raghava_naama_smarane – Peepal Media

ಅನ್ ಲಾಕ್ ಸತ್ಯ, ಪಿಕ್ಚರ್ಸ್ ಹೊಸ ಚಿತ್ರ ರಾಘವ ನಾಮ ಸ್ಮರಣೆ
ರಾಮಾ ರಾಮಾ ರೇ , ಒಂದಲ್ಲ ಎರಡಲ್ಲ ಚಿತ್ರಗಳ ಮೂಲಕ ವಿಭಿನ್ನ ಚಿತ್ರಗಳನ್ನು ನೀಡಿದ ಸತ್ಯ ಪ್ರಕಾಶ್ ಈಗ ಹೊಸ ಹಾದಿ ತುಳಿದಿದ್ದಾರೆ. ಅವರು ಮಾಡುವ ಪ್ರಯೋಗಗಳು ಒಂದಲ್ಲಾ, ಎರಡಲ್ಲಾ ಅನ್ನೋಕೆ, ಅವರ ಈ ಹೊಸ ಚಿತ್ರವೇ ಸಾಕ್ಷಿ.

ಹೌದು, ಸತ್ಯ ಪಿಕ್ಚರ್ಸ್ ಮತ್ತು ಮಯೂರ ಪಿಕ್ಚರ್ಸ್ ನಿರ್ಮಾಣದಲ್ಲಿ , ಸತ್ಯ ಪ್ರಕಾಶ್ ಕಥೆ ಬರೆದು, ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಟೈಟಲ್ ಈಗ ಬಿಡುಗಡೆ ಆಗಿದೆ. ಅನ್ ಲಾಕ್ ರಾಘವ್ ಎಂಬ ತಮ್ಮ ಹೊಸ ಚಿತ್ರದ ಶೀರ್ಷಿಕೆಯನ್ನು ಘೋಷಣೆ ಮಾಡಿದ್ದಾರೆ ಸತ್ಯ ಪ್ರಕಾಶ್.

ರಾಮಾ ರಾಮಾ ರೇ ಖ್ಯಾತಿಯ ಸತ್ಯಪ್ರಕಾಶ್ ಅವರದ್ದು, ಚಿತ್ರರಂಗದಲ್ಲಿ ಹೊಸಬರು ಮತ್ತು ಹೊಸತನವನ್ನು ಪರಿಚಯಿಸುವುದರಲ್ಲಿ ಎತ್ತಿದ ಕೈ. ಅನ್ ಲಾಕ್ ರಾಘವ ಅವರ ಹೊಸ ಸಾಹಸ. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಯುವ ಪ್ರತಿಭೆ ಮಿಲಿಂದ್ ಮತ್ತು ರೇಚಲ್​ ಡೇವಿಡ್​ ಅಭಿನಯಿಸುತ್ತಿದ್ದಾರೆ.

ಈ ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಶ್ವಿನಿ ಪುನಿತ್ ರಾಜ್ ಕುಮಾರ್ ಅವರು ಪಾಲ್ಗೊಂಡಿದ್ದರು. ಹಾಗೆ, ನೋಡಿದರೆ ಈ ಹೊತ್ತಿಗೆ, ಪುನೀತ್ ರಾಜ್ ಕುಮಾರ್ ಮತ್ತು ಸತ್ಯ ಪ್ರಕಾಶ್ ಅವರ ಕಾಂಬಿನೇಶನ್ ನಲ್ಲಿ ಹೊಸ ಚಿತ್ರ ಅನೌನ್ಸ್ ಆಗಬೇಕಿತ್ತು. ಆದರೆ ವಿಧಿ ಲಿಖಿತ ಬೇರೆಯೇ ಇದ್ದುದರಿಂದ ಈ ಪ್ರಾಜೆಕ್ಟ್ ಶುರು ಆಗಿರಲಿಲ್ಲ. ಇನ್ನು ಅನ್ ಲಾಕ್ ರಾಘವ ಚಿತ್ರದ ಬರವಣಿಗೆಯ ಜವಾಬ್ದಾರಿ ಸತ್ಯಪ್ರಕಾಶ್ ಅವರದ್ದೇ. ಆದರೆ, ದೀಪಕ್ ಮಧುವನಹಳ್ಳಿ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಅನೂಪ್ ಸೀಳಿನ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು ಲವಿತ್ ಈ ಚಿತ್ರದ ಛಾಯಾಗ್ರಾಹಕ.