purushottama bilimale – Peepal Media

ಹೊಸ ಜವಾಬ್ದಾರಿಗಳನ್ನು ಸಾಹಿತ್ಯ ಪರಿಷತ್ತು ಹೊರುವುದೇ?
೨೧ನೇ ಶತಮಾನದ ಕನ್ನಡ ಕರ್ನಾಟಕ ಎದುರಿಸುತ್ತಿರುವ ಕೋಮುವಾದ ಮತ್ತು ಜಾಗತೀಕರಣ, ರಾಷ್ಟ್ರೀಯ ಶಿಕ್ಷಣ ನೀತಿ ಹಿಂದಿ ಹೇರಿಕೆ ತ್ರಿಭಾಷಾ ಸೂತ್ರ ಇತ್ಯಾದಿ ಪ್ರಶ್ನೆಗಳಿಗೆ ಕನ್ನಡದ ಪರವಾಗಿ ದನಿ ಎತ್ತಿ ನಾಯಕತ್ವ ನೀಡುವ ಅರ್ಹತೆಯನ್ನು ಸಾಹಿತ್ಯ ಪರಿಷತ್ತು ಕಳೆದು ಕೊಂಡಿದೆ. ಸರಕಾರೀ ಅಂಗಸಂಸ್ಥೆಯಾಗಿ ಬೆಳೆದಿರುವ ಅದು ಸಾಹಿತ್ಯದ ಮೂಲಭೂತ ಗುಣಗಳಿಗೆ ವ್ಯತಿರಿಕ್ತವಾದ ಕೆಲಸಗಳನ್ನು ಮಾಡುತ್ತಿದೆ… ಈ ನಿಜ ತಿಳಿದಿರುವ ಲೇಖಕರು ಗಟ್ಟಿಯಾಗಿ ಮಾತಾಡಬೇಕಾದ ಕಾಲವಿದು. ಈ ಎಲ್ಲಾ ಕಾರಣಗಳಿಂದಾಗಿ ನಮಗೆ ಉಪಯುಕ್ತವಾದ ಒಂದು ಸಾಹಿತ್ಯಿಕ –ಸಾಂಸ್ಕೃತಿಕ ಸಂಘಟನೆಯನ್ನು ಹೊಸದಾಗಿ ಕಟ್ಟಿಕೊಳ್ಳುವುದು ಇವತ್ತಿನ ಅಗತ್ಯ ಎನ್ನುವ ಸಮಾಜ ಮತ್ತು ಸಂಸ್ಕೃತಿ ಚಿಂತಕ ಪುರುಷೋತ್ತಮ ಬಿಳಿಮಲೆಯವರ ಈ ಮಹತ್ತ್ವದ ಲೇಖನ ನಿಮ್ಮ ಓದಿಗೆ

೨೦೧೪ರ ರಾಜಕೀಯ ಬದಲಾವಣೆಯ ಆನಂತರ ಭಾರತದಲ್ಲಿ ಬುದ್ಧಿಜೀವಿಗಳ ಮತ್ತು ಲೇಖಕರ ಮೇಲೆ ಆಕ್ರಮಣಗಳು ಹೆಚ್ಚಾಯಿತು. ಇದರ ಪರಿಣಾಮವೋ ಎಂಬಂತೆ ಇವತ್ತು ಸರಕಾರದ ಮುಖ್ಯ ಇಲಾಖೆಗಳಲ್ಲಿ, ಸಾರ್ವಜನಿಕ ಚರ್ಚೆಗಳಲ್ಲಿ, ಉನ್ನತ ಕುರ್ಚಿಗಳಲ್ಲಿ, ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆಗಳಲ್ಲಿ  ಬುದ್ಧಿಜೀವಿಗಳು ಮತ್ತು ಲೇಖಕರು ಕಾಣಿಸುವುದೇ ಅಪೂರ್ವವಾಗಿದೆ. ಅಲ್ಲಿ ಇಲ್ಲಿ ಕೆಲವರು ಕಂಡರೂ ಅವರ ತುಟಿಗಳು ಹೊಲಿದಂತಿರುತ್ತವೆ. ಪ್ರಭುತ್ವದ ಜೊತೆಗೆ ನಕಲಿ ಬುದ್ಧಿಜೀವಿಗಳು ಕಾಣಿಸಿಕೊಳ್ಳುತ್ತಿದ್ದಾರೆ.

ಈ ಬೆಳವಣಿಗೆಯು ಉನ್ನತ ಶಿಕ್ಷಣ ಕ್ಷೇತ್ರವನ್ನು ಬರಡುಗೊಳಿಸಿದೆ. ವಿಶ್ವವಿದ್ಯಾಲಯಗಳ ವಿಚಾರ ಸಂಕಿರಣಗಳು ಕಳೆಗುಂದಿ, ಯಾಂತ್ರಿಕವಾಗಿವೆ. ದೇಶದ ಮುಖ್ಯ ಚಿಂತಕರನ್ನೂ, ಲೇಖಕರನ್ನೂ ಅನಧಿಕೃತವಾಗಿ, ಆದರೆ ವ್ಯವಸ್ಥಿತವಾಗಿ ಹೊರಗಿಟ್ಟು ಹಲ್ಲುಗಿಂಜುವವರನ್ನು ಜೊತೆಗಿರಿಸಿಕೊಳ್ಳಲಾಗಿದೆ.  ಪ್ರಭುತ್ವದ ದರ್ಪದೆದುರು ಭಾಷೆ ಸೋತಿದೆ.

ಇಂಥ ಸಂದರ್ಭದಲ್ಲಿ ನಿಜ ತಿಳಿದಿರುವ ನಮ್ಮ ಲೇಖಕರು ಯಾಕೆ ಮೌನವಾಗಿದ್ದಾರೆ ಎಂಬ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ. ಕೆಲವು ಲೇಖಕರ ಜಾಣ ನಡೆಗಳನ್ನು ಸಂಶಯಿಸಲಾಗುತ್ತಿದೆ.

ಹಾಗೆ ನೋಡಿದರೆ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪ್ರಭುತ್ವದ ದರ್ಪವನ್ನು ಲೇಖಕರು ಸದಾ ಪ್ರಶ್ನಿಸುತ್ತಲೇ ಬಂದಿದ್ದಾರೆ. ಕನ್ನಡದ ಆದಿ ಕವಿ ಪಂಪನು ಸ್ವತ: ಅರಿಕೇಸರಿಯ ಆಸ್ಥಾನದಲ್ಲಿದ್ದರೂ ʼನಿಜದಿಂ ಭೂಪರೆಂಬುವರ್‌ ಅವಿವೇಕಿಗಳ್‌ʼ ಎಂದದ್ದಲ್ಲದೆ, ಈ ಅರಸರುʼ ಕಲಿಯನ್ನು ಹಂದಿಗಳನ್ನಾಗಿ ಮಾಡುತ್ತಾರೆ ಮತ್ತು ಹಂದಿಯನ್ನು ಕಲಿಯನ್ನಾಗಿ ಮಾಡುತ್ತಾರೆʼ ಎಂದು ಧೈರ್ಯದಿಂದ ಘೋಷಿಸುತ್ತಾನೆ. ವಚನಕಾರರು ಪ್ರಭುತ್ವವನ್ನೇ ಧಿಕ್ಕರಿಸಿ ಅನುಭವ ಮಂಟಪ ಕಟ್ಟುತ್ತಾರೆ. ಕುಮಾರವ್ಯಾಸನಂತೂ ʼಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಉರಿ ಉರಿವುತಿದೆ ದೇಶ, ನಾವಿನ್ನಿರಲು ಬಾರದುʼ ಎಂದು ಬರೆಯುತ್ತಾನೆ. ಕೃಷ್ಣದೇವರಾಯನ ಮೂಗಿನ ಕೆಳಗೇ ಓಡಾಡುತ್ತಿದ್ದ ಪುರಂದರದಾಸನು ʼ ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ, ಆನೆ ಕುದುರೆ ಒಂಟೆ ಲೊಳಲೊಟ್ಟೆ, ಬಹು ಸೇನೆ ಭಂಡಾರವು ಲೊಳಲೊಟ್ಟೆ, ದೊಡ್ಡ ಕ್ಷೋಣೀಶನೆಂಬುದು ಲೊಳಲೊಟ್ಟೆʼ ಎಂದು ಹಾಡುತ್ತಾ, ಲಂಗೋಟಿ ತೊಟ್ಟುಕೊಂಡು ಚಿನ್ನಾಭರಣಗಳನ್ನು ಮಾರುತ್ತಿದ್ದ ಹಂಪಿಯ ಬೀದಿಗಳಲ್ಲಿ ಸುತ್ತುತ್ತಿದ್ದ.

೨೦ನೇ ಶತಮಾನದ ಬಹುತೇಕ ಸಾಹಿತಿಗಳು ಸಮಕಾಲೀನ ಘಟನೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದರು. ಅವರ ಪ್ರತಿಕ್ರಿಯೆಗಳಲ್ಲಿ ಎರಡು ರೀತಿಯಿತ್ತು. ಮೊದಲನೆಯದು, ಕುವೆಂಪು ಮಾಡಿದ ಹಾಗೆ, ಸಾರ್ವಜನಿಕವಾಗಿ ಹೆಚ್ಚು ಮಾತಾಡದೆ, ಗಂಭೀರವಾದ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಪ್ರಭುತ್ವವನ್ನು ಆಳವಾಗಿ ಪ್ರಶ್ನಿಸುವುದು. ಎರಡನೆಯದು, ಶಿವರಾಮ ಕಾರಂತರ ರೀತಿ. ಗಂಭೀರವಾಗಿ ಬರೆಯುವುದರ ಜೊತೆಗೆ ಗಟ್ಟಿಯಾಗಿ ಜನರೊಡನೆ ಮಾತಾಡುವುದು. ಅವರು ಸುಮಾರು ೪೨೭ ಪುಸ್ತಕಗಳನ್ನು ಬರೆದರು, ಯಕ್ಷಗಾನಕ್ಕೆ ಕಾಯಕಲ್ಪ ನೀಡಿದರು, ವೇಶ್ಯಾ ವಿವಾಹ ಮಾಡಿಸಿದರು. ಪುತ್ತೂರಿನಲ್ಲಿ ಬಾಲವನ ಎಂಬ ಅಸಾಂಪ್ರದಾಯಿಕ ಶಿಕ್ಷಣ ಕೇಂದ್ರ ತೆರೆದರು. ಪರಿಸರಕ್ಕೆ ಹಾನಿಯಾಗುತ್ತದೆ ಎಂದನ್ನಿಸಿದಾಗ ಅದರ ರಕ್ಷಣೆಗೆ ಕಟಿಬದ್ಧರಾದರು. ಕೈಗಾ ಅಣುವಿದ್ಯುತ್ ಸ್ಥಾವರದ ವಿರುದ್ಧ ಹೋರಾಟಕ್ಕೆ ನಾಯಕತ್ವ ನೀಡಿದರು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಪದ್ಮಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದರು. ಪ್ರಗತಿಶೀಲ ಸಾಹಿತಿಗಳಾಗಿದ್ದ ನಿರಂಜನ, ಬಸವರಾಜ ಕಟ್ಟೀಮನಿ, ಚದುರಂಗ ಮೊದಲಾದವರು ಸಾಹಿತ್ಯದ ಮಡಿವಂತಿಕೆಯನ್ನೇ ಪ್ರಶ್ನಿಸಿದರು. ಸ್ವಾತಂತ್ರ್ಯೋತ್ತರ ಕಾಲದಲ್ಲಿ ನವ್ಯ ಸಾಹಿತಿಗಳು ನೆಹರೂ ಯುಗದ ಭ್ರಮೆಗಳನ್ನು ಒಡೆದರು. ಅಡಿಗರಂತೂ ʼನೆಹರೂ ನಿವೃತ್ತರಾಗುವುದಿಲ್ಲʼ ಎಂಬ ಕವಿತೆಯನ್ನೇ ಬರೆದರು. ಲಂಕೇಶ್‌ ಉತ್ಕೃಷ್ಟವಾದ ಕತೆ, ಕಾದಂಬರಿ, ನಾಟಕಗಳನ್ನು ಬರೆಯುತ್ತಲೇ ಪ್ರಭುತ್ವಕ್ಕೆ ಸಿಂಹ ಸ್ವಪ್ನರಾಗಿದ್ದರು.  ಅನಂತಮೂರ್ತಿಯವರು ಸರ್ವಾಧಿಕಾರೀ ಶಕ್ತಿಗಳ ವಿರುದ್ಧ ಹೋರಾಡುತ್ತಲೇ ಕೊನೆಯುಸಿರೆಳೆದರು.

೧೯೭೫ರಲ್ಲಿ ಆರಂಭವಾದ ದಲಿತ ಬಂಡಾಯ ಸಾಹಿತ್ಯದ ಲೇಖಕರಂತೂ ದಟ್ಟವಾದ ಸಾಮಾಜಿಕ ಪ್ರಜ್ಞೆಯುಳ್ಳವರಾಗಿಯೇ ಬರೆದರು. ಸಿದ್ದಲಿಂಗಯ್ಯ, ದೇವನೂರು ಮಹಾದೇವ, ಕುಂವೀ, ಬರಗೂರು, ಸಾರಾ, ಬೊಳುವಾರು, ಚಂಪಾ ಮೊದಲಾದವರು ಅನೇಕ ಬಗೆಯ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಲೇ ಕನ್ನಡ ನಾಡಿನ ಚೈತನ್ಯವನ್ನು ಹೆಚ್ಚಿಸಿದರು. ಸಿದ್ದಲಿಂಗಯ್ಯನವರ ಕವಿತೆಗಳು ಜನರ ಹೃದಯದ ಹಾಡುಗಳಾದುವು. ಅವುಗಳನ್ನು ಕಾಲೇಜುಗಳಲ್ಲಿ, ಬೀದಿಗಳಲ್ಲಿ ಧೈರ್ಯವಾಗಿ ಹಾಡಲಾಯಿತು. ಗೋಡೆಗಳು ಕೂಡಾ ಆಗ ಮಾತಾಡ ತೊಡಗಿದುವು. ಕನ್ನಡ ಕಾವ್ಯಕ್ಕೆ ತಮಟೆಯ ದನಿ ಸೇರಿಸುವಲ್ಲಿ ದಲಿತ ಲೇಖಕರು ಯಶಸ್ವಿಯಾದರು.

ಇಂಥ ಇತಿಹಾಸವಿರುವ ಕನ್ನಡದ ಬರೆಹಗಾರರು ೧೯೯೦ರ ದಶಕದ ಆನಂತರ ಬಹುಮಟ್ಟಿಗೆ ಮೌನವಾಗುತ್ತಲೇ ಹೋದರು. ಲಾಲ್‌ ಕೃಷ್ಣ ಅಡ್ವಾಣಿಯವರು ೧೯೯೦ರಲ್ಲಿ ಆರಂಭಿಸಿದ ರಾಮ ರಥ ಯಾತ್ರೆಯು ಉಗ್ರ ಹಿಂದುತ್ವವನ್ನು ಮುನ್ನೆಲೆಗೆ ತಂದಿತು. ಇದರಿಂದ ದೇಶದಾದ್ಯಂತ ಕೋಮುಗಲಭೆಗಳೂ ಹುಟ್ಟಿಕೊಂಡುವು. ಇದರ ರಾಜಕೀಯ ಲಾಭ ಪಡೆದು ಅಧಿಕಾರವನ್ನು ಹೆಚ್ಚಿಸಿಕೊಂಡಿದ್ದ ಬಿಜೆಪಿಯು ಮುಂದೆ ಇದೇ ತಂತ್ರವನ್ನು ಅನುಸರಿಸಿತು.

೧೯೯೦ರ ಆನಂತರ ಕಾಣಿಸಿಕೊಂಡ ಉಗ್ರ ಹಿಂದುತ್ವ ಮತ್ತು ಜಾಗತೀಕರಣದ ಶಕ್ತಿಗಳು ದಿನ ಸಾಗಿದಂತೆ ಒಂದರೊಳಗೊಂದು ಸೇರಿಕೊಂಡು ಕಾರ್ಯ ನಿರ್ವಹಿಸಲು ಅರಂಭಿಸಿದುವು. ಇವತ್ತು ಜಾಗತೀಕರಣದ ಭಾಗವಾದ ಖಾಸಗೀಕರಣ ಮತ್ತು ನವಬಂಡವಾಳಶಾಹೀ ಶಕ್ತಿಗಳು ಹಿಂದುತ್ವದ ಜೊತೆ ಕೈಜೋಡಿಸಿವೆ. ಇವು ಯಾವುದೇ ಜನಪರ ಚಳುವಳಿಗಳು ತಲೆ ಎತ್ತದಂತೆ ಮಾಡಿವೆ. ಬಂಡವಾಳಶಾಹಿಗಳಿಗೆ ಲಾಭ ತಂದುಕೊಡುವ ಯಾವುದೇ ಯೋಜನೆಗಳು, ನಿರುದ್ಯೋಗ, ಬೆಲೆ ಏರಿಕೆ, ಅಸಮಾನತೆಯ ಅಗಾಧ ಹೆಚ್ಚಳ, ಭ್ರಷ್ಟಾಚಾರ, ಲಿಂಗ ತಾರತಮ್ಯ, ದೇಸೀ ಭಾಷೆಗಳ ಕುಸಿತ, ಸ್ಥಳೀಯ ಸಂಸ್ಕೃತಿಗಳ ನಾಶ ಇತ್ಯಾದಿಗಳನ್ನು ಹಿಂದುತ್ವದ ಪರವಾಗಿರುವವರು ವಿರೋಧಿಸುವುದೇ ಇಲ್ಲ. ಬದಲು ದೇಶದ ಹೆಸರಿನಲ್ಲಿ ಅವನ್ನು ಸಮರ್ಥಿಸಲು ಮುಂದಾಗುತ್ತಾರೆ.  ಬಂಡವಾಳಶಾಹಿಗಳಿಗೆ ಅಡಿಯಾಳಾಗಿರುವ ಟಿ ವಿ ಚಾನಲ್‌ಗಳು, ವಾಟ್ಸಾಪ್‌, ಫೇಸ್‌ಬುಕ್‌ಗಳಂತ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳುಗಳು, ದ್ವೇಷ ಪೂರಿತ ಭಾಷಣಗಳು, ರಾಜಕಾರಣಿಗಳು ಬಳಸುವ ಸೌಜನ್ಯ ರಹಿತ ನುಡಿಗಟ್ಟು ಮೊದಲಾದುವುಗಳನ್ನು ನಮ್ಮ ನೆಲದ ಗುಣಗಳೆಂಬಂತೆ ಬದಲಾಯಿಸಿವೆ. ಇಂಥ ಬೆಳವಣಿಗೆಗಳ ಕುರಿತು ಎಚ್ಚರ ಹುಟ್ಟಿಸುವ ಮಾನವಿಕಗಳನ್ನು ‘ಅನುತ್ಪಾದಕ’ ಎಂದು ಘೋಷಿಸುವ ಮಟ್ಟಿಗೆ ಜನರು ಇವತ್ತು ಬದಲಾಗಿದ್ದಾರೆ. ಹೀಗೆ ನಾಗರಿಕ ಸಮಾಜದ ಯೋಚನಾ ಶಕ್ತಿಯೇ ಕೊಲೆಯಾಗುತ್ತಿರುವಾಗ ಲೇಖಕರು ಸುಮ್ಮನೆ ಕುಳಿತಿರುವುದು ಅಪೇಕ್ಷಣೀಯವಲ್ಲ.

ಈ ಎಲ್ಲಾ ಕಾರಣಗಳಿಂದಾಗಿ ನಾವೆಲ್ಲ ಒಂದು ಕ್ಷಣ ಒಟ್ಟಿಗೇ ನಿಂತು, ಯೋಚಿಸಿ, ನಮಗೆ ಉಪಯುಕ್ತವಾದ ಒಂದು ಸಾಹಿತ್ಯಿಕ –ಸಾಂಸ್ಕೃತಿಕ ಸಂಘಟನೆಯನ್ನು ಹೊಸದಾಗಿ ಕಟ್ಟಿಕೊಳ್ಳುವುದು ಇವತ್ತಿನ ಅಗತ್ಯ ಎಂದು ತೋರುತ್ತದೆ. ಈ ಕುರಿತು ೧೯೭೪ರಲ್ಲಿ ಕುವೆಂಪು ಮೈಸೂರಿನಲ್ಲಿ ಆಡಿದ ಮಾತುಗಳು ನಮಗೆ ಪ್ರೇರಣೆ ನೀಡಬೇಕು. ಲಂಕೇಶ್‌, ಸುಬ್ಬಣ್ಣ, ತೇಜಸ್ವಿ, ರಾಮದಾಸ್‌, ದೇವನೂರು ಮೊದಲಾದವರ ಮಾರ್ಗ ನಮ್ಮ ಮುಂದಿದೆ.

ಈ ತಿಳಿವಳಿಕೆಯ ಹಿನ್ನೆಲೆಯಲ್ಲಿ ೨೦೨೩ರ ಜನವರಿ ತಿಂಗಳ ಎಂಟನೇ ತಾರೀಕಿನಂದು ಬೆಂಗಳೂರಿನ ಕೆ ಅರ್‌ ಸರ್ಕಲ್‌ ಬಳಿಯಲ್ಲಿರುವ ಅಲ್ಯುಮ್ನಿ ಸಭಾಂಗಣದಲ್ಲಿ ಜನ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಕನ್ನಡಕ್ಕೆ ಹೊಸ ಶಕ್ತಿ ತುಂಬುತ್ತಿರುವ ಹೊಸ ತಲೆಮಾರಿನ ಬರೆಹಗಾರರು ಈ ಸಮಾವೇಶದ ಮುಂಚೂಣಿಯಲ್ಲಿರುತ್ತಾರೆ.

ಪುರುಷೋತ್ತಮ ಬಿಳಿಮಲೆ

ಸಮಾಜ ಮತ್ತು ಸಂಸ್ಕೃತಿ ಚಿಂತಕರು

ಮಹೇಶ್ ಜೋಷಿ ತನ್ನ ಆರೋಪ ಸಾಬೀತು ಮಾಡಲಿ: ಪ್ರೊ. ಬಿಳಿಮಲೆ ಸವಾಲು
ಪೆಂಡಾಲ್‌ ಕಾಂಟ್ರ್ಯಾಕ್ಟ್‌ ನೀಡದ ಕಾರಣಕ್ಕೆ ಪ್ರೊಫೆಸರ್‌ ಬಿಳಿಮಲೆಯವರು ಸಾಹಿತ್ಯ ಸಮ್ಮೇಳನವನ್ನು ಬಹಿಷ್ಕರಿಸಿದ್ದಾರೆ ಎನ್ನುವ ಕಸಾಪ ಅಧ್ಯಕ್ಷ ಮಹೇಶ ಜೋಷಿಯವರ ಹೇಳಿಕೆಗೆ ಪ್ರೊ. ಬಿಳಿಮಲೆ ಪ್ರತಿಕ್ರಿಯಿಸಿದ್ದು, “ಹಾವೇರಿ ಸಮ್ಮೇಳನದಲ್ಲಿ ಎಲ್ಲ ವರ್ಗಗಳಿಗೆ ಸರಿಯಾದ ಪ್ರಾತಿನಿಧ್ಯ ದೊರಕಿಲ್ಲ ಎಂಬ ಅನೇಕರ ಮಾತಿಗೆ ನಾನೂ ದನಿಗೂಡಿಸಿದ್ದೇನೆ. ಆದರೆ ಜೋಷಿಯವರು ತೀರಾ ಕೆಳಮಟ್ಟದ ಹೇಳಿಕೆ ನೀಡುವುದರ ಮೂಲಕ ಇಂದು ಕಸಾಪ ಎಂತಹ ವ್ಯಕ್ತಿಗಳ ಕೈಯಲ್ಲಿದೆ ಎನ್ನುವುದನ್ನು ನಿರೂಪಿಸಿ ತೋರಿಸಿದ್ದಾರೆ. ಅನ್ಯಾಯದ ವಿರುದ್ಧ ದನಿಯೆತ್ತುವುದು ಸಂವಿಧಾನ ನನಗೆ ನೀಡಿದಾ ಹಕ್ಕಾಗಿದ್ದು ಅದನ್ನು ಯಾರೂ ಕಸಿಯಲು ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ.

ಮಹೇಶ್‌ ಜೋಷಿ ಹೇಳಿಕೆಯ ವಿರುದ್ಧ ಈಗಾಗಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಮಹೇಶ್‌ ತಮ್ಮ ಘನತೆಗೆ ತಕ್ಕಂತೆಯಲ್ಲವಾದರೂ, ತಾವು ಕುಳಿತಿರುವ ಕುರ್ಚಿಯ ಘನತೆಗೆ ತಕ್ಕಂತೆಯಾದರೂ ವರ್ತಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯುವ ಬದಲು ಜೋಷಿಯವರಿಗೆ ನಿಜಕ್ಕೂ ಬದ್ಧತೆಯೆನ್ನುವುದಿದ್ದರೆ ತಮ್ಮ ಆರೋಪವನ್ನು ಸಾಬೀತುಪಡಿಸಬೇಕು, ಇಲ್ಲವಾದಲ್ಲಿ ಅವರು ತಮ್ಮ ಕುರ್ಚಿಯನ್ನು ಯೋಗ್ಯರಿಗೆ ಬಿಟ್ಟುಕೊಟ್ಟು ನಾಡಿನ ಘನತೆಯನ್ನು ಕಾಪಾಡಬೇಕೆಂದು ಸೋಷಿಯಲ್‌ ಮೀಡಿಯಾದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಪ್ರೊ. ಪುರುಷೋತ್ತಮ ಬಿಳಿಮಲೆಯವರು ನೀಡಿರುವ ಪತ್ರಿಕಾ ಹೇಳಿಕೆಯು ಈ ಕೆಳಗಿನಂತಿದೆ:

“ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹೇಶ ಜೋಷಿಯವರು ನನ್ನ ಮೇಲೆ ಮಾಡಿದ ಆರೋಪಗಳನ್ನು ಗಮನಿಸಿದೆ. ಪರಿಷತ್ತಿನ ಕಾರ್ಯ ವಿಧಾನಗಳ ಬಗ್ಗೆ ನಾನು ಅಸಮಾಧಾನ ಸೂಚಿಸಿದ್ದು ನಿಜ. ಹಾವೇರಿ ಸಮ್ಮೇಳನದಲ್ಲಿ ಎಲ್ಲ ವರ್ಗಗಳಿಗೆ ಸರಿಯಾದ ಪ್ರಾತಿನಿಧ್ಯ ದೊರಕಿಲ್ಲ ಎಂಬ ಅನೇಕರ ಮಾತಿಗೆ ನಾನೂ ದನಿಗೂಡಿಸಿದ್ದೇನೆ. ಇದು ಪ್ರಜಾಪ್ರಭುತ್ವ ನನಗೆ ತಂದುಕೊಟ್ಟ ಹಕ್ಕು, ಮತ್ತು ಹೀಗೆ ಬರೆಯುವುದು ನನ್ನ ಕರ್ತವ್ಯ ಎಂದು ನಾನು ನಂಬಿದ್ದೇನೆ. ಇದರ ಹೊರತಾಗಿ ನಾನು ಜೋಷಿಯವರ ಸಹಿತವಾಗಿ ಯಾರ ವೈಯಕ್ತಿಕ ವಿಚಾರಗಳ ಬಗ್ಗೆಯೂ ಬರೆದಿಲ್ಲ. ಅವರು ಹಾವೇರಿ ಸಮ್ಮೇಳನಕ್ಕೆ ನನ್ನನ್ನು ಕರೆದಿದ್ದರು. ನನ್ನದೇ ಕಾರಣಗಳಿಗಾಗಿ ಬರಲಾಗುವುದಿಲ್ಲ ಎಂದು ಹೇಳಿದ್ದೇನೆ. ಅದಕ್ಕೆ ಅವರು ಇಷ್ಟೊಂದು ಆರೋಪಗಳನ್ನು ಮಾಡುವ ಅಗತ್ಯ ಇರಲಿಲ್ಲ.
ನಾನು ಮತ್ತು ನನ್ನಂಥ ಹಲವರು ಪರಿಷತ್ತಿನ ಬಗ್ಗೆ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೊಡಲು ಗೊತ್ತಿಲ್ಲದ ಜೋಷಿಯವರು ವೈಯಕ್ತಿಕವಾಗಿ ಮಾನಹಾನಿಯಾಗುವಂಥ ಮಾತುಗಳನ್ನು ಆಡಿದ್ದಾರೆ. ಈ ಮಾತುಗಳ ಮೂಲಕ ಅವರು ಸಾಹಿತ್ಯ ಪರಿಷತ್ತು ಇವತ್ತು ಎಂಥವರ ಕೈಯಲ್ಲಿದೆ ಎಂಬುದನ್ನು ಮತ್ತೆ ಸಾರ್ವಜನಿಕರಿಗೆ ತಿಳಿಯಪಡಿಸಿದ್ದಾರೆ. ಅವರು ಪೆಂಡಾಲ್‌ ಬಗ್ಗೆ ಹೇಳಿದ ಮಾತುಗಳು ಅತ್ಯಂತ ಹಾಸ್ಯಾಸ್ಪದವಾದದ್ದು. ಅವರದನ್ನು ಸಾಬೀತು ಪಡಿಸಬೇಕು, ಸಾಬೀತು ಪಡಿಸಲಾಗದಿದ್ದರೆ ಪರಿಷತ್ತಿನ ಅಧ್ಯಕ್ಷ ಪೀಠಕ್ಕೆ ಅವರು ಯೋಗ್ಯರಲ್ಲ ಎಂದೇ ಭಾವಿಸಬೇಕಾಗುತ್ತದೆ. ಸಾರ್ವಜನಿಕ ಸಂಘ ಸಂಸ್ಥೆಗಳ ಜವಾಬ್ದಾರಿ ಹೊತ್ತವರು ಲಜ್ಜೆಗೆಟ್ಟು ಯಾವ ನೀಚ ಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಮಹೇಶ್‌ ಜೋಷಿಯವರ ಮಾತುಗಳೇ ಸಾಕ್ಷಿ.
ಇಂಥದ್ದರ ವಿರುದ್ಧವಾಗಿ ಪ್ರತ್ಯೇಕ ಸಮ್ಮೇಳನಗಳನ್ನು ಸಂಘಟಿಸಿಕೊಳ್ಳಬೇಕಾದ್ದು ಇವತ್ತಿನ ತುರ್ತು ಅಗತ್ಯ.

ಪುರುಷೋತ್ತಮ ಬಿಳಿಮಲೆ

ದಶಂಬರ ೨೯, ೨೦೨೨
ಕುವೆಂಪು ಜನುಮದಿನ

ನವದೆಹಲಿ”

ಕನ್ನಡ ಓದಿನ ಸಂಭ್ರಮ ಕಳೆದು ಹೋಗದಿರಲಿ
ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿರುವ ಇಂದಿನ ಜನರಿಗೆ ಭಾಷೆ ಮತ್ತು ಸಾಹಿತ್ಯ ಬೇಡವಾಗಿದೆ. ಇಂಥ ಸಂದರ್ಭದಲ್ಲಿ ಕನ್ನಡ ಕವಿ ಪರಂಪರೆಗೆ ನಾವು ಉತ್ತರಾಧಿಕಾರಿಗಳಾಗಲು ಕೆಲವು ಯೋಜನೆಗಳನ್ನು ರೂಪಿಸಲು ಇದು ಸಕಾಲ ಎನ್ನುತ್ತಾರೆ ಕನ್ನಡದ ಸಾಕ್ಷಿ ಪ್ರಜ್ಞೆಯಾಗಿರುವ ಪುರುಷೋತ್ತಮ ಬಿಳಿಮಲೆ. ಪೀಪಲ್‌ ಮೀಡಿಯಾ ಬಳಗದಿಂದ ತಮಗೆಲ್ಲರಿಗೂ ೬೭ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಮುಂದಿನ ವರ್ಷಕ್ಕೆ ಬಿ ಎಂ ಶ್ರೀಕಂಠಯ್ಯನವರ ಇಂಗ್ಲಿಷ್‌ ಗೀತೆಗಳು ಪ್ರಕಟವಾಗಿ ೧೦೦ ವರ್ಷ ತುಂಬುತ್ತದೆ. ೧೯೨೩ರಲ್ಲಿ ಅದರ ಮೊದಲ ಆವೃತ್ತಿ ಪ್ರಕಟವಾದಾಗ ಒಂದು ಸಾವಿರ ಪ್ರತಿಗಳನ್ನು ಅಚ್ಚು ಹಾಕಲಾಗಿತ್ತಂತೆ. ಆಗಿನ ಕರ್ನಾಟಕ ಜನಸಂಖ್ಯೆ ಸುಮಾರು ಎರಡೂವರೆ ಕೋಟಿ. ಈಗ ಒಂದು ಶತಮಾನ ಕಳೆದ ಮೇಲೆ ಕರ್ನಾಟಕದ ಜನಸಂಖ್ಯೆ ಆರು ಕೋಟಿಯ ಮೂವತ್ತು ಲಕ್ಷ, ಆದರೆ ನಾವು ಮುದ್ರಿಸುವ ಪುಸ್ತಕದ ಪ್ರತಿಗಳು ಇನ್ನೂ ಒಂದು ಸಾವಿರವನ್ನು ಮೀರಿಲ್ಲ. ಅದರಲ್ಲೂ ಕವನ ಸಂಕಲನಗಳಾದರೆ ೫೦೦ಕ್ಕೂ ಕಡಿಮೆ. ಅಂದರೆ ಕನ್ನಡದ ಓದುಗರ ಸಂಖ್ಯೆ ಅಪಾಯದ ಮಟ್ಟಕ್ಕೆ ಇಳಿದಿದೆ ಎಂದರ್ಥ. ಇದಕ್ಕೆ ಪೂರಕವಾಗಿ ಈಚಿನ ದಿನಗಳಲ್ಲಿ ಭಾಷಾ ಅಧ್ಯಯನವನ್ನು ‘ಅನುತ್ಪಾದಕ’ ಎಂದು ಅನಧಿಕೃತವಾಗಿ ಘೋಷಿಸಲಾಗಿದೆ. ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿರುವ ಜನರಿಗೆ ಭಾಷೆ ಮತ್ತು ಸಾಹಿತ್ಯ ಬೇಡವಾಗಿದೆ. ಇಂಥ ಸಂದರ್ಭದಲ್ಲಿ ನಾವು ಕನ್ನಡವನ್ನು ಉಳಿಸಿ ಬೆಳೆಸಲು ಕೆಲವು ಯೋಜನೆಗಳನ್ನು ರೂಪಿಸುವುದು ಅಗತ್ಯ.

ಕನ್ನಡವು ಹುಟ್ಟಿನಿಂದಲೇ ಒಂದು ಮುಕ್ತ ಭಾಷೆ. ಎಲ್ಲವನ್ನೂ ಒಳಗೊಳ್ಳುತ್ತಾ ಬೆಳೆಯುವುದು ಅದರ ಮೂಲ ಗುಣ.  ಬರೆದಂತೆ ಓದುವುದು, ಓದಿದಂತೆ ಬರೆಯುವುದು ಕನ್ನಡದ ವೈಶಿಷ್ಟ್ಯವಾಗಿದೆ. ಆದ್ದರಿಂದಲೇ ಅದು  ʼಪರಿಪೂರ್ಣ ಲಿಪಿಯುಳ್ಳ ಭಾಷೆʼ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಷ್ಟೊಂದು ಅರ್ಥಪೂರ್ಣವಾದ ಲಿಪಿಯನ್ನು ಪಡೆದ ಭಾಷೆಯನ್ನು ಕನ್ನಡದ ಕವಿಗಳು ಅದರ ಮೂಲ ಗುಣ ನಷ್ಟವಾಗದಂತೆ ಸೊಗಸಾಗಿ ಬೆಳೆಸಿದ್ದಾರೆ. ಅರಸರ ಆಜ್ಞೆಯ ಮೇರೆಗೆ  ಪ್ರಭುಸಮ್ಮಿತವಾದ ಶಾಸನಗಳನ್ನು ಬರೆಯಬೇಕಾಗಿದ್ದ ಶಾಸನಕಾರರು ಕಲ್ಲಿನಲ್ಲಿ ಕಾವ್ಯ ಬರೆದರು. ಕ್ರಿಸ್ತ ಶಕ ಏಳನೇ ಶತಮಾನದಲ್ಲಿ ರಚಿತವಾದ ಕಪ್ಪೆ ಅರಭಟ್ಟನ  ಬಾದಾಮಿ ಶಾಸನವು ಕನ್ನಡ ಜನಪದ ಹಾಡುಗಳ ಜೀವ ಕೇಂದ್ರವಾದ ತ್ರಿಪದಿಯಲ್ಲಿಯೇ ರಚಿತವಾಯಿತು-

ಸಾಧುಗೆ ಸಾಧು ಮಾಧುರ್ಯನ್ಗೆ ಮಾಧುರ್ಯಂ

ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್‌

ಮಾಧವನ್‌ ಈತನ್‌ ಪೆರನಲ್ಲ। (ಇವನು ಸಾಧುಗಳಿಗೆ ಸಾಧು, ಮಧುರವಾದ ನಡತೆಯುಳ್ಳವರಿಗೆ  ಮಧುರವಾದ ಮನುಷ್ಯ; ಬಾಧಿಸುವ ಕಲಿಗೆ ಇವನು ವಿಪರೀತನಾದ ಕಲಿಯುಗ. ಇವನು ವಿಷ್ಣುವೇ ಹೊರತು ಬೇರೆಯಲ್ಲ ).

ಕಪ್ಪೆ ಅರೆಭಟ್ಟನ ಶಾಸನ  (ಚಿತ್ರಕೃಪೆ: ಶಾಸನ‌, ಫೇಸ್‌ಬುಕ್‌ ಪೇಜ್)

ಒಂಬತ್ತನೇ ಶತಮಾನದ ಹೊತ್ತಿಗೆ ಕನ್ನಡ ಭಾಷೆಯು ಪ್ರೌಢವಾಗಿ ಬೆಳೆದಿತ್ತು ಎಂಬುದಕ್ಕೆ ಶ್ರೀವಿಜಯನ ಕವಿರಾಜ ಮಾರ್ಗ ಮತ್ತು ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಒಳ್ಳೆಯ ಉದಾಹರಣೆಗಳು. ಕವಿರಾಜ ಮಾರ್ಗಕಾರ ಕನ್ನಡಿಗರನ್ನು ಬಣ್ಣಿಸುವ ಈ ಕೆಳಗಿನ ಪದ್ಯ ಸುಂದರವಾಗಿದೆ-

ಪದನರಿದು ನುಡಿಯಲುಂ ನುಡಿ
ದುದನರಿದಾರಯಲುಮಾರ್ಪರಾ ನಾಡವರ್ಗಳ್
ಚದುರರ್ ನಿಜದಿಂ ಕುರಿತೋ
ದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್

(ಕನ್ನಡನಾಡಿನ ಜನರು ಪದದ ಅರ್ಥವನ್ನು ಅರಿತು ಮಾತನಾಡುವ ಸಾಮರ್ಥ್ಯವುಳ್ಳವರು. ತಾವು ಆಡುವ ಮಾತನ್ನು ಅರ್ಥಮಾಡಿಕೊಂಡು ನಡೆಯುವವರು. ಆ ಜನರು ನಿಜವಾಗಿಯೂ ಚತುರರು, ಅವರು ಶಿಕ್ಷಣವನ್ನು ಪಡೆಯದಿದ್ದರು ಕಾವ್ಯವನ್ನು ರಚಿಸುವಷ್ಟು ಪರಿಣತಿ ಹೊಂದಿದ ಬುದ್ಧಿಯುಳ್ಳವರು.

ಮುಂದೆ ಕನ್ನಡದ ಘನತೆಯನ್ನು ಹೆಚ್ಚಿಸಿದ ಕವಿಯೆಂದರೆ ಪಂಪನೇ. ಅವನು ಕನ್ನಡದ ಆದಿ ಕವಿಯೂ ಹೌದು, ಮಹಾಕವಿಯೂ ಹೌದು. ವ್ಯಾಸನ ಸಂಸ್ಕೃತ ಭಾರತವನ್ನು ಭಾರತದ ದೇಸೀ ಭಾಷೆಯೊಂದರಲ್ಲಿ ಮೊದಲು ಬರೆದ ಶ್ರೇಯಸ್ಸು ಇವನಿಗೆ. ಭಾರತದ ಇತರ ಅಭಿಜಾತ ಭಾಷೆಗಳಾದ ಒಡಿಯಾ, ತಮಿಳು, ತೆಲುಗು, ಮಲೆಯಾಳಂಗಳಲ್ಲಿ ಮಹಾಭಾರತ ಕಾಣಿಸಿಕೊಂಡದ್ದು ಆಮೇಲೆ. ಅಸಾಮಾನ್ಯ  ಪ್ರತಿಭೆಯ ಪಂಪನು ಸಂಸ್ಕೃತ ಭಾರತವನ್ನು ಕನ್ನಡವಾಗಿಸುವಾಗ ಕೃಷ್ಣನನ್ನೂ ಗೌಣವಾಗಿಸಿದ, ಭಗವದ್ಗೀತೆಯನ್ನೂ ಬದಿಗೆ ಸರಿಸಿದ. ಅರ್ಜುನನನ್ನು ಬನವಾಸಿಯಲ್ಲಿ ಓಡಾಡಿಸಿ, ಮತ್ತೆ ಹುಟ್ಟುವುದಾದರೆ ಹಸ್ತಿನಾವತಿಯಲ್ಲಿ ಅಲ್ಲ, ಬನವಾಸಿಯಲ್ಲಿ ಎಂದು ಹೇಳಿಸಿದ. ಜಾತಿಯಲ್ಲಿ ಹೀನನೆಂಬ ಅಭಿದಾನಕ್ಕೆ ಪಾತ್ರನಾದ ಕರ್ಣನ ಪರವಾಗಿ ನಿಲ್ಲುವ ಪಂಪನು ʼನೆನೆಯದಿರಣ್ಣ ಭಾರತದೊಳು ಪೆರಾರುಮನ್‌, ಒಂದೆ ಚಿತ್ತದಿ ನೆನೆವೊಡೆ ಕರ್ಣನಂ ನೆನೆಯʼ ಎಂದು ಕರ್ಣನ ಪಾತ್ರ ಕಲ್ಪನೆಯನ್ನೇ ಬದಲಾಯಿಸಿ ಕನ್ನಡಕ್ಕೊಂದು ವೈಚಾರಿಕ ನೆಲೆಗಟ್ಟನ್ನೂ ಒದಗಿಸಿಕೊಟ್ಟ. ಇವನಾನಂತರ ಬಂದ ರನ್ನನು ಕನ್ನಡಿಗರ ಕಣ್ಮಣಿ. ಅವನ ಗದಾಯುದ್ಧವನ್ನು ಮೆಚ್ಚದ ಕನ್ನಡಿಗರೇ ಇರಲಾರರು. ರನ್ನನು ದುರ್ಯೋಧನನ ಪಾತ್ರವನ್ನು ಉದಾತ್ತೀಕರಿಸಿ, ʼನೆಲಕ್ಕಿರಿವೆನೆಂದು ಬಗೆದೊಡೆ ಚಲಕ್ಕಿರಿವೆಂʼ ಎಂದು ಅವನ ಬಾಯಲ್ಲಿ ಹೇಳಿಸಿದ. ರನ್ನನ ಭಾಷೆ, ಉತ್ಸಾಹ, ಕೆಚ್ಚು, ಸ್ವಾಭಿಮಾನವು ಕನ್ನಡವನ್ನು ಬೆಳೆಸಿದೆ.

ರನ್ನನ ಸಮಕಾಲೀನನಾದ ನಾಗಚಂದ್ರನು ಕನ್ನಡ ಭಾಷೆಯ ಚೆಲುವನ್ನು ಅತ್ಯದ್ಭುತವಾಗಿ ಹೂವಿನಂತೆ ಅರಳಿಸಿದ ಅಪೂರ್ವ ಕವಿ. ಈತನು ತನ್ನ ʼರಾಮಚಂದ್ರ ಚರಿತ ಪುರಾಣಂʼ ಎಂಬ ಕಾವ್ಯದ ಮೂಲಕ ಕನ್ನಡಕ್ಕೆ ಮೊದಲ ರಾಮಾಯಣವನ್ನು ಕೊಟ್ಟ. ಇದು ಕನ್ನಡಕ್ಕೆ ದುರಂತ ರಾವಣನ ಕಲ್ಪನೆಯನ್ನು ಒದಗಿಸಿಕೊಟ್ಟಿತು. ಇದರಲ್ಲಿ ರಾವಣನು ದುಷ್ಟನಲ್ಲ, ಮಹಾನುಭಾವ.  ಆದರೂ ಕೂಡಾ ʼಕಡಲು ಕಾಲವಶದಿಂದ ಯಾವತ್ತೋ ಒಮ್ಮೆ ಮರ್ಯಾದೆಯನ್ನು ದಾಟುವ ಹಾಗೆʼ, ರಾವಣನು  ಸೀತೆಯ ಮೋಹಕ್ಕೊಳಗಾಗುತ್ತಾನೆ. ಅಪಹರಿಸಿ ತಂದ ಮೇಲೆ ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ನಾಗಚಂದ್ರ ತಂದಿತ್ತ ದುರಂತ ರಾವಣನ ಕಲ್ಪನೆಯು ಕನ್ನಡ ಪ್ರಜ್ಞೆಯಲ್ಲಿ ಗಾಢವಾಗಿ  ಬೇರೂರಿದ್ದು, ಯಕ್ಷಗಾನ, ಹರಿಕತೆ, ನಾಟಕಗಳಲ್ಲಿ ಈಗಲೂ  ಕಾಣಿಸಿಕೊಳ್ಳುವುದುಂಟು.

೧೧೭೦ರಲ್ಲಿದ್ದ ನೇಮಿಚಂದ್ರನು ಕನ್ನಡ ವಿಮರ್ಶೆಗೆ ನಾಂದಿ ಹಾಡಿದ ಪ್ರಮುಖ ಕವಿ. ಆತನು ತನ್ನ ʼಲೀಲಾವತಿ ಮಹಾಪ್ರಬಂಧಂʼನಲ್ಲಿ ಕವಿಗಳ ಸೃಷ್ಟಿಕ್ರಿಯೆಯ ಬಗ್ಗೆ ಎಲ್ಲ ಕಾಲಕ್ಕೂ ಸಲ್ಲುವ ಮಹತ್ವದ ಮಾತೊಂದನ್ನು ಹೇಳುತ್ತಾನೆ-

ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನಕ್ರಮಂ|
ಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ ಹರನಂ ನರನೊತ್ತಿ ಗಂಟಲಂ|
ಮೆಟ್ಟುಗೆ ಮೆಟ್ಟದಿರ್ಕೆ ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್|
ಮುಟ್ಟಿದರೊತ್ತಿ ಮೆಟ್ಟಿದರದೇನಳವಗ್ಗಳಮೋಕವೀಂದ್ರರಾ||

(ವಾನರ ಸೈನ್ಯವು ಸಮುದ್ರಕ್ಕೆ ಸೇತುವೆಯನ್ನು ಕಟ್ಟಲಿ ಕಟ್ಟದಿರಲಿ. ವಾಮನಾವತಾರದಲ್ಲಿ ವಾಮನನು ಆಕಾಶವನ್ನು ತನ್ನ ಕಾಲಿನಿಂದ ಮುಟ್ಟಲಿ ಮುಟ್ಟದಿರಲಿ. ಅರ್ಜುನನು ಶಿವನ ಗಂಟಲನ್ನು ಒತ್ತಿ ಮೆಟ್ಟಲಿ ಮೆಟ್ಟದಿರಲಿ. ಆದರೆ ಕವಿಗಳು ತಮ್ಮ ಕೃತಿಗಳಲ್ಲಿ ವಾನರ ಸೈನ್ಯದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದರು; ವಾಮನನ ಕಾಲಿನಿಂದ ಆಕಾಶವನ್ನು ಮುಟ್ಟಿದರು; ಅರ್ಜುನನ ಕಾಲಿನಿಂದ ಶಿವನ ಗಂಟಲನ್ನು ಒತ್ತಿ ಮೆಟ್ಟಿದರು; ಇದು ಕವಿಗಳ ಅಗ್ಗಳಿಕೆ)

ಇವತ್ತು ನಮ್ಮಲ್ಲಿ ಹಲವರಿಗೆ ಕಾವ್ಯ, ಪುರಾಣ, ಐತಿಹ್ಯ, ಚರಿತ್ರೆಗಳ ನಡುವಣ ವ್ಯತ್ಯಾಸಗಳೇ ತಿಳಿದಿಲ್ಲ. ಅವರು ಕವಿಕೃತಿಗಳನ್ನು ಒಂದು ಕಾಲದಲ್ಲಿ ನಡೆದ ಸತ್ಯ ಘಟನೆಗಳೆಂದೇ ನಂಬುತ್ತಾರೆ. ಅಂತವರಿಗೆ ಕಿವಿಮಾತು ಹೇಳಿದ ನೇಮಿಚಂದ್ರನು ಈ ವಿಷಯದಲ್ಲಿ ಕನ್ನಡಿಗರು ಹಾದಿ ತಪ್ಪಬಾರದೆಂದು ಬಹಳ ಹಿಂದೆಯೇ ಎಚ್ಚರಿಸಿದ್ದಾನೆ. ನೇಮಿಚಂದ್ರನ ಕಾಲದವನೇ ಆದ ನಯಸೇನನ ಕಾಲಕ್ಕೆ ಪುರೋಹಿತಶಾಹಿಯು ಕನ್ನಡದ ಮೇಲೆ ಸಂಸ್ಕೃತವನ್ನು ಹೇರುವ ಪ್ರಯತ್ನ ಮಾಡುತ್ತಿದ್ದಿರಬೇಕು. ಅದನ್ನು ಗಮನಿಸಿದ ಆತನು ತನ್ನ ಧರ್ಮಾಮೃತ ಕಾವ್ಯದಲ್ಲಿ –

ಸಕ್ಕದಮಂ ಪೇೞ್ವೊಡೆ ನೆಱೆ
ಸಕ್ಕದಮಂ ಪೇೞ್ಗೆ ಶುದ್ಧ ಕನ್ನಡದೊಳ್ ತಂ|
ದಿಕ್ಕುವುದೇ ಸಕ್ಕದಮಂ
ತಕ್ಕುದೆ ಬೆರೆಸಲ್ಕೆ ಘೃತಮುಮಂ ತೈಲಮುಮಂ (ಸಂಸ್ಕೃತವನ್ನು ಹೇಳುವುದಾದರೆ, ಸಂಸ್ಕೃತದಲ್ಲಿಯೇ ಪೂರ್ತಿಯಾಗಿ ಹೇಳಿ. ಶುದ್ಧವಾದ ಕನ್ನಡದಲ್ಲಿ ಸಂಸ್ಕೃತವನ್ನು ತಂದು ತುರುಕುವುದು ಸರಿಯೇ? ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ-ತುಪ್ಪಗಳ ಮಿಶ್ರಣವಾಗದೇ?) ಎಂದು ಗದರಿಸುತ್ತಾನೆ.

ಹೀಗೆ ಬೇರೆ ಭಾಷೆಗಳೊಡನೆ ಗುದ್ದಾಡುತ್ತಾ ಕನ್ನಡವನ್ನು ಬೆಳೆಸುತ್ತಿದ್ದ ಕವಿಗಳ ನಡುವೆ ಜನಭಾಷೆಗೆ ಮಹತ್ವ ತಂದುಕೊಟ್ಟವರು ನಿರ್ವಿವಾದವಾಗಿ ವಚನಕಾರರು. ಅವರು ದೇವರಿಗೇ ಕನ್ನಡ ಕಲಿಸಿದ ಕ್ರಾಂತಿಕಾರಿಗಳು. ವಚನಕಾರರು ಮೊದಲ ಬಾರಿಗೆ ಭಾಷೆಯಲ್ಲಿ ಕಂಡು ಬರುವ ಶ್ರೇಣೀಕರಣ ಮತ್ತು ಮಡಿ ಮೈಲಿಗೆಯನ್ನು ನಿರಾಕರಿಸಿ ವಿಪ್ರ ಮತ್ತು ಅಂತ್ಯಜರನ್ನು ಒಂದೇ ನೆಲೆಗಟ್ಟಿನಲ್ಲಿ ನಿಲ್ಲಿಸಿ ಮಾತಾಡಿದರು. ವಚನಕಾರರ ಹಸನಾದ ಭಕ್ತಿಗೆ  ಉತ್ಸಾಹದ ಲಯವನ್ನು ಸೇರಿಸಿದವ ಹರಿಹರ.  ಆತ ಕನ್ನಡ ಓದಬಲ್ಲ ಯಾರನ್ನಾದರೂ ಕುಣಿಯುವ ಹಾಗೆ ಮಾಡಬಲ್ಲ ಉನ್ಮತ್ತ ಕವಿ. ಆತ ಮೊದಲ ಬಾರಿಗೆ ಸಂಸ್ಕೃತ ಮತ್ತು ಪ್ರಾಕೃತ ಮೂಲಗಳ ಕಡೆಗೆ ಮುಖ ಮಾಡದೆ ಪಕ್ಕದ ತಮಿಳಿನ ಕಡೆಗೆ ನೋಡಿ, ಅಲ್ಲಿಂದ ಪ್ರೇರಣೆ ಪಡೆದು ಕನ್ನಡವನ್ನು ಬೆಳೆಸಿದ.

ಹರಿಹರನ ಉತ್ಸಾಹವನ್ನು ನಡುಗನ್ನಡದ ಮಹಾನ್‌ ಕವಿಗಳಾದ ರಾಘವಾಂಕ, ಕುಮಾರವ್ಯಾಸ, ಚಾಮರಸ, ಕನಕದಾಸ, ಲಕ್ಷ್ಮೀಶ, ತೊರವೆಯ ನರಹರಿ ಮೊದಲಾದವರು ಇನ್ನಷ್ಟು ವಿಸ್ತರಿಸಿದರು. ಕುಮಾರವ್ಯಾಸನಂತೂ ಕನ್ನಡವನ್ನು ಬೆರಳ ತುದಿಯಲ್ಲಿ ಕುಣಿಸಬಲ್ಲ ಜಾದೂಗಾರ, ಯಾವ ಭಾಷೆಯಿಂದ ಏನು ತಂದು ಹಾಕಿದರೂ ಅದನ್ನು ಕನ್ನಡವಾಗಿಸಬಲ್ಲ ಮಾಟಗಾರ. ಲಕ್ಷ್ಮೀಶನು ನುರಿತ ವೈಣಿಕನೊಬ್ಬ ವೀಣೆಯನ್ನು ನುಡಿಸಿದಂತೆ ಕನ್ನಡವನ್ನು ನುಡಿಸಿದ ಕಲಾಕಾರ. ೧೬ನೇ ಶತಮಾನದಲ್ಲಿದ್ದ ರತ್ನಾಕರವರ್ಣಿಯು ಕರ್ನಾಟಕದಲ್ಲಿದ್ದ ತುಳು, ತೆಲುಗು ಭಾಷೆಗಳಿಗೂ ಮನ್ನಣೆ ನೀಡಿದ ಉದಾರವಾದಿ.

ಕ್ರಿ ಶ ೧೬೭೫ರಲ್ಲಿದ್ದ ಮಹಲಿಂಗರಂಗ ಕವಿ ಬರೆದ ಅನುಭವಾಮೃತ ಎಂಬ ಗ್ರಂಥವು ಅವನ ಕನ್ನಡ ಪ್ರೇಮದಿಂದಾಗಿ ಇವತ್ತಿನವರೆಗೂ ಉಳಿದಿದೆ. ಅವನು ಬರೆದ ಕೆಳಗಿನ ಸಾಲುಗಳು ಗೊತ್ತಿಲ್ಲದ ಕನ್ನಡಿಗರಿದ್ದಾರೆಯೇ?

ಸುಲಿದ ಬಾಳೆಯ ಹಣ್ಣಿನಂದದಿ

ಕಳಿದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡರೆ ಸಾಲದೇ ಸಂಸ್ಕೃತದಲಿನ್ನೇನು?

ಪುರಂದರ ದಾಸರು (ಚಿತ್ರಕೃಪೆ: ಇಂಟರ್ನೆಟ್)

ಕನ್ನಡದ ಕವಿಗಳು ತಮ್ಮ ಸೃಜನಶೀಲತೆಯನ್ನು ಆಳರಸರಿಗೆ ಒತ್ತೆಯಿಡದ ವೈಚಾರಿಕತೆಯನ್ನು ಕಾಯ್ದುಕೊಂಡದ್ದನ್ನು ನಾವು ಮರೆಯಬಾರದು. ವಿಜಯನಗರ ಸಾಮ್ರಾಜ್ಯವನ್ನು ಎಲ್ಲರೂ ಮೈಮರೆತು ಹಾಡಿ ಹೊಗಳುತ್ತಿರುವಾಗ ಪುರಂದರದಾಸರು  ಧೈರ್ಯವಾಗಿ ಅದರ ವೈಭವವನ್ನು ನಿರಾಕರಿಸಿ , ಅವೆಲ್ಲವೂ

ʼಲೊಳಲೊಟ್ಟೆ ಎಲ್ಲ ಲೊಳಲೊಟ್ಟೆ ʼ
ಆನೆ ಕುದುರೆ ಒಂಟೆ ಲೊಳಲೊಟ್ಟೆ ಬಹು
ಸೇನೆ ಭಂಡಾರವು ಲೊಳಲೊಟ್ಟೆ
ಮುತ್ತು ಮಾಣಿಕ್ಯ ಲೊಳಲೊಟ್ಟೆʼ

ಎಂದು ಧೈರ್ಯವಾಗಿ ಬರೆದರು.

ಕನ್ನಡವು ಮಡಿವಂತರ ಭಾಷೆಯಲ್ಲ ಎಂಬುದಕ್ಕೆ ಆಂಡಯ್ಯ ಒಳ್ಳೆಯ ಉದಾಹರಣೆ. ಅವನು ಬಹಳ ನಿಷ್ಠೆಯಿಂದ ಸಂಸ್ಕೃತ ಪದಗಳನ್ನು ಬಳಸದೆಯೇ ʼಕಬ್ಬಿಗರ ಕಾವʼ ಎಂಬ ಕಾವ್ಯವನ್ನು ಬರೆದರೂ ಅವನ ಕಾವ್ಯವೇನೂ ಅಂತ ಮನ್ನಣೆಗೆ ಒಳಗಾಗಲಿಲ್ಲ.

ಇಂಥ ಉಜ್ವಲ ಪರಂಪರೆಗೆ ನಾವು ಉತ್ತರಾಧಿಕಾರಿಗಳಾಗುವುದು ಹೇಗೆ ಎಂದು ಯೋಚಿಸಲು ಇದು ಸಕಾಲ.

ಪುರುಷೋತ್ತಮ ಬಿಳಿಮಲೆ

ಜಾನಪದ, ಯಕ್ಷಗಾನ, ಸಾಂಸ್ಕೃತಿಕ ಸಂಶೋಧನೆ ಮತ್ತು ಅಧ್ಯಯನಗಳಲ್ಲಿ ಇವರದು ಬಹು ಮುಖ್ಯ ಹೆಸರು.

ಬಿಳಿಮಲೆ ಕಂಡ ಕಾಂತಾರ: ಎಂಚಿನಲಾ ಆವಡ್‌, ಸಿನೇಮಾ ಎಡ್ಡೆ ಉಂಡುಯೇ, ಒರೊ ತೂವೊಲಿ
ಕಾಂತಾರ ಚಿತ್ರದ ಕುರಿತ ವಿಮರ್ಶೆಗಳ ಸುರಿಮಳೆ ನಿಲ್ಲುತ್ತಿಲ್ಲ. ಕರಾವಳಿಯ ಬೂತಾರಾಧನೆಗಳ ಕುರಿತು ಅಧಿಕೃತವಾಗಿ ಮಾತನಾಡಬಲ್ಲ, ಸಾಹಿತಿ-ಸಂಶೋಧಕ ಡಾ.ಪುರುಷೋತ್ತಮ ಬಿಳಿಮಲೆ ಕಾಂತಾರ ನೋಡಿದ ನಂತರ ಬರೆದಿರುವ ಬರೆಹ ಇಲ್ಲಿದೆ.

ಕೊನೆಗೂ ಕಾಂತಾರ ಸಿನೇಮಾವನ್ನು ಕನ್ನಡದಲ್ಲಿಯೇ ನೋಡಿದೆ. ನನಗೆ ಖುಷಿಯಾಯಿತು. ಕರಾವಳಿಯ ಬದುಕಿನ ಎರಡು ಕಣ್ಣುಗಳಂತಿರುವ ಭೂತಾರಾಧನೆ ಮತ್ತು ಯಕ್ಷಗಾನಗಳನ್ನು ಅತ್ಯಂತ ಸೃಜನಶೀಲವಾಗಿ ಮರು ಸೃಷ್ಟಿಸಿದವರು ಕಡಿಮೆ ಎಂದೇ ಹೇಳಬೇಕು. ಎಷ್ಟೋ ಬಾರಿ ಈ ಪ್ರಕಾರಗಳು ಎಷ್ಟು ಸಶಕ್ತವಾಗಿರುತ್ತವೆ ಎಂದರೆ ಸೃಜನಶೀಲತೆಯ ಅನೇಕ ಸಾಧ್ಯತೆಗಳನ್ನು ಅವುಗಳೇ ಸೂರೆಗೊಂಡಿರುತ್ತವೆ. ಈ ನಿಟ್ಟಿನಲ್ಲಿ ಕಾಂತಾರವು ಕರಾವಳಿಯ ಬದುಕಿನ ಕೆಲವು ಆಯಾಮಗಳನ್ನು ಮೊದಲಬಾರಿಗೆ ತೆರೆಯಮೇಲೆ ತಂದಿದೆ.

ಪಂಜುರ್ಲಿ ದೈವ, ಅದರ ಗಗ್ಗರದ ನಿಗೂಢ ದನಿ, ಸೂಟೆ ( ದೊಂದಿ), ಹಸಿರು ಕಾಡು, ಕಂಬಳ, ಹೊಡೆದಾಟ, ಬೀಡಿ, ಶರಾಬು, ಕೋಳಿಕಟ್ಟ, ಯಕ್ಷಗಾನ, ಮೀನು, ವಿಭಿನ್ನ ಕನ್ನಡ ಇತ್ಯಾದಿಗಳನ್ನು ನಿರ್ದೇಶಕ_ರಿಷಭ್ ಶೆಟ್ಟಿಯವರು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಕರಾವಳಿಯ ಕಡಲಿನ ಅಬ್ಬರ, ದೈವ ನರ್ತಕರೇ ಸೃಷ್ಟಿಸುವ ಸಂಗೀತ, ಕಾಡೇ ಹುಟ್ಟಿಸುವ ನಿಗೂಢ ಧ್ವನಿ ಇತ್ಯಾದಿಗಳನ್ನು ಇಲ್ಲಿ ಹೆಚ್ಚಾಗಿ ಬಳಸಿಕೊಂಡಿಲ್ಲ. ಪಾಡ್ದನದ, ಕಬಿತಗಳ ಲಯಗಾರಿಕೆಯ ಮಾಧುರ್ಯವನ್ನು ಇಲ್ಲಿ ಕೇಳಲಾರೆವು. ಮೂಲತ: ಈ ಲಯಗಳು ದೈವವೊಂದರ ದುರಂತಕ್ಕೆ ಪರಿಣಾಮಕಾರಿಯಾದ ಹಿನ್ನೆಲೆಯನ್ನು ಒದಗಿಸಿಕೊಡುತ್ತವೆ. ಬಹುಶ: ಕಮರ್ಶಿಯಲ್‌ ಸಿನೇಮಾವೊಂದು ಇವನ್ನೆಲ್ಲ ಬಳಸಿಕೊಳ್ಳುವುದೂ ಕಷ್ಟ.

ಈ ಚಿತ್ರವು 1870, 1970 ಮತ್ತು 1990 ರ ಮೂರು ಅವಧಿಗಳಲ್ಲಿ ಕರಾವಳಿ ಕಂಡ ಸ್ತಿತ್ಯಂತರಗಳನ್ನು ಒಂದು ಚೌಕಟ್ಟಾಗಿ ಇರಿಸಿಕೊಂಡಿದೆ. ವಸಾಹತು ಕಾಲಘಟ್ಟದಲ್ಲಿ ಥಾಮಸ್‌ ಮುನ್ರೋ ಮೊದಲ ಬಾರಿಗೆ ಕಾಡಿನ ಮೇಲೆ ಪ್ರಭುತ್ವ ಸಾಧಿಸುವಂತ ಕಾನೂನುಗಳನ್ನು ತಂದ. ಈಸ್ಟ್‌ ಇಂಡಿಯಾ ಕಂಪೆನಿಯ ಹಡಗುಗಳು ಮರಗಳನ್ನು ಹೊತ್ತು ಸಾಗಿಸಲು ಸದಾ ಸಿದ್ಧವಾಗಿರುವಾಗ ಅದಕ್ಕೆ ಬೇಕಾದ ಕಾನೂನನ್ನು ಅವರೇ ತಂದುಕೊಂಡಿರುವುದು ಆಶ್ಚರ್ಯದ ವಿಷಯವೇನೂ ಅಲ್ಲ. ಕಾಡಿನ ಒತ್ತುವರಿ, ಕಾಡಿನ ಮಕ್ಕಳು ತಮ್ಮದೇ ಕಾಡಿನಲ್ಲಿ ಅನಾಥರಾಗುವುದು ಈ ಸಿನೇಮಾದಲ್ಲಿಯೂ ಬಂದಿದೆ.

೧೯೭೦ರ ದಶಕದಲ್ಲಿ ಭೂಮಸೂದೆ ಜ್ಯಾರಿಗೆ ಬಂದಾಗ ಭೂ ಸಂಬಂಧಗಳಲ್ಲಿ ಅಮೂಲಾಗ್ರ ಬದಲಾವಣೆಯಾಯಿತು. ದೈವ ನರ್ತಕರೂ ಅದರಿಂದ ಕೆಲವು ತೊಂದರೆಗಳಿಗೆ ಒಳಗಾದರು. ಸಿನೇಮಾದಲ್ಲಿ ಗುರುವನ ಕೊಲೆ ಅಂಥದ್ದರ ಒಂದು ಸಂಕೇತ. ಆ ಕಾಲದಲ್ಲಿ ಸ್ವಲ್ಪ ಬಿಕ್ಕಟ್ಟನ್ನೆದುರಿಸಿದ ಭೂತಾರಾಧನೆಯು, ೧೯೯೦ರ ಆನಂತರ ಮತ್ತೆ ವೈಭವದ ದಿನಗಳನ್ನು ಕಂಡಿತು. ತುಳುನಾಡಿನ ಹೊರಗಡೆಗೆ, ಮುಖ್ಯವಾಗಿ ಮುಂಬೈಗೆ ವಲಸೆ ಹೋದ ತುಳುವರು ಕಷ್ಟ ಪಟ್ಟು ದುಡಿದು ಶ್ರೀಮಂತರಾಗಿ ಮತ್ತೆ ಹುಟ್ಟಿದೂರಿನ ಭೂತಾರಾಧನೆ ಮತ್ತು ನಾಗಾರಾಧನೆಗೆ ಹಣದ ತೊಂದರೆಯಾಗದಂತೆ ನೋಡಿಕೊಂಡರು. ಇದರಿಂದ ಅವರಿಗೆಲ್ಲ ಊರಿನಲ್ಲೊಂದು ಗುರುತು ಕೂಡಾ ಪ್ರಾಪ್ತಿಸಿತು. ಈ ಹಿನ್ನಲೆಯಲ್ಲಿ ಕಾಂತಾರವು ಆಯ್ದುಕೊಂಡ ಕಾಲದ ಚೌಕಟ್ಟು ಅರ್ಥಪೂರ್ಣವಾಗಿದೆ.

ಸಿನೇಮಾವನ್ನು ಈಗಾಗಲೇ ಬಹುತೇಕ ಎಲ್ಲರೂ ನೋಡಿರುವುದರಿಂದ ಮತ್ತೆ ನಾನು ಕತೆ ಹೇಳುವುದಿಲ್ಲ.
ಚಿತ್ರದ ಕೊನೆಯಲ್ಲಿ ರಿಷಭ್ ಶೆಟ್ಟಿಯವರು ಮಾಡಿದ ಅಭಿನಯ ಅಮೋಘ. ದೈವಾರಾಧನೆಯಲ್ಲೂ ನಾಯಕರು ಅರ್ಧವಯಸ್ಸಿನಲ್ಲಿ ಸತ್ತು, ಆಮೇಲೆ ಮಾಯಕಗಳಾಗಿ ಕೊಂದವರ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ. ಉದಾಹರಣಗೆ ಕಲ್ಕುಡ -ಕಲ್ಲುರ್ಟಿಯವರು, ʼಜೀವ ಇರುವಾಗ ನೋಡಲಿಕ್ಕೆ ಆಗಲಿಲ್ಲ, ಸತ್ತು ನೋಡಿಕೊಳ್ಳುತ್ತೇವೆ; ಎಂದು ಹೇಳಿ ಮಾಯಕದಲ್ಲಿ ಅರಸನ ಮನೆಗೆ ಬೆಂಕಿ ಇಡುತ್ತಾರೆ, ಅರಸಿಯರಿಗೆ ಹುಚ್ಚು ಹಿಡಿಸುತ್ತಾರೆ. ಪಾಡ್ದನಗಳಲ್ಲಿ ಈ ಭಾಗ ಉಗ್ರವೇ ಆಗಿರುತ್ತದೆ. ಈ ವಿಷಯದಲ್ಲಿ ಅದು ಹಿಂದೂ ದೇವರುಗಳಿಗಿಂತ ಭಿನ್ನವೇ ಹೌದು. ನನಗೆ ಗೊತ್ತಿರುವ ಯಾವ ಹಿಂದೂ ದೇವರು ಕೂಡಾ ಅರ್ಧ ವಯಸ್ಸಿನಲ್ಲಿ ಸತ್ತು ಆನಂತರ ಮಾಯಕದಲ್ಲಿ ಸೇಡು ತೀರಿಸಿಕೊಳ್ಳುವುದನ್ನು ನಾನು ಓದಿಲ್ಲ. ದೈವವೊಂದರ ಮಾಯಕದ ಸೇಡಿನ ಭಾಗ , ಅದನ್ನು ಶೆಟ್ಟಿ ಅಭಿನಯಿಸಿದ ರೀತಿ ಕಾಂತಾರದ ಉತ್ಕೃಷ್ಟ ಭಾಗ ಎಂದು ನನ್ನ ಭಾವನೆ.

ಸಿನೇಮಾ ನೋಡಿ ಬಂದ ಮೇಲೆ ಈ ಸಿನೇಮಾ ಯಾಕಿಷ್ಟು ಚರ್ಚೆಗೆ ಒಳಗಾಯಿತು ಎಂಬುದು ನನಗೆ ಸ್ಪಷ್ಟವಾಗಲಿಲ್ಲ. ಪಂಜುರ್ಲಿಯನ್ನು ಕೊನೆಗೆ ವರಾಹ ರೂಪಿ ಎಂದು ಸಂಸ್ಕೃತದಲ್ಲಿ ನುತಿಸಿದ್ದು ಮತ್ತು ಅದಕ್ಕೆ ಪೂರಕವಾಗಿ ಪಾಡ್ದನಗಳಲ್ಲಿ ಇಲ್ಲದೇ ಇರುವ ಶಾಸ್ತ್ರೀಯಕ್ಕೆ ಹತ್ತಿರವಿರುವ ಸಂಗೀತ ಬಳಸಿದ್ದು ವಾಸ್ತವವಾಗಿ ಸಿನೇಮಾದ ಅತ್ಯಂತ ದುರ್ಬಲ ಭಾಗ. ಅದು ಆ ಕತೆಯ ಅಲ್ಲಿವರೆಗಣ ಬೆಳವಣಿಗೆಗೆ ಹೊಂದುವುದೇ ಇಲ್ಲ‌. ಆದರೆ ಈ ನಿಟ್ಟಿನಲ್ಲಿ ಸೃಜನಶೀಲ ಕಲಾವಿದನಿಗೆ ಇರಬೇಕಾದ ಸ್ವಾತಂತ್ರ್ಯವನ್ನು ನಾನಂತೂ ಪ್ರಶ್ನಿಸಲಾರೆ.

ಹೊಡೆದಾಟ, ಬಡಿದಾಟ, ಕೊಲೆ ಇತ್ಯಾದಿಗಳೆಲ್ಲ ಕರಾವಳಿಯಲ್ಲಿ ಸ್ವಲ್ಪ ಹೆಚ್ಚೇ ಇರುವುದರಿಂದಾಗಿ ರಿಷಭ ಶೆಟ್ಟಿಯವರು ಅದನ್ನು ಸ್ವಲ್ಪ ಜಾಸ್ತೀಯೇ ತೋರಿಸಿದಂತಿದೆ.
ಎಂಚಿನಲಾ ಆವಡ್‌, ಸಿನೇಮಾ ಎಡ್ಡೆ ಉಂಡುಯೇ, ಒರೊ ತೂವೊಲಿ

ತುಳುನಾಡಿನ ದೈವಗಳು: ಒಂದು ಟಿಪ್ಪಣಿ
ತುಳುನಾಡಿನ ದೈವಗಳನ್ನು ʼಹಿಂದೂ ಧರ್ಮದʼ ಚೌಕಟ್ಟಿಗೆ ಒಳಪಡಿಸುವ ಪ್ರಕ್ರಿಯೆ ಆರಂಭವಾಗಿ ಕೆಲವು ವರ್ಷಗಳೇ ಕಳೆದಿವೆ. ಈಗ ಅದಕ್ಕೆ ಮತ್ತಷ್ಟು ಚಾಲನೆ ದೊರಕಿದೆ. ʼಹಿಂದೂ ಧರ್ಮʼ ಎಂದರೇನು ಎಂಬುದನ್ನು ಯಾರೂ ಸರಿಯಾಗಿ ನಿರ್ವಚಿಸದೇ ಇರುವುದರಿಂದ ಅದರೊಳಕ್ಕೆ ಎಲ್ಲವನ್ನೂ ಸುಲಭವಾಗಿ ತುರುಕಲು ಸಾಧ್ಯವಾಗಿದೆ. ʼಹಿಂದೂವಾಗಿ ಸಾಯಲಾರೆ ʼಎಂದ ಅಂಬೇಡ್ಕರರನ್ನು ಕೂಡಾ ಇವತ್ತಿನ ಹಿಂದೂ ರಾಜಕಾರಣ ತನ್ನೊಳಗು ಮಾಡಿಕೊಂಡಿರುವಾಗ ತುಳುನಾಡಿನ ದೈವಗಳನ್ನು ಅದು ಬಿಡಲಾರದು.

ಬಹಳ ಪ್ರಾಚೀನ ಕಾಲದಲ್ಲಿ ತುಳುನಾಡಿಗೆ ವಲಸೆ ಬಂದು ನೆಲೆಯಾಗಿರುವ ತಳಸ್ತರದ ಸುಮಾರು ೩೨ ಸಮುದಾಯಗಳಿವೆ. ಇವರ ಒಟ್ಟು ಸಂಖ್ಯೆ ಸುಮಾರು ಎರಡು ಲಕ್ಷ ಇರಬಹುದು. ಆದಿ ದ್ರಾವಿಡ, ಅಜಿಲ, ನಲ್ಕೆ, ಮಾಯಿಲ, ಬಾಕುಡ, ಭೈರ, ಮೇರ, ಮುಗ್ಗೆರ್ಲು, ಮಲೆ ಕುಡಿಯ, ಬತ್ತಡ, ಪಾಣಾರ, ಮೊಗೇರ, ಪರವ, ಪಂಬದ, ಮೊದಲಾದ ಸಮುದಾಯಗಳು ಈ ಗುಂಪಿಗೆ ಸೇರುತ್ತವೆ. ಶ್ರೇಣೀಕೃತ ಸಮಾಜದ ತಳಭಾಗದಲ್ಲಿರುವ ಇವರಲ್ಲಿ ಕೆಲವರು ಭೂತಾರಾಧನೆಯ ಸಂದರ್ಭದಲ್ಲಿ ತಾವೇ ದೈವಗಳಾಗಿ, ತಾತ್ಕಾಲಿಕವಾಗಿ ನಿರ್ಮಿತವಾದ ಕಾಲ, ಸ್ಥಳ ಮತ್ತು ಸಮುದಾಯಗಳ ಒಗ್ಗೂಡುವಿಕೆಯ ಸಂದರ್ಭದಲ್ಲಿ ಜಾತಿ ಸಮಾಜದ ಶ್ರೇಣೀಕರಣದ ಮೇಲ್ತುದಿಗೆ ಚಲಿಸುತ್ತಾರೆ. ಆರಾಧನೆ ಮುಗಿದ ಮೇಲೆ ಮತ್ತೆ ಯಥಾಸ್ಥಿತಿ ಮುಂದುವರೆಯುತ್ತದೆ.

ತುಳುನಾಡಿನ ದೈವಾರಾಧನೆಯ ಕೇಂದ್ರದಲ್ಲಿರುವ ಸಾಂಸ್ಕೃತಿಕ ನಾಯಕರ ಸಂಖ್ಯೆಯು ಸಾವಿರಕ್ಕೂ ಮೀರಿದೆ ಎಂದು ವಿದ್ವಾಂಸರು ಹೇಳಿದ್ದಾರೆ. ಇದರಲ್ಲಿ ಬಬ್ಬರ್ಯ, ಆಲಿ ಮೊದಲಾದ ಮುಸ್ಲಿಮರೂ ಇದ್ದಾರೆ. ಮಂಜೇಶ್ವರದ ಉದ್ಯಾವರದಲ್ಲಿ ನಡೆಯುವ ಅರಸು ದೈವಗಳ ನೇಮದಲ್ಲಿ ಮುಸ್ಲಿಂ ಕುಟುಂಬಗಳು ಭಾಗವಹಿಸಲೇ ಬೇಕು. ಮುಸಲ್ಮಾನರಲ್ಲಿ ದೈವಾರಾಧನೆ ಇಲ್ಲ. ಹಿಂದೂ ದೇವರುಗಳಲ್ಲಿ ಮುಸಲ್ಮಾನರು ಇರುವುದು ಸಾಧ್ಯವಿಲ್ಲ. ಅಂಥ ದೈವಗಳನ್ನು ಪೂಜಿಸಲು ಬೇಕಾದ ಶಾಸ್ತ್ರೋಕ್ತ ಮಂತ್ರಗಳೂ ಇರಲಾರವು. ಆದರೆ ಭೂತಾರಾಧನೆಯಲ್ಲಿ ಇವೆರಡೂ ಸಾಧ್ಯವಾಗಿರುವುದೇ ನನ್ನಂಥವರಿಗೆ ಅದರಲ್ಲಿ ಕುತೂಹಲ ಹುಟ್ಟಲು ಕಾರಣ. ಈ ದೈವಗಳ ಕತೆಗಳನ್ನು ಪಾಡ್ದನಗಳು ನಿರೂಪಿಸುತ್ತವೆ. ಪಾಡ್ದನಗಳ ಲೋಕ ಅದ್ಭುತವಾಗಿದ್ದು ಕ್ಲಾಸಿಕಲ್‌ ಸಂಪ್ರದಾಯಕ್ಕಿಂತ ಭಿನ್ನವಾಗಿವೆ. ಉದಾಹರಣೆಗೆ, ಗುಳಿಗ ದೈವವು ತಾಯಿಯ ಬಲದ ಸಿರಿಮೊಲೆ ಒಡೆದು ಹೊರಬಂದು ಎಡದ ಮೊಲೆ ತಿಂದು ಕೈ ತಟ್ಟಿ ನಗುವುದನ್ನು ಗಮನಿಸಬೇಕು. ಪಾಡ್ದನಗಳ ಭಾಷೆ, ವಸ್ತು, ನಿರೂಪಣಾ ವಿಧಾನ ಇತ್ಯಾದಿಗಳ ಬಗ್ಗೆ ದೇಶ ವಿದೇಶಗಳ ವಿದ್ವಾಂಸರು ಸಾಕಷ್ಟು ಕೆಲಸ ಮಾಡಿದ್ದಾರೆ. ತುಳು ದೈವಗಳ ಕೆಲವು ವೈಶಿಷ್ಟ್ಯಗಳನ್ನು ಈ ಮುಂದಿನಂತೆ ಸಂಕ್ಷಿಪ್ತವಾಗಿ ಪಟ್ಟಿ ಮಾಡಬಹುದು-

ಪಾಡ್ದನಗಳಲ್ಲಿರುವ ದೈವದ ಕಥೆಗಳು ಬಹುಮಟ್ಟಿಗೆ ದುಃಖಾಂತವಾಗಿರುತ್ತವೆ. ಈ ವಿಷಯದಲ್ಲಿ ಅವು ನಮ್ಮ ಸಂಸ್ಕೃತ ಕಥನ ಪರಂಪರೆಗಿಂತ ತುಂಬಾ ಭಿನ್ನ. ಭೂತ ಕಟ್ಟುವ ಪರವನ ಹೆಂಡತಿ ಮಂಗಣೆಯ ಚೆಲುವಿಗೆ ಮರುಳಾಗಿ, ಅವಳನ್ನು ಪಡೆಯಲು ಅವಳ ಗಂಡನನ್ನೂ ಕೊಂದು, ತನ್ನ ಸರ್ವಸ್ವವನ್ನೂ ಕಳೆದುಕೊಂಡು, ಕೊನೆಗೆ ಮಂಗಣೆ ಬೆಂಕಿಗೆ ಹಾರಿದಾಗ ತಾನೂ ಬೆಂಕಿಗೆ ಹಾರಿ ಸತ್ತ ಬೊಟ್ಟುಪ್ಪಾಡಿ ಬಲ್ಲಾಳನ ಸಂಧಿಯು ನಾನು ಇದುವರೆಗೆ ಓದಿದ ಅತ್ಯುತ್ತಮ ದುರಂತ ಕಾವ್ಯಗಳಲ್ಲಿ ಒಂದು.

ಈ ಸಾಂಸ್ಕೃತಿಕ ನಾಯಕರು ದೈವಗಳಾಗಲು ಅವರ ಜಾತಿ ಅಥವಾ ಪೂರ್ವಜನ್ಮದ ಪುಣ್ಯ ವಿಶೇಷಗಳು ಕಾರಣವಾಗುವುದಿಲ್ಲ. ಆಲಿ, ಬಬ್ಬರ್ಯರು ಮುಸ್ಲಿಮರಾಗಿದ್ದರೆ, ಕಾಂತಾಬಾರೆ-ಬೂದಾಬಾರೆಯರು ಬಿಲ್ಲವ ವರ್ಗಕ್ಕೆ ಸೇರಿದವರು. ತನಿಯ ಕೊರಗ ಸಮುದಾಯಕ್ಕೆ ಸೇರಿದ ದೈವ.

ಹೆಚ್ಚಿನ ದೈವಗಳು ತಮ್ಮ ಮಧ್ಯವಯಸ್ಸಿನಲ್ಲಿ ಮಹತ್ ಸಾಧನೆ ಮಾಡಿ, ಇಲ್ಲವೇ ಸ್ಥಾಪಿತ ಮೌಲ್ಯಗಳಿಗೆ ಮುಖಾಮುಖಿಯಾಗಿ, ಸಾಯುತ್ತಾರೆ. ಕಾರ್ಕಳದಲ್ಲಿ ಗೊಮ್ಮಟನನ್ನು ಕೆತ್ತಿದ ಕಲ್ಕುಡನು ಅರಸನ ಕಾರಣದಿಂದ ತನ್ನ ಬಲದ ಕೈಯನ್ನೂ ಎಡದ ಕಾಲನ್ನೂ ಕಳಕೊಳ್ಳಬೇಕಾಗುತ್ತದೆ. ಅಣ್ಣನಿಗಾದ ಅನ್ಯಾಯವನ್ನು ತಂಗಿ ಕಲ್ಲುರ್ಟಿ ಪ್ರಶ್ನಿಸುತ್ತಾಳೆ. ಗಂಡಸರ ಅನ್ಯಾಯವನ್ನು ಪ್ರತಿಭಟಿಸಿದ ಸಿರಿಯು ಸತ್ತು ದೈವವಾಗುತ್ತಾಳೆ. ಬಳಜೇಯಿ ಮಾನಿಗದಲ್ಲಿ ಚೆನ್ನೆಮಣೆ ಆಟದಲ್ಲಿ ಮೋಸ ಮಾಡಿದ ಗಂಡನಿಗೆ ತವರು ಮನೆಯಲ್ಲಿದ್ದ ಮಾನಿಗಳು ಪೊರಕೆಗೆ ತನ್ನ ತಾಳಿ ಕಟ್ಟಿ ದಂಡಿಗೆಯಲ್ಲಿ ಕಳಿಸುತ್ತಾಳೆ.

ಕ್ಲಾಸಿಕಲ್‌ ಸಂಪ್ರದಾಯದಲ್ಲಿ ನಾಯಕರು ಅವರ ತಾಯಿಯ ಗರ್ಭದಲ್ಲಿರುವಾಗ ದೇವತೆಗಳು ಪುಷ್ಟವೃಷ್ಟಿ ಸುರಿಸುತ್ತಾರೆ. ಆದರೆ ಪಾಡ್ದನಗಳಲ್ಲಿ ಈ ಬಗೆಯ ವಿವರಗಳಿಲ್ಲ. ಈ ವೀರರ ತಾಯಂದಿರು ಗರ್ಭ ಧರಿಸುವಾಗ ಯಾವುದೇ ಶುಭ ಶಕುನಗಳು ಸಂಭವಿಸುವುದಿಲ್ಲ. ಅವರು ಕೇವಲ ಸಾಮಾನ್ಯರು.

ಈ ಸಾಂಸ್ಕೃತಿಕ ನಾಯಕರು ವೀರರಾಗಲು ಅವರು ಬೇರೊಂದು ದೈವದ ಅವತಾರವಾಗಿರುವುದು ಕಾರಣ ಅಲ್ಲ. ಅವರಿಗೆ ಯಾವುದೇ ಪೂರ್ವ ಜನ್ಮದ ಪುಣ್ಯ ವಿಶೇಷಗಳಿಲ್ಲ. ಈ ಜನ್ಮದಲ್ಲಿ ಅವರು ಸಾಧಿಸಿದ್ದೇ ಅಂತಿಮ. ಅವರ ಸಾಮಾಜಿಕ ಸ್ಥಾನಮಾನಗಳು (ಉದಾ: ಬ್ರಾಹ್ಮಣನಾಗಿರುವುದು, ಅರಸು ಕುಮಾರನಾಗಿರುವುದು) ಅವರ ವೀರತ್ವವನ್ನು ನಿರ್ಧರಿಸುವುದಿಲ್ಲ.

ದೈವಗಳಾಗಿರುವ ತುಳುನಾಡಿನ ಸಾಂಸ್ಕೃತಿಕ ನಾಯಕರು ಎಲ್ಲರಂತೆ ಜನಿಸಿ, ಬೆಳೆಯುತ್ತಾ ಬಗೆ ಬಗೆಯ ಒತ್ತಡಕ್ಕೆ ಒಳಗಾಗುತ್ತಾರೆ. ತಮ್ಮ ಪ್ರಾಮಾಣಿಕತೆ, ಬುದ್ಧಿಮತ್ತೆ, ಮತ್ತು ಸಾಹಸಗಳಿಂದ ಜನಾನುರಾಗಿಯಾಗಿರುವ ಅವರು ಸಮಾಜ ಒಡ್ಡುವ ಸವಾಲುಗಳಿಗೆ ದಿಟ್ಟವಾಗಿ ಉತ್ತರಿಸುತ್ತಾರೆ ಮತ್ತು ಅದೇ ಕಾರಣಕ್ಕೆ ಸತ್ತು ದೈವಗಳಾಗುತ್ತಾರೆ.

ಸಾಂಪ್ರದಾಯಿಕ ಕ್ಲಾಸಿಕಲ್‌ ಕಥನಗಳು ನೇರವಾಗಿಯೋ ಪರೋಕ್ಷವಾಗಿಯೂ ವರ್ಣಾಶ್ರಮ ಧರ್ಮದ ಮತ್ತು ಪ್ರಭುತ್ವದ ಪರವಾಗಿಯೇ ಇರುತ್ತವೆ. ಆದರೆ ತುಳುನಾಡಿನ ದೈವ ಕಥನಗಳು ಜಾತಿ ಸಮಾಜದ ಒಳಗಿನ ಸಂಘರ್ಷಗಳನ್ನು ಬಹಿರಂಗಕ್ಕೆ ತರುತ್ತವೆ. ಕನ್ನಲ್ಲಾಯ ದೈವವು ಜಾತಿ ಕೇಳಿ ನೀರುಕೊಟ್ಟವಳನ್ನೇ ಮಾಯಮಾಡುತ್ತದೆ. ಕೋಡ್ದಬ್ಬು ಪಾಡ್ದನವು ದಲಿತ ಹುಡುಗನೊಬ್ಬ ತನ್ನ ಸಾಮರ್ಥ್ಯದಿಂದ ವಿದ್ಯಾವಂತನಾದಾಗ ಉಳಿದವರು ಅವನ ವಿರುದ್ಧ ಹೇಗೆ ಸಂಚು ಮಾಡುತ್ತಾರೆ ಎಂಬುದನ್ನು ಮನೋಜ್ಞವಾಗಿ ವಿವರಿಸುತ್ತದೆ.

ಈ ಬಗೆಯ ಕಥನಗಳು ಭಾರತೀಯ ಸಂಸ್ಕೃತಿಯ ಸಶಕ್ತವಾದ ಒಂದು ಭಾಗವೇ ಹೌದು. ಅವನ್ನು ಬದಲಿಸಿ ಇನ್ನಾವುದೋ ಒಂದರ ಭಾಗ ಮಾಡುವುದರಿಂದ ಯಾರಿಗೂ ಹೆಚ್ಚು ಪ್ರಯೋಜನ ಇಲ್ಲ.

ಪೋಟೋ ಕೃಪೆ: ಉಷ ಕಟ್ಟೆಮನೆ

– ಡಾ. ಪುರುಷೋತ್ತಮ ಬಿಳಿಮಲೆ
ನಿವೃತ್ತ ಪ್ರಾಧ್ಯಾಪಕರು, ಜೆ.ಎನ್.ಯು, ನವದೆಹಲಿ

ಇವತ್ತು ಹುಬಾಶಿಕ ನಾಟಕ : ಪುರುಷೋತ್ತಮ ಬಿಳಿಮಲೆ
ಕುಂದಾಪುರದ ಸಮೀಪದ ಆಲೂರಿನಲ್ಲಿ ಕೊರಗ ಮಕ್ಕಳ ಮೇಳ ನಡೆಯುತ್ತಿದೆ. ಇವತ್ತು (ಅ. ೧೬) ಆರು ಗಂಟೆಗೆ  ಸಮುದಾಯದ ವಾಸುದೇವ ಗಂಗೇರ್ ನಿರ್ದೇಶನದಲ್ಲಿ ಹುಬಾಶಿಕಾ ನಾಟಕ ಪ್ರಸ್ತುತಿಯೊಂದಿಗೆ ರಜಾಮೇಳಕ್ಕೆ ತೆರೆಬೀಳುತ್ತಿದೆ. ಕಾಡಿನ ಮಕ್ಕಳ ಬಣ್ಣದ ಹೆಜ್ಜೆಗೆ ಪೀಪಲ್‌ ಮೀಡಿಯಾದ ಶುಭಾಶಯಗಳು.

ಹುಬಾಶಿಕ ನಾಟಕದಲ್ಲಿ  ʼನೀವಿದ್ದರೆ ಮಕ್ಕಳಿಗೆ ಖುಷಿಯಾಗುತ್ತದೆʼ ಎಂದು ಗೆಳೆಯ ಉದಯ ಗಾಂವ್ಕರ್‌ ಬರೆದಿದ್ದಾರೆ ( ದಾರಿಯ ವಿವರಕ್ಕಾಗಿ ಕರೆಮಾಡಿ: 9739249864). ಹತ್ತಿರ ಇದ್ದಿದ್ದರೆ ನಾನೀಗ ಆಲೂರಿನಲ್ಲಿ ಮಕ್ಕಳ ಜೊತೆ ಕುಣಿದಾಡುತ್ತಿದ್ದೆ.

ಕರಾವಳಿಯ ಅನೇಕ ಸಣ್ಣ ಸಮುದಾಯಗಳ ಬಗೆಗೆ ನಮ್ಮಲ್ಲಿನ್ನೂ ಗಂಭೀರವಾದ ಅಧ್ಯಯನಗಳು ನಡೆದಿಲ್ಲ. ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಿ ನೆಲೆಸುವ ಗುಂಪುಗಳು ಆರಂಭಿಕ ಹಂತದಲ್ಲಿ ಸಂಘರ್ಷವನ್ನು ಇದಿರಿಸಲೇಬೇಕು. ಆನಂತರ ನಿಧಾನವಾಗಿ ಅವು ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತವೆ. ಹಾಗೆ ಹೊಂದಿಕೊಂಡಾಗ ಅಲ್ಲಿ ಹೊಸ ಬಗೆಯ ಸಂಸ್ಕೃತಿಯೊಂದು ಹುಟ್ಟಿಕೊಳ್ಳುತ್ತದೆ. ಭಾರತೀಯ ಸಂಸ್ಕೃತಿ ಎಂದು ಇಂದು ನಾವು ಏನನ್ನು ಗುರುತಿಸುತ್ತೇವೆಯೋ ಅದು ಶತಮಾನಗಳ ವಲಸೆ, ಸಂಘರ್ಷ ಮತ್ತು ಸಮನ್ವಯಗಳಲ್ಲಿ ರೂಪುಗೊಂಡದ್ದು.  ಅಲ್ಲಿ ʼಶುದ್ಧʼ ಎಂಬುದಿಲ್ಲ.

ತರಬೇತಿ ಶಿಬಿರ

ಕರಾವಳಿ ಕರ್ನಾಟಕದ ಪುಟ್ಟ ಕೊರಗ ಸಮುದಾಯವು ಯಾವಾಗ ಕರಾವಳಿಗೆ ವಲಸೆ ಬಂತೋ ತಿಳಿಯದು.  ಅವರ ಅರಸನ ಹೆಸರು ‘ಹುಬಾಶಿಕ’. “ಜಿಲ್ಲೆಯಲ್ಲಿ ಅತಿ ಪೂರ್ವದಲ್ಲಿ ಕೊರಗರ ಪಂಗಡದವರಿಗೆ ಓರ್ವ ರಾಜ ಇದ್ದ. ಆತನ ಹೆಸರು ‘ಹುಬಶಿಕ’  ಈ ಹುಬಶಿಕನು ಜಿಲ್ಲೆಯ ಆಗಿನ ಅಧಿರಾಜನಾದ ಮಯೂರವರ್ಮನೆಂಬ ರಾಜನ ಮಗನಾದ ಲೋಕಾದಿತ್ಯನಿಂದ ಸೋಲಿಸಲ್ಪಟ್ಟು ಕಾಡಿಗೆ ಹೋದ” ಎಂಬುದು ಜನಪ್ರಿಯವಾದ ಒಂದು ಐತಿಹ್ಯವೂ ಹೌದು. ಇಂಥ ಹೇಳಿಕೆಗಳನ್ನೆಲ್ಲ ಸಂಗ್ರಹಿಸಿದ ಶ್ರೀ ಎಂ.ವೀರಪ್ಪ ಮೊಯಿಲಿ ಅವರು ತಮ್ಮ ʼಕೊಟ್ಟʼ ಕೃತಿಯಲ್ಲಿ ‘ಬಲಿಷ್ಠ ದೊರೆ ಹಬಾಶಿಕನು ಮಂಜೇಶ್ವರದ ದೊರೆ ಅಂಗಾರವರ್ಮನಿಂದ’ ವಂಚಿಸಲ್ಪಟ್ಟು ಕೊಲೆಯಾಗುತ್ತಾನೆʼ ಎಂದು ಬರೆದಿದ್ದಾರೆ.

ವಾಸ್ತವವಾಗಿ ಈ ‘ಹಬಾಶಿಕ’ ಅಥವಾ ‘ಹುಬಾಶಿಕ’ ಯಾರು? ತುಳುನಾಡಿಗೆ ‘ಅನ್ಯ’ವೆಂಬಂತೆ ಕಾಣುವ ಈ ಹೆಸರಿನ ಅರ್ಥವೇನು? ಎಂಬಿತ್ಯಾದಿ ವಿಚಾರಗಳ ಬಗೆಗೆ ಸಮಯ ಸಿಕ್ಕಾಗಲೆಲ್ಲ ನಾವು ಚರ್ಚಿಸುತ್ತಿದ್ದುದುಂಟು. ಆದರೂ ‘ಹಬಾಶಿಕ’ನ ಚಿತ್ರ ಅಸ್ಪಷ್ಟವಾಗುಳಿದಿದೆ.  ೨೦೦೮ರಲ್ಲಿ ನಾನು ಜಪಾನ್ ಸುತ್ತುವಾಗ ‘ಹಬಶಿ’ ಪದ ನನ್ನ ಕಿವಿಗೆ ಬಿದ್ದಿತ್ತು. ವಿಚಾರಿಸುವಾಗ ‘ಹಬಶಿ’ ಎಂದರೆ ‘ಕಾಡು ಅಥವಾ ದೊಡ್ಡ ಪೊದರು’ ಎಂಬ ಅರ್ಥವಿರುವುದು ತಿಳಿಯಿತು. ಈ ಪದಕ್ಕೂ ಬೌದ್ಧ ಧರ್ಮಕ್ಕೂ ಸಂಬಂಧ ಇದೆ. ಇದನ್ನು ಅನುಸರಿಸಿ ಕೊರಗರು ಮೂಲದಲ್ಲಿ ಬೌದ್ಧರಾಗಿದ್ದರು ಎಂದೂ ಕೆಲವರು ಹೇಳಿದ್ದಾರೆ. ಸ್ವತಃ ಕೊರಗ ಭಾಷೆಯಲ್ಲಿ ‘ಹುಬಶಿ’ ಎಂದರೆ ‘ಕಾಡನ್ನು ಬಗೆಯುತ್ತಾ ಒಳಗೆ ಹೋಗು’ ಎಂಬರ್ಥವಿದೆ.  ಇವೆಲ್ಲವನ್ನೂ ಗಮನಿಸಿದರೆ ‘ಹಬಾಶಿಕ’-ಅಥವಾ ‘ಹುಬಾಶಿಕ’ ಪದವು ಕಾಡು ಮತ್ತು ಕೊರಗರ ನಡುವಣ ಸಂಬಂಧವನ್ನು ವಿವರಿಸುವ ಒಂದು ಪಾರಿಭಾಷಿಕ ಪದದ ಹಾಗೆ ತೋರುತ್ತದೆ.

‘ಹಬಾಶಿಕ’ ಪದವು ಆಫ್ರಿಕಾದಿಂದ ಭಾರತಕ್ಕೆ ವಲಸೆ ಬಂದ ಸಿದ್ಧಿ ಸಮುದಾಯದೊಂದಿಗೂ ಸಂಬಂಧ ಹೊಂದಿದೆ.  ಈ ಸಿದ್ಧಿ ಸಮುದಾಯದ ಬಗ್ಗೆ ಆಳವಾಗಿ ಕೆಲಸ ಮಾಡಿರುವ ಪ್ರೊ. ನಜೀರ್ ಅಲಿ, ಅಮಿ ಕ್ಯಾಟ್ಲಿನ್, ಹೆಲೆನ್ಬಸು, ಹೆನ್ರಿಜಾನ್ ಡ್ರುವೆಲ್ ಮೊದಲಾದವರು ಆಫ್ರಿಕಾದಿಂದ ಹೊರಟ ಸಿದ್ಧಿಯರು ನೇರವಾಗಿ ಸಮುದ್ರ ಮಾರ್ಗವಾಗಿ ಭಾರತದ ಪಶ್ಚಿಮ ಕರಾವಳಿಗೆ ಬಂದ ಬಗ್ಗೆಯೋ ಅಥವಾ ಆಫ್ರಿಕಾದಿಂದ ಮಧ್ಯ ಏಷಿಯಾದ ಮೂಲಕ ಭಾರತದ ಗುಜರಾತಿಗೆ ಬಂದಿಳಿದ ಬಗ್ಗೆಯೋ ಬರೆದಿದ್ದಾರೆ.

ಹಾಗೆ ಬರೆಯುವಾಗ ಅವರೆಲ್ಲ ಇಥಿಯೋಪಿಯಾದಿಂದ ಭಾರತಕ್ಕೆ ಆಗಮಿಸಿದ ‘ಹಬಶಿ’ ಗುಂಪಿನ ಬಗ್ಗೆ ವಿವರ ನೀಡಿದ್ದಾರೆ. ೧೩ನೇ ಶತಮಾನದ ಉತ್ತರಾರ್ಧದಲ್ಲಿ ಇಥಿಯೋಪಿಯಾದಿಂದ ಯೋಧರಾಗಿ ಭಾರತಕ್ಕೆ ಆಗಮಿಸಿದ ಹಬಶಿಗಳು ದೆಹಲಿ ಸುಲ್ತಾನರ ಕೈಕೆಳಗೆ ಕೆಲಸ ಮಾಡಿದರೆಂದೂ  ಅರೆಬಿಕ್ ಭಾಷೆಯಲ್ಲಿ ‘ಹಬಶಿ’ ಎಂದರೆ ‘ಇಥಿಯೋಪಿಯಾದ ಜನರು’ ಎಂಬ ಅರ್ಥವಿರುವುದರನ್ನೂ ಅವರು ಸೂಚಿಸುತ್ತಾರೆ. ಇತಿಹಾಸ ತಜ್ಞೆ ರೇಖಾ ಪಾಂಡೆಯವರು ಕ್ರಿ.ಶ. ೧೨೩೬ರಷ್ಟು ಹಿಂದೆ ಇದ್ದ ‘ಹಬಶಿ ಗುಲಾಮ’ನೊಬ್ಬನ ಬಗ್ಗೆ ಉಲ್ಲೇಖ ನೀಡಿದ್ದಾರೆ.

ಮೊರೊಕ್ಕೋದಿಂದ ಭಾರತಕ್ಕೆ ಬಂದ ಇಬ್ನ ಬಟೂಟನು ಸೈನಿಕರಾಗಿ ಮತ್ತು ನಾವಿಕರಾಗಿ ಉತ್ತರ ಭಾರತದಿಂದ ಶ್ರೀಲಂಕಾದವರೆಗೆ ಕೆಲಸ ಮಾಡುತ್ತಿದ್ದ ‘ಹಬಶಿ’ಗಳ ಕುರಿತು ವಿಶೇಷ ಉಲ್ಲೇಖ ನೀಡಿದ್ದಾನೆ. ಕ್ರಿ.ಶ. ೧೩೯೪ರಲ್ಲಿ ‘ಮಲ್ಲಿಕ್ ಸರ್ವಾರ್’ ಎಂಬ ಹಬಶಿಯು ‘ತಾನು ದೆಹಲಿ ಸುಲ್ತಾನರ ಗುಲಾಮನಲ್ಲ, ಸ್ವತಂತ್ರ ಅರಸ’ ಎಂದು ಘೋಷಿಸಿಕೊಂಡು ಜಾನ್ಪುರ್ ರಾಜ್ಯವಾಳಿಕೊಂಡಿದ್ದನಂತೆ. ಕ್ರಿ.ಶ. ೧೪೫೯ರ ಹೊತ್ತಿಗೆ ಹಬಶಿಗಳು ದೆಹಲಿಯಿಂದ ಬಂಗಾಳದವರೆಗೆ ವ್ಯಾಪಿಸಿಕೊಂಡದ್ದನ್ನು ಮಧ್ಯಕಾಲೀನ ಇತಿಹಾಸ ತಜ್ಞರು ಗುರುತಿಸಿದ್ದಾರೆ. ಕ್ರಿ.ಶ ೧೪೯೧ರಲ್ಲಿ ಬಂಗಾಳದ ಹುಸೇನ್ ಶಾಹಿ ದೊರೆಗಳು ಹಬಶಿಗಳನ್ನು ದಕ್ಷಿಣಕ್ಕೆ ಓಡಿಸಿದರು. ಹಾಗೆ ಓಡಿ ಬಂದ ಹಬಶಿಗಳು ಕರ್ನಾಟಕದ ಬಹುಮನಿ ಸುಲ್ತಾನರ ಕೈಕೆಳಗೆ ಮಿಲಿಟರಿ ಅಧಿಕಾರಿಗಳಾಗಿ ಕೆಲಸ ಮಾಡಿದ್ದರು. ಬಹುಮನಿ ಸುಲ್ತಾನರ ರಾಜಧಾನಿಯಾಗಿದ್ದ ಬೀದರದಲ್ಲಿರುವ ‘ಹಬಶಿಕೋಟ್’ನಲ್ಲಿ ಇಥಿಯೋಪಿಯಾ ಸೈನಿಕರ ಸಮಾಧಿಗಳಿರುವುದನ್ನು ಈಗಲೂ ಕಾಣಬಹುದು.  ಅಹ್ಮದ್ ನಗರದಲ್ಲಿ ಕ್ರಿ.ಶ. ೧೬೦೦-೧೬೨೬ರ ನಡುವೆ ವಜೀರನಾಗಿ ಕೆಲಸ ಮಾಡುತ್ತಿದ್ದ ಮಲಿಕ್ ಅಂಬರನು ಹಬಶಿಯಾಗಿದ್ದ.

ನಾಟಕದ ವೇದಿಕೆ

ಇವೆಲ್ಲಕ್ಕಿಂತ ಮುಖ್ಯವಾಗಿ ಹಬಶಿಗಳು ಕರ್ನಾಟಕ ಕರಾವಳಿ ಪ್ರಾಂತ್ಯದಲ್ಲಿ ಜಲಸೇನೆಯ ಮುಖ್ಯಸ್ಥರಾಗಿ ಮತ್ತು ಸೈನಿಕರಾಗಿ ಕೆಲಸ ಮಾಡಿದ್ದಾರೆಂದು ಅಲ್ತ್ರಸ್ ಬರೆಯುತ್ತಾರೆ. ಅವರ ಪ್ರಕಾರ ಈ ಘಟನೆಯು ೧೬ನೇ ಶತಮಾನದಲ್ಲಿ ನಡೆದಿದೆ. ಕ್ರಿ.ಶ. ೧೮೧೯ರಲ್ಲಿ ಬ್ರಿಟಿಷರು ಕರಾವಳಿ ಪ್ರಾಂತ್ಯದ ಮೇಲೆ ಹಿಡಿತ ಸಾಧಿಸುವವರೆಗೆ ಹುಬಶಿಗಳು ಕಡಲ ಮೇಲೆ ಒಡೆತನ ಸಾಧಿಸಿದ್ದರು ಎಂದು ಹೇಳಲಾಗಿದೆ. ಹಬಶಿಗಳು ತಯಾರಿಸುತ್ತಿದ್ದ ‘ಮಣಿಸರಕು’ಗಳಿಗೆ ಆಫ್ರಿಕಾದಲ್ಲಿ ಒಳ್ಳೆಯ ಬೇಡಿಕೆ ಇತ್ತೆಂದು ವಿದ್ವಾಂಸರು ಹೇಳಿದ್ದಾರೆ. ಇತಿಹಾಸಕಾರರ ಪ್ರಕಾರ ಕ್ರಿ.ಶ. ೧೫೩೦ರ ಹೊತ್ತಿಗೆ ಭಾರತದಲ್ಲಿ ಸುಮಾರು ೫,೦೦೦ ಹುಬಶಿಗಳಿದ್ದು ಇವರೆಲ್ಲರೂ ಇಥಿಯೋಪಿಯಾ ಮೂಲದವರಾಗಿದ್ದರು. ಇವನ್ನೆಲ್ಲ ಆಧರಿಸಿ ಹೇಳುವುದಾದರೆ ಇಥಿಯೋಪಿಯನ್ನರು ಅಥವಾ ‘ಹುಬಶಿ’ಗಳು ಕ್ರಿ.ಶಕದ ಆರಂಭದಲ್ಲಿ ಭಾರತಕ್ಕೆ ಬಂದಿದ್ದಾರೆ.

ಇವತ್ತು ಹುಬಾಶಿಕಾನ ಕುರಿತೊಂದು ನಾಟಕ ಇದೆ! ಅದಕ್ಕೆ ಇಷ್ಟೆಲ್ಲಾ ಬರೆದೆ. ಗಾಂವ್ಕರ್ ಬಳಗಕ್ಕೆ ಶುಭಾಶಯಗಳುʼ

ಫೋಟೋ ಕೃಪೆ : ಉದಯ ಗಾಂವ್ಕರ್

ಪುರುಷೋತ್ತಮ ಬಿಳಿಮಲೆ
ನವದೆಹಲಿ

ಕರ್ನಾಟಕ ಸಂಸ್ಕೃತಿಯನ್ನು ಕಟ್ಟಿದವರು ಬೌದ್ಧರೇ ಹೊರತು ವೈದಿಕರಲ್ಲ: ಪುರುಷೋತ್ತಮ ಬಿಳಿಮಲೆ
ಮಂಗಳೂರು : ದೇಸೀ ಭಾಷೆಯ  ನಾಶ, ದೇಸೀ  ಸಂಸ್ಕೃತಿಯ ನಾಶ ಕ್ಕೆ ಮುಖ್ಯವಾಹಿನಿಗಳು ಅಪಾರ ಕೊಡುಗೆ ನೀಡುತ್ತಿರುವಾಗ ಪರ್ಯಾಯ ಮಾಧ್ಯಮಗಳ ಪ್ರಯತ್ನ ಶ್ಲಾಘನೀಯ . ಇವುಗಳೆಡೆಗೆ ಹೆಚ್ಚು ಗಮನಕೊಡಬೇಕಾಗದೆ ಎಂದು  ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ  ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ  ಹೇಳಿದರು.

ಜನಶಕ್ತಿ ವಾರಪತ್ರಿಕೆ ಪ್ರಕಾಶಕ ಮಂಡಳಿಯು ಮಂಗಳೂರಿನ ಬಿಷಪ್ ಜತ್ತನ್ನ ಸಭಾಂಗಣದಲ್ಲಿ  ಆಯೋಜಿಸಿದ ಜನಶಕ್ತಿ ಉತ್ಸವದಲ್ಲಿ ಅವರು ಮಾತಾಡುತ್ತಿದ್ದರು.

ವಸಾಹತು ಕಾಲಘಟ್ಟದಲ್ಲಿ ಬ್ರಿಟಿಷರ ವಿರುದ್ಧ ಜನ ಸಂಘಟನೆ ಮಾಡುವಲ್ಲಿ ಆ ಕಾಲದ  ಸ್ಥಳೀಯ ಪತ್ರಿಕೆಗಳು ನಿರ್ಣಾಯಕ ಕೆಲಸ ಮಾಡಿದವು. ಪ್ರಾದೇಶಿಕತೆಯನ್ನು ಬಿಟ್ಟುಕೊಡದೆ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಲು ಅವು ಶ್ರಮಿಸಿದವು. 1990ರ ಬಳಿಕ ಬಂಡವಾಳವಾದ ಮಾಧ್ಯಮ ಕ್ಷೇತ್ರವನ್ನು ಪ್ರವೇಶಿಸಿತು. ಅದರ ಬಳಿಕ   ಜನ ಭಾಷೆಯಲ್ಲಿ ಮಾತಾಡಬೇಕಾದ ಮಾಧ್ಯಮಗಳು ಪ್ರಭುತ್ವಕ್ಕೆ ಅಡಿಯಾಳಾಗಿ  ಮಾತಾಡ ತೊಡಗದವು. ಅವುಗಳು ಪ್ರಭುತ್ವಕ್ಕೆ ಎಷ್ಟು ತಲೆಬಾಗಿವೆ ಎಂದರೆ ಜನರು ಮುಖ್ಯವಾಹಿನಿಯನ್ನು  ನಂಬಲಾರದ ಸ್ಥಿತಿಯನ್ನು ತಲಪಿದ್ದಾರೆ.  ಈ ಹಿನ್ನೆಲೆಯಲ್ಲಿ ಪರ್ಯಾಯ ಮಾಧ್ಯಮಗಳನ್ನು ಹೆಚ್ಚು ಹೆಚ್ಚು ರೂಪಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಅವರು ಮುಂದುವರೆದು ಕರ್ನಾಟಕ ಸೌಹಾರ್ದ ಸಂಸ್ಕೃತಿಯ ಬಗ್ಗೆ ಮಾತಾಡುತ್ತಾ ಕರ್ನಾಟಕ ಸಂಸ್ಕೃತಿಯನ್ನು ರೂಪಿಸಿದ್ದು ಬೌದ್ಧ ಧರ್ಮವೇ ಹೊರತು ವೈದಿಕ ಧರ್ಮವಲ್ಲ. ರನ್ನ ಜನ್ನ ಪೊನ್ನ, ರತ್ನಾಕರ ವರ್ಣಿಯಂತಹ ಕವಿಗಳನ್ನು  ಕೊಟ್ಟು ಕನ್ನಡ ಸಂವೇದನೆಯನ್ನು ನವಿರಾಗಿ ರೂಪಿಸಿದವರು ಜೈನರು.  ಕ್ರಿಸ್ತ  ಪೂರ್ವದಲ್ಲಿಯೇ ಕರಾವಳಿಗೆ ಆಗಮಿಸಿದ ಮುಸ್ಲಿಮರು ಕನ್ನಡ ಸಂಸ್ಕೃತಿಯೊಂದಿಗೆ ಸೇರಿಹೋಗಿದ್ದಾರೆ. ಹೀಗೆ ಯಾರನ್ನೂ ತಿರಸ್ಕರಿಸದೆ ತನ್ನತೆಕ್ಕೆಗೆ ತೆಗೆದುಕೊಂಡ ಕರ್ನಾಟಕವು ಎಲ್ಲ ಧರ್ಮಗಳನ್ನು ಸಮುದಾಯಗಳನ್ನು ಒಳಗೊಳ್ಳುವ ವಿಶಿಷ್ಟತೆಯನ್ನು ಮೆರೆಯಿತು ಎಂದರು.

ಮಂಗಳೂರು ಕರಾವಳಿಗೆ ವಿಶೇಷ ಸಂಸ್ಕತಿ ಇದೆ ಎಂಬುದನ್ನು ಉದಾಹರಣೆಯ ಮೂಲಕ ಉಲ್ಲೇಖಿಸಿದರು. ತುಳುನಾಡಿನ ಮಲ್ಪೆಯಲ್ಲಿ ತಯಾರಾಗುತ್ತಿದ್ದ ತೆಂಗಿನ ಹುರಿಹಗ್ಗವು ಉತ್ಕೃಷ್ಟ ಮಟ್ಟದ್ದಾಗಿದ್ದು ಹಡಗು ಕಟ್ಟಲು ಮತ್ತು ದೋಣಿಗಳನ್ನು ದಡಕ್ಕೇರಿಸಲು ಉಪಯುಕ್ತವಾಗಿತ್ತು. ತುಳುವರು ಕಡಲಿನ ಮೂಲಕ ಕೇರಳ, ತಮಿಳುನಾಡು,ಶ್ರೀಲಂಕಾ, ಮಲೇಷಿಯಾ ಮತ್ತು ಮಧ್ಯಪ್ರಾಚ್ಯ ದೇಶಗಳೊಂದಿಗೆ ಸಂಬಂಧ ಸಾಧಿಸಿದ್ದರು. ವಿಜಯನಗರ ಕಾಲದವರೆಗೂ ಬಾರ್ಕೂರು ಪೂರ್ವದ ಮತ್ತು ಪಶ್ಚಿಮದ ದೇಶಗಳನ್ನು ಬೆಸೆಯುವ ಅತಿ ದೊಡ್ಡ ವ್ಯಾಪಾರ ಕೇಂದ್ರವಾಗಿತ್ತು.  ಮಲ್ಪೆಯ ಹುಡುಗಿಯೊಬ್ಬಳನ್ನು ಗ್ರೀಕಿನ ರಾಜಕುಮಾರ ಮದುವೆಯಾದದ್ದರ ಬಗ್ಗೆ ಗೋವಿಂದ ಪೈಗಳು ಬಹಳ ಹಿಂದೆಯೇ ಬರೆದಿದ್ದರು. ಕಡಲಿನ ಮೂಲಕ‌ ತುಳುನಾಡಿಗೆ ಆಗಮಿಸಿದ ವಿವಿಧ ವ್ಯಾಪಾರಿಗಳು ಈ ಪ್ರದೇಶವನ್ನು ಬಹುಭಾಷಿಕವಾಗಿಯೂ ಬಹು ಸಂಸ್ಕೃತಿಯ  ನೆಲೆವೀಡಾಗಿಯೂ ಮಾಡಿದರು.  ಇಂತಹ ಬಹು ಸಾಂಸ್ಕೃತಿಕ ನೆಲೆಗಳನ್ನು ನಾಶಪಡಿಸಿ ಆರ್ ಎಸ್ ಎಸ್ ಕಟ್ಟಿಕೊಡುತ್ತಿರುವ ನಿರೂಪಣೆಗಳ ಪೊಳ್ಳುತನವನ್ನು ಬಯಲಿಗೆಳೆಯುವ ಕೆಲಸ ಇವತ್ತಿನ ಬಹುದೊಡ್ಡ ಜವಾಬ್ದಾರಿ  ಎಂದು ಹೇಳಿದರು.

ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿಸುವ ಹುನ್ನಾರವನ್ನು ಬಯಲಿಗೆಳೆದು ಮುಂಬರುವ ಜನಗಣತಿಯಲ್ಲಿ ಅವರವರ ಮಾತೃಭಾಷೆಯನ್ನೇ ನಮೂದಿಸಬೇಕೆಂದು ಮನವಿ ಮಾಡಿದರು. ಕೇರಳದ ಸಂಸದ ಜಾನ್ ಬ್ರಿಟ್ಟಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಜನಶಕ್ತಿ ಪತ್ರಿಕೆಯ ವಿಶೇಷಾಂಕವನ್ನು ಬಿಡುಗಡೆ ಮಾಡಿದರು.  ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಚಂದ್ರ ಪೂಜಾರಿ ಹಾಗೂ ಲೇಖಕಿ ಬಿ ಎಂ ರೋಹಿಣಿಯವರು  ತಮ್ಮವಿಚಾರಗಳನ್ನು ಮಂಡಿಸಿದರು. ಕೆ. ಯಾದವ ಶೆಟ್ಟಿ  ಅಧ್ಯಕ್ಷತೆ ವಹಿಸಿದ್ದರು. ಡಾ ವಸಂತ ಕುಮಾರ್ ಸ್ವಾಗತಿಸಿ ಗುರುಶಾಂತ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಸುನಿಲ್ ಕುಮಾರ್ ಬಜಾಲ್ ನಿರ್ವಹಣೆ ಮಾಡಿದರು. ಮನೋಜ್ ವಾಮಂಜೂರು ವಂದಿಸಿದರು.