raghavendra rajkumar – Peepal Media

ನಾಳೆ ಪುನೀತ್‌ ರಾಜಕುಮಾರ್‌ ಪುಣ್ಯ ಸ್ಮರಣೆ
ಬೆಂಗಳೂರು: ಒಂದು ಕಡೆ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ ‘ಗಂಧದಗುಡಿʼಸಿನಿಮಾ ತೆರೆ ಕಾಣುತ್ತಿರುವ ಸಂಭ್ರಮವಾದರೆ, ಮತ್ತೊಂದು ಕಡೆ ಪುನೀತ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯೂ ಆಗಮಿಸಿದೆ.

ಇದೇ ಅಕ್ಟೋಬರ್ 29ಕ್ಕೆ ಪುನೀತ್ ಅವರು ಅಗಲಿ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ವಿವಿಧ ಸಾಮಾಜಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಜತೆಗೆ ರಾಜ್ಯದ ಎಲ್ಲ ಕಡೆ ‘ಗಂಧದಗುಡಿʼಯನ್ನು ನೋಡುವ ಮೂಲಕ ಪುನೀತ್ ಅವರ ಕನಸಿನ ಚಿತ್ರವನ್ನು ಸೆಲೆಬ್ರೆಟ್ ಮಾಡಲು ತಯಾರಿ ಮಾಡಿಕೊಂಡಿದ್ದಾರೆ.

ರಂಗೇರಲಿರುವ ಕಂಠೀರವ ಸ್ಟುಡಿಯೋ

ಪುನೀತ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಪುನೀತ್ ಅವರ 75ಕ್ಕೂ ಹೆಚ್ಚು ಕಟೌಟ್‌ಗಳು, ಆಕರ್ಷಕವಾದ ವಿದ್ಯುತ್ ದೀಪಗಳಿಂದ ಇಡೀ ಕಂಠೀರವ ಸ್ಟುಡಿಯೋ ರಂಗೇರಲಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆ, ತಾಲೂಕು ಹಾಗೂ ಹಳ್ಳಿಗಳಿಂದ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಆಗಮಿಸಿಲಿದ್ದಾರೆ.

ಸಾಧು ಸಾರಥ್ಯದಲ್ಲಿ ಗೀತ ನಮನ

ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅವರ ಸಾರಥ್ಯದಲ್ಲಿ 24 ಗಂಟೆಗಳ ಕಾಲ ಗೀತ ನಮನ ಕಾರ್ಯಕ್ರಮವು ನಡೆಯಲಿದೆ. ಈ ಕಾರ್ಯಕ್ರಮವು ಅ.28 ರ ರಾತ್ರಿ 12 ಗಂಟೆಯಿಂದ ಶುರುವಾಗಿ ಅ.29 ರ ರಾತ್ರಿ 12 ಗಂಟೆವೆರಗೂ ನಡೆಯಲಿದೆ. ಪುನೀತ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಆಯೋಜಿಸಿರುವ ಈ ಗೀತ ನಮನ ಕಾರ್ಯಕ್ರಮದಲ್ಲಿ, ನಟರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಅವರು ಹಾಡಲಿದ್ದಾರೆ. ಇವರ ಜತೆಗೆ ಚಿತ್ರರಂಗದ ದಿಗ್ಗಜ ಗಾಯಕರು, ತಂತ್ರಜ್ಞರು, ಸಂಗೀತಗಾರರು ಪಾಲ್ಗೊಂಡು ಹಾಡುಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಅಲ್ಲದೆ ಆರ್‌ಕ್ಯಾಸ್ಟ್ರ ಕಲಾವಿದರಿಂದಲೂ ಸಂಗೀತ ಕಾರ್ಯಕ್ರಮ ಜರುಗಲಿದೆ.