‘Pushpak Vimana’ Monsoon Raaga’s new film ‘Madness’ – Peepal Media

ʼಪುಷ್ಪಕ ವಿಮಾನʼ ಮಾನ್ಸೂನ್‌ ರಾಗ ನಿರ್ದೇಶಕರ ಹೊಸ ಚಿತ್ರ‌ ʼಮ್ಯಾಡ್ನೆಸ್‌ʼ
ಪುಷ್ಪಕ ವಿಮಾನ, ಮನ್ಸೂನ್‌ ರಾಗದಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿರುವ ಎಸ್‌ ರವೀಂದ್ರನಾಥ್‌ ಈಗ ಮತ್ತೊಂದು ಸಿನಿಮಾ ಕೈಗೆತ್ತಿಗೊಂಡಿದ್ದಾರೆ.

ರವೀಂದ್ರನಾಥ್‌ ಅವರ ಹೊಸ ಕಥೆಗೆ ಯುವ ಪ್ರತಿಭೆ ಶಿವಾಂಕ್‌ ನಾಯಕ. ಈ ಹಿಂದೆ ಪುಷ್ಪಕ ವಿಮಾನದಲ್ಲಿ ವಿಲನ್‌ ಖದರ್‌ ತೋರಿಸಿದ್ದ ಹಾಗೂ ಮಾನ್ಸೂನ್‌ ರಾಗ್‌ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಶಿವಾಂಕ್‌ ಹೀರೋ ಆಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

ರವೀಂದ್ರನಾಥ್‌ ಹೊಸ ಸಾಹಸಕ್ಕೆ ಮ್ಯಾಡ್ನೆಸ್‌ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಮೂಲಕ ಶಿವಾಂಕ್‌ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ.

ಆಕ್ಷನ್‌ ಥ್ರಿಲ್ಲರ್‌ ಮ್ಯಾಡ್ನೆಸ್‌ ಸಿನಿಮಾಗೆ ನಿಧಿ ಫಿಲ್ಮಸ್‌ ನಡಿ ಯತೀಂದ್ರ ಬಿ ಬಂಡವಾಳ ಹೂಡಿದ್ದಾರೆ.

ನಾಯಕ ಶಿವಾಂಕ್‌ಗೆ ಜೋಡಿಯಾಗಿ ರವೀಕ್ಷಾ ಅಭಿನಯಿಸುತ್ತಿದ್ದಾರೆ. ಜರೆದ್‌ ಮತ್ತು ಜೂಡಾ ಸಂಗೀತ ನಿರ್ದೇಶನ, ಪ್ರಜ್ವಲ್‌ ಗೌಡ ಛಾಯಾಗ್ರಹಣ ಹಾಗೂ ಶ್ರೀನಿವಾಸ್‌ ಕಲಾಲ್‌ ಸಂಕಲನ ಮ್ಯಾಡ್ನೆಸ್‌ ಸಿನಿಮಾಗೆ ಇದೆ.

ಸದ್ಯ ಚಿತ್ರತಂಡ ಬೆಂಗಳೂರು, ಆಗುಂಬೆ ಹಾಗೂ ಕನಕಪುರ ಸುತ್ತಮತ್ತ ಶೇಖಡ 40 ಮುಗಿಸಿದೆ. ಶೀಘ್ರದಲ್ಲೇ ಎರಡನೇ ಹಂತದ ಚಿತ್ರೀಕರಣಕ್ಕೆ ಕಿಕ್‌ ಸ್ಟಾರ್ಟ್‌ ಕೊಡಲಿದೆ.