putturu – Peepal Media

ಪ್ರವೀಣ್ ನೆಟ್ಟಾರು ಕೊಲೆ – ಇನ್ನೂ ನಾಲ್ವರು ಆರೋಪಿಗಳ ಹುಡುಕಾಟದಲ್ಲಿ ಎನ್‌ಐಎ
ಪುತ್ತೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದು, ಅವರು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಿದೆ.

ಈ ಹಿನ್ನಲೆಯಲ್ಲಿ, ಬೆಳ್ಳಾರೆ ನಿವಾಸಿ ಮುಹಮ್ಮದ್ ಮುಸ್ತಫಾ ಮತ್ತು ಸಿದ್ದೀಕ್ ಅಲಿಯಾಸ್ ಚಿತ್ರಕಲಾವಿದ ಸಿದ್ದಿಕ್, ಸುಳ್ಯ ನಿವಾಸಿ ಉಮ್ಮರ್ ಫಾರೂಕ್ ಹಾಗೂ ಮಡಿಕೇರಿಯ ತುಫೈಲ್ ಎಂ.ಎಚ್ ಎಂಬ ನಾಲ್ವರು ತಲೆಮರೆಸಿಕೊಂಡಿದ್ದು, ಈ ಅಪರಾಧಿಗಳಿಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದೇಶಾದ್ಯಂತ ಹುಡುಕಾಟ ನಡೆಸುತ್ತಿದೆ ಎಂದು ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಎನ್‌ಐಎ, ತುಫೈಲ್ ವಿದೇಶಕ್ಕೆ ಪಲಾಯನ ಮಾಡಿರಬೇಕು ಎಂದು ಶಂಕಿಸಲಾಗಿದೆ. ಉಳಿದ ಮೂರರಲ್ಲಿ, ಪಾಸ್ಪೋರ್ಟ್ ಪಡೆಯಲು ಸಹಾಯ ಮಾಡುವ ಸೈಬರ್ ಕೇಂದ್ರಗಳಲ್ಲಿನ ತನಿಖೆಯ ಸಮಯದಲ್ಲಿ ಎನ್ಐಎಗೆ ಯಾವುದೇ ಸುಳಿವು ಸಿಕ್ಕಿಲ್ಲ. ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶರೀಖ್ ಗೆ ಪ್ರವೀಣ್ ಹಂತಕರೊಂದಿಗೆ ಈ ಹಿಂದೆ ನಂಟು ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಮಡಿಕೇರಿಯಿಂದ ಸುಳ್ಯ ಮತ್ತು ಪುತ್ತೂರಿಗೆ ಬಂದಿದ್ದ ಶಾರೀಕ್ ನಂತರ ಮಂಗಳೂರಿಗೆ ಹೋಗಿದ್ದರು.ಈ ಘಟನೆಯ ಮಾಸ್ಟರ್ ಮೈಂಡ್ ಮತೀನ್ ತಾಹಾ ವಿದೇಶದಲ್ಲಿದ್ದು, ಮುಸ್ಲಿಂ ಯುವಕರನ್ನು ಭಯೋತ್ಪಾದಕ ಕೃತ್ಯಗಳತ್ತ ಆಕರ್ಷಿಸುತ್ತಿದ್ದಾನೆ. ಹೀಗಾಗಿ ಪ್ರವೀಣ್ ನ ಹಂತಕರು ಆತನೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂಬ ಬಗ್ಗೆಯೂ ನಾವು ತಿನಿಖೆ ನಡೆಸುತ್ತಿದ್ದೇವೆ. ಸ್ಥಳೀಯರ ಸಹಾಯವಿಲ್ಲದೆ ಬಾಂಬ್ ಸ್ಫೋಟವನ್ನು ಯೋಜಿಸುವುದು ಮತ್ತು ಕಾರ್ಯಗತಗೊಳಿಸುವುದು ಶರೀಖ್ ಗೆ ಅಸಾಧ್ಯ ಎಂದು ಪೊಲೀಸರು ಹೇಳುತ್ತಾರೆ. ಪ್ರವೀಣ್‌ನ ಹಂತಕರು ತಲೆಮರೆಸಿಕೊಂಡಿದ್ದರು. ಅವರಿಗೆ ಆಶ್ರಯ ನೀಡುವಲ್ಲಿ ಶಾರೀಕ್ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎನ್‌ಐಎ ತಿಳಿಸಿದೆ.

ನಿಷೇಧಿತ ಪಿಎಫ್ಐ ಸದಸ್ಯರಾದ ಮೊಹಮ್ಮದ್ ಮುಸ್ತಫಾ.ಎಸ್ ಮತ್ತು ತುಫೈಲ್ ಎಂ.ಎಚ್ ಬಗ್ಗೆ ಸುಳಿವು ನೀಡುವವರಿಗೆ ಐದು ಲಕ್ಷ ರೂ.ಗಳ ಬಹುಮಾನ ಮತ್ತು ಪ್ರವೀಣ್ ಹಂತಕರಿಗೆ ಆಶ್ರಯ ಮತ್ತು ಆರ್ಥಿಕ ನೆರವು ನೀಡಿದ ಆರೋಪ ಹೊತ್ತಿರುವ ಉಮ್ಮರ್ ಫಾರೂಕ್ ಮತ್ತು ಅಬೂಬಕ್ಕರ್ ಸಿದ್ದೀಕ್ ಅವರ ಬಗ್ಗೆ ಮಾಹಿತಿ ನೀಡಿದವರಿಗೆ ಎರಡು ಲಕ್ಷ ರೂ.ಗಳ ಬಹುಮಾನವನ್ನು ಎನ್ಐಎ ಘೋಷಿಸಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ ಎನ್‌ಐಎ
ಪುತ್ತೂರು: ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ಮತ್ತೆ ಮೂವರು  ಆರೋಪಿಗಳ್ನನ್ನು ಬಂಧಿಸಿದೆ.

ಪ್ರವೀಣ್‌ ನೆಟ್ಟಾರು

ಎನ್‌ಐಎ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಬಂಧಿತರು ಎಸ್‌.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಬೆಳ್ಳಾರೆ ಗ್ರಾಮ ಪಂಚಾಯತ್‌ ಸದಸ್ಯ ಇಕ್ಬಾಲ್‌ ಬೆಳ್ಳಾರೆ, ಸುಳ್ಯಾದ ಇಬ್ರಾಹಿಂ ಶಾಫಿ ಎಂದು ತಿಳಿದುಬಂದಿದೆ.

ಮಾಹಿತಿ ಪ್ರಕಾರ, ಎನ್‌ಐಎ ಅಧಿಕಾರಿಗಳು ಇಂದು ಬೆಳಗ್ಗೆ ಉಪ್ಪಿನಂಗಡಿ ಮತ್ತು ಸುಳ್ಯಾದಲ್ಲಿ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರವೀಣ್‌ ನೆಟ್ಟರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಪೊಲೀಸರು ಆಗಷ್ಟ್‌ ತಿಂಗಳು ಒಟ್ಟು ಹತ್ತು ಮಂದಿಯನ್ನು ಬಂಧಿಸಿದ್ದರು. ಹೀಗೆ ತಿಂಗಳುಗಳು ಕಳೆಯುತ್ತಿದ್ದಂತೆ, ಪ್ರವೀಣ್‌ ಕೊಲೆ ಪ್ರಕರಣದಲ್ಲಿ ಆರೋಪಿಗಳ ಬಂಧನ ಹೆಚ್ಚಾಗುತ್ತಿದ್ದು, ಈ ಪ್ರಕರಣದಲ್ಲಿ ಇನ್ನು ಎಷ್ಟು ಮಂದಿ ಬಂಧನವಾಗುತ್ತಾರೆಂದು ಕಾದು ನೋಡಬೇಕಾಗಿದೆ.

ಕಾಣಿಯೂರು ಯುವಕರ ಮೇಲೆ ಗುಂಪು ಹಲ್ಲೆ: ಭಜರಂಗ ದಳದ ಮೇಲೆ ಕ್ರಮಕ್ಕೆ ಒತ್ತಾಯ
ಪುತ್ತೂರು: ಕಡಬ ತಾಲೂಕಿನ ಕಾಣಿಯೂರು ಸಮೀಪದ ದೋಲ್ಪಡಿ ಬಳಿ ಇಬ್ಬರು ಯುವಕರ ಮೇಲೆ ಭಜರಂಗ ದಳದ ಗುಂಪು, ಎರಡು ತಾಸುಗಳ ಕಾಲ ಮರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ನಡೆದಿದೆ.

ಹಲ್ಲೆಗೊಳಗಾದ ಯುವಕರು ಗಂಭೀರ ಸ್ಥಿತಿಯಲ್ಲಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಯುವಕರು ದೋಲ್ಪಾಡಿ ಬಳಿ ಜವಳಿ ವ್ಯಾಪಾರ ನಡೆಸುತ್ತಿದ್ದರು. ಭಜರಂಗ ದಳದ ಗುಂಪು ವ್ಯಾಪಾರಕ್ಕೆ ತಡೆಯೊಡ್ಡಿ, ಎಚ್ಚರ ತಪ್ಪುವ ರೀತಿಯಲ್ಲಿ ಥಳಿಸಿ, ದ್ವಿಚಕ್ರ ವಾಹನವನ್ನು ವ್ಯಾಪಾರಿಗಳ ಮೇಲೆ ಹರಿಸಿ, ಅವರ ಮೇಲೆ ಕಲ್ಲು ಎತ್ತಿ ಹಾಕುವ ಮೂಲಕ ಕೊಲೆ ಯತ್ನ ನಡೆಸಿದ್ದಲ್ಲದೆ, ಅವರ ಕಾರನ್ನೂ ಹಾನಿಗೊಳಿಸಲಾಗಿದೆ ಎಂಬುದು ತಿಳಿದು ಬಂದಿದೆ.

ಈ ಅಮಾನವೀಯ ಘಟನೆಯನ್ನು ಸ್ಥಳೀಯರು ತೀವ್ರವಾಗಿ ಖಂಡಿಸಿದ್ದಾರೆ. ಹಾಗು ಹಲವು ರಾಜಕೀಯ ಮತ್ತು ಸಾಮಾಜಿಕ ಮುಖಂಡರ ನಿಯೋಗವೊಂದು ಭೇಟಿ ಮಾಡಿ ಹಲ್ಲೆಗೊಳಗಾದ ಯುವಕರ ಆರೋಗ್ಯ ವಿಚಾರಿಸಿದರು.

ಕಳೆದ ಹಲವಾರು ವರ್ಷಗಳಿಂದ ಜವಳಿ ವ್ಯಾಪಾರ ನಡೆಸುತ್ತಿದ್ದ ಯುವಕರು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿದ್ದಾರೆ, ಆದರೆ ಯುವಕರು ಮುಸ್ಲಿಮರು ಎಂಬ ಒಂದೇ  ಕಾರಣಕ್ಕೆ ಹಿಗ್ಗಾಮುಗ್ಗ ಥಳಿಸಿದ್ದಾರೆ, ಆದ್ದರಿಂದ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳ  ವಿರುದ್ದ  ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.

ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು, ಕೃತ್ಯದ ವಿರುದ್ಧ ನಾಗರಿಕ ಸಮಾಜ ಒಗ್ಗಟ್ಟಾಗಿ ಪ್ರತಿಭಟಿಸಲಿದೆ. ದುಷ್ಕರ್ಮಿಗಳಿಗೆ ಪೊಲೀಸ್ ಇಲಾಖೆ, ಕಾನೂನಿನ ಯಾವುದೇ ಭಯ ಇಲ್ಲದಾಗಿದೆ. ಇಂತ ಘಟನೆಗಳು ಮತ್ತೆ ಮರುಕಳಿಸದಂತೆ ಪೊಲೀಸ್ ಇಲಾಖೆ ನೋಡಿ ಕೊಳ್ಳ ಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಘಟನೆ ಕುರಿತು ಮಾಜಿ ಸಚಿವ ಶಾಸಕ ಯು.ಟಿ ಖಾದರ್ ಅವರು ಪ್ರತಿಕ್ರಿಯಿಸಿ, ಕಾಣಿಯೂರು ವ್ಯಾಪಾರಿಗಳ ಮೇಲೆ ಹಲ್ಲೆ ಪ್ರಕರಣವನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಮತ್ತೊಬ್ಬ ಆರೋಪಿ ಬಂಧನ
ಪುತ್ತೂರು: ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಇಂದು (ಮಂಗಳವಾರ) ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರವೀಣ್‌ ಕೊಲೆಗೆ ಸಂಬಂಧಿಸಿದಂತೆ ಒಟ್ಟು 7 ಮಂದಿಯನ್ನು ಬಂಧಿಸಿದ್ದು, ಇಂದು ಬಂಧನವಾದ ವ್ಯಕ್ತಿಯು ಸುಳ್ಯದ ಜಟ್ಟಿಪಳ್ಳ ನಿವಾಸಿ, 33 ವರ್ಷದ ಅಬ್ದುಲ್‌ ಕಬೀರ್‌ ಎಂದು ತಿಳಿದು ಬಂದಿದೆ.