rahul – Peepal Media

ರೈತರ ಪರ ಧ್ವನಿ ಎತ್ತುವುದಾಗಿ ತಿಳಿಸಿದ ರಾಹುಲ್‌: ಸಂಸತ್ತಿನ ಆವರಣದಲ್ಲಿ ರೈತರೊಂದಿಗೆ ಸಭೆ
ನವದೆಹಲಿ: ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ 12 ರೈತ ಮುಖಂಡರ ನಿಯೋಗವು ಲೋಕಸಭೆಯ ಸಂಕೀರ್ಣದಲ್ಲಿಂದು ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಅವರೊಂದಿಗೆ ಕನಿಷ್ಟ ಬೆಂಬಲ ಬೆಲೆ ನೀತಿ ಪರೀಷ್ಕರಣೆಗೆ ಆಗ್ರಹಿಸಿ ಸಭೆ ನಡೆಸಿತು.

ಕಾಂಗ್ರೆಸ್‌ನ ಹಿರಿಯ ನಾಯಕರಾದ ಕೆಸಿ ವೇಣುಗೋಪಾಲ್ ಮತ್ತು ದೀಪೇಂದರ್ ಸಿಂಗ್ ಹೂಡಾ ಅವರು ಸಂಸದರಾದ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಮತ್ತು ಸುಖಜಿಂದರ್ ಸಿಂಗ್ ರಾಂಧವಾ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ವಾರಿಂಗ್‌ ಅವರು, ರಾಹುಲ್ ಗಾಂಧಿಯವರು ಸಂಸತ್ತಿನ ಒಳಗೆ ರೈತರ ಪರ ಧ್ವನಿ ಎತ್ತುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ರೈತರು ಮತ್ತೆ  ದೆಹಲಿಗೆ ಬಂದು ಮತ್ತೊಂದು ಮೆರವಣಿಗೆ ಆಯೋಜಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ರೈತರು ದೆಹಲಿಗೆ ಬಂದು ಪ್ರತಿಭಟಿಸಲು ಎಲ್ಲ ಹಕ್ಕುಗಳನ್ನು ಹೊಂದಿದ್ದಾರೆ. ಖಾಸಗಿ ಸದಸ್ಯರ ಮಸೂದೆ ಅಗತ್ಯವಿದ್ದರೆ ನಾವು ಅದನ್ನು ಸಹ ತರುತ್ತೇವೆ” ಎಂದರು.

ರೈತರಲ್ಲಿ ಒಬ್ಬರಾದ ಜಗಜಿತ್ ಸಿಂಗ್ ದಲ್ಲೆವಾಲ್ ಮಾತನಾಡಿ, “ಸರ್ಕಾರ ಇದುವರೆಗೆ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ; ಸ್ವಾಮಿನಾಥನ್ ವರದಿ ಅನುಷ್ಠಾನ ಅತ್ಯಗತ್ಯ. ನಾವು ದೆಹಲಿ ಕಡೆಗೆ ಪಾದಯಾತ್ರೆಯನ್ನು ಮುಂದುವರಿಸಲಿದ್ದೇವೆ ಎಂದು ಅವರು ತಿಳಿಸಿದರು.

ಇದಕ್ಕೂ ಮೊದಲು, ರೈತರು ತಮ್ಮ ರಾಜ್ಯಗಳಲ್ಲಿನ ಸಮಸ್ಯೆಗಳ ಬಗ್ಗೆ ರಾಹುಲ್ ಗಾಂಧಿಯವರೊಂದಿಗೆ ಮಾತನಾಡಿದರು. ದೀರ್ಘಾವಧಿಯ ಬೇಡಿಕೆಗಳನ್ನು ಈಡೇರಿಸಲು ಖಾಸಗಿ ಸದಸ್ಯರ ಮಸೂದೆಯನ್ನು ಪರಿಚಯಿಸಲು ಕೇಳಿಕೊಂಡರು. ಎಂಎಸ್‌ಪಿಯನ್ನು ಪರಿಷ್ಕರಿಸಲು ಮತ್ತು ಕಾನೂನು ಬೆಂಬಲವನ್ನು ಖಚಿತಪಡಿಸಿಕೊಳ್ಳುವ ಈ ಬೇಡಿಕೆಗಳು 2020 ರಲ್ಲಿ ಪ್ರಾರಂಭವಾದಾಗಿನಿಂದ ಅವರ ಪ್ರತಿಭಟನೆಯ ಮುಖ್ಯ ಭಾಗವಾಗಿದೆ ಎಂದರು.

ದೇಶದಾದ್ಯಂತದ ರೈತ ಸಂಘಗಳು ಎಂಎಸ್‌ಪಿಯನ್ನು ಬಯಸುತ್ತವೆ, ಸ್ವಾಮಿನಾಥನ್ ಆಯೋಗದ ಸಿ2+50 ಸೂತ್ರವನ್ನು ಆಧರಿಸಿರಬೇಕು, ಇದು ಬಂಡವಾಳದ ವೆಚ್ಚ ಮತ್ತು ಬೆಂಬಲ ಬೆಲೆಯನ್ನು ಲೆಕ್ಕಾಚಾರ ಮಾಡುವಾಗ ಭೂಮಿ ಬಾಡಿಗೆಯೂ ಸೇರಿರುತ್ತದೆ. ಆದರೆ, ಈಗಿರುವ ಎ2+ಎಫ್‌ಎಲ್‌+50 ಶೇಕಡಾ ವಿಧಾನವನ್ನು ಕೈಬಿಡಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ದೂರಿದರು.

ರೈತರನ್ನು ಸಂಸತ್ತಿ ಅವರಣದೊಳಕ್ಕೆ ಬಿಡದಿರುವುದಕ್ಕೆ ಆಕ್ರೋಶ: ರೈತರನ್ನು ಸಂಸತ್ತಿನ ಆವರಣದೊಳಕ್ಕೆ ಬಿಡದಿರುವುದಕ್ಕೆ ರೈತರು ಸ್ವಲ್ಪ ಹೊತ್ತು ಪ್ರತಿಭಟನೆ ನಡೆಸಿದರು. ಸಭೆಗೂ ಮುನ್ನ ಗೊಂದಲ ಉಂಟಾಯಿತು.

“ನಾನು ರೈತರನ್ನು ಆಹ್ವಾನಿಸಿದ್ದೆ. ಆದರೆ, ರೈತರನ್ನು ಸಂಸತ್ತಿನ  ಆವರಣದೊಳಗೆ ಬರುವುದನ್ನು ಸರ್ಕಾರದ ನಿರ್ದೇಶನದಿಂದ ಸಿಬ್ಬಂದಿ ತಡೆದರು. ಬಹುಶಃ ಅವರು ರೈತರಾಗಿರುವ ಕಾರಣಕ್ಕೆ ಇರಬಹುದು. ಇದಕ್ಕೆ ಕಾರಣವನ್ನು ನೀವು ಪ್ರಧಾನಿಯವರನ್ನು ಕೇಳಬೇಕಾಗುತ್ತದೆ.” ಎಂದು ರಾಹುಲ್ ಗಾಂಧಿ ಲೇವಡಿಯಾಡಿದರು.

ಈಶಾನ್ಯ ಭಾರತದದಲ್ಲಿ ಗಲಭೆಗಳು ಹೊತ್ತಿ ಉರಿಯುತ್ತಿರುವಾಗ ಪ್ರಧಾನಿ ಜೋಕ್ ಹೇಳುತ್ತಿದ್ದಾರೆ: ರಾಹುಲ್ ಗಾಂಧಿ
ದೇಶದ ಈಶಾನ್ಯ ಭಾಗದಲ್ಲಿ ಗಲಭೆ ಹೊತ್ತಿ ಉರಿಯುತ್ತಿದ್ದರೆ ಇತ್ತ ಪ್ರಧಾನಿ ಲೋಕಸಭೆಯಲ್ಲಿ ಜೋಕ್‌ ಹೇಳುತ್ತಾ ಅಸೂಕ್ಷ್ಮತೆಯನ್ನು ಮೆರೆಯುತ್ತಿದ್ದಾರೆ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಆರೋಪಿಸಿದ್ದಾರೆ.

ಶುಕ್ರವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ ರೀತಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಮತ್ತೊಂದೆಡೆ, ಈಶಾನ್ಯ ರಾಜ್ಯ ಮಣಿಪುರವು ತಿಂಗಳುಗಳಿಂದ ಗಲಭೆಯಿಂದ ಹೊತ್ತಿ ಉರಿಯುತ್ತಿದ್ದರೆ, ಪ್ರಧಾನಿ ನಗುತ್ತಾ ತಮಾಷೆ ಮಾಡುತ್ತಿದ್ದರು. ಅವರು ಮಾತನಾಡುವ ರೀತಿ ತುಂಬಾ ದುಃಖಕರವಾಗಿದೆ.

ಪ್ರಧಾನಿ ಮೋದಿ ಗುರುವಾರ ಲೋಕಸಭೆಯಲ್ಲಿ 2 ಗಂಟೆ 13 ನಿಮಿಷಗಳ ಕಾಲ ಸುದೀರ್ಘ ಭಾಷಣ ಮಾಡಿದರು.

ಆದರೆ ಮಣಿಪುರವನ್ನು ಕೇವಲ 2 ನಿಮಿಷಗಳ ಕಾಲ ಉಲ್ಲೇಖಿಸಲಾಗಿದೆ. ಒಂದೆಡೆ ಮಣಿಪುರ ಗಲಭೆ, ಅತ್ಯಾಚಾರ, ಕೊಲೆಗಳಿಂದ ನಲುಗುತ್ತಿದ್ದರೆ, ಪ್ರಧಾನಿ ಸಂಸತ್ತಿನಲ್ಲಿ ನಗುತ್ತಾ ತಮಾಷೆ ಮಾಡುತ್ತಿದ್ದಾರೆ. ಈ ಹಿಂದೆ ಹಲವು ಪ್ರಧಾನಿಗಳನ್ನು ನೋಡಿದ್ದೇನೆ.

ಆದರೆ, ಇಷ್ಟು ಕೀಳು ಮಟ್ಟದಲ್ಲಿ ಮಾತನಾಡಿದ ಪ್ರಧಾನಿಯನ್ನು ನಾನು ನೋಡಿಲ್ಲ. ಪ್ರಧಾನಿ ಹುದ್ದೆಯಲ್ಲಿರುವ ವ್ಯಕ್ತಿ ರಾಜಕಾರಣಿಯಂತೆ ಮಾತನಾಡಬಾರದು. ಅವರು ದೇಶದ ಎಲ್ಲ ಜನರ ಪ್ರತಿನಿಧಿ ಎನ್ನುವುದನ್ನು ನೆನಪಿನಲ್ಲಿಡಬೇಕು,’’ ಎಂದು ರಾಹುಲ್ ಹೇಳಿದರು.

ಬಿಜೆಪಿಗರು ದೇಶಭಕ್ತರಲ್ಲ, ದೇಶದ್ರೋಹಿಗಳು: ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ
ನವದೆಹಲಿ: ಕಾಂಗ್ರೆಸ್‌ ಮುಖಂಡ ಸಂಸದ ರಾಹುಲ್‌ ಗಾಂಧಿ, ‘ಬಿಜೆಪಿ ರಾಜಕೀಯವು ಇಂದು ಮಣಿಪುರದಲ್ಲಿ ಭಾರತ ಮಾತೆಯನ್ನೇ ಹತ್ಯೆ ಮಾಡಿದ್ದು, ಬಿಜೆಪಿಗರು ದೇಶದ್ರೋಹಿಗಳು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

160 ಜನರ ಬಲಿ ಪಡೆದಿರುವ ಜನಾಂಗೀಯ ಸಂಘರ್ಷಪೀಡಿತ ಮಣಿಪುರ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿತ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ಮುಖಂಡ ಹಾಗೂ ಸಂಸದ ರಾಹುಲ್‌, ಕೇರಳದ ವಯನಾಡ್‌ ಕ್ಷೇತ್ರದ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣನಿಗೆ ಹೋಲಿಸಿದ್ದಾರೆ.

ಬುಧವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್‌, ಮಣಿಪುರಕ್ಕೆ ಭೇಟಿ ನೀಡದ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಕಿಡಿಕಾರಿ ಅವರು ಮಣಿಪುರವನ್ನು ಭಾರತ ಎಂದು ಪರಿಗಣಿಸಿಯೇ ಇಲ್ಲ ಎಂದಿದ್ದು, ತಮ್ಮ ಭಾಷಣದಲ್ಲಿ ಮಣಿಪುರವನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಮಾತಾಡಿದ ರಾಹುಲ್‌ ‘ನಾನು ಕೆಲವು ದಿನಗಳ ಹಿಂದೆ ಮಣಿಪುರಕ್ಕೆ ಹೋಗಿದ್ದೆ. ಆದರೆ ಪ್ರಧಾನಿಗಳು ಈವರೆಗೂ ಹೋಗಿಲ್ಲ ಎಂದರು.

ಏಕೆಂದರೆ ಅವರು ಮಣಿಪುರವನ್ನು ಭಾರತದ ಅಂಗ ಎಂದು ಪರಿಗಣಿಸಿಲ್ಲ. ಮಣಿಪುರ ನೀವು ಇಬ್ಭಾಗ ಮಾಡಿದ್ದೀರಿ’ ಎಂದು ಆರೋಪಿಸಿದರು. ‘ಮಣಿಪುರ ಕ್ಯಾಂಪ್‌ಗೆ ನಾನು ಹೋದಾಗ ಅನೇಕ ಮನಕಲಕುವ ಸಂಗತಿಗಳನ್ನು ನೋಡಿದೆ. ತನ್ನ ಕಣ್ಣೆದುರೇ ಮಗನನ್ನು ಗುಂಡಿಕ್ಕಿ ಸಾಯಿಸಲಾಯಿತು, ಆತನ ಶವದೊಂದಿಗೆ ತಾನು ರಾತ್ರಿ ಕಳೆದೆ ಎಂದು ಮಹಿಳೆಯೊಬ್ಬರು ಹೇಳಿದರು. ಇನ್ನೊಬ್ಬ ಮಹಿಳೆಯು ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಹೇಳಲು ಆಗದೇ ಮೂರ್ಛೆ ಹೋದಳು’ಎಂದು ಹೇಳಿದರು.

ಗುಜರಾತ್‌ ವಿಧಾನಸಭೆಗೆ ಚುನಾವಣಾ ದಿನಾಂಕ ಘೋಷಣೆ
ಕೊನೆಗೂ ಚುನಾವಣಾ ಆಯೋಗವು ಗುಜರಾತ್‌ ವಿಧಾನಸಭೆಗೆ ಚುನಾವಣಾ ದಿನಾಂಕವನ್ನು ಘೋಷಿಸಿದ್ದು, ಚುನಾವಣೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಡಿಸೆಂಬರ್ 1ರಂದು 89 ಸ್ಥಾನಗಳಿಗೆ, ಡಿಸೆಂಬರ್ 5ರಂದು 93 ಸ್ಥಾನಗಳಿಗೆ ಮತದಾನ ನಡೆಯಲಿದೆಯೆಂದು ಆಯೋಗ ತಿಳಿಸಿದೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಗುಜರಾತ್ ಚುನಾವಣೆಯಲ್ಲಿ 4.9 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಮತದಾರರಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ 34,000 ಕ್ಕಿಂತ ಹೆಚ್ಚು ಸೇರಿದಂತೆ 51,000 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 92 ಸದಸ್ಯರ ಬೆಂಬಲ ಬೇಕಿದೆ. ಪ್ರಸ್ತುತ ಆಡಳಿತಾರೂಢ ಬಿಜೆಪಿ 111, ಕಾಂಗ್ರೆಸ್​ 62 ಸದಸ್ಯ ಬಲ ಹೊಂದಿವೆ. ಐದು ಸ್ಥಾನಗಳು ವಿವಿಧ ಕಾರಣಗಳಿಂದ ತೆರವಾಗಿವೆ.

ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ಮಹಿಳೆಯರು, ವೃದ್ಧರು, ಅಂಗವಿಕಲರಿಗೆ ಪ್ರವೇಶ ಮತ್ತು ಸೇರ್ಪಡೆಗಾಗಿ ವಿಶೇಷ ವೀಕ್ಷಕರನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿಯೋಜಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ಇತ್ತೀಚೆಗೆ ಹಿಮಾಚಲ ಪ್ರದೇಶದ ಚುನಾವಣಾ ದಿನಾಂಕವನ್ನು ಮಾತ್ರವೇ ಘೋಷಿಸಿ ಗುಜರಾತ್‌ ಚುನಾವಣಾ ದಿನಾಂಕ ನಿಗದಿಪಡಿಸದ ಚುನಾವಣಾ ಆಯೋಗದ ಕುರಿತು ಅಲ್ಲಲ್ಲಿ ಅಪಸ್ವರ ಕೇಳಿ ಬಂದಿತ್ತು. ಆಡಳಿತ ರೂಢ ಬಿಜೆಪಿಗೆ ಅದರ ಯೋಜನೆಗಳನ್ನು ಉದ್ಘಾಟಿಸಲು ಅನುವು ಮಾಡಿಕೊಡುವ ಸಲುವಾಗಿ ಹೀಗೆ ಮಾಡಲಾಗುತ್ತಿದೆ ಎನ್ನುವ ಆರೋಪವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇದೆಲ್ಲದರಿಂದ ಕೆರಳಿದ ಆಯೋಗವು ತನ್ನ ವಿರುದ್ಧ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿತ್ತು.

ಇಂದು ಬೆಳಗಿನ ಹೊತ್ತು ಆಯೋಗ ಚುನಾವಣಾ ದಿನಾಂಕವನ್ನು ಪ್ರಕಟಿಸಿಲಿದೆ ಎಂದು ತಿಳಿದ ಕೂಡಲೇ ಅದಕ್ಕೆ ಪ್ರತಿಕ್ರಿಯೆಯಾಗಿ ಹಿರಿಯ ಪತ್ರಕರ್ತ ರಾಜದೀಪ್‌ ಸರ್ದೇಸಾಯಿ ಹೀಗೆ ಟ್ವೀಟ್‌ ಮಾಡಿದ್ದರು: “ಬ್ರೇಕಿಂಗ್ ನ್ಯೂಸ್: ಈಗ ಎಲ್ಲಾ ಸರ್ಕಾರಿ ಉದ್ಘಾಟನೆಗಳು ಮುಗಿದಿವೆ, ರಿಬ್ಬನ್ ಕಟ್, ಶಿಲಾನ್ಯಾಸ ಸಮಾರಂಭಗಳು, ಭರವಸೆಗಳನ್ನು ನೀಡುವುದು ಹೀಗೆ ಎಲ್ಲವೂ ಮುಗಿದಿದೆ. ಅಂತೂ ಕೊನೆಗೂ ಗುಜರಾತ್ ವಿಧಾನಸಭೆಯ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗವು ಅಂತಿಮವಾಗಿ ಘೋಷಿಸಲಿದೆ! ಇಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಯಾರು ಹೊಂದಿಸುತ್ತಾರೆ ಎಂದು ನೀವೇ ಊಹಿಸಿ!”