rajiv gandhi – Peepal Media

ಭಾರತ್‌ ಜೋಡೋ ಯಾತ್ರೆಯಲ್ಲಿ, ಆತ್ಮಹತ್ಯೆಗೆ ಯತ್ನಿಸಿದ ಯುವಕ
ರಾಜಸ್ಥಾನ : 4ನೇ ದಿನದ ಭಾರತ್‌ ಜೋಡೋ ಯಾತ್ರೆಯ ನಡುವೆಯೇ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ ನಡೆಸಿದೆ.

ರಾಜಸ್ಥಾನದ ಕೋಟಾದಲ್ಲಿ ನಡೆಯುತ್ತಿರುವ ನಾಲ್ಕನೇ ದಿನದ ಭಾರತ್‌ ಜೋಡೋ ಯಾತ್ರೆಯಲ್ಲಿ ಕುಲದೀಪ್‌ ಶರ್ಮಾ ಎಂಬ ಯುವಕ ರಾಜಸ್ಥಾನದ ವಾಣಿಜ್ಯ ಕಾಲೇಜು ಬಳಿಯ ರಾಜೀವ್‌ ಗಾಂಧಿ ಪ್ರತಿಮೆಯ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ರಾಹುಲ್‌ ಗಾಂಧಿಯವರು ರಾಜೀವ್‌ ಗಾಂಧಿಯವರಿಗೆ ಮಾಲಾರ್ಪಣೆ ಮಾಡುವ ವೇಳೆ, ಯುವಕ ತನ್ನ ಮೈಮೇಲೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಯಾತ್ರೆಯಲ್ಲಿ ಗದ್ದಲ ಉಂಟಾಗಿದೆ. ಯುವಕನಿಗೆ ಹಚ್ಚಿಕೊಂಡಿದ್ದ ಬೆಂಕಿಯನ್ನು ಅಕ್ಕಪಕ್ಕದವನ್ನು ನಂದಿಸಿದ್ದು, ಆತನನ್ನು ಆಂಬ್ಯುಲೆನ್ಸ್‌ ಮುಖಾಂತರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕುಲದೀಪ್‌ ಶರ್ಮಾ ಆಂಬ್ಯುಲೆನ್ಸ್‌ನಲ್ಲಿ ಕುಳಿತಿದ್ದಾಗ ʼ ರಾಹುಲ್‌ ಗಾಂಧಿ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆತನೊಂದಿಗೆ ಪೊಲೀಸರು , ಸಿಐಡಿ ಗುಪ್ತಚರ ದಳದವರು ಕೂಡ ಆಸ್ಪತ್ರೆಗೆ ತೆರಳಿದ್ದು, ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ರಾಜೀವ್ ಗಾಂಧಿ ಹಂತಕರನ್ನು ಮುಕ್ತಗೊಳಿಸುವ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ: ಎಂ. ಕೆ. ಸ್ಟಾಲಿನ್‌
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನಿ ಶ್ರೀಹರನ್ ಸೇರಿದಂತೆ ಆರು ಅಪರಾಧಿಗಳನ್ನು ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.

ʼಆರು ಜನರ ಬಿಡುಗಡೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ನಾನು ಸ್ವಾಗತಿಸುತ್ತೇನೆʼ ಎಂದು ಸ್ಟಾಲಿನ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ಉನ್ನತ ನ್ಯಾಯಾಲಯದ ತೀರ್ಪನ್ನು ಶ್ಲಾಘಿಸಿದ ಸ್ಟಾಲಿನ್, ‘ಇದು ಪ್ರಜಾಪ್ರಭುತ್ವದ ಸಿದ್ಧಾಂತಕ್ಕೆ ಐತಿಹಾಸಿಕ ಹೊಡೆತವಾಗಿದೆ’ ಎಂದು ಹೇಳಿದರು.

‘ಜನರಿಂದ ಆಯ್ಕೆಯಾದ ಸರ್ಕಾರದ ನಿರ್ಧಾರಗಳು ಮತ್ತು ನಿರ್ಧಾರಗಳನ್ನು ರಾಜ್ಯಪಾಲರು ನಿಯೋಜಿತ ಸ್ಥಾನಗಳಲ್ಲಿ ಕೈಬಿಡಬಾರದು ಎಂಬುದಕ್ಕೆ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಸಾಕ್ಷಿಯಾಗಿದೆ’. ವಿರೋಧ ಪಕ್ಷ ಮತ್ತು ಸರ್ಕಾರದಲ್ಲಿರುವುದರಿಂದ, ಡಿಎಂಕೆ ಸರ್ಕಾರದಲ್ಲಿದ್ದಾಗ ಯಾವಾಗಲೂ ಈ ಜನರ ಬಿಡುಗಡೆಗೆ ಧ್ವನಿ ಎತ್ತಿದೆ ಎಂದು ಅವರು ಹೇಳಿದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿ ಶ್ರೀಹರನ್ ಮತ್ತು ಇತರ ಐವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ಜೈಲಿನಲ್ಲಿ ಅವರ ಉತ್ತಮ ನಡತೆಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಅವರನ್ನು ಬಿಡುಗಡೆ ಮಾಡಿತು ಎಂದು ತಿಳಿಸಿದರು.

1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್ಟಿಟಿಇ) ಸಂಘಟನೆಯ ಮಹಿಳಾ ಆತ್ಮಹತ್ಯಾ ಬಾಂಬರ್ ರಾಜೀವ್ ಗಾಂಧಿ ಅವರನ್ನು ಸಾರ್ವಜನಿಕ ರ್ಯಾಲಿಯಲ್ಲಿ ಹತ್ಯೆಗೈಯಲಾಗಿತ್ತು.

ಕೊಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ, ನಳಿನಿ ಶ್ರೀಹರನ್, ಆರ್.ಪಿ.ರವಿಚಂದ್ರನ್, ಜಯಕುಮಾರ್, ಸಂತನ್, ಮುರುಗನ್, ರಾಬರ್ಟ್ ಪಾಯಸ್ ಮತ್ತು ಎ.ಜಿ.ಪೆರಾರಿವಾಲನ್ ಎಂಬ ಏಳು ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಯಿತು.

2000ನೇ ಇಸವಿಯಲ್ಲಿ ನಳಿನಿ ಶ್ರೀಹರನ್ ಅವರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಯಿತು. ನಂತರ 2014 ರಲ್ಲಿ, ಇತರ ಆರು ಅಪರಾಧಿಗಳ ಶಿಕ್ಷೆಯನ್ನು ಸಹ ಕಡಿಮೆ ಮಾಡಲಾಯಿತು, ಮತ್ತು ಅದೇ ವರ್ಷದಲ್ಲಿ, ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಪ್ರಕರಣದ ಎಲ್ಲಾ ಏಳು ಅಪರಾಧಿಗಳನ್ನು ಬಿಡುಗಡೆ ಮಾಡಲು ಶಿಫಾರಸು ಮಾಡಿದರು.

ಏಳು ಅಪರಾಧಿಗಳಲ್ಲಿ ಒಬ್ಬರಾದ ಎಜಿ ಪೆರಾರಿವಾಲನ್ ಅವರನ್ನು 31 ವರ್ಷಗಳ ಜೈಲುವಾಸದ ನಂತರ ಈ ವರ್ಷದ ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಯಿತು.

ರಾಜೀವ್ ಗಾಂಧಿ ಹಂತಕರ ಬಿಡುಗಡೆ: ಶಿಕ್ಷೆಯಿಂದ ಮುಕ್ತಗೊಳಿಸಿರುವ ಸುಪ್ರೀಂ ಕೋರ್ಟ್‌ನ ಕ್ರಮ ‘ಸ್ವೀಕಾರಾರ್ಹವಲ್ಲ’ಎಂದ ಕಾಂಗ್ರೆಸ್
ಹೊಸದಿಲ್ಲಿ: ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಆರು ಜನ ಹಂತಕರನ್ನು ಬಿಡುಗಡೆ ಮಾಡುವ ತನ್ನ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಇಂದು ಪ್ರಕಟಿಸುತ್ತಿದ್ದಂತೆ, ಕಾಂಗ್ರೆಸ್ ಪಕ್ಷವು ಇದನ್ನು ʼದುರದೃಷ್ಟಕರʼ ಮತ್ತು ʼಸ್ವೀಕಾರಾರ್ಹವಲ್ಲʼ ಎಂದು ಅಸಮಧಾನ ವ್ಯಕ್ತಪಡಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್‌ ಸಂಸದ ಮತ್ತು ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ರವರು, ʼಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಕೊಂದ ಹಂತಕರನ್ನು ಬಿಡುಗಡೆ ಮಾಡುವ ಸುಪ್ರೀಂ ಕೋರ್ಟ್‌ ನಿರ್ಧಾರವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷವು ಇದನ್ನು ಸ್ಪಷ್ಟವಾಗಿ ಟೀಕಿಸುತ್ತದೆ ಮತ್ತು ಅದನ್ನು ಸಂಪೂರ್ಣವಾಗಿ ಅಸಮರ್ಥನೀಯವೆಂದು ಪರಿಗಣಿಸುತ್ತದೆʼಎಂದು ಹೇಳಿದರು.

ʼಸರ್ವೋಚ್ಚ ನ್ಯಾಯಾಲಯವು ಈ ವಿಷಯದಲ್ಲಿ ಭಾರತದ ಮನೋಭಾವಕ್ಕೆ ಅನುಗುಣವಾಗಿ ವರ್ತಿಸದಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಜೈರಾಮ್ ರಮೇಶ್ ಹೇಳಿದರು.

1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ, ನೆರೆಯ ಶ್ರೀಲಂಕಾದ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್ಟಿಟಿಇ) ಗುಂಪಿನ ಮಹಿಳಾ ಆತ್ಮಹತ್ಯಾ ಬಾಂಬರ್ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ್ದರು.

ನಳಿನಿ ಶ್ರೀಹರನ್ ಮತ್ತು ಇತರ ಐವರು ಅಪರಾಧಿಗಳನ್ನು ಸುಪ್ರೀಂ ಕೋರ್ಟ್ 33 ವರ್ಷಗಳ ಜೈಲುವಾಸದ ನಂತರ ಬಿಡುಗಡೆ ಮಾಡಿದೆ. ಇಂದು ಬಿಡುಗಡೆಯಾದ ಆರು ಮಂದಿಯಲ್ಲಿ ರಾಬರ್ಟ್ ಪಾಯಸ್, ಜಯಕುಮಾರ್ ಮತ್ತು ಮುರುಗನ್ ಶ್ರೀಲಂಕಾದ ಪ್ರಜೆಗಳು ಎಂದು ತಿಳಿದುಬಂದಿದೆ.

ಮೇ ತಿಂಗಳಲ್ಲಿ, ಸರ್ವೋಚ್ಚ ನ್ಯಾಯಾಲಯವು ತನ್ನ ಅಸಾಧಾರಣ ಅಧಿಕಾರಗಳನ್ನು ಬಳಸಿಕೊಂಡು ಪೆರಾರಿವಾಲನ್ ಎಂಬ ಏಳನೇ ಅಪರಾಧಿಯನ್ನು ಬಿಡುಗಡೆ ಮಾಡಿತು. ಇದೇ ಆದೇಶವು ಉಳಿದ ಅಪರಾಧಿಗಳಿಗೆ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

2000ನೇ ಇಸವಿಯಲ್ಲಿ ರಾಜೀವ್ ಗಾಂಧಿ ಅವರ ಪತ್ನಿ ಹಾಗೂ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮಧ್ಯಪ್ರವೇಶದಿಂದ ನಳಿನಿ ಶ್ರೀಹರನ್ ಅವರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗಿತ್ತು. 2008 ರಲ್ಲಿ, ರಾಜೀವ್ ಗಾಂಧಿ ಅವರ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ವೆಲ್ಲೂರು ಜೈಲಿನಲ್ಲಿ ಭೇಟಿಯಾದರು. ನಂತರ 2014ರಲ್ಲಿ ಇನ್ನೂ ಆರು ಅಪರಾಧಿಗಳ ಶಿಕ್ಷೆಯನ್ನು ಸಹ ಕಡಿತಗೊಳಿಸಲಾಯಿತು.

ಸಂಪರ್ಕ ಕ್ರಾಂತಿಯ ಹರಿಕಾರ ರಾಜೀವ ಗಾಂಧಿ
‘ರಾಜಕೀಯದಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅವರ ಸಹಪಾಠಿಗಳು ಹೇಳುವಂತೆ, ಅವರ ಪುಸ್ತಕದ ಕಪಾಟಿನಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕುರಿತ ಸಂಪುಟಗಳು ಸಾಲು ಸಾಲಾಗಿದ್ದವು. ತತ್ವಶಾಸ್ತ್ರ, ರಾಜಕೀಯ ಅಥವಾ ಇತಿಹಾಸದ ಪುಸ್ತಕಗಳು ಅಲ್ಲಿರಲಿಲ್ಲ. ಆ ಜಾಗವನ್ನು ಸಂಗೀತದ ಆಸಕ್ತಿ ತುಂಬಿತ್ತು’.ಹೀಗೆಂದು ಮಾಜಿ ಪ್ರಧಾನಿ ರಾಜೀವ ಗಾಂಧಿಯವರನ್ನು ಅವರ ಜನ್ಮದಿನದ ಅಂಗವಾಗಿ ಉದ್ಯಾವರ ನಾಗೇಶ್ ಕುಮಾರ್ ಸ್ಮರಿಸಿದ್ದಾರೆ.

ರಾಜೀವ  ಗಾಂಧಿ ಅಂದ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ಈ ದೇಶದ ಐಟಿ ಕ್ಷೇತ್ರ. ತಾನು ಪ್ರಧಾನಿಯಾಗಿ ಈ ದೇಶದ ಹೊಣೆಯನ್ನು ಹೊತ್ತ ಸಂದರ್ಭ. ಅದು ಅತ್ಯಂತ ಅಸಹನೀಯ ಹೊತ್ತು. ಪ್ರಧಾನಿಯಾಗಿದ್ದ ತಾಯಿ ಇಂದಿರಾ ಗಾಂಧಿ ತನ್ನದೇ ಅಂಗರಕ್ಷಕರ ಗುಂಡಿಗೆ ಬಲಿಯಾದ ಹೊತ್ತು ಅನಿವಾರ್ಯವಾಗಿ ಪ್ರಧಾನಿ ಹುದ್ದೆಯನ್ನು ವಹಿಸಿ ಕೊಂಡರು. ಆ ನಂತರ ಅವರು ಕಂಡ ಕನಸು ಮಾತ್ರ ಅದು ದೇಶದ ದಿಕ್ಕನ್ನೇ ಬದಲಾಯಿಸುವಂತದ್ದು. ದೇಶವನ್ನು ಇಪ್ಪತ್ತನೇ ಶತಮಾನಕ್ಕೆ ಒಯ್ಯುವುದಕ್ಕಾಗಿ ಸಜ್ಜು ಮಾಡುವ ಗುರುತರ ಜವಾಬ್ದಾರಿ ಅವರದ್ದಾಗಿತ್ತು.ವಿದೇಶದಲ್ಲಿ ಸೇವೆ ಮಾಡುತ್ತಿದ್ದ ಸ್ಯಾಮ್ ಪಿತ್ರೋಡ ಅನ್ನುವ ತಂತ್ರಜ್ಞನನ್ನು ಭಾರತಕ್ಕೆ ಕರೆಸಿಕೊಂಡು ಸಿ ಡಾಟ್ ತಂತ್ರಜ್ಞಾನದ ಮೂಲಕ  ಐಟಿ ಕ್ಷೇತವನ್ನು ಅಭಿವೃದ್ದಿ ಪಡಿಸಲು ಹೆಣಗಿದರು. ಇಂದು ಡಿಜಿಟಲ್ ಇಂಡಿಯಾ ಎಂದು ಬೊಬ್ಬಿಡುವ ಸರಕಾರಗಳು ಇದಕ್ಕೆ ಓ ನಾಮ ಬರೆದವರು ರಾಜೀವ ಗಾಂಧಿ ಎನ್ನುವುದನ್ನು‌ ಹೇಳಲು ಜಾಣ ಮರೆವು ತೋರುತ್ತಾರೆ .

ಶ್ರೀ ರಾಜೀವ ಗಾಂಧಿಯವರು 40ರ ವಯಸ್ಸಿನಲ್ಲಿ ಭಾರತ ದೇಶದ ಪ್ರಧಾನಿಯಾದರು. ಅದು ವಿಶ್ವದ ಸರಕಾರಗಳ ಅತ್ಯಂತ ಕಿರಿಯ  ಆಡಳಿತ ಮುಖ್ಯಸ್ಥರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಷ್ಟೆ ಅಲ್ಲದೆ ನೆಹರೂ ಕುಟುಂಬದ ಮೂರನೇ ತಲೆ ಮಾರಿನ ಪ್ರಧಾನಿ. ಅಜ್ಜ ಪಂಡಿತ್ ಜವಾಹರ್ ಲಾಲ್ ನೆಹರೂರವರು 58ನೇ ವಯಸಿನಲ್ಲಿ  ಪ್ರಧಾನಿಯಾದರೆ, ತಾಯಿ ಇಂದಿರಾ ಗಾಂಧಿ 48 ವಯಸ್ಸಿನಲ್ಲಿ ಪ್ರಧಾನಿಯಾಗಿದ್ದರು.

ಶ್ರೀ ರಾಜೀವ ಗಾಂಧಿ

ರಾಷ್ಟ್ರದಲ್ಲಿ ಯುವ ಪೀಳಿಗೆಯ ಐಕಾನ್ ಆಗಿದ್ದ ರಾಜೀವ ಗಾಂಧಿಯವರು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಜನಾದೇಶವನ್ನು ಪಡೆದರು. ತಾಯಿಯ ಮರಣದ ಸಂದಿಗ್ಧ ಕಾಲದಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ರಾಜೀವ ಗಾಂಧಿ ತಾಯಿಯ ಶೋಕಾಚರಣೆ ಪೂರ್ಣಗೊಂಡ ಕೂಡಲೆ ಹೊಸ ಜನಾದೇಶಕ್ಕಾಗಿ ಲೋಕ ಸಭಾ ಚುನಾವಣೆಗೆ ಆದೇಶ ನೀಡಿದರು. ಅದರ ಫಲವಾಗಿ ಕಾಂಗ್ರೆಸ್ ಪಕ್ಷ 508 ಲೋಕ ಸಭಾ ಸ್ಥಾನಗಳಲ್ಲಿ401 ಸ್ಥಾನವನ್ನು ಪಡೆಯಿತು ಮತ್ತು ಈ ತನಕದ ಚುನಾವಣೆಗಳಿಗಿಂತ  ಕಾಂಗ್ರೆಸ್ ಹೆಚ್ಚಿನ ಪ್ರತಿಶತ ಮತವನ್ನು ಪಡೆಯಿತು.

ಶ್ರೀ  ರಾಜೀವ ಗಾಂಧಿಯವರ ಬಗ್ಗೆ ವಿಶೇಷವಾಗಿ  ಹೇಳುವುದಾದರೆ, ಸ್ವಾತಂತ್ರ್ಯ ಸಂಗ್ರಾಮ ಮತ್ತು ನಂತರ ಎರಡೂ ಸಮಯದಲ್ಲೂ ನಾಲ್ಕು ದಶಕಗಳು ಭಾರತಕ್ಕೆ ಸೇವೆ ಸಲ್ಲಿಸಿದ ರಾಜಕೀಯ ಕುಟುಂಬಕ್ಕೆ ಸೇರಿದ್ದರೂ ಅವರು ರಾಜಕೀಯಕ್ಕೆ ಸೇರಿದ್ದು ತಡವಾಗಿ ಮತ್ತು ಇಷ್ಟವಿಲ್ಲದೆ.

ಶ್ರೀ  ರಾಜೀವ ಗಾಂಧಿ

ರಾಜೀವ್ ಗಾಂಧಿ ಅವರು ಆಗಸ್ಟ್ 20, 1944ರಲ್ಲಿ ಬಾಂಬೆಯಲ್ಲಿ ಜನಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಅವರಿಗೆ ಕೇವಲ ಮೂರು ವರ್ಷ ಹಾಗೂ ಆಗ ಅವರ ತಾತ ಪ್ರಧಾನ ಮಂತ್ರಿಯಾಗಿದ್ದರು. ಅವರ ಕುಟುಂಬ ನವ ದೆಹಲಿಯಿಂದ ಲಕ್ನೋಗೆ ಸ್ಥಳಾಂತರಗೊಂಡಿತ್ತು. ಅವರ ತಂದೆ ಫಿರೋಜ್ ಗಾಂಧಿ ಸಂಸತ್ ಸದಸ್ಯರಾಗಿದ್ದರು ಹಾಗೂ ನಿರ್ಭಯ ಮತ್ತು ಪರಿಶ್ರಮದ ಸಂಸದೀಯ ಪಟು ಎಂಬ ಹೆಸರನ್ನೂ ಪಡೆದಿದ್ದರು.

ಶ್ರೀಮತಿ ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿಯವರ ಆತಿಥ್ಯಕಾರಿಣಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತೀನ್ ಮೂರ್ತಿ ಭವನದಲ್ಲಿ ತಮ್ಮ ತಾತನೊಂದಿಗೆ ತಮ್ಮ ಬಾಲ್ಯದ ದಿನಗಳನ್ನು ರಾಜೀವ ಗಾಂಧಿ ಕಳೆದರು. ಡೆಹ್ರಾಡೂನ್ ನಲ್ಲಿ  ಕೆಲಕಾಲ  ವ್ಯಾಸಂಗ ಮಾಡಿದರು. ನಂತರ ಹಿಮಾಲಯದ ತಪ್ಪಲಿನ ಡೂನ್ ವಸತಿ ಶಾಲೆಯಲ್ಲಿ ಶಿಕ್ಷಣ ಮುಂದುವರೆಸಿದರು. ಅಲ್ಲಿ ಅವರು ತಮ್ಮ ಜೀವನದ ಅನೇಕ ಆಪ್ತಮಿತ್ರರನ್ನು ಸಂಪಾದಿಸಿದರು. ಅವರ ಕಿರಿಯ ಸಹೋದರ ಸಂಜಯ್ ಗಾಂಧಿ ಸಹ ಇದೇ ಶಾಲೆಗೆ ಸೇರಿದರು.

ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ, ಶ್ರೀ ರಾಜೀವ್ ಗಾಂಧಿಯವರು ಕೇಂಬ್ರಿಡ್ಜ್ನ ಟ್ರಿನಿಟಿ ಕಾಲೇಜಿಗೆ ಸೇರಿದರು. ಆದರೆ, ನಂತರ ಅವರು ಲಂಡನ್ನಿನ ಇಂಪೀರಿಯಲ್ ಕಾಲೇಜಿಗೆ ಸ್ಥಳಾಂತರಗೊಂಡರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದರು.

ರಾಜಕೀಯದಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅವರ ಸಹಪಾಠಿಗಳು ಹೇಳುವಂತೆ, ಅವರ ಪುಸ್ತಕದ ಕಪಾಟಿನಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕುರಿತ ಸಂಪುಟಗಳು ಸಾಲು ಸಾಲಾಗಿದ್ದವು. ತತ್ವಶಾಸ್ತ್ರ, ರಾಜಕೀಯ ಅಥವಾ ಇತಿಹಾಸ ಪುಸ್ತಕಗಳು ಅಲ್ಲಿರಲಿಲ್ಲ. ಅವರಿಗೆ ಸಂಗೀತದಲ್ಲಿ ತುಂಬಾ ಆಸಕ್ತಿ ಇತ್ತು. ಅವರು ಪಾಶ್ಚಿಮಾತ್ಯ ಮತ್ತು ಹಿಂದೂಸ್ತಾನಿ, ಶಾಸ್ತ್ರೀಯ ಹಾಗೆಯೇ ಆಧುನಿಕ ಸಂಗೀತವನ್ನು ತುಂಬಾ ಇಷ್ಟಪಡುತ್ತಿದ್ದರು. ಛಾಯಾಗ್ರಹಣ ಮತ್ತು ಹವ್ಯಾಸಿ ರೇಡಿಯೊದಲ್ಲಿ ಅವರಿಗೆ ವಿಶೇಷ ಆಸಕ್ತಿ ಇತ್ತು.

ಅವರಿಗೆ ತುಂಬಾ ಖುಷಿ ಕೊಡುತ್ತಿದ್ದ ಸಂಗತಿ ಎಂದರೆ ಫ್ಲೈಯಿಂಗ್. ಇಂಗ್ಲೆಂಡ್ ನಿಂದ  ತಾಯ್ನಾಡಿಗೆ ಹಿಂದಿರುಗಿದ ನಂತರ ಅವರು ದೆಹಲಿ ಫ್ಲೈಯಿಂಗ್ ಕ್ಲಬ್ ನ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದರು ಹಾಗೂ ಕಮರ್ಷಿಯಲ್ ಪೈಲೆಟ್ ಲೈಸನ್ಸ್ ಪಡೆದರು. ಬಳಿಕ ಅವರು ಭಾರತದ ದೇಶೀಯ ವಿಮಾನ ಸಂಸ್ಥೆ ಇಂಡಿಯನ್ ಏರ್ ಲೈನ್ಸ್ ನಲ್ಲಿ ಪೈಲೆಟ್ ಆದರು.

ಕೇಂಬ್ರಿಡ್ಜ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವೇಳೆ ಇಂಗ್ಲಿಷ್ ಅಧ್ಯಯನ ಮಾಡುತ್ತಿದ್ದ ಇಟೆಲಿಯ ಸೋನಿಯಾ ಮೈನೋ ಅವರನ್ನು ರಾಜೀವ್ ಭೇಟಿಯಾದರು. ಭೇಟಿ ವಿವಾಹದಲ್ಲಿ ಸುಖಾಂತ್ಯವಾಯಿತು. ಬಳಿಕ ನವ ದೆಹಲಿಯಲ್ಲಿ  ಇಂದಿರಾಗಾಂಧಿ ಅವರ ನಿವಾಸದಲ್ಲಿ ನೆಲೆಸಿದ ಆವರಿಗೆ ರಾಹುಲ್ ಮತ್ತು ಪ್ರಿಯಾಂಕ ಎಂಬ ಮಕ್ಕಳಿರುವುದು ಎಲ್ಲರಿಗೂ ತಿಳಿದಿರುವಂತದ್ದೇ ಆಗಿದೆ.

imege- fpj web desk

1980ರಲ್ಲಿ ಅವರ ಸೋದರ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ದುರಂತ ಸಾವಿಗೀಡಾದ ನಂತರ ಸನ್ನಿವೇಶ ಬದಲಾಯಿತು. ರಾಜಕೀಯ ರಂಗ ಪ್ರವೇಶಿಸಿ ತಾಯಿಯವರಿಗೆ ನೆರವು ನೀಡುವಂತೆ ಶ್ರೀ ಗಾಂಧಿ ಅವರಿಗೆ ಒತ್ತಡಗಳು ಬಂದವು. ನಂತರ ಅನೇಕ ಆಂತರಿಕ ಮತ್ತು ಬಾಹ್ಯ ಸವಾಲುಗಳು ಎದುರಾದವು. ಮೊದಲಿಗೆ ಈ ಒತ್ತಡಗಳಿಗೆ ಅವರು ಪ್ರತಿರೋಧ ವ್ಯಕ್ತಪಡಿಸಿದ್ದರೂ ಬಳಿಕ ಅವರ ಸಿದ್ಧಾಂತಗಳಿಗೆ  ತಲೆ ಬಾಗಿದರು. ತಮ್ಮ ಸೋದರನ ಸಾವಿನಿಂದ ತೆರವಾದ ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದರು.

ನವೆಂಬರ್ 1982ರಲ್ಲಿ ಭಾರತವು ಏಷ್ಯನ್ ಕ್ರೀಡಾಕೂಟದ ಆತಿಥ್ಯ ವಹಿಸಿದಾಗ, ಕೆಲವು ವರ್ಷಗಳ ಹಿಂದೆಯೇ ಕ್ರೀಡಾಂಗಣ ನಿರ್ಮಾಣ ಹಾಗೂ ಇತರೆ ಮೂಲಸೌಕರ್ಯಗಳ ವ್ಯವಸ್ಥೆಗೆ ಕೈಗೊಂಡ ಬದ್ಧತೆಯನ್ನು ಪೂರೈಸಲಾಯಿತು. ಸಕಾಲದಲ್ಲಿ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸುವ ಹೊಣೆಯನ್ನು ರಾಜೀವ್ ಗಾಂಧಿ ಅವರಿಗೆ ವಹಿಸಲಾಯಿತು. ಯಾವುದೇ ಅಡೆತಡೆ ಮತ್ತು ಗೊಂದಲಗಳಿಲ್ಲದೇ ಕ್ರೀಡಾಕೂಟಗಳನ್ನು ನಡೆಸಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಯಿತು. ಈ ಸವಾಲಿನ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಅವರು ತಮ್ಮ ಸಾಮರ್ಥ್ಯ ಮತ್ತು ಸುಗಮ ಸಮನ್ವಯತೆಯನ್ನು ಸಾಬೀತು ಮಾಡಿ ತಮ್ಮ ಮೊದಲ ನಾಯಕತ್ವವನ್ನು ಪ್ರದರ್ಶಿಸಿದರು. ಇದೇ ವೇಳೆ, ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಅವರು ಸಮಾನತೆಯೊಂದಿಗೆ ಪಕ್ಷದ ಸಂಘಟನೆಯನ್ನು ಕ್ರಮ ಬದ್ಧಗೊಳಿಸಿದರು. ಈ ಎಲ್ಲ ನಾಯಕತ್ವ ಗುಣಗಳು ಅವರನ್ನು ಮುಂದಿನ ದಿನಗಳಲ್ಲಿ ದೇಶವನ್ನು ಮುನ್ನೆಡೆಸುವ ಅಧಿಕಾರದ ಚುಕ್ಕಾಣಿ ಹಿಡಿಯಲು ನೆರವಾಯಿತು.

ಶ್ರೀ ರಾಜೀವ್ ಗಾಂಧಿ ಅವರು ಭಾರತದ ಪ್ರಧಾನಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಈ ಎರಡು ಮಹತ್ವದ ಹುದ್ದೆಗಳ ಅಧಿಕಾರ ಪಡೆದಿದ್ದು ದುರಂತದ ಸನ್ನಿವೇಶದಲ್ಲಿ. 31ನೇ ಅಕ್ಟೋಬರ್, 1984ರಲ್ಲಿ ತಮ್ಮ ತಾಯಿಯವರ ಬರ್ಬರ ಹತ್ಯೆ ನಂತರ ಅವರು ವೈಯಕ್ತಿಕ ದು:ಖ ಮತ್ತು ರಾಷ್ಟ್ರದ ಹೊಣೆಯನ್ನು ಸಮತೋಲನ, ಘನತೆ ಮತ್ತು ಸಂಯಮದಿಂದ ನಿಭಾಯಿಸಿದರು.

ಸುದೀರ್ಘ ಚುನಾವಣಾ ಪ್ರಚಾರದ ವೇಳೆ, ಶ್ರೀ ಗಾಂಧಿ ಅವರು ದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ದಣಿವಿಲ್ಲದೇ ಪ್ರವಾಸ ಮಾಡಿದರು. ಅವರು ಭೂಮಿ ಸುತ್ತಳತೆಯ ಒಂದೂವರೆ ಪಟ್ಟುವಿಗೆ ಸಮನಾದ ಅಂತರವನ್ನು ವ್ಯಾಪಿಸಿ ಬಹುತೇಕ ಸ್ಥಳಗಳಲ್ಲಿ 250ಕ್ಕೂ ಸಭೆಗಳನ್ನು ಉದ್ದೇಶಿಸಿ ಮಾತನಾಡಿ, ಲಕ್ಷಾಂತರ ಮಂದಿಯನ್ನು ಭೇಟಿ ಮಾಡಿದರು.

imege- the week desk

ಪ್ರಧಾನಿಯಾಗಿದ್ದಾಗ ದೇಶದಲ್ಲಿ ಐಟಿ ಉದ್ಯಮ, ದೂರ ಸಂಪರ್ಕ  ಕ್ರಾಂತಿ ಮಾಡಿದ ಖ್ಯಾತಿ ರಾಜೀವ ಗಾಂಧಿ ಅವರಿಗೆ ಸಲ್ಲುತ್ತದೆ. ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಕೈಗೊಂಡ ಯೋಜನೆಗಳು ಇಂದಿಗೂ ಪ್ರಸ್ತುತ. ರಾಜೀವ ಗಾಂಧಿಯವರು ಈ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರನ್ನು ಭಾರತದ ಫಾದರ್‌ ಆಫ್‌ ಐಟಿ ಮತ್ತು ಟೆಲಿಕಮ್ಯುನಿಕೇಷನ್‌ ಕ್ರಾಂತಿ ಹರಿಕಾರ ಎಂದು ಗುರುತಿಸುವುದು ಅವರ ದೂರದರ್ಶಿತ್ವಕ್ಕೆ ಸಲ್ಲುವ ಗೌರವ ಎಂದೇ ಭಾವಿಸಬೇಕು.

ರಾಜೀವ್ ದೇಶದಲ್ಲಿ ಪಂಚಾಯತ್‌ ರಾಜ್‌ ವ್ಯವಸ್ಥೆ ಬಲವರ್ಧನೆ, ನವೋದಯ ಶಾಲೆಗಳ ನಿರ್ಮಾಣ, ಕಂಪ್ಯೂಟರೀಕರಣ, ಟೆಲಿಕಮ್ಯೂನಿಕೇಷನ್‌ ನಲ್ಲಿ ಕ್ರಾಂತಿ ಮಾಡಿದ್ದರು. ಯುವ ಜನತೆಯ ಮೇಲೆ ಅಪಾರವಾದ ನಂಬಿಕೆ ಇಟ್ಟ ರಾಜೀವ್ ಗಾಂಧಿಯವರು ಯುವ ಜನತೆ ರಾಜಕೀಯ ತೀರ್ಮಾನವನ್ನು ಕೈಗೊಳ್ಳಬೇಕು ಅನ್ನುವ ಅವರ ನಂಬಿಕೆಯಂತೆ‌ ಆ ತನಕ  ಇದ್ದ ಮತದಾನದ ಹಕ್ಕನ್ನು 21 ವರ್ಷದಿಂದ 18 ಕ್ಕೆ ಇಳಿಸಿದರು. ಈ ಹೊತ್ತು ನಿಂತು ಆಲೋಚಿಸುತ್ತಿರುವಾಗ ಅವರ ಈ ತೀರ್ಮಾನ ಮತ್ತು ಐಟಿ ಕ್ರಾಂತಿಯೇ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣವಾಯಿತೋ‌ ಎಂಬ ಸಂಶಯ ಕಾಡುತ್ತಿದೆ.

ರಾಜೀವ ಗಾಂಧಿಯವರ ಪ್ರಧಾನ ಮಂತ್ರಿ ಅಧಿಕಾರಾವಧಿಯು (1984-1989) ಭಾರತವನ್ನು ಸಶಕ್ತವಾಗಿ ಕಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅಸ್ಸಾಂ, ತ್ರಿಪುರಾ, ತಮಿಳುನಾಡಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರು ಏಕಾಂಗಿಯಾಗಿ ಪರಿಹರಿಸಿದ್ದರು. ರಾಜೀವ್ ಗಾಂಧಿ ಆಳ್ವಿಕೆಯ ಲಕ್ಷಣಗಳೆಂದರೆ ಅಭಿವೃದ್ಧಿ, ಏಕತೆ, ಶಾಂತಿ ಮತ್ತು ಕೋಮು ಸೌಹಾರ್ದತೆ. ಅವರು ರಾಜಕೀಯದಲ್ಲಿ ನೈತಿಕ ಮೌಲ್ಯಗಳಿಗೆ ಹೆಚ್ಚು ಬೆಲೆ ಕೊಡುತ್ತಿದ್ದರು. ಶ್ರೀ ಲಂಕಾ ತಮಿಳರ ಸಮಸ್ಯೆಯ ಬಗ್ಗೆ ಅವರು ತೆಗೆದು ಕೊಂಡ ನಿಲುವಿನಿಂದಾಗಿ ಎಲ್ಟಿಟಿಇ ಅವರ ಮೇಲೆ ದ್ಷೇಷ ಕಾರಲು ಪ್ರಾರಂಭಿಸಿತು  ಅದರ ಫಲಶ್ರುತಿಯೇ  1991 ಲೋಕ ಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ‌ ತಮಿಳುನಾಡಿನ  ಶ್ರೀ ಪೆರಂಬುದೂರಿನಲ್ಲಿ ಮೇ 21ರಂದು  ಭಾಗವಹಿಸುತ್ತಿರುವಾಗ ಮಾನವ ಬಾಂಬಿಗೆ ಬಲಿಯಾದರು. ಅಲ್ಲಿಗೆ ಭಾರತವನ್ನು  ಇಪ್ಪತ್ತನೇ ಶತಮಾನಕ್ಕೆ ಕೊಂಡೊಯ್ಯವ ಕನಸೊಂದು ಕಮರಿತು.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಉದ್ಯಾವರ ನಾಗೇಶ ಕುಮಾರ್
ರಂಗ ಕರ್ಮಿ