raja pateria – Peepal Media

‘ಮೋದಿಯನ್ನು ಕೊಲ್ಲಲು ಸಿದ್ಧರಾಗಿರಿ…’: ಕಾಂಗ್ರೆಸ್ ನಾಯಕನ ಹೇಳಿಕೆಗೆ ಭಾರೀ ವಿವಾದ
ಮಧ್ಯಪ್ರದೇಶ: ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್‌ ನಾಯಕ ರಾಜಾ ಪಟೇರಿಯಾ ಅವರ ಸಂವಿಧಾನವನ್ನು ಉಳಿಸಬೇಕಾದರೆ ಮೋದಿಯನ್ನು ಸೋಲಿಸಬೇಕು ಎಂಬ ನಿಟ್ಟಿನಲ್ಲಿ ಮೋದಿಯನ್ನು ಕೊಲ್ಲಲು ಸಿದ್ದರಾಗಿರಿʼ ಎಂಬ ಹೇಳಿಕೆ ನೀಡಿದ್ದು, ಬಾರೀ ವಿವಾದಕ್ಕೆ ಕಾರಣವಾಗುತ್ತಿದೆ.

ರಾಜಾ ಪಟೇರಿಯಾ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ʼಪ್ರಧಾನ ಮಂತ್ರಿ ಮೋದಿ ಧರ್ಮ, ಜಾತಿ, ಭಾಷೆಯ ಆಧಾರದ ಮೇಲೆ ವಿಭಜನೆ ಮಾಡುತ್ತಾರೆ. ದಲಿತರು, ಬುಡಕಟ್ಟು ಸಮುದಾಯದವರು ಮತ್ತು ಅಲ್ಪಸಂಖ್ಯಾತರು ಅಪಾದಲ್ಲಿದ್ದಾರೆ. ಸಂವಿಧಾನ ಉಳಿಸಬೇಕಾದರೆ ಮೋದಿಯನ್ನು ಕೊಲ್ಲಲು ಸಿದ್ದರಾಗಿರಿ ಎಂದು ಹೇಳಿದ್ದು, ಆನಂತರ ಕೊಲೆ ಎಂಬ ಪದವನ್ನು ಸೋಲು ಎಂದು ಅರ್ಥದಲ್ಲಿ ಹೇಳಿರುವುದು ಎಂದು ಸ್ಪಷ್ಟ ಪಡಿಸಿದ್ದು, ಅಲ್ಪಸಂಖ್ಯಾತರನ್ನು ರಕ್ಷಿಸಲು ಮೋದಿಯನ್ನು ಸೋಲಿಸಬೇಕು ಎಂದು ಅರ್ಥೈಸಿದ್ದಾರೆʼ ಆದರೂ ಅವರ ಈ ಹೇಳಿಕೆಗೆ ಹಲವಾರು ಬಿಜೆಪಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದು, ಪಟೇರಿಯಾ ಬಂಧನಕ್ಕೆ ಕರೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಪಟೇರಿಯಾ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಿಸಲು ಮಧ್ಯಪ್ರದೇಶ ಸರ್ಕಾರ ಆದೇಶಿಸಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ವೆಂಕಟೇಶ್ ಜೋಶಿ ಅವರು ಪಟೇರಿಯಾ ಅವರ ಹೇಳಿಕೆಯನ್ನು ಅಕ್ಷಮ್ಯ ಅಪರಾಧವೆಂದು ಹೇಳಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಶಿವರಾಜ್‌ ಚೌಹಾಣ್‌ ಅವರು, ʼರಾಹುಲ್‌ಗಾಂಧಿಯವರನ್ನು ಗುರಿಯಾಗಿಸಿಕೊಂಡು ʼಭಾರತ್‌ ಜೋಡೋ ಯಾತ್ರೆ ಮಾಡುವುದಾಗಿ ನಟಿಸುವವರ ನಿಜಾವಾದ ಮುಖ ಹೊರಬರುತ್ತಿದೆʼ ಎಂದು ಮಾತನಾಡಿದ್ದಾರೆ.

“ರಾಜಾ ಪಟೇರಿಯಾ ತನ್ನನ್ನು ತಾನು ಮಾನಸಿಕವಾಗಿ ಅಸ್ವಸ್ಥನೆಂದು ಘೋಷಿಸಿಕೊಂಡರೂ, ಅವನು ಈ ಅಪರಾಧದಿಂದ ಪಾರಾಗಬಾರದು. ರಾಜಾ ಪಟೇರಿಯಾ ವಿರುದ್ಧ ತಕ್ಷಣ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾನು ಮಧ್ಯಪ್ರದೇಶ ಸರ್ಕಾರವನ್ನು ವಿನಂತಿಸುತ್ತೇನೆ” ಎಂದು ಕೇಂದ್ರ ಸಚಿವ ಪ್ರಲ್ಹಾದ್ ವೆಂಕಟೇಶ್ ಜೋಶಿಯವರು ವೀಡಿಯೊ ಮನವಿಯಲ್ಲಿ ತಿಳಿಸಿದ್ದಾರೆ.