raghav chadda – Peepal Media

ಸಭಾಧ್ಯಕ್ಷರ ಕ್ಷಮೆ ಯಾಚಿಸಲು ರಾಘವ್‌ ಚಡ್ಡಾ ಸಿದ್ದ
ಬೆಂಗಳೂರು,ನವೆಂಬರ್.‌03: ಆಮ್ ಆದ್ಮಿ ಪಾರ್ಟಿ ಸಂಸದ ರಾಘವ್ ಚಡ್ಡಾ ಅವರ ಅಮಾನತು ವಿಚಾರದಲ್ಲಿ ‘ಮುಂದಕ್ಕೆ ತೆಗೆದುಕೊಂಡು ಹೋಗುವ – way forward’ ನಿರ್ಧಾರವನ್ನು ಮಾಡಿರುವ ಸುಪ್ರೀಂ ಕೋರ್ಟ್ ಇಂದು ರಾಜ್ಯಸಭೆಯ ಅಧ್ಯಕ್ಷರ ಬಳಿ ಬೇಷರತ್ ಕ್ಷಮೆಯಾಚಿಸಲು ಒಪ್ಪಿಗೆ ಸೂಚಿಸಿದ ಚಡ್ಡಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ ಮತ್ತು ಅದನ್ನು ಇದನ್ನು ಪರಿಗಣಿಸಿ ʼಸಹಾನುಭೂತಿʼ ತೋರುವಂತೆ ಸಭಾಧ್ಯಕ್ಷರನ್ನು ಒತ್ತಾಯಿಸಿದೆ ಎಂದು ಲೈವ್‌ಲಾ ವರದಿ ಮಾಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ  ಅವರನ್ನೊಳಗೊಂಡ ಪೀಠವು ಚಡ್ಡಾ ಸಂಸತ್ತಿನ ಅತ್ಯಂತ ಕಿರಿಯ ಮತ್ತು ಮೊದಲ ಬಾರಿಗೆ ಸಂಸದರಾದವರು. ಸಭಾಧ್ಯಕ್ಷರು ಈ ವಿಷಯದಲ್ಲಿ ವಸ್ತುನಿಷ್ಠ ದೃಷ್ಟಿಕೋನದಿಂದ ಪರಿಗಣಿಸಬೇಕು ಎಂದಿದೆ. ಕಳೆದ ವಿಚಾರಣೆಯಲ್ಲಿ ಪೀಠವು ಚಡ್ಡಾ ಅವರ ಅನಿರ್ದಿಷ್ಟ ಅವಧಿಯ ಅಮಾನತಿನ ಬಗ್ಗೆ ಕಳವಳ ವ್ಯಕ್ತಪಡಿಸಿ, ವಿರೋಧ ಪಕ್ಷದ ಧ್ವನಿಯನ್ನು ಹೊರಗಿಡುವುದು ಗಂಭೀರ ವಿಷಯ ಎಂದು ಟೀಕೆ ಮಾಡಿತ್ತು. ಸಿಜೆಐ “ನಾವು ಸಂಸತ್ತಿನಿಂದ ಆ ಧ್ವನಿಗಳನ್ನು ಹೊರಗಿಡದಂತೆ ಬಹಳ ಜಾಗರೂಕರಾಗಿರಬೇಕು,” ಎಂದು ಎಚ್ಚರಿಸಿದ್ದರು.

ಕೇಸ್‌: Raghav Chadha v. Rajya Sabha Secretariat And Ors. W.P.(C) No. 1155/2023

“ಕಳೆದ ಬಾರಿ ಅವರು ಕ್ಷಮೆಯಾಚಿಸುತ್ತಿದ್ದರೆ, ಅತ್ಯಂತ ಪ್ರತಿಷ್ಠಿತ ವ್ಯಕ್ತಿ ಮತ್ತು ಸಂವಿಧಾನದ ಮಹಾನ್ ಸ್ಥಾನದಲ್ಲಿರುವ  ಸಭಾಧ್ಯಕ್ಷರು, ಬಹುಶಃ ವಸ್ತುನಿಷ್ಠ ದೃಷ್ಟಿಕೋನದಿಂದ ಅದನ್ನು ಸ್ವೀಕರಿಸುತ್ತಿದ್ದರೋ ಏನೋ,” ಎಂದು ಸಿಜೆಐ ಹೇಳಿದ್ದಾರೆ.

ಅಟಾರ್ನಿ ಜನರಲ್ ಹಾಗೂ ಸಾಲಿಸಿಟರ್ ಜನರಲ್ ಇದಕ್ಕೆ ಒಪ್ಪಿಗೆ ಸೂಚಿಸಿದ ನಂತರ ಸಿಜೆಐ ಅವರು ಕ್ಷಮೆ ಯಾಚಿಸಲು ಸಿದ್ಧರಿದ್ದಾರೆಯೇ ಎಂದು ಚಡ್ಡಾ ಪರವಾಗಿ ಹಾಜರಾದ ವಕೀಲ ಶಾದನ್ ಫರಾಸತ್ ಅವರನ್ನು ಕೇಳಿದ್ದಾರೆ.

ಸಿಜೆಐ, “ಮಿಸ್ಟರ್ ಫರಾಸತ್, ನೀವು ಈಗಾಗಲೇ ಆರು ಬಾರಿ ಕ್ಷಮೆಯಾಚಿಸಿದ್ದೀರಿ. ಆದರೆ ನೀವು ಗೌರವಾನ್ವಿತ ಸಭಾಧ್ಯಕ್ಷರೊಂದಿಗೆ ಅಪಾಯಿಂಟ್‌ಮೆಂಟ್ ಪಡೆಯಲು ಮತ್ತು ಅಧ್ಯಕ್ಷರನ್ನು ಭೇಟಿ ಮಾಡಲು ಸಿದ್ಧರಿದ್ದೀರಾ, ಕ್ಷಮೆಯಾಚಿಸಲು ಬಯಸುತ್ತೀರಾ?” ಎಂದು ಕೇಳಿದ್ದಾರೆ.

ಫರಸತ್ ಅವರು ಇದಕ್ಕೆ ಒಪ್ಪಿಕೊಂಡಿದ್ದು, “ಅವರು ಹಿರಿಯರ ಮನೆಯಲ್ಲಿ ಅತ್ಯಂತ ಕಿರಿಯ ಸದಸ್ಯ. ಅವರಿಗೆ ಕ್ಷಮೆಯಾಚಿಸಲು ಮನಸ್ಸಿಲ್ಲ. ವಿಶೇಷಾಧಿಕಾರ ಸಮಿತಿಗೆ ನಾನು ಬರೆದ ಪತ್ರದಲ್ಲಿಯೂ ನಾನು ಸಭಾಧ್ಯಕ್ಷರಿಗೆ ನನ್ನ ವೈಯಕ್ತಿಕ ಕ್ಷಮೆಯಾಚನೆಯನ್ನು ಹೇಳಿದ್ದೇನೆ…” ಅಮಾನತಿನ ವಿರುದ್ಧ ಎದ್ದಿರುವ ಕಾನೂನು ವಿವಾದಗಳಿಗೆ ಕ್ಷಮೆಯಾಚನೆಯು ಪೂರ್ವಾಗ್ರಹವಾಗುವುದಿಲ್ಲ ಎಂದು ಫರಾಸತ್ ಹೇಳಿದ್ದಾರೆ.

ಪೀಠವು “ರಾಜ್ಯಸಭೆಯಲ್ಲಿ ತಾನು ಅತ್ಯಂತ ಕಿರಿಯ ಸದಸ್ಯ ಎಂದು ಶ್ರೀ ಫರಸತ್ ಹೇಳುತ್ತಾರೆ. ಅವರು ಸದಸ್ಯರಾಗಿರುವ ಮನೆಯ ಘನತೆಗೆ ಧಕ್ಕೆ ತರುವ ಉದ್ದೇಶವಿಲ್ಲ ಎಂದು ಮನಸ್ಸಿನಲ್ಲಿಟ್ಟುಕೊಂಡು, ಅರ್ಜಿದಾರರು ಸಭಾಧ್ಯಕ್ಷರೊಂದಿಗೆ ಅಪಾಯಿಂಟ್ಮೆಂಟ್ ಕೇಳುತ್ತಾರೆ ಎಂದು ಶ್ರೀ ಫರಸತ್ ಹೇಳಿಕೆ ಸಲ್ಲಿಸಿದ್ದಾರೆ. ಅವರು ಕೇಳಬಹುದಾದ ಬೇಷರತ್ತಾದ ಕ್ಷಮೆಯನ್ನು ಸಹಾನುಭೂತಿಯಿಂದ ಪರಿಗಣಿಸಿ,” ಎಂದು ಹೇಳಿದೆ.

GNCTD (ತಿದ್ದುಪಡಿ) ಮಸೂದೆ 2023 ರ ಆಯ್ಕೆ ಸಮಿತಿಯ ಸದಸ್ಯರಾಗಿ ಒಪ್ಪಿಗೆ ಇಲ್ಲದೆ ನಾಲ್ವರು ಎಂಪಿಗಳ ಹೆಸರನ್ನು ಪ್ರಸ್ತಾಪಿಸಿದ (breach of privilege)  ಕಾರಣಕ್ಕೆ ಅಗಸ್ಟ್‌ 1ರಂದು ಚಡ್ಡಾರವರನ್ನು ಅಮಾನತು ಮಾಡಲಾಗಿತ್ತು.

ವೈರಲ್‌ ಆದ ಪ್ರಧಾನಿ ನರೇಂದ್ರ ಮೋದಿಯವರ ಮಣಿಪುರ ಕುರಿತ ಹಳೆಯ ಟ್ವೀಟ್:ವಿಪಕ್ಷಗಳ ದಾಳಿ
ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ಮೋದಿಯವರು 2017ರಲ್ಲಿ ಮಾಡಿದ್ದ ಟ್ವೀಟ್‌ ಒಂದು ಈಗ ವೈರಲ್‌ ಆಗಿದ್ದು ಅವರನ್ನು ಮತ್ತು ಅವರ ಪಕ್ಷವನ್ನು ಪೇಚಿಗೆ ಸಿಲುಕಿಸಿದೆ.

“ಮಣಿಪುರದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಸ್ಥಾಪಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ಒಂದು ಕ್ಷಣವೂ ಸರ್ಕಾರದಲ್ಲಿರಲು ಸರ್ಕಾರಕ್ಕೆ ಹಕ್ಕಿಲ್ಲ” ಎಂದು ಅಂದು ಮೋದಿ ಮಣಿಪುರದಲ್ಲಿ ಹೇಳಿಕೆ ನೀಡಿದ್ದರು.

PM Modi का 2017 का Tweet है-

"अगर सरकार #Manipur में शांति और सुरक्षा स्थापित नहीं कर पा रही है तो उसे एक भी क्षण सरकार में रहने का हक़ नहीं है, और उस सरकार को बर्खास्त कर देना चाहिए।"

अब समय आ गया है कि Manipur सरकार को बर्खास्त कर देना चाहिए

संविधान में Article 355 कहता है… pic.twitter.com/oiSr9harXv
— AAP (@AamAadmiParty) July 21, 2023

ಈಗ ಈ ಕುರಿತು ಟ್ವೀಟ್‌ ಮಾಡಿರುವ ಆಮ್‌ ಆದ್ಮಿ ಪಕ್ಷವು, “ಮಣಿಪುರದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಸ್ಥಾಪಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ಒಂದು ಕ್ಷಣವೂ ಸರ್ಕಾರದಲ್ಲಿರಲು ಸರ್ಕಾರಕ್ಕೆ ಹಕ್ಕಿಲ್ಲ ಮತ್ತು ಆ ಸರ್ಕಾರವನ್ನು ವಜಾಗೊಳಿಸಬೇಕು.”

ಈಗ ಮಣಿಪುರ ಸರ್ಕಾರವನ್ನು ವಜಾ ಮಾಡುವ ಸಮಯ ಬಂದಿದೆ

ರಾಜ್ಯಗಳಲ್ಲಿ ಶಾಂತಿ ಸ್ಥಾಪಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯೂ ಆಗಿದೆ ಎಂದು ಸಂವಿಧಾನದ 355ನೇ ವಿಧಿ ಹೇಳುತ್ತದೆ.” ಎಂದು ಹೇಳುವುದರ ಜೊತೆಗೆ ಸಂಸದ ರಾಘವ್‌ ಚಡ್ಡಾ ಅವರು ಮಾತನಾಡಿರುವ ವಿಡಿಯೋ ಕೂಡಾ ಶೇರ್‌ ಮಾಡಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೂಡ ಪ್ರಧಾನಿ ಮೋದಿಯವರ ಈ ಟ್ವೀಟಿಗೆ ಪ್ರತಿಕ್ರಿಯಿಸಿದ್ದಾರೆ.

After 78 days, PM Modi spares 36 seconds to speak about Manipur. Not a word on what they will do to address the crisis.

There must be a full day discussion inside Parliament on the Manipur conflict. He must face every MP and must answer every single question we have for him and… https://t.co/gxC3FgNCC2
— K C Venugopal (@kcvenugopalmp) July 20, 2023

“78 ದಿನಗಳ ನಂತರ ಪ್ರಧಾನಿ  ಮೋದಿ ಮಣಿಪುರಕ್ಕಾಗಿ 36 ಸೆಕೆಂಡುಗಳನ್ನು ನೀಡಿದರು. ಆದರೆ ಈ ಬಿಕ್ಕಟ್ಟನ್ನು ಎದುರಿಸಲು ಅವರು ಏನು ಮಾಡುತ್ತಾರೆ ಎಂಬುದರ ಬಗ್ಗೆ ಒಂದು ಮಾತನ್ನೂ ಆಡಲಿಲ್ಲ. “ಪ್ರಧಾನಿ ಮೋದಿ ಮತ್ತು ಅವರ ಸರ್ಕಾರವು ರಾಜ್ಯದಲ್ಲಿ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಅವರಿಗೆ ಮಣಿಪುರವನ್ನು ಆಳುವ ಹಕ್ಕಿಲ್ಲ” ಎಂದು ವೇಣುಗೋಪಾಲ್ ಬರೆದಿದ್ದಾರೆ.