rajyasabha – Peepal Media

ರಾಜ್ಯಸಭೆ: ಅಂಬೇಡ್ಕರ್ ಕುರಿತು ಶಾ ಹೇಳಿಕೆಯನ್ನು ಪ್ರತಿಭಟಿಸಿ ಕಲಾಪ ಸ್ಥಗಿತಗೊಳಿಸಿದ ಪ್ರತಿಪಕ್ಷಗಳು
ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ಷಮೆಯಾಚಿಸುವಂತೆ ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರು ನಡೆಸಿದ ಪ್ರತಿಭಟನೆಯಿಂದ ಬುಧವಾರ ರಾಜ್ಯಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಒಂದು ದಿನದ ಹಿಂದೆ ಸದನದಲ್ಲಿ ಅವರು ನೀಡಿದ ಹೇಳಿಕೆಗಳು ಭಾರತದ ಸಂವಿಧಾನ ಶಿಲ್ಪಿ ಬಿಆರ್ ಅಂಬೇಡ್ಕರ್ ಅವರಿಗೆ ಮಾಡಿದ “ಅವಮಾನ” ಎಂದು ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿವೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು “ರಾಜ್ಯಸಭೆಯಲ್ಲಿ ಮಾಡಿದ ಷಾ ಹೇಳಿಕೆಗಳ ಒಂದು ಭಾಗವನ್ನು ಬಳಸಿಕೊಂಡು ಕಾಂಗ್ರೆಸ್ ದೇಶವನ್ನು ದಾರಿ ತಪ್ಪಿಸುತ್ತಿದೆ,” ಎಂದು ಆರೋಪಿಸಿದರು ಮತ್ತು ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರನ್ನು ಹೇಗೆ ಅವಮಾನಿಸಿದೆ ಎಂಬುದನ್ನು ಗೃಹ ಸಚಿವರು ಸ್ಪಷ್ಟವಾದ ಮಾತುಗಳಲ್ಲಿ ಉಲ್ಲೇಖಿಸಿದ್ದಾರೆ ಎಂದು ಪ್ರತಿಪಾದಿಸಿದರು.

“ನೀವು (ಕಾಂಗ್ರೆಸ್) ಷಾ ಅವರ ಸಂಪೂರ್ಣ ಭಾಷಣದ 11-12 ಸೆಕೆಂಡುಗಳ ಕ್ಲಿಪ್ ಅನ್ನು ಬಳಸಿ ರಾಷ್ಟ್ರದ ಹಾದಿ ತಪ್ಪಿಸಲು ಸಾಧ್ಯವಿಲ್ಲ,” ಎಂದು ಹೇಳಿದ ರಿಜಿಜು, ಬಿಜೆಪಿಗೆ ಅಂಬೇಡ್ಕರ್ ದೇವರಿಗೆ ಸಮಾನ ಎಂದು ಪ್ರತಿಪಾದಿಸಿದರು.

ಕೇಂದ್ರದ ಕಳಪೆ ಆರ್ಥಿಕ ನೀತಿಯಿಂದಾಗಿ ನಿರುದ್ಯೋಗ ಮತ್ತು ಕಡಿಮೆ ಆದಾಯ – ಶಶಿ ತರೂರ್ ತರಾಟೆ
“ಕಳೆದ ಒಂದು ದಶಕದಲ್ಲಿ ಕೇಂದ್ರ ಸರ್ಕಾರ ಅಸಮರ್ಪಕ ಆರ್ಥಿಕ ನೀತಿಗಳನ್ನು ತಂದು ದೇಶದ ಜನರಿನ್ನು ದುಃಖಕ್ಕೆ ತಳ್ಳಿದೆ, ಆದಾಯ ಕಡಿಮೆಯಾಗಿ, ನಿರುದ್ಯೋಗ ಹೆಚ್ಚಾಗಿ ದೇಶವನ್ನು ಸಂಕಷ್ಟಕ್ಕೆ ತಳ್ಳಲಾಗಿದೆ,” ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಆತಂಕ ವ್ಯಕ್ತಪಡಿಸಿದ್ದಾರೆ.

ಬುಧವಾರ ಲೋಕಸಭೆಯಲ್ಲಿ ನಡೆದ ಮಧ್ಯಂತರ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಭಾಷಣ ಮಾಡಿದ ಇವರು ಕೇಂದ್ರದ ಕಳಪೆ ಹಣಕಾಸು ನಿರ್ವಹಣೆಯ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ತರೂರ್ ತಮ್ಮ ಭಾಷಣದಲ್ಲಿ, 2016 ರ ನೋಟು ಅಮಾನ್ಯೀಕರಣದ ನಿರ್ಧಾರದಿಂದ ಪ್ರಾರಂಭಿಸಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ದೇಶದಲ್ಲಿನ ಎಂಎಸ್‌ಎಂಇಗಳಿಗೆ ಹಾನಿ, ರೈತರ ಸಂಕಷ್ಟಗಳು, ಉದ್ಯೋಗ ಹೆಚ್ಚಳದಲ್ಲಿ ಕಳಪೆ ಸಾಧನೆ ಹಾಗೂ ವ್ಯಾಪಕ ಆರ್ಥಿಕ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ನೋಟು ಅಮಾನ್ಯೀಕರಣದಂತಹ ಕೆಟ್ಟ ನೀತಿಯನ್ನು ಕೆಟ್ಟದಾಗಿ ಜಾರಿಗೆ ಬಂದರೆ, ಜಿಎಸ್‌ಟಿಯು ಒಳ್ಳೆಯ ಆಲೋಚನೆಯಾದರೂ, ಕೆಟ್ಟದಾಗಿ ವಿನ್ಯಾಸಗೊಳಿಸಿ ಕಳಪೆ ರೀತಿಯಲ್ಲಿ ಜಾರಿಗೊಳಿಸಲಾಗಿದೆ ಎಂದು ತರೂರ್ ಹೇಳಿದ್ದಾರೆ.

“ಸರಕು ಮತ್ತು ಸೇವಾ ತೆರಿಗೆಯನ್ನು ನಮ್ಮ ರಾಜ್ಯಗಳ ಆರ್ಥಿಕ ಸ್ವಾಯತ್ತತೆಯನ್ನು ತುಳಿಯಲು ಬಳಸಲಾಗಿದೆ ಮತ್ತು ನೋಟು ರದ್ದತಿ ಭಾರತದ ಉದ್ಯೋಗ-ಉತ್ಪಾದಿಸುವ ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ನಾಶವಾಗಲು ಕಾರಣವಾಯಿತು. ಇದು 45 ವರ್ಷಗಳ ನಿರುದ್ಯೋಗವನ್ನು ಉಂಟುಮಾಡಿತು ಮತ್ತು 2013 ರಲ್ಲಿ ಪ್ರಾರಂಭವಾದ ಆರ್ಥಿಕ ಚೇತರಿಕೆಯನ್ನು ಕೊನೆಗೊಳಿಸಿತು, ಆದರೆ ಅದರ ಎಲ್ಲಾ ಉದ್ದೇಶಗಳೂ  ವಿಫಲವಾಗಿದೆ,” ಎಂದು ಅವರು ಹೇಳಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮಧ್ಯಂತರ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ ನಾಲ್ಕು ‘ಜಾತಿಗಳು’ – ಮಹಿಳೆಯರು, ಯುವಕರು, ರೈತರು ಮತ್ತು ಬಡವರು – ಸಾಮಾಜಿಕ ಮತ್ತು ಆರ್ಥಿಕ ನೀತಿಯ ಕಾರ್ಯಕ್ಷಮತೆಯ ಸೂಚಕಗಳಲ್ಲಿ ಕೆಟ್ಟ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾದ ಗುಂಪುಗಳಾಗಿವೆ ಎಂದು ಅವರು ಹೇಳಿದ್ದಾರೆ.

“ಭಾರತದಲ್ಲಿ ಕೆಲಸವಿಲ್ಲದ  ಹತಾಶ ಯುವಕರು ಇಸ್ರೇಲ್‌ನಲ್ಲಿ ಉದ್ಧದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಡಲು ಸರತಿ ಸಾಲಿನಲ್ಲಿ ನಿಂತಿರುವಾಗ ಸರ್ಕಾರ ತನ್ನ ಯಶಸ್ಸಿನ ಬಗ್ಗೆ ಹೇಳಿಕೆಗಳನ್ನು ನೀಡುವುದು ದುರಂತ ವ್ಯಂಗ್ಯ,” ಎಂದು ತರೂರ್ ವಿಷಾದಿಸಿದ್ದಾರೆ.

“ಒಟ್ಟಾರೆಯಾಗಿ, 8-9 ಪ್ರತಿಶತದಷ್ಟು ನಿರುದ್ಯೋಗ ದರವು ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಹೋಗಿದೆ. 2017 ರಲ್ಲಿ ನಿರುದ್ಯೋಗವು 45 ವರ್ಷಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ, ಪ್ರಸ್ತುತ CMIE ಡೇಟಾದ ಪ್ರಕಾರ 7.3 ಪ್ರತಿಶತದಷ್ಟಿದೆ, ಆದರೆ ಕೆಲವೇ ತಿಂಗಳುಗಳ ಹಿಂದೆ 8 ಶೇಕಡಾಕ್ಕಿಂತ ಹೆಚ್ಚಾಗಿದೆ,” ಎಂದು ಅವರು ಹೇಳಿದ್ದಾರೆ.

ಭಾರತದ ಆರ್ಥಿಕತೆಯು ಸದ್ಯ 2012 ರಲ್ಲಿ ಉದ್ಯೋಗ ನೀಡಿದ್ದಕ್ಕಿಂತ ಕಡಿಮೆ ಜನರಿಗೆ ಉದ್ಯೋಗ ಕೊಡುತ್ತಿದೆ ಎಂದು ಆರೋಪಿಸಿರುವ ತರೂರ್‌, “ಕೃಷಿ ಮತ್ತು ಉತ್ಪಾದನಾ ವಲಯದಲ್ಲಿ ಉದ್ಯೋಗಗಳ ಪ್ರಮಾಣ ಕುಸಿದಿವೆ, ಆರ್ಥಿಕವಾಗಿ ಅನಿಶ್ಚಿತ ಆದಾಯ ತರುವ ಕನ್ಸ್ಟ್ರಕ್ಷನ್‌ ಕೆಲಸಗಳಲ್ಲಿ ಮತ್ತು ಕೆಳ-ಮಟ್ಟದ ಸೇವಾ ವಲಯದಲ್ಲಿ  ಮಾತ್ರ ಅವರು ಏನಾದರೂ ಒಂದು ಉದ್ಯೋಗ ನೋಡುತ್ತಿದ್ದಾರೆ. ಇಸ್ರೇಲ್‌ನಲ್ಲಿ ಉದ್ಯೋಗ ಹುಡುಕಲು ಹೊರಟಿರುವ ನಮ್ಮ ಜನರು ತಮ್ಮ ಜೀವ ಮತ್ತು ದೇಹವನ್ನು ಅಪಾಯಕ್ಕೆ ಒಡ್ಡಿಕೊಳ್ಳಲು ಸಿದ್ಧರಾಗಿದ್ದಾರೆ, ಜೀವನೋಪಾಯಕ್ಕಾಗಿ ಸಾವನ್ನೂ ಎದುರಿಸಲು ಹಿಂದೆಮುಂದೆ ನೋಡುತ್ತಿಲ್ಲ,” ಎಂದು ತರೂರ್‌ ಅಭಿಪ್ರಾಯ ಪಟ್ಟಿದ್ದಾರೆ.

ಒಟ್ಟಾರೆ ಉದ್ಯೋಗಗಳಲ್ಲಿ ಕೃಷಿಯ ಪಾಲು ಹೆಚ್ಚಿದೆ, ಕೃಷಿ ವಲಯದ ಹೊರಗೆ ಸಾಕಷ್ಟು ಉದ್ಯೋಗಗಳು ಲಭ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ತರೂರ್‌ ಹೇಳಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ: ನಾಲ್ಕು ದಶಕದ ಇತಿಹಾಸ
ಕಳೆದ ಒಂದು ದಶಕದಿಂದಲೂ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಇದೀಗ ಮತ್ತೆ ಜೀವ ಬಂದಿದೆ. ಸಪ್ಟೆಂಬರ್‌ 18, 2023 ಮಂಗಳವಾರ, ಲೋಕಸಭೆಯಲ್ಲಿ 128ನೇ ತಿದ್ದುಪಡಿ ತಂದು ಸಂವಿಧಾನ ಮಸೂದೆ ಮಹಿಳಾ ಮೀಸಲಾತಿ ವಿಧೆಯಕ ಮಂಡನೆಯಾಗಿದೆ. ಈ ರೀತಿ ಮಹಿಳಾ ಮೀಸಲಾತಿ ಮಸೂದೆ ದೊಡ್ಡ ಸದ್ದು ಮಾಡುತ್ತಾ ಸಂಸತ್ತಿನಲ್ಲಿ ಮಂಡನೆಯಾಗುವುದು ಇದೇನೂ ಮೊದಲಲ್ಲ. ಈಗಲೂ ಎರಡೂ ಸದನಗಳಲ್ಲಿ ಒಪ್ಪಿಗೆಯಾಗಿ ರಾಷ್ಟ್ರಪತಿಯವರ ಅಂಕಿತ ಬಿದ್ದೇ ಬೀಳುತ್ತದೆ ಎಂದು ನಂಬಿ ಕೂರುವ ಸ್ಥಿತಿಯೂ ಇಲ್ಲ. ಆದರೆ ಈಗ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಇರುವುದರಿಂದ ಮಸೂದೆ ಜಾರಿಯೇ ಆಯ್ತೇನೋ ಎನ್ನುವಂತ ಪ್ರಚಾರ ಮಾತ್ರ ಹೊರಗಡೆ ಜೋರಾಗಿದೆ.

ಮತ್ತೊಮ್ಮೆ ಮಸೂದೆಯನ್ನು ಮಂಡಿಸಿರುವುದಕ್ಕೆ ಇಡೀ ದೇಶದಲ್ಲೇ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿ  ʼನಾರಿ ಶಕ್ತಿ ವಂದನ್ ಅಧಿನಿಯಮ’ ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಹಲವಾರು ಬಾರಿ ಮಂಡಿಸಲಾಯಿತು. ಆದರೆ ಬಹುಮತವಿಲ್ಲದೆ ಆಂಗೀಕಾರವಾಗಲಿಲ್ಲ. ಈಗ ನನಗೆ ಈ ಮಸೂದೆ ಜಾರಿಗೆ ತರಲು ದೇವರು ಅವಕಾಶ ನೀಡಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಈ ನಡುವೆ, ಕಾಂಗ್ರೇಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹಿಳಾ ಮೀಸಲಾತಿ ಮಸೂದೆಯನ್ನು 2010 ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿಯೇ ತರಲಾಗಿತ್ತು, ಇದರ ಕ್ರೆಡಿಟ್‌ ಕಾಂಗ್ರೇಸ್‌ಗೆ ಕೊಡಬೇಕು ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. 2010 ರಲ್ಲಿ ಯುಪಿಎ ಸರ್ಕಾರ ಮಂಡಿಸಿದ ಮಸೂದೆಯು ಲೋಕಸಭೆ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ನೀಡಿತ್ತು. ಅದರಲ್ಲಿ ಮೂರನೇ ಒಂದು ಭಾಗದಷ್ಟು ಸೀಟುಗಳನ್ನು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ ಮೀಸಲಿಡಲಾಗಿತ್ತು. 2010ರಲ್ಲಿ ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರವಾದರೂ ಲೋಕಸಭೆಯಲ್ಲಿ ಅಂಗೀಕಾರವಾಗಿರಲಿಲ್ಲ. ಆಗ ಹಿಂದುಳಿದ ವರ್ಗಗಳ ಮಹಿಳಾ ಮೀಸಲಾತಿಯಲ್ಲಿ ಒಳಮೀಸಲಾತಿಗೆ ಆಗ್ರಹಪಡಿಸಿದ್ದ ಕಾರಣ ಮಸೂದೆ ನೆನೆಗುದಿಗೆ ಬಿದ್ದಿತ್ತು.  ಈಗ ಮಂಡಿಸಿರುವ ಮಸೂದೆಯಲ್ಲೂ ಒಬಿಸಿ ಮಹಿಳೆಯರಿಗೆ ಒಳ ಮೀಸಲಾತಿ ಕಲ್ಪಿಸಲಾಗಿಲ್ಲ.

ವಿಡಿಯೋ: ಮಹಿಳಾ ಮೀಸಲಾತಿ ಮಸೂದೆ: ನಾಲ್ಕು ದಶಕದ ಇತಿಹಾಸ!

ಈಗ ಮಂಡಿಸಲಾಗಿರುವ ಮಸೂದೆ ಅಂಗೀಕಾರಕೊಂಡು ಕಾಯ್ದೆಯಾದರೂ ಅದು ಸಧ್ಯದಲ್ಲೇನು ಜಾರಿಯಾಗುವುದಿಲ್ಲ. ಅದು ಜಾರಿಯಾಗುವುದು 2029ಕ್ಕೆ! ಯಾಕೇಂದರೆ, ಈ ಮೀಸಲಾತಿ 2026 ರಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆ ಮುಗಿದ ನಂತರವೇ ಜಾರಿಗೊಳಿಸುವ ಸಾಧ್ಯತೆಯಿದೆ. ಈ ಮಹಿಳಾ ಮೀಸಲಾತಿಯು ಲೋಕಸಭಾ  ಮತ್ತು ರಾಜ್ಯ ವಿಧಾನಸಭಾ ಸ್ಥಾನಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ರಾಜ್ಯಸಭೆ ಮತ್ತು ವಿಧಾನ ಪರಿಷತ್ತುಗೆ ಅನ್ವಯಿಸುವುದಿಲ್ಲ ಎಂದೂ ಮಸೂದೆಯಲ್ಲಿ ಹೇಳಲಾಗಿದೆ. ಈಗ ಮೋದಿ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆ 2010ರಲ್ಲಿ ಮನಮೋಹನ್‌ ಸಿಂಗ್‌ ಸರ್ಕಾರ ಮಂಡಿಸಿದ್ದ ಮಸೂದೆಯ ತದ್ರೂಪವೇ ಆಗಿದೆ.

ಇದರಲ್ಲಿ ಸೇರಿರುವ ಎರಡು ಸಣ್ಣ ಹೊಸ ಅಂಶಗಳು ಏನೆಂದರೆ ಈ

• ಕಾಯ್ದೆ ಜಾರಿಯಾದ 15 ವರ್ಷಗಳವರೆಗೆ ಇರಲಿದ್ದು, ಆನಂತರವೂ  ಅವಧಿಯನ್ನು ವಿಸ್ತರಿಸಬಹುದು.

• ಆಂಗ್ಲೋ-ಇಂಡಿಯನ್ ಸಮುದಾಯಕ್ಕೆ ಮೀಸಲಾತಿಯನ್ನು ಒಳಗೊಂಡಿರುವ ಎರಡು ಆರ್ಟಿಕಲ್‌ಗಳಿಗೆ ತಿದ್ದುಪಡಿಯನ್ನು ಮೋದಿ ಸರ್ಕಾರದ ಮಸೂದೆಯಲ್ಲಿ ಕೈಬಿಡಲಾಗಿದೆ.

ದೇಶದಲ್ಲಿ ಇಂದು ಪಂಚಾಯತ್‌ ರಾಜ್‌ ಸಂಸ್ಥೆಗಳಲ್ಲಿ ಶೇಕಡಾ 50ರ ವರೆಗೂ ಮಹಿಳಾ ಮೀಸಲಾತಿ ಜಾರಿಯಲ್ಲಿದೆ. ಆದರೆ ಪಾರ್ಲಿಮೆಂಟು ಮತ್ತು ವಿಧಾನಸಭೆ ವಿಧಾನ ಪರಿಷತ್ತುಗಳಿಗೂ 33% ಮೀಸಲಾತಿ ಕಲ್ಪಿಸಬೇಕು ಎಂಬ ಒತ್ತಾಯದ ಹೋರಾಟಕ್ಕೆ ಬರೋಬ್ಬರಿ ಮೂರು ದಶಕಗಳ ಇತಿಹಾಸವೇ ಇದೆ.

ಮಹಿಳಾ ಪ್ರಾತಿನಿಧ್ಯದ ಇತಿಹಾಸ:

ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ 1970 ರ ದಶಕದವರೆಗೆ 5% ರಷ್ಟಿತ್ತು.  ಅದು ಎರಡಂಕಿಗೆ ಏರಿದ್ದೇ 2009 ರಲ್ಲಿ. ರಾಜ್ಯಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯವು ಲೋಕಸಭೆಗಿಂತ ಕಡಿಮೆಯಾಗಿದೆ. 1951 ರಿಂದ ಇದು ಒಟ್ಟು ಸದಸ್ಯತ್ವದ 13% ನ್ನೂ ದಾಟಿಲ್ಲ. ಅಂದರೆ 545 ರಷ್ಟು ಸಂಸದ ಬಲ ಇರುವ ಲೋಕಸಭೆಯಲ್ಲಿ 50 ಜನ ಮಹಿಳೆಯರೂ ಇಲ್ಲ ಎಂದರೆ ಎಂತಹ ವಿಪರ್ಯಾಸ ನೋಡಿ.

ಇಡೀ ದೇಶದಲ್ಲಿ ಸ್ಥಳೀಯ ಸಂಸ್ಥೆಗಳನ್ನು ಜಾರಿಗೊಳಿಸಿದ್ದು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ ಎಂಬುದು ನಮಗೆ ಹೆಮ್ಮೆಯ ಸಂಗತಿ. 1983ರಲ್ಲಿ ಜನತಾದಳ ಸರ್ಕಾರ ರಾಜ್ಯದಲ್ಲಿ ಪಂಚಾಯ್ತಿಗಳಲ್ಲಿ 25% ಮೀಸಲಾತಿ ನೀಡುವ ಮೂಲಕ ಇತಿಹಾಸ ಬರೆದಿತ್ತು.

1988ರಲ್ಲಿ ರಚನೆಯಾದ ನ್ಯಾಶನಲ್‌ ವಿಶನ್‌ ಪ್ರೋಗ್ರಾಮ್‌ನಲ್ಲಿ ಪಂಚಾಯ್ತಿಯಿಂದ ಲೋಕಸಭೆಯ ವರೆಗೆ ಮೂರನೇ ಒಂದರಷ್ಟು ಮಹಿಳಾ ಮೀಸಲಾತಿ ನೀಡುವ ಕಾರ್ಯಕ್ರಮ ರೂಪಿಸಲಾಯಿತು. ಇದರಂತೆ ಮರು ವರ್ಷ ಅಂದರೆ, 1989ರಲ್ಲಿ ಅಂದಿನ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಮೇ ತಿಂಗಳಿನಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಒದಗಿಸಲು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಮಹಿಳಾ ಮೀಸಲಾತಿ ನೀಡುವ ಮೊದಲ ಪ್ರಯತ್ನ ನಡೆಸಿದರು. ಆ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾದರೂ ರಾಜ್ಯಸಭೆಯಲ್ಲಿ ಅಂಗೀಕಾರವಾಗಲಿಲ್ಲ. ಹೀಗಾಗಿ ರಾಜೀವ್‌ ಗಾಂಧಿಯವರ ಪ್ರಯತ್ನಕ್ಕೆ ಹಿನ್ನಡೆಯಾಯ್ತು.

ಮುಂದೆ 1992 ಮತ್ತು 1993ರಲ್ಲಿ ಆಗಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪಂಚಾಯತ್‌ ರಾಜ್‌ಗೆ 72 ಮತ್ತು 73ನೇ ತಿದ್ದುಪಡಿ ತಂದಿತು. ದೇಶದಾದ್ಯಂತ ಕರ್ನಾಟಕ ಮಾದರಿಯಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತ ಆರಂಭವಾಗುವ ಜೊತೆಯಲ್ಲಿ ಮಹಿಳಾ ಮೀಸಲಾತಿಯೂ ಜಾರಿಗೊಂಡಿತು.  ಇಂದು ಎಲ್ಲಾ ಮೂರು ಹಂತದ ಪಂಚಾಯ್ತಿಗಳಲ್ಲಿ ಮಹಿಳೆಯರಿಗೆ ಎಲ್ಲಾ ಸ್ಥಾನಗಳಲ್ಲಿ ಮತ್ತು ಅಧ್ಯಕ್ಷ ಸ್ಥಾನಗಳಲ್ಲಿ ಮೂರನೇ ಒಂದು ಭಾಗ ಅಂದರೆ (33%) ಸ್ಥಾನಗಳನ್ನು ಮೀಸಲಿಡಲಾಗಿದೆ. ಮಸೂದೆಗಳು ಉಭಯ ಸದನಗಳಿಂದ ಅಂಗೀಕಾರವಾಯಿತು. ಆದರೆ ಸಮಾಜದಲ್ಲಿ ಅರ್ಧದಷ್ಟು ಮಹಿಳೆಯರು ಇರುವುದರಿಂದ ಅಷ್ಟೇ ಪ್ರಮಾಣದ ಮೀಸಲಾತಿ ಇರಬೇಕು ಎಂದು ಪ್ರತಿಪಾದಿಸಿದ ಹಲವು ರಾಜ್ಯಗಳಲ್ಲಿ ಇಂದು ಶೇಕಡಾ 50 ಮಹಿಳಾ ಮೀಸಲಾತಿ ಜಾರಿಯಲ್ಲಿದೆ. ಇದರಲ್ಲಿ ಕರ್ನಾಟಕವೇ ಮುಂದು. ಹೀಗೆ 1988-89 ರಿಂದ 1992-93 ರ ನಡುವೆ ಆದಂತಹ ಒಂದೇ ಒಂದು ಸಂವಿಧಾನ ತಿದ್ದುಪಡಿಯ ಫಲವಾಗಿ ಈಗ ದೇಶಾದ್ಯಂತ ಪಂಚಾಯತ್ ಮತ್ತು ನಗರಪಾಲಿಕೆಗಳಲ್ಲಿ ಸುಮಾರು 15 ಲಕ್ಷ ಚುನಾಯಿತ ಮಹಿಳಾ ಪ್ರತಿನಿಧಿಗಳಿದ್ದಾರೆ.

ಆದರೆ, ಈ ಸನ್ನಿವೇಶ ವಿಧಾನ ಸಭೆ ಲೋಕಗಭೆಗಳಲ್ಲೂ ಆಗಬೇಕೆಂಬ ಪ್ರಯತ್ನವೂ ನಿರಂತರವಾಗಿದೆ.

ಸೆಪ್ಟೆಂಬರ್ 12, 1996 ರಂದು, ನಮ್ಮ ದೇವೇಗೌಡರು ಪ್ರಧಾನಿಯಾಗಿದ್ದ ಸಂಯುಕ್ತ ರಂಗ ಸರ್ಕಾರವು ಮೊದಲ ಬಾರಿಗೆ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಗಾಗಿ ಲೋಕಸಭೆಯಲ್ಲಿ 81 ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿತು. ಆದರೆ ಲೋಕಸಭೆಯಲ್ಲಿ ಅನುಮೋದನೆ ಸಿಗಲಿಲ್ಲ. ನಂತರ ಇದನ್ನು  ಕಮ್ಯುನಿಷ್ಟ್‌ ನಾಯಕಿ ಗೀತಾ ಮುಖರ್ಜಿ ಅಧ್ಯಕ್ಷತೆಯ ಜಂಟಿ ಸಂಸದೀಯ ಸಮಿತಿಗೆ ನೀಡಲಾಯಿತು.  ಡಿಸೆಂಬರ್ 1996 ರಂದು ಈ ಸಮಿತಿ ತನ್ನ ವರದಿಯನ್ನು ಮಂಡಿಸಿದರೂ, ಲೋಕಸಭೆಯಲ್ಲಿ ಮಸೂದೆಯು ಬಿದ್ದುಹೋಯಿತು.

ವಿಡಿಯೋ ನೋಡಿ: ಮಹಿಳಾ ಮೀಸಲಾತಿ ಮಸೂದೆ: ನಾಲ್ಕು ದಶಕದ ಇತಿಹಾಸ!

ಎರಡು ವರ್ಷಗಳ ನಂತರ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ NDA ಸರ್ಕಾರವು 1998 ರಲ್ಲಿ 12 ನೇ ಲೋಕಸಭೆಯಲ್ಲಿ WRB ಮಸೂದೆಯನ್ನು ಮಂಡಿಸಿತು. ಆದರೆ ಆಗಲೂ ವಿಫಲವಾಯಿತು. ವಾಜಪೇಯಿ ಸರ್ಕಾರ 1999, 2002 ಮತ್ತು 2003 ರಲ್ಲಿ ಮತ್ತೆ ಮಂಡಿಸಿದರೂ ಯಶಸ್ವಿಯಾಗಲಿಲ್ಲ.

1996 ರ ಮಹಿಳಾ ಮೀಸಲಾತಿ ಮಸೂದೆ ವರದಿ OBC ಮಹಿಳೆಯರಿಗೆ ಒಳಮೀಸಲಾತಿಯನ್ನು ನೀಡಲು ಶಿಫಾರಸ್ಸು ಮಾಡುತ್ತದೆ. ಅಲ್ಲದೇ, ರಾಜ್ಯಸಭೆ ಮತ್ತು ವಿಧಾನ ಪರಿಷತ್ತುಗಳಿಗೂ ಮೀಸಲಾತಿಯನ್ನು ವಿಸ್ತರಿಸುವಂತೆ ಹೇಳುತ್ತದೆ. ಆದರೆ ಎರಡೂ ಶಿಫಾರಸುಗಳನ್ನು 2008ರ  ಮಸೂದೆಯಲ್ಲಿ ಅಳವಡಿಸಿರಲಿಲ್ಲ. ಹೀಗಾಗಿ ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ, ಬಹುಜನ ಸಮಾಜ ಪಕ್ಷಗಳು ಈ ಮಸೂದೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದವು.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-1 ರ ಅವಧಿಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮತ್ತೆ ಚರ್ಚೆಗೆ ಬಂತು. 2004 ರಲ್ಲಿ ಸರ್ಕಾರ ಅದನ್ನು ತನ್ನ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ (Common Minimum Programme)   ಸೇರಿಸಿತು. ಅದನ್ನು 108ನೇ ಸಾಂವಿಧಾನಿಕ ತಿದ್ದುಪಡಿಯನ್ನು ತಂದು 6 ಮೇ 2008 ರಂದು ಮಂಡಿಸಲಾಯಿತು. 1996 ರ ಗೀತಾ ಮುಖರ್ಜಿ ಸಮಿತಿಯು ಮಾಡಿದ ಏಳು ಶಿಫಾರಸುಗಳಲ್ಲಿ ಐದನ್ನು ಈ ಮಸೂದೆಯಲ್ಲಿ ಸೇರಿಸಲಾಯಿತು. ಮಸೂದೆಯನ್ನು ಮೇ 9, 2008 ರಂದು ಸ್ಥಾಯಿ ಸಮಿತಿಗೆ ಕಳುಹಿಸಲಾಯಿತು. ಸ್ಥಾಯಿ ಸಮಿತಿ ಡಿಸೆಂಬರ್ 17, 2009 ರಂದು ತನ್ನ ವರದಿಯನ್ನು ಮಂಡಿಸಿತು. ಇದು ಫೆಬ್ರವರಿ 2010 ರಲ್ಲಿ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆಯನ್ನೂ ಪಡೆಯಿತು. ಅಂತಿಮವಾಗಿ ಮಸೂದೆ ರಾಜ್ಯಸಭೆಯಲ್ಲಿ ಮಾರ್ಚ್ 8ರ ಮಹಿಳಾ ದಿನದಂದು ಮಂಡನೆಗೊಂಡು, ಮಾರ್ಚ್‌ 9, 2010 ರಂದು 186 ಮತಗಳೊಂದಿಗೆ ಸರ್ವಾನುಮತದಿಂದ ಅಂಗೀಕಾರವಾಯಿತು. ಇದು ದೇಶದ ಮಹಿಳಾ ಮೀಸಲಾತಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ ಎಂದರೂ ತಪ್ಪಿಲ್ಲ.

ಆದರೂ ಈ ಮಸೂದೆ ಲೋಕಸಭೆಯಲ್ಲಿ ಮಾತ್ರ ಅಂಗೀಕಾರವಾಗಲೇ ಇಲ್ಲ, 2014 ರಲ್ಲಿ ಲೋಕಸಭೆಯ ವಿಸರ್ಜನೆಯೊಂದಿಗೆ ಬಿಲ್ ಲ್ಯಾಪ್ಸ್ ಆಯಿತು. ರಾಜ್ಯಸಭೆಯಲ್ಲಿ ಮಂಡಿಸಿದ/ಅನುಮೋದಿತವಾದ ಮಸೂದೆಗಳು ಅನೂರ್ಜಿತಗೊಳ್ಳುವುದಿಲ್ಲ, ಆದ್ದರಿಂದ ಮಹಿಳಾ ಮೀಸಲಾತಿ ಮಸೂದೆಯು ಇನ್ನೂ ಹೆಚ್ಚು ಸಕ್ರಿಯವಾಗಿದೆ.

2019 ರ ಚುನಾವಣೆಯಲ್ಲಿ ಲೋಕಸಭೆಗೆ ಆಯ್ಕೆಯಾದ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಹಿಂದಿಗಿಂತ ಹೆಚ್ಚಿದ್ದರೂ, ಅವರ ಪ್ರಮಾಣವು ಒಟ್ಟು ಸದಸ್ಯತ್ವದ ಶೇಕಡಾ 15 ರಷ್ಟು ಮಾತ್ರ ಇದೆ. 2014ರಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಶೇಕಡಾ 12.7 ರಷ್ಟಿತ್ತು.

ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯತೆ:

ಕೃಪೆ: ಭಾರತೀಯ ಚುನಾವಣಾ ಆಯೋಗ

ರಾಜ್ಯಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯತೆ

ಕೃಪೆ: ಭಾರತೀಯ ಚುನಾವಣಾ ಆಯೋಗ

ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ (1957-2019)

ಕೃಪೆ:  Statista

ಭೌಗೋಳಿಕತೆಯ ಆಧಾರದಲ್ಲಿ ಮಹಿಳೆಯರ ಸಂಸದೀಯ ಪ್ರಾತಿನಿಧ್ಯ:

ಕೃಪೆ:  IPU Parline: Global Data on National Parliament (as of May 2022)

ಇದೀಗ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದು 5 ವರ್ಷಗಳ ಅವಧಿಯಲ್ಲಿ ಈ ಕುರಿತು ಚಕಾರವೆತ್ತಲಿಲ್ಲ, ಮತ್ತೆ 2019ರಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳ ಕಾಲವೂ ಈ ಬಗ್ಗೆ ಉಸಿರೇ ಬಿಡಲಿಲ್ಲ. ಇದೀಗ ಇನ್ನೇನು ಚುನಾವಣೆ ಬಂತೆನ್ನುವ ಸಮಯದಲ್ಲಿ ಭಾರೀ ಪ್ರಚಾರದೊಂದಿಗೆ ಮಹಿಳಾ ಮಸೂದೆ ಮಂಡಿಸಲಾಗಿದೆ.

2019ರಲ್ಲಿ ಮೋದಿ ಸರ್ಕಾರ ಮೇಲ್ಜಾತಿಗಳಿಗೆ ಸಂವಿಧಾನಬಾಹಿರವಾಗಿ 10% ಮೀಸಲಾತಿ ನೀಡುವ ಮಸೂದೆ ಮಂಡಿಸಿ ಮೂರೇ ದಿನದಲ್ಲಿ ರಾಷ್ಟ್ಟಪತಿ ಸಹಿಯೂ ಬಿದ್ದು ಕಾಯ್ದೆಯಾಗಿ ಜಾರಿಯೂ ಅಗಿಬಿಟ್ಟಿತು. ಆಗಲೂ ಮಹಿಳಾ ಮೀಸಲಾತಿಯನ್ನು ಮಾತ್ರ ಕಡೆಗಣಿಸಲಾಗಿತ್ತು.

ಕನಿಷ್ಟ ಈಗಲಾದರೂ ಚುನಾವಣಾ ದೃಷ್ಟಿಯಿಂದಲಾದರೂ ಮತ್ತೆ ಇದು ಮುನ್ನೆಲೆಗೆ ಬಂದಿದೆ. ಆದರೆ ಇದರಲ್ಲಿ ಒಬಿಸಿ ಒಳಮೀಸಲಾತಿ ಇಲ್ಲದಿರುವುದು ಮತ್ತು ಇದು ಜಾರಿಯಾಗುವುದೇ 2029ಕ್ಕೆ ಎಂಬುದು ಸಮಸ್ಯಾತ್ಮಕವಾಗಿದೆ.

ಒಳಮೀಸಲಾತಿಯೊಂದಿಗೆ, ತಕ್ಷಣದಲ್ಲೇ ಮಹಿಳಾ ಮೀಸಲಾತಿ ಜಾರಿಗೆ ಬರಲಿ ಎಂಬುದೇ ಎಲ್ಲರ ಆಶಯವಾಗಿದೆ.

ಲೇಖನ: ಚರಣ್‌ ಐವರ್ನಾಡು, ಬೆಂಗಳೂರು

ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರರು ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಲೋಕಸಭೆ
ನವದೆಹಲಿ: ಕ್ವಿಟ್ ಇಂಡಿಯಾ ಚಳವಳಿಯ 80 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಲೋಕಸಭೆಯು ಸೋಮವಾರ ಸ್ವಾತಂತ್ರ್ಯ ಚಳವಳಿಯ ಹುತಾತ್ಮರು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಿತು.

ಈ ಕುರಿತು ಸಭೆಯಲ್ಲಿ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ, 80 ವರ್ಷಗಳ ಹಿಂದೆ ಇದೇ ದಿನದಂದು, ಮಹಾತ್ಮ ಗಾಂಧಿಯವರು ಆಗಸ್ಟ್ 15, 1947 ರಂದು ಭಾರತಕ್ಕೆ ಸ್ವಾತಂತ್ರ್ಯವನ್ನು ಪಡೆಯಲು ಕಾರಣವಾದ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಿದರು. “ಇದು ಭಾರತಕ್ಕೆ ಸ್ವಾತಂತ್ರ್ಯ ಪಡೆಯುವಲ್ಲಿ ಮಹತ್ವದ ತಿರುವು” ಎಂದು ಅವರು ಹೇಳಿದರು.

ಹುತಾತ್ಮ ಯೋಧರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಅವರ ತ್ಯಾಗ ಬಲಿದಾನಗಳು ಪ್ರತಿಯೊಬ್ಬರಿಗೂ ಸಮರ್ಪಣಾ ಭಾವದಿಂದ ದೇಶ ಸೇವೆ ಮಾಡಲು ಪ್ರೇರಣೆ ನೀಡುತ್ತವೆ ಎಂದರು. ಆಗಸ್ಟ್ 8, 1942 ರಂದು ಮಹಾತ್ಮಾ ಗಾಂಧಿಯವರು ಪ್ರಾರಂಭಿಸಿದ ಕ್ವಿಟ್ ಇಂಡಿಯಾ ಚಳುವಳಿಯು ಬ್ರಿಟಿಷರ ನಿರ್ಗಮನಕ್ಕೆ ಕಾರಣವಾಯಿತು. ಈ ಚಳುವಳಿಯನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಬಾಂಬೆ ಅಧಿವೇಶನದಲ್ಲಿ ಪ್ರಾರಂಭಿಸಲಾಯಿತು ಮತ್ತು ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸಲು ಗಾಂಧಿಯವರ ಸ್ಪಷ್ಟವಾದ ಕರೆಯನ್ನು ಒಳಗೊಂಡಿತ್ತು. ಗಾಂಧಿಯವರು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಿಂದ ಮಹತ್ವದ ಭಾಷಣ ಮಾಡಿದರು. ಅಲ್ಲಿ ಅವರು “ಮಾಡು ಇಲ್ಲವೆ ಮಡಿ” ಎಂಬ ಪ್ರಸಿದ್ಧ ಕರೆ ನೀಡಿದರು ಎಂದು ಇತಿಹಾಸವನ್ನು ಮೆಲುಕು ಹಾಕಿದರು.

ಬರ್ಮಿಂಗ್‌ ಹ್ಯಾಮ್‌ ನಲ್ಲಿ ನಡೆಯುಯತ್ತಿರುವ ಕಾಮನ್‌ ವೆಲ್ತ್‌ ಗೇಮ್‌ ಬಗ್ಗೆ ಮಾತನಾಡಿದ ಅವರು,  ಕ್ರೀಡಾಕೂಟದಲ್ಲಿ ದೇಶಕ್ಕೆ ಪ್ರಶಸ್ತಿಗಳನ್ನು ತಂದ ಭಾರತೀಯ ತಂಡವನ್ನು ಅಭಿನಂದಿಸಿದರು. ಭಾರತ ಇಲ್ಲಿಯವರೆಗೆ 18 ಚಿನ್ನ, 15 ಬೆಳ್ಳಿ ಮತ್ತು 22 ಕಂಚು ಸೇರಿ - 55 ಪದಕಗಳನ್ನು ಪಡೆದಿದೆ ಇದು ಭಾರತೀಯರಿಗೆ ಖುಷಿ ಮತ್ತು ಹೆಮ್ಮಯ ವಿಚಾರ. ಇಂತಹ ಪ್ರಭಾವಶಾಲಿ ಪ್ರಶಸ್ತಿಗಳು ಯುವ ಪೀಳಿಗೆಗೆ ಉತ್ತೇಜನ ನೀಡುತ್ತದೆ ಎಂದು ಶ್ರೀ ಬಿರ್ಲಾ ಹೇಳಿದರು.