raadhanaa – Peepal Media

ಬೆಳ್ಳಿ ಪರದೆಗೆ ಕನಸಿನ ರಾಣಿಯ ಪುತ್ರಿ, ದರ್ಶನ್ ಸಿನಿಮಾ ನಾಯಕಿಯಾದ ರಾಧನಾ
ಮಾಲಾಶ್ರೀ ಅಂದ್ರೆ ಒಂದು ಕಾಲದ ಯುವಕರ ಕನಸಿನ ರಾಣಿ. ಕನ್ನಡ ಚಿತ್ರರಂಗದಲ್ಲಿ ನಾಯಕರನ್ನು ಮೀರಿ ಬೆಳೆದ ಕೆಲವೇ ಕೆಲವು ನಾಯಕಿಯರಲ್ಲಿ ಒಬ್ಬರು ಮಾಲಾಶ್ರೀ. ಇತ್ತೀಚಿಗೆ ತಮ್ಮ ಪತಿ ರಾಮು ಅವರನ್ನು ಕಳೆದುಕೊಂಡು ದುಃಖದಲ್ಲಿರುವ ಅವರ ಕುಟುಂಬದಿಂದ ಈಗ ಸಿಹಿಸದ್ದಿಯೊಂದು ಹೊರಬಂದಿದೆ. ಅದು ರಾಮು ಮತ್ತು ಮಾಲಾಶ್ರೀ ಪುತ್ರಿಯ ಸಿನಿಮಾ ಎಂಟ್ರಿ.

ಅನನ್ಯಾ ಎಂಬ ಹೆಸರಿನ ಮಾಲಾಶ್ರೀ ಪುತ್ರಿ ಈಗ ರಾಧನಾ ರಾಮ್ ಎಂದು ಹೆಸರು ಬದಲಾಯಿಸಿಕೊಂಡು ಸಿನಿಮಾ ರಂಗಕ್ಕೆ ಬರುತ್ತಿದ್ದಾರೆ. ಅವರ ಮೊದಲ ಪ್ರಯತ್ನವೇ ಅದ್ದೂರಿಯಾಗಿ ಇರಲಿದೆ ಅನ್ನೋದಕ್ಕೆ ಅವರು ದರ್ಶನ್ ಅವರ ಸಿನಿಮಾ ನಾಯಕಿ ಆಗಿರೋದೇ ಕಾರಣ. ಹೌದು ತರುಣ್ ಕಿಶೋರ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ರಾಧನಾ ರಾಮ್ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ಇಂದು ಘೋಷಣೆ ಆಗಿದೆ. ಈ ಹಿಂದೆ ದರ್ಶನ್ ಅವರಿಗೆ ರಾಬರ್ಟ್ ಸಿನಿಮಾ ನಿರ್ದೇಶನ ಮಾಡಿ ಯಶಸ್ಸು ಕಂಡಿದ್ದ ತರುಣ್ ಕಿಶೋರ್ ಈಗ ಡಿ 56 ಎಂಬ ತಾತ್ಕಾಲಿಕ ಹೆಸರಿರುವ ಚಿತ್ರದ ನಿರ್ದೇಶನಕ್ಕೆ ಹೊರಳಿದ್ದಾರೆ.

ಒಟ್ಟಿನಲ್ಲಿ ನಟಿ ಮಾಲಾಶ್ರೀ ಅವರು ಚಿತ್ರರಂಗದಿಂದ ಕೊಂಚ ದೂರವೇ ಇದ್ದರೂ, ಈಗ ಅವರ ಪುತ್ರಿ ಚಿತ್ರರಂಗಕ್ಕೆ ಕಾಲಿಡ್ತಾ ಇರೋದು ಅವರ ಅಭಿಮಾನಿಗಳಲ್ಲಿ ಪುಳಕ ಉಂಟು ಮಾಡಿದೆ.