಗಾವಲು ವಾಹನದ ಮೇಲೆ ಹಿಂದಿನ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥಾಪೋರಾದಲ್ಲಿ ಆತ್ಮಹತ್ಯಾ ಬಾಂಬರ್ ನಡೆಸಿದ ದಾಳಿಯನ್ನು ಉಲ್ಲೇಖಿಸಿದೆ. ದಾಳಿಯಲ್ಲಿ 40 ಭಾರತೀಯ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿ ಮತ್ತು ಸ್ಥಳೀಯ ಕಾಶ್ಮೀರಿ ಯುವಕ ಆದಿಲ್ ಅಹ್ಮದ್ ದಾರ್ ಎಂಬ ಅಪರಾಧಿ ಮೃತಪಟ್ಟರು. ಪಾಕಿಸ್ತಾನ ಮೂಲದ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.