punith rajkumar – Peepal Media

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ: ಅಜನೀಶ್ ಲೋಕನಾಥ್ ಕಿಡ್ನ್ಯಾಪ್ ಮಾಡಿದ ಟೀಂ ಪೋಟೋ ವೈರಲ್‌
ಬೆಂಗಳೂರು: ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಜನೀಶ್ ಲೋಕನಾಥ್ ರನ್ನು ಥಳಿಸಿ, ಕೈ ಕಟ್ಟಿ ಗನ್ ಹಿಡಿದು ನಿಂತ ಉಗ್ರರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಫೋಟೋ ನೋಡಿ ಅಜನೀಶ್ ಲೋಕನಾಥ್ ಕಿಡ್ನ್ಯಾಪ್ ಆದ್ರಾ ಎಂದು ಎಲ್ಲರು ಮಾತನಾಡೋಕೆ ಆರಂಭಿಸಿದ್ದಾರೆ.

ಆದರೆ ಈ ಫೋಟೋ ಅಸಲಿಯತ್ತು ಬೇರೆನೇ ಇದೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ಸಿನಿಮಾದ ಪ್ರಮೋಷನ್ ಫೋಟೋ ಇದಾಗಿದ್ದು, ಅಜನೀಶ್ ಲೋಕನಾಥ್ ಸ್ಯಾಂಡಲ್ ವುಡ್ ಅಂಗಳದಲ್ಲಿ ಬಹು ನಿರೀಕ್ಷೆ ಮೂಡಿಸಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಮ   ಅದರ ಪ್ರಮೋಷನ್ ಗಾಗಿ ತೆಗೆದ ಫೋಟೋ ಇದಾಗಿದೆ ಎನ್ನಲಾಗಿದೆ.

ವಿಭಿನ್ನ ಹಾಗೂ ವಿಶಿಷ್ಟ ರೀತಿಯ ಪ್ರಮೋಷನ್ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಸ್ಯಾಂಡಲ್ ವುಡ್ ಸ್ಟಾರ್ ತಾರೆಯರು ಈ ಚಿತ್ರಕ್ಕೆ ಸಾಥ್ ನೀಡ್ತಿದ್ದಾರೆ. ಇತ್ತೀಚೆಗೆ ಮೋಹಕ ತಾರೆ ರಮ್ಯಾ ಕೂಡ ಸಾಥ್ ನೀಡಿದ ವೀಡಿಯೋ ಟೀಸರ್ ಸಖತ್ ವೈರಲ್ ಆಗಿ ಗಮನ ಸೆಳೆದಿತ್ತು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಸುದೀಪ್, ರಮ್ಯಾ ಕೂಡ ಈ ಸಿನಿಮಾಗೆ ಸಾಥ್ ನೀಡಿದ್ದಾರೆ, ಚಿತ್ರದ ವಿಭಿನ್ನ ಪ್ರಮೋಷನ್ ಟೀಸರ್ ನಲ್ಲಿ ಅಭಿನಯಿಸಿದ್ದಾರೆ. ಆ ಸಾಲಿಗೆ ಅಜನೀಶ್ ಲೋಕನಾಥ್ ಸೇರ್ಪಡೆಯಾಗಿದ್ದಾರೆ. ಈ ಚಿತ್ರದ ಸಂಗೀತ ನಿರ್ದೇಶನ ಕೂಡ ಇವರದ್ದೇ ಆಗಿದೆ.

ವರುಣ್ ಸ್ಟುಡಿಯೋಸ್ ಹಾಗೂ ಪ್ರಜ್ವಲ್ ಬಿ. ಪಿ ಅವರ ‘ಗುಲ್ ಮೋಹರ್ ಫಿಲಂಸ್’ ಬ್ಯಾನರ್ ನಡಿ ನಿರ್ಮಾಣವಾಗಿರುವ ಮೊದಲ ಸಿನಿಮಾವಿದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಶೀರ್ವಾದದೊಂದಿಗೆ ಆರಂಭವಾದ ಈ ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಯೂತ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಹಲವು ರಂಗಭೂಮಿ ಪ್ರತಿಭೆಗಳು ನಟಿಸಿದ್ದಾರೆ. ಇವರ ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್ ನಟರ ಗೆಸ್ಟ್ ಅಪಿಯರೆನ್ಸ್ ಕೂಡ ಚಿತ್ರದಲ್ಲಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ಜನವರಿಯಲ್ಲಿ ಸಿನಿಮಾ ತೆರೆಗೆ ತರಲು ಪ್ಲ್ಯಾನ್ ಮಾಡಿಕೊಂಡಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಚಿತ್ರಕ್ಕಿದೆ.

ಗಂಧದಗುಡಿ ಚಿತ್ರತಂಡದಿಂದ ಕನ್ನಡಿಗರಿಗೆ ಸಿಹಿ ಸುದ್ದಿ!: ನಾಳೆಯಿಂದ ಗಂಧದಗುಡಿ ರಿಯಾಯಿತಿ ಪ್ರದರ್ಶನ
ಬೆಂಗಳೂರು: ಕರ್ನಾಟಕ ರತ್ನ ಡಾ ಪುನೀತ್‌ ರಾಜಕುಮಾರ್‌ ಅಭಿನಯನದ ʼಗಂಧದಗುಡಿ ಸಿನಿಮಾವನ್ನು ನಾಳೆಯಿಂದ ಗುರುವಾರದ ವರೆಗೆ ರಿಯಾಯಿತಿ ದರದಲ್ಲಿ ಟಾಕೀಸುಗಳಲ್ಲಿ ಕನ್ನಡಿಗರು ನೋಡಬಹುದಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ʼನಾನು ಹಾಗೂ ಚಿತ್ರತಂಡ ಚರ್ಚಿಸಿ ತರಕರು ಹಾಗೂ ಪ್ರದರ್ಶಕರ ಸಹಕಾರದೊಂದಿಗೆ, ʼಗಂಧದಗುಡಿʼ ಸಿನಿಮಾವನ್ನು ದಿನಾಂಕ 7-11-2022 ರಿಂದ 10-11-2022ರ ವರೆಗೆ ರಿಯಾಯಿತಿ ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆʼ ಎಂದು ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ದಿನದ ಸಿಂಗಲ್‌ ಸ್ಕ್ರೀನ್‌ ಥೀಯೇಟರ್‌ಗಳಲ್ಲಿ ರೂ. 56 ದರದಲ್ಲಿ ಹಾಗೂ ಮಲ್ಟಿಪ್ಲೆಕ್ಸ್‌ ಗಳಲ್ಲಿ 112 ರೂ. ದರದಲ್ಲಿ ರಾಜ್ಯದಾದ್ಯಂತ ಗಂಧದಗುಡಿ ಸಿನಿಮಾ ಪ್ರದರ್ಶನಗೊಳ್ಳಲಿದೆ.

ʼಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿಯ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಪುನೀತ್‌ ಅವರ ಹಂಬಲ ಈ ಸಿನಿಮಾ ರೂಪಗೊಳ್ಳಲು ಕಾರಣವಾಗಿದ್ದು, ʼಗಂಧದಗುಡಿʼ ಸಿನಿಮಾವನ್ನು ಎಲ್ಲಾ ವಯಸ್ಸಿನವರು ಅದರಲ್ಲೂ ಮಕ್ಕಳು ನೋಡಬೇಕೆಂಬುವುದು ಪುನೀತ್‌ ರಾಜಕುಮಾರ್‌ ಅವರ ಆಸೆಯಾಗಿತ್ತುʼ ಎಂದು ಆಶ್ವಿನಿ ಪುನೀತ್‌ ರಾಜಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಂಗೋಲಿ ಚಿತ್ರ ಬಿಡಿಸಿ ಅಪ್ಪುಗೆ ಗೌರವ ಅರ್ಪಿಸಿದ ದಿನೇಶ್ ಚಿಲ್ಲಾಳ
ಹುಬ್ಬಳ್ಳಿ : ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಪುಣ್ಯ ಸ್ಮರಣೆ ಮತ್ತು ಗಂಧದಗುಡಿ ಬಿಡುಗಡೆಯ ಅಂಗವಾಗಿ  ಇಂದು ಹುಬ್ಬಳ್ಳಿಯ ಅರ್ಬನ್ ಓಯಾಸಿಸ್ ಮಾಲ್ನಲ್ಲಿ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಲರ್ ಮೈ ಸಿಟಿ ಸಂಸ್ಥಾಪಕರಾದ ಕಿರಣ್ ಉಪ್ಪಾರ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮದಲ್ಲಿ ಖ್ಯಾತ ರಂಗೋಲಿ ಚಿತ್ರ ಕಲಾವಿದ ದಿನೇಶ್ ಚಿಲ್ಲಾಳರವರು ಪುನೀತ್ ರಾಜಕುಮಾರ್ ಅವರನ್ನು ರಂಗೋಲಿಯಲ್ಲಿ ಚಿತ್ರ ಬಿಡಿಸಿ ಗೌರವವನ್ನು ಅರ್ಪಿಸಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಸುರೇಶ್ ಗೋಕಾಕ್ ಅವರು ಕಲಾವಿದ ದಿನೇಶ್ ಚಿಲ್ಲಾಳ ಅವರಿಗೆ ಸನ್ಮಾನಿಸಿ ಶುಭ ಹಾರೈಸಿದರು.

ಕಾರ್ಯಕ್ರಮಲ್ಲಿ ಕಲರ್ ಮೈ ಸಿಟಿ ತಂಡದ ಸದಸ್ಯರಾದ ನವೀನ್ ಅತ್ತಿಬೆಳಗಲ್, ಶಿವಪ್ರಸಾದ್ ಅನ್ವೇರಿ, ಸಾಗರ್, ಬಳ್ಳಾರಿ ಪರಶುರಾಮ್, ಮಂಜುನಾಥ್, ಶಾಬಾದ್ ಮತ್ತಿತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಚಿತ್ರಮಂದಿರದ ಎಲ್ಲಾ ಟಿಕೆಟಗಳನ್ನು ಕೊಂಡು ಗಂಧದಗುಡಿ ನೋಡಿದ ಇಬ್ಬರು ಅಪ್ಪು ಅಭಿಮಾನಿಗಳು
ಬೆಂಗಳೂರು: ಬಹುದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಕರ್ನಾಟಕ ರತ್ನ ಡಾ. ಪುನೀತ್‌ ರಾಜ್ ಕುಮಾರ್‌ ಅವರ ಕೊನೆಯ ಅಭಿನಯದ ʼಗಂಧದ ಗುಡಿʼ ಚಿತ್ರ ಇಂದು ರಾಜ್ಯದಾದ್ಯಂತ ಇಂದು ಬಿಡುಗಡೆಯಾಗಿದ್ದು, ಎಲ್ಲೆಡೆ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಅಭಿಮಾನಿಗಳು ಇಡೀ ಚಿತ್ರಮಂದಿರದ ಟಿಕೆಟ್‌ಗಳನ್ನು ಖರೀದಿಸಿ ಇಬ್ಬರೇ ಸಿನೆಮಾ ನೋಡಿ ಅಪ್ಪು ಅಭಿನಯವನ್ನು ಆನಂದಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಇಂದು ಚಿತ್ರಮಂದಿರಗಳಲ್ಲಿ ಸುಮಾರು 250 ಸ್ಕ್ರೀನ್‌ಗಳಲ್ಲಿ ಗಂಧದ ಗುಡಿ ಬಿಡುಗಡೆಯಾಗಿದ್ದು, ಬೆಳಗ್ಗೆ 6 ಗಂಟೆಯಿಂದಲೇ ಅಪ್ಪು ಅಭೀಮಾನಿಗಳ ಅಬ್ಬರ ಶುರುವಾಗಿದೆ. ಎಲ್ಲಾ ಚಿತ್ರಮಂದಿರಗಳೂ ಹೌಸ್‌ಫುಲ್‌ ಆಗಿವೆ. ಈಗಿರುವಾಗ ಅಪ್ಪು ಅವರ ಇಬ್ಬರು ಅಭಿಮಾನಿಗಳು ಇಡೀ ಚಿತ್ರಮಂದಿರದ ಎಲ್ಲಾ ಸೀಟ್ ಗಳ ಟಿಕೆಟ್‌ಗಳನ್ನು ಕೊಂಡು ಇಬ್ಬರೇ ಕೂತು ಸಿನೆಮಾ ವೀಕ್ಷಿಸಿದ್ದಾರೆ. ಗಂಧದಗುಡಿ ಚಿತ್ರದಲ್ಲಿ ಅಪ್ಪು ತೋರಿಸಿರುವ ಕರ್ನಾಟಕದ ಪರಿಸರದ ಸೌಂದರ್ಯವನ್ನು ಸವಿದಿದ್ದಾರೆ.

ಅಪ್ಪು ಅವರ ಮೇಲಿನ ಅಭಿಮಾನಿದಿಂದ ಇಡೀ ಚಿತ್ರಮಂದಿರವನ್ನೇ ಕೊಂಡು ಇಬ್ಬರೇ ಸಿನೆಮಾ ವೀಕ್ಷಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್‌ ಆಗುತ್ತಿದೆ.

‘ಗಂಧದ ಗುಡಿ’ ಮುಂದಿನ ಪೀಳಿಗೆಗೆ ದಂತಕತೆಯಾಗಲಿದೆ: ಸಿಎಂ ಬೊಮ್ಮಾಯಿ
ಬೆಂಗಳೂರು: ನಿನ್ನೆ ಪುನೀತ್ ರಾಜ್ ಕುಮಾರ್ ಅವರ ‘ಗಂಧದ ಗುಡಿ’ ಚಿತ್ರ ಬಿಡುಗಡೆಯ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ ಅಪ್ಪು ಅವರಂತೆ ಈ ಸಿನೆಮಾ ಮುಂದಿನ ಪೀಳಿಗೆಗೆ ಒಂದು ದಂತಕಥೆಯಾಗಲಿದೆ ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡ ನಾಡು ಮತ್ತು ಗಂಧದ ಗುಡಿಯನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಅಂತಹ ವಿಚಾರದೊಂದಿಗೆ, ಕಾಡು, ನಿಸರ್ಗ, ಪ್ರಾಣಿಗಳನ್ನು ಇಟ್ಟುಕೊಂಡು ಅಪ್ಪು ಮಾಡಿದ ಈ ಸಿನೆಮಾ ಅತ್ಯಂತ ಪ್ರಸ್ತುತವಾಗಿದೆ. ನಿಸರ್ಗವನ್ನು ಮುಂದಿನ ಜನಾಂಗಕ್ಕೆ ಬಿಟ್ಟು ಹೋಗುವ ಅವಶ್ಯಕತೆ ಇದೆ. ಇಲ್ಲವಾದರೆ ಮುಂದಿನ ಜನಾಂಗದ ಭವಿಷ್ಯದಲ್ಲಿ ಕಳ್ಳತನ ಮಾಡಿದಂತೆ ಎಂದು ಅಭಿಪ್ರಾಯ ಪಟ್ಟರು.

ಅಪ್ಪು ನಮ್ಮ ಜೊತೆಗೆ ಇದ್ದಾರೆ. ಪ್ರತಿ ಕ್ಷಣ ನಮ್ಮನ್ನು ನೋಡ್ತಾ ಇರ್ತಾರೆ. ಇರುವಾಗ ಹೊಗಳುವುದು ಸಹಜ. ಇಲ್ಲದೇ ಇರುವಾಗ ನೆನಪು ಮಾಡಿಕೊಳ್ಳುವುದು ದೈವದ ಆಶೀರ್ವಾದ ಇದ್ದರೆ ಮಾತ್ರ ಸಾಧ್ಯ. ಅಂತಹ ಆಶೀರ್ವಾದ ಅಪ್ಪು ಮೇಲಿತ್ತು ಎಂದು ಮುಖ್ಯಮಂತ್ರಿ ಬೊಮ್ಮಾಯಿ ನುಡಿದರು.

ರಾಜ್ ಕುಮಾರ್ ಅವರ ಎಲ್ಲ ಗುಣಧರ್ಮಗಳನ್ನು ನೂರಕ್ಕೆ ನೂರರಷ್ಟು ಹೊಂದಿದವರು ಪುನೀತ್ ರಾಜಕುಮಾರ್, ಎಷ್ಟೇ ದೊಡ್ಡ ಸ್ಟಾರ್ ಆದರೂ ನಯ, ವಿನಯವನ್ನು ಒಂದು ಕ್ಷಣವೂ ಮರೆತಿರಲಿಲ್ಲ. ಅಪ್ಪು ಅತ್ಯಂತ ಸಣ್ಣ ವಯಸ್ಸಿನಲ್ಲೇ ಬಾಲನಟನಾಗಿ ದೊಡ್ಡ ಹೆಸರು ಮಾಡಿದಾಗ ಸಂತೋಷವಾಗಿತ್ತು. ಆದರೆ ಸಣ್ಣ ವಯಸ್ಸಿನಲ್ಲೇ ನಮ್ಮನ್ನು ಬಿಟ್ಟು ಹೋದಾಗ ದುಃಖ ತಡೆಯಲು ಆಗಲಿಲ್ಲ. ಶ್ರೇಷ್ಠ ವ್ಯಕ್ತಿಗಳು ಅಲ್ಪಾಯುಗಳು. ಅಮೂಲ್ಯವಾದುದು ಸ್ವಲ್ಪವೇ ಇರುತ್ತದೆ (Anything precious is very little) ಎಂದರು.

ಅಪ್ಪು ನೆನಪನ್ನು ಇಷ್ಟು ವಿಜೃಂಭಣೆಯಿಂದ ಆಯೋಜಿಸಿರುವ ಡಾ. ರಾಜ್ ಕುಮಾರ್ ಕುಟುಂಬದ ಶ್ರೀಮಂತಿಕೆಯನ್ನು ಕೊಂಡಾಡಿದ ಮುಖ್ಯಮಂತ್ರಿಗಳು ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರನ್ನು ಅಭಿನಂದಿಸಿದರು.

ʼಇದೇ ನವೆಂಬರ್ 1 ರಂದು ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕದ ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದುʼ. ಅಭಿಮಾನಿಗಳು, ನಾಡಿನ ಜನತೆ ಕಾರ್ಯಕ್ರಮದಲ್ಲಿ ಭಾಗ ವಹಿಸುವಂತೆ ಆಹ್ವಾನ ನೀಡಿದರು.

ಅಪ್ಪು ಮೇಲಿನ ಅಭಿಮಾನದ ಕುರಿತು ತಮ್ಮ ಅನುಭವ ಹಂಚಿಕೊಂಡ ಮುಖ್ಯಮಂತ್ರಿಗಳು ತಮ್ಮ ಔರಾದ್ ಪ್ರವಾಸ ಸಂದರ್ಭದಲ್ಲಿ ಯುವಕರು ಅಪ್ಪು ಭಾವಚಿತ್ರದೊಂದಿಗೆ ಬಂದು ತಮ್ಮೊಡನೆ ಚಿತ್ರ ತೆಗೆಸಿಕೊಳ್ಳಲು ಮುಂದಾಗಿದ್ದನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್, ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜ್ ಕುಮಾರ್, ಸಚಿವರಾದ ಮುರುಗೇಶ್ ನಿರಾಣಿ, ಡಾ. ಸಿ.ಎನ್. ಅಶ್ವತ್ಥನಾರಾಯಣ, ಕೆ.ಸಿ. ನಾರಾಯಣಗೌಡ, ಆನಂದ್ ಸಿಂಗ್, ಶಾಸಕ ರಾಜೂಗೌಡ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.

ಫಿಲಂಫೇರ್‌ 2022 ಪ್ರಶಸ್ತಿ ಘೋಷಣೆ: ಪುನೀತ್ ರಾಜ್‍ಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ
ಬಹುನಿರೀಕ್ಷಿತ ಫಿಲ್ಮ್ ಫೇರ್ ಪ್ರಶಸ್ತಿ ಬೆಂಗಳೂರಿನಲ್ಲಿ ನಡೆದಿದೆ. ನಿನ್ನೆ ಭಾನುವಾರ ನಡೆದ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. 67ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಬಹಳ ದಿನಗಳ ಬಳಿಕ ಬೆಂಗಳೂರಿನಲ್ಲಿ ನಡೆದಿದ್ದು ವಿಶೇಷವಾಗಿತ್ತು. ಮತ್ತೊಂದು ವಿಷಯವೇನೆಂದರೆ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರತಿಷ್ಟಿತ ಫಿಲಂಪೇರ್‌ ಸೌತ್‌ 2022 ಪ್ರಶಸ್ತಿಗಳು ಘೋಷಣೆಯಾಗಿವೆ. ಕನ್ನಡದ ವಿಭಾಗದಲ್ಲಿ ಆಕ್ಟ್‌ 1978 ಚಿತ್ರಕ್ಕೆ ಅತ್ಯುತ್ತಮ ಪ್ರಶಸ್ತಿ, ರಾಜ್‌ ಬಿ ಶೆಟ್ಟಿ ಅವರಿಗೆ ಗರುಡ ಗಮನ ವೃಷಭ ವಾಹನ ಸಿನಿಮಾಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಬಡವಾ ರ್ಯಾಸ್ಕರಲ್‌ ಸಿನಿಮಾದ ನಟನೆಗಾಗಿ ಡಾಲಿ ಧನಂಜಯ್‌ ಅವರಿಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ, ಆಕ್ಟ್‌ 1978 ಸಿನಿಮಾದ ನಟನೆಗಾಗಿ ಯಜ್ಞಾ ಶೆಟ್ಟಿ ಅವರಿಗೆ ಅತ್ಯುತ್ತಮ ನಾಯಕಿ ನಟಿ ಪ್ರಶಸ್ತಿ, ಅದೇ ಸಿನಿಮಾದ ನಟನೆಗಾಗಿ ಬಿ. ಸುರೇಶ್‌ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ರತ್ನನ್‌ ಪ್ರಪಂಚ ಸಿನಿಮಾದಲ್ಲಿನ ನಟೆನೆಗಾಗಿ ಉಮಾಶ್ರೀ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರೆತಿವೆ.

ಅಲ್ಲದೇ ವಾಸುಕಿ ವೈಭವ್‌ ಅವರಿಗೆ ಅತ್ಯುತ್ತಮ ಮ್ಯೂಸಿಕ್‌ ಅಲ್ಬಂ ಪ್ರಶಸ್ತಿ (ಬಡವಾ ರ್ಯಾಸ್ಕಲ್), ಜಯಂತ್‌ ಕಾಯ್ಕಿಣಿ ಅವರಿಗೆ ಅತ್ಯುತ್ತಮ ಗೀತ ರಚನೆ (ಲಿರಿಕ್ಸ್) ಪ್ರಶಸ್ತಿ (ತೇಲದು ಮುಗಿಲೇ – ಆಕ್ಟ್‌ 1978), ರಘು ದೀಕ್ಷಿತ್‌ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ (ಮಳೆಯೇ ಮಳೆಯೇ ಮಳೆಯೇ- ನಿನ್ನ ಸನಿಹಕೆ), ಅನುರಾಧಾ ಭಟ್‌ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ದೊರೆತಿವೆ. ಹಾಗೆಯೇ ವಿಮರ್ಶಕರ ಅತ್ಯುತ್ತಮ ನಟಿಯಾಗಿ ಅಮೃತಾ ಅಯ್ಯಂಗಾರ್‌, ಮತ್ತು ಮಿಲನಾ ನಾಗರಾಜ್‌, ವಿಮರ್ಶಕರ ಅತ್ಯುತ್ತಮ ನಟರಾಗಿ ಡಾರ್ಲಿಂಗ್‌ ಕೃಷ್ಣ (ಲವ್‌ ಮಾಕ್ಟೇಲ್) ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಕೋರಿಯೋಗ್ರಫಿ ಪ್ರಶಸ್ತಿಗೆ ಯುವರತ್ನ ಸಿನಿಮಾದ ನೃತ್ಯ ಸಂಯೋಜನೆಗಾಗಿ ಜಾನಿ ಮಾಸ್ಟರ್‌ ಪ್ರಶಸ್ತಿ ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ರತ್ನನ್‌ ಪ್ರಪಂಚ ಸಿನಿಮಾಕ್ಕಾಗಿ ಶ್ರೀಷ ಕೂದುವಳ್ಳಿ ಪಡೆದಿದ್ದಾರೆ. ಅತ್ಯುತ್ತಮ ಡೆಬ್ಯು ಫೀಮೇಲ್‌ ಪ್ರಶಸ್ತಿಯನ್ನು ಧನ್ಯ ರಾಮ್‌ಕುಮಾರ್‌ ನಿನ್ನ ಸನಿಹಕೆ ಚಿತ್ರಕ್ಕೆ ಪಡೆದಿದ್ದಾರೆ.

ಈ ಪ್ರಶಸ್ತಿಗಳನ್ನು ಕಾಮಾರ್‌ ಫ್ಯಾಕ್ಟರಿ ಸಹಯೋಗದಲ್ಲಿ ನೆನ್ನೆ ತಡರಾತ್ರಿಯವರೆಗೆ ಬೆಂಗಳೂರಿನಲ್ಲಿ ನಡೆದ 67ನೇ ಫಿಲಂಫೇರ್‌ ಅವಾರ್ಡ್ಸ್‌ 2022 ಕಾರ್ಯಕ್ರಮದಲ್ಲಿ ಘೋಷಿಸಲಾಯ್ತು. ಫಿಲಂಫೇರ್‌ ಸೌತ್‌ ಪ್ರಶಸ್ತಿಗಳನ್ನು ದಕ್ಷಿಣ ಭಾರತದ ಕನ್ನಡ, ತೆಲುಗು ತಮಿಳು ಮತ್ತು ಮಲಯಾಳಂ ಸಿನಿಮಾಗಳಿಗೆ ನೀಡಲಾಗುತ್ತದೆ. ಈ ಬಾರಿ 2020 ಮತ್ತು 2021ರಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ಮತ್ತು ಪ್ರತಿ ಭಾಷೆಯ ಸಿನಿಮಾಗಳಿಗೆ ನೀಡಲಾಗಿದೆ.

ದಕ್ಷಿಣ ಭಾರತದ ಸಿನಿಮಾಗಳನ್ನು ಮತ್ತು ಸಿನಿರಂಗದ ಪ್ರತಿಭೆಗಳನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು 1976ರಿಂದ ಫಿಲಂಫೇರ್‌ ಮ್ಯಾಗನೀನ್‌ ವತಿಯಿಂದ ನೀಡಲಾಗುತ್ತದೆ. ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಪೂಜಾ ಹೆಗ್ಡೆ, ಮೃಣಾಲ್‌ ಥಾಕೂರ್‌, ಕೃತಿ ಶೆಟ್ಟಿ, ಸಾನಿಯಾ ಐಯ್ಯಪ್ಪನ್‌ ಮತ್ತು ಐಂದ್ರಿತಾ ರೇ ಅವರ ನೃತ್ಯ ಪ್ರದರ್ಶನಗಳು ಸಭಿಕರ ಮನಸೂರೆಕೊಂಡವು.
ಕನ್ನಡದಂತೆ ತೆಲುಗು ಭಾಷೆಯಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪುಷ್ಪಾ- ದ ರೈಸ್‌ ಸಿನಿಮಾದ ಪಾಲಾಗಿದೆ. ಇದೇ ಸಿನಿಮಾದ ನಿರ್ದೇಶನಕ್ಕಾಗಿ ಸುಕುಮಾರ್‌ ಬಂಡರೆಡ್ಡಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ ಅಲ್ಲು ಅರ್ಜುನ್‌ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಲವ್‌ ಸ್ಟೋರಿ ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ಸಾಯಿ ಪಲ್ಲವಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಇನ್ನು ತಮಿಳಿನಲ್ಲಿ ಬಹುಚರ್ಚಿತ ಜೈ ಭೀಮ್‌ ಸಿನಿಮಾ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ಸೂರರಾಯಿ ಪೊಟ್ಟೂರು ಸಿನಿಮಾ ನಿರ್ದೇಶಕಿ ಸುಧಾ ಕೊಂಗಾರಾ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿಯನ್ನೂ ಅದೇ ಚಿತ್ರದಲ್ಲಿ ನಾಯಕ ಪಾತ್ರದ ಅಭಿನಯಕ್ಕಾಗಿ ಸೂರ್ಯ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಜೈ ಭೀಮ್‌ ಸಿನಿಮಾದಲ್ಲಿನ ನಟನೆಗಾಗಿ ಲಿಜ್ಮೋಲ್‌ ಜೋಸ್‌ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಮಲಯಾಳಂ ವಿಭಾಗದಲ್ಲಿ ಅಯ್ಯಪ್ಪನುಂ ಕೋಶಿಯುಂ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸಿ ಪಡೆದುಕೊಂಡಿದೆ. ತಿಂಕಳಾಚ್ಚಾ ನಿಶ್ಚಯಂ ಸಿನಿಮಾ ನಿರ್ದೇಶಕ ಸೆನ್ನಾ ಹೆಗ್ಡೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಬಿಜು ಮೆನನ್ ಅಯ್ಯಪ್ಪನುಂ ಕೋಶಿಯುಂ ಸಿನಿಮಾ ನಟನೆಗಾಗಿ ಪಡೆದಿದ್ದಾರಲ್ಲದೆ ನಿಮಿಷಾ ಸಜಯನ್‌ ಅವರು ದ ಗ್ರೇಟ್‌ ಇಂಡಿಯನ್‌ ಸಿನಿಮಾದಲ್ಲಿನ ತಮ್ಮ ನಟನೆಗೆ ಅತ್ಯುತ್ತಮ ನಾಯಕ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಬಂದ ಪ್ರಶಸ್ತಿಗಳು

ಉತ್ತಮ ನಟ -ಧನಂಜಯ ( ಬಡವ ರಾಸ್ಕಲ್ )
ಉತ್ತಮ ನಟಿ -ಯಜ್ಞಾ ಶೆಟ್ಟಿ ( ಆಕ್ಟ್ 1978 )
ಉತ್ತಮ ಸಿನಿಮಾ- ಆಕ್ಟ್ 1978
ಉತ್ತಮ ನಿರ್ದೇಶಕ-ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ )
ಉತ್ತಮ ಪೋಷಕ ನಟ- ಬಿ ಸುರೇಶ ( ಆಕ್ಟ್ 1978 )
ಉತ್ತಮ ಪೋಷಕ ನಟಿ-ಉಮಾಶ್ರೀ ( ರತ್ನನ್ ಪ್ರಪಂಚ )
ಉತ್ತಮ ಮ್ಯೂಸಿಕ್ ಆಲ್ಬಮ್ -ವಾಸುಕಿ ವೈಭವ್ (ಬಡವ ರಾಸ್ಕಲ್ )
ಉತ್ತಮ ಸಾಹಿತ್ಯ-ಜಯಂತ್ ಕಾಯ್ಕಿಣಿ (ತೇಲಾಡು ಮುಗಿಲೆ- ಆಕ್ಟ್ 1978 )
ಉತ್ತಮ ಹಿನ್ನಲೆಗಾಯಕ-ರಘು ದೀಕ್ಷಿತ್ (ಮಳೆ ಮಳೆಯೇ ಹಾಡು) ( ನಿನ್ನ ಸನಿಹಕೆ )
ಉತ್ತಮ ಹಿನ್ನಲೆಗಾಯಕಿ-ಅನುರಾಧಾ ಭಟ್ ( ಧೀರ ಸಮ್ಮೋಹಗಾರ ) ಬಿಚ್ಚುಗತ್ತಿ ಸಿನಿಮಾ
ಉತ್ತಮ ಛಾಯಾಗ್ರಹಣ-ಶ್ರೀಶ ಕುಡುವಲ್ಲಿ ( ರತ್ನನ್ ಪ್ರಪಂಚ )
ಉತ್ತಮ ಕೊರಿಯೋಗ್ರಫಿ-ಜಾನಿ ಮಾಸ್ಟರ್ ( ಯುವರತ್ನ )
ಜೀವಮಾನ ಸಾಧನೆ ಪ್ರಶಸ್ತಿ-ಪುನೀತ್ ರಾಜ್‌ಕುಮಾರ್

ಅಪ್ಪು ಸಿನಿಮಾ ನೋಡಿದವನೇ ಲಕ್ಕಿ ಮ್ಯಾನ್
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ನಂತರ ಬಿಡುಗಡೆ ಆಗುತ್ತಿರುವ ಎರಡನೇ ಚಿತ್ರ ಲಕ್ಕಿ ಮ್ಯಾನ್ ನಿನ್ನೆ ಅದ್ಭುತ ಓಪನಿಂಗ್ ಕಂಡಿದೆ. ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ ಆದರೂ ಈ ಚಿತ್ರ ಪುನೀತ್ ಅವರ ಕಾರಣಕ್ಕೆ ಜನಸಾಗರವನ್ನೇ ಚಿತ್ರಮಂದಿರಕ್ಕೆ ಎಳೆದು ತರುತ್ತಿದೆ. ಈ ಅವಕಾಶ ಬಿಟ್ಟರೆ ಮತ್ತೆ ಪುನೀತ್ ಅವರನ್ನು ನೋಡಲು ಸಾಧ್ಯ ಆಗೋದು ಅವರ ಕಟ್ಟ ಕಡೆಯ ಚಿತ್ರ ಆಗಲಿರುವ ಗಂಧದಗುಡಿಯಲ್ಲಿ ಮಾತ್ರ ಅನ್ನೋದನ್ನು ಕನ್ನಡ ಸಿನಿ ಪ್ರೇಮಿಗಳು ಅರಿತಿದ್ದಾರೆ. ಹಾಗಾಗಿ, ಲಕ್ಕಿ ಮ್ಯಾನ್ ನೋಡಲು ಇಡೀ ರಾಜ್ಯದ ಕನ್ನಡ ಸಿನಿಮಾ ಪ್ರಿಯರು ಕಾದು ಕುಳಿತಿದ್ದರು.

ಈಗ ಸಿನಿಮಾ ನೋಡಿ ಬಂದ ಪ್ರೇಕ್ಷಕರು ಅತಿ ಭಾವುಕರಾಗಿ ಸಿನಿಮಾ ಮಾತನಾಡುತ್ತಿರುವುದು ಎಲ್ಲೆಡೆ ಕಾಣಬರುತ್ತಿದೆ. ತಮಿಳು ಚಿತ್ರದ ರಿಮೇಕ್ ಆಗಿರುವ ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ಪ್ರಭುದೇವ ಅವರು ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರಿಗಂತ ಹೆಚ್ಚು ಎಲ್ಲರಿಗೂ ಇಷ್ಟ ಆಗುತ್ತಿರುವುದು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿರುವ ಪುನೀತ್. ಈಗ ಬಾರದ ಊರಿನ ಅತಿಥಿಯಾಗಿ ಹೋಗಿರುವ ಪುನೀತ್ ಅವರನ್ನು ತೆರೆಯ ಮೇಲೆ ಮತ್ತೆ ನೋಡಿ ಪ್ರೇಕ್ಷಕರು ಮನಸ್ಸು ಮತ್ತು ಕಣ್ಣು ಎರಡನ್ನೂ ತುಂಬಿಕೊಳ್ಳುತ್ತಿದ್ದಾರೆ.

ಈ ಚಿತ್ರದಲ್ಲಿ ಅಪ್ಪು ದೇವರ ಪಾತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಅಭಿಮಾನಿಗಳ ಭಾವುಕತೆ ಇನ್ನಷ್ಟು ಹೆಚ್ಚಾಗಿದೆ. ನಮ್ಮನ್ನೆಲ್ಲಾ ಅಗಲಿ ದೇವರಾಗಿ ಹೋಗಿರುವ ಅಪ್ಪು, ಮತ್ತೆ ದೇವರಾಗಿ ನಮ್ಮ ಮುಂದೆ ಬಂದಿದ್ದಾರೆ ಅನ್ನೋದೇ ಸಿನಿಮಾ ನೋಡಿದ ಎಲ್ಲ ಪ್ರೇಕ್ಷಕರ ಭಾವುಕ ಮಾತು. ಕಣ್ಣಂಚಿನಲ್ಲಿ ನೀರಿಟ್ಟುಕೊಂಡೇ ಚಿತ್ರಮಂದಿರಗಳಿಂದ ಹೊರಬರುತ್ತಿರೋ ಪ್ರೇಕ್ಷಕರು, ಅಪ್ಪು ಅವರನ್ನು ತೆರೆ ಮೇಲೆ ನೋಡಿ ರೋಮಾಂಚಿತರಾಗಿದ್ದಾರೆ. ಇನ್ನು ಸಿನಿಮಾ ಬಗ್ಗೆ ಕೂಡ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ ಅಪ್ಪು ಜೊತೆ ಈ ಸಿನಿಮಾ ಮಾಡಿ ಡಾರ್ಲಿಂಗ್ ಕೃಷ್ಣ ಅವರು ಲಕ್ಕಿ ಮ್ಯಾನ್ ಎನಿಸಿಕೊಂಡಿದ್ದರೂ, ಈ ಚಿತ್ರ ನೋಡಿದ ನಾವೇ ಲಕ್ಕಿ ಮ್ಯಾನ್ ಅನ್ನೋದು ಅಪ್ಪು ಅಭಿಮಾನಿಗಳನ್ನು ಸೇರಿದಂತೆ ಎಲ್ಲ ಕನ್ನಡ ಸಿನಿಮಾ ಪ್ರೇಕ್ಷಕರ ಅನುಭವ.

ಪಿ ಆರ್ ಮತ್ತು ಪಿ ಆರ್ ಪುನೀತ್ ಹೆಸರಲ್ಲಿ ಪ್ರಕಾಶ್ ಸರ್ಪ್ರೈಸ್
ಕರ್ನಾಟಕ ಸರ್ಕಾರ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನವೆಂಬರ್ 1 ರಂದು ದಿನಾಂಕ ಫಿಕ್ಸ್ ಮಾಡುತ್ತಿದ್ದಂತೆ ಪುನೀತ್ ಅವರ ಬಗ್ಗೆ ಇನ್ನೊಂದು ಸಂತಸದ ಸುದ್ದಿ ಬಂದಿದೆ.

‘ಪುನೀತ್ ರಾಜ್‌ಕುಮಾರ್ ಕನ್ನಡ ನಾಡಿನ ಕಣ್ಮಣಿ. ಕೇವಲ ಕರ್ನಾಟಕ ಮಾತ್ರವಲ್ಲ ವಿಶ್ವಾದ್ಯಂತ ತನ್ನ ಸಜ್ಜನಿಕೆ, ಸಮಾಜಸೇವೆ, ಒಳ್ಳೆಯತನ ಮತ್ತು ಅಭಿನಯದಿಂದ ಹೆಸರು ಮಾಡಿರುವ ಪುನೀತ್, ಎಲ್ಲರ ಮನದಲ್ಲೂ ಶಾಶ್ವತವಾಗಿ ನೆಲೆಸಿದ್ದಾರೆ. ಕರ್ನಾಟಕದ ಆದ್ಯಂತ ಅವರ ಅಭಿಮಾನಿ ಸಂಘಗಳು, ಅವರ ಪೋಸ್ಟರುಗಳು, ಅವರ ಹೆಸರಿನ ರಸ್ತೆ, ಸರ್ಕಲ್ಲುಗಳೇ ಪುನೀತ್ ಹಿರಿಮೆಯನ್ನು ಸಾರುತ್ತಿವೆ’

ಹೀಗಂತ ಹೇಳ್ತಾ ಇರೋದು ಯಾರು ಗೊತ್ತೇ?  ಪುನೀತ್ ರಾಜ್ ಕುಮಾರ್ ಅಂದ್ರೆ, ಪಿಆರ್ ಅಂತ ಅಂದುಕೊಳ್ಳೋದಾದ್ರೆ, ಪ್ರಕಾಶ್ ರೈ ಅಂದ್ರೂ ಕೂಡಾ ಪಿ ಆರ್. ಹೌದು ಶಾರ್ಟ್ ಫಾರ್ಮ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರಂತೆ ಒಂದೇ ರೀತಿಯ ಅಕ್ಷರಗಳುಳ್ಳ ಪ್ರಕಾಶ್ ರೈ ಅವರ ಲಾರ್ಜ್ ಹಾರ್ಟ್ ಗೆ ಉದಾಹರಣೆ ಈ ಸುದ್ದಿ.

ಪುನೀತ್ ನೆನಪಿನಲ್ಲಿ ಏನಾದರೂ ಸಮಾಜಸೇವಾ ಕಾರ್ಯ ಮಾಡಬೇಕೆಂಬುದು ಪ್ರಕಾಶ್ ರಾಜ್ ಫೌಂಡೇಶನ್ ಕನಸು. ಹಲವು ದಿನಗಳ ಈ ಆಲೋಚನೆ ಈಗ ಕಾರ್ಯರೂಪಕ್ಕೆ ಬರುತ್ತಿದೆ. ಇದು ಪುನೀತ್ ಹಾಕಿಕೊಟ್ಟ ಹಾದಿಯಲ್ಲಿ ಸಾಗುವ ಸಣ್ಣ ಪ್ರಯತ್ನ ಮತ್ತು ಪುನೀತ್ ಅವರ ಅಭಿನಯದ ಅನೇಕ ಚಿತ್ರಗಳಲ್ಲಿ ನಟಿಸಿರುವ ನಾನು ಸಲ್ಲಿಸುವ ಗೌರವ ಎನ್ನುತ್ತಾರೆ ಪ್ರಕಾಶ್ ರೈ.

ಅಂದಹಾಗೆ, ಈ ಕುರಿತ ವಿವರಗಳನ್ನು ನೀಡಲು ಮೈಸೂರಿನ ಮಿಷನ್ ಹಾಸ್ಪಿಟಲ್ ಆವರಣದಲ್ಲಿ 6 ಆಗಸ್ಟ್, 2022ರ ಶನಿವಾರ ಪೂರ್ವಾಹ್ನ 11 ಗಂಟೆಗೆ ಟೈಮ್ ಫಿಕ್ಸ್ ಮಾಡಿದ್ದಾರೆ ಪ್ರಕಾಶ್ ರೈ. ಅವರ ಜೊತೆ ನಿರ್ದೇಶಕ ಸಂತೋಷ್ ಆನಂದರಾಮ್ ಇರುತ್ತಾರೆ.

ಪುನೀತ್‌ಗೆ ನವೆಂಬರ್ 1 ರಂದು ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ
ಬೆಂಗಳೂರು: ಕನ್ನಡ ಚಿತ್ರರಂಗದ ಹೆಮ್ಮೆಯ ನಟ ದಿವಂಗತ ಡಾ. ಪುನೀತ್ ರಾಜ್‌ಕುಮಾರ್ ಅವರಿಗೆ ನವಂಬರ್ 1 ರಂದು ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.

2021 ಸೆಪ್ಟಂಬರ್ 29 ರಂದು ಹೃದಯಾಘಾತದಿಂದ ಮರಣಹೊಂದಿದ ನಟ ಪುನೀತ್ ಅವರಿಗೆ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕಳೆದ ವರ್ಷ ನವೆಂಬರ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಅಧಿಕೃತ ಟ್ವಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊAಡಿದ್ದಾರೆ.

ಕನ್ನಡ ಚಿತ್ರರಂಗದ ಮೇರುನಟ ದಿ. ಡಾ. ಪುನೀತ್ ರಾಜ್‍ಕುಮಾರ್ ಅವರಿಗೆ "ಕರ್ನಾಟಕ ರತ್ನ" ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲು ತಿರ್ಮಾನಿಸಲಾಗಿದೆ‌. #PuneethRajkumar pic.twitter.com/zAoEwOW5CG
— Basavaraj S Bommai (@BSBommai) August 5, 2022

ಡಾ.ರಾಜ್ ಮತ್ತು ಪುನೀತ್ ರಾಜ್‌ಕುಮಾರ್‌ಗೆ ಪುಷ್ಪ ನಮನ
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನವು ಶುಕ್ರವಾರ ಆರಂಭವಾಗಲಿದ್ದು, ಮುಂದಿನ 10 ದಿನಗಳಲ್ಲಿ 10-15 ಲಕ್ಷ ಜನ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ತೋಟಗಾರಿಕೆ ಉಪನಿರ್ದೇಶಕಿ (ಲಾಲ್‌ಬಾಗ್) ಕುಸುಮಾ ಜಿ. ಹೇಳಿದ್ದಾರೆ.

ಈ ಕಾರ್ಯಕ್ರಮ ಸಿದ್ಧತೆಯ ಕುರಿತು ಮಾತನಾಡಿದ ಕುಸುಮಾ, ಎರಡು ವರ್ಷಗಳ ಬಳಿಕ ನಡೆಯುತ್ತಿರುವ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ವಿದೇಶದಿಂದ ಸುಮಾರು 50 ವಿಧದ ಹೂಗಳು ಮತ್ತು ಇನ್ನೂ 50-60 ಬಗೆಯ ಸ್ಥಳಿಯ ಹೂಗಳು ಭಾಗಿಯಾಗಲಿವೆ ಎಂದು ಹೇಳಿದರು.

ಈ ಪ್ರದರ್ಶನದಲ್ಲಿ ಕನ್ನಡದ ಹೆಮ್ಮೆಯ ನಟ ಡಾ. ರಾಜ್‌ಕುಮಾರ್ ಮತ್ತು ಅವರ ಮಗ ಹಾಗೂ ನಟ ಡಾ. ಪುನೀತ್ ರಾಜ್‌ಕುಮಾರ್ ಅವರಿಗೆ ವಿಶೇಷ ಪುಷ್ಪ ನಮನ ಸಲ್ಲಿಸಲಾಗಿದೆ. ಈ ಇಬ್ಬರೂ ನಟರ ಜನಪ್ರಿಯ ಚಲನಚಿತ್ರಗಳ ಪಾತ್ರ ಪ್ರತಿಮೆಗಳನ್ನು ಸ್ಥಾಪಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಕೆಲಸದ ದಿನದಲ್ಲಿ ಪ್ರವೇಶ ದರವು 70 ರೂ. ಆಗಿರುತ್ತದೆ. ಆದರೆ ರಜಾ ದಿನಗಳಲ್ಲಿ ಈ ಹಿಂದೆ 80 ರೂ.ಗಳಿದ್ದ ಪ್ರವೇಶ ದರವನ್ನು 75 ರೂ.ಗಳಿಗೆ ಕಡಿತಗೊಳಿಸಿರುವುದಾಗಿ, ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಶಾಂತಿನಗರ ಬಸ್ ಟರ್ಮಿನಲ್ ಮತ್ತು ಜೆಸಿ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ನಿಲುಗಡೆಯು ಸೀಮಿತವಾಗಿರುವುದರಿಂದ, ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ವೀಕ್ಷಕರಿಗೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಉಪನಿರ್ದೇಶಕಿ ಕುಸುಮಾ ಜಿ. ಮನವಿ ಮಾಡಿದ್ದಾರೆ.